Tag: ನಾಗಾರ್ಜುನ

  • ರಶ್ಮಿಕಾ, ಶ್ರೀಲೀಲಾ ಬಳಿಕ ತೆಲುಗಿನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ಆಶಿಕಾ ರಂಗನಾಥ್

    ರಶ್ಮಿಕಾ, ಶ್ರೀಲೀಲಾ ಬಳಿಕ ತೆಲುಗಿನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ಆಶಿಕಾ ರಂಗನಾಥ್

    ಟಾಲಿವುಡ್ (Tollywood) ಅಂಗಳದಲ್ಲಿ ಕನ್ನಡದ ನಟಿಮಣಿಯರ ದರ್ಬಾರ್ ಜೋರಾಗಿದೆ. ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾ(Sreeleela), ನೇಹಾ ಶೆಟ್ಟಿ (Neha Shetty) ಬಳಿಕ ತೆಲುಗಿನಲ್ಲಿ ಬಂಪರ್ ಆಫರ್‌ನ ಆಶಿಕಾ ರಂಗನಾಥ್ ಗಿಟ್ಟಿಸಿಕೊಂಡಿದ್ದಾರೆ. ತೆಲುಗಿನ ಎವರ್‌ಗ್ರೀನ್ ಹೀರೋ ನಾಗಾರ್ಜುನಗೆ ಆಶಿಕಾ ನಾಯಕಿಯಾಗಿದ್ದಾರೆ. ಈ ಮೂಲಕ ಮತ್ತೆ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

    ಅಕ್ಕಿನೇನಿ ನಾಗಾರ್ಜುನ ಅವರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವಿಶೇಷ ದಿನದಂದು ಅವರ ಹೊಸ ಸಿನಿಮಾ ಘೋಷಣೆ ಆಯಿತು. ಈ ಚಿತ್ರಕ್ಕೆ ‘ನಾ ಸಾಮಿ ರಂಗ’ (Naa Saami Ranga) ಎನ್ನುವ ಶೀರ್ಷಿಕೆ ಇಡಲಾಗಿದೆ. ಸಖತ್ ರಗಡ್ ಅವತಾರದಲ್ಲಿ ನಾಗಾರ್ಜುನ (Nagarjuna) ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ವಿಜಯ್ ಬಿನ್ನಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀನಿವಾಸ ಚಿತ್ತುರಿ ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಆಶಿಕಾ ರಂಗನಾಥ್ (Ashika Ranganath) ಅವರನ್ನು ನಾಯಕಿಯನ್ನಾಗಿ (Heroine) ಆಯ್ಕೆ ಮಾಡಿದ್ದಾರೆ. ಇದನ್ನೂ ಓದಿ:ವಿಜಯ್ ‘ಲಿಯೋ’ ಸಿನಿಮಾ ಮುಂದೆ ಬರಲಿದೆಯಾ ಸಲಾರ್? ಇಲ್ಲಿದೆ ಅಪ್‌ಡೇಟ್

    ಇತ್ತೀಚೆಗೆ ಹೈದರಾಬಾದ್‌ನಲ್ಲಿ ಫೋಟೋಶೂಟ್ ನಡೆದಿದೆ ಎಂದು ತಿಳಿದು ಬಂದಿದೆ. ಆಶಿಕಾ ಅವರು ಸಖತ್ ಗ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ತೆಲುಗು ಭಾಷೆಯ ಮೇಲೆ ಹಿಡಿತ ಇದೆ. ನಟನೆಯಲ್ಲೂ ಅವರು ಪಳಗಿದ್ದಾರೆ. ಈ ಕಾರಣದಿಂದ ಆಶಿಕಾ ಅವರನ್ನು ಫೈನಲ್ ಮಾಡಲಾಗಿದೆ ಎನ್ನಲಾಗಿದೆ. ಈ ವರ್ಷ ಕಲ್ಯಾಣ್ ರಾಮ್ (Kalyan Ram) ನಟನೆಯ ತೆಲುಗಿನ ‘ಅಮಿಗೋಸ್’ ಚಿತ್ರದಲ್ಲಿ ಆಶಿಕಾ ನಟಿಸಿದ್ದರು. ಈಗ ಅವರಿಗೆ ಮತ್ತೊಂದು ಟಾಲಿವುಡ್ ಆಫರ್ ಬಂದಿದೆ.

    ಕ್ರೇಜಿ ಬಾಯ್ ಸಿನಿಮಾ ಮೂಲಕ ತೆಲುಗಿಗೆ ಪರಿಚಿತರಾದ ನಟಿ ಆಶಿಕಾ, ಕನ್ನಡದ ಸ್ಟಾರ್ ನಟರಿಗೆ ಜೋಡಿಯಾಗುವ ಮೂಲಕ ಗಮನ ಸೆಳೆದರು. ಈಗ ತೆಲುಗಿನಲ್ಲಿ ನಾಯಕಿನಾಗಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳಲು ತಯಾರಿ ಮಾಡ್ತಿದ್ದಾರೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾಗಿರುವ ಡಿಮ್ಯಾಂಡ್ ನಡುವೆ ಆಶಿಕಾ ಗೆದ್ದು ಬೀಗುತ್ತಾರಾ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೆಲುಗಿನ ಬಿಗ್ ಬಾಸ್‌ಗೆ ಕನ್ನಡದ ನಟಿ ಕಿರಣ್ ರಾಥೋಡ್

    ತೆಲುಗಿನ ಬಿಗ್ ಬಾಸ್‌ಗೆ ಕನ್ನಡದ ನಟಿ ಕಿರಣ್ ರಾಥೋಡ್

    ನ್ನಡದ ಕ್ಷಣ ಕ್ಷಣ, ಗನ್, ಮಾಣಿಕ್ಯ (Maanikya) ಸಿನಿಮಾಗಳ ಮೂಲಕ ಪರಿಚಿತರಾದ ನಟಿ ಕಿರಣ್ ರಾಥೋಡ್ (Kiran Rathod) ಇದೀಗ ತೆಲುಗಿನ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ದೊಡ್ಮನೆ ಆಟಕ್ಕೆ ಯಾರೆಲ್ಲಾ ಭಾಗಿಯಾಗುತ್ತಾರೆ ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಬಿಗ್ ಬಾಸ್ ಮನೆಗೆ (Bigg Boss House) ಹಾಟ್ ನಟಿ ಕಿರಣ್ ಎಂಟ್ರಿ ಕೊಟ್ಟಿದ್ದಾರೆ.

    ತೆಲುಗಿನ ಎವರ್ ಗ್ರೀನ್ ನಟ ನಾಗಾರ್ಜುನ (Nagarjuna) ನಿರೂಪಣೆಯ ತೆಲುಗು ಬಿಗ್ ಬಾಸ್ ಸೀಸನ್ 7ಕ್ಕೆ ಸೆ.3ರಂದು ಚಾಲನೆ ಸಿಕ್ಕಿದೆ. ಕನ್ನಡದ ಮಾಣಿಕ್ಯ ಚಿತ್ರದ ನಟಿ ಕಿರಣ್ ಬಿಗ್ ಬಾಸ್‌ನಲ್ಲಿದ್ದಾರೆ. ಜೊತೆಗೆ ಶಕೀಲಾ, ಅಗ್ನಿಸಾಕ್ಷಿ ನಟಿ ಶೋಭಾ ಶೆಟ್ಟಿ, ಪ್ರಿಯಾಂಕ ಜೈನ್, ಶಿವಾಜಿ, ದಾಮಿನಿ, ಸಂದೀಪ್, ನಟ ಗೌತಮ್ ಕೃಷ್ಣ ಸೇರಿದಂತೆ ಹಲವರು ಭಾಗಿದ್ದಾರೆ.

    ಈ ಸೀಸನ್  ಎಲ್ಲವೂ ಉಲ್ಟಾ ಪಲ್ಟಾ ನೀವು ಅಂದುಕೊಂಡಂತೆ ಇರಲ್ಲ ಅಂತಾ ನಾಗಾರ್ಜುನ ಈಗಾಗಲೇ ಕುತೂಹಲ ಕೆರಳಿಸಿದ್ದಾರೆ. ಟಾಸ್ಕ್, ಮನೆಯ ಮಾದರಿ, ಎಲ್ಲವೂ ಕೊಂಚ ಡಿಫರೆಂಟ್ ಆಗಿಯೇ ಇರಲಿದೆ ಎಂದು ಸುಳಿವು ಈಗಾಗಲೇ ನೀಡಿದ್ದಾರೆ. ಇದನ್ನೂ ಓದಿ:‘ಅರ್ಜುನ್ ರೆಡ್ಡಿ’ ನಿರ್ದೇಶಕನ ಸಿನಿಮಾದಲ್ಲಿ ವಿಜಯ್ ದೇವರಕೊಂಡ

    ನಿನ್ನೆ (ಸೆ.3) ಎಪಿಸೋಡ್ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮದಲ್ಲಿ ಖುಷಿ (Kushi) ಪ್ರಚಾರ ಕಾರ್ಯಕ್ಕೆ ವಿಜಯ್ ದೇವರಕೊಂಡ(Vijay Devarakonda) ಬಂದಿದ್ದರು. ಆಗ ವಿಜಯ್ ಬಳಿ ಸಮಂತಾ ಎಲ್ಲಿ ಎಂದು ನಾಗಾರ್ಜುನ ಕೇಳಿದ್ದು, ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಜಯ್ ದೇವರಕೊಂಡ ಬಳಿ ‘ಸಮಂತಾ ಎಲ್ಲಿ’ ಎಂದು ಪ್ರಶ್ನಿಸಿದ ನಾಗಾರ್ಜುನ

    ವಿಜಯ್ ದೇವರಕೊಂಡ ಬಳಿ ‘ಸಮಂತಾ ಎಲ್ಲಿ’ ಎಂದು ಪ್ರಶ್ನಿಸಿದ ನಾಗಾರ್ಜುನ

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ತೆಲುಗಿನಲ್ಲಿ ಶುರುವಾಗಿದೆ. ನಾಗಾರ್ಜುನ ನಿರೂಪಣೆಯಲ್ಲಿ ದೊಡ್ಮನೆ ಆಟ ಅದ್ದೂರಿಯಾಗಿ ಓಪನಿಂಗ್‌ ಪಡೆದಿದೆ. ಇದೀಗ ಬಿಗ್ ಬಾಸ್ ವೇದಿಕೆಗೆ ವಿಜಯ್ ದೇವರಕೊಂಡ (Vijay Devarakonda) ಎಂಟ್ರಿ ಕೊಟ್ಟಿದ್ದಾರೆ. ವಿಜಯ್ ಬಳಿ, ಸಮಂತಾ ಎಲ್ಲಿ ಎಂದು ಮಾಜಿ ಸೊಸೆ ಬಗ್ಗೆ ನಾಗಾರ್ಜುನ ಕೇಳಿದ್ದಾರೆ.

    ತೆಲುಗು ಬಿಗ್‌ಬಾಸ್ 7 ಇಂದು ಅಧಿಕೃತವಾಗಿ ಪ್ರಾರಂಭವಾಗುತ್ತಿದೆ. ಶೋ ಓಪನಿಂಗ್‌ನ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಸ್ಪರ್ಧಿಗಳು ಮನೆ ಒಳಗೆ ಸೇರಿದ್ದಾರೆ. ಆ ಎಪಿಸೋಡ್‌ನ ಪ್ರಸಾರ ಇಂದು (ಸೆಪ್ಟೆಂಬರ್ 3) ಆಗಲಿದೆ. ನಟ ವಿಜಯ್  ‘ಖುಷಿ’ (Kushi) ಸಿನಿಮಾದ ಪ್ರಚಾರಕ್ಕೆ ಬಿಗ್ ಬಾಸ್ ವೇದಿಕೆಗೆ ಹೋಗಿದ್ದಾರೆ.

    ಅಲ್ಲಿ ನಾಗಾರ್ಜುನ (Nagarjuna) ಅವರೊಟ್ಟಿಗೆ ತಮ್ಮ  ‘ಖುಷಿ’ ಸಿನಿಮಾ ಬಗ್ಗೆ ಪ್ರಚಾರ ಮಾಡಿದ್ದಾರೆ. ಈ ವೇಳೆ, ಸಿನಿಮಾದ ನಾಯಕಿ ಸಮಂತಾ(Samantha) ಬಗ್ಗೆ ನಾಗಾರ್ಜುನ, ವಿಜಯ್ ದೇವರಕೊಂಡ ಅವರ ಬಳಿ ಪ್ರಶ್ನೆ ಮಾಡಿದ್ದಾರೆ. ಸಮಂತಾ ಎಲ್ಲಿ ಎಂದು ವಿಚಾರಿಸಿದ್ದಾರೆ. ಅದಕ್ಕೆ ವಿಜಯ್ ಏನು ಉತ್ತರ ಕೊಟ್ಟರು ಎಂಬಿತ್ಯಾದಿ ಮಾಹಿತಿ ಎಪಿಸೋಡ್ ಪ್ರಸಾರವಾದ ಬಳಿಕವೇ ತಿಳಿಯಲಿದೆ. ಇದನ್ನೂ ಓದಿ:ಸೀರೆಯುಟ್ಟು ಅಪ್ಸರೆಯಂತೆ ಕಂಗೊಳಿಸಿದ ‘ಗೌರಿ’ ಸಾನ್ಯ ಅಯ್ಯರ್

    ನಾಗಚೈತನ್ಯ- ಸಮಂತಾ ಹಲವು ವರ್ಷಗಳು ಪ್ರೀತಿಸಿ ಗುರುಹಿರಿಯರ ಸಮ್ಮತಿಯ ಮೇರೆಗೆ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವೈಯಕ್ತಿಕ ಮನಸ್ತಾಪಗಳಿಂದ ಈ ಜೋಡಿ 2 ವರ್ಷಗಳ ಹಿಂದೆ ಬೇರೆಯಾದರು. ಈಗ ಇಬ್ಬರು ಸಿನಿಮಾ ಕೆರಿಯರ್‌ನತ್ತ ಮುಖ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಗಾರ್ಜುನ ಅಕ್ಕಿನೇನಿ ಜೊತೆ ತೆರೆಹಂಚಿಕೊಳ್ತಿದ್ದಾರೆ ರಶ್ಮಿಕಾ ಮಂದಣ್ಣ

    ನಾಗಾರ್ಜುನ ಅಕ್ಕಿನೇನಿ ಜೊತೆ ತೆರೆಹಂಚಿಕೊಳ್ತಿದ್ದಾರೆ ರಶ್ಮಿಕಾ ಮಂದಣ್ಣ

    ‘ಪುಷ್ಪ’ ಬ್ಯೂಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಮತ್ತೊಂದು ಬಂಪರ್ ಚಾನ್ಸ್ ಸಿಕ್ಕಿದೆ. ತೆಲುಗಿನ ಹೀರೋ ನಾಗಾರ್ಜುನ ಅಕ್ಕಿನೇನಿ (Nagarjuna Akkineni) ಜೊತೆ ರಶ್ಮಿಕಾ ಮಂದಣ್ಣ ತೆರೆಹಂಚಿಕೊಳ್ತಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ.

    ಇತ್ತೀಚಿಗಷ್ಟೇ ಧನುಷ್ 51ನೇ (D 51) ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ ಎಂದು ಅನೌನ್ಸ್ ಮಾಡಲಾಗಿತ್ತು. ಈಗ ನಾಗಾರ್ಜುನ ಜೊತೆ ನಟಿಸುವ ಅವಕಾಶವನ್ನ ನಟಿ ಬಾಚಿಕೊಂಡಿದ್ದಾರೆ. ಅದೇ ಬೇರೆ ಯಾವುದೋ ಪ್ರಾಜೆಕ್ಟ್ ಅಲ್ಲ, ಬದಲಾಗಿ ಧನುಷ್ (Dhanush) ಚಿತ್ರದಲ್ಲಿ ನಾಗಾರ್ಜುನ ಕೂಡ ಪ್ರಮುಖ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡದಿಂದ ಸಿಹಿಸುದ್ದಿ ಸಿಕ್ಕಿದೆ. ಇದನ್ನೂ ಓದಿ:ಇಂದ್ರಜಿತ್ ಲಂಕೇಶ್ ಪುತ್ರನ ಚಿತ್ರಕ್ಕೆ ‘ಗೌರಿ’ ಟೈಟಲ್ ಫೈನಲ್-‌ ಆ.31ಕ್ಕೆ ಮುಹೂರ್ತ ಫಿಕ್ಸ್

    ಧನುಷ್, ನಾಗಾರ್ಜುನ ಕಾಂಬೋದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಮೊದಲ ಬಾರಿಗೆ ಈ ಇಬ್ಬರು ಸ್ಟಾರ್‌ಗಳ ಜೊತೆಗೆ ತೆರೆಹಂಚಿಕೊಳ್ತಿದ್ದಾರೆ. ಈ ಚಿತ್ರಕ್ಕೆ ಲವ್‌ ಸ್ಟೋರಿ ಖ್ಯಾತಿಯ ಶೇಖರ್‌ ಕಮ್ಮುಲ ಡೈರೆಕ್ಷನ್‌ ಮಾಡ್ತಿದ್ದಾರೆ. ಹಾಗಾಗಿ ಸಿನಿಮಾ ಬಗ್ಗೆ ಸಾಕಷ್ಟು ಕೌತುಕ ಮನೆ ಮಾಡಿದೆ. ಮೂವರ ಕಾಂಬೋ ತೆರೆಯ ಮೇಲೆ ನೋಡಲು ಅಭಿಮಾನಿಗಳು ಎದುರುನೋಡ್ತಿದ್ದಾರೆ.

    ಪುಷ್ಪ 2, ಅನಿಮಲ್ (Animal) ಸಿನಿಮಾದ ನಂತರ ಟೈಗರ್ ಶ್ರಾಫ್ ಜೊತೆಗಿನ ಪ್ರಾಜೆಕ್ಟ್, ವಿಕ್ರಮ್- ವಿಜಯ್ ಸೇತುಪತಿ ಜೊತೆ ಹೊಸ ಸಿನಿಮಾ, ಇದೀಗ ಧನುಷ್ ಜೊತೆಗಿನ ಚಿತ್ರ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ ಖಾತೆಯಲ್ಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Telugu Promo: ಇಲ್ಲಿ ಎಲ್ಲವೂ ಉಲ್ಟಾ ಪಲ್ಟಾ ಎಂದು ಡೈಲಾಗ್‌ ಹೊಡೆದ ನಾಗಾರ್ಜುನ

    Bigg Boss Telugu Promo: ಇಲ್ಲಿ ಎಲ್ಲವೂ ಉಲ್ಟಾ ಪಲ್ಟಾ ಎಂದು ಡೈಲಾಗ್‌ ಹೊಡೆದ ನಾಗಾರ್ಜುನ

    ಬಿಗ್ ಬಾಸ್ ತೆಲುಗು ಸೀಸನ್ 7ಕ್ಕೆ (Bigg Boss Telugu 7) ಕೌಂಟ್ ಡೌನ್ ಶುರುವಾಗಿದೆ. ಇಲ್ಲಿ ಎಲ್ಲವೂ ಉಲ್ಟಾ ಪಲ್ಟಾ ಎಂದು ಖಡಕ್ ಡೈಲಾಗ್ ಹೊಡೆದು ನಟ ನಾಗಾರ್ಜುನ್ (Nagarjuna) ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಹೊಸ ಸೀಸನ್‌ನಲ್ಲಿ ಸಾಕಷ್ಟು ಅಚ್ಚರಿಯ ವಿಚಾರಗಳು ಇರಲಿವೆ. ಸದ್ಯ ಪ್ರೋಮೋದಿಂದ ಬಿಗ್‌ ಬಾಸ್‌ ಸೀಸನ್‌ ಸಖತ್ ಸದ್ದು ಮಾಡುತ್ತಿದೆ.

    ತೆಲುಗಿನಲ್ಲಿ ದೊಡ್ಮನೆ ಆಟಕ್ಕೆ ದಿನಗಣನೆ ಶುರುವಾಗಿದೆ. ಬಿಗ್ ಬಾಸ್ (Bigg Boss) ಶೋಗಾಗಿಯೇ ಕಾಯುತ್ತಿದ್ದ ಅಭಿಮಾನಿಗಳಿಗೆ ಅಕ್ಕಿನೇನಿ ನಾಗಾರ್ಜುನ ಅವರು ಸಿಹಿಸುದ್ದಿ ನೀಡಿದ್ದಾರೆ. ಈಗಾಗಲೇ ಆರು ಸೀಸನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಹೊಸ ಸೀಸನ್  ಪ್ರೋಮೋ ರಿಲೀಸ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    ಓರ್ವ ಹುಡುಗ ಕಂದಕದಲ್ಲಿ ಬೀಳುವವನಿರುತ್ತಾನೆ. ಆತನ ರಕ್ಷಣೆ ಮಾಡಲು ಹುಡುಗಿ ನಿಂತಿರುತ್ತಾಳೆ. ಆದರೆ, ಆತನ ಬದುಕಿಸೋಕೆ ಆಕೆಗೆ ಆಗುವುದೇ ಇಲ್ಲ. ಇಲ್ಲಿಗೆ ದಿ ಎಂಡ್ ಅಲ್ಲ, ಇಲ್ಲಿಂದಲೇ ಆರಂಭ ಎಂದು ಡೈಲಾಗ್ ಹೊಡೆಯುತ್ತಾರೆ ಅಕ್ಕಿನೇನಿ ನಾಗಾರ್ಜುನ. ಈ ರೀತಿಯಲ್ಲಿ ತೆಲುಗು ಬಿಗ್ ಬಾಸ್ ಪ್ರೋಮೋ ಸಖತ್ ಫನ್ನಿಯಾಗಿ ಮೂಡಿ ಬಂದಿದೆ. ಇದನ್ನೂ ಓದಿ:ನಟಿ ಜಾಕ್ವೆಲಿನ್ ಹುಟ್ಟುಹಬ್ಬಕ್ಕೆ ಜೈಲಿನಿಂದಲೇ ಭಾವುಕ ಪತ್ರ ಬರೆದ ಆರೋಪಿ ಸುಕೇಶ್

    ಸೆಪ್ಟೆಂಬರ್‌ ಮೊದಲ ವಾರದಲ್ಲಿ ಬಿಗ್ ಬಾಸ್ ತೆಲುಗು ಶುರುವಾಗಲಿದೆ. ಜಬರ್‌ದಸ್ತ್ ವರ್ಷ, ಮೋಹನ್ ಬಂಗಾರರಾಜು, ಕನ್ನಡದ ನಟಿಯರಾದ ಶೋಭಾ ಶೆಟ್ಟಿ (Shobha Shetty), ಐಶ್ವರ್ಯ (Aishwarya) ಸೇರಿದಂತೆ ಹಲವರು ಬಿಗ್ ಬಾಸ್ (Bigg Boss) ಮನೆಗೆ ಕಾಲಿಡಲಿದ್ದಾರೆ ಎನ್ನಲಾಗಿದೆ.

    ಕನ್ನಡ ಬಿಗ್ ಬಾಸ್‌ಗೂ ಶೀಘ್ರದಲ್ಲೇ ಚಾಲನೆ ಸಿಗಲಿದೆ. ಸದ್ಯ ಸುದೀಪ್ ‘K 46’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಳಿಕ ಸೆಪ್ಟೆಂಬರ್‌ನಲ್ಲಿ ಸುದೀಪ್ ನಿರೂಪಣೆಯ ಶೋ ಶುರುವಾಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್ ಬಾಸ್ ಪ್ರೋಮೋ ಔಟ್- ದೊಡ್ಮನೆ ಆಟಕ್ಕೆ ಆ್ಯಂಕರ್ ಫಿಕ್ಸ್

    ಬಿಗ್ ಬಾಸ್ ಪ್ರೋಮೋ ಔಟ್- ದೊಡ್ಮನೆ ಆಟಕ್ಕೆ ಆ್ಯಂಕರ್ ಫಿಕ್ಸ್

    ಟಿವಿ ಪ್ರೇಕ್ಷಕರಿಗೆ ಇಲ್ಲಿದೆ ಸಿಹಿಸುದ್ದಿ. ಅಭಿಮಾನಿ ಪ್ರಭುಗಳ ನೆಚ್ಚಿನ ಶೋ ಆಗಿರುವ ಬಿಗ್ ಬಾಸ್‌ಗೆ (Bigg Boss) ಮುಹೂರ್ತ ಫಿಕ್ಸ್ ಆಗಿದೆ. ಬಿಗ್ ಬಾಸ್‌ಗಾಗಿಯೇ ಕಾದು ಕೂರುವ ಫ್ಯಾನ್ಸ್‌ಗೆ ಪ್ರೋಮೋ ರಿವೀಲ್ ಮಾಡುವ ಮೂಲಕ ಅಧಿಕೃತ ಅಪ್‌ಡೇಟ್ ಸಿಕ್ಕಿದೆ. ತೆಲುಗು ಬಿಗ ಬಾಸ್‌ಗೆ ನಾಗಾರ್ಜುನ್ ಅವರೇ ನಿರೂಪಕರಾಗಿ ಫಿಕ್ಸ್ ಆಗಿದ್ದಾರೆ. ಇದನ್ನೂ ಓದಿ:ಟೊಮ್ಯಾಟೋ ವಿಚಾರದಲ್ಲಿ ಕ್ಷಮೆ ಕೇಳಿದ ನಟ ಸುನೀಲ್ ಶೆಟ್ಟಿ

    ತೆಲುಗು ‘ಬಿಗ್ ಬಾಸ್ 6’ ಸಕ್ಸಸ್‌ಫುಲ್ ಸೀಸನ್ ಆಗಿ ಗೆದ್ದಿತ್ತು. ಈಗ ಬಿಗ್ ಬಾಸ್ 7ʼಕ್ಕೆ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಸೀಸನ್ 7 ಬರೋದರ ಬಗ್ಗೆ ವಾಹಿನಿ ಅಧಿಕೃತ ಅಪ್‌ಡೇಟ್‌ ಕೊಟ್ಟಿದೆ. ಇದರ ಬೆನ್ನಲ್ಲೇ ಯಾರೆಲ್ಲಾ ಕಲಾವಿದರು ಬರಬಹುದು ಎಂಬ ಚರ್ಚೆ ಶುರುವಾಗಿದೆ. ಕನ್ನಡದ ‘ಅಗ್ನಿಸಾಕ್ಷಿ’ (Agnisakshi) ನಟಿ ಶೋಭಾ ಶೆಟ್ಟಿ (Shobha Shetty) ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆ ಇದೆ ಎಂಬ ಸುದ್ದಿಯಿದೆ. ಟಿಕ್‌ ಟಾಕ್‌ ಸ್ಟಾರ್ಸ್‌, ವಿವಾದದಲ್ಲಿ ಸುದ್ದಿಯಾದವರಿಗೆ ದೊಡ್ಮನೆ ಆಟಕ್ಕೆ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ.

    ಈ ಸೀಸನ್‌ನಲ್ಲೂ ಟಾಲಿವುಡ್ ಸ್ಟಾರ್ ನಟ ನಾಗಾರ್ಜುನ (Nagarjuna) ಅವರೇ ನಿರೂಪಕರಾಗಿ ಬಂದಿರೋದು ಫ್ಯಾನ್ಸ್ಗೆ ಖುಷಿ ಕೊಟ್ಟಿದೆ. 7ನೇ ಸೀಸನ್‌ನ ನೋಡೋಕೆ ಕಾತರದಿಂದ ಬಿಗ್ ಬಾಸ್ ಫ್ಯಾನ್ಸ್ ಕಾಯ್ತಿದ್ದಾರೆ. ಹೊಸ ಸೀಸನ್‌ಗಾಗಿ ಮನೆಯ ವಿನ್ಯಾಸ, ಹೊಸ ನಿಯಮಗಳನ್ನು ತರಲು ಪ್ಲ್ಯಾನ್ ಮಾಡಲಾಗಿದೆ. ಈ ಹಿಂದಿನ ಟಾಸ್ಕ್‌ಗಳ ಬದಲು ಹೊಸ ಬಗೆಯ ಟಾಸ್ಕ್‌ಗಳನ್ನ ಸೀಸನ್ 7ರಲ್ಲಿ ನೋಡಬಹುದು.

    ಬಹುಭಾಷೆಗಳಲ್ಲಿ ಬಿಗ್ ಬಾಸ್ ಮೂಡಿ ಬರುತ್ತಿದೆ. ಈ ವರ್ಷದ ಆರಂಭದಲ್ಲಿ ಕನ್ನಡದ ಬಿಗ್ ಬಾಸ್ ಸೀಸನ್ ಮುಗಿದಿತ್ತು. ಸುದೀಪ್(Sudeep) ನಿರೂಪಣೆಯಲ್ಲಿ ಅದ್ಭುತವಾಗಿ ಮೂಡಿ ಬಂದಿತ್ತು. ಈಗ ಕನ್ನಡದ ಒಟಿಟಿ ಬಿಗ್ ಬಾಸ್‌ಗೆ ಸಕಲ ತಯಾರಿ ನಡೆಯುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೊಸ ಮನೆ ಖರೀದಿಸಿದ ತೆಲುಗು ನಟ ನಾಗಚೈತನ್ಯ

    ಹೊಸ ಮನೆ ಖರೀದಿಸಿದ ತೆಲುಗು ನಟ ನಾಗಚೈತನ್ಯ

    ಟಾಲಿವುಡ್ (Tollywood) ಅಂಗಳದ ಯಂಗ್ ಹೀರೋ ನಾಗಚೈತನ್ಯ ಹೊಸ ಮನೆ ಖರೀದಿಸಿದ್ದಾರೆ. ಯುಗಾದಿ ಹಬ್ಬ ಬುಧವಾರದಂದು (ಮಾ.22) ಹೊಸ ಮನೆಗೆ (House Warming) ಕಾಲಿಟ್ಟಿದ್ದಾರೆ.

    ಸೌತ್ ನಟಿ ಸಮಂತಾ (Samantha) ಅವರನ್ನು ಪ್ರೀತಿಸಿ ನಾಗಚೈತನ್ಯ ಮದುವೆಯಾಗಿದ್ದರು. 2021ರಲ್ಲಿ ಡಿವೋರ್ಸ್ ಆಗಿರುವ ವಿಚಾರ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಸ್ಯಾಮ್ ಜೊತೆಗಿನ ಸಂಬಂಧಕ್ಕೆ ಬ್ರೇಕ್ ಹಾಕಿದ ಮೇಲೆ ಹೆಚ್ಚಾಗಿ ಹೋಟೆಗಳಲ್ಲಿ ಉಳಿಯುತ್ತಿದ್ದರು.

    ಇತ್ತೀಚಿಗೆ ನಟ ನಾಗಚೈತನ್ಯ ಹೊಸ ಮನೆ ಖರೀದಿಸಿದ್ದಾರೆ. ನಾಗಚೈತನ್ಯ ಕುಟುಂಬಸ್ಥರು ಆಪ್ತರು ಅಷ್ಟೇ ಈ ಶುಭಕಾರ್ಯದಲ್ಲಿ ಭಾಗಿಯಾಗಿದ್ದರು. ಹೈದರಾಬಾದ್‌ನಲ್ಲಿ ತಂದೆ ನಾಗಾರ್ಜುನ (Nagarjuna) ಅವರ ಮನೆಯ ಸಮೀಪವೇ ಹೊಸ ಮನೆಯನ್ನ ತನ್ನ ಅಭಿರುಚಿಗೆ ತಕ್ಕಂತೆ ವಿನ್ಯಾಸ ಮಾಡಿಸಿದ್ದಾರೆ.

    ಇನ್ನೂ ನಾಗಚೈತನ್ಯ ಹೊಸ ಮನೆಯ ಶುಭ ಕಾರ್ಯಕ್ಕೆ ಹೊರಗಿನವರನ್ನು ಕರೆದಿರಲಿಲ್ಲ. ಆದರೆ ಮುಖ್ಯ ಅತಿಥಿಯಾಗಿ `ಪ್ರೇಮಂ’ ನಿರ್ದೇಶಕ ಚಂದು ಮೊಂಡೇಟಿ ಭಾಗಿಯಾಗಿ ಶುಭಹಾರೈಸಿದ್ದರು.

  • ಬಿಗ್ ಬಾಸ್ ಸ್ಪರ್ಧಿ ಗಂಗವ್ವಗೆ ಮನೆ ಕಟ್ಟಲು ಸಹಾಯ ಮಾಡಿದ ನಟ ನಾಗಾರ್ಜುನ

    ಬಿಗ್ ಬಾಸ್ ಸ್ಪರ್ಧಿ ಗಂಗವ್ವಗೆ ಮನೆ ಕಟ್ಟಲು ಸಹಾಯ ಮಾಡಿದ ನಟ ನಾಗಾರ್ಜುನ

    ತೆಲುಗಿನ ಜನಪ್ರಿಯ ಯೂಟ್ಯೂಬರ್, ಮಾಜಿ ಬಿಗ್ ಬಾಸ್ (Bigg Boss) ಸ್ಪರ್ಧಿ ಗಂಗವ್ವ (Gangavva) ಅವರ ಸಂಕಷ್ಟಕ್ಕೆ ಟಾಲಿವುಡ್ (Tollywood) ನಟ ನಾಗಾರ್ಜುನ (Nagarjuna) ಸಾಥ್ ನೀಡಿದ್ದಾರೆ. ಮನೆ ಕಟ್ಟಲು ಗಂಗವ್ವ ಅವರಿಗೆ ನಟ ಕೈಜೋಡಿಸಿದ್ದಾರೆ. ಇದನ್ನೂ ಓದಿ: ರೆಡ್ ಲೆಹೆಂಗಾ ಧರಿಸಿ ನಟಿ ನೋರಾ ಜೊತೆ ಕುಣಿದ ಅಕ್ಷಯ್ ಕುಮಾರ್ ಟ್ರೋಲ್

     

    View this post on Instagram

     

    A post shared by Milkuri Gangavva (@gangavva)

    ಕಿರುತೆರೆ ಬಿಗ್ ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಯಾಗಿ ಗಂಗವ್ವ ಗಮನ ಸೆಳೆದಿದ್ದರು. ಪ್ರೇಕ್ಷಕರ ಪ್ರೀತಿಯಷ್ಟೇ ಪಡೆದಿರೋದು ಮಾತ್ರವಲ್ಲ ನಾಗಾರ್ಜುನ ಅವರ ಸ್ನೇಹವನ್ನ ಕೂಡ ಸಂಪಾದಿಸಿದ್ದರು. ದೊಡ್ಮನೆ ವೇದಿಕೆಯಲ್ಲಿ ತಮಗೆ ಮನೆ ಕಟ್ಟುವ ಆಸೆಯಿದೆ ಎಂದು ಅವರು ತಿಳಿಸಿದ್ದರು. ಅದರಂತೆಯೇ ಗಂಗವ್ವ ಅವರ ಕನಸಿಗೆ ನಟ ಸಹಾಯ ಮಾಡಿದ್ದಾರೆ.

     

    View this post on Instagram

     

    A post shared by Milkuri Gangavva (@gangavva)

    ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಮನೆ (House) ಕಟ್ಟಲು ಎಷ್ಟು ಖರ್ಚಾಯಿತು, ಹಣ ಹೊಂದಿಸಿದ್ದು ಹೇಗೆ? ನಟ ನಾಗಾರ್ಜುನ ಎಷ್ಟು ಹಣ ಕೊಟ್ಟರು ಇತ್ಯಾದಿ ವಿಷಯಗಳ ಬಗ್ಗೆ ಗಂಗವ್ವ ಮಾತನಾಡಿದ್ದಾರೆ.

     

    View this post on Instagram

     

    A post shared by Milkuri Gangavva (@gangavva)

    ಮನೆ ಕಟ್ಟಲು 20 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಹೇಳಿರುವ ಗಂಗವ್ವ, ನಟ ನಾಗಾರ್ಜುನ ಏಳು ಲಕ್ಷ ರೂಪಾಯಿ ಹಣವನ್ನು ಮನೆ ಕಟ್ಟಲೆಂದು ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ತಾನು ಬಿಗ್‌ಬಾಸ್‌ನಲ್ಲಿ ಭಾಗವಹಿಸಿ ಐದು ವಾರ ಇದ್ದಿದ್ದಕ್ಕೆ ಸಂಭಾವನೆಯಾಗಿ ಹತ್ತು ಲಕ್ಷ ಹಣ ಕೊಟ್ಟಿದ್ದರು. ಎಲ್ಲವನ್ನೂ ಸೇರಿಸಿ ಮನೆ ಕಟ್ಟಿಸಿದ್ದಾಗಿ ಗಂಗವ್ವ ಹೇಳಿದ್ದಾರೆ. ಇದೀಗ ನಾಗಾರ್ಜುನ ಅವರ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

    ಇನ್ನೂ ಬಿಗ್‌ ಬಾಸ್‌ ಶೋ ಬಳಿಕ ತೆಲುಗಿನ ಸಾಕಷ್ಟು ಸಿನಿಮಾಗಳಲ್ಲಿ ಗಂಗವ್ವ ನಟಿಸಿದ್ದಾರೆ. ಚಿತ್ರರಂಗದಲ್ಲಿ ಗಂಗವ್ವ ಆಕ್ಟೀವ್‌ ಆಗಿದ್ದಾರೆ.

  • ಮಗನ ವಿಚ್ಛೇದನಕ್ಕೆ ನಿಜವಾದ ಕಾರಣವನ್ನು ಬಹಿರಂಗ ಪಡಿಸಿದ ನಾಗಾರ್ಜುನ

    ಮಗನ ವಿಚ್ಛೇದನಕ್ಕೆ ನಿಜವಾದ ಕಾರಣವನ್ನು ಬಹಿರಂಗ ಪಡಿಸಿದ ನಾಗಾರ್ಜುನ

    ಹೈದ್ರಾಬಾದ್: ಮಗ ಮತ್ತು ಸಮಂತಾ ರುತ್ ಪ್ರಭು ಅವರ ವಿಚ್ಛೇದನಕ್ಕೆ ಬಲವಾದ ಕಾರಣವೇನು ಎಂಬುದನ್ನು ನಾಗಚೈತನ್ಯ ತಂದೆ ನಾಗಾರ್ಜುನ ಅಕ್ಕಿನೇನಿ ಬಹಿರಂಗ ಪಡಿಸಿದ್ದಾರೆ.

    ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸಮಂತಾ ವಿಚ್ಛೇದನಕ್ಕೆ ಮೊದಲು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ನಾಗಚೈತನ್ಯ ತನ್ನ ಮಾಜಿ ಪತ್ನಿಯ ನಿರ್ಧಾರವನ್ನು ಒಪ್ಪಿಕೊಂಡರು. ಆದರೆ ಚೈತನ್ಯ ನನ್ನ ಬಗ್ಗೆ ತುಂಬಾ ಚಿಂತಿತರಾಗಿದ್ದರು. ನಾನು ಏಲ್ಲಿ ಈ ವಿಷಯವನ್ನು ಕೇಳಿ ಯೋಚಿಸುತ್ತೇನೆ, ತನ್ನ ಕುಟುಂಬದವರಿಗೆ ಎಲ್ಲಿ ಘಾಸಿ ಆಗುತ್ತದೆ ಅಂತ ತನ್ನಲ್ಲಿಯೇ ಕೊರಗುತ್ತಿದ್ದರು ಎಂದು ಹೇಳಿದರು.

    ವಿಚ್ಛೇದನದ ನಂತರ ಅವರು ನಾನು ಚಿಂತಿತನಾಗಿದ್ದೇನೆ ಅಂತ ನನಗೆ ತುಂಬಾ ಸಾಂತ್ವನ ಹೇಳಿದರು. ಅವರಿಬ್ಬರೂ ಮದುವೆ ಜೀವನದಲ್ಲಿ 4 ವರ್ಷಗಳಿಂಂದ ಜೊತೆಯಾಗಿದ್ದರು. ಆದರೆ ಅವರ ನಡುವೆ ಯಾವುದೇ ಸಮಸ್ಯೆ ಇರಲಿಲ್ಲ. ಇಬ್ಬರೂ ತುಂಬಾ ಹತ್ತಿರವಾಗಿದ್ದರು. ಇದನ್ನೂ ಓದಿ: ಜೂ.ಎನ್‍ಟಿಆರ್ ಜೊತೆ ನಟಿಸಬೇಕು ಎಂದಾಗ ಶಾಕ್ ಆಗಿತ್ತು: ರಾಮ್ ಚರಣ್

    ಅವರಿಬ್ಬರ ನಡುವೆ ವಿಚ್ಛೇದನದ ವಿಷಯ ಹೇಗೆ ಬಂದಿತು ಅಂತ ನನಗೆ ತಿಳಿದಿಲ್ಲ. ಅವರಿಬ್ಬರು ಈ ನಿರ್ಧಾರಕ್ಕೆ ಬರುವ ಮುನ್ನ 2021 ರ ಹೊಸ ವರ್ಷವನ್ನು ಒಟ್ಟಿಗೆ ಆಚರಿಸಿದ್ದರು. ಅದರ ಬಳಿಕ ಸಮಸ್ಯೆಗಳು ಉದ್ಭವಿಸಿವೆ ಅಂತ ತೋರುತ್ತದೆ ಎಂದರು. ಇದನ್ನೂ ಓದಿ: ಗುಡಿಸಲಿನ ಮೇಲೆ ಬಿದ್ದ ಟ್ರಕ್ – ಮೂವರು ಅಪ್ರಾಪ್ತ ಸಹೋದರಿಯರು ಬಲಿ

    ಈ ಹಿಂದೆ ಬಾಲಿವುಡ್ ಹಂಗಾಮಾದೊಂದಿಗಿನ ಸಂದರ್ಶನವೊಂದರಲ್ಲಿ, ನಾಗ ಚೈತನ್ಯರಿಗೆ ತಮ್ಮ ಆನ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಉತ್ತಮವಾಗಿ ಹಂಚಿಕೊಳ್ಳುವ ನಟಿಯನ್ನು ಹೆಸರಿಸಲು ಕೇಳಿಕೊಂಡಿದ್ದರು. ಈ ವೇಳೆ ಅವರು ತಮ್ಮ ಮಾಜಿ ಪತ್ನಿ ಸಮಂತಾ ಹೆಸರನ್ನು ತೆಗೆದುಕೊಂಡರು. ಕಳೆದ ವರ್ಷದ ಅಕ್ಟೋಬರ್, ಸಮಂತಾ ಮತ್ತು ನಾಗ ಚೈತನ್ಯ ಒಂದೇ ರೀತಿಯ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ವಿಚ್ಛೇದನ ನಿರ್ಧಾರವನ್ನು ಪ್ರಕಟಿಸಿದ್ದರು.

  • ನಟ ನಾಗಾರ್ಜುನ ಫಾರ್ಮ್ ಹೌಸ್‍ನಲ್ಲಿ ಅಸ್ಥಿಪಂಜರ ಪತ್ತೆ

    ನಟ ನಾಗಾರ್ಜುನ ಫಾರ್ಮ್ ಹೌಸ್‍ನಲ್ಲಿ ಅಸ್ಥಿಪಂಜರ ಪತ್ತೆ

    ಹೈದರಾಬಾದ್: ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ ಅವರ ಫಾರ್ಮ್ ಹೌಸ್‍ನಲ್ಲಿ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾಗಿದೆ.

    ಪಾಪಿರೆಡ್ಡಿಗುಡ್ಡ ಗ್ರಾಮದಲ್ಲಿ ನಾಗಾರ್ಜುನ ಅವರ 40 ಎಕರೆ ಜಮೀನಿದೆ. ಸುಮಾರು ದಿನಗಳಿಂದ ಈ ಜಮೀನ್ ಅನ್ನು ಉಪಯೋಗಿಸುತ್ತಿರಲಿಲ್ಲ. ಆದರೆ ಈಗ ಇದೇ ಜಮೀನಿನಲ್ಲಿ ಸಿಕ್ಕ ಅಜ್ಞಾತ ಶವವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

    ಪೊಲೀಸರ ಪ್ರಕಾರ 40 ಎಕರೆ ಜಮೀನಿನಲ್ಲಿ ನಾಗಾರ್ಜುನ ಪತ್ನಿ ಅಮಲಾ ಅವರು ಕೃಷಿ ಮಾಡುವ ಆಸಕ್ತಿ ವಹಿಸಿದ್ದರು. ಹೀಗಾಗಿ ಅವರು ಕೆಲಸಗಾರರನ್ನು ಜಮೀನಿಗೆ ಕಳುಹಿಸಿ ಭೂಮಿ ಸಿದ್ಧಪಡಿಸಲು ಹೇಳಿದ್ದರು. ಕೆಲಸಗಾರರು ಜಮೀನು ಸಿದ್ಧಪಡಿಸಲು ಹೋದ ವೇಳೆ ಅಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಮೃತದೇಹ ನೋಡುತ್ತಿದ್ದಂತೆ ಕೆಲಸಗಾರರು ಪೊಲೀಸರಿಗೆ ತಿಳಿಸಿದ್ದಾರೆ. ಈ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಲವು ದಿನಗಳಿಂದ ಈ ಜಮೀನು ಕೃಷಿಗೆ ಬಳಸದ ಪರಿಣಾಮ ಇಷ್ಟು ದಿನ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಈ ಸ್ಥಳದಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಸದ್ಯ ಈ ಬಗ್ಗೆ ಸೆಕ್ಷನ್ 174 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯ ಭಾಗವಾಗಿ ಕಾಣೆಯಾದವರ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಈ ಬಗ್ಗೆ ಇದುವರೆಗೂ ಅಕ್ಕಿನೇನಿ ಕುಟುಂಬ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.