Tag: ನಾಗ್ಪುರ್

  • ಕಲಾವಿದರೊಂದಿಗೆ ಡೋಲು ಬಾರಿಸಿದ ಮೋದಿ

    ಕಲಾವಿದರೊಂದಿಗೆ ಡೋಲು ಬಾರಿಸಿದ ಮೋದಿ

    ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ನಾಗ್ಪುರದಲ್ಲಿ (Nagpur) ಡೋಲು (Dhol) ಬಾರಿಸಿ ಸ್ವಾಗತಿಸಲಾಯಿತು. ಈ ವೇಳೆ ಮೋದಿ ಅವರು ಸಹ ಕಲಾವಿದರ ಗುಂಪನ್ನು ಸೇರಿ ಡೋಲನ್ನು ಬಾರಿಸಿದರು.

    ಈ ವೀಡಿಯೋವನ್ನು ಪಿಎಂಒ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಮೋದಿ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಡೋಲು ಬಾರಿಸುತ್ತಿದ್ದವರ ಬಳಿ ಮೋದಿ ತೆರಳಿದ್ದಾರೆ. ಅಲ್ಲಿ ಮೋದಿ ಓರ್ವ ಕಲಾವಿದನ ಪಕ್ಕದಲ್ಲಿ ಡೋಲನ್ನು ಬಾರಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ನಾಗ್ಪುರ ಹಾಗೂ ಬಿಲಾಸ್‍ಪುರ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಚಾಲನೆ ನೀಡಿದರು. ಈ ಕುರಿತು ಟ್ವೀಟ್ ಮಾಡಿರುವ ಅವರು, ನಾಗ್ಪುರ ಮತ್ತು ಬಿಲಾಸ್‍ಪುರ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಚಾಲನೆ ನೀಡಲಾಗಿದೆ. ಈ ರೈಲಿನಿಂದ ಸಂಪರ್ಕವು ಗಮನಾರ್ಹವಾಗಿ ವರ್ಧಿಸುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಅಂಬೇಡ್ಕರ್‌ಗೆ ಅಪಮಾನ – ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ ಮುಖಕ್ಕೆ ಮಸಿ ಬಳಿದು ಆಕ್ರೋಶ

    ಮಹಾರಾಷ್ಟ್ರದಲ್ಲಿ ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಪ್ರಧಾನಿ ಗೋವಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪಿಎಂಒ ಟ್ವೀಟ್ ಮಾಡಿದರು.  ರಾತ್ರಿ 11 ಗಂಟೆ ನಂತ್ರ ಓಡಾಡಿದ್ದಕ್ಕೆ ದಂಪತಿಗೆ ದಂಡ ಹಾಕಿದ್ದ ಪೊಲೀಸರು ಸಸ್ಪೆಂಡ್‌

    Live Tv
    [brid partner=56869869 player=32851 video=960834 autoplay=true]

  • ಕಾಶ್ಮೀರದಲ್ಲಿ ಬಿಜೆಪಿ ಸರ್ಕಾರ ರಚಿಸುವಾಗ ಸಿದ್ಧಾಂತ ಎಲ್ಲಿ ಹೋಗಿತ್ತು?: ಸಂಜಯ್ ರಾವತ್

    ಕಾಶ್ಮೀರದಲ್ಲಿ ಬಿಜೆಪಿ ಸರ್ಕಾರ ರಚಿಸುವಾಗ ಸಿದ್ಧಾಂತ ಎಲ್ಲಿ ಹೋಗಿತ್ತು?: ಸಂಜಯ್ ರಾವತ್

    ನಾಗ್ಪುರ್: ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿಯೊಂದಿಗೆ ಸರ್ಕಾರ ರಚಿಸಿದಾಗ ಸಿದ್ಧಾಂತ ಎಲ್ಲಿ ಹೋಗಿತ್ತು ಎಂದು ಶಿವಸೇನೆ ನಾಯಕ ಸಂಸದ ಸಂಜಯ್ ರಾವತ್ ಎಂದು ಪ್ರಶ್ನಿಸಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಹಮ್ಮದ್ ಅಲಿ ಜಿನ್ನಾ ಪಾಕಿಸ್ತಾನವನ್ನು ರಚಿಸಲು ಒಂದೇ ಒಂದು ಬಾರಿ ಭಾರತವನ್ನು ವಿಭಜಿಸಿದ್ದರು. ಆದರೆ ಬಿಜೆಪಿ ನಾಯಕರು ತಮ್ಮ ಹೇಳಿಕೆಗಳ ಮೂಲಕ ಹಿಂದೂ ಮತ್ತು ಮುಸ್ಲಿಮರ ನಡುವೆ ಬಿರುಕು ಮೂಡಿಸುವ ಮೂಲಕ ಪ್ರತಿದಿನ ದೇಶವನ್ನು ವಿಭಜಿಸುತ್ತಿದ್ದಾರೆ ಆರೋಪಿಸಿದರು.

    ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‍ಎಸ್) ಮುಸ್ಲಿಮರಿಗಾಗಿ ರಾಷ್ಟ್ರೀಯ ಮುಸ್ಲಿಂ ಮಂಚ್‍ನಂತಹ ಅನೇಕ ಸಂಘಟನೆಗಳನ್ನು ರಚಿಸಿದೆ. ಇದರಿಂದಾಗಿ ಬಿಜೆಪಿ ನಾಯಕರು ಆರ್‌ಎಸ್‍ಎಸ್ನ ಹೆಸರನ್ನು ರಾಷ್ಟ್ರೀಯ ಮುಸ್ಲಿಂ ಸಂಘ ಎಂದು, ಆರ್‌ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೆಸರನ್ನು ಜನಬ್ ಭಾಗವತ್ ಎಂದು ಬದಲಾಯಿಸುತ್ತಾರೆಯೇ ಎಂದು ಬಿಜೆಪಿಗೆ ತಿರುಗೇಟು ನೀಡಿದ ಅವರು, ಶಿವಸೇನೆ ಹಿಂದುತ್ವ ಪಕ್ಷವಾಗಿದ್ದು, ಸದಾ ಹಾಗೆಯೇ ಇರುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸಂಸದ ಸ್ಥಾನಕ್ಕೆ ಅಖಿಲೇಶ್ ಯಾದವ್ ರಾಜೀನಾಮೆ

    ಎಐಎಂಐಎಂ ಸಂಸದ ಇಮ್ತಿಯಾಜ್ ಜಲೀಲ್ ಅವರು ಶಿವಸೇನೆ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ(ಎಂವಿಎ) ಜೊತೆ ಮೈತ್ರಿ ಮಾಡಿಕೊಳ್ಳಲು ಪ್ರಸ್ತಾಪಿಸಿತ್ತು. ಇದಕ್ಕೆ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಶೀವಸೇನೆಯನ್ನು ಟೀಕಿಸಿದ್ದರು. ಶಿವಸೇನಾ ಮತ್ತು ಎಐಎಂಐಎಂ ಒಟ್ಟಿಗೆ ಬರುತ್ತವೆಯೇ ಇದನ್ನು ತಳ್ಳಿಹಾಕಲಾಗುವುದಿಲ್ಲ ಎಂದಿದ್ದರು. ಇದನ್ನೂ ಓದಿ: ಭಗತ್ ಸಿಂಗ್ ಪುಣ್ಯಸ್ಮರಣೆಯಂದು ಪಂಜಾಬ್‌ನಲ್ಲಿ ಸಾರ್ವಜನಿಕ ರಜೆ

  • ಚಿಕನ್ ನೀಡದ್ದಕ್ಕೆ ಡಾಬಾಗೆ ಬೆಂಕಿ ಇಟ್ರು

    ಚಿಕನ್ ನೀಡದ್ದಕ್ಕೆ ಡಾಬಾಗೆ ಬೆಂಕಿ ಇಟ್ರು

    ಮುಂಬೈ: ಇಬ್ಬರು ವ್ಯಕ್ತಿಗಳು ಚಿಕನ್ ನೀಡದ ಕಾರಣಕ್ಕೆ ಡಾಬಾಗೆ ಬೆಂಕಿ ಹಚ್ಚಿರುವ ಘಟನೆ ಭಾನುವಾರ ಮಹಾರಾಷ್ಟ್ರದ ನಾಗ್ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಗಳನ್ನು ಶಂಕರ್ ಟೇಡೆ(29) ಮತ್ತು ಸಾಗರ್ ಪಟೇಲ್(19) ಎಂದು ಗುರುತಿಸಲಾಗಿದೆ. ಇವರು ಭಾನುವಾರ ಬೆಲ್ಟರೋಡಿ ಪ್ರದೇಶದ ರಸ್ತೆ ಬದಿಯ ಡಾಬಾಗೆ ರಾತ್ರಿ ಸುಮಾರು 1 ಗಂಟೆ ಭೇಟಿ ನೀಡಿದ್ದಾರೆ. ಮದ್ಯಪಾನ ಸೇವಿಸಿದ ಸ್ಥಿತಿಯಲ್ಲಿದ್ದ ಇವರು ಚಿಕನ್ ನೀಡುವಂತೆ ಹೇಳಿದ್ದಾರೆ.

    ಮಾಲೀಕರು ಚಿಕನ್ ಖಾಲಿಯಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಇಬ್ಬರು ಕುಡಿದ ಮತ್ತಿನಲ್ಲಿ ಡಾಬಾಗೆ ಬೆಂಕಿ ಹಚ್ಚಿದ್ದಾರೆ. ಸದ್ಯ ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ. ಆರೋಪಿಗಳ ವಿರುದ್ಧ ಡಾಬಾ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

  • ಮತದಾನದ ಹಕ್ಕು ಚಲಾಯಿಸಿದ ವಿಶ್ವದ ಅತ್ಯಂತ ಕುಬ್ಜ ಮಹಿಳೆ

    ಮತದಾನದ ಹಕ್ಕು ಚಲಾಯಿಸಿದ ವಿಶ್ವದ ಅತ್ಯಂತ ಕುಬ್ಜ ಮಹಿಳೆ

    – ಎಲ್ಲರೂ ಮತದಾನ ಮಾಡುವಂತೆ ಜ್ಯೋತಿ ಆಮ್ಗೆ ಮನವಿ

    ಮುಂಬೈ: ವಿಶ್ವದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿ ಆಮ್ಗೆ ಅವರು ಇಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಮತ ಚಲಾಯಿಸಿದ್ದು, ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದು ಆರಂಭವಾಗಿದೆ. ಮಹಾರಾಷ್ಟ್ರದ ನಾಗ್ಪುರ್ ದ ಮತಗಟ್ಟೆಯಲ್ಲಿ ಜ್ಯೋತಿ ಆಮ್ಗೆ ಮತದಾನ ಮಾಡಿದರು.

    ಮತದಾನದ ಬಳಿ ಮಾತನಾಡಿದ ಜ್ಯೋತಿ ಆಮ್ಗೆ ಅವರು, ಎಲ್ಲರೂ ಮತದಾನ ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಮೊದಲು ಮತದಾನ ಮಾಡಿ, ನಂತರ ನಿಮ್ಮ ಕೆಲಸದಲ್ಲಿ ತೊಡಗಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

    ಜ್ಯೋತಿ ಅವರು 25 ವರ್ಷದವರಾಗಿದ್ದು, 62.8 ಸೆಂ.ಮೀ ಎತ್ತರ ಇದ್ದಾರೆ. ನಾಗ್ಪುರ್ ದ ನಿವಾಸಿಯಾದ ಜ್ಯೋತಿ ಆಮ್ಗೆ ತಮ್ಮ ಪೋಷಕರ ಜೊತೆಗೆ ಮತಗಟ್ಟೆಗೆ ಆಗಮಿಸಿದರು. ಈ ವೇಳೆ ಅಲ್ಲಿ ಸೇರಿದ್ದ ಜನರು ಅವರನ್ನು ಸಂತೋಷದಿಂದ ಸ್ವಾಗತಿಸಿದರು. ಅಧಿಕಾರಿಗಳು ಕೂಡ ಜವಾಬ್ದಾರಿ ಮೆರೆದ ಜ್ಯೋತಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    2011ರಲ್ಲಿ ಜ್ಯೋತಿ ಅವರನ್ನು ವಿಶ್ವದ ಕುಬ್ಜ ಮಹಿಳೆ ಎಂಬುದಾಗಿ ಗಿನ್ನಿಸ್ ಸಂಸ್ಥೆ ಪ್ರಕಟಿಸಿತು.

  • ನೃತ್ಯ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನೋಟು ಎಸೆದ ಪೇದೆ ವಜಾ

    ನೃತ್ಯ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನೋಟು ಎಸೆದ ಪೇದೆ ವಜಾ

    ಮುಂಬೈ: ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ನೃತ್ಯ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನೋಟುಗಳನ್ನು ಎಸೆದಿದ್ದ ಪೇದೆಯನ್ನು ಮಹಾರಾಷ್ಟ್ರ ಪೊಲೀಸ್ ವಜಾಗೊಳಿಸಿ ಆದೇಶ ಹೊರಡಿಸಿದೆ.

    ಪ್ರಮೋದ್ ವಾಲ್ಕೆ ವಜಾಗೊಂಡ ಪೇದೆ. ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಪೇದೆಯನ್ನು ವಜಾ ಮಾಡಿದ್ದಾರೆ.

    ಆಗಿದ್ದೇನು?:
    ನಾಗ್ಪುರದ ಜಿಲ್ಲಾ ಪರಿಷದ್ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ನಡೆದಿದ್ದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಮೋದ್ ವಾಲ್ಕೆ ನೋಡುತ್ತಿದ್ದರು. ಈ ವೇಳೆ 6ನೇ ತರಗತಿಯ ವಿದ್ಯಾರ್ಥಿನಿಯರು ವೇದಿಕೆಯ ಮೇಲೆ ಚಕ್ ದ್ ಇಂಡಿಯಾ ಸಿನಿಮಾದ ‘ಆಜಾ ಆಜಾ ಜಿಂದೆ ಶಾಮೆ ಆನೆ ಕೇತಲೆ’ ಹಾಡಿಗೆ ನೃತ್ಯ ಮಾಡುತ್ತಿದ್ದರು. ತಕ್ಷಣವೇ ವೇದಿಕೆ ಏರಿದ ಪ್ರಮೋದ್ ವಾಲ್ಕೆ ಮಕ್ಕಳ ಮೇಲೆ ನೋಟುಗಳನ್ನು ಹಾಕಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ವೇದಿಕೆಯ ಹತ್ತಿ, ಮಕ್ಕಳ ಮೇಲೆ ನೋಟ್ ಹಾಕಿರುವುದು ಆಕ್ಷೇಪಾರ್ಹವಾಗಿದೆ. ಹೀಗಾಗಿ ಅವರನ್ನು ವಜಾ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಸಂತೋಷ್ ವೈರಗಡೆ ತಿಳಿಸಿದ್ದಾರೆ.

    ಈ ಕುರಿತು ಸ್ಪಷ್ಟನೆ ನೀಡಿರುವ ಪ್ರಮೋದ್ ವಾಲ್ಕೆ, ಕಾರ್ಯಕ್ರಮದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ನನ್ನನ್ನು ಜಿಲ್ಲಾ ಪರಿಷದ್ ಶಾಲೆಗೆ ನಿಯೋಜನೆ ಮಾಡಲಾಗಿತ್ತು. ಕೆಲವರು ಮಕ್ಕಳನ್ನು ಪ್ರೋತ್ಸಾಹಿಸಲು ಹಣ ಹಾಕಲು ವೇದಿಕೆಯ ಮೇಲೆ ಹತ್ತಲು ಮುಂದಾಗಿದ್ದರು. ಅವರನ್ನು ತಡೆದು, ಹಣವನ್ನು ಸಂಗ್ರಹಿಸಿ, ನಾನೇ ಮಕ್ಕಳ ಮೇಲೆ ಹಾಕಿದ್ದೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv