ಟಾಲಿವುಡ್ ಬ್ಯೂಟಿ ಸಮಂತಾ(Samantha) ಸದಾ ಸುದ್ದಿಯಲ್ಲಿರುವ ನಟಿ, ಅದರಲ್ಲೂ ನಾಗಚೈತನ್ಯ(Nagchaitanya) ಜೊತೆ ಡಿವೋರ್ಸ್ ಆದ ಮೇಲೆ ಸಾಕಷ್ಟು ಗಾಸಿಪ್, ಟ್ರೋಲಿಗಳಿಗೆ ಸಮಂತಾ ಗುರಿಯಾಗಿದ್ದಾರೆ. ಇದೀಗ ತಾವು ನಾಗಚೈತನ್ಯಗೆ ಯಾಕೆ ಡಿವೋರ್ಸ್ ಕೊಟ್ಟಿದ್ದು ಎಂಬುದರ ಬಗ್ಗೆ ಮಾಜಿ ಅತ್ತೆ ಲಕ್ಷ್ಮಿ ದಗ್ಗುಬಾಟಿ (Lakshmi Daggubati) ಬಳಿ ಅಳಲು ತೋಡಿಕೊಂಡಿದ್ದಾರೆ.

ಸೌತ್ ಸಿನಿರಂಗದಲ್ಲಿ ಮುದ್ದಾದ ಜೋಡಿಯಾಗಿ ಹೈಲೆಟ್ ಆಗಿ ನಾಗ್‌ಚೈತನ್ಯ ಮತ್ತು ಸಮಂತಾ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಒಂದು ವರ್ಷವಾಗಿದೆ. ಬಳಿಕ ತಮ್ಮ ವೃತ್ತಿ ಜೀವನದತ್ತ ನಾಗ್, ಸಮಂತಾ ಬ್ಯುಸಿಯಾಗಿದ್ದಾರೆ. `ಪುಷ್ಪ'(Pushpa Film) ಐಟಂ ಸಾಂಗ್ ಹಿಟ್ ಆದ್ಮೇಲೆ ಸಮಂತಾ ರೇಂಜ್ ಬದಲಾಗಿದೆ. ಹಾಗಾಗಿ ಹೊಸ ಹೊಸ ಗಾಸಿಪ್‌ಗಳಿಗೆ ನಟಿ ಆಹಾರವಾಗುತ್ತಿದ್ದಾರೆ.

ಹೀಗೆ ದಿನಕ್ಕೊಂದು ಸುದ್ದಿ ಸಮಂತಾ ಬಗ್ಗೆ ಹರಿದಾಡುತ್ತಿದೆ. ಇದೀಗ ನಾಗಚೈತನ್ಯ ಅವರ ತಾಯಿ ಲಕ್ಷ್ಮಿ ದಗ್ಗುಬಾಟಿ ಅವರನ್ನ ಸಮಂತಾ ಭೇಟಿಯಾಗಿದ್ದಾರೆ ಎಂಬ ಸುದ್ದಿ ಟಿಟೌನ್‌ನಲ್ಲಿ ಹರಿದಾಡುತ್ತಿದೆ. ನಿಮ್ಮ ಮಗ ನನಗೆ ಹಿಂಸೆ ಕೊಟ್ಟ, ಅದೇ ಕಾರಣಕ್ಕೆ ನಾನು ಡಿವೋರ್ಸ್ ಕೊಟ್ಟೆ, ಮದುವೆ ನಂತರ ಅವರು ಸಾಕಷ್ಟು ಬದಲಾಗಿದ್ದರು. ನನ್ನನ್ನು ಕಂಟ್ರೋಲ್ ಮಾಡುತ್ತಿದ್ದರು ಎಂದು ಮಾಜಿ ಅತ್ತೆ ಬಳಿ ಸಮಂತಾ ತಮ್ಮ ನೋವು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಪ್ರೇಮ್ ಮತ್ತು ಧ್ರುವ ಕಾಂಬಿನೇಷನ್ ಸಿನಿಮಾದ ಟೈಟಲ್ ಟೀಸರ್ ಲಾಂಚ್ ಗೆ ಸಂಜಯ್ ದತ್

ನಮ್ಮ ಮದುವೆ ಬಳಿಕ ಸಿನಿಮಾ ಮಾಡಲು ಅವಕಾಶವಿರಲಿಲ್ಲ. ನನ್ನ ಇಷ್ಟದ ಡ್ರೆಸ್ ತೊಡಲು ಬಿಡುತ್ತಿರಲಿಲ್ಲ. ನನಗೆ ಹಿಂಸೆ ಮಾಡುತ್ತಿದ್ದರು ಎಂದು ಮಾಜಿ ಅತ್ತೆ ಲಕ್ಷ್ಮಿ ದಗ್ಗುಬಾಟಿ ಅವರ ಬಳಿ ಸಮಂತಾ ಹೇಳಿಕೊಂಡಿದ್ದಾರAತೆ ಈ ಸುದ್ದಿ ಅದೆಷ್ಟು ನಿಜ ಎಂಬುದು ತಿಳಿದುಬಂದಿಲ್ಲ.





ಸದ್ಯ `ಲಾಲ್ ಸಿಂಗ್ ಚಡ್ಡಾ’ ಚಿತ್ರದ ಪ್ರಚಾರ ಕಾರ್ಯಗಳು ನಿಧಾನಕ್ಕೆ ಶುರುವಾಗಿದೆ. ಬಾಲಿವುಡ್‌ನ ಡೆಬ್ಯೂ ಚಿತ್ರದ ಬಗ್ಗೆ ಮಾತನಾಡುವಾಗ ತಾವು ಯಾಕೆ ಹಿಂದಿ ಚಿತ್ರದಿಂದ ದೂರ ಸರಿಯುತ್ತಿದ್ದರು ಅಂತಾ ಮಾತನಾಡಿದ್ದಾರೆ. ಭಾಷೆಯ ಸಮಸ್ಯೆಯಿಂದಾಗಿ ಹಿಂದಿ ಸಿನಿಮಾಗಳಿಂದ ದೂರವಿದ್ದೆ ಅಂತಾ ನಾಗಚೈತನ್ಯ ಹೇಳಿದ್ದಾರೆ. ದಕ್ಷಿಣದ ಸಿನಿಮಾಗಳಲ್ಲಿ ನಟಿಸುವ ಕಾರಣ ಹಿಂದಿ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವುದು ಕಷ್ಟ ಎಂದರು. ಇದನ್ನೂ ಓದಿ:




















