Tag: ನಾಟಿ ಕೋಳಿ

  • ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಾಟಿ ಕೋಳಿ ಕಳ್ಳರು!

    ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಾಟಿ ಕೋಳಿ ಕಳ್ಳರು!

    ತುಮಕೂರು: ನಾಟಿ ಕೋಳಿ ಕಳ್ಳರ (Chicken Theft) ಗುಂಪೊಂದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಪಾವಗಡ ತಾಲೂಕಿನ ಪಿ.ರೊಪ್ಪ ಗ್ರಾಮದಲ್ಲಿ ನಡೆದಿದೆ.

    ರೊಪ್ಪ ಗ್ರಾಮದ ಸುಧಾ ಎಂಬವರ ಮನೆಯಿಂದ ಗ್ಯಾಂಗ್ ನಾಟಿ ಕೋಳಿ ಕಳ್ಳತನ ಮಾಡುತ್ತಿತ್ತು. ಭಾನುವಾರ ಮಧ್ಯರಾತ್ರಿ 5 ಜನರ ಗ್ಯಾಂಗ್ ಕೋಳಿಯನ್ನು ಕದ್ದೊಯ್ದಿತ್ತು. 40 ಕೋಳಿಯಲ್ಲಿ ಸುಮಾರು 18 ಕೋಳಿಗಳನ್ನು ಕಳ್ಳರು ಎಗರಿಸಿದ್ದರು.

    ಕೋಳಿಯ ಕೂಗು ಕೇಳಿ ಮಾಲಕಿ ಸುಧಾ ಎಚ್ಚರಗೊಂಡಿದ್ದಾರೆ. ಕೂಡಲೇ ಸುಧಾ ಕೋಳಿ ಗೂಡಿನತ್ತ ಬಂದಾಗ ನಾಲ್ವರು ಓಡಿಹೋಗಿದ್ದಾರೆ. ಅದರಲ್ಲಿ ಓರ್ವನನ್ನು ಹಿಡಿದು ಕೂಡಿ ಹಾಕಿದ್ದು, ಇನ್ನೋರ್ವ ಬೆಳಗ್ಗೆ ಶೌಚಕ್ಕೆ ಹೋಗಿ ಬರುತ್ತೇನೆನೆಂದು ಯಾಮಾರಿಸಿ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: 20 ವರ್ಷದ ವಿದ್ಯಾರ್ಥಿ ಮ್ಯಾರಥಾನ್‌ನಲ್ಲಿ ಓಡಿದ ಬಳಿಕ ಹೃದಯಾಘಾತದಿಂದ ಸಾವು

    ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಪಾವಗಡ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಟಿ ಕೋಳಿ ಊಟ ಮಾಡಿ ಅಂಬಾರಿಗೆ ಪುಷ್ಪಾರ್ಚನೆ: ಸಿದ್ದು ವಿರುದ್ಧ ಪ್ರತಾಪ್‌ ಸಿಂಹ ಕಿಡಿ

    ನಾಟಿ ಕೋಳಿ ಊಟ ಮಾಡಿ ಅಂಬಾರಿಗೆ ಪುಷ್ಪಾರ್ಚನೆ: ಸಿದ್ದು ವಿರುದ್ಧ ಪ್ರತಾಪ್‌ ಸಿಂಹ ಕಿಡಿ

    ಮೈಸೂರು: ನಾಟಿ ಕೋಳಿ ಊಟ ಮಾಡಿಯೇ ಸಿದ್ದರಾಮಯ್ಯ ದಸರಾ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ್ದರು. ಈ ಕಾರಣಕ್ಕೆ ಅವರಿಗೆ ಮತ್ತೇ ಅಂಬಾರಿಗೆ ಪುಷ್ಟಾರ್ಚನೆ ಮಾಡುವ ಅವಕಾಶ ಸಿಗಲಿಲ್ಲ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಸ್ಫೋಟಕ ಆರೋಪ ಮಾಡಿದ್ದಾರೆ.

    ಮಾಂಸ ತಿಂದು ದೇವಸ್ಥಾನಕ್ಕೆ ಹೋದರೆ ತಪ್ಪೇನು ಎಂಬ ವಿಪಕ್ಷ ನಾಯಕ‌ ಸಿದ್ದರಾಮಯ್ಯ ಹೇಳಿಕೆ ಹಿನ್ನೆಲೆಯಲ್ಲಿ ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, 2017 ರ ದಸರಾ ಜಂಬೂ ಸವಾರಿ ದಿನ ಲಲಿತ್ ಮಹಲ್ ಪ್ಯಾಲೇಸ್‌ನಲ್ಲಿ ಸಿದ್ದರಾಮಯ್ಯ ನಾಟಿ ಕೋಳಿ ತಿಂದು ನಂತರ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ್ದರು. ಇದಕ್ಕೆ ನಾನೇ ಸಾಕ್ಷಿ ಎಂದು ತಿಳಿಸಿದ್ದಾರೆ.

    ಸಿದ್ದರಾಮಯ್ಯ ಅವರೇ ನಿಮ್ಮ ಶ್ರೀಮತಿಯವರ ಬಳಿ ಮಾಂಸ ತಿಂದು ಚಾಮುಂಡಿ ತಾಯಿ ದರ್ಶನಕ್ಕೆ ಅವರು ಹೋಗುತ್ತಾರಾ ಅಂತಾ ಕೇಳಿ.  ನಿಮ್ಮ ಮಾತಿಗೆ ನಿಮ್ಮ ಶ್ರೀಮತಿ ಅವರ ಸಹಮತ ಇದ್ಯಾ ಅಂತಾ ಕೇಳಿ ಎಂದರು.

    ಸಿದ್ದರಾಮಯ್ಯ ಅವರು ಸಿದ್ದರಾಮನ ಹುಂಡಿಯಲ್ಲಿ ಸಿದ್ದರಾಮೇಶ್ವರ ಜಾತ್ರೆಯಲ್ಲಿ ಸಿಹಿ ಊಟ ಮಾಡಿಸಿದ್ದು ಯಾಕೆ? ಮಾಂಸದ ಊಟ ಯಾಕೆ ಮಾಡಿಸಲಿಲ್ಲ ಎಂದು ಪ್ರಶ್ನಿಸಿದ ಸಂಸದರು, ಜಮೀರ್ ಖಾನ್ ಗೆ ನೀವು ಹಂದಿ ಮಾಂಸ ತಿನ್ನಬಾರದು ಅಂತಾ ದೇವರು ಹೇಳಿಲ್ಲ ಅಂತಾ ಹೇಳಿ ನೋಡೋಣಾ ಎಂದು ಸವಾಲು ಎಸೆದರು.

    ಸಿದ್ದರಾಮಯ್ಯ ಅವರು ಅವತ್ತು ವೀರಶೈವ – ಲಿಂಗಾಯತ ಧರ್ಮ ಒಡೆದರು. ಇವತ್ತು ಮಾಂಸ ತಿಂದು ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಬಸವ ಅನುಯಾಯಿಗಳ ನಂಬಿಕೆ ಒಡೆದಿದ್ದಾರೆ ಎಂದು ಹರಿಹಾಯ್ದರು.

    ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಸಂಪತ್ ಯಾವ ಪಕ್ಷದವನೂ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ದೇವೇಗೌಡರ ಜೊತೆ ಸಿದ್ದರಾಮಯ್ಯ ಇದ್ದ ಸಾವಿರಾರು ಫೋಟೋ ಇವೆ. ಹಳೆ ಫೋಟೋ ತೋರಿಸಿ ನೀವು ದೇವೇಗೌಡರ ಜೊತೆಗಾರರು ಎಂದು ಈಗ ಹೇಳೋಕೆ ಆಗುತ್ತಾ? ಸಂಪತ್ ವಿಚಾರದಲ್ಲೂ ಅದೇ ಆಗಿದೆ. ಸಂಪತ್ ಕಾಂಗ್ರೆಸ್ ಕಾರ್ಯಕರ್ತ ಎಂದು ತಿರುಗೇಟು ನೀಡಿದರು.

    40 ವರ್ಷದ ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ 27 ವರ್ಷದ ಕಾಂಗ್ರೆಸ್ ಅನ್ನು ಬೈದಿದ್ದರು. ಈಗ 15 ವರ್ಷದಿಂದ ಕಾಂಗ್ರೆಸ್ ಹೊಗಳುತ್ತಿದ್ದಾರೆ. ನಾರಿನಂತೆ ಸೀರೆ ಎಂಬಂತೆ ಸಿದ್ದರಾಮಯ್ಯ ಥರ ಅವರ ಮಗ ಯತೀಂದ್ರ ಅಷ್ಟೇ. ಮೊಟ್ಟೆ ಎಸೆದಿದ್ದಕ್ಕೆ ನಿಮಗೆ ಇಷ್ಟು ಕೋಪ ಬಂದಿದೆಯಲ್ವಾ? 27 ವರ್ಷ ಜೈಲಲ್ಲಿ ಇದ್ದ ದೇಶಪ್ರೇಮಿ ಸಾವರ್ಕರ್ ಬಗ್ಗೆ ಮಾತನಾಡಿದರೆ ನಮಗೆ ಕೋಪ ಬರಲ್ವಾ ಎಂದು ಕಿಡಿಕಾರಿದರು.

    Live Tv
    [brid partner=56869869 player=32851 video=960834 autoplay=true]

  • ನಾಟಿ ಕೋಳಿ ಎಂದು ಹೈಬ್ರೀಡ್ ಕೋಳಿ ಮಾರಾಟ – ಮಂಡ್ಯ ರೈತರು ಕಂಗಾಲು

    ನಾಟಿ ಕೋಳಿ ಎಂದು ಹೈಬ್ರೀಡ್ ಕೋಳಿ ಮಾರಾಟ – ಮಂಡ್ಯ ರೈತರು ಕಂಗಾಲು

    – ಮಂಡ್ಯದಲ್ಲಿ ತಮಿಳುನಾಡು ಕೋಳಿಗಳ ಕಾರುಬಾರು
    – 50 ದಿನಕ್ಕೆ ಬೆಳೆಯುತ್ತೆ ತಮಿಳುನಾಡು ಕೋಳಿ

    ಮಂಡ್ಯ: ಹೈಬ್ರೀಡ್ ಕೋಳಿಯನ್ನು ನಾಟಿ ಕೋಳಿ ಎಂದು ಬಿಂಬಿಸಿ ಮಾರಾಟ ಮಾಡುತ್ತಿರುವ ಪ್ರಕರಣ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.

    ಜಿಲ್ಲೆಯಾದ್ಯಾಂತ ಹೈಬ್ರೀಡ್ ಕೋಳಿಯನ್ನು ನಾಟಿ ಕೋಳಿ ಎಂದು ತಮಿಳುನಾಡಿವರು ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಗ್ರಾಹಕರಿಗೆ ಮಾತ್ರವಲ್ಲದೇ ಸ್ಥಳೀಯ ನಾಟಿ ಕೋಳಿ ಸಾಕಣಿಕೆಯ ರೈತರಿಗೂ ಸಹ ಅನ್ಯಾಯವಾಗುತ್ತಿದೆ. ಜಿಲ್ಲೆಯಾದ್ಯಾಂತ ತಮಿಳುನಾಡು ಕೋಳಿ ಜಾಲ ಹೆಚ್ಚಾಗಿದ್ದು, ನಾಟಿ ಕೋಳಿ ಸಾಕಾಣಿಕೆಯ ರೈತರು ಕಂಗಾಲಾಗಿದ್ದಾರೆ. ಈ ಕೋಳಿ ಸೇವೆಯಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗುವ ಭೀತಿ ಈಗ ಜನರಲ್ಲಿ ಎದುರಾಗಿದೆ.

    ಮಂಡ್ಯ ಜಿಲ್ಲೆಯ ರೈತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬನ್ನು ಬೆಳೆಯುತ್ತಾರೆ ಎಂದು ಎಲ್ಲರು ತಿಳಿದಿದ್ದಾರೆ. ಆದರೆ ಇಲ್ಲಿನ ರೈತರು ಉಪಕಸುಬಾಗಿ ನಾಟಿ ಕೋಳಿಯನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾಕಾಣಿಕೆ ಮಾಡುತ್ತಾರೆ. ಇದೀಗ ಇಂತಹ ನಾಟಿಕೋಳಿ ಸಾಕಾಣಿಕೆಯ ರೈತರಿಗೆ ತಮಿಳುನಾಡಿನವರು ಮುಳ್ಳಾಗಿ ನಿಂತಿದ್ದಾರೆ. ತಮಿಳುನಾಡಿನಿಂದ ಕೆಲವರು ಜೀಪ್ ಹಾಗೂ ಆಪೇ ಆಟೋಗಳಲ್ಲಿ ಹೈಬ್ರಿಡ್ ಕೋಳಿಗಳನ್ನು ಮಂಡ್ಯ ಜಿಲ್ಲೆಯ ಸುತ್ತ ಮುತ್ತಲಿನ ಪ್ರದೇಶಗಳಿಗೆ ತಂದು ನಾಟಿ ಕೋಳಿ ಎಂದು ಒಂದು ಕೋಳಿಯನ್ನು 90 ರಿಂದ 100 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಈ ಕೋಳಿಗಳು ನೋಡಲು ನಾಟಿ ಕೋಳಿಗಳ ರೀತಿ ಕಾಣುವುದರಿಂದ ಜನರು ಇವು ನಾಟಿ ಕೋಳಿ ಇರಬಹುದು ಎಂದು ಮಾರುಹೋಗಿ ಖರೀದಿ ಮಾಡಲು ಮುಗಿ ಬಿಳುತ್ತಿದ್ದಾರೆ.

    ಒಂದು ನಾಟಿ ಕೋಳಿ ಬೆಳವಣಿಗೆಯಾಗಬೇಕೆಂದರೆ 100 ರಿಂದ 120 ದಿನಗಳಿಗೂ ಅಧಿಕ ದಿನಗಳು ಬೇಕು. ಆದರೆ ತಮಿಳುನಾಡಿನಿಂದ ಬರುತ್ತಿರುವ ಕೋಳಿಗಳು ಕೇವಲ 50 ದಿನಗಳಲ್ಲಿ ಬೆಳವಣಿಗೆಯಾಗಿವೆ. ಈ ಕೋಳಿಗಳು ಸಂಪೂರ್ಣವಾಗಿ ಔಷಧಿಯಿಂದಲೇ ಬೆಳವಣಿಗೆಯಾಗುವುದರಿಂದ ಆರೋಗ್ಯದಲ್ಲಿ ಏರು ಪೇರಾಗುವುದರ ಜೊತೆಗೆ ಇತರೆ ಕಾಯಿಲೆಗಳಿಗೆ ತುತ್ತಾಗುವ ಸನ್ನಿವೇಶಗಳು ಸಹ ಎದುರಾಗುತ್ತವೆ. ಹೀಗಿರುವಾಗ ತಮಿಳುನಾಡಿನಿಂದ ಇಂತಹ ಕೋಳಿಗಳನ್ನು ತಂದು ಬೀದಿ ಬೀದಿಯಲ್ಲಿ ವ್ಯಾಪಾರ ಮಾಡುವುದರ ಜೊತೆಗೆ ರಿಟೈಲರ್ ವ್ಯಾಪಾರಿಗಳಿಗೆ ನೀಡಿ ಅವರಿಂದ ಹೆಚ್ಚಿನ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಜನರಿಗೆ ಹಾಗೂ ರೈತರಿಗೆ ಮೋಸ ಮಾಡಲಾಗುತ್ತಿದೆ. ಈ ಬಗ್ಗೆ ರೈತರು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಸಹ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ.

    ತಮಿಳುನಾಡಿನ ಕೋಳಿ ವ್ಯಾಪಾರಿಗಳು ನಾಟಿ ಕೋಳಿ ಎಂದು ಹೈಬ್ರಿಡ್ ಕೋಳಿಗಳನ್ನು ಮಾರಾಟ ಮಾಡುವ ಮೂಲಕ ಜನರಿಗೆ ಹಾಗೂ ರೈತರಿಗೆ ಅನ್ಯಾಯ ಮಾಡುತ್ತಾ ಬರುತ್ತಿದ್ದಾರೆ. ಇದರಿಂದ ಹೆಚ್ಚಿನ ತೊಂದರೆ ಆಗುವ ಮುಂಚೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ತಮಿಳುನಾಡಿನ ಈ ಹೈಬ್ರಿಡ್ ಕೋಳಿಗಳು ಕರ್ನಾಟಕ ಗಡಿಯನ್ನು ತಲುಪದ ಹಾಗೇ ನೋಡಿಕೊಳ್ಳಬೇಕು ಎಂದು ಜನರು ಮನವಿ ಮಾಡಿಕೊಂಡಿದ್ದಾರೆ.

  • ಕ್ರಿಕೆಟ್ ಟೂರ್ನಿಯಲ್ಲಿ ಗೆದ್ದ ತಂಡಕ್ಕೆ ಕುರಿ, ನಾಟಿ ಕೋಳಿ ಬಹುಮಾನ!

    ಕ್ರಿಕೆಟ್ ಟೂರ್ನಿಯಲ್ಲಿ ಗೆದ್ದ ತಂಡಕ್ಕೆ ಕುರಿ, ನಾಟಿ ಕೋಳಿ ಬಹುಮಾನ!

    ಚಾಮರಾಜನಗರ: ಕ್ರಿಕೆಟ್ ಟೂರ್ನ್‍ಮೆಂಟ್ ನಲ್ಲಿ ಗೆದ್ದಂತಹ ತಂಡಕ್ಕೆ ನಗದು ಬಹುಮಾನ ಹಾಗೂ ಪಾರಿತೋಷಕ ನೀಡೋದು ವಾಡಿಕೆ. ಆದ್ರೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಹನೂರಿನಲ್ಲಿ ಕ್ರಿಕೆಟ್ ಟೂರ್ನಿಯಲ್ಲಿ ಗೆದ್ದ ತಂಡಕ್ಕೆ ವಿಭಿನ್ನ ರೀತಿಯಲ್ಲಿ ಕುರಿ ಹಾಗೂ ನಾಟಿ ಕೋಳಿಗಳನ್ನು ಬಹುಮಾನವಾಗಿ ನೀಡಲಾಗಿದೆ.

    ಹನೂರಿನ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಎಂಸಿಪಿಎಲ್ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಗೆದ್ದ ಮೊದಲ ತಂಡಕ್ಕೆ ಎರಡು ಕುರಿಗಳು ಹಾಗೂ ಎರಡನೇ ತಂಡಕ್ಕೆ ನಾಟಿಕೋಳಿಗಳನ್ನು ನೀಡಲಾಗಿದೆ. ಇದಲ್ಲದೇ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದ ಆಟಗಾರನಿಗೆ ನಾಟಿಕೋಳಿ ಮೊಟ್ಟೆಗಳನ್ನು ನೀಡುವ ಮೂಲಕ ವಿಭಿನ್ನತೆ ಮೆರೆದಿದ್ದಾರೆ. ಬಾಲಕರು ಚಿಕ್ಕ ಚಿಕ್ಕ ಟೊಂಗೆಗಳನ್ನ ಹಿಡಿದುಕೊಂಡು ಚಿಯರ್ ಬಾಯ್ಸ್‍ನಂತೆ ಕುಣಿದಿದ್ದಾರೆ.

    ಇತ್ತೀಚಿನ ಕ್ರಿಕೆಟ್ ಟೂರ್ನಿಗಳು ಕೇವಲ ಹಣ ಹಾಗೂ ಪಾರಿತೋಷಕಕ್ಕಾಗಿ ನಡೆಯುತ್ತವೆ. ಇದನ್ನು ಬದಲಿಸಿ ಗ್ರಾಮೀಣ ಪರಂಪರೆಯನ್ನು ಬೆಳಸುವ ಉದ್ದೇಶದಿಂದ ಈ ರೀತಿಯ ಒಂದು ಟೂರ್ನಿಯನ್ನು ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.