Tag: ನಾಗಾರ್ಜುನ್

  • ನಟ ನಾಗಾರ್ಜುನ್ ರೀತಿಯಲ್ಲೇ ಸುದೀಪ್ ವಾಪಸ್ಸು

    ನಟ ನಾಗಾರ್ಜುನ್ ರೀತಿಯಲ್ಲೇ ಸುದೀಪ್ ವಾಪಸ್ಸು

    ಬಿಗ್ ಬಾಸ್ (Bigg Boss) ನಿರೂಪಕರ ಬಗ್ಗೆ ಕನ್ನಡ ಮತ್ತು ತೆಲುಗಿನಲ್ಲಿ ಹೆಚ್ಚು ಚರ್ಚೆ ಮಾಡಲಾಗುತ್ತಿತ್ತು. ತೆಲುಗು ಮತ್ತು ಕನ್ನಡ ಬಿಗ್ ಬಾಸ್ ಶೋಗೆ ಈ ಬಾರಿ ಹೋಸ್ಟ್ ಯಾರು ಮಾಡ್ತಾರೆ ಅನ್ನೋ ಪ್ರಶ್ನೆ ಮೂಡಿತ್ತು. ಈ ಗೊಂದಲಕ್ಕೆ ತೆಲುಗಿನಲ್ಲಿ ತೆರೆ ಬಿದ್ದಿದೆ. ಕನ್ನಡದಲ್ಲಿ ಇನ್ನೂ ಬಾಕಿ ಇದೆ. ಈ ವರ್ಷದಿಂದ ಬಿಗ್ ಬಾಸ್ ನಿರೂಪಿಸಲ್ಲ ಅಂತ ಸುದೀಪ್ (Kichcha Sudeep) ಹೇಳಿದ್ದಾರೆ. ಹಾಗಾಗಿ ಗೊಂದಲ ಹಾಗೆಯೇ ಮುಂದುವರೆದಿದೆ.

    ಕೆಲ ವರ್ಷಗಳಿಂದ ತೆಲುಗು ಬಿಗ್ ಬಾಸ್ ಅನ್ನು ನಾಗಾರ್ಜುನ್ (Nagarjuna) ನಡೆಸಿಕೊಡುತ್ತಿದ್ದರು. ಈ ಸೀಸನ್ ನಲ್ಲಿ ನಾಗಾರ್ಜುನ್ ಇರುವುದಿಲ್ಲ ಎಂದು ಹೇಳಲಾಗಿತ್ತು. ವಿಜಯ್ ದೇವರಕೊಂಡ ಅಥವಾ ಬಾಲಯ್ಯ ಶೋ ನಡೆಸಿಕೊಡಲಿದ್ದಾರೆ ಅಂತಾನೂ ಸುದ್ದಿ ಆಗಿತ್ತು. ಇದೀಗ ಬಿಗ್ ಬಾಸ್ ಪ್ರೋಮೋ ರಿಲೀಸ್ ಆಗಿದ್ದು, ನಾಗಾರ್ಜುನ್ ಅವರೇ ಪ್ರೋಮೋದಲ್ಲಿದ್ದಾರೆ. ಅಲ್ಲಿಗೆ ತೆಲುಗು ಶೋ ನಿರೂಪಣೆಯನ್ನು ನಾಗಾರ್ಜುನ್ ಮಾಡೋದು ಪಕ್ಕಾ ಆಗಿದೆ. ಇದನ್ನೂ ಓದಿ: ಮಾದಕ ಲುಕ್‌ನಲ್ಲಿ ಸಪ್ತಮಿ ಶೈನ್‌ – ಅದೆಷ್ಟು ಅಂತ ನಮ್ಮ ಎದೆಗೆ ಕೊಳ್ಳಿ ಇಡ್ತೀರಿ ಅಂದ್ರು ಪಡ್ಡೆ ಹೈಕ್ಳು

    ಕನ್ನಡದಲ್ಲೂ ಸುದೀಪ್ ಜಾಗಕ್ಕೆ ಯಾರನ್ನು ತರಬೇಕು ಅಂತ ತಲೆಕೆಡಿಸಿಕೊಂಡು ಕೂತಿದೆ ಕಲರ್ಸ್ ವಾಹಿನಿ. ಈ ನಡುವೆ ವಾಹಿನಿಯ ಮುಖ್ಯಸ್ಥರು ಸುದೀಪ್ ಅವರನ್ನು ಭೇಟಿ ಮಾಡಿದ ವಿಚಾರವೂ ಹರಿದಾಡುತ್ತಿದೆ. ವಾಹಿನಿಗೆ ಕೆಲವು ಕಂಡಿಷನ್ ಅನ್ನು ಸುದೀಪ್ ಹಾಕಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ. ಸುದೀಪ್ ಕಂಡಿಷನ್ ಗೆ ಚಾನೆಲ್ ಕೂಡ ಒಪ್ಪುವ ಸಾಧ್ಯತೆ ಇದೆಯಂತೆ. ಹಾಗಾಗಿ ಕನ್ನಡದಲ್ಲಿ ಸುದೀಪ್ ಅವರೇ ಮುಂದುವರೆಯಲಿದ್ದಾರೆ ಅನ್ನೋದು ಆಪ್ತರ ಅನಿಸಿಕೆ. ಇದನ್ನೂ ಓದಿ: ಜೂ.ಎನ್‌ಟಿಆರ್ ಕೈಯಲ್ಲಿ `ಗಾಡ್ ಆಫ್ ವಾರ್ ಮುರುಗ’ ಬುಕ್ ಯಾಕೆ?

  • ಧನುಷ್ ನಟನೆಯ ‘ಕುಬೇರ’ ಅಡ್ಡಾದಿಂದ ನಯಾ ಪೋಸ್ಟರ್ ರಿಲೀಸ್

    ಧನುಷ್ ನಟನೆಯ ‘ಕುಬೇರ’ ಅಡ್ಡಾದಿಂದ ನಯಾ ಪೋಸ್ಟರ್ ರಿಲೀಸ್

    ಣೇಶ ಹಬ್ಬಕ್ಕೆ ಬಿಡಿಗಡೆಯಾಯ್ತು `ಕುಬೇರ’ (Kubera)  ಸಿನಿಮಾದ ಪೋಸ್ಟರ್. ಅಕ್ಕಿನೇನಿ ನಾಗಾರ್ಜುನ್ (Nagarjuna) ಹಾಗೂ ಧನುಷ್  (Dhanush) ಕಾಂಬಿನೇಷನ್‌ನ ಕುಬೇರ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಫಸ್ಟ್ಲುಕ್ ಟೀಸರ್ ಹಾಗೂ ಪೋಸ್ಟರ್‌ಗಳಿಂದಲೇ ಗಮನ ಸೆಳೆದಿರುವ `ಕುಬೇರ’ ಸಿನಿಮಾದಲ್ಲಿ ನಾಗಾರ್ಜುನ್ ಹಾಗೂ ಧನುಷ್ ಜೋಡಿ ಫಾರ್ ದಿ ಫಸ್ಟ್ ಟೈಂ ಸ್ಕ್ರೀನ್ ಶೇರ್ ಮಾಡಿದೆ. ಹೀಗಾಗಿಯೇ ನಾಗಾರ್ಜುನ್ ಫ್ಯಾನ್ಸ್ ಹಾಗೂ ಧನುಷ್ ಫ್ಯಾನ್ಸ್ ಸಿನಿಮಾ ನೋಡೋಕೆ ತುದಿಗಾಲ್ಲಿ ನಿಂತು ಕಾಯ್ತಿದ್ದಾರೆ.

    ಶೇಖರ್ ಕಮ್ಮುಲಾ ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ತೆರೆ ಹಂಚಿಕೊಂಡಿದ್ದಾರೆ. ನಾಯಕಿ ಇಂಟ್ರುಡಕ್ಷನ್ ಗ್ಲಿಂಪ್ಸ್ ಮೂಲಕವೇ ಅಟ್ರ್ಯಾಕ್ಟ್ ಮಾಡಿದ್ದಾರೆ ಕೊಡಗಿನ ಕುವರಿ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ನಲ್ಲಿ ತಯಾರಾಗ್ತಿರುವ `ಕುಬೇರ’ ಚಿತ್ರ ಡಿಸೆಂಬರ್ 31ಕ್ಕೆ ದೇಶದಾದ್ಯಂತ ಬೆಳ್ಳಿ ಪರದೆಯಲ್ಲಿ ತನ್ನ ಆಟವನ್ನ ಶುರು ಮಾಡಲಿದೆ.

    ಗಣೇಶ್ ಚತುರ್ಥಿ ವಿಶೇಷವಾಗಿ ಸಿನಿಮಾದ ಪೋಸ್ಟರ್‌ನ್ನ ಬಿಡುಗಡೆ ಮಾಡಿ ಧನುಷ್ ಅಭಿಮಾನಿಗಳಿಗೆ ಸರ್ಪೈಸ್  ಕೊಟ್ಟಿದೆ ಚಿತ್ರತಂಡ. ಇದೇ ವರ್ಷದಲ್ಲಿ ಧನುಷ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಹಾಗೂ ರಾಯನ್ ಸಿನಿಮಾ ತೆರೆಕಂಡಿವೆ. ಇದೇ ವರ್ಷ ಎರಡು ಸಿನಿಮಾಗಳು ತೆರೆಕಂಡರೂ ಹೇಳಿಕೊಳ್ಳುವ ಮಟ್ಟಿಗೆ ಹಿಟ್ ಆಗಿಲ್ಲ. ಇದೇ ವರ್ಷದ ಕೊನೆಯಲ್ಲಿ ತೆರೆಕಾಣಲು ಸಿದ್ಧವಾಗಿರುವ `ಕುಬೇರ’ ಸಿನಿಮಾ ಮೇಲೆ ಭಾರಿ ನಿರೀಕ್ಷೆಗಳಿವೆ.

    ಐದು ಭಾಷೆಗಳಲ್ಲಿ ತಯಾರಾಗಿರುವ `ಕುಬೇರ’ ಚಿತ್ರತಂಡದಲ್ಲಿ ಧನುಷ್‌ಗೆ ನಾಗಾರ್ಜುನ್ ಹಾಗೂ ರಶ್ಮಿಕಾ ಸಾಥ್ ಕೊಟ್ಟಿರೋದು ಮತ್ತಷ್ಟು ಮೈಲೇಜ್ ಸಿಕ್ಕಂತಾಗಿದೆ. ಸದ್ಯ ಗಣೇಶ ಚತುರ್ಥಿ ವಿಶೇಷವಾಗಿ ಪೋಸ್ಟರ್ ನೋಡಿ ಭಕ್ತಗಣ ಕುಣಿದು ಕುಪ್ಪಳಿಸಿದೆ. ಇನ್ನೇನಿದ್ರೂ ಡಿಸೆಂಬರ್‌ಗೆ ಸಿನಿಮಾ ಕಣ್ತುಂಬಿಕೊಳ್ಳೋಕೆ ಕ್ಯೂರಿಯಾಸಿಟಿಯಿಂದ ಕಾಯ್ತಿದ್ದಾರೆ ಧನುಷ್ ಫ್ಯಾನ್ಸ್.

  • ಅಧಿಕೃತವಾಗಿ ‘ಬಿಗ್ ಬಾಸ್’ ಮನೆಗೆ ಕಾಲಿಟ್ಟ ಕಂಟೆಸ್ಟೆಂಟ್ : ನಟ ನಾಗಾರ್ಜುನ ಬದಲಾಗಲಿಲ್ಲ

    ಅಧಿಕೃತವಾಗಿ ‘ಬಿಗ್ ಬಾಸ್’ ಮನೆಗೆ ಕಾಲಿಟ್ಟ ಕಂಟೆಸ್ಟೆಂಟ್ : ನಟ ನಾಗಾರ್ಜುನ ಬದಲಾಗಲಿಲ್ಲ

    ಬಿಗ್ ಬಾಸ್ ತೆಲುಗು ಸೀಸನ್ 8(Bigg Boss Season 8)  ಶುರುವಾಗಿದೆ. ಈ ಸೀಸನ್‍ ನಾನಾ ಕಾರಣಗಳಿಂದಾಗಿ ಕುತೂಹಲ ಮೂಡಿಸಿತ್ತು. ಕಳೆದ ವರ್ಷದಂತೆ ಈ ವರ್ಷವೂ ನಿರೂಪಕರ ಬದಲಾವಣೆ ಕುರಿತು ಸಾಕಷ್ಟು ಚರ್ಚೆ ಎದ್ದಿತ್ತು. ನಟ ನಾಗಾರ್ಜುನ (Nagarjuna) ಬದಲು ಬೇರೆ ನಿರೂಪಕರು ಈ ಬಾರಿ ಇರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಮಾತು ಸುಳ್ಳಾಗಿದೆ. ಬಿಗ್ ಬಾಸ್ ತೆಲುಗು ಸೀಸನ್ 8 ಅನ್ನು ನಾಗಾರ್ಜುನ ಅವರೇ ನಡೆಸಿಕೊಡುತ್ತಿದ್ದಾರೆ.

    ಈ ಸೀಸನ್ ಸಾಕಷ್ಟು ಕಾರಣಗಳಿಂದಾಗಿ ನೋಡುಗರ ಗಮನ ಸೆಳೆಯಲಿದೆ. ಕನ್ನಡದ ನಾಲ್ವರು ಈ ಬಾರಿ ಬಿಗ್ ಬಾಸ್ ತೆಲುಗು ಶೋನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕನ್ನಡದಲ್ಲಿ ಮೂಡಿ ಬಂದ ಮನೆಯೇ ಮಂತ್ರಾಲಯ ಧಾರಾವಾಹಿಯ ನಿಖಿಲ್, ವಿದ್ಯಾ ವಿನಾಯಕ ನಟಿ ಯಶ್ಮಿ ಗೌಡ, ಕನ್ನಡದ ಬಿಗ್ ಬಾಸ್ ನಲ್ಲೂ ಕಾಣಿಸಿಕೊಂಡಿದ್ದ ಪ್ರೇರಣಾ, ಪೃಥ್ವಿರಾಜ್ ಶೆಟ್ಟಿ ಹೀಗೆ ನಾಲ್ವರು ಕಲಾವಿದರು ಈ ಬಾರಿ ತೆಲುಗು ಬಿಗ್ ಬಾಸ್ ಮನೆಯ ಪ್ರವೇಶ ಮಾಡಿದ್ದಾರೆ.

    ಕನ್ನಡದಲ್ಲಿ ಬಿಗ್ ಬಾಸ್ ಶುರುವಾಗೋ ಮುನ್ನವೇ ತೆಲುಗಿನಲ್ಲಿ ಗ್ರ್ಯಾಂಡ್ ಓಪನಿಂಗ್ ಆಗಿದೆ. 14 ಸ್ಪರ್ಧಿಗಳು ದೊಡ್ಮನೆಗೆ ಪ್ರವೇಶ ಮಾಡಲಿದ್ದಾರೆ. ಅದರಲ್ಲಿ ನಾಲ್ವರು ಕನ್ನಡದ ಮೂಲದವರೇ ಇದ್ದಾರೆ ಅನ್ನೋದು ವಿಶೇಷ. ಮುಂದಿನ ದಿನಗಳಲ್ಲಿ ಯಾವೆಲ್ಲ ಕಂಟೆಸ್ಟೆಂಟ್ ಗಳು ಗಮನ ಸೆಳೆಯುತ್ತಾರೆ ಅನ್ನೋದನ್ನ ಕಾದು ನೋಡಬೇಕು.

  • ಮಾಲ್ಡೀವ್ಸ್ ಟಿಕೆಟ್ ಕ್ಯಾನ್ಸಲ್ ಮಾಡಿದ ನಟ ನಾಗಾರ್ಜುನ್

    ಮಾಲ್ಡೀವ್ಸ್ ಟಿಕೆಟ್ ಕ್ಯಾನ್ಸಲ್ ಮಾಡಿದ ನಟ ನಾಗಾರ್ಜುನ್

    ತೆಲುಗಿನ ಖ್ಯಾತ ನಟ ನಾಗಾರ್ಜುನ್ (Nagarjuna) ಮಾಲ್ಡೀವ್ಸ್ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡುವ ಮೂಲಕ ಮೋದಿ ಬೆಂಬಲಕ್ಕೆ ನಿಂತಿದ್ದಾರೆ. ಈ ವಿಷಯವಾಗಿ ನನಗೆ ಯಾವುದೇ ಭಯವಿಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ. ಲಕ್ಷ ದ್ವೀಪದಲ್ಲಿ ಮೋದಿ ಕಾಣಿಸಿಕೊಂಡ ನಂತರ ಮಾಲ್ಡೀವ್ಸ್ ಮತ್ತು ಭಾರತದ ಮಧ್ಯ ಬಿರುಕು ಕಾಣಿಸಿಕೊಂಡಿದೆ. ಮಾಲ್ಡೀವ್ಸ್ ಪ್ರಯಾಣದ ಕುರಿತಂತೆ ಹಲವಾರು ಸೆಲೆಬ್ರಿಟಿಗಳು ಮಾತನಾಡಿದ್ದಾರೆ.

    ಈ ನಡುವೆ ಮಾಲ್ಡೀವ್ಸ್‌ನಿಂದ (Maldives) ಭಾರತೀಯ ಸೈನಿಕರನ್ನು (Indian Army) ವಾಪಸ್‌ ಕರೆಸಿಕೊಳ್ಳಬೇಕು ಎಂದು ಭಾರತ ಸರ್ಕಾರಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಝು (Mohamed Muizzu) ತಿಳಿಸಿದ್ದಾರೆಂದು ವರದಿಯಾಗಿದೆ.  ಮಾರ್ಚ್‌ 15 ರ ಮುಂಚೆಗೆ ಭಾರತೀಯ ಸೇನೆಯನ್ನು ದ್ವೀಪ ರಾಷ್ಟ್ರದಿಂದ (ಮಾಲ್ಡೀವ್ಸ್‌) ಹಿಂತೆಗೆದುಕೊಳ್ಳಬೇಕು ಎಂದು ಮಾಲ್ಡೀವ್ಸ್‌ ಅಧ್ಯಕ್ಷರು ಹೇಳಿದ್ದಾರೆ. ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳು ಮತ್ತು ಮಾಲೆಯಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ನಡುವಿನ ಸಭೆಯ ನಂತರ ಈ ಹೇಳಿಕೆ ಬಂದಿದೆ.

    ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿಯ ನೀತಿ ನಿರ್ದೇಶಕ ಅಬ್ದುಲ್ಲಾ ನಜೀಮ್ ಸುದ್ದಿಗಾರರೊಂದಿಗೆ ಮಾತನಾಡಿ, ಅಧ್ಯಕ್ಷ ಮುಯಿಝು ಮಾಲ್ಡೀವ್ಸ್‌ನಿಂದ ಭಾರತೀಯ ಸೈನಿಕರನ್ನು ಹಿಂತೆಗೆದುಕೊಳ್ಳಲು ಪ್ರಸ್ತಾಪಿಸಿದ್ದಾರೆ.  ಮಾರ್ಚ್ 15 ರ ಒಳಗೆ ಭಾರತೀಯ ಸೈನಿಕರನ್ನು ತೆಗೆದುಹಾಕುವ ಪ್ರಸ್ತಾಪವನ್ನು ಮಾಲ್ಡೀವ್ಸ್‌ ಅಧ್ಯಕ್ಷರು ಮಾಡಿದ್ದಾರೆ. ಆದರೆ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವರದಿಯಾದ ಸಭೆಯ ಬಗ್ಗೆ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ.

    ಮಾಲ್ಡೀವ್ಸ್‌ ಅಧ್ಯಕ್ಷರ ಕಚೇರಿಯ ಮುಖ್ಯಸ್ಥ ಅಬ್ದುಲ್ಲಾ ಫಯಾಜ್, ಲಾರ್ಜ್‌ನಲ್ಲಿರುವ ರಾಯಭಾರಿ ಅಲಿ ನಸೀರ್, ಭಾರತದ ಮಾಲ್ಡೀವ್ಸ್ ರಾಯಭಾರಿ ಇಬ್ರಾಹಿಂ ಶಹೀಬ್ ಮತ್ತು ರಕ್ಷಣಾ ಪಡೆಯ ಮುಖ್ಯಸ್ಥ ಅಬ್ದುಲ್ ರಹೀಂ ಅಬ್ದುಲ್ ಲತೀಫ್ ಸಭೆ ನಡೆಸಿದ್ದಾರೆ.

     

    ಮಾಲ್ಡೀವ್ಸ್‌ನಲ್ಲಿ ಭಾರತೀಯ ಪಡೆಗಳನ್ನು ತೆಗೆದುಹಾಕುವುದು ಮುಯಿಝು ಪಕ್ಷದ ಪ್ರಮುಖ ಅಭಿಯಾನವಾಗಿತ್ತು. ಪ್ರಸ್ತುತ, ಡಾರ್ನಿಯರ್ 228 ಕಡಲ ಗಸ್ತು ವಿಮಾನ ಮತ್ತು ಎರಡು HAL ಧ್ರುವ್ ಹೆಲಿಕಾಪ್ಟರ್‌ಗಳೊಂದಿಗೆ ಸುಮಾರು 70 ಭಾರತೀಯ ಸೈನಿಕರು ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿದ್ದಾರೆ.

  • ‘ಬಿಗ್ ಬಾಸ್ ಶೋ’ ಸೆನ್ಸಾರ್ ಕುರಿತು ಹೈಕೋರ್ಟ್ ಕಳವಳ

    ‘ಬಿಗ್ ಬಾಸ್ ಶೋ’ ಸೆನ್ಸಾರ್ ಕುರಿತು ಹೈಕೋರ್ಟ್ ಕಳವಳ

    ತೆಲುಗಿನ ಬಿಗ್ ಬಾಸ್ (Bigg Boss) ಆವೃತ್ತಿ 7 ಇನ್ನಷ್ಟೇ ಆರಂಭವಾಗಬೇಕಿದೆ. ಅದಕ್ಕೂ ಮುನ್ನ ಆಂಧ್ರದ ಹೈಕೋರ್ಟ್ (High Court) ಬಿಗ್ ಬಾಸ್ ಕಾರ್ಯಕ್ರಮಕ್ಕೆ ಶಾಕ್ ನೀಡಿದೆ. ಹಿಂದಿ, ಕನ್ನಡ, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಈ ಶೋ ಪ್ರಸಾರವಾಗುತ್ತಿದ್ದು, ಇದೇ ಮೊದಲ ಬಾರಿಗೆ ಈ ಶೋನಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತಿದೆ ಮತ್ತು ಅದರಲ್ಲಿ ಅಶ್ಲೀಲ ಕಂಟೆಂಟ್ ಇರುತ್ತದೆ ಎನ್ನುವ ಕಾರಣಕ್ಕಾಗಿ ಆಂಧ್ರಪ್ರದೇಶದ ಹೈಕೋರ್ಟ್ ಮೆಟ್ಟಿಲು ಏರಲಾಗಿತ್ತು.

    ತೆಲುಗು ಯುವಶಕ್ತಿ ಅಧ್ಯಕ್ಷ ಮತ್ತು ನಿರ್ಮಾಪಕ ಕೇತಿರೆಡ್ಡಿ ಜಗದೀಶ್ವರ ರೆಡ್ಡಿ ಎನ್ನುವವರು ಬಿಗ್ ಬಾಸ್ ಶೋ ವಿರುದ್ಧ ಹೈಕೋರ್ಟಿಗೆ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಮಾನ್ಯ ನ್ಯಾಯಾಲಯ ‘ಕಿರುತೆರೆಯ ಕಾರ್ಯಕ್ರಮಗಳಲ್ಲಿ ಅಶ್ಲೀಲತೆ ಇದ್ದರೆ ಅದರ ಮೇಲೆ ಯಾಕೆ ನಿಗಾ ಇಡಬಾರದು?’ ಎಂದು ಅಭಿಪ್ರಾಯ ಪಟ್ಟಿತು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯ ಎರಡೂ ಇದರಲ್ಲಿ ಅಡಗಿರುವುದರಿಂದ ಆಳವಾಗಿ ವಿಚಾರಣೆ ನಡೆಸುವುದು ಸೂಕ್ತವೆಂದು ಪೀಠ ಅಭಿಪ್ರಾಯಪಟ್ಟಿದೆ.

    ಬಿಗ್ ಬಾಸ್ ಶೋ ಪರ ವಕೀಲರು ‘ಕಿರುತೆರೆಗೆ ಸೆನ್ಸಾರ್ (Censor) ವ್ಯವಸ್ಥೆಯಿಲ್ಲ. ಅಲ್ಲದೇ, ಸೆನ್ಸಾರ್ ಮಾಡುವುದೇ ಆದರೆ ಕೇಂದ್ರ ಸರಕಾರ ಕಾನೂನು ರೂಪಿಸಬೇಕು. ಇಂತಹ ಶೋಗಳು ಇಷ್ಟವಾಗದೇ ಇದ್ದರೆ ಚಾನೆಲ್ ಬದಲಾಯಿಸುವ ಎಲ್ಲ ಹಕ್ಕುಗಳು ನೋಡುಗನಿಗೆ ಇದೆ ಎಂದು ವಾದಿಸಿದರು. ವಾದವನ್ನು ಆಲಿಸಿದ ಪೀಠ ‘ಆಕ್ಷೇಪಾರ್ಹ ಕಂಟೆಂಟ್ ಗಳ ಪ್ರಸಾರಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಪ್ರಶ್ನೆ ಮಾಡಿತು. ಜೊತೆಗೆ ಶೋ ಪ್ರಸಾರಕ್ಕೂ ಮುನ್ನ ಸೆನ್ಸಾರ್ ಮಾಡುವ ವಿಚಾರದಲ್ಲಿ ಕೇಂದ್ರಕ್ಕೆ ಸೂಚನೆ ನೀಡುವ ಬಗ್ಗೆ ಯೋಚಿಸುವುದಾಗಿಯೂ ಕೋರ್ಟ್ ಹೇಳಿತು.

    ನಾಲ್ಕು ವಾರಗಳ ಕಾಲ ವಿಚಾರಣೆ ಮುಂದೂಡಿದ ಘನ ನ್ಯಾಯಾಲಯವು, ಸೆನ್ಸಾರ್ ಮಂಡಳಿಗೆ, ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಚಾನೆಲ್ ಮತ್ತು ಶೋ ಆಯೋಜಕರಿಗೆ ಹಾಗೂ ಬಿಗ್ ಬಾಸ್ ಶೋ ನಡೆಸಿಕೊಡುವ ನಟ ನಾಗಾರ್ಜುನ್ (Nagarjuna) ಅವರಿಗೆ ‘ಆಕ್ಷೇಪಾರ್ಹ ಕಂಟೆಂಟ್ ಮತ್ತು ಸೆನ್ಸಾರ್ ಕುರಿತಂತೆ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ಆದೇಶ ನೀಡಿದೆ.

    ಈಗಾಗಲೇ ತೆಲುಗಿನ ಬಿಗ್ ಬಾಸ್ ಸೀಸನ್ 7 ಪ್ರೋಮೋ ರಿಲೀಸ್ ಆಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಸರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸ್ಪರ್ಧಿಗಳ ಆಯ್ಕೆಯನ್ನೂ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಹೈಕೋರ್ಟ್ ಆದೇಶ ಮತ್ತು ಅಭಿಪ್ರಾಯ ಆಯೋಜಕರನ್ನು ಚಿಂತೆಗೆ ದೂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೆಲುಗಿನ ನಟ ನಾಗಾರ್ಜುನ್ ಜೊತೆ ತೆರೆಹಂಚಿಕೊಂಡ ಕಾವ್ಯ ಶೆಟ್ಟಿ

    ತೆಲುಗಿನ ನಟ ನಾಗಾರ್ಜುನ್ ಜೊತೆ ತೆರೆಹಂಚಿಕೊಂಡ ಕಾವ್ಯ ಶೆಟ್ಟಿ

    ನ್ನಡದ ನಟಿ ಕಾವ್ಯಾ ಶೆಟ್ಟಿ (Kavya Shetty) ಅವರು ಇದೀಗ ಬಹುಭಾಷಾ ನಟಿಯಾಗಿ ಮಿಂಚ್ತಿದ್ದಾರೆ. ಈ ನಡುವೆ ತೆಲುಗಿನ ಸ್ಟಾರ್ ನಟ ನಾಗಾರ್ಜುನ್ (Nagarjuna) ಜೊತೆ ಕಾವ್ಯ ತೆರೆಹಂಚಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ‘ನಮ್ ದುನಿಯಾ ನಮ್ ಸ್ಟೈಲ್’ ಸಿನಿಮಾ ಮೂಲಕ ಚಂದನವನಕ್ಕೆ ಪರಿಚಿತರಾದ ನಟಿ ಕಾವ್ಯ ಅವರು ಇಷ್ಟಕಾಮ್ಯ, ಸಂಹಾರ, ಯುವರತ್ನ, ಲಂಕೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿ ಅಭಿನಯಿಸಿದ್ದಾರೆ. ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ:ಭಾವಿ ಪತ್ನಿ ಜೊತೆಗಿನ ಅಭಿಷೇಕ್ ಅಂಬರೀಶ್ ವೀಡಿಯೋ ವೈರಲ್

    ತೆಲುಗಿನ ನಟ ನಾಗಾರ್ಜುನ್ ಅವರ ಜೊತೆ ತೆರೆಹಂಚಿಕೊಳ್ಳುವ ಮೂಲಕ ಕಾವ್ಯ ಶೆಟ್ಟಿ ಸುದ್ದಿಯಲ್ಲಿದ್ದಾರೆ. ಜಾಹಿರಾತುವೊಂದರಲ್ಲಿ ನಟಿ ಕಾವ್ಯ, ನಾಗಾರ್ಜುನ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

     

    View this post on Instagram

     

    A post shared by Kavya Manohar (@kavyashettyofficial)

    ಕರಾವಳಿ ಕುವರಿ ಕಾವ್ಯ ಶೆಟ್ಟಿ ಅವರು ಕನ್ನಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುವ ಮೂಲಕ ನಟಿ ಸದ್ದು ಮಾಡ್ತಿದ್ದಾರೆ.

  • ಬಿಗ್ ಬಾಸ್ ಹೋಸ್ಟ್ ಸ್ಥಾನಕ್ಕೆ ವಿದಾಯ ಹೇಳಿದ ನಟ ನಾಗಾರ್ಜುನ್

    ಬಿಗ್ ಬಾಸ್ ಹೋಸ್ಟ್ ಸ್ಥಾನಕ್ಕೆ ವಿದಾಯ ಹೇಳಿದ ನಟ ನಾಗಾರ್ಜುನ್

    ತೆಲುಗು ಬಿಗ್ ಬಾಸ್ (Bigg Boss) ಸೀಸನ್ 6 ಇತ್ತೀಚೆಗಷ್ಟೇ ಅಂತ್ಯವಾಯಿತು. ನಟ ನಾಗಾರ್ಜುನ್ ನಿರೂಪಣೆಯಲ್ಲಿ ಬಿಗ್ ಬಾಸ್ ಅದ್ಭುತವಾಗಿ ಮೂಡಿ ಬಂದಿತ್ತು. ಇದೀಗ ಈ ಬೆನ್ನಲ್ಲೇ ಶಾಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ. ಸೀಸನ್ 7ಕ್ಕೆ ಸಿದ್ಧತೆ ನಡೆಯುತ್ತಿರುವ ವೇಳೆಯಲ್ಲಿ ನಾಗಾರ್ಜುನ್ (Nagarjuna) ಬಿಗ್ ಬಾಸ್ ಶೋನಿಂದ ಹಿಂದೆ (Exit) ಸರಿದಿದ್ದಾರೆ ಎನ್ನಲಾಗುತ್ತಿದೆ.

    ತೆಲುಗು ಕಿರುತೆರೆಯ ಜನಪ್ರಿಯ ಶೋ ಬಿಗ್ ಬಾಸ್ ಹೋಸ್ಟ್ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ. ಆದರೆ ಈ ಸುದ್ದಿಯ ಬಗ್ಗೆ ಪ್ರಾಯೋಜಕರು ಅಥವಾ ನಾಗಾರ್ಜುನ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೆಲವು ವೈಯಕ್ತಿಕ ಕಾರಣಗಳಿಂದ ಶೋಗೆ ನಾಗಾರ್ಜುನ್ ವಿದಾಯ ಹೇಳಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ ಎನರ್ಜಿ ಡಬಲ್ ಆಯ್ತು: ಅನುಪಮಾ

    ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಾಗಾರ್ಜುನ್ ಅವರ ಸ್ಥಾನಕ್ಕೆ ಯಾರನ್ನ ಕರೆತರುತ್ತಾರೆ ಎಂಬುದರ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ. ಮೂಲಗಳ ಪ್ರಕಾರ, ರಾಣಾ ದಗ್ಗುಭಾಟಿ(Rana Daggubati) , ಅಥವಾ ವಿಜಯ್ ದೇವರಕೊಂಡ (Vijay Devarakonda) ಅವರನ್ನ ಕರೆತರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಹಿಂದೆ ಜ್ಯೂ.ಎನ್‌ಟಿಆರ್ ಮತ್ತು ನಾನಿ ಕೂಡ ಬಿಗ್ ಬಾಸ್ ಶೋನ ನಿರೂಪಣೆ ಮಾಡಿದ್ದರು.

    ಇನ್ನೂ ಬಿಗ್ ಬಾಸ್ ಸೀಸನ್ 6ರಲ್ಲಿ ಎಲ್.ವಿ ರೇವಂತ್ (L.v Revanth) ವಿನ್ನರ್ ಆಗಿ ಹೊರಹೊಮ್ಮಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸಮಂತಾ ಬಾಳಲ್ಲಿ ಆಶಾಕಿರಣ: ನಾಗ ಚೈತನ್ಯ ಮನಸ್ಸು ಮಾಡಲಿ ಎಂದು ಫ್ಯಾನ್ಸ್

    ಸಮಂತಾ ಬಾಳಲ್ಲಿ ಆಶಾಕಿರಣ: ನಾಗ ಚೈತನ್ಯ ಮನಸ್ಸು ಮಾಡಲಿ ಎಂದು ಫ್ಯಾನ್ಸ್

    ತೆಲುಗಿನ ಸೂಪರ್ ಜೋಡಿ ಸಮಂತಾ (Samantha) ಮತ್ತು ನಾಗ ಚೈತನ್ಯ ಡಿವೋರ್ಸ್ (Divorce) ನಂತರ ಅವರ ಜೀವನದಲ್ಲಿ ಹಲವಾರು ಘಟನೆಗಳು ನಡೆದಿವೆ. ಏನೇ ಘಟನೆಗಳು ಜರುಗಿದರೂ, ಇಬ್ಬರೂ ಮಾತ್ರ ವಿಚ್ಚೇದನೆಯಿಂದ ದೂರ ಸರಿಯಲು ಮನಸ್ಸು ಮಾಡಿರಲಿಲ್ಲ. ಆದರೆ, ಇದೀಗ ಈ ಜೋಡಿ ಮತ್ತೆ ಒಂದಾಗಲು ಮುಂದಾಗಿದೆ ಎನ್ನುವ ವಿಷಯ ತೆಲುಗು ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ. ಈ ಜೋಡಿಯನ್ನು ಒಂದು ಮಾಡಲು ಸ್ವತಃ ನಾಗ ಚೈತನ್ಯ ತಂದೆ ನಾಗಾರ್ಜುನ ಅಖಾಡಕ್ಕೆ ಇಳಿದಿದ್ದಾರಂತೆ.

    ಸಮಂತಾರ ಆರೋಗ್ಯದಲ್ಲಿ ಏರುಪೇರಾದ ಸಂದರ್ಭದಲ್ಲಿ ನಾಗಚೈತನ್ಯ ಕಾಲ್ ಮಾಡಿ ಸಮಂತಾರ ಆರೋಗ್ಯ ವಿಚಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಸಮಂತಾ ಕೂಡ ಅಷ್ಟೇ ಆಸಕ್ತಿಯಿಂದ ಮಾತನಾಡಿದ್ದಾರಂತೆ. ಇಬ್ಬರಲ್ಲೂ ಇದೀಗ ಪ್ರೀತಿ ಮತ್ತೆ ಚಿಗುರುತ್ತಿರುವುದರಿಂದ ಈ ಜೋಡಿ ಒಂದಾಗಿರಲಿ ಎನ್ನುವುದು ಹಲವರ ಆಸೆ. ಆ ಆಸೆಗೆ ಪೂರಕ ಎನ್ನುವಂತೆ ನಾಗಾರ್ಜುನ (Nagarjuna) ಕೆಲಸ ಮಾಡುತ್ತಿದ್ದಾರಂತೆ. ಈ ಕೆಲಸಕ್ಕೆ ಸಕಾರಾತ್ಮಕ ಸ್ಪಂದನೆ ಸಿಗಬಹುದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಅಥರ್ವ್-ಆಧವ್ ಎಂದು ಅವಳಿ ಮಕ್ಕಳಿಗೆ ಮುದ್ದಾದ ಹೆಸರಿಟ್ಟ ನಟಿ ಅಮೂಲ್ಯ

    ಸಮಂತಾ ಮತ್ತು ನಾಗಚೈತನ್ಯ (Naga Chaitanya) ಈಗಾಗಲೇ ದೂರವಾಗಿ ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸಿದ್ದಾರೆ. ಇಬ್ಬರಿಗೂ ತಮ್ಮ ತಮ್ಮ ತಪ್ಪಿನ ಅರಿವಾಗಿದ್ದು, ಅವುಗಳನ್ನು ತಿದ್ದುಕೊಳ್ಳುವತ್ತ ಮನಸ್ಸು ಮಾಡಿದ್ದಾರೆ. ಈ ಕಾರಣದಿಂದಾಗಿಯೇ ನಾಗಾರ್ಜುನ್ ಇಂಥದ್ದೊಂದು ಕೆಲಸಕ್ಕೆ ಕೈ ಹಾಕಿದ್ದಾರಂತೆ. ಮತ್ತೆ ಈ ಜೋಡಿ ಒಂದಾಗಿ ಸಾಕಷ್ಟು ಉತ್ತಮ ಸಿನಿಮಾಗಳನ್ನು ನೀಡಲಿ ಎನ್ನುವುದು ಇಬ್ಬರೂ ಅಭಿಮಾನಿಗಳ ಆಶಯ.

    Live Tv
    [brid partner=56869869 player=32851 video=960834 autoplay=true]

  • ಡಿಎಸ್ಪಿ ಆಲ್ಬಂ ರಿಲೀಸ್ ಮಾಡಿದ ಕಮಲ್ ಹಾಸನ್, ನಾಗಾರ್ಜುನ

    ಡಿಎಸ್ಪಿ ಆಲ್ಬಂ ರಿಲೀಸ್ ಮಾಡಿದ ಕಮಲ್ ಹಾಸನ್, ನಾಗಾರ್ಜುನ

    ಕ್ಷಿಣ ಭಾರತದ ಅತ್ಯಂತ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ರಾಕ್ಸ್ಟಾರ್ ಎಂದೇ ಜನಪ್ರಿಯರಾಗಿರುವ ದೇವಿ ಶ್ರೀಪ್ರಸಾದ್ (Devi Sriprasad) ಅಲಿಯಾಸ್ ಡಿಎಸ್ಪಿ, ಟಿ-ಸೀರೀಸ್ ಜೊತೆಗೆ ಕೈಜೋಡಿಸಿ ‘ಓ ಪರಿ’ (O Pari) ಎಂಬ ಹಿಂದಿ ಸಿಂಗಲ್ ಹೊರತಂದಿರುವುದು, ಅದನ್ನು ಇತ್ತೀಚೆಗೆ ಮುಂಬೈನಲ್ಲಿ ರಣವೀರ್ ಸಿಂಗ್ ಬಿಡುಗಡೆ ಮಾಡಿದ್ದು ಗೊತ್ತೇ ಇದೆ. ಇದೊಂದು ಪ್ಯಾನ್ ಇಂಡಿಯಾ ಹಾಡಾಗಿದ್ದು, ಹಿಂದಿಯಲ್ಲದೆ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಮೂಡಿಬಂದಿದೆ. ಈಗ ‘ಓ ಪರಿ’ಯ ತಮಿಳಿನ ಅವತರಣಿಕೆಯಾದ ‘ಓ ಪೆಣ್ಣೆ’ ಮತ್ತು ತೆಲುಗು ಅವತರಣಿಕೆಯಾದ ‘ಓ ಪಿಲ್ಲ’ ಹಾಡುಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ತಮಿಳು ಮತ್ತು ತೆಲುಗು ‘ಬಿಗ್ ಬಾಸ್’ ಕಾರ್ಯಕ್ರಮಗಳ ಲಾಂಚ್ನಲ್ಲಿ ಎರಡೂ ಹಾಡುಗಳು ಬಿಡುಗಡೆಯಾಗಿದ್ದು, ತಮಿಳು ಹಾಡನ್ನು ಕಮಲ್ ಹಾಸನ್ ಬಿಡುಗಡೆ ಮಾಡಿದರೆ, ತೆಲುಗು ಹಾಡನ್ನು ನಾಗಾರ್ಜುನ ಬಿಡುಗಡೆ ಮಾಡಿ ಡಿಎಸ್ಪಿಗೆ ಶುಭ ಕೋರಿದ್ದಾರೆ.

    ‘ಓ ಪಿಲ್ಲ’ ಹಾಡನ್ನು ಬಿಡುಗಡೆ ಮಾಡಿ ಮಾತನಾಡಿರುವ ನಾಗಾರ್ಜುನ (Nagarjun), ‘’ಓ ಪರಿ’ ಹಾಡು ಸೂಪರ್ ಹಿಟ್ ಆಗಿದೆ, ಈ ಹಾಡು ತೆಲುಗಿನಲ್ಲೂ ಮೂಡಿಬರಬೇಕಿತ್ತು ಅಂದುಕೊಳ್ಳುತ್ತಿರುವಾಗಲೇ, ಡಿಎಸ್ಪಿ ತೆಲುಗು ಹಾಡಿನೊಂದಿಗೆ ಬಂದಿದ್ದಾರೆ. ಈ ಹಾಡು ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ನನಗೆ ಮೊದಲಿನಿಂದಲೂ ಡಿಎಸ್ಪಿ ಅವರ ಪ್ರತಿಭೆ ಕುರಿತು ವಿಶೇಷವಾದ ಕುತೂಹಲ, ಆಸಕ್ತಿ ಎರಡೂ ಇದೆ. ಅವರು ಹೇಗೆ ಇಷ್ಟೊಂದು ಅದ್ಭುತವಾಗಿ ಕೆಲಸ ಮಾಡುವುದರ ಜೊತೆಗೆ, ಹೇಗೆ ಈ ರೀತಿ ಹಿಟ್ ಹಾಡುಗಳನ್ನು ಕೊಡುವುದಕ್ಕೆ ಸಾಧ್ಯ ಎಂಬ ಪ್ರಶ್ನೆ ಇದೆ. ಹಾಗಿರುವಾಗಲೇ ಡಿಎಸ್ಪಿ ಇನ್ನೊಂದು ಅದ್ಭುತ ಹಾಡಿನೊಂದಿಗೆ ವಾಪಸ್ಸಾಗಿದ್ದಾರೆ’ ಎಂದಿದ್ದಾರೆ ನಾಗಾರ್ಜುನ. ಇದನ್ನೂ ಓದಿ:ಬಿಗ್ ಬಾಸ್ ಆಟಕ್ಕೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ ಆರ್ಯವರ್ಧನ್ ಗುರೂಜಿ

    ಡಿಎಸ್ಪಿ ತಮಗೆ ಬಹಳ ವರ್ಷಗಳಿಂದ ಗೊತ್ತು ಎಂದು ಹೇಳಿಕೊಂಡಿರುವ ಕಮಲ್ ಹಾಸನ್ (Kamal Haasan), ‘ಅವರು ತಮ್ಮ ಹಾಡು ಮತ್ತು ಪ್ರತಿಭೆಯಿಂದ ನನ್ನನ್ನು ಖುಷಿಪಡಿಸುತ್ತಲೇ ಇದ್ದಾರೆ. ತಮ್ಮ ಸಾಧನೆಗಳಿಂದ ಹೊಸಹೊಸ ಮೈಲಿಗಲ್ಲುಗಳನ್ನು ತಲುಪುತ್ತಿದ್ದಾರೆ. ಪ್ರತಿಯೊಬ್ಬ ಸಂಗೀತ ನಿರ್ದೇಶಕರು ಸಹ ಈ ನಿಟ್ಟಿನಲ್ಲಿ ಹೊಸ ಸಾಧನೆಗಳನ್ನು ಮಾಡುವುದರ ಬಗ್ಗೆ ಯೋಚಿಸಬೇಕು. ಅವರ ಸಾಧನೆ ಮತ್ತು ಕೆಲಸಗಳಿಗೆ ಪ್ರತಿಯಾಗಿ ಅವರಿಗೆ ಯಶಸ್ಸು ಸಿಗುತ್ತಲೇ ಇದ್ದು, ಈಗ ಓ ಪರಿ ಮೂಲಕ ಮತ್ತೊಂದು ದೊಡ್ಡ ಯಶಸ್ಸನ್ನು ಕಂಡಿದ್ದಾರೆ ಡಿಎಸ್ಪಿ. ಅವರು ಇನ್ನಷ್ಟು ಎತ್ತರಗಳನ್ನು ಕಾಣಲಿ ಎನ್ನುವುದರ ಜೊತೆಗೆ, ಅವರಿಗೆ ಬೆನ್ನೆಲುಬಾಗಿ ನಿಂತಿರುವ ಭೂಷಣ್ ಕುಮಾರ್‌ರಂತಹವರ ಸಹಕಾರ ಹೀಗೆಯೇ ಮುಂದುವರೆಯಲಿ’ ಎಂದು ಹಾರೈಸಿದ್ದಾರೆ.

    ಕಮಲ್ ಹಾಸನ್ ಮತ್ತು ನಾಗಾರ್ಜುನ ಅವರ ಸಹಕಾರ ಮರೆಯುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಡಿಎಸ್ಪಿ, ಅವರಿಬ್ಬರ ಪ್ರೋತ್ಸಾಹವಿಲ್ಲದೆ ಇಷ್ಟು ದೂರ ಬರುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ. ಇಂಥದ್ದೊಂದು ಅಂತಾರಾಷ್ಟ್ರೀಯ ಮಟ್ಟದ ಹಾಡಿನ ಬಗ್ಗೆ ನಾನು ಮೊದಲು ಪ್ರಸ್ತಾಪ ಮಾಡಿದ್ದು ಕಮಲ್ ಹಾಸನ್ ಅವರ ಬಳಿ. ಅವರ ಪ್ರೋತ್ಸಾಹದ ಮಾತುಗಳು ನನ್ನನ್ನು ಈ ಹಾಡು ಸಂಯೋಜಿಸುವಂತೆ ಮಾಡಿತು. ಅವರ ಸಂಗೀತಾಸಕ್ತಿಯೇ ನಮ್ಮಿಬ್ಬರನ್ನೂ ಇಷ್ಟು ಹತ್ತಿರಕ್ಕೆ ಸೇರಿಸಿದ್ದು. ಅದೇ ಕಾರಣಕ್ಕೆ ಈ ಹಾಡನ್ನು ಅವರಿಂದಲೇ ಬಿಡುಗಡೆ ಮಾಡಿಸಲಾಯಿತು ಎಂದು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾಗಚೈತನ್ಯ- ಸಮಂತಾ ಬ್ರೇಕಪ್ ಬಗ್ಗೆ ಕೊನೆಗೂ ಮೌನ ಮುರಿದ ನಟ ನಾಗಾರ್ಜುನ್

    ನಾಗಚೈತನ್ಯ- ಸಮಂತಾ ಬ್ರೇಕಪ್ ಬಗ್ಗೆ ಕೊನೆಗೂ ಮೌನ ಮುರಿದ ನಟ ನಾಗಾರ್ಜುನ್

    ಟಾಲಿವುಡ್‌ನ ಬೆಸ್ಟ್ ಕಪಲ್ ಎಂದೇ ಫೇಮಸ್ ಆಗಿದ್ದ ನಾಗಚೈತನ್ಯ(Nagachaitanya) ಮತ್ತು ಸಮಂತಾ (Samantha) ಕಳೆದ ವರ್ಷ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ಇದೀಗ ಇಬ್ಬರು ತಮ್ಮ ವೃತ್ತಿ ಜೀವನದತ್ತ ಗಮನ ಕೊಡ್ತಿದ್ದಾರೆ. ಇದೀಗ ನಾಗ್ ಮತ್ತು ಸಮಂತಾ ಬಗ್ಗೆ ಮೊದಲ ಬಾರಿಗೆ ನಟ ನಾಗಾರ್ಜುನ್(Nagarjuna) ಮೌನ ಮುರಿದಿದ್ದಾರೆ.

    ನಾಗಚೈತನ್ಯ ಮತ್ತು ಸಮಂತಾ ತೆರೆಯ ಮೇಲೆ ಅಷ್ಟೇ ಅಲ್ಲ, ತೆರೆಯ ಹಿಂದೆ ಬೆಸ್ಟ್ ಜೋಡಿ ಎಂದೇ ಖ್ಯಾತಿ ಪಡೆದಿದ್ದರು. ಆದರೆ ವೈಯಕ್ತಿಕ ಬದುಕಿನಲ್ಲಿ ಅದೆನೆಲ್ಲಾ ಬೆಳವಣಿಗೆ ಆಯ್ತೋ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟರು. ನೆಚ್ಚಿನ ಜೋಡಿ ದೂರ ಆಗಿರೋದ್ದಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರ ಹಾಕಿದ್ದರು. ನಾಗಚೈತನ್ಯ, ಸಮಂತಾ ಬ್ರೇಕಪ್ ಬಗ್ಗೆ ನಟ ನಾಗಾರ್ಜುನ್ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಪುನೀತ್ ಅಭಿಮಾನಿಗಳಿಗೆ ಗುಡ್‍ನ್ಯೂಸ್- ಅಪ್ಪು ಜನ್ಮದಿನ ಇನ್ಮೇಲೆ ಸ್ಫೂರ್ತಿ ದಿನ

    ಮಗ ನಾಗ್ ಈಗ ಖುಷಿಯಾಗಿದ್ದಾನೆ. ನಮಗೆ ಅಷ್ಟೇ ಸಾಕು, ಅವನ ಜೀವನದಲ್ಲಿ ಹೀಗೆಲ್ಲಾ ನಡೀಬಾರದಿತ್ತು. ಆದರೆ ಕೈ ಮೀರಿ ನಡೆದು ಹೋಗಿದೆ. ಸಮಂತಾಳನ್ನು ನಾವು ಮರೆತಿದ್ದೇವೆ. ನೀವು ಮರೆತು ಬಿಡಿ ಎಂದು ಅಭಿಮಾನಿಗಳಿಗೆ ನಟ ನಾಗಾರ್ಜುನ್ ಹೇಳಿದ್ದಾರೆ.

    ಇನ್ನು ಡಿವೋರ್ಸ್ ನಂತರ ಸಮಂತಾಗೆ ಮತ್ತಷ್ಟು ಬೇಡಿಕೆ ಜಾಸ್ತಿ ಆಗಿದೆ. ದಕ್ಷಿಣ ಭಾರತದ ಟಾಪ್ ಒನ್ ನಾಯಕಿಯಾಗಿ ಸಮಂತಾ (Samantha) ಮಿಂಚ್ತಿದ್ದಾರೆ. ತನ್ನ ಜೀವನದ ಎಲ್ಲಾ ಕಹಿ ಘಟನೆಗಳನ್ನ ಮರೆತು ವೃತ್ತಿರಂಗದಲ್ಲಿ ಯಶಸ್ವಿಯಾಗಿ ನಿಂತಿದ್ದಾರೆ.

    Live Tv
    [brid partner=56869869 player=32851 video=960834 autoplay=true]