Tag: ನಾಥೂರಾಂ ಗೋಡ್ಸೆ

  • ಬಾಪುರನ್ನು ಕೊಲ್ಲಲು ಗೋಡ್ಸೆಗೆ ಬಂದೂಕು ಹುಡುಕಲು ಸಾವರ್ಕರ್ ಸಹಾಯ: ಗಾಂಧಿ ಮರಿ ಮೊಮ್ಮಗನ ಸ್ಫೋಟಕ ಹೇಳಿಕೆ

    ಬಾಪುರನ್ನು ಕೊಲ್ಲಲು ಗೋಡ್ಸೆಗೆ ಬಂದೂಕು ಹುಡುಕಲು ಸಾವರ್ಕರ್ ಸಹಾಯ: ಗಾಂಧಿ ಮರಿ ಮೊಮ್ಮಗನ ಸ್ಫೋಟಕ ಹೇಳಿಕೆ

    ಮುಂಬೈ: ವಿನಾಯಕ ದಾಮೋದರ್ ಸಾವರ್ಕರ್ (Savarkar) ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿಕೆಯೊಂದನ್ನು ನೀಡಿದ ಬಳಿಕ ರಾಜಕೀಯ ವಾತಾವರಣ ಬಿಸಿಯಾಗಿದೆ. ರಾಹುಲ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾದರೆ, ಶಿವಸೇನೆ ಕೂಡಾ ಅವರ ಹೇಳಿಕೆಯನ್ನು ಒಪ್ಪುವುದಿಲ್ಲ, ಇದು ಪಕ್ಷದಲ್ಲಿ ವಿಭಜನೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ.

    ಈ ನಡುವೆ ಮಹಾತ್ಮ ಗಾಂಧಿಯವರ (Mahatma Gandhi) ಮರಿಮೊಮ್ಮಗ ತುಷಾರ್ ಗಾಂಧಿ (Tushar Gandhi) ಸಾವರ್ಕರ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸಾವರ್ಕರ್ ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದು ಮಾತ್ರವಲ್ಲದೇ ನಾಥೂರಾಂ ಗೋಡ್ಸೆ (Nathuram Godse) ಅವರಿಗೆ ಬಾಪು ಅವರನ್ನು ಕೊಲ್ಲಲು ಸಮರ್ಥ ಬಂದೂಕನ್ನು ಪಡೆಯಲು ಸಹಾಯ ಮಾಡಿದ್ದರು ಎಂದು ತಿಳಿಸಿದ್ದಾರೆ. ರಾಹುಲ್ ಗಾಂಧಿ ಬಳಿಕ ಇದೀಗ ತುಷಾರ್ ಅವರ ಹೇಳಿಕೆ ವಿವಾದ ಸೃಷ್ಟಿಸುವ ಸಾಧ್ಯತೆಯಿದೆ.

    ಟೀಟ್‌ನಲ್ಲೇನಿದೆ?
    ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದ್ದಲ್ಲದೇ, ಬಾಪು ಅವರನ್ನು ಕೊಲ್ಲಲು ನಾಥೂರಾಂ ಗೋಡ್ಸೆಗೆ ಸಮರ್ಥ ಬಂದೂಕನ್ನು ಹುಡುಕಲು ಸಹಾಯ ಮಾಡಿದ್ದರು. ಬಾಪು ಹತ್ಯೆಗೂ 2 ದಿನಗಳ ಮೊದಲು ಗೋಡ್ಸೆ ಬಳಿ ಪ್ರಬಲವಾದ ಯಾವುದೇ ಶಸ್ತ್ರಗಳಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗೃಹ ಸಚಿವರ ಮನೆಯ ಸುತ್ತಮುತ್ತಲೇ ಉಗ್ರರು ಅಡಗಿದ್ದಾರೆ – ಮುತಾಲಿಕ್

    ಟ್ವೀಟ್ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ತುಷಾರ್ ಗಾಂಧಿ ತಮ್ಮ ಹೇಳಿಕೆಯನ್ನು ವಿವರಿಸಿದ್ದಾರೆ. ನಾನು ಯಾವುದೇ ಆರೋಪ ಮಾಡುತ್ತಿಲ್ಲ. ಇತಿಹಾಸದಲ್ಲಿ ದಾಖಲಾಗಿರುವುದನ್ನು ಹೇಳುತ್ತಿದ್ದೇನೆ. ಪೊಲೀಸ್ ಎಫ್‌ಐಆರ್ ಪ್ರಕಾರ ನಾಥೂರಾಂ ಗೋಡ್ಸೆ ಮತ್ತು ವಿನಾಯಕ ಆಪ್ಟೆ ಸಾವರ್ಕರ್ ಅವರು 1948 ರ ಜನವರಿ 26, 27 ರಂದು ಭೇಟಿಯಾಗಿದ್ದರು. ಅವರ ಭೇಟಿಯಾಗುವವರೆಗೂ ಗೋಡ್ಸೆ ಬಳಿ ಬಂದೂಕು ಇರಲಿಲ್ಲ. ಅವರು ಬಂದೂಕು ಹುಡುಕುತ್ತಾ ಮುಂಬೈನಾದ್ಯಂತ ಸುತ್ತಾಡಿದ್ದಾರೆ. ಆದರೆ ಈ ಭೇಟಿಯ ಬಳಿಕ ಅವರು ನೇರವಾಗಿ ದೆಹಲಿಗೆ ಹೋಗಿ, ಅಲ್ಲಿಂದ ಗ್ವಾಲಿಯರ್‌ಗೆ ಹೋದರು. ಅಲ್ಲಿ ಅವರಿಗೆ ಒಳ್ಳೆಯ ಪಿಸ್ತೂಲ್ ಸಿಕ್ಕಿದೆ. ಇದೆಲ್ಲವೂ ಬಾಪು ಹತ್ಯೆಯ 2 ದಿನಗಳ ಮೊದಲು ನಡೆದಿದೆ. ಇದು ಆರೋಪ ಅಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹಾನಗರ ಪಾಲಿಕೆ ಚುನಾವಣೆ ಟಿಕೆಟ್ ಮಾರಾಟ – ಆಪ್ ವಿರುದ್ಧ ಬಿಜೆಪಿ ಗಂಭೀರ ಆರೋಪ

    Live Tv
    [brid partner=56869869 player=32851 video=960834 autoplay=true]

  • ಗಾಂಧಿ ಕೊಂದ ಗೋಡ್ಸೆ ಉತ್ಸವ ಮಾಡುವವರಿಂದ ಗಾಂಧೀಜಿ ಬಗ್ಗೆ ತಿಳಿದುಕೊಳ್ಳಬೇಕಾ – ಬೊಮ್ಮಾಯಿಗೆ ಸಿದ್ದು ತಿರುಗೇಟು

    ಗಾಂಧಿ ಕೊಂದ ಗೋಡ್ಸೆ ಉತ್ಸವ ಮಾಡುವವರಿಂದ ಗಾಂಧೀಜಿ ಬಗ್ಗೆ ತಿಳಿದುಕೊಳ್ಳಬೇಕಾ – ಬೊಮ್ಮಾಯಿಗೆ ಸಿದ್ದು ತಿರುಗೇಟು

    ಮೈಸೂರು: ಮಹಾತ್ಮ ಗಾಂಧಿಯನ್ನು (Mahatma Gandhi) ಕೊಂದ ನಾಥೂರಾಂ ಗೋಡ್ಸೆ (Nathuram Godse) ಉತ್ಸವವರಿಂದ ನಾವು ಗಾಂಧೀಜಿ ಬಗ್ಗೆ ಕೇಳಿ ತಿಳಿದುಕೊಳ್ಳಬೇಕಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಟೀಕ್ರಾಪ್ರಹಾರ ನಡೆಸಿದ್ದಾರೆ.

    ಮಹಾತ್ಮ ಗಾಂಧೀಜಿ ಜಯಂತಿ ಆಚರಣೆ ವೇಳೆ ರಾಹುಲ್‌ ಗಾಂಧಿ (Rahul Gandhi) ನಕಲಿ ಗಾಂಧಿ ಎಂದು ಬಸವರಾಜ ಬೊಮ್ಮಾಯಿ ಅವರು ವಾಗ್ದಾಳಿ ನಡೆಸಿದ್ದರು. ಸಿಎಂ ಹೇಳಿಕೆಗೆ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ. ಅವರು ಗಾಂಧಿವಾದಿಗಳಾ? ಅವರು ಗಾಂಧಿ ಕೊಂದವರು. ಗಾಂಧಿ ಕೊಂದ ಗೋಡ್ಸೆ ಉತ್ಸವ ಮಾಡುವವರು‌. ಬೊಮ್ಮಾಯಿಗೆ ಗಾಂಧಿನೂ ಗೊತ್ತಿಲ್ಲಾ, ಗೋಡ್ಸೆನೂ ಗೊತ್ತಿಲ್ಲ, ಸಾವರ್ಕರ್ ಕೂಡ ಗೊತ್ತಿಲ್ಲ. ನಾಥೂರಾಂ ಗೋಡ್ಸೆ ಮೆರವಣಿಗೆ ಮಾಡಿದವರು ಇವರು. ಇವರಿಂದ ಗಾಂಧಿ ಬಗ್ಗೆ ಕೇಳಬೇಕಾ? ಎಂಥ ವಿಪರ್ಯಾಸ ಇದು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ನಕಲಿ ಗಾಂಧಿ: ಬೊಮ್ಮಾಯಿ

    ಅವರು ಬಹಳ ಜನ ಬೇಲ್ ಮೇಲಿಲ್ವಾ? ಆರು ಜನ ಮಂತ್ರಿಗಳು ಆ್ಯಂಟಿಸಿಪೇಟರಿ ಬೇಲ್ ತೆಗೆದುಕೊಂಡರಲ್ಲ ಯಾಕ್ರೀ? ಕೋರ್ಟ್‌ಗೆ ಹೋಗಿ ಸ್ಟೇ ತೆಗೆದುಕೊಂಡು ಬಂದ್ರಲ್ಲ ಯಾಕೆ? ಟಿವಿಯಲ್ಲಿ ಅಶ್ಲೀಲ ಪ್ರಚಾರ ಆಗತ್ತೆ ಅಂತ ಸ್ಟೇ ತಂದರು. ಯಡಿಯೂರಪ್ಪ, ಸೋಮಣ್ಣ, ಅಶೋಕ ಬೇಲ್ ಮೇಲೆ ಇಲ್ವಾ? ಇವರ ಅಮಿತ್‌ ಶಾ ಅವರೇ ಜೈಲಿಗೆ ಹೋಗಿದ್ರಲ್ಲಪ್ಪ. ಶಾ ಏನಾಗಿದ್ರು, ಈಗ ಏನಾಗಿದ್ದಾರೆ? ಗೃಹ ಸಚಿವರೇ ಜೈಲಿಗೆ ಹೋಗಿದ್ರಲ್ಲಪ್ಪಾ ಎಂದು ಕುಟುಕಿದ್ದಾರೆ.

    ಅವರ ತಟ್ಟೆಯಲ್ಲಿ ಹೆಣನೇ ಬಿದ್ದಿದೆ. ನಮ್ಮ ತಟ್ಟೆಯಲ್ಲಿ ನೊಣ ಬಿದ್ದಿದೆ ಅಂತಾರೆ. ಬಿಜೆಪಿಯವರನ್ನು ಅಧಿಕಾರದಿಂದ ತೆಗೆಯಲೇಬೇಕು ಅಂತ ಜನ ತೀರ್ಮಾನ ಮಾಡಿಬಿಟ್ಟಿದ್ದಾರೆ. ಈ ಸಲ ಜನರೇ ಬದಲಾವಣೆ ಮಾಡ್ತಾರೆ. ವರುಣ ಕ್ಷೇತ್ರದಿಂದ ನಿಲ್ಲಬೇಕು ಅಂತ ನಾನು ತೀರ್ಮಾನ ಮಾಡಿಲ್ಲ. ಎಲ್ಲಿ ನಿಲ್ಲಬೇಕು ಅಂತ ತೀರ್ಮಾನ ಮಾಡಿಲ್ಲ. 2 ತಿಂಗಳು ಬಿಟ್ಟು ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗಾಂಧಿ ಜಯಂತಿ- ದ್ರೌಪದಿ ಮುರ್ಮು, ಸೋನಿಯಾ ಗಾಂಧಿ ಸೇರಿ ಗಣ್ಯರಿಂದ ನಮನ

    ಅಡ್ವಾಣಿ ರಥಯತ್ರೆ ಮಾಡಿದ್ರಲ್ಲ, ಅದು ಶೋ ನಾ? ಮುರುಳಿ ಮನೋಹರ ಜೋಷಿ ಮಾಡಿದ ಯಾತ್ರೆ ಅದು ಶೋನಾ? ನಾವು ಮಾಡಿದ್ರೆ ಶೋ, ಅವರು ಮಾಡಿದರೆ ಜನಪರ ಯಾತ್ರೆನಾ? ಜನ ಬೆಂಬಲ ಇಲ್ಲದಿದ್ದರೆ ಬರೀ ಯಾತ್ರೆ ಮಾಡಿದರೆ ಆಗತ್ತಾ? ಬರೀ ಸಭೆ ಮಾಡಿದರೆ ಆಗುತ್ತಾ? ಅಲ್ಟಿಮೇಟ್ ಜನರೇ ಪ್ರಭುಗಳು ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 3 ತಿಂಗಳ ನಂತರ ಕಾಳಿಚರಣ್ ಮಹಾರಾಜ್‍ಗೆ ಸಿಕ್ತು ಜಾಮೀನು

    3 ತಿಂಗಳ ನಂತರ ಕಾಳಿಚರಣ್ ಮಹಾರಾಜ್‍ಗೆ ಸಿಕ್ತು ಜಾಮೀನು

    ರಾಯ್‍ಪುರ: ದ್ವೇಷ ಭಾಷಣ ಮಾಡಿದ ಪ್ರಕರಣದ ಹಿನ್ನೆಲೆ ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ಕಳೆದ ಮೂರು ತಿಂಗಳಿಂದ ಸೆರೆವಾಸ ಅನುಭವಿಸುತ್ತಿದ್ದರು. ಆದರೆ ಈಗ ಛತ್ತೀಸ್‍ಗಢ ಹೈಕೋರ್ಟ್ ಕಾಳಿಚರಣ್ ಅವರಿಗೆ ಜಾಮೀನು ನೀಡಿದೆ.

    Kalicharan Maharaj: Kali devotee, who claimed a 'vision' | India News,The Indian Express

    ರಾಜ್ಯ ರಾಜಧಾನಿ ರಾಯ್‍ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಾತ್ಮ ಗಾಂಧಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮತ್ತು ಹಂತಕ ನಾಥೂರಾಂ ಗೋಡ್ಸೆಯನ್ನು ಹೊಗಳಿದ್ದಕ್ಕಾಗಿ ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಅವರನ್ನು ಬಂಧನಕ್ಕೊಳಪಡಿಸಲಾಗಿತ್ತು. ಈ ಕುರಿತು ಭಾರೀ ಚರ್ಚೆಯಾಗುತ್ತಿತ್ತು. ಕಾಳಿಚರಣ್ ವಕೀಲರು ಜಾಮೀನಿಗಾಗಿ ಓಡಾಡುತ್ತಿದ್ದರೂ ಸಿಕ್ಕಿರಲಿಲ್ಲ. ಆದರೆ ಮೂರು ತಿಂಗಳ ನಂತರ ಛತ್ತೀಸ್‍ಗಢ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ. ಇದನ್ನೂ ಓದಿ: ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪೊಲೀಸರ ಮಸ್ತ್ ಡ್ಯಾನ್ಸ್: ಪರ,ವಿರೋಧ ಚರ್ಚೆ

    ಡಿಸೆಂಬರ್ 30 ರಂದು ಮಧ್ಯಪ್ರದೇಶದ ರಾಯ್‍ಪುರ ಕಾರ್ಯಕ್ರಮದಲ್ಲಿ ಕಾಳಿಚರಣ್ ಅವರು ಮುಖ್ಯ ಅತಿಥಿಗಳಾಗಿ ಬಂದಿದ್ದರು. ಈ ವೇಳೆ ಕಾಳಿಚರಣ್ ಅವರು ಗಾಂಧಿ ದೇಶವನ್ನು ನಾಶಮಾಡುತ್ತಿದ್ದಾರೆ ಎಂದು ಆರೋಪಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    ಈ ವೀಡಿಯೋದಲ್ಲಿ ಅವರು, ನಾನು ನಾಥೂರಾಂ ಗೋಡ್ಸೆಗೆ ನಮನ ಸಲ್ಲಿಸುತ್ತೇನೆ ಎಂದು ಹೇಳಿದ್ದರು. ಈ ಹೇಳಿಕೆ ಚರ್ಚೆಗೆ ಕಾರಣವಾಗಿತ್ತು. ವಿಚಾರಣೆಯಲ್ಲಿ ಕಾಳಿಚರಣ್ ಪರ ವಕೀಲ ಕಿಶೋರ್ ಭಾದುರಿ ಅವರು, ತಮ್ಮ ಕಕ್ಷಿದಾರರು ನಿರಪರಾಧಿಯಾಗಿದ್ದು, ರಾಜಕೀಯ ಪೈಪೋಟಿಯಿಂದಾಗಿ ಈ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೈಕೋರ್ಟ್‍ಗೆ ತಿಳಿಸಿದ್ದರು. ಇದನ್ನೂ ಓದಿ: ಬಾಲ್ಯ ವಿವಾಹ ಮಾಡಿ ತಾಳಿ ಬಿಚ್ಚಿಸಿ ಪರೀಕ್ಷೆಗೆ ಕಳುಹಿಸಿದ್ರು

  • ʼನನ್ನ ಆದರ್ಶ ನಾಥೂರಾಂ ಗೋಡ್ಸೆʼ – ಭಾಷಣ ಸ್ಪರ್ಧೆ ಆಯೋಜಿಸಿದ್ದ ಅಧಿಕಾರಿ ಸೇವೆಯಿಂದ ಅಮಾನತು

    ʼನನ್ನ ಆದರ್ಶ ನಾಥೂರಾಂ ಗೋಡ್ಸೆʼ – ಭಾಷಣ ಸ್ಪರ್ಧೆ ಆಯೋಜಿಸಿದ್ದ ಅಧಿಕಾರಿ ಸೇವೆಯಿಂದ ಅಮಾನತು

    ಅಹಮದಾಬಾದ್: ವಿದ್ಯಾರ್ಥಿಗಳಿಗೆ ನಾಥೂರಾಂ ಗೋಡ್ಸೆಯ ಬಗ್ಗೆ ಭಾಷಣ ಸ್ಪರ್ಧೆ ಆಯೋಜಿಸಿದ್ದ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

    ‘ಮಾರೋ ಆದರ್ಶ್ ನಾಥೂರಾಂ ಗೋಡ್ಸೆ’ (ನನ್ನ ಆದರ್ಶ ನಾಥೂರಾಂ ಗೋಡ್ಸೆ) ಎಂಬ ವಿಷಯದ ಬಗ್ಗೆ ವಲ್ಸಾದ್ ಜಿಲ್ಲೆಯ ಹಲವು ಸರ್ಕಾರಿ ಮತ್ತು ಖಾಸಗಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.

    ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಬೆನ್ನಲ್ಲೇ ಸ್ಪರ್ಧೆ ಆಯೋಜಿಸಿದ್ದ ಯುವಜನ ಅಭಿವೃದ್ಧಿ ಅಧಿಕಾರಿ ನೀತಾಬೆನ್ ಗಾವ್ಲಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಗುಜರಾತ್ ಸರ್ಕಾರದ ಯುವಜನ ಸೇವೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಇಲಾಖೆ ಈಗ ವಿಚಾರಣೆ ಆರಂಭಿಸಿದೆ.

    ಸೋಮವಾರ ಗುಜರಾತ್ ಸರ್ಕಾರದ ಯುವಜನ ಸೇವಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಇಲಾಖೆಯಡಿಯಲ್ಲಿ ಜಿಲ್ಲಾ ಮಟ್ಟದ ಬಾಲಪ್ರತಿಭಾ ಶೋಧ ಸ್ಪರ್ಧೆ ಅಂಗವಾಗಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 5 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನೂ ವಿತರಿಸಲಾಗಿತ್ತು. ಇದನ್ನೂ ಓದಿ: ಪಾಕಿಸ್ತಾನಕ್ಕೆ ಹೋಗುವ ಬದಲು ಭಾರತವನ್ನು ಅಜ್ಜಂದಿರು ಆಯ್ಕೆ ಮಾಡಿದ್ದು ಯಾಕೆ: ಹಿಜಬ್‌ ವಿವಾದಕ್ಕೆ ಸ್ವಾಮಿ ಪ್ರಶ್ನೆ

    ಈ ಕಾರ್ಯಕ್ರಮವನ್ನು ಆಯೋಜಿಸಲು ಶಾಲೆಯ ಆವರಣವನ್ನು ಮಾತ್ರ ನೀಡಿದ್ದೇವೆ ಮತ್ತು ಶಾಲೆಯ ಯಾರೂ ಅದರಲ್ಲಿ ಭಾಗವಹಿಸಲಿಲ್ಲ ಎಂದು ಕುಸುಮ್‌ ವಿದ್ಯಾಲಯ ತಿಳಿಸಿದೆ.

    ಜಿಲ್ಲಾ ಶಿಕ್ಷಣಾಧಿಕಾರಿ ಬಿ ಡಿ ಬಾರಯ್ಯ ಪ್ರತಿಕ್ರಿಯಿಸಿ, ಜಿಲ್ಲಾ ಯುವ ವಿಕಾಸ ಕಛೇರಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ನಮಗೆ ಈ ಬಗ್ಗೆ ಮಾಹಿತಿ ಇರಲಿಲ್ಲ. ಯುವ ವಿಕಾಸ ಕಛೇರಿಯು ಫೆಬ್ರವರಿ 8 ರಂದು ಜಿಲ್ಲೆಯ ಎಲ್ಲಾ 25 ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಪತ್ರವನ್ನು ರವಾನಿಸಿ ಫೆಬ್ರವರಿ 14 ರಂದು ವಲ್ಸಾದ್‌ನ ತಿಥಾಲ್ ರಸ್ತೆಯಲ್ಲಿರುವ ಕುಸುಮ್ ವಿದ್ಯಾಲಯದಲ್ಲಿ ನಡೆಯಲಿರುವ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಕೋರಿತ್ತು ಎಂದು ತಿಳಿಸಿದ್ದಾರೆ.

    ಹಿರಿಯ ಕಾಂಗ್ರೆಸ್ ನಾಯಕ ಅರ್ಜುನ್ ಮೊದ್ವಾಡಿಯಾ ಈ ಸ್ಪರ್ಧೆಯನ್ನು ಖಂಡಿಸಿದ್ದಾರೆ. ಭಾಷಣ ಸ್ಪರ್ಧೆಯ ಹೆಸರಿನಲ್ಲಿ ಗೋಡ್ಸೆ ಒಬ್ಬ ಹೀರೋ ಎಂದು ಮಕ್ಕಳಿಗೆ ಕಲಿಸುವುದು ಅತ್ಯಂತ ನಾಚಿಕೆಗೇಡಿನ ಪ್ರಯತ್ನ. ಮಕ್ಕಳ ಮನಸ್ಸಿನಲ್ಲಿ ಮಹಾತ್ಮ ಗಾಂಧಿಯ ಬಗ್ಗೆ ದ್ವೇಷವನ್ನು ಸೃಷ್ಟಿಸಲು ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಗೋಡ್ಸೆ ಪೂಜೆಯನ್ನು ಬಿಜೆಪಿ ನಿಲ್ಲಸದೇ ಇದ್ದರೆ ನಾವು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.