Tag: ನಾಡ ದೇವಿ

  • ನಾಡ ದೇವಿಯ ಭಾವಚಿತ್ರ ಗೊಂದಲಕ್ಕೆ ತೆರೆ ಎಳೆದ ಸರ್ಕಾರ

    ನಾಡ ದೇವಿಯ ಭಾವಚಿತ್ರ ಗೊಂದಲಕ್ಕೆ ತೆರೆ ಎಳೆದ ಸರ್ಕಾರ

    ಬೆಂಗಳೂರು: ನಾಡ ದೇವಿಯ(Nada Devi) ಭಾವಚಿತ್ರ ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ. ನಾಡದೇವಿ ಕನ್ನಡಾಂಬೆಯ ಪ್ರಮಾಣಿತ ಮತ್ತು ಅಧಿಕೃತ ಭಾವಚಿತ್ರಕ್ಕೆ ಸರ್ಕಾರ(Karnataka Government) ಅನುಮೋದನೆ ನೀಡಿದೆ.

    ಈ ಮೂಲಕ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ.ಮಹೇಂದ್ರ ನೇತೃತ್ವದ ಸಮಿತಿ ನೀಡಿದ್ದ ಶಿಫಾರಸ್ಸುಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ.

    ಇನ್ನು ಮುಂದೆ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಶಾಲಾ-ಕಾಲೇಜುಗಳ ಕಾರ್ಯಕ್ರಮ, ಕೊಠಡಿಗಳಲ್ಲಿ ಇದೇ ಭಾವಚಿತ್ರ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಬೆಂಗಳೂರು ವಿವಿ ಆವರಣದಲ್ಲಿ ಇದೇ ಮಾದರಿಯ ನಾಡದೇವಿ ಪ್ರತಿಮೆ ಸ್ಥಾಪಿಸಲು ಸರ್ಕಾರದಿಂದ ನಿರ್ಧಾರ ಮಾಡಿದೆ.

    ಹಲವು ಕಾರ್ಯಕ್ರಮಗಳಲ್ಲಿ ಕರ್ನಾಟಕ ರಾಜ್ಯದ ನಾಡದೇವತೆಯ ಭಾವಚಿತ್ರವಾಗಿ ದುರ್ಗಾದೇವಿ, ಸರಸ್ವತಿ ಚಿತ್ರಗಳನ್ನು ಬಳಸಲಾಗುತ್ತಿತ್ತು. ಅಧಿಕೃತ ಚಿತ್ರಕೃತಿ ಘೋಷಣೆಯಾದ ಕಾರಣ ಸರ್ಕಾರ ಒಂದು ನಿರ್ದಿಷ್ಟವಾದ ಚಿತ್ರವನ್ನು ಆಯ್ಕೆ ಮಾಡಲು ಚಿತ್ರ ಕಲಾವಿದರನ್ನು ಒಳಗೊಂಡ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಶಿಫಾರಸ್ಸಿನಂತೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

    Live Tv
    [brid partner=56869869 player=32851 video=960834 autoplay=true]