Tag: ನಾಥುಲಾ

  • ಸಿಕ್ಕಿಂನಲ್ಲಿ ಭಾರೀ ಹಿಮಪಾತ – 6 ಸಾವು, ಹಲವರು ನಾಪತ್ತೆ

    ಸಿಕ್ಕಿಂನಲ್ಲಿ ಭಾರೀ ಹಿಮಪಾತ – 6 ಸಾವು, ಹಲವರು ನಾಪತ್ತೆ

    ಗ್ಯಾಂಗ್ಟಾಕ್: ಸಿಕ್ಕಿಂನ (Sikkim) ನಾಥುಲಾ (Nathula) ಪ್ರದೇಶದಲ್ಲಿ ಮಂಗಳವಾರ ಭಾರೀ ಹಿಮಪಾತ (Avalanche) ಉಂಟಾಗಿದ್ದು, ಘಟನೆಯಲ್ಲಿ 6 ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಸಿಕ್ಕಿಂನ ಭಾರತ-ಚೀನಾ ಗಡಿಯ ಸಮೀಪವಿರುವ ಎತ್ತರದ ಪರ್ವತದ ಹಾದಿಯಾದ ನಾಥುಲಾ ಬಳಿ ಮಧ್ಯಾಹ್ನ 12:20ರ ವೇಳೆಗೆ ಹಿಮಪಾತ ಸಂಭವಿಸಿದೆ. ಈ ಪ್ರದೇಶ ಸಮುದ್ರ ಮಟ್ಟದಿಂದ 4,310 ಮೀ. (14,140 ಅಡಿ) ಎತ್ತರದಲ್ಲಿದೆ ಮತ್ತು ಇದು ಪ್ರಮುಖ ಪ್ರವಾಸಿ ತಾಣವಾಗಿದೆ.

    ವರದಿಗಳ ಪ್ರಕಾರ 150ಕ್ಕೂ ಹೆಚ್ಚು ಪ್ರವಾಸಿಗರು 15 ಮೈಲುಗಳಷ್ಟು ಮುಂದೆ ಸಾಗಿದ್ದು, ಅಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಈ ನಡುವೆ ಹಿಮದ ಅಡಿಯಲ್ಲಿ ಸಿಲುಕಿದ ಸುಮಾರು 30 ಜನರನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ರಾಜ್ಯ ರಾಜಧಾನಿ ಗ್ಯಾಂಗ್ಟನ್‌ನ ಆಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಅವಘಡ ತಪ್ಪಿಸಲು ರೈಲನ್ನೇ ನಿಲ್ಲಿಸಿದ ದಿಟ್ಟ ಮಹಿಳೆ!

    ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದ್ದು, ನಾಪತ್ತೆಯಾದವರ ಹುಡುಕಾಟದಲ್ಲಿ ಸಿಬ್ಬಂದಿ ತೊಡಗಿದ್ದಾರೆ. ಪ್ರಸ್ತುತ ಸಿಕ್ಕಿಂ ಪೊಲೀಸರು, ಸಿಕ್ಕಿಂನ ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮತ್ತು ವಾಹನ ಚಾಲಕರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 47 ಜನ ಪ್ರಯಾಣಿಕರಿದ್ದ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: ಪ್ರಯಾಣಿಕರು ಬಚಾವ್

  • ಚೀನಾ ಸೈನಿಕರಿಗೆ ನಮಸ್ಕಾರದ ಅರ್ಥ ತಿಳಿಸಿದ ನಿರ್ಮಲಾ ಸೀತಾರಾಮನ್

    ಚೀನಾ ಸೈನಿಕರಿಗೆ ನಮಸ್ಕಾರದ ಅರ್ಥ ತಿಳಿಸಿದ ನಿರ್ಮಲಾ ಸೀತಾರಾಮನ್

    ನವದೆಹಲಿ: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗಡಿ ಪ್ರದೇಶದಲ್ಲಿ ಚೀನಿ ಸೈನಿಕರಿಗೆ ಭಾರತೀಯ ನಮಸ್ಕಾರದ ಅರ್ಥವನ್ನು ತಿಳಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

    ಭಾರತ ಮತ್ತು ಚೀನಾ ಗಡಿ ಪ್ರದೇಶದ ನಾಥುಲಾ ದಲ್ಲಿ ಭಾನುವಾರ ಇಂಡೋ-ಟಿಬೆಟಿಯನ್ ಸೈನಿಕರನ್ನು ಭೇಟಿ ಮಾಡಿದ್ದ ರಕ್ಷಣಾ ಸಚಿವರು ತಮ್ಮ ಭೇಟಿಯ ಕುರಿತು ಟ್ವಿಟ್ಟರ್‍ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದರು. ನಂತರ ಸೇನಾ ಅಧಿಕಾರಿಗಳೊಂದಿಗೆ ತೆರಳಿ ಚೀನಾ ಸೈನಿಕರನ್ನು ಭೇಟಿ ಮಾಡಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

    ವಿಡಿಯೋದಲ್ಲಿ ರಕ್ಷಣಾ ಸಚಿವರು ಚೀನಿ ಸೈನಿಕರೊಂದಿಗೆ ಮಾತುಕತೆ ನಡೆಸಿದ್ದು, ಆ ವೇಳೆ ಭಾರತೀಯ ನಮಸ್ಕಾರದ ಮಹತ್ವವನ್ನು ತಿಳಿ ಹೇಳಿದ್ದಾರೆ. ಈ ವಿಡಿಯೋವನ್ನು ಸ್ವತಃ ರಕ್ಷಣಾ ಸಚಿವರೇ ಟ್ವೀಟ್ ಮಾಡಿದ್ದಾರೆ. ಲಾಥುಲಾ ಗಡಿಯನ್ನು ಭೇಟಿ ಮಾಡಿದ ವೇಳೆ ಚೀನಿ ಸೈನಿಕರು ಸತತವಾಗಿ ತನ್ನ ಫೋಟೋಗಳನ್ನು ತೆಗೆಯುತ್ತಿದ್ದರು ಎಂದು ತಮ್ಮ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಇಂಡೋ-ಚೀನಾ ಗಡಿಯಲ್ಲಿ ಕೈಗೊಂಡಿರುವ ರಕ್ಷಣಾ ಕಾರ್ಯಗಳನ್ನು ವೀಕ್ಷಿಸಲು ಸಚಿವೆ ಸೀತಾರಾಮನ್ ತೆರಳಿದ್ದರು. ಡೋಕ್ಲಾಂ ಗಡಿ ಪ್ರದೇಶದಲ್ಲಿ ಚೀನಾ ತನ್ನ ಸೈನಿಕರನ್ನು ಹಿಂಪಡೆದಿಲ್ಲ ಎಂಬ ಸಂಗತಿಯನ್ನು ಭಾರತೀಯ ರಕ್ಷಣಾ ಅಧಿಕಾರಿಗಳು ಸ್ಪಷ್ಟಪಡಿಸಿದ ನಂತರ ಗಡಿ ಪ್ರದೇಶಕ್ಕೆ ಭೇಟಿ ನೀಡಲಾಗಿದೆ. ಈ ಹಿಂದೆ ಡೋಕ್ಲಾಂ ಗಡಿ ಪ್ರದೇಶದಲ್ಲಿ ಚೀನಾ ನಿರ್ಮಿಸಿಸುತ್ತಿದ್ದ ರಸ್ತೆಯ ವಿರೋಧಿಸಿ ಭಾರತೀಯ ಸೈನಿಕರು ಹಾಗೂ ಚೀನಿ ಪಡೆಗೆ ಸಂಘರ್ಷ ಉಂಟಾಗಿತ್ತು. ಈ ಸ್ಥಳದಿಂದ ಕೇವಲ 10 ಕಿ.ಮೀ. ದೂರದಲ್ಲಿ ಚೀನಾ ಮತ್ತೆ ರಸ್ತೆಯನ್ನು ನಿರ್ಮಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿತ್ತು. ಹಾಗಿದ್ದರೂ ಡೋಕ್ಲಾಂ ಪ್ರದೇಶದಲ್ಲಿ ಯಥಾಸ್ಥಿತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.