Tag: ನಾಟಿ ಔಷಧ

  • ಮಂತ್ರವಾದಿಯ ನಾಟಿ ಔಷಧಿಗೆ ಬಾಲಕ ಬಲಿ? – ತಂದೆ, ಮಗಳು ಆಸ್ಪತ್ರೆಗೆ ದಾಖಲು

    ಮಂತ್ರವಾದಿಯ ನಾಟಿ ಔಷಧಿಗೆ ಬಾಲಕ ಬಲಿ? – ತಂದೆ, ಮಗಳು ಆಸ್ಪತ್ರೆಗೆ ದಾಖಲು

    ಚಿಕ್ಕಬಳ್ಳಾಪುರ: ಮಂತ್ರವಾದಿಯೊಬ್ಬ ಕೊಟ್ಟ ನಾಟಿ ಔಷಧಿ ಸೇವಿಸಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದ (Chikkaballapura) ನಲ್ಲಗುಟ್ಟಪಾಳ್ಯ ಗ್ರಾಮದಲ್ಲಿ ನಡೆದಿದೆ. ಅಲ್ಲದೇ ಔಷಧಿ ಸೇವಿಸಿದ ಬಾಲಕನ ತಂದೆ ಹಾಗೂ ಸಹೋದರಿಯನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ.

    ಗ್ರಾಮದ ಶಶಿಕಲಾ ಹಾಗೂ ಶ್ರೀನಿವಾಸ್ ದಂಪತಿ ಮಗ ವೇದೇಶ್ (7) ಮೃತ ಬಾಲಕ. ಮಗು ನಾಟಿ ಔಷಧಿ ಕಹಿ ಎಂದು ಕುಡಿಯಲು ಹಿಂದೇಟು ಹಾಕಿದ್ದಾಗ ತಂದೆ ತಾನು ಸ್ವಲ್ಪ ಕುಡಿದು ಮಗುವಿಗೆ ನಂತರ ಕುಡಿಸಿದ್ದಾನೆ. ಇದರಿಂದ ತಂದೆ ಶ್ರೀನಿವಾಸ್ ಸಹ ಅಸ್ವಸ್ಥನಾಗಿದ್ದಾನೆ. ಅಲ್ಲದೇ ಆತನ ಇನ್ನೋರ್ವ ಪುತ್ರಿ ವೈಶಾಲಿಗೂ ಸಹ ದಪ್ಪ ಆಗಲು ಬೇರೊಂದು ಔಷಧಿಯನ್ನು ನೀಡಲಾಗಿದೆ. ಇದರಿಂದ ಆಕೆ ಅಸ್ವಸ್ಥಳಾಗಿದ್ದಾಳೆ. ಅಸ್ವಸ್ಥರಾಗಿರುವ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಹಿರಿಯ ಪತ್ರಕರ್ತ ಕೆ.ಎಸ್ ಸಚ್ಚಿದಾನಂದ ಮೂರ್ತಿ ನಿಧನ- ಸಿಎಂ ಸಂತಾಪ

    ಮೃತ ಬಾಲಕ ವೇದೇಶ್‍ಗೆ ದೇಹದ ಮೇಲೆ ಗುಳ್ಳೆಗಳಾಗಿದ್ದವು. ಇದಕ್ಕೆ ವ್ಯಕ್ತಿಯೊಬ್ಬ ಸಲಹೆ ನೀಡಿದ್ದು, ಭೋಯಿನಹಳ್ಳಿ ಗ್ರಾಮದ ಸತ್ಯನಾರಾಯಣ ಎಂಬವರ ಬಳಿ ಔಷಧಿ ಪಡೆದಿದ್ದರು. ಔಷಧಿ ಕುಡಿದ 15 ನಿಮಿಷದಲ್ಲಿ ಬಾಲಕ ತೀವ್ರ ಅಸ್ವಸ್ಥನಾಗಿದ್ದಾನೆ. ಒದ್ದಾಡಿ ಮೂರ್ಛೆ ಹೋಗಿದ್ದಾನೆ. ಬಳಿಕ ಔಷಧ ನೀಡಿದವನಿಗೆ ಕರೆ ಮಾಡಿದ್ದಾರೆ. ಆತ ಆಸ್ಪತ್ರೆಗೆ ಹೋಗುವುದು ಬೇಡ, ಸರಿಯಾಗುತ್ತದೆ ಎಂದು ಹೇಳಿದ್ದಾನೆ. ಆದರೆ ಬಾಲಕನ ಸ್ಥಿತಿ ತೀರಾ ಹದಗೆಟ್ಟಾಗ ಆಸ್ಪತ್ರೆಗೆ ಕರೆದೊಯ್ಯುವ ಸಿದ್ಧತೆ ಮಾಡಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಬಗ್ಗೆ ವೈದ್ಯರು ಪರೀಕ್ಷೆ ನಡೆಸುತ್ತಿದ್ದು, ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಇದನ್ನೂ ಓದಿ: ಮುರುಡೇಶ್ವರದ ಕಡಲಲ್ಲಿ ಅಲೆಗಳಿಗೆ ಸಿಲುಕಿದ್ದ ಮೂವರ ರಕ್ಷಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಾವನ್ನು ಕಚ್ಚಿ ಸಾಯಿಸಿದ ವ್ಯಕ್ತಿ ಪ್ರಾಣಾಪಾಯದಿಂದ ಪಾರು

    ಹಾವನ್ನು ಕಚ್ಚಿ ಸಾಯಿಸಿದ ವ್ಯಕ್ತಿ ಪ್ರಾಣಾಪಾಯದಿಂದ ಪಾರು

    ಭುವನೇಶ್ವರ: ತನಗೆ ಕಡಿದ ಹಾವನ್ನು ವ್ಯಕ್ತಿ ಸಿಟ್ಟಿನಿಂದ ಹಾವನ್ನು ಹಿಡಿದು ಕಚ್ಚಿ ಕೊಂದಿರುವ ಘಟನೆ ಒಡಿಶಾದ ಜೈಪುರ ಜಿಲ್ಲೆಯಲ್ಲಿ ನಡೆದಿದೆ.

    ಆದಿವಾಸಿ ವ್ಯಕ್ತಿ ಕಿಶೋರ್ ಬಾದ್ರಾ ವಿಷಕಾರಿ ಹಾವನ್ನು ಬಾಯಿಯಿಂದಲೇ ಕಚ್ಚಿ ಸಾಯಿಸಿದ್ದಾನೆ. ಗಂಭರೀಪಟಿಯಾ ಹಳ್ಳಿಯ ಸಲಿಜಂಗಾ ಪಂಚಾಯತಿ ವ್ಯಾಪ್ತಿಯ ದಂಗಡಿ ಎಂಬಲ್ಲಿ ಘಟನೆ ನಡೆದಿದ್ದು, ಹೊಲದಲ್ಲಿ ಕೆಲಸ ಮಾಡಿ ಬರುತ್ತಿದ್ದಾಗ ಹಾವು ಕಡಿಯಿತೆಂದು ಈ ವ್ಯಕ್ತಿ ಅದನ್ನು ಹಿಡಿದು ಸೇಡು ತೀರಿಸಿಕೊಂಡಿದ್ದಾನೆ. ಕಡಿದ ಹಾವು ಅತ್ಯಂತ ವಿಷಕಾರಿಯಾಗಿದ್ದು, ಈತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ಹಾವನ್ನು ಕೊಂದಿದ್ದು ಹೇಗೆ ಎನ್ನುವ ಬಗ್ಗೆ ಸ್ವತಃ ಕಿಶೋರ್ ಬಾದ್ರಾ ವಿವರಣೆ ನೀಡಿದ್ದಾನೆ. ನಾನು ಹೊಲದಿಂದ ಕೆಲಸ ಮುಗಿಸಿಕೊಂಡು ಬರುತ್ತಿದ್ದ ವೇಳೆ ಕಾಲಿನ ಮೇಲೆ ಏನೋ ಹರಿದಾಡಿ ಕಡಿದ ಅನುಭವ ಆಯಿತು. ಆಗ ಕತ್ತಲಾಗಿತ್ತಾದ್ದರಿಂದ ಸೂಕ್ಷ್ಮವಾಗಿ ಗಮನಿಸಿದೆ. ತಕ್ಷಣ ಮೊಬೈಲ್ ಬೆಳಕಿನ ಸಹಾಯದಲ್ಲಿ ನೋಡಿದಾಗ ಅದೊಂದು ವಿಷಪೂರಿತ ಹಾವು ಎನ್ನುವುದು ಗಮನಕ್ಕೆ ಬಂತು ಎಂದಿದ್ದಾನೆ. ಇದನ್ನೂ ಓದಿ: 2ಎ ಮೀಸಲಾತಿ ಹೋರಾಟ ಮುಂದುವರಿಯುತ್ತದೆ: ಯತ್ನಾಳ್

    ವಿಷಕಾರಿ ಹಾವು ಎಂದು ಗೊತ್ತಾದ ತಕ್ಷಣವೇ ಅದನ್ನು ಕೈಯಲ್ಲಿ ಹಿಡಿದುಕೊಂಡು ಮನಸೋ ಇಚ್ಛೆ ಕಡಿಯಲಾರಂಭಿಸಿದೆ. ಅದರ ಮೇಲೆ ಸೇಡು ತೀರಿಸಿಕೊಳ್ಳಲೆಂದು ಹಾಗೆ ಮಾಡಿದೆ. ಕೊನೆಗೆ ಅದು ಸತ್ತು ಹೋಯಿತು. ಬಳಿಕ ಸತ್ತ ಹಾವನ್ನು ಕೈಯಲ್ಲಿ ಹಿಡಿದುಕೊಂಡೇ ಮನೆಗೆ ಬಂದು ಹೆಂಡತಿಗೆ ನಡೆದಿರುವ ಘಟನೆಯನ್ನು ಹೇಳಿದೆ ಎಂದಿದ್ದಾನೆ. ಇದನ್ನೂ ಓದಿ: ಕನ್ನಡಿಗರು ಎಂಬುದನ್ನು ಸಿ.ಟಿ.ರವಿ ಮರೆತು ಭಾರತೀಯರಾಗಿದ್ದಾರೆ: ಹೆಚ್‍ಡಿಕೆ

    ಸುತ್ತಮುತ್ತಲಿನವರು ಕೆಲವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದಾರೆ. ಆದರೆ ಕಿಶೋರ್ ಬಾದ್ರಾ ಮಾತ್ರ ಅವರ ಮಾತಿಗೆ ಕಿವಿಗಡದೇ ನಾಟಿ ಔಷಧಿ ನೀಡುವವರ ಬಳಿ ಹೋಗಿದ್ದಾನೆ. ಅದೃಷ್ಟವಶಾತ್ ಹಾವು ಕಡಿದಾಗಲೂ, ಹಾವಿಗೆ ಈತ ತಿರುಗಿ ಕಡಿದಾಗಲೂ ವಿಷದ ಪ್ರಮಾಣ ದೇಹಕ್ಕೆ ಸೇರಿಲ್ಲವಾದ್ದರಿಂದ ಸಾವಿನ ದವಡೆಯಿಂದ ಆತ ಪಾರಾಗಿದ್ದಾನೆ.

  • ಕೊರೊನಾ ವೈರಸ್ ಎಫೆಕ್ಟ್- ನಾಟಿ ಔಷಧ ತಾತ್ಕಾಲಿಕ ಸ್ಥಗಿತ

    ಕೊರೊನಾ ವೈರಸ್ ಎಫೆಕ್ಟ್- ನಾಟಿ ಔಷಧ ತಾತ್ಕಾಲಿಕ ಸ್ಥಗಿತ

    – ರಸ್ತೆ ಸಂಚಾರ ಬಂದ್ ಮಾಡಿದ ಗ್ರಾಮಸ್ಥರು
    – ಔಷಧಿ ಪಡೆಯಲು ಗ್ರಾಮಕ್ಕೆ ಬರುತ್ತಿರುವ ಜನರು

    ಶಿವಮೊಗ್ಗ: ಕೊರೊನಾ ಎಫೆಕ್ಟ್ ನಾಟಿ ಔಷಧದ ಮೇಲೂ ಆಗಿದ್ದು, ಜಿಲ್ಲೆಯ ಹೊಸನಗರ ತಾಲೂಕಿನ ನರಸೀಪುರದಲ್ಲಿ ನಾಟಿ ವೈದ್ಯರು ವಿತರಿಸುತ್ತಿದ್ದ ಔಷಧಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.

    ಇಲ್ಲಿ ಕ್ಯಾನ್ಸರ್, ಕಿಡ್ನಿ, ಚರ್ಮರೋಗ ಸೇರಿದಂತೆ ಇತರೆ ಕಾಯಿಲೆಗಳಿಗೆ ಕಳೆದ ಹಲವು ವರ್ಷಗಳಿಂದ ಔಷಧಿ ವಿತರಿಸಲಾಗುತ್ತಿದೆ. ನಾಟಿ ಔಷಧಿ ಪಡೆಯಲು ರಾಜ್ಯದ ವಿವಿಧ ಮೂಲೆಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಹೊರ ರಾಜ್ಯಗಳ ಜನ ಸಹ ಔಷಧಿಗಾಗಿ ಇಲ್ಲಿಗೆ ಆಗಮಿಸುತ್ತಾರೆ.

    ಆದರೆ ಕರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಇದೀಗ ಔಷಧಿ ವಿತರಣೆ ಸ್ಥಗಿತಗೊಳಿಸಲಾಗಿದೆ. ಹೀಗಿದ್ದರೂ ಸಹ ಔಷಧಿ ಪಡೆಯಲು ವಿವಿಧ ಕಡೆಗಳಿಂದ ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಈಗಾಗಿ ಗ್ರಾಮಸ್ಥರು ಗ್ರಾಮಗಳಿಗೆ ಬರುವ ಜನರಿಗೆ ರಸ್ತೆಗೆ ಅಡ್ಡ ಹಾಕಿ ತಡೆಯೊಡ್ಡುತ್ತಿದ್ದಾರೆ.