Tag: ನಾಟಕ

  • ಪಾತ್ರ ಮಾಡುತ್ತಾ ವೇದಿಕೆಯ ಮೇಲೆಯೇ ಕುಸಿದು ಬಿದ್ದು ನಟ ಸಾವು

    ಪಾತ್ರ ಮಾಡುತ್ತಾ ವೇದಿಕೆಯ ಮೇಲೆಯೇ ಕುಸಿದು ಬಿದ್ದು ನಟ ಸಾವು

    ಸಾವು ಯಾರಿಗೆ ಹೇಗೆ ಬರುತ್ತದೋ ಹೇಳೋರು ಯಾರು? ನಟನೊಬ್ಬ ನಟಿಸುತ್ತಾ ವೇದಿಕೆಯ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ (Passed away) ಘಟನೆ ಯಲಹಂಕದ ಸಾತನೂರು ಗ್ರಾಮದಲ್ಲಿ ನಡೆದಿದೆ. 72ರ ವಯಸ್ಸಿನ ಎನ್.ಮುನಿಕೆಂಪಣ್ಣ (N. Munikempanna) ನಿನ್ನೆ ರಾತ್ರಿ ಶಕುನಿ (Shakuni) ವೇಷದಲ್ಲಿ ವೇದಿಕೆಗೆ ಬಂದರು. ಪಾತ್ರ ನಿರ್ವಹಿಸುತ್ತಲೇ ವೇದಿಕೆಯ ಮೇಲೆ ಕುಸಿದು ಬಿದ್ದರು.

    ಮಧ್ಯರಾತ್ರಿಯವರೆಗೂ ಅದ್ಭುತವಾಗಿಯೇ ನಾಟಕ (Drama) ಪ್ರದರ್ಶನ ಮಾಡಿದ ಮುನಿಕೆಂಪಣ್ಣ, ಮಧ್ಯರಾತ್ರಿ 1 ಗಂಟೆಯ ವೇಳೆಗೆ ನಾಟಕ ಆಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇವರು ನಿವೃತ್ತ ಉಪನ್ಯಾಸಕರೂ ಆಗಿದ್ದಾರೆ. ದೇವನಹಳ್ಳಿಯಲ್ಲಿ ನಡೆದ 28 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

     

    ಮುನಿಕೆಂಪಣ್ಣ ಅವರಿಗೆ ಹೃದಯಾಘಾತವಾಗಿದ್ದು, ಅಪಾರ ಅಭಿಮಾನಿಗಳನ್ನು ಅಗಲಿದಿದ್ದಾರೆ. ಹುಟ್ಟೂರು ಅರದೇಶನಹಳ್ಳಿಯಲ್ಲಿ ಅಂತ್ಯ ಸಂಸ್ಕಾರದಕ್ಕೆ ಸಿದ್ದತೆ ಮಾಡಲಾಗಿದೆ.

  • RRR ಕಥೆಯನ್ನು ಜಪಾನ್ ಸಂಗೀತ ನಾಟಕಕ್ಕೆ ಅಳವಡಿಕೆ

    RRR ಕಥೆಯನ್ನು ಜಪಾನ್ ಸಂಗೀತ ನಾಟಕಕ್ಕೆ ಅಳವಡಿಕೆ

    ಪಾನ್ (Japan) ನಲ್ಲಿರುವ ಹೆಸರಾಂತ ನಾಟಕ ತಂಡ ‘ತಕರಾಜುಕಾ’ (Takarajuka) ಹೊಸ ಪ್ರಯೋಗಕ್ಕೆ ಸಾಕ್ಷಿಯಾಗಿದೆ. 110 ವರ್ಷಗಳ ಹಳೆಯದಾದ ಈ ನಾಟಕ ತಂಡವು ಸೂಪರ್ ಹಿಟ್ ಆರ್.ಆರ್.ಆರ್ ಸಿನಿಮಾದ ಕಥೆಯನ್ನು ಸಂಗೀತ ನಾಟಕಕ್ಕೆ ಅಳವಡಿಸಿದೆ. ಜೊತೆಗೆ ಈ ಸಿನಿಮಾದ ನಿರ್ದೇಶಕ ರಾಜಮೌಳಿ ಎದುರೇ ನಾಟಕವನ್ನು ಪ್ರದರ್ಶಿಸಿದೆ.

    ಸದ್ಯ ರಾಜಮೌಳಿ (Rajamouli) ಮತ್ತು ಟೀಮ್ ಜಪಾನ್ ನಲ್ಲಿ ಬೀಡು ಬಿಟ್ಟಿದೆ. ಇದೇ ಸಂದರ್ಭದಲ್ಲಿ ತಮ್ಮದೇ ಕಥೆಯಿಂದ ತಯಾರಾಗಿರುವ ನಾಟಕವನ್ನು ವೀಕ್ಷಿಸಿ ಸಂಭ್ರಮಿಸಿದ ರಾಜಮೌಳಿ ಮತ್ತು ತಂಡ. ನಾಟಕದ ಕಲಾವಿದರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ ನಿರ್ದೇಶಕರು. ನಾಟಕ ಕುರಿತು ಅವರು ಬರೆದಿದ್ದಾರೆ.

     

    ನಾಟಕ ತಂಡದವರ ಉತ್ಸಾಹ ಮತ್ತು ಅವರ ಪ್ರತಿಭೆ ಕಂಡು ಬೆರಗಾದೆ. ಅದ್ಭುತವಾಗಿ ನಾಟಕವನ್ನು ಹೆಣೆದಿದ್ದಾರೆ. ಇಂತಹ ತಂಡಕ್ಕೆ ನನ್ನ ಧನ್ಯವಾದಗಳು ಎಂದು ರಾಜಮೌಳಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

  • ಡಾ.ರಾಜ್ ಪ್ರಶಸ್ತಿ ಇನ್ನೂ ಕೊಟ್ಟಿಲ್ಲ, ಯಾರನ್ನು ಕೇಳೋದು? : ಹಿರಿಯ ನಟ ಬೇಸರ

    ಡಾ.ರಾಜ್ ಪ್ರಶಸ್ತಿ ಇನ್ನೂ ಕೊಟ್ಟಿಲ್ಲ, ಯಾರನ್ನು ಕೇಳೋದು? : ಹಿರಿಯ ನಟ ಬೇಸರ

    ನ್ನಡ ಸಿನಿಮಾ ರಂಗದ ಹಿರಿಯ ನಟ ಶ್ರೀನಿವಾಸ್ ಮೂರ್ತಿ (Srinivas Murthy) ಅವರಿಗೆ  ಕರ್ನಾಟಕ ಸರಕಾರವು 2018ರಲ್ಲಿ ಡಾ. ರಾಜ್ ಕುಮಾರ್ (Raj Kumar) ಪ್ರಶಸ್ತಿ ಘೋಷಣೆ ಆಗಿತ್ತು. ಪ್ರಶಸ್ತಿ (Award) ಘೋಷಣೆಯಾಗಿ ಐದು ವರ್ಷ ಕಳೆದರೂ, ಇವರಿಗೆ ಪ್ರಶಸ್ತಿ ಪ್ರದಾನವಾಗಿಲ್ಲ. ಈ ಕುರಿತು ಮಾತನಾಡಿರುವ ಶ್ರೀನಿವಾಸ್ ಮೂರ್ತಿ, ‘ಪ್ರಶಸ್ತಿಯನ್ನು ಇದುವರೆಗೂ ಕೊಟ್ಟಿಲ್ಲ. 2017ರ ಕಾರ್ಯಕ್ರಮ ಮಾಡಿದ್ದೇ ಕೊನೆ. ಆ ನಂತರದ ವರ್ಷಗಳ ಪ್ರಶಸ್ತಿಗಳ ಘೋಷಣೆ ಮಾಡಿದ್ದರೂ, ಇನ್ನೂ ಸಮಾರಂಭ ಮಾಡಿ ಪ್ರಶಸ್ತಿ ಕೊಟ್ಟಿಲ್ಲ. ಡಾ. ರಾಜ್ ಜೀವಮಾನದ ಸಾಧನೆ ಪ್ರಶಸ್ತಿ ಸಿಕ್ಕಿದೆ ಎಂದು ಖುಷಿಪಡಬೇಕು. ಆದರೆ, ಇದುವರೆಗೂ ಪ್ರಶಸ್ತಿ ಸಿಕ್ಕಿಲ್ಲ. ಯಾರನ್ನು ಕೇಳುವುದು?’ ಎಂದು ಪ್ರಶ್ನೆ ಮಾಡಿದ್ದಾರೆ.

    ಶ್ರೀನಿವಾಸಮೂರ್ತಿ ಅವರು ಬಣ್ಣ ಹಚ್ಚಿ 50 ವರ್ಷಗಳಾಗಿವೆ. ಇಂದು ಅವರು 75ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹುಟ್ಟು ಹಬ್ಬದ ಸಂದರ್ಭದಲ್ಲಿ ಇಂದು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ಸದಾರಮೆ ಕಳ್ಳ ಎಂಬ ನಾಟಕ ಆಡುತ್ತಿದ್ದಾರೆ. ಬರೀ ಇವತ್ತಷ್ಟೇ ಅಲ್ಲ, ನಾಳೆ ಸಂಜೆ ಅದೇ ಸ್ಥಳದಲ್ಲಿ ‘ತರಕಾರಿ ಚೆನ್ನಿ ಎಂಬ ಇನ್ನೊಂದು ನಾಟಕದಲ್ಲಿ ಅವರು ಬಣ್ಣ ಹಚ್ಚುತ್ತಿದ್ದಾರೆ.

    ‘ಹೇಮಾವತಿ ಚಿತ್ರದಲ್ಲಿ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುನ್ನ ಯೋಗಾನರಸಿಂಹ ಅವರ ನಾಟಕದ (Drama) ಕಂಪೆನಿಯಲ್ಲಿ ಪಾತ್ರ ಮಾಡುತ್ತಿದ್ದರು. ನಂತರ ಅವರದ್ದೇ ಆದ ಜಿಕೆಎಸ್ ಕಲಾನಿಕೇತನ ಟ್ರಸ್ಟ್ ಎಂಬ ಸಂಸ್ಥೆ ಸ್ಥಾಪನೆ ಮಾಡಿ ‘ಬೇಡರ ಕಣ್ಣಪ್ಪ’, ‘ಸದಾರಮೆ, ‘ತರಕಾರಿ ಚೆನ್ನಿ’, ‘ಮುದುಕನ ಮದುವೆ’ ಮುಂತಾದ ನಾಟಕಗಳನ್ನು ಮಾಡಿಕೊಂಡು ಬಂದಿದ್ದಾರೆ. ಇದನ್ನೂ ಓದಿ:ಮದುವೆಯಾಗಿ 14 ಕಳೆದರೂ ಮಕ್ಕಳಾಗದ್ದಕ್ಕೆ ಮಹತ್ವದ ನಿರ್ಧಾರ ಕೈಗೊಂಡ ‘ಲಾಲಿಹಾಡು’ ನಟಿ

    ಶ್ರೀನಿವಾಸಮೂರ್ತಿ ಇದುವರೆಗೂ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 32 ಚಿತ್ರಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ‘ಕವಿರತ್ನ ಕಾಳಿದಾಸ’ ಚಿತ್ರದ ಭೋಜರಾಜನ ಪಾತ್ರ ಮಾತ್ರ ಜನರ ಮನಸ್ಸಿನಲ್ಲಿ ಹಸಿರಾಗಿ ಉಳಿದುಬಿಟ್ಟಿದೆ. ಮೂರ್ತಿಗಳಿಗೆ ಕನ್ನಡ ಚಿತ್ರರಂಗದಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ, ಅವರನ್ನು ಚಿತ್ರರಂಗ ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳಬಹುದಾಗಿತ್ತು ಎಂಬ ಅಭಿಪ್ರಾಯವಿದೆಯಾದರೂ, ತಮಗೆ ಎಷ್ಟು ಸಿಕ್ಕಿದೆಯೋ ಅದೆಲ್ಲ ಕೀರ್ತಿಯನ್ನು ಹಿರಿಯ ನಿರ್ದೇಶಕ ಸಿದ್ಧಲಿಂಗಯ್ಯ ಮತ್ತು ಡಾ. ರಾಜಕುಮಾರ್ ಸಹೋದರ ವರದಪ್ಪ ಅವರಿಗೆ ಸಲ್ಲಿಸುತ್ತಾರೆ.

  • ನಾಟಕ ಮಾಡುವ ವೇಳೆ ಕುಸಿದು ಬಿದ್ದು ಪ್ರಾಣಬಿಟ್ಟ ಮಂಡ್ಯ ಕಲಾವಿದ

    ನಾಟಕ ಮಾಡುವ ವೇಳೆ ಕುಸಿದು ಬಿದ್ದು ಪ್ರಾಣಬಿಟ್ಟ ಮಂಡ್ಯ ಕಲಾವಿದ

    ಮಂಡ್ಯ: ನಾಟಕ (Drama) ಮಾಡುವ ವೇಳೆಯೇ ಕಲಾವಿದನೊಬ್ಬ (Artist) ಕುಸಿದು ಬಿದ್ದು ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ನಡೆದಿದೆ.

    ದುಗ್ಗನಹಳ್ಳಿ ಗ್ರಾಮದ ನಂಜಯ್ಯ (46) ಮೃತ ಕಲಾವಿದ. ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ಬಂಡೂರು ಗ್ರಾಮದ ಬಸವನಗುಡಿಯಲ್ಲಿ ನಾಟಕ ನಡೆಯುತ್ತಿತ್ತು. ಕುರುಕ್ಷೇತ್ರದ ಕೃಷ್ಣ ಸಂಧಾನ ನಾಟಕದ ವೇಳೆಯಲ್ಲಿ ಸಾರ್ಥ್ಯಕಿ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದ ನಂಜಯ್ಯ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ಇದನ್ನೂ ಓದಿ: ಬೆಂಗಳೂರು ಹಿಟ್‌ ಆಂಡ್‌ ರನ್‌ ಕೇಸ್‌ – ಪರಾರಿಯಾಗಿದ್ದ ಟೆಕ್ಕಿ ಬಂಧನ

    ನಂಜಯ್ಯನಿಗೆ ಅಲ್ಲೇ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಲಾವಿದನ ಸಾವಿನ ನಂತರ ಸಹ ಕಲಾವಿದರು, ಗ್ರಾಮಸ್ಥರು ನಾಟಕ ನಿಲ್ಲಿಸಿದ್ದಾರೆ. ಇದನ್ನೂ ಓದಿ: ಮೋದಿಯನ್ನು ಮೆಚ್ಚಿಸಲು ರಸ್ತೆಗಳಿಗೆ ತೇಪೆ ಹಾಕುವ ಕಾರ್ಯಕ್ಕೆ ಮುಂದಾದ ಹು-ಧಾ ಪಾಲಿಕೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾಟಕದಲ್ಲಿ ಸಿದ್ದರಾಮಯ್ಯಗೆ ಅವಮಾನ- ರಂಗಾಯಣದ ವಿರುದ್ಧ ಅಭಿಮಾನಿಗಳ ಆಕ್ರೋಶ

    ನಾಟಕದಲ್ಲಿ ಸಿದ್ದರಾಮಯ್ಯಗೆ ಅವಮಾನ- ರಂಗಾಯಣದ ವಿರುದ್ಧ ಅಭಿಮಾನಿಗಳ ಆಕ್ರೋಶ

    ಮೈಸೂರು: ರಂಗಾಯಣದಲ್ಲಿ(Rangayana) ನಡೆದ ನಾಟಕವೊಂದರಲ್ಲಿ ಮಾಜಿ ಸಿದ್ದರಾಮಯ್ಯ(Siddaramaiah) ಮತ್ತು ಅವರ ಆಡಳಿತದಲ್ಲಿ ಜಾರಿಗೆ ತಂದ ಅನ್ನಭಾಗ್ಯ (Anna Bhagya) ಯೋಜನೆ ಬಗ್ಗೆ ಅವಹೇಳನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

    ನಿರ್ದೇಶಕ ಕಾರ್ತಿಕ್ ಉಪಮನ್ಯ ನಿರ್ದೇಶನದಲ್ಲಿ ಮೂಡಿಬಂದ ಡಾ.ಚಂದ್ರಶೇಖರ್ ಕಂಬಾರರು ರಚಿಸಿದ ಸಾಂಬಶಿವ ಪ್ರಹಸನ ನಾಟಕ ಪ್ರದರ್ಶನದಲ್ಲಿ “ಅನ್ನಭಾಗ್ಯ ಕೊಟ್ಟು ಸೋಂಬೇರಿ ಮಾಡಿದ್ರಿ. ಈ ಬಾರಿ ಬಾದಾಮಿನು ಸಿಕ್ಕಲ್ಲ. ಗೊರಕೆ ಹೊಡೆದು ರಾಜ್ಯ ಹಾಳುಮಾಡಿದ್ದೀರಿ” ಎಂಬ ಸಂಭಾಷಣೆಗಳನ್ನು ಸೇರಿಸಲಾಗಿದೆ. ಇದನ್ನೂ ಓದಿ: ಸಿನಿಮಾಗಳಿಗೆ 3 ಸಾವಿರ ಕೋಟಿ ಹೂಡಿಕೆ: ಹೊಂಬಾಳೆ ಫಿಲ್ಮ್ಸ್ ಅಧಿಕೃತ ಘೋಷಣೆ

    ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರಿಗೆ ʼಕೇಡಿ ಅಂಕಲ್ʼ ಎಂದು ವ್ಯಂಗ್ಯ ಮಾಡಲಾಗಿದೆ ಎಂದು ನಾಟಕ ಪ್ರದರ್ಶನ ಅಂತ್ಯದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಕುರುಬ ಸಂಘದ ಅಧ್ಯಕ್ಷ ಸುಬ್ರಮಣ್ಯ ಎಂಬುವರು ಜಯಲಕ್ಷ್ಮಿಪುರಂ ಠಾಣೆಗೆ ದೂರು ಕೂಡ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟಿಪ್ಪು ನಿಜ ಕನಸುಗಳು ಪುಸ್ತಕ ಮಾರಾಟಕ್ಕೆ ಕೋರ್ಟ್‌ ತಡೆ

    ಟಿಪ್ಪು ನಿಜ ಕನಸುಗಳು ಪುಸ್ತಕ ಮಾರಾಟಕ್ಕೆ ಕೋರ್ಟ್‌ ತಡೆ

    ಬೆಂಗಳೂರು: ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ(Addanda C Cariappa) ರಚಿಸಿದ ಟಿಪ್ಪು ನಿಜ ಕನಸುಗಳು(Tipu Nija Kanasugalu) ಪುಸ್ತಕ ಮಾರಾಟಕ್ಕೆ ಸಿಟಿ ಸಿವಿಲ್‌ ಕೋರ್ಟ್‌(City Civil Court) ತಾತ್ಕಾಲಿಕ ತಡೆಯಾಜ್ಞೆ ವಿಧಿಸಿದೆ.

    ಟಿಪ್ಪು ನಾಟಕ (Drama) ಪ್ರದರ್ಶನಕ್ಕೆ‌ ಯಾವುದೇ ಅಡ್ಡಿ ಇಲ್ಲ. ನಾಟಕ ಪ್ರದರ್ಶನಕ್ಕೆ ತಡೆ ನೀಡಲಾಗುವುದಿಲ್ಲ ಎಂದು ಕೋರ್ಟ್‌ ಹೇಳಿದೆ.

    court order law

    ಪುಸ್ತಕವು ಕೋಮು, ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದೆ. ಪುಸ್ತಕ ಸುಳ್ಳುಗಳಿಂದ ತುಂಬಿದೆ. ಲೇಖಕರು ಹೇಳಿದ ವಿಷಯಗಳಿಗೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಇದನ್ನೂ ಓದಿ: EXCLUSIVE:ಆಗಿದ್ದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಲ್ಲ: ವೈಷ್ಣವಿ

    ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವ ಅಪಾಯವಿದೆ. ಹೀಗಾಗಿ ಎಲ್ಲಿಯೂ ಮಾರಾಟಕ್ಕೆ ಅನುಮತಿ ನೀಡಬಾರದು ಎಂದು ಬೆಂಗಳೂರು ಜಿಲ್ಲಾ ವಕ್ಫ್‌ ಮಂಡಳಿಯ ಮಾಜಿ ಅಧ್ಯಕ್ಷ ರಫೀಉಲ್ಲಾ ಅರ್ಜಿಯಲ್ಲಿ ಮನವಿ ಮಾಡಿದ್ದರು.

    ಈ ಅರ್ಜಿಯನ್ನು ಪುರಸ್ಕರಿಸಿದ 15ನೇ ಹೆಚ್ಚುವರಿ ಸಿಟಿ ಸಿವಿಲ್‌ ನ್ಯಾ. ಜೆ ಆರ್‌ ಮೆಂಡೋನ್ಸಾ ಪುಸ್ತಕ ಮಾರಾಟಕ್ಕೆ ತಡೆ ನೀಡಿದ್ದಾರೆ. ಪುಸ್ತಕ ಪ್ರಕಟಿಸಿರುವ ಅಯೋಧ್ಯಾ ಪ್ರಕಾಶನ ಮತ್ತು ಪುಸ್ತಕ ಮುದ್ರಿಸಿರುವ ರಾಷ್ಟ್ರೋತ್ಥಾನ ಮುದ್ರಣಾಲಯಕ್ಕೆ ಪುಸ್ತಕ ಹಂಚಿಕೆ ಮತ್ತು ಮಾರಾಟ ಮಾಡದಂತೆ ಆದೇಶ ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಇಲ್ಲಿ ಡ್ರಾಮಾ ಮಾಡಲು ಬರಬೇಡಿ- ಬಿಜೆಪಿ ಸದಸ್ಯರ ವಿರುದ್ಧ ಎಚ್‌ಡಿಕೆ ಕಿಡಿ

    ಇಲ್ಲಿ ಡ್ರಾಮಾ ಮಾಡಲು ಬರಬೇಡಿ- ಬಿಜೆಪಿ ಸದಸ್ಯರ ವಿರುದ್ಧ ಎಚ್‌ಡಿಕೆ ಕಿಡಿ

    ರಾಮನಗರ: ಬಿಜೆಪಿ ನಗರಸಭಾ ಸದಸ್ಯರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗರಂ ಆದ ಪ್ರಸಂಗ ಇಂದು ನಡೆಯಿತು.

    ಚನ್ನಪಟ್ಟಣ ನಗರಸಭೆ ಆವರಣದಲ್ಲಿ ಇಂದು ಸ್ವಚ್ಛತಾ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ನಮ್ಮನ್ನು ಕಡೆಗಣಿಸಲಾಗಿದೆ ಎಂದು ಬಿಜೆಪಿ ಸದಸ್ಯರು ಕಪ್ಪುಪಟ್ಟಿ ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು.

    ನಗರ ಪಾಲಿಕೆ ಅಧ್ಯಕ್ಷರು ಹಾಗೂ ಹೆಚ್‌ಡಿಕೆ ವಿರುದ್ಧ ಬಿಜೆಪಿ ಸದಸ್ಯರು ಧಿಕ್ಕಾರ ಕೂಗಿದ್ದಾರೆ. ಈ ವೇಳೆ ಬಿಜೆಪಿ ಸದಸ್ಯರ ವಿರುದ್ಧ ಸಿಟ್ಟಾದ ಎಚ್‌ಡಿಕೆ ಇಲ್ಲಿ ಡ್ರಾಮ ಮಾಡಲು ಬರಬೇಡಿ ಎಂದು ಸಿಟ್ಟು ಹೊರಹಾಕಿದ್ದಾರೆ. ಇದನ್ನೂ ಓದಿ: ಮೆಟ್ರೋ ಸ್ಟೇಷನ್ ಒಳಗೂ ಸಾವರ್ಕರ್ ಫೋಟೋಗೆ ಆಕ್ಷೇಪ- ಟ್ವಿಟ್ಟರ್‌ನಲ್ಲಿ ಅಭಿಯಾನ

     

    ಎಚ್‌ಡಿಕೆ ಹೇಳಿಕೆ ಬೆನ್ನಲ್ಲೇ ಜೆಡಿಎಸ್ ಸದಸ್ಯರು ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ಜೋರಾಗಿದೆ. ಕೊನೆಗೆ ಎರಡು ಕಡೆಯ ನಗರಸಭಾ ಸದಸ್ಯರನ್ನು ಪೊಲೀಸರು ಸಮಾಧಾನ ಪಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ಶಿವ, ಪಾರ್ವತಿ ವೇಷ ಧರಿಸಿ ಹಣದುಬ್ಬರದ ಬಗ್ಗೆ ನಾಟಕ- ಶಿವ ವೇಷಧಾರಿಯ ಬಂಧನ

    ಶಿವ, ಪಾರ್ವತಿ ವೇಷ ಧರಿಸಿ ಹಣದುಬ್ಬರದ ಬಗ್ಗೆ ನಾಟಕ- ಶಿವ ವೇಷಧಾರಿಯ ಬಂಧನ

    ದಿಸ್ಪುರ್: ನಿರ್ದೇಶಕಿ ಲೀನಾ ಮಣಿಮೇಕಲೈ ಅವರ ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್‌ಗೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಇದರ ನಡುವೆಯೇ ಶಿವ-ಪಾರ್ವತಿಯ ವೇಷ ಧರಿಸಿ ಬೀದಿ ನಾಟಕದ ಮೂಲಕ ಪ್ರತಿಭಟನೆ ನಡೆಸಿರುವ ಕಲಾವಿದರ ಮೇಲೆ ಕೇಸ್ ದಾಖಲಾಗಿದೆ. ಈಶ್ವರ ಪಾತ್ರಧಾರಿಯ ಬಂಧನವೂ ಆಗಿದೆ.

    ಅಸ್ಸಾಂನ ನಾಗಾಂವ್‌ನಲ್ಲಿ ಇಬ್ಬರು ಶಿವ ಹಾಗೂ ಪಾರ್ವತಿ ದೇವಿಯ ವೇಷ ಧರಿಸಿ ದೇಶದ ಹಣದುಬ್ಬರದ ಬಗ್ಗೆ ನಾಟಕವಾಡಿದ್ದಾರೆ. ಇದು ಹಿಂದೂ ಸನಾತನ ಧರ್ಮದವರ ಭಾವನೆಗೆ ಧಕ್ಕೆ ಉಂಟುಮಾಡಿದೆ ಎಂದು ನಾಗಾಂವ್ ಜಿಲ್ಲೆಯ ಹಿಂದೂ ಪರಿಷತ್ ಹಾಗೂ ಭಜರಂಗದಳ ಆರೋಪಿಸಿ, ತೀವ್ರವಾಗಿ ಖಂಡಿಸಿದೆ.

    ಘಟನೆ ಏನು?
    ಶನಿವಾರ ಸಂಜೆ ನಾಟಕ ಕಲಾವಿದರಾದ ಬಿರಿಂಚಿ ಬೋರಾ ಮತ್ತು ಕರಿಷ್ಮಾ, ಶಿವ ಮತ್ತು ಪಾರ್ವತಿ ವೇಷ ಧರಿಸಿ, ರಸ್ತೆಗಿಳಿದು ಇಂಧನ, ಆಹಾರ ಪದಾರ್ಥ ಹಾಗೂ ಇತರ ವಸ್ತುಗಳ ಬೆಲೆ ಏರಿಕೆಯನ್ನು ಪ್ರತಿಭಟಿಸಿದ್ದಾರೆ. ಇಬ್ಬರೂ ಬೈಕ್‌ನಲ್ಲಿ ನಾಗಾಂವ್‌ನ ಕಾಲೇಜು ಚೌಕ್‌ಗೆ ಆಗಮಿಸಿ, ವಾಹನದಲ್ಲಿ ಇಂಧನ ಖಾಲಿಯಾಗುತ್ತಿರುವ ಬಗ್ಗೆ ನಾಟಕವಾಡಿದ್ದಾರೆ. ಇದನ್ನೂ ಓದಿ: ಮಧ್ಯಾಹ್ನದ ಊಟ ಇಲ್ಲ, ಶಿಕ್ಷಕರಿಗೆ ಮಸಾಜ್ ಬೇಕಂತೆ – ವಿದ್ಯಾರ್ಥಿಗಳಿಂದಲೇ ಶಾಲೆಯ ಆಸ್ತಿ ಧ್ವಂಸ

    ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಶಿವ ವೇಷಧಾರಿ, ಸರ್ಕಾರ ಕೇವಲ ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ. ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನು ಸ್ಥಳದಲ್ಲಿ ನೆರೆದವರು ಕುತೂಹಲದಿಂದ ನೋಡಿದ್ದಾರೆ ಹಾಗೂ ಪಾತ್ರಧಾರಿಗಳು ಏರುತ್ತಿರುವ ಹಣದುಬ್ಬರವನ್ನು ಪ್ರತಿಭಟಿಸುವಂತೆ ಒತ್ತಾಯಿಸಿದ್ದಾರೆ.

    ಇದಾದ ಬಳಿಕ ಬಡಾ ಬಜಾರ್ ಪ್ರದೇಶಕ್ಕೂ ಆಗಮಿಸಿದ ಕಲಾವಿದರು ಇದೇ ರೀತಿ ಬೀದಿ ನಾಟಕ ಪ್ರದರ್ಶಿಸಿದರು. ಇದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಗಮನಕ್ಕೆ ಬಂದಿದ್ದು, ಅವರಿಬ್ಬರೂ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪೊಲೀಸ್ ವಾಹನದಲ್ಲಿ ಕುರಿ ದರ್ಬಾರ್ – ಮುಗ್ದ ಪ್ರಾಣಿಯ ಜಾಲಿ ರೈಡ್ ನೋಡಿ ನೆಟ್ಟಿಗರು ಫಿದಾ

    ಶಿವ-ಪಾರ್ವತಿ ಪಾತ್ರಧಾರಿಗಳಾದ ಬಿರಿಂಚಿ ಬೋರಾ ಹಾಗೂ ಕರೀಶ್ಮಾ ವಿರುದ್ಧ ನಾಗೋನ್ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದರ ಬೆನ್ನಲ್ಲೇ ಶಿವ ಪಾತ್ರಧಾರಿ ಬೋರಾನನ್ನು ಬಂಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪೂಲನ್ ದೇವಿ ಬದುಕಿಗೆ ನಿರ್ದೇಶಕ ರಾಜಗುರು ಅವರ ಹೊಸ ಸ್ಪರ್ಶ

    ಪೂಲನ್ ದೇವಿ ಬದುಕಿಗೆ ನಿರ್ದೇಶಕ ರಾಜಗುರು ಅವರ ಹೊಸ ಸ್ಪರ್ಶ

    ಸಿನಿಮಾ ಮತ್ತು ರಂಗಭೂಮಿಯಲ್ಲಿ ಸಕ್ರೀಯರಾಗಿರುವ ನಿರ್ದೇಶಕ ರಾಜುಗುರು ಎರಡೂ ಕ್ಷೇತ್ರಗಳಲ್ಲೂ ಒಂದಿಲ್ಲೊಂದು ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಅದರಲ್ಲೂ ರಂಗಭೂಮಿಯಲ್ಲಿನ ಹೊಸ ಸಾಧ್ಯತೆಗಳನ್ನು ಪರಿಚಯಿಸುತ್ತಲೇ ಇದ್ದಾರೆ. ಇದೀಗ ಪೂಲನ್ ದೇವಿ ಕುರಿತಾಗಿ ನಾಟಕವೊಂದನ್ನು ಅವರು ನಿರ್ದೇಶನ ಮಾಡಿದ್ದು, ಈ ನಾಟಕ ಜುಲೈ 25ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 7ಕ್ಕೆ ಪ್ರದರ್ಶನಗೊಳ್ಳಲಿದೆ.

    ತನ್ನನ್ನು ದೌರ್ಜನ್ಯಕ್ಕೆ ಒಳಪಡಿಸಿದ ರಾಕ್ಷಸರಿಗೆ ಭಯದ ರುಚಿ ತೋರಿಸಿದ ಚಂಬಲ್ ಕಣಿವೆಯ ಹೆಣ್ಣು ಬಂದೂಕು ಈ ಪೂಲನ್ ದೇವಿ ಎಂದು ಟ್ಯಾಗ್ ಲೈನ್ ಕೊಟ್ಟು ನಾಟಕ ಹೆಣೆದಿರುವ ರಾಜಗುರು, ಈ ನಾಟಕಕ್ಕೆ ನಿರ್ದೇಶನದ ಜೊತೆಗೆ ಸಂಗೀತ ಮತ್ತು ರಚನೆಯನ್ನೂ ಮಾಡಿದ್ದಾರೆ. ಪೂಲನ್ ದೇವಿಯ ಬದುಕನ್ನು ಮತ್ತೊಂದು ರೀತಿಯಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕರು. ಹಾಗಾಗಿ ಇದೊಂದು ವಿಭಿನ್ನ ಪ್ರಯೋಗ ಎಂದು ಹೇಳುತ್ತಾರೆ. ಇದನ್ನೂ ಓದಿ: ‘ಕೆಜಿಎಫ್ 2’, ‘ಆರ್.ಆರ್.ಆರ್’ ದಾಖಲೆ ಮುರಿಯತ್ತಾ ರಾಮ್ ಗೋಪಾಲ್ ವರ್ಮಾ ಅವರ ‘ಲಡ್ಕಿ’ ಸಿನಿಮಾ ?

    ಪೂಲನ್ ದೇವಿಯ ಪಾತ್ರದಲ್ಲಿ ನಯನ ಸೂಡ ಕಾಣಿಸಿಕೊಂಡಿದ್ದಾರೆ. ಇವರೇ ನಾಟಕಕ್ಕೆ ವಸ್ತ್ರವಿನ್ಯಾಸದ ಜೊತೆಗೆ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ. ಶಶಿಧರ್ ಅಡಪ ಅವರ ರಂಗ ಸಜ್ಜಿಕೆ. ಎಂ.ಜಿ ನವೀನ್ ಅವರ ಬೆಳಕು ಮತ್ತು ಜಯರಾಜ್ ಹುಸ್ಕೂರು ಅವರ ಪ್ರಸಾಧನ ನಾಟಕಕ್ಕೆ ಇರಲಿದೆ. ರಂಗಪಯಣದ 14ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಈ ನಾಟಕ ಪ್ರದರ್ಶನವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ‘ಖಾನಾವಳಿ ಚೆನ್ನಿ’ಯಾದ ಅಗ್ನಿಸಾಕ್ಷಿ ಚಂದ್ರಿಕಾ : ವೃತ್ತಿ ರಂಗಭೂಮಿಗೆ ಜಿಗಿದ ‘ಸತ್ಯ’ ನಟಿ

    ‘ಖಾನಾವಳಿ ಚೆನ್ನಿ’ಯಾದ ಅಗ್ನಿಸಾಕ್ಷಿ ಚಂದ್ರಿಕಾ : ವೃತ್ತಿ ರಂಗಭೂಮಿಗೆ ಜಿಗಿದ ‘ಸತ್ಯ’ ನಟಿ

    ವೃತ್ತಿ ರಂಗಭೂಮಿಯಿಂದ ಸಿನಿಮಾ ರಂಗಕ್ಕೆ ಬಂದವರು ಹೆಚ್ಚು. ಆದರೆ, ಸಿನಿಮಾ ಮತ್ತು ಕಿರುತೆರೆಯಲ್ಲಿ ಪಾಪ್ಯುಲರ್ ಆದವರು ಮತ್ತೆ ವೃತ್ತಿ ರಂಗಭೂಮಿಯತ್ತ ಮುಖವೆತ್ತಿ ಕೂಡ ನೋಡುವುದಿಲ್ಲ. ಆದರೆ, ಅಗ್ನಿಸಾಕ್ಷಿ, ಸತ್ಯ ಸೇರಿದಂತೆ ಹಲವು ಪಾಪ್ಯುಲರ್ ಧಾರಾವಾಹಿಯಲ್ಲಿ ನಟಿಸಿದ ಚಂದ್ರಿಕಾ ಇದೀಗ ವೃತ್ತಿ ರಂಗಭೂಮಿಯತ್ತ ಮುಖ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮನೆಮಾತಾಗಿರುವ ‘ಖಾನಾವಳಿ ಚೆನ್ನಿ’ ನಾಟಕದಲ್ಲಿ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

    ರಾಣೇಬೆನ್ನೂರು ಮಂಜುನಾಥ ನಾಟ್ಯ ಸಂಘವು ರೋಣ ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಿರುವ ‘ಖಾನಾವಳಿ ಚೆನ್ನಿ’ ನಾಟಕವು ಜೂನ್ 11 ಮತ್ತು 12 ರಂದು ಎರಡೆರಡು ಪ್ರದರ್ಶನಗಳನ್ನು ಆಯೋಜನೆ ಮಾಡಲಾಗಿದೆ. ಇದು ಈ ನಾಟಕದ ಹಾಸ್ಯ ಪಾತ್ರಧಾರಿ ಶ್ರೀದೇವಿ ಅವರ ಮದುವೆ ಸಹಾರ್ಥವಾಗಿ ನಡೆಯಲಿದೆ. ಹಾಗಾಗಿ ಚಂದ್ರಿಕಾ ಪ್ರಮುಖ ಪಾತ್ರವನ್ನು ಮಾಡಲು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ವಿಮರ್ಶೆ ಮಾಡಿದ ನಟ ರಮೇಶ್ ಅರವಿಂದ್

    ನಾಟಕದ ಕುರಿತು ಮಾತನಾಡಿರುವ ಸಂಘದ ಮಾಲೀಕರಾದ ನಾಗರತ್ನ ಚಿಕ್ಕಮಠ ಮಾತನಾಡಿ, “ಕವಿ ಬಿ.ಆರ್. ಅರಶಿನಗೋಡೆ ಅವರು ಬರೆದಿರುವ ಖಾನಾವಳಿ ಚೆನ್ನಿ ಹೆಸರಾಂತ ಹಾಸ್ಯ ನಾಟಕ. ಈ ನಾಟಕವನ್ನು ರೋಣದಲ್ಲಿ ಆಯೋಜನೆ ಮಾಡಲಾಗಿದೆ. ಖ್ಯಾತ ಧಾರಾವಾಹಿ ಕಲಾವಿದೆ ಚಂದ್ರಿಕಾ ಅವರು ಪ್ರಧಾನ ಪಾತ್ರ ಮಾಡುತ್ತಿದ್ದರೆ, ಜ್ಯೂನಿಯರ್ ಯಶ್ ಕೂಡ ಈ ನಾಟಕದಲ್ಲಿ ಮತ್ತೊಂದು ಪಾತ್ರ ಮಾಡುತ್ತಿದ್ದಾರೆ. ಸಂಘದ ಕಲಾವಿದೆ ಶ್ರೀದೇವಿ ಅವರ ಮದುವೆಗಾಗಿ ಇದನ್ನು ಆಯೋಜನೆ ಮಾಡಲಾಗಿದೆ’ ಎಂದರು.

    ಖಾನಾವಳಿ ಚೆನ್ನಿ ನಾಟಕದಲ್ಲಿ ಹಾಸ್ಯದ ಜೊತೆ ಡಬಲ್ ಮೀನಿಂಗ್ ಡೈಲಾಗ್ ಕೂಡ ಇವೆ. ಚೆನ್ನಿಯ ಪಾತ್ರದ ಸುತ್ತ ಇಡೀ ನಾಟಕ ಕಟ್ಟಲಾಗಿದೆ. ಈಗಾಗಲೇ ಈ ನಾಟಕ ಉತ್ತರ ಕರ್ನಾಟಕದಲ್ಲಿ ಸಾವಿರಾರು ಪ್ರಯೋಗಗಳನ್ನು ಕಂಡಿದೆ. ಹೆಸರಾಂತ ಕಲಾವಿದೆಯರು ಈಗಾಗಲೇ ಚೆನ್ನಿ ಪಾತ್ರವನ್ನು ಮಾಡಿದ್ದಾರೆ. ಪ್ರತಿ ಪ್ರಯೋಗವೂ ಯಶಸ್ಸು ಕಂಡಿರುವುದು ನಾಟಕದ ಹೆಗ್ಗಳಿಕೆ ಕೂಡ.