Tag: ನಾದಿನಿ

  • ಆಸ್ತಿ ಆಸೆಗೆ ಬಾವನಿಂದ ನಾದಿನಿಯ ಕಗ್ಗೊಲೆ

    ಆಸ್ತಿ ಆಸೆಗೆ ಬಾವನಿಂದ ನಾದಿನಿಯ ಕಗ್ಗೊಲೆ

    ಬೆಂಗಳೂರು: ಆಸ್ತಿ ಆಸೆಗಾಗಿ ಬಾವನೇ ನಾದಿನಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕಾಕತೀಯನಗರದ ನಾಯ್ಡು ಲೇಔಟ್‍ನಲ್ಲಿ ನಡೆದಿದೆ.

    18 ವರ್ಷದ ಪವಿತ್ರ ಕೊಲೆಯಾದ ದುದೈರ್ವಿ. ಪವಿತ್ರ ಅಕ್ಕನ ಗಂಡ ಜಗದೀಶ್ ಈ ಕೃತ್ಯವೆಸಗಿದ್ದಾನೆ. ಆಸ್ತಿ ವಿಚಾರಕ್ಕೆ ಪವಿತ್ರ ಅವರನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ.

    ಏನಿದು ಪ್ರಕರಣ: ಲಕ್ಷ್ಮಿದೇವಮ್ಮ ಎಂಬವರಿಗೆ ಇಬ್ಬರು ಹೆಣ್ಣು ಮಕ್ಕಳು. ಹಿರಿಯ ಮಗಳನ್ನ ಜಗದೀಶ್‍ಗೆ ಮದುವೆ ಮಾಡಿಕೊಟ್ಟಿದ್ರು. ಜಗದೀಶ್ ಪತ್ನಿಯ ತಂಗಿ ಪವಿತ್ರಗೆ ಈಗಾಗಲೇ ಮದುವೆಯಾಗಿ ಗರ್ಭವತಿಯಾಗಿದ್ದು, ಇನ್ನೊಬ್ಬ ಯುವಕ ಯಶವಂತ್ ಎಂಬಾತನನ್ನ ಪ್ರೀತಿಸುತ್ತಿದ್ದರು. ಪ್ರೀತಿಸಿ ಮದುವೆಯಾದ್ರೆ ಆಸ್ತಿಯಲ್ಲಾ ಪವಿತ್ರಗೆ ಸೇರುತ್ತೆ ಅನ್ನೋ ಭಯದಲ್ಲಿ ಬಾವ ಜಗದೀಶ್ ಆಕೆಯನ್ನು ವೇಲೂರಿಗೆ ಕರೆದೊಯ್ದು ಮಾಟ ಮಂತ್ರ ಮಾಡಿಸಲು ಮುಂದಾಗಿದ್ದ. ಈ ವೇಳೆ ಪವಿತ್ರ ವೇಲೂರಿಗೆ ಹೋಗಲು ನಿರಾಕರಿಸಿದ್ದಾರೆ. ಪವಿತ್ರರನ್ನು ಕೊಲೆ ಮಾಡಿದ್ರೆ ಆಸ್ತಿ ನನಗೇ ಸಿಗುತ್ತೆ ಅಂತ ಜಗದೀಶ್ ಆಕೆಯನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ. ಸದ್ಯ ಬಾವ ಜಗದೀಶ್, ಪ್ರೇಮಿ ಯಶವಂತ್‍ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಈ ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.