Tag: ನಾಗಾರ್ಜುನ್ ಅಕ್ಕಿನೇನಿ

  • ‘ಯುವ’ನ ಚೊಚ್ಚಲ ಚಿತ್ರವನ್ನು ಹಾಡಿ ಹೊಗಳಿದ ನಾಗಾರ್ಜುನ್

    ‘ಯುವ’ನ ಚೊಚ್ಚಲ ಚಿತ್ರವನ್ನು ಹಾಡಿ ಹೊಗಳಿದ ನಾಗಾರ್ಜುನ್

    ದೊಡ್ಮನೆ ಕುಡಿ ಯುವರಾಜ್‌ಕುಮಾರ್ (Yuva Rajkumar) ನಟನೆಯ ‘ಯುವ’ ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಬೆನ್ನಲ್ಲೇ ಟಾಲಿವುಡ್ ನಾಗಾರ್ಜನ್ ಅಕ್ಕಿನೇನಿ ‘ಯುವ’ (Yuva Film) ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಯುವ ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕದಲ್ಲಿರುವ ಮಿತ್ರರಿಗೆ ಎಲ್ಲರಿಗೂ ನಮಸ್ಕಾರ, ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿರುವ ಯುವ ಸಿನಿಮಾ ಮೊನ್ನೆ ಶುಕ್ರವಾರ ರಿಲೀಸ್ ಆಗಿದೆ. ಚಿತ್ರದ ಬಗ್ಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಯುವ ಚಿತ್ರ ಹಿಟ್ ಕೂಡ ಆಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲ, ಹೈದರಾಬಾದ್‌ನಲ್ಲಿಯೂ ಚಿತ್ರ ಹಿಟ್ ಆಗಿದೆ ಎಂದು ನಾಗಾರ್ಜುನ್ ಮಾತನಾಡಿದ್ದಾರೆ. ವಿಡಿಯೋ ಮೂಲಕ ವಿಶ್‌ ಮಾಡಿದ್ದಾರೆ. ಇದನ್ನೂ ಓದಿ:8 ವರ್ಷಗಳ ಬಳಿಕ ಟಾಲಿವುಡ್‌ಗೆ ಕಮ್‌ಬ್ಯಾಕ್ ಆದ ‘ವೀರಕನ್ನಡಿಗ’ ನಟಿ

    ಈ ವೇಳೆ, ವರನಟ ರಾಜ್‌ಕುಮಾರ್ ಅವರನ್ನು ನಾಗಾರ್ಜುನ್ ಸ್ಮರಿಸಿದ್ದಾರೆ. ತೆಲುಗು ಮಂದಿಗೂ ಅವರೆಂದರೆ ಇಷ್ಟ. ಇನ್ನೂ ನಿಮ್ಮ ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದೀರಿ. ನಿಮ್ಮ ಮುಂದಿನ ಹೆಜ್ಜೆಗೆ ಶುಭವಾಗಲಿ ಎಂದು ದೊಡ್ಮನೆ ಕುಡಿಗೆ ತೆಲುಗು ನಟ ನಾಗಾರ್ಜುನ್ ಶುಭಹಾರೈಸಿದ್ದಾರೆ.

    ‘ಯುವ’ ಸಿನಿಮಾ ಇದೇ ಮಾರ್ಚ್.29ಕ್ಕೆ ರಿಲೀಸ್ ಆಗಿದೆ. ಯುವ ಮತ್ತು ಸಪ್ತಮಿ ಗೌಡ (Sapthami Gowda) ಜೋಡಿ ನೋಡುಗರ ಗಮನ ಸೆಳೆದಿದೆ. ಸಂತೋಷ್ ಆನಂದ್‌ರಾಮ್ (Santhosh Anandram) ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಸಂಸ್ಥೆ ‘ಯುವ’ (Yuvafilm) ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

  • ನನ್ನ ಕುಟುಂಬದ ಬಗ್ಗೆ ಅಸಹ್ಯವಾಗಿ ಮಾತನಾಡಿದರೆ ನೋವಾಗುತ್ತೆ: ನಾಗಾರ್ಜುನ್

    ನನ್ನ ಕುಟುಂಬದ ಬಗ್ಗೆ ಅಸಹ್ಯವಾಗಿ ಮಾತನಾಡಿದರೆ ನೋವಾಗುತ್ತೆ: ನಾಗಾರ್ಜುನ್

    ಚೆನ್ನೈ: ನನ್ನ ಕುಟುಂಬದ ಬಗ್ಗೆ ಅಸಹ್ಯವಾಗಿ ಯಾರದರೂ ಮಾತನಾಡಿದರೆ ನನಗೆ ನೋವಾಗುತ್ತೆ ಎಂದು ದಕ್ಷಿಣ ಭಾರತದ ಖ್ಯಾತ ನಟ ನಾಗಾರ್ಜುನ್ ಅಕ್ಕಿನೇನಿ ಬೇಸರ ವ್ಯಕ್ತಪಡಿಸಿದ್ದಾರೆ.

    ಇತ್ತೀಚೆಗೆ ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆದುಕೊಂಡಿದ್ದರು. ಈ ಹಿನ್ನೆಲೆ ಅಕ್ಕಿನೇನಿ ಕುಟುಂಬದ ಬಗ್ಗೆ ಹಲವು ಜನರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದರು. ಆದರೆ ಈ ಕುರಿತು ಅಕ್ಕಿನೇನಿ ಕುಟುಂಬ ಎಂದೂ ಒಂದು ಮಾತನ್ನು ಆಡಿರಲಿಲ್ಲ. ಆದರೆ ಈಗ ನಾಗಾರ್ಜುನ್ ಈ ಕುರಿತು ಮಾತನಾಡಿದ್ದು, ಕೆಲವರು ನಮ್ಮ ಕುಟುಂಬದ ಬಗ್ಗೆ ಅಸಹ್ಯವಾಗಿ ವರದಿ ಮಾಡುವುದನ್ನು ನೋಡಿ ನಾನು ಬೇಸರ ಪಟ್ಟಿಕೊಂಡಿದ್ದೇನೆ ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ.  ಇದನ್ನೂ ಓದಿ: ಮಹಿಳಾ ವಿವಿ ಮುಚ್ಚುವ ಪ್ರಶ್ನೆಯೇ ಇಲ್ಲ: ಕಾರಜೋಳ

    ಎಲ್ಲರಿಗೂ ಅವರವರ ಜೀವನದಲ್ಲಿ ಆಯ್ಕೆಯ ಸ್ವಾತಂತ್ರ್ಯವಿದೆ. ಮೊದಲು ಈ ಸುದ್ದಿ ಕೇಳಿ ನಮಗೂ ಆಘಾತವಾಗಿತ್ತು. ಆದರೆ ಇದಕ್ಕೆ ಹೆಚ್ಚು ಬಣ್ಣ ಕಟ್ಟಿ ಹೇಳುತ್ತಿರುವುದನ್ನು ಕೇಳಿ ತುಂಬಾ ನೋವಾಗಿದೆ. ಇದರಿಂದ ನನ್ನ ಕುಟುಂಬ ಕುಗ್ಗಿದೆ. ಯಾರೂ ನಮ್ಮ ಕುಟುಂಬದ ಮೇಲೆ ಕೆಟ್ಟ ವಂದತಿಗಳನ್ನು ಹಬ್ಬಿಸಬೇಡಿ ಎಂದು ಕೇಳಿಕೊಂಡಿದ್ದಾರೆ.

    ಅಕ್ಟೋಬರ್ 2 ರಂದು ಸಮಂತಾ ಮತ್ತು ನಾಗ ಚೈತನ್ಯ ತಮ್ಮ ನಾಲ್ಕು ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ್ದರು. ಈ ಕುರಿತು ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನಮ್ಮ ನಿರ್ಧಾರವನ್ನು ನೀವು ಗೌರವಿಸಿ ಎಂದು ಬರೆದುಕೊಂಡಿದ್ದರು. ಇದನ್ನೂ ಓದಿ: ಅಖಿಲೇಶ್ ಆಡಳಿತದಲ್ಲಿ ಗಲಭೆ, ಗೂಂಡಾಗಿರಿ, ವಲಸೆ ಹೆಚ್ಚಿತ್ತು: ಕೇಶವ್ ಪ್ರಸಾದ್ ಮೌರ್ಯ

    ನಾಗಾರ್ಜುನ್ ಅವರು ಮಗ ನಾಗಚೈತನ್ಯ ಅವರೊಂದಿಗೆ ‘ಬಂಗಾರರಾಜು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದು, ಸಂಕ್ರಾಂತಿ ದಿನ ಈ ಸಿನಿಮಾ ರಿಲೀಸ್ ಆಗಿತ್ತು. ಜನರು ಸಹ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆಯನ್ನು ಕೊಡುತ್ತಿದ್ದಾರೆ. ಪ್ರಸ್ತುತ ನಾಗಾರ್ಜುನ ಅವರು ತೆಲುಗಿನಲ್ಲಿ ‘ಥ್ಯಾಂಕ್ ಯೂ’ ಮತ್ತು ಅಮೀರ್ ಖಾನ್ ಜೊತೆಗಿನ ಬಾಲಿವುಡ್ ಚೊಚ್ಚಲ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  • ತೆಲುಗು ಬಿಗ್‍ಬಾಸ್ ವೇದಿಕೆ ಏರಿದ ಕಿಚ್ಚ ಸುದೀಪ್

    ತೆಲುಗು ಬಿಗ್‍ಬಾಸ್ ವೇದಿಕೆ ಏರಿದ ಕಿಚ್ಚ ಸುದೀಪ್

    ಹೈದ್ರಾಬಾದ್: ಖ್ಯಾತ ನಟ ನಾಗಾರ್ಜುನ್ ಅಕ್ಕಿನೇನಿ ತೆಲುಗು ಬಿಗ್ ಬಾಸ್ ಸೀಸನ್ 4ರ ನಿರೂಪಕರಾಗಿದ್ದಾರೆ. ಆದರೆ ಇಂದಿನ ವಾರದ ಕಾರ್ಯಕ್ರಮದಲ್ಲಿ ಕನ್ನಡದ ಕಿಚ್ಚ ಸುದೀಪ್ ಅತಿಥಿಯಾಗಿ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದಾರೆ.

    ತೆಲುಗು ಬಿಗ್‍ಬಾಸ್ ವೇದಿಕೆಯ ಮೇಲೆ ಕಿಚ್ಚನನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಒಂಟಿ ಮನೆಯಲ್ಲಿರುವ ಸ್ಪರ್ಧಿಗಳು ವೇದಿಕೆಯ ಮೇಲೆ ಕಿಚ್ಚನನ್ನು ಕಂಡು ಅಚ್ಚರಿಗೊಂಡಿದ್ದಾರೆ ಅಲ್ಲದೆ, ಸಂತೋಷದಿಂದ ಸುದೀಪ್ ಅವರೊಂದಿಗೆ ಮಾತನಾಡಿದ್ದಾರೆ. ನಾಗಾರ್ಜುನ್ ಸರ್ ಎಲ್ಲಿ ನಾವು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನೀವು ಎಂದರೆ ನಮಗೆ ತುಂಬಾ ಇಷ್ಟ ಎಂದು ಸ್ಪರ್ಧಿಗಳು ಹೇಳಿದ್ದಾರೆ. ಸದ್ಯ ಕಾರ್ಯಕ್ರಮದ ಪ್ರೋಮೋ ಬಿಡುಗಡೆಗೊಂಡಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಕನ್ನಡದ ಖಾಸಗಿ ಮಾಧ್ಯಮವೊಂದರಲ್ಲಿ ಪ್ರಸಾರವಾಗುವ ಕನ್ನಡದ ಬಿಗ್‍ಬಾಸ್ ಸೀಸನ್ 8 ಪ್ರಾರಂಭಕ್ಕೆ ಭರದಿಂದ ಸಿದ್ಧತೆ ನಡೆಯುತ್ತಿದೆ. ಈ ವೇಳೆ ಸುದೀಪ್ ತೆಲುಗು ಬಿಗ್ ಬಾಸ್ ವೇದಿಕೆಗೆ ಅತಿಥಿಯಾಗಿ ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

    15 ನಿಮಿಷಗಳ ಕಾಲ ಬಿಗ್‍ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡಿರುವ ಕಿಚ್ಚ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟ್ರೆಂಡಿಂಗ್ ಮಾಡುತ್ತಿದ್ದಾರೆ. ಸುದೀಪ್ ಅವರು ತೆಲುಗು ಬಿಗ್ ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡಿರುವ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಅಭಿಮಾನಿಗಳಿಂದ ಕಮೆಂಟ್ ಮತ್ತು ಟ್ವೀಟ್‍ಗಳ ಸುರಿಮಳೆಯೇ ಹರಿದು ಬಂದಿದೆ.

    ಸ್ಪರ್ಧಿಗಳೊಂದಿಗೆ ಕನ್ನಡ ಮಾತನಾಡಿದ ಕಿಚ್ಚ
    ತೆಲುಗು ಬಿಗ್ ಬಾಸ್ ವೀದಿಕೆಯಲ್ಲಿ ಕಿಚ್ಚ ಕನ್ನಡದಲ್ಲಿ ಮಾತನಾಡುತ್ತಾರೆ ಎಂದು ನಾಗಾರ್ಜುನ್ ಹೇಳಿದ್ದಾಗ ಸ್ಪರ್ಧಿಯೊಬ್ಬರು ಚೆನ್ನಾಗಿದ್ದೀರಾ ಸರ್ ಎಂದು ಸುದೀಪ್‍ಗೆ ಕೇಳಿದ್ದಾರೆ, ಇದೆಲ್ಲ ಪ್ರೋಮೋದಲ್ಲಿ ಸಖತ್ ಹೈಲೆಟ್ ಆಗಿದೆ.

     

    View this post on Instagram

     

    A post shared by KicchaSudeepa (@kichchasudeepa)

    ತೆಲುಗು ಬಿಗ್ ಬಾಸ್ ರೀಯಾಲಿಟಿ ಶೋಗೆ ಅತಿಥಿಯಾಗಿ ಹೋಗಿದ್ದೆ. ಎಂದಿಗೂ ಆಕರ್ಷಕರಾಗಿರುವ ನಾಗಾರ್ಜುನ್ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವುದು ಅದ್ಭುತವಾಗಿತ್ತು. ಮನೆಯ ಒಳಗೆ ಇರುವ ಸ್ಪರ್ಧಿಗಳೊಂದಿಗೆ ಮಾತನಾಡಿದೆ. ಬಿಗ್ ಬಾಸ್ ನಿರೂಪಣೆ ಮಾಡುವುದು ಯಾವಾಗಲೂ ಸೇಷಲ್ ಫಿಲಿಂಗ್ ಆಗಿದೆ ಎಂದು ಸುದೀಪ್ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಬಿಗ್‍ಬಾಸ್ ಸೀಸನ್ 4ರಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡ ಕಿಚ್ಚ ಅವರ ನಿರೂಪಣಾ ಕೌಶಲ್ಯದಿಂದ ಎಲ್ಲರನ್ನು ವಿಸ್ಮಯಗೊಳಿಸಿದ್ದಾರೆ. ಕಿಚ್ಚ ಅವರು ತೆಲುಗು ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿರುವ ಎಪಿಸೋಡ್ ಪ್ರಸಾರವಾಗುತ್ತಿದ್ದಂತೆ ನೆಟ್ಟಿಗರು ಮೆಚ್ಚಿ ಉತ್ತಮ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.