Tag: ನಾಟಿ ಸ್ಟೈಲ್ ಪೆಪ್ಪರ್ ಚಿಕನ್

  • ನಾಟಿ ಸ್ಟೈಲ್ ಪೆಪ್ಪರ್ ಚಿಕನ್ ಮಾಡುವ ವಿಧಾನ

    ನಾಟಿ ಸ್ಟೈಲ್ ಪೆಪ್ಪರ್ ಚಿಕನ್ ಮಾಡುವ ವಿಧಾನ

    ಪೆಪ್ಪರ್ ಚಿಕನ್ ಪಾಕವಿಧಾನವು ಒಂದು ವಿಶೇಷ ರುಚಿಯನ್ನು ನೀಡುವ ಭಕ್ಷ್ಯವಾಗಿದೆ. ಈ ಖಾದ್ಯವನ್ನು ಒಮ್ಮೆ ಸವಿದರೆ ನಾಲಿಗೆ ಮತ್ತೆ ಮತ್ತೆ ಚಪ್ಪರಿಸಲು ಬಯಸುವುದು. ಸರಳವಾಗಿ ಕೆಲವೆ ಸಾಮಗ್ರಿಗಳನ್ನು ಉಪಯೋಗಿಸಿಕೊಂಡು ಸರಳವಾಗಿ ಮತ್ತು ರುಚಿಕರವಾದ ನಾಟಿ ಸ್ಟೈಲ್ ಪೆಪ್ಪರ್ ಚಿಕನ್ ನೀವು ಮನೆಯಲ್ಲಿ ಒಮ್ಮೆ ತಯಾರಿಸಲು ಮಾಡುವ ವಿಧಾನ ಇಲ್ಲಿದೆ… ಇದನ್ನೂ ಓದಿ: ಶನಿವಾರ ಮಾಡಿ ವೆಜ್ ಬಿರಿಯಾನಿ

    ಬೇಕಾಗುವ ಸಾಮಗ್ರಿಗಳು:
    * ಚಿಕನ್ – 1 ಕೇಜಿ
    * ಅಡುಗೆ ಎಣ್ಣೆ – 4 ಟೀ ಸ್ಪೂನ್
    * ಕರಿಮೆಣಸು – 5 ಟೀ ಸ್ಪೂನ್
    * ಈರುಳ್ಳಿ – 2
    * ಟೊಮೆಟೊ – 2
    * ಹಸಿಮೆಣಸು – 3
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್

    ಮಾಡುವ ವಿಧಾನ:

    * ಒಂದು ಪಾತ್ರೆಗೆ ಎಣ್ಣೆಯನ್ನು ಹಾಕಿ, ಬಿಸಿಯಾದ ಎಣ್ಣೆಗೆ ಈರುಳ್ಳಿಯನ್ನು ಸೇರಿಸಿ, ಹುರಿಯಿರಿ. ಈರುಳ್ಳಿ ಹೊಂಬಣ್ಣಕ್ಕೆ ಬಂದ ನಂತರ ಹೆಚ್ಚಿಕೊಂಡ ಟೊಮ್ಯಾಟೋ ಸೇರಿಸಿ ಚೆನ್ನಾಗಿ ಬೇಯಿಸಬೇಕು.

    * ನಂತರ ಈ ಮೊದಲೇ ಚೆನ್ನಾಗಿ ತೊಳೆದು ಇಟ್ಟಿರುವ ಚಿಕನ್‍ಅನ್ನು ಇದೇ ಪಾತ್ರೆಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಬೇಕು.

    * ಅದೇ ಬಾಣಲೆಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸಿನಕಾಯಿ, ಕಾಳು ಮೆಣಸಿನ ಪುಡಿ ಮತ್ತು ಅರಿಶಿಣ ಎಲ್ಲಾ ಪದಾರ್ಥಗಳು ಚೆನ್ನಾಗಿ ಮಿಶ್ರಣ ಮಾಡಿ 4-5 ನಿಮಿಷಗಳ ಕಾಲ ಬೇಯಿಸಿ.

    * ಕೋಳಿಯ ಮಾಂಸ ಚೆನ್ನಾಗಿ ಬೇಂದು ರಸವು ಬಹುತೇಕವಾಗಿ ಆವಿಯಾಗುತ್ತದೆ. ನೀರು ಆರಿ, ಚೆನ್ನಾಗಿ ಚಿಕನ್ ಬೇಯಿಸಿದರೆ ಪೆಪ್ಪರ್ ಚಿಕನ್ ಸವಿಯಲು ಸಿದ್ಧವಾಗುತ್ತದೆ.