Tag: ನಾಗೇಶ್

  • ದೋಸ್ತಿ ಸರ್ಕಾರದ ಎರಡು ವಿಕೆಟ್ ಪತನ- ಪಕ್ಷೇತರರ ಬೆಂಬಲ ವಾಪಸ್

    ದೋಸ್ತಿ ಸರ್ಕಾರದ ಎರಡು ವಿಕೆಟ್ ಪತನ- ಪಕ್ಷೇತರರ ಬೆಂಬಲ ವಾಪಸ್

    ಮುಂಬೈ: ಸಂಕ್ರಾಂತಿಯಂದು ಆಪರೇಷನ್ ಕಮಲ ನಡೆಯಲಿದೆ ಎನ್ನುವ ಸುದ್ದಿಗೆ ಪೂರಕ ಎಂಬಂತೆ ಪಕ್ಷೇತರ ಶಾಸಕರಾದ ರಾಣೇಬೆನ್ನೂರು ಶಾಸಕ ಆರ್.ಶಂಕರ್ ಮತ್ತು ಮುಳಬಾಗಿಲು ನಾಗೇಶ್ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ಸು ಪಡೆದಿದ್ದಾರೆ.

    ಈ ಇಬ್ಬರು ಶಾಸಕರು ಆಪರೇಷನ್ ಕಮಲಕ್ಕೆ ಒಳಗಾದ್ರಾ ಎಂಬ ಚರ್ಚೆಗಳು ಅರಂಭಗೊಂಡಿವೆ. ಇನ್ನು ಮುಂಬೈನಲ್ಲಿರುವ ಇತರೆ ಕಾಂಗ್ರೆಸ್ ನಾಯಕರ ನಡೆಯ ಮೇಲೆ ಎಲ್ಲರ ಕಣ್ಣಿದೆ. ಒಂದು ವೇಳೆ ಮುಂಬೈನಲ್ಲಿದ್ದಾರೆ ಎಂದು ಹೇಳಲಾಗುತ್ತಿರುವ 14 ಜನರು ರಾಜೀನಾಮೆ ನೀಡಿದ್ರೆ ದೋಸ್ತಿಗಳಿಗೆ ಕಂಟಕ ಎದುರಾಗುತ್ತಾ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

    ಸರ್ಕಾರ ರಚನೆಯಾಗಿ ಶಾಸಕರನ್ನು ಗಣನೆಗೆ ತೆಗೆದುಕೊಳ್ಳದೇ ಆಡಳಿತ ನಡೆಸುತ್ತಿದೆ. ಈ ಅಭದ್ರ ಸರ್ಕಾರದ ಆಡಳಿತ ವೈಖರಿಗೆ ಬೇಸತ್ತು ನಮ್ಮ ಬೆಂಬಲವನ್ನು ವಾಪಸ್ಸು ಪಡೆಯುತ್ತಿದ್ದೇವೆ ಎಂದು ಹೇಳಿದ್ದು, ಎಲ್ಲಿಯೂ ಬಿಜೆಪಿ ಸೇರುತ್ತೇನೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ದುರಂತ: 51 ಕಾಯಿ ಒಡೆದು ಹರಕೆ ತೀರಿಸಿದ ಭಕ್ತ

    ಸುಳ್ವಾಡಿ ದುರಂತ: 51 ಕಾಯಿ ಒಡೆದು ಹರಕೆ ತೀರಿಸಿದ ಭಕ್ತ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷಪ್ರಸಾದ ಸೇವಿಸಿ 15 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಕ್ತರೊಬ್ಬರು ಹೊತ್ತಿದ್ದ ಹರಕೆಯನ್ನು ಇಂದು ತೀರಿಸಿದ್ದಾರೆ.

    ಕನಕಪುರದ ನಾಗೇಶ ಹರಕೆ ಹೊತ್ತಿದ್ದ ಭಕ್ತ. ಇವರು ವಿಷ ಹಾಕಿದ ಪಾಪಿಗಳು ಸಿಗಲೆಂದು ಹರಕೆ ಹೊತ್ತಿದ್ದರು. ವಿಷ ಹಾಕಿದ ಪಾಪಿಗಳು 150 ಗಂಟೆಯೊಳಗೆ ಸಿಕ್ಕರೆ 51 ಕಾಯಿ ಒಡೆಯುತ್ತೇನೆಂದು ದೇವರ ಮುಂದೆ ಪ್ರಾರ್ಥನೆ ಮಾಡಿದ್ದರು.

    ವಿಷ ಹಾಕಿದ ಪಾಪಿಗಳು ಬಂಧನವಾದ ಬೆನ್ನಲ್ಲೇ ಇದೀಗ ನಾಗೇಶ್, ಸುಳ್ವಾಡಿ ಮಾರಮ್ಮ ದೇವಸ್ಥಾನದ ಮುಂದೆ ಕಾಯಿ ಒಡೆದು ತಾವು ಹೊತ್ತಿದ್ದ ಹರಕೆಯನ್ನು ತೀರಿಸಿದ್ದಾರೆ. ಇದೇ ವೇಳೆ ಇನ್ನು ಮುಂದೆ ದೇವಸ್ಥಾನ ಆವರಣದಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥನೆ ಸಲ್ಲಿಸಿದ್ರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಶ್, ಈ ದೇವಸ್ಥಾನಕ್ಕೆ ನಾವು ಕಳೆದ 15 ವರ್ಷಗಳಿಂದ ಬರುತ್ತಿದ್ದೇವೆ. 2008-09ರಿಂದ ದೇವಸ್ಥಾನಕ್ಕೆ ಜಾಸ್ತಿ ಬರುತ್ತಿದ್ದೇನೆ. ಈ ದೇವಸ್ಥಾನಕ್ಕೆ ಬಂದ ಬಳಿಕ ನನಗೆ ತುಂಬಾನೇ ಅನುಕೂಲವಾಗಿದೆ. ಕನಕಪುರ-ಬೆಂಗಳೂರು ಮಧ್ಯೆ ಬಿಡದಿ ತಟ್ಟೆ ಇಡ್ಲಿ ಅಂತ ನಮ್ಮದು ಹೋಟೆಲ್ ಇದೆ. ಅಂದು ಅದ್ಯಾರೋ 5 ಮಂದಿ ಸಮುಂಗಲೆಯರು ಮಹದೇಶ್ವರ ಬೆಟ್ಟಕ್ಕೆ ಹೋಗಿ 8 ಗಂಟೆ ಸುಮಾರಿಗೆ ನಮ್ಮ ಹೊಟೇಲ್ ಗೆ ಬಂದಿದ್ದರು. ಆವಾಗ ನನಗೆ ಮದುವೆಯಾಗಿರಲಿಲ್ಲ. ಆ ಸಂದರ್ಭದಲ್ಲಿ ಅವರು ಕಿಚ್ ಗುತ್ ಮಾರಮ್ಮನ ದೇವಸ್ಥಾನಕ್ಕೆ ಹೋಗು, ಒಳ್ಳೆಯದಾಗುತ್ತೆ ಅಂತ ಹೇಳಿದ್ದರು. ಹೀಗಾಗಿ ಇಲ್ಲಿಗೆ ಬರಲು ಆರಂಭಿಸಿದೆ. ಹಾಗೆಯೇ ಮನೆ ಕಟ್ಟಿಸಿದೆ, ಹೋಟೆಲ್ ಮಾಡಿದೆ. ರೇಷ್ಮೆನೂ ಬೆಳೆಯುತ್ತಿದ್ದೇನೆ. ಇವುಗಳ ಜೊತೆಗೆ ಕೃಷಿಯನ್ನೂ ಮಾಡುತ್ತಿದ್ದೇನೆ ಅಂದ್ರು.

    ಪ್ರಸಾದಕ್ಕೆ ವಿಷ ಹಾಕಿದ ವಿಚಾರ ನನಗೆ ತುಂಬಾನೇ ಬೇಸರ ತಂದಿದೆ. ಹೋದ ವಾರ ನಾವು ಬರಬೇಕಿತ್ತು. ಆದ್ರೆ ಬಂದಿರಲಿಲ್ಲ. ಒಂದು ವೇಳೆ ಬರುತ್ತಿದ್ದರೆ ನಾವೂ ಇರುತ್ತಿರಲಿಲ್ಲ. ಹೀಗಾಗಿ ಹೋದ ವಾರವೇ ನಾನು ಹರಕೆ ಕಟ್ಟಿಕೊಂಡೆ. 150 ಗಂಟೆಯಲ್ಲಿ ವಿಷ ಹಾಕಿದೋರು ಸಿಕ್ಕಿಬಿಟ್ರೆ ನಾನು 51 ಕಾಯಿ ಒಡೆಯುತ್ತೀನಿ ಎಂದು ಹೇಳಿದ್ದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಬಂದು 51 ಕಾಯಿ ಒಡೆದಿದ್ದೇನೆ ಅಂತ ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ಷುಲ್ಲಕ ವಿಚಾರಕ್ಕೆ ಕಲಹ- ವ್ಯಕ್ತಿ ಮೇಲೆ ಗುಂಡಿನ ದಾಳಿ

    ಕ್ಷುಲ್ಲಕ ವಿಚಾರಕ್ಕೆ ಕಲಹ- ವ್ಯಕ್ತಿ ಮೇಲೆ ಗುಂಡಿನ ದಾಳಿ

    ಮಡಿಕೇರಿ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಕಲಹ ನಡೆದ ಪರಿಣಾಮ ವ್ಯಕ್ತಿಯೋರ್ವ ಗುಂಡಿನ ದಾಳಿ ನಡೆಸಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

    ಜಿಲ್ಲೆಯ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದಲ್ಲಿ ನಾಗೇಶ್ ಹಾಗೂ ಮಾದಪ್ಪ ಎಂಬವರಿಗೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಮಾತಿಗೆ ಮಾತು ಬೆಳೆದಿದ್ದು, ನಾಗೇಶ್ ಮಾದಪ್ಪ ಎಂಬವರ ಮೇಲೆ 2 ಸುತ್ತು ಗುಂಡು ಹಾರಿಸಿ ದಾಳಿಗೆ ಮುಂದಾಗಿದ್ದಾನೆ. ದಾಳಿಯಿಂದ ತಪ್ಪಿಸಿಕೊಂಡ ಮಾದಪ್ಪ ಪ್ರಾಣಪಾಯದಿಂದ ಪಾರಾಗಿದ್ದಾರೆ.

    ಈ ಘಟನೆ ಬಗ್ಗೆ ಮಾದಪ್ಪ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ನಾಗೇಶ್‍ ನನ್ನ ಪೊಲೀಸರು ಬಂಧಿಸಿ ನಾಡ ಬಂದೂಕನ್ನ ವಶಕ್ಕೆ ಪಡೆದಿದ್ದಾರೆ.

  • ಚಲನಚಿತ್ರ ಖಳನಟ, ನಟ ಲಂಬೂ ನಾಗೇಶ್ ಇನ್ನಿಲ್ಲ

    ಚಲನಚಿತ್ರ ಖಳನಟ, ನಟ ಲಂಬೂ ನಾಗೇಶ್ ಇನ್ನಿಲ್ಲ

    ಬೆಂಗಳೂರು: ಚಲನಚಿತ್ರ ಖಳನಟ, ಕನ್ನಡ ಚಿತ್ರರಂಗದಲ್ಲಿ ಲಂಬು ನಾಗೇಶ್ ಎಂದೇ ಹೆಸರುವಾಸಿಯಾಗಿದ್ದ ಪೋಷಕ ನಟ ನಾಗೇಶ್ ಅವರು ನಿಧನರಾಗಿದ್ದಾರೆ.

    ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಾಗೇಶ್ ಅವರು ಶುಕ್ರವಾರ ರಾತ್ರಿ 8 ಗಂಟೆಯ ಸುಮಾರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

    ಕಳೆದ ಐದು ದಿನಗಳಿಂದ ನಗರದ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕನ್ನಡದಲ್ಲಿ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ನಾಗೇಶ್ ಅವರು ಚಿತ್ರರಂಗದಲ್ಲಿ ಲಂಬು ನಾಗೇಶ್ ಅಂತಲೇ ಪ್ರಸಿದ್ಧರಾಗಿದ್ದರು.

    1992 ರಲ್ಲಿ ರಿಲೀಸ್ ಆದ ‘ಪೃಥ್ವಿರಾಜ್’ ಸಿನಿಮಾದ ಮೂಲಕ ಲಂಬು ನಾಗೇಶ್ ಮೊದಲ ಬಾರಿಗೆ ಸಿನಿಮಾದಲ್ಲಿ ನಟನೆ ಮಾಡಿದ್ದರು. ದೇವರಾಜ್ ಅಭಿನಯದ ‘ಹುಲಿಯಾ’, ಸಾಯಿಕುಮಾರ್ ನಟನೆಯ ‘ಪೋಲೀಸ್ ಸ್ಟೋರಿ-2’ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳ ಪ್ರಮುಖ ಪಾತ್ರದಲ್ಲಿ ಲಂಬು ನಾಗೇಶ್ ಬಣ್ಣ ಹಚ್ಚಿದ್ದರು.

    ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೇ ಕನ್ನಡದ 50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಲಂಬು ನಾಗೇಶ್ ನಟಿಸಿದ್ದರು. ಇತ್ತೀಚೆಗೆ ಪ್ರಸಾರವಾಗುತ್ತಿದ್ದ ಅಶ್ವಿನಿ ನಕ್ಷತ್ರ ಹಾಗೂ ದುರ್ಗಾ ಧಾರಾವಾಹಿಗಳಲ್ಲೂ ನಾಗೇಶ್ ನಟಿಸಿದ್ದರು. ಬನಶಂಕರಿಯಲ್ಲಿ ಶನಿವಾರ ಅಂತ್ಯ ಸಂಸ್ಕಾರ ನೆರವೇರಿಸಲು ಕುಟುಂಬ ಸದಸ್ಯರು ಸಿದ್ಧತೆ ನಡೆಸುತ್ತಿದ್ದಾರೆ.