Tag: ನಾಗಾರ್ಜುನ ಅಕ್ಕಿನೇನಿ

  • ಧನುಷ್, ರಶ್ಮಿಕಾ ಮಂದಣ್ಣ ನಟನೆಯ ‘ಕುಬೇರ’ ಚಿತ್ರದ ಗ್ಲಿಂಪ್ಸ್ ರಿಲೀಸ್

    ಧನುಷ್, ರಶ್ಮಿಕಾ ಮಂದಣ್ಣ ನಟನೆಯ ‘ಕುಬೇರ’ ಚಿತ್ರದ ಗ್ಲಿಂಪ್ಸ್ ರಿಲೀಸ್

    ಟ್ಯಾಲೆಂಟೆಡ್ ನಟ ಧನುಷ್ (Dhanush) ಜೊತೆ ರಶ್ಮಿಕಾ ಮಂದಣ್ಣ (Rashmika Mandanna) ಜೋಡಿಯಾಗಿ ನಟಿಸಿರುವ ‘ಕುಬೇರ’ ಸಿನಿಮಾದ ಗ್ಲಿಂಪ್ಸ್ ರಿಲೀಸ್ ಆಗಿದೆ. ‘ಕುಬೇರ’ (Kubera) ಸಿನಿಮಾದ ಗ್ಲಿಂಪ್ಸ್ ಕ್ಯೂರಿಯಸ್ ಆಗಿ ಮೂಡಿ ಬಂದಿದೆ. ಇದನ್ನೂ ಓದಿ:ಸರ್ಕಾರದಲ್ಲಿ ಉನ್ನತ ಸ್ಥಾನ ಕೊಡಿಸುವುದಾಗಿ ವಂಚನೆ – ನಟಿ ದಿಶಾ ಪಟಾನಿ ತಂದೆಗೆ 25 ಲಕ್ಷ ರೂ. ಪಂಗನಾಮ

    ಧನುಷ್, ರಶ್ಮಿಕಾ, ನಾಗಾರ್ಜುನ ಅಕ್ಕಿನೇನಿ (Nagarjuna Akkineni) ನಟನೆಯ ‘ಕುಬೇರ’ ಚಿತ್ರದ ಗ್ಲಿಂಪ್ಸ್ ಅನಾವರಣ ಆಗಿದೆ. ಇದರಲ್ಲಿ ಡೈಲಾಗ್‌ಗಳ ಅಬ್ಬರವಿಲ್ಲದೇ ತುಣುಕು ಮತ್ತು ಸೌಂಡ್‌ನಿಂದಲೇ ಎಲ್ಲರ ಗಮನ ಸೆಳೆದಿದೆ. ಧನುಷ್ ಭಿಕ್ಷುಕನಾಗಿ ನಟಿಸಿದರೆ, ರಶ್ಮಿಕಾ ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ನಾಗಾರ್ಜುನ ಪವರ್‌ಫುಲ್ ಪಾತ್ರಕ್ಕೆ ಜೀವ ತುಂಬಿದ್ದಾರೆ.

    ‘ಲವ್ ಸ್ಟೋರಿ’ ಖ್ಯಾತಿಯ ಶೇಖರ್ ಕಮ್ಮುಲ ಅವರು ಕುಬೇರ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಧನುಷ್ ಮತ್ತು ರಶ್ಮಿಕಾ ಮೊದಲ ಬಾರಿಗೆ ಒಟ್ಟಾಗಿ ನಟಿಸಿರುವ ಕಾರಣ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಕುರಿತು ಚಿತ್ರತಂಡ ಮಾಹಿತಿ ನೀಡಲಿದೆ.

    ಇನ್ನೂ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’, ‘ಛಾವಾ’ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ರೈನ್‌ಬೋ, ದಿ ಗರ್ಲ್ಫ್ರೆಂಡ್, ತಮಾ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಅವರ ಕೈಯಲ್ಲಿವೆ.

  • ನಾಗ-ಸಮಂತಾ ಡಿವೋರ್ಸ್‌ ಹೇಳಿಕೆ ಹಿಂಪಡೆದು ಕ್ಷಮೆ – ಕೊಂಡಾ ಸುರೇಖಾ ವಿರುದ್ಧ ನಾಗಾರ್ಜುನ ಅಕ್ಕಿನೇನಿ ದೂರು

    ನಾಗ-ಸಮಂತಾ ಡಿವೋರ್ಸ್‌ ಹೇಳಿಕೆ ಹಿಂಪಡೆದು ಕ್ಷಮೆ – ಕೊಂಡಾ ಸುರೇಖಾ ವಿರುದ್ಧ ನಾಗಾರ್ಜುನ ಅಕ್ಕಿನೇನಿ ದೂರು

    ಹೈದರಾಬಾದ್‌: ನಾಗಚೈತನ್ಯ ಮತ್ತು ನಟಿ ಸಮಂತಾ ರುತ್‌ ಪ್ರಭು ವಿಚ್ಛೇದನಕ್ಕೆ ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆಟಿ ರಾಮರಾವ್‌ ಕಾರಣ ಎಂದು ಬಾಂಬ್‌ ಸಿಡಿಸಿ ವಿವಾದಕ್ಕೆ ಸಿಲುಕಿದ್ದ ತೆಲಂಗಾಣ ಅರಣ್ಯ ಸಚಿವೆ ಕೊಂಡಾ ಸುರೇಖಾ (Konda Surekha) ವಿರುದ್ಧ ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ನಾಗಾರ್ಜುನ ಅಕ್ಕಿನೇನಿ (Nagarjuna Akkineni) ದೂರು ದಾಖಲಿಸಿದ್ದಾರೆ.

    ತಮ್ಮ ಮಗ ಮತ್ತು ಸಮಂತಾ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ಮಾನಹಾನಿಕರ ಹೇಳಿಕೆ ನೀಡಿದ್ದರೆಂದು ಆರೋಪಿಸಿ ಕಾಂಗ್ರೆಸ್‌ ನಾಯಕರಿಗೆ (Congress Leaders) ದೂರು ಸಲ್ಲಿಸಿದ್ದಾರೆ. ಹೈದರಾಬಾದ್‌ನ ನಾಂಪಲ್ಲಿಯಲ್ಲಿ ದೂರು ದಾಖಲಿಸಿದ್ದಾರೆ. ಸುರೇಖಾ ಸುಳ್ಳು ಹೇಳಿಕೆ ನೀಡಿದ್ದಾರೆ. ಈ ಮೂಲಕ ವೈಯಕ್ತಿ, ವೃತ್ತಿಪರ, ಕೌಟುಂಬಿಕ ಪ್ರತಿಷ್ಠೆಗೆ ಹಾನಿ ಮಾಡಿದ್ದಾರೆ. ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಆರೋಪ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: BBK 11: ಧರ್ಮ ಕೀರ್ತಿರಾಜ್‌ ಮೇಲೆ ಲವ್‌ ಆಯ್ತಾ?- ದೊಡ್ಮನೆಯಲ್ಲಿ ತ್ರಿಕೋನ ಪ್ರೇಮಕಥೆ

    ಕ್ಷಮೆಯಾಚಿಸಿದ ಸುರೇಖಾ
    ತಮ್ಮ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಹಿಂದೇಟು ಹಾಕಿದ ಸಚಿವೆ ಕೊಂಡಾ ಸುರೇಖಾ ಹೇಳಿಕೆ ಹಿಂಪಡೆದು ಕ್ಷಮೆ ಕೋರಿದ್ದಾರೆ. ನನಗೆ ಯಾರ ವಿರುದ್ಧವೂ ವೈಯಕ್ತಿಕ ದ್ವೇಷವಿಲ್ಲ. ಮಾತಿನ ಭರದಲ್ಲಿ ಬಾಯಿತಪ್ಪಿ ಆಡಿದ ಮಾತಿದು. ತೆಲುಗು ಚಿತ್ರರಂಗದ ಕುರಿತು ನಾನು ನೀಡಿದ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಕೆಟಿಆರ್‌ ವಿರುದ್ಧ ಮಾಡಿರುವ ಆರೋಪಗಳಿಗೆ ನಾನು ಬದ್ಧಳಾಗಿದ್ದೇನೆ ಎಂದು ಕೂಡ ಹೇಳಿದ್ದಾರೆ. ಇದನ್ನೂ ಓದಿ: 160 ಎಕರೆ ಪ್ರದೇಶದಲ್ಲಿ ಮೈಸೂರು ಫಿಲಂ ಸಿಟಿ ನಿರ್ಮಾಣ: ಸಿದ್ದರಾಮಯ್ಯ

    ಸಮಂತಾ ಬಗ್ಗೆ ಗೌರವವಿದೆ:
    ನನ್ನ ಹೇಳಿಕೆಯಿಂದ ನಟಿ ಸಮಂತಾ (Samantha Ruth Prabhu) ಅವರಿಗೆ ನೋವಾಗಿದ್ದರೆ ಈ ಕೂಡಲೇ ಹೇಳಿಕೆ ಹಿಂಪಡೆಯುತ್ತೇನೆ. ಯಾರ ಮನಸ್ಸನ್ನೂ ನೋಯಿಸುವುದು ನನ್ನ ಉದ್ದೇಶ ಆಗಿರಲಿಲ್ಲ. ಅನ್ಯಥಾ ಭಾವಿಸಬೇಡಿ. ನನ್ನ ಹೇಳಿಕೆ ರಾಜಕೀಯ ನಾಯಕರು ಮಹಿಳೆಯರನ್ನು ಕೀಳಾಗಿ ಕಾಣುವುದನ್ನು ಪ್ರಶ್ನಿಸುವ ಉದ್ದೇಶವಾಗಿತ್ತೇ ಹೊರತು ನಿಮ್ಮ (ಸಮಂತಾ) ಭಾವನೆಗಳನ್ನು ನೋಯಿಸುವುದು ಆಗಿರಲಿಲ್ಲ. ನೀವು ಸ್ವಾವಲಂಬಿಯಾಗಿ ಬೆಳೆದು ಬಂದ ರೀತಿಯ ಬಗ್ಗೆ ನನಗೆ ಅಭಿಮಾನ ಮಾತ್ರವಲ್ಲದೇ ಗೌರವವೂ ಇದೆ ಎಂದು ಹೇಳಿದ್ದಾರೆ.

    ಕೆಟಿಆರ್‌ ಲೀಗಲ್‌ ನೋಟಿಸ್‌
    ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ವಿಚ್ಛೇದನ ಕುರಿತು ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ ಆರೋಪ ಕುರಿತು ಸಚಿವೆ ಕೊಂಡಾ ಸುರೇಖಾ ಅವರಿಗೆ ಕೆಟಿ ರಾಮರಾವ್‌ ಲೀಗಲ್‌ ನೋಟಿಸ್‌ ನೀಡಿದ್ದರು. ಸಚಿವೆ ಮಾಡಿರುವ ಆರೋಪವು ರಾಜಕೀಯ ಪ್ರೇರಿತವಾದುದು. ಇಂಥ ಹೇಳಿಕೆ ನೀಡುವ ಮೂಲಕ ತಮ್ಮ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನ ಮಾಡಿದ್ದಾರೆ. 24 ಗಂಟೆಯೊಳಗೆ ಸುರೇಖಾ ಅವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಅ.9ರವರೆಗೆ ಅತ್ಯಧಿಕ ಮಳೆ – ಯೆಲ್ಲೋ ಅಲರ್ಟ್ ಘೋಷಣೆ

  • ವಿಜಯವಾಡ ಲೋಕಸಭಾ ಕ್ಷೇತ್ರದಿಂದ ಅಕ್ಕಿನೇನಿ ನಾಗಾರ್ಜುನ ಕಣಕ್ಕೆ- YSR ಕಾಂಗ್ರೆಸ್‌ಗೆ ನಟ

    ವಿಜಯವಾಡ ಲೋಕಸಭಾ ಕ್ಷೇತ್ರದಿಂದ ಅಕ್ಕಿನೇನಿ ನಾಗಾರ್ಜುನ ಕಣಕ್ಕೆ- YSR ಕಾಂಗ್ರೆಸ್‌ಗೆ ನಟ

    ಡೀ ದೇಶಾದ್ಯಂತ 2024ರ ಲೋಕಸಭಾ ಚುನಾವಣೆ ಕಾವು ಜೋರಾಗಿದೆ. ಸದ್ಯ ತೆಲುಗು ನಟ ಕಮ್ ರಾಜಕಾರಣಿ ಪವನ್ ಕಲ್ಯಾಣ್‌ಗೆ ಜಗನ್ ಬಿಗ್ ಶಾಕ್ ಕೊಟ್ಟಿದ್ದಾರೆ. ವಿಜಯವಾಡ ಲೋಕಸಭಾ ಕ್ಷೇತ್ರದಿಂದ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಕಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಟಿಡಿಪಿ-ಜನಸೇನಾ ಮೈತ್ರಿ ಎದುರಿಸಲು ಅಕ್ಕಿನೇನಿ ಕುಟುಂಬದ ನಾಗಾರ್ಜುನಗೆ ಮಣೆ ಹಾಕಿದ್ದಾರೆ. ವೈ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ತೆಲುಗು ನಟ ನಾಗಾರ್ಜುನ ಸಾಥ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.‌ ಇದನ್ನೂ ಓದಿ:ತುಕಾಲಿ ಸಂತೋಷ್‌ ಕಾರು ಅಪಘಾತ ಪ್ರಕರಣ- ಆಟೋ ಚಾಲಕ ದುರ್ಮರಣ

    2024ರ ಲೋಕಸಭಾ ಚುನಾವಣೆಗೆ ಆಂಧ್ರಪ್ರದೇಶದಲ್ಲಿ ಹೆಚ್ಚಿನ ಕ್ಷೇತ್ರಗಳು ಗೆಲ್ಲಲೇಬೇಕು. ಜನಸೇನಾ, ಟಿಡಿಪಿ ಮೈತ್ರಿಯನ್ನು ಸೋಲಿಸಲೇಬೇಕು ಎಂಬುದು ಜಗನ್ (Jagan) ಮಾಸ್ಟರ್ ಪ್ಲ್ಯಾನ್ ಆಗಿದೆ. ನಾಗಾರ್ಜುನ ಮೂಲಕ ಪವನ್ ಕಲ್ಯಾಣ್‌ಗೆ (Pawan Kalyan) ಠಕ್ಕರ್ ಕೊಡಲು ಜಗನ್ ಪ್ಲ್ಯಾನ್ ಮಾಡಿದ್ದಾರೆ.

    ವಿಜಯವಾಡ ಲೋಕಸಭಾ ಕ್ಷೇತ್ರದಿಂದ ಅಕ್ಕಿನೇನಿ ನಾಗಾರ್ಜುನ ಅವರನ್ನು ಕಣಕ್ಕಿಳಿಸಲು ವೈಎಸ್‌ಆರ್ ಕಾಂಗ್ರೆಸ್ ನಿರ್ಧರಿಸಿದೆ ಎಂಬ ಸುದ್ದಿ ಇದೆ. ಇದಕ್ಕೆ ನಾಗಾರ್ಜುನ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

  • ತೆಲುಗು ಭಾಷೆಯನ್ನು ನೀವು ಅನುವಾದಿಸಿದರೆ ಸೆಕ್ಸಿಸ್ಟ್ ಆಗಿ ಕಾಣುತ್ತೆ: ನಾಗಾರ್ಜುನ ಅಕ್ಕಿನೇನಿ

    ತೆಲುಗು ಭಾಷೆಯನ್ನು ನೀವು ಅನುವಾದಿಸಿದರೆ ಸೆಕ್ಸಿಸ್ಟ್ ಆಗಿ ಕಾಣುತ್ತೆ: ನಾಗಾರ್ಜುನ ಅಕ್ಕಿನೇನಿ

    ಚೆನ್ನೈ: ಟಾಲಿವುಡ್ ಸ್ಟಾರ್ ನಾಗಾರ್ಜುನ ಅಕ್ಕಿನೇನಿ ತೆಲುಗು ಚಲನಚಿತ್ರಗಳನ್ನು ಲೈಂಗಿಕತೆ(ಸೆಕ್ಸಿಸ್ಟ್) ಹೆಚ್ಚಿರುತ್ತೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತೆಲುಗಿನ ಎಲ್ಲ ಸಿನಿಮಾಗಳು ಮತ್ತು ಹಾಡಿನ ಸಾಹಿತ್ಯವು ‘ಸೆಕ್ಸಿಸ್ಟ್’ ಆಗಿರುತ್ತೆ ಎಂಬ ಆರೋಪದ ಮಾತುಗಳು ಸರಿಯಲ್ಲ. ನಮ್ಮ ಭಾಷೆಯನ್ನು ಬೇರೆ ಭಾಷೆಯಲ್ಲಿ ಅನುವಾದಿಸಿದರೆ ಅದು ತನ್ನ ನಿಜವಾದ ಸತ್ವ ಕಳೆದುಕೊಳ್ಳುತ್ತೆ ಎಂದರು.

    ತೆಲುಗು ಭಾಷೆಯನ್ನು ನೀವು ಅಕ್ಷರಶಃ ಇಂಗ್ಲಿಷ್‍ಗೆ ಅನುವಾದಿಸಿದರೆ, ಅದು ತುಂಬಾ ಸೆಕ್ಸಿಸ್ಟ್ ಆಗಿ ಕಾಣುತ್ತದೆ. ನಾನು ಇದನ್ನು ಅನೇಕ ಜನರೊಂದಿಗೆ ಚರ್ಚೆಸಿದ್ದೇನೆ. ಈ ಬಗ್ಗೆ ನಾನು ತುಂಬಾ ಮಾತನಾಡಿದ್ದೇನೆ ಎಂದು ವಿವರಿಸಿದರು.

    ನಮ್ಮ ಸಿನಿಮಾ ‘ಬಂಗಾರರಾಜು’ ಹಾಡುಗಳನ್ನು ನೀವು ತೆಗೆದುಕೊಂಡರೂ ಅದು ಶುದ್ಧ ಜಾನಪದ ರಾಗಗಳೇ. ಆ ಸಾಲುಗಳನ್ನು ಇಂಗ್ಲಿಷಿನಲ್ಲಿ ಅನುವಾದಿಸಿದರೆ ‘ನೀನು ಇಂದು ರಾತ್ರಿ ನನ್ನೊಂದಿಗೆ ಮಲಗುತ್ತೀಯಾ?’ ಎಂಬ ಅರ್ಥದ ಸಾಲು ಬರುತ್ತದೆ. ಅದು ಸೆಕ್ಸಿಸ್ಟ್ ಆಗಿ ಕಾಣುತ್ತದೆ. ಆದರೆ ಆ ಹಾಡನ್ನು ತೆಲುಗು ಮಹಿಳೆಯರು ಹಾಡಿರುವುದನ್ನು ನೀವು ಗಮನಿಸಬಹುದು ಎಂದು ಹೇಳಿದರು. ಇದನ್ನೂ ಓದಿ: ಮಾನಸಿಕವಾಗಿ ಕುಗ್ಗಿ, ಸುಧಾರಿಸಿಕೊಂಡು ಮತ್ತೆ ಯಶಸ್ವಿಯಾಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಸಮಂತಾ

    ಕೆಲವೊಂದು ಸಿನಿಮಾಗಳು ನೀವು ಹೇಳಿದ ರೀತಿಯಲ್ಲೇ ಇರುತ್ತೆ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಪದಗಳನ್ನು ನಾವು ಸರಿಯಾಗಿ ಬಳಸಲಿಲ್ಲ ಎಂದರೆ ಈ ರೀತಿ ತಪ್ಪಾಗುವುದನ್ನು ನಾವು ನೋಡಬಹುದು. ಆದರೆ ಹೆಚ್ಚು ಸಿನಿಮಾಗಳು ಲೈಂಗಿಕತೆಯನ್ನೆ ಹೆಚ್ಚು ಪ್ರಚೋದಿಸುತ್ತದೆ ಎಂಬುದು ಸುಳ್ಳು ಎಂದರು.

    ನಾಗಾರ್ಜುನ ಪ್ರಸ್ತುತ ತೆಲುಗು ಚಿತ್ರ ‘ಬಂಗಾರರಾಜು 2’ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ತಮ್ಮ ಮಗ ‘ನಾಗಚೈತನ್ಯ’ ಅವರೊಂದಿಗೆ ನಟಿಸಿದ್ದಾರೆ. 2016ರಲ್ಲಿ ತೆರೆಕಂಡ ‘ಸೊಗ್ಗಡೆ ಚಿನ್ನಿ ನಾಯನ’ ಸಿನಿಮಾದ ಮುಂದುವರಿದ ಭಾಗ ಈ ‘ಬಂಗಾರರಾಜು’ ಸಿನಿಮಾವಾಗಿದೆ. ಈ ಚಿತ್ರಕ್ಕೆ ಕಲ್ಯಾಣ್ ಕೃಷ್ಣ ಕುರಸಾಲ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ರಮ್ಯಾ ಕೃಷ್ಣನ್ ಮತ್ತು ಕೃತಿ ಶೆಟ್ಟಿ ಕೂಡ ನಟಿಸಿದ್ದಾರೆ.

    ಈ ಸಿನಿಮಾ ಇದೇ ತಿಂಗಳು 14 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್-19 ಹಿನ್ನೆಲೆ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹೋಗಿದೆ. ಇದನ್ನೂ ಓದಿ: ಮನೆಯಲ್ಲಿ ಕ್ವಾರಂಟೈನ್‍ನಲ್ಲಿದ್ದವರಿಗೆ ಆನ್‍ಲೈನ್ ಯೋಗ ಕ್ಲಾಸ್: ಕೇಜ್ರಿವಾಲ್

    ಇದರ ಹೊರತಾಗಿ, ನಾಗಾರ್ಜುನ ಅಯಾನ್ ಮುಖರ್ಜಿ ಅವರ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್, ಅಲಿಯಾ ಭಟ್, ಅಮಿತಾಬ್ ಬಚ್ಚನ್ ಮತ್ತು ಡಿಂಪಲ್ ಕಪಾಡಿಯಾ ಕೂಡ ನಟಿಸಿದ್ದಾರೆ. ಇದು ಸೆಪ್ಟೆಂಬರ್ 30 ರಂದು ಬೆಳ್ಳಿತೆರೆ ಮೇಲೆ ಬರಲಿದೆ.

  • ಓಟಿಟಿ ಪ್ರವೇಶಿಸಲು ಸಿದ್ಧರಾದ ನಾಗಚೈತನ್ಯ

    ಓಟಿಟಿ ಪ್ರವೇಶಿಸಲು ಸಿದ್ಧರಾದ ನಾಗಚೈತನ್ಯ

    ಚೆನ್ನೈ: ಟಾಲಿವುಡ್ ನಟ ನಾಗಚೈತನ್ಯ ಓಟಿಟಿ ಕ್ಷೇತ್ರವನ್ನು ಪ್ರವೇಶಿಸಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

    ನಾಗಚೈತನ್ಯ ಓಟಿಟಿಯ ವೆಬ್ ಸರಣಿಯಾದ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದು, ಈ ವೆಬ್ ಸರಣಿಗೆ ವಿಕ್ರಮ್ ಕೆ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷ ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದ್ದು, ಈ ಚಿತ್ರದಲ್ಲಿ ನಾಗ ಚೈತನ್ಯ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಓಟಿಟಿಯಲ್ಲಿ ಇದು ನಾಗಚೈತನ್ಯ ಚೊಚ್ಚಲ ಸಿನಿಮಾವಾಗಿದೆ.

    ಈ ಸರಣಿಯು ಥ್ರಿಲ್ಲರ್ ಆಗಿದ್ದು, ನಾಗಾಚೈತನ್ಯಗೆ ಜೋಡಿಯಾಗಿ ತಮಿಳು ನಟಿ ಪ್ರಿಯಾ ಭವಾನಿ ಶಂಕರ್ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯಲ್ಲಿ ದಕ್ಷಿಣದ ಹಲವಾರು ಪ್ರಮುಖ ನಟರು ಸಹ ನಟಿಸಲಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡಲ್ಲ: ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ

    ನಾಗಾರ್ಜುನ ಅಕ್ಕಿನೇನಿ ಮತ್ತು ಅವರ ಮಗ ನಾಗ ಚೈತನ್ಯ ಮುಂಬರುವ ‘ಬಂಗಾರರಾಜು’ ಚಿತ್ರದಲ್ಲಿ ಮತ್ತೆ ಒಟ್ಟಿಗೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. ನಾಗಾರ್ಜುನ ಅವರ ಬ್ಲಾಕ್‍ಬಸ್ಟರ್ ಚಿತ್ರ ‘ಸೊಗ್ಗಾಡೆ ಚಿನ್ನಿ ನಯನ’ದ ಮುಂದುವರಿದ ಭಾಗವಾಗಿ ಈ ಚಿತ್ರವನ್ನು ಮಾಡುತ್ತಿದ್ದು, ಕಲ್ಯಾಣ್ ಕೃಷ್ಣ ನಿರ್ದೇಶಿಸಿದ್ದಾರೆ. ‘ಝೀ ಸ್ಟುಡಿಯೋಸ್’ ಸಹಯೋಗದೊಂದಿಗೆ ಈ ಚಿತ್ರ ನಿರ್ಮಾಣವಾಗುತ್ತಿದೆ.

    ನಾಗಾರ್ಜುನ ಅವರ ಜೊತೆ ಹಿರಿಯ ನಟಿ ರಮ್ಯಾ ಕೃಷ್ಣ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ‘ಉಪ್ಪೇನ’ ಖ್ಯಾತಿಯ ಕೃತಿ ಶೆಟ್ಟಿ ಈ ಸಿನಿಮಾದಲ್ಲಿ ನಾಗ ಚೈತನ್ಯ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ನಾಗಾರ್ಜುನ ಮತ್ತು ನಾಗ ಚೈತನ್ಯ ಮನಂ, ಪ್ರೇಮಂ ಚಿತ್ರಗಳ ನಂತರ ‘ಬಂಗಾರರಾಜು’ ಸಿನಿಮಾ ಮೂಲಕ ಮತ್ತೊಮ್ಮೆ ತೆರೆ ಹಂಚಿಕೊಳ್ಳಲಿದ್ದು, ಅಕ್ಕಿನೇನಿ ಅಭಿಮಾನಿಗಳ ಪಾಲಿಗೆ ಇದು ವಿಶೇಷ ಸಿನಿಮಾವಾಗಿದೆ. ಈ ಚಿತ್ರಕ್ಕಾಗಿ ಇವರ ಅಭಿಮಾನಿಗಳು ಕಾಯುತ್ತಿದ್ದಾರೆ. ಇದನ್ನೂ ಓದಿ: ಹೆಸರುವಾಸಿಯಾಗಿದ್ದ ಕೇರಳದ ಟೀ ಮಾರಾಟಗಾರ ನಿಧನ