Tag: ನಾದಿನಿ

  • ಹಿರಿಯೂರಿನಲ್ಲೊಂದು ವಿಶಿಷ್ಟ ಆಚರಣೆ- ಏನಿದು ಅತ್ತಿಗೆ, ನಾದಿನಿ ಡಿಚ್ಚಿ ಕಾಳಗ?

    ಹಿರಿಯೂರಿನಲ್ಲೊಂದು ವಿಶಿಷ್ಟ ಆಚರಣೆ- ಏನಿದು ಅತ್ತಿಗೆ, ನಾದಿನಿ ಡಿಚ್ಚಿ ಕಾಳಗ?

    ಚಿತ್ರದುರ್ಗ: ಅದು ಟಗರು ಕಾಳಗವಲ್ಲ, ಮನೆಮನ ಬೆಸೆಯುವ ಕಾಳಗವಾಗಿದೆ. ಇಂಥದ್ದೊಂದು ವಿಶಿಷ್ಟ ಆಚರಣೆ ನಡೆದಿರುವುದು ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ. ಈ ವಿಭಿನ್ನ ಆಚರಣೆಗೆ ಡಿಚ್ಚಿ ಕಾಳಗ ಎಂದು ಕರೆಯುತ್ತಾರೆ.

    ಹೌದು. ಜಿಲ್ಲೆಯ ಹಿರಿಯೂರು (Hiriyur) ತಾಲೂಕಿನ ಸಿಎನ್ ಮಾಳಿಗೆ ಗ್ರಾಮದಲ್ಲಿ ಪೂರ್ವಜರ ಕಾಲದಿಂದ ಬಂದತಹ ಸಂಪ್ರದಾಯ ಇಂದು ಕೂಡ ಜೀವಂತವಾಗಿ ಉಳಿದಿದೆ. ಅಹೋಬಲನರಸಿಂಹಸ್ವಾಮಿ ಕಾರ್ತಿಕ ಉತ್ಸವದಲ್ಲಿ ಈ ವಿಭಿನ್ನ ಆಚರಣೆ ನಡೆಯುತ್ತದೆ. ಈ ಕಾಳಗ ನೋಡೋಕೆ ಸಾವಿರಾರು ಜನ ಭಕ್ತರ ದಂಡೇ ಹರಿದುಬರುತ್ತದೆ. ಇದನ್ನೂ ಓದಿ: ಸಾಲಮನ್ನಾ ಆಸೆಗಾಗಿ ರೈತರು ಬರಗಾಲಕ್ಕೆ ಕಾಯುತ್ತಾರೆ- ಶಿವಾನಂದ್ ಪಾಟೀಲ್ ವಿವಾದಾತ್ಮಕ ಹೇಳಿಕೆ

    ಏನಿದು ಆಚರಣೆ..?: ಮನಸ್ತಾಪದಿಂದ ತವರಿಗೆ ಬಾರದ ನಾದಿನಿ, ಮುನಿದ ಅತ್ತಿಗೆ ಮಧ್ಯೆ ಡಿಚ್ಚಿ ಸಂಭ್ರಮದ ಆಚರಣೆ ಇದಾಗಿದೆ. ಇಬ್ಬರ ನಡುವೆ ರಾಜಿ ಸಂಧಾನ ಮಾಡುವ ಸಂಪ್ರದಾಯ ಇದಾಗಿದೆ. ಒಂದು ಬದಿಯಲ್ಲಿ ಅತ್ತಿಗೆಯರು, ಮತ್ತೊಂದು ಬದಿಯಿಂದ ನಾದಿನಿಯರು ಓಡೋಡಿ ಬಂದು ಎದುರು- ಬದುರು ನಿಂತು ಡಿಚ್ಚಿ ಹೊಡೆದುಕೊಳ್ಳುವುದಾಗಿದೆ. ಯಾವುದೇ ಮನಸ್ತಾಪವಿದ್ದರೂ ಈ ಆಚರಣೆ ವೇಳೆ ಅತ್ತಿಗೆ, ನಾದಿನಿ ರಾಜಿ ಫಿಕ್ಸ್ ಆಗಿರುತ್ತದೆ. ಈ ಆಚರಣೆಯಿಂದ ಮನೆ, ಗ್ರಾಮದಲ್ಲಿ ಶಾಂತಿ ನೆಲೆಸುವ ನಂಬಿಕೆ ಇಲ್ಲಿನ ಜನರಲ್ಲಿದೆ.

    ಒಟ್ಟಿನಲ್ಲಿ ಕುಟುಂಬದಲ್ಲಿ ಬಾಂಧವ್ಯದ ಬೆಸುಗೆ ಬೆಸೆಯುವ ಡಿಚ್ಚಿ ಹಬ್ಬ ಭಾನುವಾರ ನಡೆದಿದ್ದು, ಇದೀಗ ಇದರ ವೀಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

  • ಅತ್ತಿಗೆಯನ್ನು ಕೊಂದು ನೇಣಿಗೆ ಶರಣಾದ ನಾದಿನಿ

    ಅತ್ತಿಗೆಯನ್ನು ಕೊಂದು ನೇಣಿಗೆ ಶರಣಾದ ನಾದಿನಿ

    ಮಂಡ್ಯ: ಕೌಟುಂಬಿಕ ಕಲಹದೊಂದಿಗೆ ಪ್ರಾರಂಭವಾದ ಅತ್ತಿಗೆ-ನಾದಿಯ ಜಗಳ ಮಾರಾಮಾರಿ ನಡೆದು ಕೊಲೆ ಮತ್ತು ಆತ್ಮಹತ್ಯೆಗೆ ಕಾರಣವಾಗಿರುವ ಘಟನೆ ಮಂಡ್ಯ ತಾಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕೌಟುಂಬಿಕ ಜಗಳದಿಂದಾಗಿ ಅತ್ತಿಗೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ನಾದಿನಿ ಕೊನೆಗೆ ತಾನು ಸಹ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಂಬದಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರಿಯಾಂಕ (32) ನಾದಿನಿಯಿಂದ ಕೊಲೆಯಾದ ಅತ್ತಿಗೆಯಾಗಿದ್ದು, ಗಿರಿಜಾ(31) ಅತ್ತಿಗೆಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ನಾದಿನಿಯಾಗಿದ್ದಾಳೆ. ಇದನ್ನೂ ಓದಿ: ಕೋವಿಡ್ ಕೇರ್ ಸೆಂಟರ್‌ನಲ್ಲಿ ಕುಟುಂಬ- ಶಾರ್ಟ್ ಸಕ್ಯೂಟ್‍ನಿಂದ ಮನೆ ಬೆಂಕಿಗಾಹುತಿ

    ಕೌಟುಂಬಿಕ ವಿಚಾರಕ್ಕೆ ಪ್ರಿಯಾಂಕ ಹಾಗೂ ಗಿರಿಜಾ ಅವರ ನಡುವೆ ಪದೇ ಜಗಳವಾಗುತ್ತಿತ್ತು ಎನ್ನಲಾಗುತ್ತಿತ್ತು. ನಿನ್ನೆ ಇವರಿಬ್ಬರ ಜಗಳ ತಾರಕಕ್ಕೆ ಏರಿದ್ದು ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಗಿರಿಜಾ, ಪ್ರಿಯಾಂಕ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾಳೆ. ನಂತರ ಭಯಗೊಂಡ ಗಿರಿಜಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿ, ಅತ್ತೆ, ನಾದಿನಿಯಿಂದಾಗಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

    ಪತ್ನಿ, ಅತ್ತೆ, ನಾದಿನಿಯಿಂದಾಗಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

    – ಇಂದು ಬೆಳಗ್ಗೆ ಕೆರೆಯಲ್ಲಿ ಶವ ಪತ್ತೆ
    – ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿಟ್ಟ

    ಭೋಪಾಲ್: ಮಧ್ಯ ಪ್ರದೇಶದ ಭವರ್ಕುವಾದ ಪಿಪಲಿಯಾ ಕೆರೆಯಲ್ಲಿ ಇಂದು ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತನ ಬಳಿ ಡೆತ್ ನೋಟ್ ಲಭ್ಯವಾಗಿದ್ದು, ಪತ್ನಿ, ಅತ್ತೆ ಮತ್ತು ನಾದಿನಿಯಿಂದಾಗಿ ಪ್ರಾಣ ಕಳೆದುಕೊಂಡಿರುವ ಬಗ್ಗೆ ಪತ್ರದಲ್ಲಿ ಬರೆಯಲಾಗಿದೆ.

    ಪ್ರತಾಪನಗರದ ನಿವಾಸಿ 33 ವರ್ಷದ ರಾಜಕುಮಾರ್ ಉರ್ಫ್ ರಾಜು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ರಾಜಕುಮಾರ್ ಕೇಟರಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ಕೆಲಸದ ವಿಷಯವಾಗಿ ಸೋಮವಾರ ಮನೆಯಿಂದ ಹೊರ ಹೋಗಿದ್ದ ರಾಜಕುಮಾರ್ ಮಂಗಳವಾರ ರಾತ್ರಿಯಾದ್ರೂ ಹಿಂದಿರುಗಿರಲಿಲ್ಲ. ಇಂದು ಬೆಳಗ್ಗೆ ಪಿಪಲಿಯಾ ಕೆರೆಯಲ್ಲಿ ರಾಜಕುಮಾರ್ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಬೆಂಗಳೂರಿನ ರೌಡಿ ಬಾಂಬೆ ಸಲೀಂ ಪತ್ನಿ ಜೊತೆ ಚಾಟಿಂಗ್- ಯುವಕನ ಭೀಕರ ಕೊಲೆ

    ಸೂಸೈಡ್ ನೋಟ್ ನಲ್ಲಿ ಏನಿತ್ತು?: ನನ್ನ ಹೆಸರು ರಾಜಕುಮಾರ್, ಪತ್ನಿ ಕುಟುಂಬಸ್ಥರ ಕಿರುಕುಳದಿಂದ ಸೂಸೈಡ್ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ನನ್ನ ಸಾವಿನ ಬಗ್ಗೆ ಯಾರಿಗೂ ತೊಂದರೆ ಕೊಡಬೇಕು. ತೊಂದರೆ ಕೊಡುವದಿದ್ದರೆ ಪತ್ನಿ, ಅತ್ತೆ ಮತ್ತು ನಾದಿನಿಗೆ ನೀಡಿ. ಯಾಕೆಂದರೆ ಅವರಿಂದಲೇ ನಾನು ಸಾಯುತ್ತಿದ್ದೇನೆ ಎಂದು ಬರೆಯುವ ಮೂಲಕ ತಮ್ಮ ಸಾವಿಗೆ ಮೂವರು ಕಾರಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಯಿ ಚೈನ್‍ನಿಂದ ಕತ್ತು ಹಿಸುಕಿ, ಚಾಕುವಿನಿಂದ ಇರಿದು ಪತ್ನಿಯ ಕೊಲೆಗೈದ!– ಎರಡು ತಿಂಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದ ಜೋಡಿ

  • ದೇವಸ್ಥಾನದ ಆವರಣದಲ್ಲೇ ನಾದಿನಿಯನ್ನ ಕೊಂದ ಬಾವ

    ದೇವಸ್ಥಾನದ ಆವರಣದಲ್ಲೇ ನಾದಿನಿಯನ್ನ ಕೊಂದ ಬಾವ

    – ತಲೆಗೆ ಕಬ್ಬಿಣದ ರಾಡ್‍ನಿಂದ ಹೊಡೆದು ಎಸ್ಕೇಪ್
    – ದೇಗುಲದಿಂದ ಹಿಂದಿರುಗುತ್ತಿದ್ದಾಗ ಕೃತ್ಯ

    ಭುವನೇಶ್ವರ: ದೇವಸ್ಥಾನಕ್ಕೆ ಹೋಗಿ ಹಿಂದಿರುಗುತ್ತಿದ್ದ ನಾದಿನಿಯನ್ನು ದೇಗುಲದ ಆವರಣದಲ್ಲಿ ಬಾವ ಕೊಲೆ ಮಾಡಿರುವ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಹರಿದಪದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಗ್ರಾಮದ ರಂಜಿ ನಹಾಕ್ (40) ಎಂದು ಗುರುತಿಸಲಾಗಿದೆ. ರಂಜಿ ಇಂದು ಮುಂಜಾನೆ ಸುಮಾರು 5 ಗಂಟೆಗೆ ದೇವಸ್ಥಾನಕ್ಕೆ ಹೋಗಿದ್ದರು. ದೇವಾಲಯದಿಂದ ಹಿಂದಿರುಗುತ್ತಿದ್ದಾಗ ಮಹಿಳೆಯ ಬಾವ ಮೋಚಿರಾಮ್ ಕಬ್ಬಿಣದ ರಾಡ್‍ನಿಂದ ರಂಜಿ ತಲೆಗೆ ಹೊಡೆದಿದ್ದಾನೆ.

    ರಂಜಿ ತೀವ್ರವಾಗಿ ಗಾಯಗೊಂಡಿದ್ದು, ದೇವಸ್ಥಾನದ ಆವರಣದಲ್ಲೇ ಮೃತಪಟ್ಟಿದ್ದಾರೆ. ಕೊಲೆ ಮಾಡಿದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದ ಪೊಲೀಸರು ಗ್ರಾಮಕ್ಕೆ ಬಂದು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ.

    ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಸದ್ಯಕ್ಕೆ ಆರೋಪಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

  • ಮಾಜಿ ಸಚಿವ ಹೆಚ್.ಎಂ ರೇವಣ್ಣ ಪತ್ನಿಯ ಸಹೋದರಿ ಕೊರೊನಾಗೆ ಬಲಿ

    ಮಾಜಿ ಸಚಿವ ಹೆಚ್.ಎಂ ರೇವಣ್ಣ ಪತ್ನಿಯ ಸಹೋದರಿ ಕೊರೊನಾಗೆ ಬಲಿ

    ಬೆಂಗಳೂರು: ಕೋವಿಡ್ 19 ಎಂಬ ಚೀನಿ ವೈರಸ್ ಘಟಾನುಘಟಿ ನಾಯಕರಿಂದ ಹಿಡಿದು ಸಾಮಾನ್ಯ ಜನರನ್ನೂ ಬಿಡದೆ ಕಾಡುತ್ತಿದೆ. ಸದಾ ಜನರೊಂದಿಗಿರುವ ಜನಪ್ರತಿನಿಧಿಗಳಿಗೂ ಕೋವಿಡ್ 19 ಬಿಸಿ ತಟ್ಟಿದೆ. ಅಂತೆಯೇ ಇದೀಗ ಮಾಜಿ ಸಚಿವ ಹೆಚ್.ಎಂ ರೇವಣ್ಣ ಅವರಿಗೂ ಮಹಾಮಾರಿಯ ಆತಂಕ ಶುರುವಾಗಿದೆ.

    ಹೆಚ್.ಎಂ ರೇವಣ್ಣ ಅವರ ಪತ್ನಿ ಸಹೋದರಿ ಎಂ.ಎಸ್ ರೋಹಿಣಿ ಮಂಗಳವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 61 ವರ್ಷ ವಯಸ್ಸಾಗಿರುವ ರೋಹಿಣಿ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಕೂಡಲೇ ಅವರನ್ನು ಸ್ವತಃ ರೇವಣ್ಣ ಅವರೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಆದರೆ ಇದೀಗ ರೋಹಿಣಿ ಅವರು ಕೊರೊನಾಗೆ ಬಲಿಯಾಗಿದ್ದಾರೆ.

    ಇತ್ತ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಿಂದ ರೇವಣ್ಣ ಅವರಿಗೂ ಕೊರೊನಾ ಢವಢವ ಶುರುವಾಗಿದೆ. ರೋಹಿಣಿಯವರ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ರೇವಣ್ಣ ಹಾಗೂ ಅವರ ಪುತ್ರ ಕ್ವಾರಂಟೈನ್ ಆಗಲು ನಿರ್ಧರಿಸಿದ್ದಾರೆ.

     

  • ಗಂಡ-ಹೆಂಡತಿ ಜಗಳದಲ್ಲಿ ನಾದಿನಿ ಕೈ ಕಟ್

    ಗಂಡ-ಹೆಂಡತಿ ಜಗಳದಲ್ಲಿ ನಾದಿನಿ ಕೈ ಕಟ್

    ತುಮಕೂರು: ಪತಿ, ಪತ್ನಿಯ ಜಗಳ ಬಿಡಿಸಲು ಬಂದ ನಾದಿನಿಯ ಕೈ ಕತ್ತರಿಸಿದ ಘಟನೆ ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿಯಲ್ಲಿ ನಡೆದಿದೆ.

    ಡಿ.ವಿ.ಹಳ್ಳಿಯ ನಿವಾಸಿ ಹನುಮಂತಪ್ಪ ಮತ್ತು ಪತ್ನಿ ಅನಿತಾ ನಡುವೆ ಜಗಳ ನಡೆದಿದ್ದಾಗ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ 16 ವರ್ಷದ ಮೇಘನಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಹನುಮಂತಪ್ಪ ಪತ್ನಿಯ ಶೀಲ ಶಂಕಿಸಿ ಸದಾ ಜಗಳ ಮಾಡುತ್ತಿದ್ದ. ಇಂದು ಕೂಡ ಜಗಳ ಆರಂಭಸಿದ್ದ. ಈ ವೇಳೆ ಮನೆಗೆ ಬಂದಿದ್ದ ನಾದಿನಿ ಮೇಘನಾ ಜಗಳ ಬಿಡಿಸಲು ಯತ್ನಿಸಿದ್ದಳು. ಮಚ್ಚು ಹಿಡಿದುಕೊಂಡು ಪತ್ನಿ ಅನಿತಾಳ ಮೇಲೆ ಹಲ್ಲೆ ನಡೆಸಲು ಹನುಮಂತ ಯತ್ನಿಸಿದಾಗ ನಾದಿನಿ ಮೇಘನಾ ತಡೆಯಲು ಮುಂದಾಗಿದ್ದಳು. ಪರಿಣಾಮ ಅನಿತಾಳಿಗೆ ಬೀಸಿದ ಮಚ್ಚು ಮೇಘನಾಳ ಕೈಗೆ ಬಿದ್ದು ಮುಂಗೈ ತುಂಡಾಗಿದೆ.

    ಮೇಘನಾಳ ಎಡಗೈಯಲ್ಲಿ ಒಂದು ಬೆರಳು ಮಾತ್ರ ಉಳಿದಿದ್ದು, ಉಳಿದ ನಾಲ್ಕು ಬೆರಳು ಸಹಿತ ಅಂಗೈ ತುಂಡಾಗಿದೆ. ಗಂಭೀರವಾಗಿ ಗಾಯಗೊಂಡ ಮೇಘನಾಳನ್ನು ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಹನುಮಂತನನ್ನು ಮಧುಗಿರಿ ಪೊಲೀಸರು ಬಂಧಿಸಿದ್ದಾರೆ.

  • ಒಂದೇ ಮಂಟಪದಲ್ಲಿ ಪತ್ನಿ, ನಾದಿನಿಯನ್ನು ಮದ್ವೆಯಾದ ಪತಿ

    ಒಂದೇ ಮಂಟಪದಲ್ಲಿ ಪತ್ನಿ, ನಾದಿನಿಯನ್ನು ಮದ್ವೆಯಾದ ಪತಿ

    ಭೋಪಾಲ್: ವ್ಯಕ್ತಿಯೊಬ್ಬ ಒಂದೇ ಮಂಟಪದಲ್ಲಿ ಪತ್ನಿ ಹಾಗೂ ನಾದಿನಿಯನ್ನು ಮದುವೆಯಾದ ಅಪರೂಪದ ಘಟನೆಯೊಂದು ಮಧ್ಯಪ್ರದೇಶದ ಭೈಂಡ್ ಗ್ರಾಮದಲ್ಲಿ ಕಂಡು ಬಂದಿದೆ.

    ದಿಲೀಪ್ ಎಂಬವರು ಒಂದೇ ಮಂಟಪದಲ್ಲಿ ತನ್ನ ಪತ್ನಿ ಹಾಗೂ ನಾದಿನಿಯನ್ನು ಮದುವೆಯಾಗಿದ್ದಾರೆ. ದಿಲೀಪ್ ಮೊದಲು ತಮ್ಮ ನಾದಿನಿ ರಚನಾರನ್ನು ಮದುವೆಯಾಗಿದ್ದಾರೆ. ಬಳಿಕ ಅದೇ ಮಂಟಪದಲ್ಲಿ ತಮ್ಮ ಪತ್ನಿ ವಿನಿತಾರನ್ನು ಮರು ಮದುವೆಯಾಗಿದ್ದಾರೆ.

    9 ವರ್ಷಗಳ ಹಿಂದೆ ದಿಲೀಪ್, ವಿನಿತಾರನ್ನು ಮದುವೆಯಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ವಿನಿತಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ದಿಲೀಪ್, ವಿನಿತಾ ಅವರ ಸಹೋದರಿ ರಚನಾರನ್ನೇ ಮದುವೆಯಾಗಿದ್ದಾರೆ.

    ದಿಲೀಪ್ ಹೂ ಮಾಲೆ ಹಾಕುವಾಗ ಇಬ್ಬರೂ ವೇದಿಕೆ ಮೇಲೆಯೇ ಇದ್ದರು. ದಿಲೀಪ್ ತನ್ನ ಪತ್ನಿಗೆ ವಿನಿತಾಗೆ ಹೂ ಮಾಲೆ ಹಾಕಿದ್ದಾರೆ. ನಂತರ ತಮ್ಮ ನಾದಿನಿ ರಚನಾಗೆ ಹೂವಿನ ಹಾರ ಹಾಕಿ ಪತ್ನಿಯಾಗಿ ಸ್ವೀಕರಿಸಿದ್ದಾರೆ.

    ಈ ಬಗ್ಗೆ ದಿಲೀಪ್ ಪ್ರತಿಕ್ರಿಯೆ ನೀಡಿ, ನನ್ನ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು, ನಮಗೆ ಪುಟ್ಟ ಪುಟ್ಟ ಮಕ್ಕಳಿದ್ದು, ಅವರನ್ನು ನೋಡಿಕೊಳ್ಳಲು ನಾನು ಮತ್ತೊಂದು ಮದುವೆಯಾಗಲು ನಿರ್ಧರಿಸಿದೆ. ನಾನು ನನ್ನ ನಾದಿನಿ ರಚನಾಳನ್ನು ಇಷ್ಟಪಡುತ್ತಿದ್ದೆ. ಮತ್ತೊಂದು ಮದುವೆಯ ವಿಷಯ ಬಂದಾಗ ನಾನು ಮೊದಲು ಈ ಮಾತನ್ನು ನನ್ನ ಪತ್ನಿಗೆ ಹೇಳಿದೆ. ರಚನಾ ಒಪ್ಪಿದ ಬಳಿಕ ನಾನು ಆಕೆಯನ್ನು ಮದುವೆಯಾದೆ ಎಂದು ತಿಳಿಸಿದ್ದಾರೆ.

  • ಪ್ರೇಯಸಿ ಜೊತೆ ತಗ್ಲಾಕ್ಕೊಂಡ ಪತಿಗೆ ರಸ್ತೆಯಲ್ಲೇ ಜುಟ್ಟಿಡಿದು ಬಡಿದ ಪತ್ನಿ, ನಾದಿನಿ

    ಪ್ರೇಯಸಿ ಜೊತೆ ತಗ್ಲಾಕ್ಕೊಂಡ ಪತಿಗೆ ರಸ್ತೆಯಲ್ಲೇ ಜುಟ್ಟಿಡಿದು ಬಡಿದ ಪತ್ನಿ, ನಾದಿನಿ

    – ನೆಲಕ್ಕೆ ಬೀಳಿಸಿ ಯುವತಿಗೆ ಧರ್ಮದೇಟು
    – ತಪ್ಪಿಸಲು ಹೋದ ಪತಿಗೆ ಬಿತ್ತು ಪೊರಕೆ ಏಟು

    ಭೋಪಾಲ್: ಪ್ರೇಯಸಿ ಜೊತೆ ಸಿನಿಮಾಗೆ ಹೋಗಿ ಸಿಕ್ಕಿಬಿದ್ದ ಪತಿಗೆ ರಸ್ತೆಯಲ್ಲೇ ಪೊರಕೆಯಿಂದ ಹೊಡೆದು ಪತ್ನಿ, ನಾದಿನಿ ಗ್ರಹಚಾರ ಬಿಡಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಪತ್ನಿ ಹಾಗೂ ಆಕೆಯ ತಂಗಿ ನಡುರಸ್ತೆಯಲ್ಲೇ ಪತಿ ಹಾಗೂ ಯುವತಿಗೆ ಪೊರಕೆ ಏಟು ಕೊಟ್ಟ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಲವರ್ ಜೊತೆ ಆರಾಮಾಗಿ ಸಿನಿಮಾ ನೋಡಲು ಪತಿ ಇಂದೋರ್‌ನ ಖಜ್ರಾನ ಪೊಲೀಸ್ ಠಾಣೆ ಬಳಿಯ ವೆಲಾಸಿಟಿ ಚಿತ್ರ ಮಂದಿರಕ್ಕೆ ಹೋಗಿದ್ದ. ಈ ಬಗ್ಗೆ ತಿಳಿದು ಪತ್ನಿ ಹಾಗೂ ಆಕೆಯ ತಂಗಿ ಸ್ಥಳಕ್ಕೆ ಹೋಗಿ ಸಿನಿಮಾ ಮುಗಿಯುವವರೆಗೂ ಚಿತ್ರಮಂದಿರದ ಹೊರಗೆ ಪತಿಯನ್ನು ರೆಡ್ ಹ್ಯಾಡ್ ಆಗಿ ಹಿಡಿಯಲು ಕಾದು ಕುಳಿತ್ತಿದ್ದರು.

    ಸಿನಿಮಾ ಮುಗಿದ ಬಳಿಕ ಪತಿ ಜೊತೆ ಮತ್ತೊಂದು ಯುವತಿ ನೋಡಿ ಪತ್ನಿ ಹಾಗೂ ನಾದಿನಿ ಕೆಂಡಾಮಂಡಲವಾಗಿದ್ದು, ನಡುರಸ್ತೆಯಲ್ಲೇ ಯುವತಿ ಕೂದಲು ಹಿಡಿದು ಹಿಗ್ಗಾಮುಗ್ಗಾ ಧರ್ಮದೇಟು ನೀಡಿದ್ದಾರೆ. ನೆಲಕ್ಕೆ ಬೀಳಿಸಿ ಥಳಿಸಿದ್ದಾರೆ. ಈ ವೇಳೆ ಪತಿ ಪ್ರಿಯತಮೆಯನ್ನು ಬಿಡಿಸಲು ಮಧ್ಯೆ ಬಂದಾಗ ಇನ್ನಷ್ಟು ರೊಚ್ಚಿಗೆದ್ದು ಆಕೆ ಜೊತೆ ಪತಿಗೂ ಗೂಸಾ ಕೊಟ್ಟಿದ್ದಾರೆ. ಪೊರಕೆಯಿಂದ ಹೊಡೆದು ಗ್ರಹಚಾರ ಬಿಡಿಸಿದ್ದಾರೆ.

    ಈ ವೇಳೆ ಸ್ಥಳೀಯರು ಗಲಾಟೆ ನಿಲ್ಲಿಸಲು ಮಧ್ಯೆ ಬಂದರೂ ಏನು ಪ್ರಯೋಜನವಾಗಿಲ್ಲ. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದಾಗ ಸ್ಥಳಕ್ಕೆ ಬಂದ ಪೊಲೀಸರು ಗಲಾಟೆ ನಿಲ್ಲಿಸಲು ಹರಸಾಹಸವನ್ನೇ ಪಟ್ಟಿದ್ದಾರೆ. ನಂತರ ಪತ್ನಿ, ನಾದಿನಿ, ಪತಿ ಹಾಗೂ ಆತನ ಲವರ್‌ನನ್ನು ಠಾಣೆಗೆ ಕರೆದೊಯ್ದಿದಾರೆ. ಅಲ್ಲಿ ರಾಜಿ ಮಾಡಿಸಲು ಪ್ರಯತ್ನಿಸಿದರೂ ಪತಿ ವಿರುದ್ಧ ಸಿಡಿದೆದ್ದಿದ್ದ ಪತ್ನಿ ಯಾವುದಕ್ಕೂ ಒಪ್ಪಲಿಲ್ಲ.

    ಹೀಗಾಗಿ ಮೋಸ ಮಾಡಿದ ಪತಿ ಹಾಗೂ ಆತನ ಲವರ್ ವಿರುದ್ಧ ಪತ್ನಿ ದೂರು ನೀಡಿದ್ದಾಳೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಪತಿ ಹಾಗೂ ಆತನ ಪ್ರಿಯತೆಮೆಗೆ ಪತ್ನಿ, ನಾದಿನಿ ಸೇರಿ ಕೊಟ್ಟ ಪೊರಕೆ ಏಟಿನ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲಿನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ಸದ್ಯ ಎಲ್ಲೆಡೆ ವಿಡಿಯೋ ಸಖತ್ ವೈರಲ್ ಆಗಿದೆ.

  • ನಾದಿನಿ ಜೊತೆ ಪುರಸಭೆ ಸದಸ್ಯ ಸರಸ ಸಲ್ಲಾಸ- ಪತ್ನಿಯ ಸಹೋದರಿಗೆ ಕಿಸ್ ಕೊಟ್ಟು ಸೆಲ್ಫಿ ಕ್ಲಿಕ್ಕಿಸಿದ

    ನಾದಿನಿ ಜೊತೆ ಪುರಸಭೆ ಸದಸ್ಯ ಸರಸ ಸಲ್ಲಾಸ- ಪತ್ನಿಯ ಸಹೋದರಿಗೆ ಕಿಸ್ ಕೊಟ್ಟು ಸೆಲ್ಫಿ ಕ್ಲಿಕ್ಕಿಸಿದ

    ಬಳ್ಳಾರಿ: ಶಾಸಕ ಪರಮೇಶ್ವರ್ ನಾಯ್ಕ ಬಲಗೈ ಬಂಟ, ಹಾಲಿ ಹಡಗಲಿ ಪುರಸಭೆಯ ಸದಸ್ಯನೊಬ್ಬ ಪತ್ನಿಯ ಸಹೋದರಿಗೆ ಕಿಸ್ ಕೊಟ್ಟು ಸೆಲ್ಫಿ ಕ್ಲಿಕ್ಕಿಸಿದ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

    ಹಡಗಲಿ ಪುರಸಭೆಯ ಮಾಜಿ ಉಪಾಧ್ಯಕ್ಷ ಹಾಗೂ 15ನೇ ವಾರ್ಡ್ ಸದಸ್ಯನಾಗಿರುವ ಕೆ.ಎಸ್ ರೆಹಮಾನ್ ತನ್ನ ಪತ್ನಿಯ ಸಹೋದರಿಯ ಜೊತೆ ಸರಸ ಸಲ್ಲಾಪ ಮಾಡಿದ ಫೋಟೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ರೆಹಮಾನ್ ವಿವಾಹಿತೆಯಾಗಿರುವ ಪತ್ನಿಯ ಸಹೋದರಿಗೆ ಮೌತ್ ಕಿಸ್ ಕೊಟ್ಟು ಸೆಲ್ಫಿ ಕ್ಲಿಕ್ಕಿಸಿದ್ದಾರೆ.

    ಈ ಫೋಟೋ ಎಲ್ಲೆಡೆ ಹರಿದಾಡುತ್ತಿದ್ದಂತೆ ರೆಹಮಾನ್ ಪತ್ನಿಯ ಸಹೋದರಿಯ ಮನೆಯವರು ಥಳಿಸಲು ಮುಂದಾಗುತ್ತಿದ್ದಂತೆ ರೆಹಮಾನ್ ನನ್ನು ಪೊಲೀಸರು ಕರೆದೊಕೊಂಡು ಹೋಗಿದ್ದಾರೆ. ಈ ಪ್ರಕರಣದಲ್ಲಿ ಕೆಲವರು ರಾಜಿ ಪಂಚಾಯತಿ ಮಾಡಿಸಲು ಮುಂದಾಗಿದ್ದು, ಸದ್ಯ ಈ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಊಟದ ವಿಚಾರಕ್ಕೆ ಜಗಳ- ದೊಣ್ಣೆಯಿಂದ ಹೊಡೆದು ಬಾವನಿಂದ್ಲೇ ನಾದಿನಿಯ ಕೊಲೆ

    ಊಟದ ವಿಚಾರಕ್ಕೆ ಜಗಳ- ದೊಣ್ಣೆಯಿಂದ ಹೊಡೆದು ಬಾವನಿಂದ್ಲೇ ನಾದಿನಿಯ ಕೊಲೆ

    ಬೆಂಗಳೂರು: ಬಾವನಿಂದಲೇ ನಾದಿನಿ ಬರ್ಬರವಾಗಿ ಕೊಲೆಯಾಗಿರೋ ಘಟನೆ ನೆಲಮಂಗಲ ತಾಲೂಕಿನ ಲಕ್ಕಸಂದ್ರ ಗ್ರಾಮದಲ್ಲಿ ನಡೆದಿದೆ.

    ಕೊಲೆಯಾದ ಮಹಿಳೆಯನ್ನು ಪದ್ಮ(40) ಎಂದು ಗುರುತಿಸಲಾಗಿದೆ. ಈಕೆಯ ಬಾವ ಗಂಗಗುಡ್ಡಯ್ಯ ಈ ಕೃತ್ಯವೆಸಗಿರೋ ಆರೋಪಿ. 20 ವರ್ಷಗಳ ಹಿಂದೆ ಪದ್ಮಾ ಅವರ ಗಂಡ ತೀರಿಕೊಂಡಿದ್ದರಿಂದ ಬಾವನ ಮನೆಯಲ್ಲೇ ವಾಸವಿದ್ದರು.

    ಕಳೆದ ರಾತ್ರಿ ಊಟದ ವಿಚಾರದಲ್ಲಿ ನಾದಿನಿ ಪದ್ಮ ಹಾಗೂ ಗಂಗಗುಡ್ಡಯ್ಯ ನಡುವೆ ಜಗಳ ನಡೆದಿದೆ. ಈ ಗಲಾಟೆ ತಾರಕಕ್ಕೇರಿ ಆರೋಪಿ ಗಂಗಗುಡ್ಡಯ್ಯ ಪದ್ಮ ಅವರನ್ನು ದೊಣ್ಣೆಯಿಂದ ಬಡಿದು ಬರ್ಬರವಾಗಿ ಕೊಲೆಗೈದಿದ್ದಾನೆ.

    ಸದ್ಯ ಆರೋಪಿ ಗಂಗಗುಡ್ಡಯ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.