Tag: ನಾಗಾರ್ಜುನ

  • ರಸ್ತೆಯಲ್ಲಿ ಅಡುಗೆ ಮಾಡಿ ಖುಷಿಪಟ್ಟ ನಾಗಾರ್ಜುನ ಸೊಸೆ

    ರಸ್ತೆಯಲ್ಲಿ ಅಡುಗೆ ಮಾಡಿ ಖುಷಿಪಟ್ಟ ನಾಗಾರ್ಜುನ ಸೊಸೆ

    ಸೆಲೆಬ್ರಿಟಿಗಳು ಕೆಲವೊಮ್ಮೆ ಸಿಂಪಲ್ ಲೈಫ್ ಇಷ್ಟ ಪಡ್ತಾರೆ ಅನ್ನೋದನ್ನ ನಾವೆಲ್ಲರೂ ಕೇಳಿದ್ದೇವೆ. ಇಂಥಹ ಜೀವನ ಇಷ್ಟ ಪಡುವ ಸೆಲೆಬ್ರಿಟಿಗಳು ಕಡಿಮೆ ಜನರಿರುವ ಜಾಗಕ್ಕೆ ಹೋಗಿ ಸಾಮಾನ್ಯರಂತೆ ಕೆಲ ಸಮಯ ಕಳೆದು ಬರ್ತಾರೆ.

     

    View this post on Instagram

     

    A post shared by Sobhita Dhulipala (@sobhitad)

    ಇದೀಗ ಇಂಥದ್ದೇ ಲೈಫ್ ಫೀಲ್ ಮಾಡಿರುವ ನಟಿ ಶೋಭಿತಾ ಧೂಲಿಪಲಾ (Sobhita Dhulipala) ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೋ ಹಾಗೂ ವೀಡಿಯೋಗಳನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ‘ಮಹಾನ್’ ಚಿತ್ರ ಒಪ್ಪಿಕೊಂಡ ಬಿಗ್ ಬಾಸ್ ಖ್ಯಾತಿಯ ನಟಿ ನಮ್ರತಾ

    ಸೂಪರ್ ಸ್ಟಾರ್ ನಾಗಾರ್ಜುನ ಸೊಸೆ, ನಟ ನಾಗಚೈತನ್ಯ ಪತ್ನಿ ಶೋಭಿತಾ ಪ್ರವಾಸದ ವೇಳೆ ಅಡುಗೆ ಮಾಡ್ತಿರುವ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್‌ ಪ್ರೋಮೋ ರಿಲೀಸ್‌ – ಸ್ಪರ್ಧಿಗಳ ಬಗ್ಗೆ ಮಾಹಿತಿಯೂ ಔಟ್‌

    ರಸ್ತೆಯಲ್ಲೇ ಅಡುಗೆ ಸಾಂಬಾರ್ ಮಾಡೋದು, ಬೆಂಡೇಕಾಯಿ ಕಟ್ ಮಾಡುವುದು, ತೆಂಗಿನಕಾಯಿ ಒಡೆಯೋದು,‌ ಕುಟಾಣಿಯಲ್ಲಿ ಕುಟ್ಟುವ ಕೆಲಸ ಮಾಡುತ್ತಿರುವ ಫೋಟೋಸ್ ಗಾಗೂ ವಿಡಿಯೋಗಳನ್ನ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಮ್ಮನೆ ಅವ್ರ ಮನೆ ಒಂದೇ, ನಾವೆಲ್ಲ ಒಂದೇ ಕುಟುಂಬದವರು: ಯಶ್‌ ತಾಯಿ ಪುಷ್ಪ ಅರುಣ್‌ಕುಮಾರ್

    ನಾಗಚೈತನ್ಯ 2ನೇ ಪತ್ನಿಯಾಗಿರುವ ಶೋಭಿತಾ ಸೂಪರ್ ಮಾಡೆಲ್ ಹಾಗೂ ನಟಿಯಾಗಿಯೂ ಗುರುತಿಸಿಕೊಂಡವರು. ಆದ್ರೆ ಇಷ್ಟು ಸರಳವಾಗಿರುತ್ತಾರೆಯೇ ಎಂದು ನೆಟ್ಟಿಗರು ಆಶ್ಚರ್ಯ ಪಡುವಂತೆ ನಡೆದುಕೊಂಡಿದ್ದಾರೆ. ಅಂದಹಾಗೆ ಶೋಭಿತಾಗೆ ಅಡುಗೆ ಮಾಡೋದು ಅಂದ್ರೆ ಇಷ್ಟ ಅನ್ನೋದು ಸಾಬೀತಾಗಿದೆ.

  • ಬಿಗ್‌ ಬಾಸ್‌ ತೆಲುಗು ಸೀಸನ್‌ 8; ಕರ್ನಾಟಕ ಮೂಲದ ನಿಖಿಲ್‌ ವಿನ್ನರ್‌

    ಬಿಗ್‌ ಬಾಸ್‌ ತೆಲುಗು ಸೀಸನ್‌ 8; ಕರ್ನಾಟಕ ಮೂಲದ ನಿಖಿಲ್‌ ವಿನ್ನರ್‌

    ಟಾಲಿವುಡ್‌ ಸೂಪರ್‌ ಸ್ಟಾರ್‌ ನಾಗಾರ್ಜುನ (Nagarjuna) ನಡೆಸಿಕೊಡುತ್ತಿದ್ದ ಬಿಗ್‌ ಬಾಸ್‌ ತೆಲುಗು ಸೀಸನ್‌ 8 (Bigg Boss Telugu 8) ಕ್ಕೆ ತೆರೆ ಬಿದ್ದಿದೆ. ಕರ್ನಾಟಕದ ಮೈಸೂರು ಮೂಲದ ನಿಖಿಲ್‌ ಮಲಿಯಕ್ಕಲ್‌ (Nikhil Maliyakkal) ಬಿಗ್‌ ಬಾಸ್‌ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ.

    ತೆಲುಗು ಟಿವಿ ಧಾರಾವಾಹಿಗಳ ಮೂಲಕ ಖ್ಯಾತಿ ಗಳಿಸಿದ ಕರ್ನಾಟಕ ಮೂಲದ ನಿಖಿಲ್‌, ಬಿಗ್‌ ಬಾಸ್‌ ಶೋ ಆರಂಭದ ಮೊದಲ ದಿನದಿಂದ ಮನೆಯಲ್ಲಿದ್ದರು. ಫೈನಲ್‌ನಲ್ಲಿ ಅವರು ಗೌತಮ್ ಕೃಷ್ಣ ಅವರನ್ನು ಸೋಲಿಸಿದ್ದಾರೆ. ಗೌತಮ್ ಸೀಸನ್ 7 ರಲ್ಲಿ ಭಾಗವಹಿಸಿದ್ದರು. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಈ ಸೀಸನ್‌ನಲ್ಲಿ ಎಂಟ್ರಿ ಕೊಟ್ಟಿದ್ದರು. ಈಗ ರನ್ನರ್‌ ಅಪ್‌ ಆಗಿದ್ದಾರೆ. ಇದನ್ನೂ ಓದಿ: ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಟ್ಟ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

    ರಿಯಾಲಿಟಿ ಶೋನ ಗ್ರ್ಯಾಂಡ್‌ ಫಿನಾಲೆಯಲ್ಲಿ ಮುಖ್ಯ ಅತಿಥಿಯಾಗಿ ನಟ ರಾಮ್‌ ಚರಣ್‌ ಆಗಮಿಸಿದ್ದರು. ವಿನ್ನರ್‌ ನಿಖಿಲ್‌ಗೆ ಬಿಗ್‌ ಬಾಸ್‌ ಟ್ರೋಫಿ, 55 ಲಕ್ಷ ರೂ. ನಗದು ಮತ್ತು ಮಾರುತಿ ಸುಜುಕಿ ಡಿಜೈರ್ ಕಾರನ್ನು ಬಹುಮಾನವಾಗಿ ನೀಡಿ ಅಭಿನಂದಿಸಿದರು.

    ಅಲ್ಲದೇ, ಹೆಚ್ಚುವರಿಯಾಗಿ ಶೋ ಸಮಯದಲ್ಲಿ ನಿಖಿಲ್‌ಗೆ ಸಂಭಾವನೆಯಾಗಿ ದಿನಕ್ಕೆ 32,143 ರೂ.ನಂತೆ ವಾರಕ್ಕೆ 2.25 ಲಕ್ಷ ರೂ. ಬಂದಿದೆ. ಇದನ್ನೂ ಓದಿ: ಭಾವಿ ಪತ್ನಿ ಜೊತೆ ಆಗಮಿಸಿ ಸಿಎಂಗೆ ಮೊದಲ ಮದುವೆ ಆಮಂತ್ರಣ ನೀಡಿದ ಡಾಲಿ

    ನಿಖಿಲ್ ಮಳಿಯಕ್ಕಲ್ ಕರ್ನಾಟಕದ ಮೈಸೂರು ಮೂಲದವರು. ಅವರ ತಂದೆ ಶಶಿ ಅಲ್ವಿನ್ ಮತ್ತು ತಾಯಿ ಸುಲೇಖಾ ಮಲಿಯಕ್ಕಲ್. ನಿಖಿಲ್‌ಗೆ ದಿಶಾಂಕ್ ಮಳಿಯಕ್ಕಲ್ ಎಂಬ ಕಿರಿಯ ಸಹೋದರನಿದ್ದಾನೆ.

  • ವೈವಾಹಿಕ ಜೀವನಕ್ಕೆ ಕಾಲಿಟ್ಟ ನಾಗಚೈತನ್ಯ, ಶೋಭಿತಾ – ನಾಗಾರ್ಜುನ ಭಾವುಕ

    ವೈವಾಹಿಕ ಜೀವನಕ್ಕೆ ಕಾಲಿಟ್ಟ ನಾಗಚೈತನ್ಯ, ಶೋಭಿತಾ – ನಾಗಾರ್ಜುನ ಭಾವುಕ

    ಹೈದರಾಬಾದ್: ಕೆಲ ವರ್ಷಗಳ ಡೇಟಿಂಗ್ ಬಳಿಕ ತೆಲುಗು ನಟ ನಾಗಚೈತನ್ಯ (Naga Chaitanya) ಮತ್ತು ನಟಿ ಶೋಭಿತಾ (Sobhita Dhulipala)  ಡಿಸೆಂಬರ್ 4ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ವೇಳೆ ಮಗನ ಮದುವೆ ಕಂಡು ತಂದೆ ನಾಗಾರ್ಜುನ (Nagarjuna Akkineni) ಭಾವುಕರಾಗಿದ್ದಾರೆ.

    ಡಿಸೆಂಬರ್ 4ರಂದು ರಾತ್ರಿ 8:15ಕ್ಕೆ ನಾಗಚೈತನ್ಯ ಹಾಗೂ ಶೋಭಿತಾ ಸಪ್ತಪದಿ ತುಳಿದಿದ್ದಾರೆ. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿರುವ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಪ್ರತಿಮೆ ಮುಂದೆ ನಾಗಚೈತನ್ಯ ಹಾಗೂ ಶೋಭಿತಾ ಕಲ್ಯಾಣ ನಡೆದಿದೆ. ತಂದೆ ನಾಗಾರ್ಜುನ ಮುಂದೆ ನಿಂತು ಮಗನ ಎರಡನೇ ಮದುವೆ ನಡೆಸಿದ್ದಾರೆ.

    ಮಗನ ಮದುವೆ ಫೋಟೋ ಎಕ್ಸ್‌ನಲ್ಲಿ ಹಂಚಿಕೊಂಡು ನಾಗಾರ್ಜುನ ಭಾವುಕರಾಗಿದ್ದಾರೆ. ಮಗನ ಮದುವೆ ಭಾವನಾತ್ಮಕ ಕ್ಷಣ. ನನ್ನ ಪ್ರೀತಿಯ ಚೈಗೆ ಅಭಿನಂದನೆಗಳು ಹಾಗೇ ಕುಟುಂಬಕ್ಕೆ ಸ್ವಾಗತ ಶೋಭಿತಾ. ನೀವಿಬ್ಬರು ನಮ್ಮ ಜೀವನದಲ್ಲಿ ತುಂಬಾ ಸಂತೋಷವನ್ನು ತಂದಿದ್ದೀರಿ ಎಂದು ಬರೆದು ಎಕ್ಸ್‌ನಲ್ಲಿ ನಾಗಾರ್ಜುನ ಪೋಸ್ಟ್ ಮಾಡಿದ್ದಾರೆ.

    ನಾಗಚೈತನ್ಯ ಹಾಗೂ ಶೋಭಿತಾ ಕಲ್ಯಾಣಕ್ಕೆ ಕೇವಲ 400 ಅತಿಥಿಗಳಿಗೆ ಮಾತ್ರ ಮದುವೆ ಆಹ್ವಾನ ನೀಡಲಾಗಿತ್ತು. ಅಲ್ಲು ಅರ್ಜುನ್, ರಾಮ್ ಚರಣ್ ದಂಪತಿ, ಮಹೇಶ್ ಬಾಬು ದಂಪತಿ, ಪ್ರಭಾಸ್, ರಾಜಮೌಳಿ, ಪಿ.ವಿ ಸಿಂಧೂ ಸೇರಿ ಹಲವು ಗಣ್ಯರು ನವದಂಪತಿಗೆ ಶುಭಕೋರಿದರು.

  • ರಜನಿಕಾಂತ್ ಮುಂದೆ ಅಬ್ಬರಿಸಲಿದ್ದಾರೆ ಅಕ್ಕಿನೇನಿ ನಾಗಾರ್ಜುನ

    ರಜನಿಕಾಂತ್ ಮುಂದೆ ಅಬ್ಬರಿಸಲಿದ್ದಾರೆ ಅಕ್ಕಿನೇನಿ ನಾಗಾರ್ಜುನ

    ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ ಮುಂದಿನ ಚಿತ್ರ `ಕೂಲಿ’. ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಿರುವ ಈ ಚಿತ್ರ ಫಸ್ಟ್ ಲುಕ್ ಟೀಸರ್‌ನಿಂದ ಭಾರೀ ಗಮನ ಸೆಳೆದಿತ್ತು. ಇದೀಗ ಚಿತ್ರೀಕರಣದ ಆರಂಭವಾಗಿದ್ದು ತಾರಾಗಣದ ಒಂದೊಂದೇ ಸುದ್ದಿಯನ್ನ ಟೀಮ್ ಅಧಿಕೃತವಾಗಿ ರಿಲೀಸ್ ಮಾಡುತ್ತಿದೆ. ಇದೀಗ `ಕೂಲಿ’ ತಂಡಕ್ಕೆ ಹೊಸ ಸ್ಟಾರ್ ನಟನ ಎಂಟ್ರಿಯಾಗಿದೆ. ಆ ಸ್ಟಾರ್ ನಟರೇ ಅಕ್ಕಿನೇನಿ ನಾಗಾರ್ಜುನ.

    `ಕೂಲಿ’ (Cooley) ಸಿನಿಮಾ ಮಲ್ಟಿಸ್ಟಾರರ್ ಆಗುತ್ತಿದೆ. ಸಾಮಾನ್ಯವಾಗಿ ಲೋಕೇಶ್ ಕನಕರಾಜ್ ಮಲ್ಟಿಸ್ಟಾರ್ ಸೇರಿಸಿ ಎಲ್ಲಾ ಪಾತ್ರಕ್ಕೂ ನ್ಯಾಯ ಕೊಡುವ ಕೆಲಸ ಅಚ್ಚುಕಟ್ಟಾಗಿ ಮಾಡ್ತಾರೆ. ಅದೇ ನಂಬಿಕೆಯಲ್ಲೇ ಬಹುಶಃ `ಕೂಲಿ’ ಚಿತ್ರಕ್ಕೆ ರಜನಿಕಾಂತ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲು ಒಪ್ಪಿಕೊಂಡಿರುವ ಸಾಧ್ಯತೆ ಇದೆ. ಖುದ್ದು ನಾಗಾರ್ಜುನ (Nagarjuna) ಈ ವಿಷಯವನ್ನ ಅಧಿಕೃತವಾಗಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಘೋಸಿಷಿಸಿಕೊಂಡಿದ್ದಾರೆ.

    ನಾಗಾರ್ಜುನ ಎಂಟ್ರಿಗೂ ಮುನ್ನವೇ ಕೂಲಿ ಜೊತೆಗೆ ಕನ್ನಡದ ಸೂಪರ್‌ಸ್ಟಾರ್ ಉಪೇಂದ್ರ ಕೂಡ ಕೈ ಜೋಡಿಸಿದ್ದರು. ರಜನಿಕಾಂತ್ ಜೊತೆ ನಟಿಸೋದನ್ನ ಕನ್ಫರ್ಮ್ ಮಾಡಿದ್ದರು ಉಪ್ಪಿ. ಇದೀಗ ನಾಗಾರ್ಜುನ ಪಾತ್ರದ ಫಸ್ಟ್ ಲುಕ್ ಫೋಟೋ ಕೂಡ ರಿಲೀಸ್ ಆಗಿದ್ದು ಸಿಮೊನ್ ಎಂಬ ಹೆಸರಿನ ಪಾತ್ರದಲ್ಲಿ ಕಾಣಿಸ್ಕೊಳ್ಳಲಿದ್ದಾರೆ. ಬಂಗಾರದ ವಾಚ್ ಧರಿಸಿ ಪೋಸ್ ಕೊಟ್ಟಿದ್ದಾರೆ ನಾಗಾರ್ಜುನ. ಇನ್ನು ಮಲಯಾಳಂನಿಂದ ಸೌಬಿನ್ ಶಾಹಿರ್ ಕೂಡ `ಕೂಲಿ’ ಚಿತ್ರದಲ್ಲಿದ್ದಾರೆ. ಅಲ್ಲಿಗೆ ಎಲ್ಲಾ ಇಂಡಸ್ಟ್ರಿಯಿಂದಲೂ ಒಬ್ಬೊಬ್ಬ ಸ್ಟಾರ್‌ಗಳನ್ನ ತಂದಿದ್ದಾರೆ ಲೋಕೇಶ್ ಕನಕರಾಜ್. ಚಿತ್ರಕ್ಕೆ ನಾಯಕಿಯಾಗಿ ಶ್ರುತಿ ಹಾಸನ್ ಇತ್ತೀಚೆಗಷ್ಟೇ ಟೀಮ್ ಸೇರಿಕೊಂಡಿದ್ದಾರೆ.

     

    `ಕೂಲಿ’ ಸಿನಿಮಾದಲ್ಲಿ ಉಪೇಂದ್ರ ಕಾಳೀಶ ಹೆಸರಿನ ಪಾತ್ರದಲ್ಲಿ ಕಾಣಿಸ್ಕೊಳ್ಳಲಿದ್ದಾರೆ. ಈ ಹಿಂದೆ ಉಪ್ಪಿಯ ಕ್ಯಾರೆಕ್ಟರ್ ರಿವೀಲ್ ಮಾಡಿತ್ತು ಕೂಲಿ ಟೀಮ್. ಇನ್ನು ಉಪೇಂದ್ರ ಅಕ್ಟೋಬರ್ ಕೊನೆಯಲ್ಲಿ ತಂಡ ಜೊತೆ ಸೇರಿಕೊಳ್ಳುವ ಸಾಧ್ಯತೆ ಇದೆ. ಏಕೆಂದರೆ `ಯುಐ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇರುವ ಉಪ್ಪಿಗೆ ಕೂಲಿ ಟೀಮ್ ಸೇರಿಕೊಳ್ಳಲು ಸಾಧ್ಯವಾಗಲಿಲ್ಲ. ಒಟ್ನಲ್ಲಿ ಕೂಲಿ ಟೀಮ್ ಬೃಹತ್ತಾಗಿದೆ. ಅಭಿಮಾನಿಗಳ ನಿರೀಕ್ಷೆಯೂ ದುಪ್ಪಟ್ಟಾಗುತ್ತಿದೆ.

  • ತೆಲುಗು ಬಿಗ್ ಬಾಸ್ ಮನೆಯಲ್ಲಿ ಕನ್ನಡದ ಇಬ್ಬರು ಸುಂದರಿಯರು

    ತೆಲುಗು ಬಿಗ್ ಬಾಸ್ ಮನೆಯಲ್ಲಿ ಕನ್ನಡದ ಇಬ್ಬರು ಸುಂದರಿಯರು

    ಟ ನಾಗಾರ್ಜುನ (Nagarjuna) ನಡೆಸಿ ಕೊಡುವ ತೆಲುಗಿನ ಬಿಗ್ ಬಾಸ್ (Bigg Boss Telugu) ಮನೆಗೆ ಇಬ್ಬರು ಕನ್ನಡತಿಯರು ಕಾಲಿಟ್ಟಿದ್ದಾರೆ. ಧಾರಾವಾಹಿ ಮತ್ತು ಕಿರುತೆರೆಯ ಮೂಲಕ ಫೇಮಸ್ ಆಗಿರೋ ಮತ್ತು ಸದ್ಯ ತೆಲುಗು ಕಿರುತೆರೆ ಪ್ರಪಂಚದಲ್ಲಿ ಬ್ಯುಸಿಯಾಗಿರೋ ಈ ಸುಂದರಿಯರು  ತೆಲುಗು ಬಿಗ್ ಬಾಸ್ ಮನೆಯಲ್ಲಿ ಕಮಾಲು ಮಾಡಲಿದ್ದಾರೆ. ಈ ಇಬ್ಬರಲ್ಲಿ ಒಬ್ಬರು ರಶ್ಮಿಕಾ ಮಂದಣ್ಣರ ಕ್ಲೋಸ್ ಫ್ರೆಂಡ್ ಅನ್ನೋದು ವಿಶೇಷ.

    ರಾಘು ಶಿವಮೊಗ್ಗ ನಿರ್ದೇಶನದ ಚೂರಿಕಟ್ಟೆ, ಪೆಂಟಾಗನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರೋ, ಹಲವಾರು ಧಾರಾವಾಹಿಗಳಲ್ಲೂ ನಟಿಸಿರೋ ಪ್ರೇರಣಾ ಕಂಬಂ (Prerna Kambam)ಈ ಬಾರಿ ದೊಡ್ಮನೆಗೆ ಪ್ರವೇಶ ಮಾಡಿದ್ದಾರೆ. ಇವರು ರಶ್ಮಿಕಾ ಮಂದಣ್ಣರ ಕ್ಲೋಸ್ ಫ್ರೆಂಡ್. ಇಬ್ಬರೂ ಒಂದೇ ರೂಮ್ ನಲ್ಲಿ ವಾಸಿಸಿದ್ದಾಗಿ ನಾಗಾರ್ಜುನ್ ಮುಂದೆ ಹೇಳಿಕೊಂಡಿದ್ದಾರೆ.

    ಪ್ರೇರಣಾ ಜೊತೆ ಕಿರುತೆರೆಯ ಮತ್ತೋರ್ವ ನಟಿ ಯಶ್ಮಿ ಗೌಡ ಕೂಡ ಸೀಸನ್ 8ರ ಸ್ಪರ್ಧಿಯಾಗಿದ್ದಾರೆ. ಪ್ರೇರಣಾ ಜೊತೆ ಯಶ್ಮಿ ಗೌಡ (Yashmi Gowda) ಬಿಗ್ ಫೈಟ್ ಕೊಡಲಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ. ಯಶ್ಮಿ ಗೌಡ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈ ಹುಡುಗಿಯರ ಜೊತೆ ಇನ್ನೂ ಇಬ್ಬರು ಕನ್ನಡದ ಹುಡುಗರು ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

    ಈ ಸೀಸನ್ ಸಾಕಷ್ಟು ಕಾರಣಗಳಿಂದಾಗಿ ನೋಡುಗರ ಗಮನ ಸೆಳೆಯಲಿದೆ. ಕನ್ನಡದ ನಾಲ್ವರು ಈ ಬಾರಿ ಬಿಗ್ ಬಾಸ್ ತೆಲುಗು ಶೋನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕನ್ನಡದಲ್ಲಿ ಮೂಡಿ ಬಂದ ಮನೆಯೇ ಮಂತ್ರಾಲಯ ಧಾರಾವಾಹಿಯ ನಿಖಿಲ್, ವಿದ್ಯಾ ವಿನಾಯಕ ನಟಿ ಯಶ್ಮಿ ಗೌಡ, ಕನ್ನಡದ ಬಿಗ್ ಬಾಸ್ ನಲ್ಲೂ ಕಾಣಿಸಿಕೊಂಡಿದ್ದ ಪ್ರೇರಣಾ, ಪೃಥ್ವಿರಾಜ್ ಶೆಟ್ಟಿ ಹೀಗೆ ನಾಲ್ವರು ಕಲಾವಿದರು ಈ ಬಾರಿ ತೆಲುಗು ಬಿಗ್ ಬಾಸ್ ಮನೆಯ ಪ್ರವೇಶ ಮಾಡಿದ್ದಾರೆ.

    ಕನ್ನಡದಲ್ಲಿ ಬಿಗ್ ಬಾಸ್ ಶುರುವಾಗೋ ಮುನ್ನವೇ ತೆಲುಗಿನಲ್ಲಿ ಗ್ರ್ಯಾಂಡ್ ಓಪನಿಂಗ್ ಆಗಿದೆ. 14 ಸ್ಪರ್ಧಿಗಳು ದೊಡ್ಮನೆಗೆ ಪ್ರವೇಶ ಮಾಡಲಿದ್ದಾರೆ. ಅದರಲ್ಲಿ ನಾಲ್ವರು ಕನ್ನಡದ ಮೂಲದವರೇ ಇದ್ದಾರೆ ಅನ್ನೋದು ವಿಶೇಷ. ಮುಂದಿನ ದಿನಗಳಲ್ಲಿ ಯಾವೆಲ್ಲ ಕಂಟೆಸ್ಟೆಂಟ್ ಗಳು ಗಮನ ಸೆಳೆಯುತ್ತಾರೆ ಅನ್ನೋದನ್ನ ಕಾದು ನೋಡಬೇಕು.

  • ನಾಗಾರ್ಜುನಗೆ ಬಿಗ್ ರಿಲೀಫ್- ಎನ್ ಕನ್ವೆನ್ಷನ್ ಸೆಂಟರ್ ಕಟ್ಟಡ ತೆರವಿಗೆ ಹೈಕೋರ್ಟ್‌ ತಡೆ

    ನಾಗಾರ್ಜುನಗೆ ಬಿಗ್ ರಿಲೀಫ್- ಎನ್ ಕನ್ವೆನ್ಷನ್ ಸೆಂಟರ್ ಕಟ್ಟಡ ತೆರವಿಗೆ ಹೈಕೋರ್ಟ್‌ ತಡೆ

    ತೆಲುಗು ನಟ ನಾಗಾರ್ಜುನಗೆ (Nagarjuna) ಹೈಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. ನಾಗಾರ್ಜುನ ಒಡೆತನದ ಎನ್ ಕನ್ವೆನ್ಷನ್ ಸೆಂಟರ್ ಕೆಡವದಂತೆ ತೆಲಂಗಾಣ ಹೈಕೋರ್ಟ್ (Telangana High Court) ಮಧ್ಯಂತರ ಆದೇಶ ನೀಡಿದೆ.

    ಹೈದರಾಬಾದ್‌ನ ಮದಾಪುರದಲ್ಲಿರುವ ಎನ್ ಕನ್ವೆನ್ಷನ್ ಸೆಂಟರ್ ಕೆಲ ಭಾಗಗಳನ್ನು ಇಂದು (ಆ.24) ಹೈಡ್ರಾ (HYDRA) ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. ವಿವಾದ ಕೋರ್ಟ್‌ನಲ್ಲಿದ್ರೂ ನೋಟಿಸ್ ನೀಡದೇ ತೆರವು ಮಾಡಲಾಗಿದೆ ಎಂದು ನಾಗಾರ್ಜುನ ಮತ್ತೆ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದು, ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಇದನ್ನೂ ಓದಿ:ಇಟಲಿಯಲ್ಲಿ ಅದ್ಧೂರಿಯಾಗಿ ನಡೆಯಲಿದೆ ಆ್ಯಮಿ ಜಾಕ್ಸನ್ ಮದುವೆ

    ಅಂದ ಹಾಗೆ, ಅಕ್ಕಿನೇನಿ ನಾಗಾರ್ಜುನ ಅವರ ಎನ್ ಕನ್ವೆನ್ಷನ್ ಹಾಲ್ ಅನ್ನು ಇಂದು (ಆ.24) ನೆಲಸಮಗೊಳಿಸಲಾಗಿದೆ. ಸಾರ್ವಜನಿಕ ಭೂಮಿಯನ್ನು ಅತಿಕ್ರಮಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಕ್ಕೆ ಹೈಡ್ರಾ (ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿಗಳ ಮೇಲ್ವಿಚಾರಣೆ ಮತ್ತು ರಕ್ಷಣೆ ಸಂಸ್ಥೆ) ಸಂಸ್ಥೆ ಶನಿವಾರ ಆಸ್ತಿಯನ್ನು ನೆಲಸಮಗೊಳಿಸಿದೆ.

    10 ಎಕರೆ ಜಾಗದಷ್ಟು ಎನ್ ಕನ್ವೆನ್ಷನ್ ಸೆಂಟರ್ ಹಲವಾರು ಭೂ ಬಳಕೆ ಹಾಗೂ ಪರಿಸರ ನಿಮಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಜೊತೆಗೆ 1.2 ಎಕರೆ ತುಮ್ಮಿಡ್ಕುಂಟಾ ಕೆರೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. 2 ಎಕರೆ ಬಫರ್ ವಲಯವನ್ನು ಬಳಸಿಕೊಂಡು ಎನ್ ಕನ್ವೆನ್ಷನ್ ಸೆಂಟರ್‌ನ್ನು ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಬಂದಿತ್ತು. ಇದೀಗ ಹೈಡ್ರಾ ಸಂಸ್ಥೆಯ ಅಧಿಕಾರಿಗಳು ಸುಮಾರು ಮೂರುವರೆ ಎಕರೆ ಜಾಗದಲ್ಲಿರುವ ಎನ್ ಕನ್ವೆನ್ಷನ್ ಸೆಂಟರ್‌ನ್ನು ತೆರವುಗೊಳಿಸಿದ್ದಾರೆ.

    ಅಕ್ಕಿನೇನಿ ನಾಗಾರ್ಜುನ ಅವರು ತಮ್ಮ ಎಕ್ಸ್ ಖಾತೆಯಲ್ಲಿ, ಈ ವಿಚಾರಕ್ಕೆ ಸಂಬಂಧಿಸಿದಂತೆ ಪೋಸ್ಟ್ ಮಾಡಿದ್ದಾರೆ. ಕಾನೂನು ಉಲ್ಲಂಘಿಸುವ ಯಾವುದೇ ತಪ್ಪನ್ನು ನಾನು ಮಾಡಿಲ್ಲ. ವಿವಾದ ಕೋರ್ಟ್‌ನಲ್ಲಿದ್ದರೂ ತೆರವು ಮಾಡಲಾಗಿದೆ. ನನ್ನ ವಿರುದ್ಧ ಆದೇಶ ಬಂದಿದ್ದರೆ ನಾನೇ ತೆರವು ಮಾಡಿಕೊಳ್ಳುತ್ತಿದ್ದೆ. ಆದರೆ ತೆರವುಗೊಳಿಸಿರುವುದು ಅತೀವ ನೋವನ್ನುಂಟು ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ನಾನು ನ್ಯಾಯಾಲಯದಿಂದ ಸೂಕ್ತ ಪರಿಹಾರವನ್ನು ಕೋರುತ್ತೇವೆ ಎಂದು ಬರೆದುಕೊಂಡಿದ್ದಾರೆ.

  • ಸೆಪ್ಟೆಂಬರ್‌ನಿಂದ ತೆಲುಗು ಬಿಗ್ ಬಾಸ್ ಶುರು- ಸಂಭಾವ್ಯರ ಪಟ್ಟಿಯಲ್ಲಿ ಇಬ್ಬರು ಕನ್ನಡತಿಯರು

    ಸೆಪ್ಟೆಂಬರ್‌ನಿಂದ ತೆಲುಗು ಬಿಗ್ ಬಾಸ್ ಶುರು- ಸಂಭಾವ್ಯರ ಪಟ್ಟಿಯಲ್ಲಿ ಇಬ್ಬರು ಕನ್ನಡತಿಯರು

    ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11ರ ಶುರುವಾಗಲು ದಿನಗಣನೆ ಆರಂಭವಾಗಿದೆ. ಇದರ ನಡುವೆ ತೆಲುಗಿನ ಬಿಗ್ ಬಾಸ್ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಇದೇ ಸೆಪ್ಟೆಂಬರ್‌ನಿಂದ ತೆಲುಗಿನ ಬಿಗ್ ಬಾಸ್ ಸೀಸನ್- 8 (Bigg Boss Telugu 8) ಶುರುವಾಗುವ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿದೆ. ಇದರ ಜೊತೆ ಸಂಭಾವ್ಯರ ಪಟ್ಟಿಯಲ್ಲಿ ಅನೇಕರ ಹೆಸರು ಹರಿದಾಡುತ್ತಿದೆ. ಅದರಲ್ಲಿ ಇಬ್ಬರು ಕನ್ನಡತಿಯರ ಹೆಸರು ಇದೆ.

    ಇದೇ ಸೆ.8ರಂದು ಬಿಗ್ ಬಾಸ್ ತೆಲುಗಿಗೆ ಅದ್ಧೂರಿ ಚಾಲನೆ ಸಿಗಲಿದೆ. ಸಂಜೆ 6 ಗಂಟೆಯಿಂದ ಶೋ ಪ್ರಾರಂಭವಾಗಲಿದೆ. ನಾಗಾರ್ಜುನ ಅಕ್ಕಿನೇನಿ ಅವರ ಬಿಗ್‌ ಬಾಸ್ ಪ್ರೋಮೋ ರಿಲೀಸ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:ಉದ್ಯಮಿ ಕಬೀರ್‌ ಜೊತೆಗಿನ ಡೇಟಿಂಗ್‌ ಸುದ್ದಿ ಸುಳ್ಳು ಎಂದ ಕೃತಿ ಸನೋನ್

    ಬಿಗ್ ಬಾಸ್ ಪ್ರೋಮೋ ರಿಲೀಸ್ ಆದ ಬೆನ್ನಲ್ಲೇ, ಸಂಭಾವ್ಯ ಅಭ್ಯರ್ಥಿಗಳ ಹೆಸರು ವೈರಲ್ ಆಗುತ್ತಿದೆ. ಅದರಂತೆ ಜ್ಯೋತಿಷ್ಯ ವೇಣುಸ್ವಾಮಿ, ಯೂಟ್ಯೂಬರ್ ಯಾದಂ ರಾಜು ರಿತು ಚೌಧರಿ, ಕಿರುತೆರೆ ತಾರೆಯರಾದ ಅಂಜಲಿ, ಹಿರಿಯ ನಟಿ ಸನಾ, ನಟ ಅನಿಲ್ ಗೀಲಾ, ಹಾಸ್ಯನಟ ಬುಂಚಿಕ್ ಬಬ್ಲು, ರಿಂಗ್ ರಿಯಾಜ್, ನಿರೂಪಕಿ ವಿಂಧ್ಯಾ ವಿಶಾಖ, ಪಾಗಲ್ ಪವಿತ್ರಾ ಹೀಗೆ ಹಲವು ಜನರ ಹೆಸರಿದೆ. ಮೂಲತಃ ಕನ್ನಡದವರಾದ ಯಶ್ಮಿ ಗೌಡ (Yashmi Gowda), ತೇಜಸ್ವಿನಿ ಗೌಡ (Tejaswini Gowda) ದೊಡ್ಮನೆಗೆ ಕಾಲಿಡಲಿದ್ದಾರೆ ಎನ್ನಲಾಗಿದೆ.

    ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಅಂದರೆ, ನಂದಮೂರಿ ಕುಟುಂಬದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಚೈತನ್ಯ ಕೃಷ್ಣ ಬಿಗ್ ಬಾಸ್‌ಗೆ ಬರಲಿದ್ದಾರೆ ಎಂದು ಸುದ್ದಿ ಹಬ್ಬಿದೆ. ಅಧಿಕೃತ ಮಾಹಿತಿಗಾಗಿ ಸೆ.8ರವರೆಗೂ ಕಾದುನೋಡಬೇಕಿದೆ.

  • ವಿಭಿನ್ನ ಲುಕ್‌ನಲ್ಲಿ ರಶ್ಮಿಕಾ- ‘ಕುಬೇರ’ ಚಿತ್ರದ ಫಸ್ಟ್ ಲುಕ್ ರಿವೀಲ್

    ವಿಭಿನ್ನ ಲುಕ್‌ನಲ್ಲಿ ರಶ್ಮಿಕಾ- ‘ಕುಬೇರ’ ಚಿತ್ರದ ಫಸ್ಟ್ ಲುಕ್ ರಿವೀಲ್

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ‘ಕುಬೇರ’ ಸಿನಿಮಾದ ಮೂಲಕ ಸದ್ದು ಮಾಡ್ತಿದ್ದಾರೆ. ಧನುಷ್ (Dhanush) ನಟನೆಯ ‘ಕುಬೇರ’ ಸಿನಿಮಾದಲ್ಲಿನ ರಶ್ಮಿಕಾ ಪಾತ್ರದ ಲುಕ್ ಈಗ ರಿವೀಲ್ ಆಗಿದೆ. ವಿಭಿನ್ನ ಗೆಟಪ್‌ನಲ್ಲಿ ನಟಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:’ಪೆನ್‌ ಡ್ರೈವ್’ ಸಿನಿಮಾದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ತನಿಷಾ ಕುಪ್ಪಂಡ

    ರಶ್ಮಿಕಾ ಫಸ್ಟ್ ಲುಕ್ ಜೊತೆಗೆ ಕ್ಯಾರೆಕ್ಟರ್ ಗ್ಲಿಂಪ್ಸ್ ಕೂಡ ಚಿತ್ರತಂಡ ರಿವೀಲ್ ಮಾಡಿದೆ. ಒಂದು ನಿಮಿಷದಲ್ಲಿರುವ ಈ ವಿಡಿಯೋದಲ್ಲಿ ನಟಿಯ ಪಾತ್ರದ ಝಲಕ್ ಇದೆ. ರಾತ್ರೋ ರಾತ್ರಿ ದುಡ್ಡಿನ ಸೂಟ್ ಕೇಸ್ ಹಿಡಿದು ರಶ್ಮಿಕಾ ಬರುತ್ತಿರುವ ದೃಶ್ಯ ತೋರಿಸಲಾಗಿದೆ. ಚಿತ್ರದ ಫಸ್ಟ್ ಲುಕ್‌ಗೆ ಇದೀಗ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

    ಫಸ್ಟ್ ಲುಕ್‌ನಲ್ಲಿ ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಇನ್ನಷ್ಟು ಕಿಕ್ ಕೊಡುವಂತಿದೆ. ಡೈರೆಕ್ಟರ್ ಶೇಖರ್ ಕಮ್ಮುಲ ಅವರ ‘ಕುಬೇರ’ (Kubera) ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಸದ್ಯ ಈ ಹೈ ಬಜೆಟ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

    ಅಂದಹಾಗೆ, ಈ ಸಿನಿಮಾದಲ್ಲಿ ಧನುಷ್‌ಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  • ಬಾಡಿಗಾರ್ಡ್ ಮಾಡಿದ ಯಡವಟ್ಟು- ಅಂಗವಿಕಲ ಅಭಿಮಾನಿಗೆ ಕ್ಷಮೆಯಾಚಿಸಿದ ನಾಗಾರ್ಜುನ

    ಬಾಡಿಗಾರ್ಡ್ ಮಾಡಿದ ಯಡವಟ್ಟು- ಅಂಗವಿಕಲ ಅಭಿಮಾನಿಗೆ ಕ್ಷಮೆಯಾಚಿಸಿದ ನಾಗಾರ್ಜುನ

    ಟಾಲಿವುಡ್ ನಟ ನಾಗಾರ್ಜುನರನ್ನು(Nagarjuna) ಭೇಟಿಯಾಗಲು ಬಂದ ಅಂಗವಿಕಲ ಅಭಿಮಾನಿಯನ್ನು ನಟನ ಬಾಡಿಗಾರ್ಡ್ ದೂಡಿದ ಘಟನೆ ಮುಂಬೈ ವಿಮಾನ ನಿಲ್ದಾಣ ನಡೆದಿತ್ತು. ಬಳಿಕ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈಗ ಅದೇ ಅಂಗವಿಕಲ ಅಭಿಮಾನಿಯನ್ನು (Fan) ಭೇಟಿಯಾಗಿ ನಾಗಾರ್ಜುನ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ:ಮದುವೆ ಬಳಿಕ 25 ಕೋಟಿ ಬೆಲೆ ಬಾಳುವ ಮನೆಗೆ ಸೋನಾಕ್ಷಿ ಸಿನ್ಹಾ ಶಿಫ್ಟ್

    ಜೂನ್ 26ರಂದು ಅಂಗವಿಕಲ ಅಭಿಮಾನಿಯನ್ನು ಭೇಟಿಯಾಗಿ ಅಪ್ಪಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದು ನಿನ್ನ ತಪ್ಪಲ್ಲ, ನನ್ನ ತಪ್ಪು ಕ್ಷಮಿಸಿಬಿಡು. ತಪ್ಪು ನನ್ನದು ಎಂದು ಫ್ಯಾನ್‌ ಕ್ಷಮೆಯಾಚಿಸಿದ್ದಾರೆ. ಈಗ ಇವರಿಬ್ಬರು ಭೇಟಿಯಾದ ವಿಡಿಯೋ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

    ಅಂದಹಾಗೆ, ಧನುಷ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಕುಬೇರ’ (Kubera) ಸಿನಿಮಾದಲ್ಲಿ ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಸೌತ್‌ ಜೊತೆ ಬಾಲಿವುಡ್‌ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ.

  • 2ನೇ ಮದುವೆಗೆ ಸಜ್ಜಾದ ಸಮಂತಾ ಮಾಜಿ ಪತಿ- ಹುಡುಗಿ ಯಾರು ಗೊತ್ತಾ?

    2ನೇ ಮದುವೆಗೆ ಸಜ್ಜಾದ ಸಮಂತಾ ಮಾಜಿ ಪತಿ- ಹುಡುಗಿ ಯಾರು ಗೊತ್ತಾ?

    ಟಾಲಿವುಡ್ (Tollywood) ಯಂಗ್ ಹೀರೋ ನಾಗಚೈತನ್ಯ ಇದೀಗ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. 2ನೇ ಮದುವೆಗೆ ತಯಾರಿ ನಡೆಸುತ್ತಿದ್ದಾರೆ ಸಮಂತಾ ಮಾಜಿ ಪತಿ. ಆದರೆ ವಧು ಶೋಭಿತಾ (Sobhita) ಅಲ್ಲವೇ ಅಲ್ಲ. ಸದ್ಯ ಈ ಸುದ್ದಿ, ಗಾಸಿಪ್ ಪ್ರಿಯರ ಚರ್ಚೆಗೆ ಕಾರಣವಾಗಿದೆ.

    ಸಮಂತಾ (Samantha) ಜೊತೆಗಿನ ನಾಗಚೈತನ್ಯ (Nagachaitanya) ಡಿವೋರ್ಸ್ (Divorce) ಆಗಿ 2 ವರ್ಷಗಳು ಕಳೆದಿವೆ. ಇಬ್ಬರ ಡಿವೋರ್ಸ್ ಬಳಿಕ ನಟಿ ಶೋಭಿತಾ (Shobitha) ಜೊತೆ ನಾಗಚೈತನ್ಯ ಹೆಸರು ಕೇಳಿ ಬಂದಿತ್ತು. ಇಬ್ಬರು ಡೇಟ್ ಮಾಡ್ತಿದ್ದಾರೆ ಎನ್ನಲಾಗಿತ್ತು. ಈಗ ನಾಗಚೈತನ್ಯ ಮದುವೆ ಸುದ್ದಿ ಹೊರ ಬೀಳುತ್ತಿದ್ದಂತೆ ವಧು ಶೋಭಿತಾ ಅಲ್ಲ ಎಂದು ತಿಳಿದು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

    ಮೂಲಗಳ ಪ್ರಕಾರ, ಖ್ಯಾತ ಉದ್ಯಮಿಯೊಬ್ಬರ ಪುತ್ರಿಯನ್ನು ನಟ ಮದುವೆಯಾಗುತ್ತಿದ್ದಾರಂತೆ. ಅದಕ್ಕಾಗಿ ನಾಗಾರ್ಜುನ (Nagarjuna) ದಂಪತಿ ಓಡಾಟದಲ್ಲಿ ಬ್ಯುಸಿಯಿದ್ದಾರೆ ಎನ್ನಲಾಗುತ್ತಿದೆ. ಆದರೆ ನಾಗಚೈತನ್ಯ ಮದುವೆ ಬಗ್ಗೆ ಅಕ್ಕಿನೇನಿ ಫ್ಯಾಮಿಲಿ ಕಡೆಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ನಾಗಚೈತನ್ಯ 2ನೇ ಮದುವೆಯಾಗ್ತಿರೋ ಆ ಹುಡುಗಿ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

    ಮತ್ತೆ ತಮ್ಮ ಜೀವನದ ಹೊಸ ಚಾಪ್ಟರ್ ತಿರುಗಿಸಲು ನಾಗಚೈತನ್ಯ ರೆಡಿಯಾಗಿದ್ದಾರೆ. ಮನೆ ಮಂದಿ ಮೆಚ್ಚಿದ ಹುಡುಗಿಯನ್ನೇ ನಟ ಮದುವೆಯಾಗ್ತಿದ್ದಾರೆ. ಈಗ ಏನಿದ್ರು ಹಸೆಮಣೆ ಏರೋದೊಂದೇ ಬಾಕಿ. ಇದನ್ನೂ ಓದಿ:ಹಳದಿ ಸೀರೆಯುಟ್ಟು ಹಳದಿ ಕಂಗಳಿಗೆ ಉತ್ತರಿಸಿದ್ರಾ ಸೋನು ಗೌಡ

    ಸೌತ್‌ನ ಬೆಸ್ಟ್ ಜೋಡಿಯಾಗಿ ಗುರುತಿಸಿಕೊಂಡಿದ್ದ ನಾಗಚೈತನ್ಯ-ಸಮಂತಾ 4 ವರ್ಷಗಳು ದಾಂಪತ್ಯ (Wedding) ಜೀವನವನ್ನ ಒಟ್ಟಾಗಿ ನಡೆಸಿದ್ದರು. 2021ರಲ್ಲಿ ಇಬ್ಬರು ಡಿವೋರ್ಸ್‌ ಪಡೆದುಕೊಂಡರು. ಆದರೂ ಎಲ್ಲೋ ಒಂದ್ ಕಡೆ ಚೈ ಮತ್ತು ಸ್ಯಾಮ್ ಅಭಿಮಾನಿಗಳಿಗೆ ಈ ಜೋಡಿ ಮತ್ತೆ ಒಂದಾದ್ರೆ ಚೆನ್ನಾಗಿರುತ್ತೆ ಎಂದು ಆಸೆಯಿದೆ. ಸದ್ಯ ನಾಗಚೈತನ್ಯ ಮದುವೆ ಸುದ್ದಿ ಕೇಳಿ ನೆಟ್ಟಿಗರು ಸೈಲೆಂಟ್ ಆಗಿದ್ದಾರೆ. ಇತ್ತ ಸಮಂತಾ, ಕಹಿ ನೆನಪೆಲ್ಲಾ ಮರೆತು ಆರೋಗ್ಯ (Health) ಮತ್ತು ವೃತ್ತಿ ಜೀವನದ ಗಮನ ನೀಡುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]