Tag: ನಾಗ ಚೈತನ್ಯ

  • ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು: ಸಮಂತಾ

    ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು: ಸಮಂತಾ

    ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಪತಿ ನಾಗ ಚೈತನ್ಯರಿಂದ ವಿಚ್ಛೇದನ ಪಡೆದ ನಂತರ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಪೋಸ್ಟ್ ಹಾಕುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ.

    ಸಮಂತಾ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ವಿಮಾನದ ಕಿಟಕಿಯಿಂದ ಹೊರಗಿನ ಪ್ರಪಂಚವನ್ನು ಅವರು ನೋಡುತ್ತಿದ್ದಾರೆ. ರಾತ್ರಿಯಾಗಿದ್ದರಿಂದ ಇಡೀ ನಗರ ಬೆಳಕಿನಿಂದ ಹೊಳೆಯುತ್ತಿದೆ. ಈ ಪೋಸ್ಟ್​ಗೆ ಅವರು ಇಂಗ್ಲಿಷ್‍ನ ಗೀತೆಯನ್ನು ಹಾಕಿದ್ದಾರೆ. ಜಗತ್ತನ್ನು ಬದಲಾಯಿಸಬೇಕಾದರೆ ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು ಎಂಬ ಸಾಲಿನೊಂದಿಗೆ ಈ ಹಾಡು ಪ್ರಾರಂಭವಾಗುತ್ತದೆ.ಇದನ್ನೂ ಓದಿವಿಚ್ಛೇದನ ಪಡೆಯುತ್ತಿದ್ದಂತೆ ಹೆಸರು ಬದಲಿಸಿಕೊಂಡ ಸಮಂತಾ

    ಅಕ್ಟೋಬರ್ 2ರಂದು ಈ ಜೋಡಿ ವಿಚ್ಛೇದನದ ಬಗ್ಗೆ ಘೋಷಣೆ ಮಾಡಿತ್ತು. ಸಾಕಷ್ಟು ಆಲೋಚನೆ ಮಾಡಿದ ನಂತರ ನಾವಿಬ್ಬರು ಪತಿ-ಪತ್ನಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ಸ್ನೇಹಿತರಾಗಿ ಇದ್ದಿದ್ದಕ್ಕೆ ನಾವಿಬ್ಬರೂ ಅದೃಷ್ಟ ಮಾಡಿದ್ದೆವು. ಆ ಸ್ನೇಹವೇ ನಮ್ಮ ಸಂಬಂಧದ ಶಕ್ತಿಯಾಗಿತ್ತು. ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧ ಇರಲಿದೆ ಎಂದು ನಂಬಿದ್ದೇವೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕವಾಗಿ ಇಬ್ಬರು ಬೇರೆಯಾಗುತ್ತಿದ್ದೇವೆ ಎಂದು ಹೇಳಿದ್ದರು. ಇದನ್ನೂ ಓದಿ: 200 ಕೋಟಿ ಜೀವನಾಂಶ ರಿಜೆಕ್ಟ್ ಮಾಡಿದ ಸಮಂತಾ

    samantha

    ವಿಚ್ಛೇದನಕ್ಕೂ ತಿಂಗಳು ಮೊದಲು ಸಮಂತಾ ಅವರು ಅಕ್ಕಿನೇನಿ ಸರ್ ನೇಮ್ ಅನ್ನು ಸೋಶಿಯಲ್ ಮೀಡಿಯಾ ಖಾತೆಯಿಂದ ತೆಗೆದು ಹಾಕಿದ್ದರು. ಅಲ್ಲದೆ ಎಸ್ ಎಂದಷ್ಟೇ ಇಟ್ಟಿದ್ದರು. ಈ ಮೂಲಕ ವಿಚ್ಛೇದನ ಸುದ್ದಿ ಹುಟ್ಟಿಕೊಳ್ಳುವಂತೆ ಮಾಡಿದ್ದರು. ಈಗ ವಿಚ್ಛೇದನ ಪಡೆದ ಮರುದಿನ ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಸರು ಬದಲಿಸಿದ್ದಾರೆ.

    ಅಕ್ಟೋಬರ್ 3 ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಸರು ಬದಲಿಸಿದ್ದಾರೆ. ಎಸ್ ಎಂದು ಇದ್ದ ಹೆಸರನ್ನು ಸಮಂತಾ ಎಂದು ಮಾಡಿದ್ದಾರೆ. ಮದುವೆಗೂ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಅವರ ಹೆಸರು ಸಮಂತಾ ರುತ್ ಪ್ರಭು ಎಂಬುದಾಗಿ ಇತ್ತು.

  • 200 ಕೋಟಿ ಜೀವನಾಂಶ ರಿಜೆಕ್ಟ್ ಮಾಡಿದ ಸಮಂತಾ

    200 ಕೋಟಿ ಜೀವನಾಂಶ ರಿಜೆಕ್ಟ್ ಮಾಡಿದ ಸಮಂತಾ

    ಹೈದರಾಬಾದ್: ದಕ್ಷಿಣ ಭಾರತದ ಕ್ಯೂಟ್ ಕಪಲ್ ಆಗಿದ್ದ ಟಾಲಿವುಡ್ ನಟ ನಾಗ ಚೈತನ್ಯ ಹಾಗೂ ನಟಿ ಸಮಂತಾ ಶನಿವಾರ ಅಧಿಕೃತವಾಗಿ ತಮ್ಮ ವಿಚ್ಛೇದನವನ್ನು ಘೋಷಿಸಿದ್ದರು. ಇದೀಗ ನಾಗ ಚೈತನ್ಯ ಹಾಗೂ ಅಕ್ಕಿನೇನಿ ಕುಟುಂಬದ ಕಡೆಯಿಂದ 200 ಕೋಟಿ ಜೀವನಾಂಶವನ್ನು ಸಮಂತಾ ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:  ಸಮುದ್ರದ ಮಧ್ಯೆ ಡ್ರಗ್ಸ್ ಪಾರ್ಟಿ- ಸ್ಟಾರ್ ನಟನ ಮಗ ಸೇರಿ ಹತ್ತು ಮಂದಿ ವಶಕ್ಕೆ

    ಸಮಂತಾ ಹಾಗೂ ನಾಗ ಚೈತನ್ಯ ಶನಿವಾರ ಪರಸ್ಪರ ದೂರವಾಗುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿವಾಹವಾಗಿ ಕೇವಲ ನಾಲ್ಕೆ ವರ್ಷ ಕಳೆದಿದ್ದು, ಐದನೇ ವರ್ಷ ತುಂಬುತ್ತಿದ್ದಂತೆ ಇಬ್ಬರು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನೆ ಪಡೆದುಕೊಂಡಿದ್ದಾರೆ. ಸದ್ಯ ಸಮಂತಾಗೆ ಜೀವನಾಂಶವಾಗಿ 200 ಕೋಟಿ ರೂ.ವನ್ನು ನೀಡಲು ಅಕ್ಕಿನೇನಿ ಕುಟುಂಬ ಮುಂದಾಗಿತ್ತು ಎಂಬ ವಿಚಾರ ಬಹಿರಂಗವಾಗಿದೆ. ಆದರೆ ಈ ಕುರಿತಂತೆ ಸಮಂತಾ ನನಗೆ ಜೀವನಾಂಶ ಬೇಡ ಹಾಗೂ ನಾಗ ಚೈತನ್ಯ ಅಥವಾ ಅವರ ಕುಟುಂಬದವರಿಂದ ಒಂದು ಪೈಸೆ ಕೂಡ ತೆಗೆದುಕೊಳ್ಳಲು ಬಯಸುವುದಿಲ್ಲ ಅಂತ ಹೇಳಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.

    ತಮ್ಮ ಕಠಿಣ ಶ್ರಮ ಹಾಗೂ ಪರಿಶ್ರಮದಿಂದ ಟಾಲಿವುಡ್‍ನಲ್ಲಿ ಸಮಂತಾ ಅಗ್ರಸ್ಥಾನದಲ್ಲಿರುವುದರಿಂದ ವಿಚ್ಛೇದನದಿಂದ ತನಗೆ ಯಾವುದೇ ಹಣದ ಅಗತ್ಯ ಇಲ್ಲ ಎಂದು ಅವರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಸಮಂತಾ ತಮ್ಮ ವೈಯಕ್ತಿಕ ಜೀವನದ ಸಮಸ್ಯೆಗಳಿಂದ ದೂರ ಸರಿದು ಕೆಲಸದ ಕಡೆಗೆ ಗಮನ ಹರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:  29ರ ವಸಂತಕ್ಕೆ ಕಾಲಿಟ್ಟ ಚಂದನವನದ ಡಿಂಪಲ್ ಕ್ವೀನ್

  • ದಾಂಪತ್ಯಕ್ಕೆ ಅಂತ್ಯ ಹಾಡಿದ ಸಮಂತಾ, ನಾಗ ಚೈತನ್ಯ

    ದಾಂಪತ್ಯಕ್ಕೆ ಅಂತ್ಯ ಹಾಡಿದ ಸಮಂತಾ, ನಾಗ ಚೈತನ್ಯ

    ಹೈದರಾಬಾದ್: ಟಾಲಿವುಡ್‍ನ ಸ್ಟಾರ್ ದಂಪತಿಗಳಾದ ನಾಗಚೈತನ್ಯ, ಸಮಂತಾ ವಿಚ್ಛೇದನವನ್ನು ಪಡೆದುಕೊಳ್ಳುತ್ತಿದ್ದೇವೆ ಹೇಳುವ ಮೂಲಕವಾಗಿ ಈ ವಿಚಾರಕ್ಕೆ ಸ್ವತಃ ಅವರೆ ತೆರೆ ಎಳೆದಿದ್ದಾರೆ.

    ಹೆಚ್ಚು ಆಲೋಚನೆಯ ನಂತರ ಚಾಯ್ ಮತ್ತು ನಾನು ನಮ್ಮ ಸ್ವಂತ ದಾರಿಗಳನ್ನು ಅನುಸರಿಸಲಿದ್ದೇವೆ. ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ಒಂದು ದಶಕದ ಸ್ನೇಹವನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ. ನಮ್ಮ ಸಂಬಂಧ ಯಾವಾಗಲೂ ನಮ್ಮ ನಡುವೆ ವಿಶೇಷ ಬಾಂಧವ್ಯವನ್ನು ಹೊಂದಿರುತ್ತದೆ ಎಂದು ನಾವು ನಂಬುತ್ತೇವೆ. ಇದನ್ನೂ ಓದಿ:  ತಂದೆ ವಯಸ್ಸಿನ ಕಾರು ಕಂಡು ಅಪ್ಪನ ಕಂಡಷ್ಟೆ ಸಂತೋಷವಾಯಿತು: ಜಗ್ಗೇಶ್

     

    View this post on Instagram

     

    A post shared by S (@samantharuthprabhuoffl)

    ಈ ಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮ್ಮನ್ನು ಬೆಂಬಲಿಸಬೇಕು. ನಾವು ಮುಂದುವರಿಯಲು ಬೇಕಾದ ಪ್ರೈವೆಸಿಯನ್ನು ನಮಗೆ ನೀಡಬೇಕೆಂದು ನಾವು ವಿನಂತಿಸುತ್ತೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ಬರೆದುಕೊಂಡು ತಾವಿಬ್ಬರು ವಿಚ್ಛೇದನ ಪಡೆದುಕೊಳ್ಳುತ್ತೀರುವ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕವಾಗಿ ತಿಳಿಸಿದ್ದಾರೆ.

    ಟಾಲಿವುಡ್‍ನ ಈ ಸ್ಟಾರ್ ದಂಪತಿ ನಾಲ್ಕು ವರ್ಷಗಳ ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯವನ್ನು ಹಾಡಿದ್ದಾರೆ. ಹಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಸುದ್ದಿಗೆ ಇಂದು ತೆರೆ ಬಿದ್ದಿದೆ. ಸಂಸಾರದಲ್ಲಿ ಬಿರುಗಾಳಿ ಎದ್ದಿದೆ ಎಂಬ ಅನುಮಾನ ಹಲವು ದಿನಗಳಿಂದಲೂ ಕೇಳಿಬರುತ್ತಲೇ ಇತ್ತು. ಆದರೆ ಕುಟುಂಬದ ಯಾರೊಬ್ಬರೂ ಅಧಿಕೃತ ಹೇಳಿಕೆ ನೀಡಿರಲಿಲ್ಲ.

  • 1 ತಿಂಗಳ ನಂತರ ಅದ್ಧೂರಿಯಾಗಿ ನಡೆದ ನಾಗ ಚೈತನ್ಯ-ಸಮಂತಾ ಆರತಕ್ಷತೆ

    1 ತಿಂಗಳ ನಂತರ ಅದ್ಧೂರಿಯಾಗಿ ನಡೆದ ನಾಗ ಚೈತನ್ಯ-ಸಮಂತಾ ಆರತಕ್ಷತೆ

    ಹೈದರಾಬಾದ್: ಟಾಲಿವುಡ್ ನ ಖ್ಯಾತ ಜೋಡಿ ನಾಗ ಚೈತನ್ಯ ಹಾಗೂ ಸಮಂತಾ ಜೋಡಿ ಈಗಾಗಲೇ ವಿವಾಹ ನಡೆದು ತಿಂಗಳು ಕಳೆದಿದೆ. ಆದರೆ ಭಾನುವಾರದಂದು ಅದ್ಧೂರಿಯಾಗಿ ತಮ್ಮ ಆರತಕ್ಷತೆ ಕಾರ್ಯವ್ನನು ಆಚರಿಸಿಕೊಂಡಿದ್ದಾರೆ.

    ಅಕ್ಟೋಬರ್ 6 ರಂದು ಈ ಜೋಡಿ ಗೋವಾದ ಡಬ್ಲ್ಯು ರೆಸಾರ್ಟ್ ನಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಬರೋಬ್ಬರಿ ಒಂದು ತಿಂಗಳ ನಂತರ ಮುತ್ತಿನ ನಗರಿ ಹೈದರಾಬಾದ್ ನಲ್ಲಿರುವ ಎನ್-ಕನ್ವೆಷನ್ ಸೆಂಟರ್ ನಲ್ಲಿ ಆರತಕ್ಷತೆ ನಡೆದಿದೆ.

    ನಾಗ ಚೈತನ್ಯ ಅವರು ಸುಮಾರು 2 ವಾರಗಳಿಂದ ಆರತಕ್ಷತೆಗಾಗಿ ಕಾಯುತ್ತಿದ್ದು, ಸಮಂತಾ ಅಕ್ಕಿನೇನಿ ಅವರು ತಮಿಳಿನ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯೂಸಿ ಇದ್ದರು. ಜೊತೆಗೆ ಮಾವ ನಾಗರ್ಜುನ ಅವರ ಜೊತೆ ಅಭಿನಯಿಸಿರುವ `ರಾಜು ಗಾರಿ ಗಾಧಿ-2′ ಸಿನಿಮಾದ ಪ್ರಚಾರದ ಕಾರ್ಯದಲ್ಲಿ ತೊಡಗಿದ್ದರು. ಈ ಎಲ್ಲಾ ಕಾರಣಗಳಿಂದ ಆರತಕ್ಷತೆ ತಡವಾಗಿ ನಡೆದಿದೆ. ಇನ್ನೂ ಮದುವೆ ಆಯಿತು, ಆರತಕ್ಷತೆನೂ ನಡೆದಿದೆ. ಆರತಕ್ಷತೆ ಬಳಿಕ ಚೆನ್ನೈ ನಲ್ಲಿರುವ ಚೈತನ್ಯರ ತಾಯಿಯ ಮನೆಗೆ ಭೇಟಿ ನೀಡಲಿದ್ದಾರೆ.

    ಭಾನುವಾರ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಸಮಂತಾ-ನಾಗಚೈತನ್ಯ ಜೋಡಿಗೆ ಟಾಲಿವುಡ್‍ನ ಗಣ್ಯರು ಬಂದು ಶುಭಹಾರೈಸಿದ್ದಾರೆ. ಆರತಕ್ಷತೆ ಕಾರ್ಯಕ್ರಮದಲ್ಲಿ ನಾಗಚೈತನ್ಯ ಸ್ನೇಹಿತ ನಟ ರಾಮಚರಣ್ ತೇಜ, ನಿರ್ದೇಶಕ ಎಸ್‍ಎಸ್ ರಾಜಮೌಳಿ, ನಂದಮೂರಿ ಹರಿಕೃಷ್ಣ, ನಟ ಚಿರಂಜೀವಿ, ವೆಂಕಟೇಶ್ ಸೇರಿದಂತೆ ಅನೇಕ ನಟರು ಆಗಮಿಸಿದ್ದರು. ಒಟ್ಟಿನಲ್ಲಿ ಆರತಕ್ಷತೆಯಲ್ಲಿ ಸಿನಿಮಾ ತಾರೆಯರ ರಂಗಿನಿಂದ ಮಿಂಚುತ್ತಿತ್ತು.