Tag: ನಾಡಬಾಂಬ್

  • ನಾಡಬಾಂಬ್ ಸಿಡಿದು ವ್ಯಕ್ತಿಯ ಕೈ ಛಿದ್ರ – ಅದೇ ಸ್ಥಳದಲ್ಲಿ ಮತ್ತೆರಡು ಬಾಂಬ್ ಪತ್ತೆ

    ನಾಡಬಾಂಬ್ ಸಿಡಿದು ವ್ಯಕ್ತಿಯ ಕೈ ಛಿದ್ರ – ಅದೇ ಸ್ಥಳದಲ್ಲಿ ಮತ್ತೆರಡು ಬಾಂಬ್ ಪತ್ತೆ

    ರಾಮನಗರ: ನಾಡಬಾಂಬ್ (Land Bomb) ಸಿಡಿದು ವ್ಯಕ್ತಿಯ ಕೈ ಛಿದ್ರವಾಗಿರುವ ಘಟನೆ ಕನಕಪುರ (Kanakapura) ತಾಲೂಕಿನ ನೇರಳಹಳ್ಳಿದೊಡ್ಡಿ ಗ್ರಾಮದಲ್ಲಿ ನಡೆದಿದೆ.

    ನೇರಳೆದೊಡ್ಡಿ ಗ್ರಾಮದ ರೈಸ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕೋಲಾರ ಮೂಲದ ನೌಷದ್ ಪಾಷ (29) ಗಂಭೀರವಾಗಿ ಗಾಯಗೊಂಡಿದ್ದಾನೆ. ರೈಸ್ ಮಿಲ್ ಹಿಂಭಾಗ ಬಿದ್ದಿದ್ದ ಚೆಂಡಿನ ರೀತಿಯ ವಸ್ತುವನ್ನು ನಾಡಬಾಂಬ್ ಎಂದು ತಿಳಿಯದೇ ಕೈಯಲ್ಲಿ ಹಿಡಿದಿದ್ದಾಗ ಅದು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ನೌಷದ್ ಪಾಷ ಕೈ ಛಿದ್ರಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: UPಗೆ ಯೋಗಿ ಆದಿತ್ಯನಾಥ್‌, ರಾಜಸ್ಥಾನಕ್ಕೆ ಬಾಲಕನಾಥ್‌ – ಸಿಎಂ ರೇಸ್‌ನಲ್ಲಿ ಮತ್ತೊಬ್ಬರು ಯೋಗಿ

    ಇನ್ನೂ ಅದೇ ಸ್ಥಳದಲ್ಲಿ ಮತ್ತೆರಡು ನಾಡಬಾಂಬ್‌ಗಳು ಪತ್ತೆಯಾಗಿದ್ದು, ಕಾಡು ಹಂದಿಗಳನ್ನು ಹೊಡೆಯಲು ನಾಡಬಾಂಬ್ ಇಟ್ಟಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಕೋಡಿಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮತ್ತೆ ಮಾಮಾಜಿ ಮ್ಯಾಜಿಕ್‌ – ಬಿಜೆಪಿ ಸುನಾಮಿಗೆ ಕಾಂಗ್ರೆಸ್‌ ಕೊಚ್ಚಿ ಹೋಗಿದ್ದು ಹೇಗೆ?

  • ಕಾಡು ಪ್ರಾಣಿಗಳಿಗಿಟ್ಟ ನಾಡಬಾಂಬ್ ಸ್ಫೋಟ- ಬಾಲಕಿ ಸಾವು

    ಕಾಡು ಪ್ರಾಣಿಗಳಿಗಿಟ್ಟ ನಾಡಬಾಂಬ್ ಸ್ಫೋಟ- ಬಾಲಕಿ ಸಾವು

    ಮುಂಬೈ: ಕಾಡು ಪ್ರಾಣಿಗಳನ್ನು ಕೊಲ್ಲಲು ಬಳಸುವ ನಾಡಸ್ಫೋಟಗೊಂಡು ಬಾಲಕಿ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳಿಗೆ ತೀವ್ರ ಗಾಯಗಾಳದ ಘಟನೆ ಮಹಾರಾಷ್ಟ್ರದ ಪುಣಾದ ವಾಡ್ಮುಖವಾಡಿ, ಚಾರ್ಹೋಲಿ ಬುದ್ರುಕ್‍ನ ಹೊಲದಲ್ಲಿ ನಡೆದಿದೆ.

    ರಾಧಾ ಗೋಕುಲ್ ಗಾವ್ಲಿ(5) ಮೃತ ದುರ್ದೈವಿ. ಆರತಿ ಗಾವ್ಲಿ(4) ಮತ್ತು ರಾಜು ಗಾವ್ಲಿ ಗಾಯಗೊಂಡ ಮಕ್ಕಳು. ಪುಣೆ ನಗರದಿಂದ ಸುಮಾರು 20 ಕಿಮೀ ದೂರದಲ್ಲಿರುವ ವಾಡ್ಮುಖವಾಡಿಯ ಕಬ್ಬಿನ ಗದ್ದೆಯ ಬಳಿ ಈ ಮೂವರು ಮಕ್ಕಳು ಆಟವಾಡುತ್ತಿದ್ದರು. ಹೊಲದಲ್ಲಿ ಕಾಡು ಪ್ರಾಣಿಗಳ ರಕ್ಷಣೆಗೆಂದು ಇಟ್ಟಿದ್ದ ನಾಡಬಾಂಬ್ ಇಡಲಾಗಿತ್ತು. ಅದರ ಮೇಲೆ ಬಾಲಕಿಯು ಆಕಸ್ಮಿಕವಾಗಿ ಎಡವಿ ಬಿದ್ದಿದ್ದಾರೆ. ಆ ವೇಳೆಗೆ ನಾಡಬಾಂಬ್ ಸ್ಫೋಟ ಸಂಭವಿಸಿದೆ. ಇದರಿಂದ ಒಂದು ಮಗು ಸಾವನ್ನಪ್ಪಿದೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.

    ಮಕ್ಕಳ ಪೋಷಕರು ಹಾಲು ಮಾರಾಟಗಾರುವುದರಿಂದ ಘಟನೆ ನಡೆದಾಗ ಸ್ಥಳದಲ್ಲಿ ಅವರು ಇರಲಿಲ್ಲ. ಗಾಯಗೊಂಡ ಮಕ್ಕಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಬಾಲಕಿಯು ಸಾವನ್ನಪ್ಪಿದ್ದಾಳೆ. ಪ್ರಕರಣ ಸಂಬಂಧಿಸಿ ಸ್ಫೋಟಕಗಳು ಅಲ್ಲಿಗೆ ಹೇಗೆ ಬಂದವು ಎಂಬುವ ಕುರಿತು ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ದನ್ನೂ ಓದಿ:  ಟಾಟಾ ಏಸ್ ವಾಹನಕ್ಕೆ ಗುದ್ದಿದ ಅಪರಿಚಿತ ವಾಹನ – 2 ಸಾವು, 10 ಮಂದಿಗೆ ಗಾಯ

  • ಗ್ರಾಮಸ್ಥರ ನಿದ್ದೆಗೆಡಿಸಿದ ನಾಡಾ ಬಾಂಬ್‍ಗಳು- ಎರಡು ನಾಯಿಗಳು ಬಲಿ

    ಗ್ರಾಮಸ್ಥರ ನಿದ್ದೆಗೆಡಿಸಿದ ನಾಡಾ ಬಾಂಬ್‍ಗಳು- ಎರಡು ನಾಯಿಗಳು ಬಲಿ

    ದಾವಣೆಗೆರೆ: ಕಾಡು ಪ್ರಾಣಿಗಳಿಗಾಗಿ ಇಡುವ ನಾಡ ಬಾಂಬ್‍ನಿಂದಾಗಿ ಗ್ರಾಮದ ರೈತರು ಜಮೀನುಗಳಿಗೆ ಹೋಗಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ.

    ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಕಡತಿ ಗ್ರಾಮದ ರೈತರು ಪ್ರತಿ ದಿನ ಆತಂಕದಲ್ಲಿ ಜೀವನ ಸಾಗಿಸುತ್ತಿದ್ದು, ತುಂಗಭದ್ರ ನದಿಗೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಕಬ್ಬು, ಭತ್ತ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನ ಬೆಳೆಯುತ್ತಾರೆ. ಕಾಡು ಪ್ರಾಣಿಗಳಿಂದ ಬೆಳೆಗಳನ್ನು ಉಳಿಸಿಕೊಳ್ಳಲು ಹಾಗೂ ಕಾಡು ಪ್ರಾಣಿಗಳನ್ನು ಬೇಟೆಯಾಡಲು ನಾಡ ಬಾಂಬ್ ಗಳ ಮೊರೆ ಹೋಗಿದ್ದಾರೆ.

    ಹೀಗೆ ಕಾಡು ಪ್ರಾಣಿಗಳ ಕಾಟವನ್ನು ತಪ್ಪಿಸಲು ಇಟ್ಟಿದ್ದ ನಾಡ ಬಾಂಬ್‍ಗಳು ಗ್ರಾಮಸ್ಥರಿಗೆ ಮುಳುವಾಗಿವೆ. ನಾಡ ಬಾಂಬ್ ತಿಂದು ಎರಡು ನಾಯಿಗಳು ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ರೈತರು ರಾತ್ರಿ ವೇಳೆ ಬೆಳೆಗೆ ನೀರು ಹಾಯಿಸಲು ಹೋಗುತ್ತಿದ್ದರು. ಇದೀಗ ನಾಡ ಬಾಂಬ್ ನಿಂದ ಹೊಲಕ್ಕೆ ಹೋಗಲು ಭಯಪಡುವಂತಾಗಿದೆ.

    ಕೆಲ ರೈತರು ಬೆಳೆಗಳನ್ನು ರಕ್ಷಿಸಿಕೊಳ್ಳಲು ನಾಡ ಬಾಂಬ್ ಬಳಸುತ್ತಾರೆ, ಇನ್ನೂ ಕೆಲವರು ಕಾಡು ಪ್ರಾಣಿಗಳನ್ನು ಭೇಟಿಯಾಡಲು ನಾಡ ಬಾಂಬ್ ಬಳಸುತ್ತಾರೆ. ಬಾಂಬ್‍ಗಳನ್ನು ಮಾಂಸದುಂಡೆಯೊಳಗೆ ಇರುವುದರಿಂದ ಕಾಡು ಪ್ರಾಣಿಗಳ ಬದಲಾಗಿ ಸಾಕು ನಾಯಿಗಳು ಸಾಯುತ್ತಿದ್ದು ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ. ನಾಯಿಗಳು ಸಾವನ್ನಪ್ಪಿದರೆ ಸರಿ ಆದರೆ ಮಕ್ಕಳು ಇದನ್ನು ತುಳಿದರೆ ಏನು ಕಥೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

  • ಮನೆ ನಿರ್ಮಾಣಕ್ಕೆ ಪಾಯ ತೋಡಿ ಹೊರ ಹಾಕಿದ್ದ ಮಣ್ಣಿನಲ್ಲಿ ಸ್ಫೋಟಕ ಸಿಡಿದು ಬಾಲಕರಿಬ್ಬರಿಗೆ ಗಾಯ

    ಮನೆ ನಿರ್ಮಾಣಕ್ಕೆ ಪಾಯ ತೋಡಿ ಹೊರ ಹಾಕಿದ್ದ ಮಣ್ಣಿನಲ್ಲಿ ಸ್ಫೋಟಕ ಸಿಡಿದು ಬಾಲಕರಿಬ್ಬರಿಗೆ ಗಾಯ

    ರಾಯಚೂರು: ಸ್ಫೋಟಕ ವಸ್ತು ಸಿಡಿದು ಇಬ್ಬರು ಬಾಲಕರು ಗಾಯಗೊಂಡ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಬಸವರಾಜೇಶ್ವರಿ ಕ್ಯಾಂಪ್‍ನಲ್ಲಿ ನಡೆದಿದೆ.

    ಗೌರಂಗು ಮಂಡಲ್ ಹಾಗೂ ಬಿಸ್ವಾಜಿತ್ ಮಂಡಲ್ ಗಾಯಗೊಂಡಿರುವ ಬಾಲಕರು. ಗ್ರಾಮದ ರಮೇಶ್ ಎಂಬವರು ಮನೆ ನಿರ್ಮಾಣಕ್ಕೆ ಪಾಯ ತೋಡಿ ಹೊರಹಾಕಿದ್ದ ಮಣ್ಣಿನಲ್ಲಿ ಬಾಲಕರಿಬ್ಬರು ಆಟವಾಡುತ್ತಿದ್ದ ವೇಳೆ ಸಿಕ್ಕ ಬ್ಯಾಗ್ ನಲ್ಲಿ ಸ್ಫೋಟಕ ಪತ್ತೆಯಾಗಿದೆ. ಅದನ್ನ ಹೊರತೆಗೆದು ಬಾಲಕರು ಆಟವಾಡಿದ್ದಾರೆ. ಈ ಸಂದರ್ಭದಲ್ಲಿ ಸ್ಫೋಟಗೊಂಡಿದ್ದು ಸಣ್ಣಪುಟ್ಟ ಗಾಯಗಳಾಗಿವೆ.

    ಘಟನೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋರ್ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಹಳೆಯ ಮನೆಯನ್ನ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ಈ ಹಿಂದೆ ಇದ್ದ ಮನೆಯಲ್ಲೇ ನಾಡಬಾಂಬ್ ಅಡಗಿಸಿಟ್ಟಿದ್ದಿರಬಹುದು ಅಂತಾ ಶಂಕಿಸಲಾಗಿದೆ.

    ಈ ಬಗ್ಗೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸ್ಫೋಟಕ ವಸ್ತು ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ. ಗಾಯಗೊಂಡ ಮಕ್ಕಳು ಚೇತರಿಸಿಕೊಂಡಿದ್ದಾರೆ.