Tag: ನಾಗಸಂದ್ರ

  • ನಾಗಸಂದ್ರ – ಮಾದಾವರ ಮೆಟ್ರೋ ಸೇವೆ ನಾಳೆಯಿಂದ ಸಾರ್ವಜನಿಕರಿಗೆ ಲಭ್ಯ

    ನಾಗಸಂದ್ರ – ಮಾದಾವರ ಮೆಟ್ರೋ ಸೇವೆ ನಾಳೆಯಿಂದ ಸಾರ್ವಜನಿಕರಿಗೆ ಲಭ್ಯ

    ಬೆಂಗಳೂರು: ಮೆಟ್ರೋ (Namma Metro) ಹಸಿರು ವಿಭಾಗದ ನಾಗಸಂದ್ರ – ಮಾದಾವರ (Nagasandra – Madavara) ವಿಸ್ತರಿತ ಮಾರ್ಗ ನಾಳೆ(ನ.7) ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.

    ಇಂದು ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಮತ್ತು ಬೆಂಗಳೂರಿನ ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಯಶವಂತಪುರದಿಂದ ಮಾದಾವರದವರೆಗೆ ಪ್ರಾಯೋಗಿಕ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು.

    ಮಾದಾವರದಿಂದ ನಾಳಗೆ ಬೆಳಗ್ಗೆ 5 ಗಂಟೆಗೆ ಮೊದಲ ಮೆಟ್ರೋ ಸೇವೆ ಆರಂಭವಾದರೆ ರಾತ್ರಿ 11 ಗಂಟೆ ಕೊನೆಯ ಮೆಟ್ರೋ ರೈಲು ಹೊರಡಲಿದೆ. 10 ನಿಮಿಷಕ್ಕೊಮ್ಮೆ ಮಾದಾವರ ಟು ನಾಗಸಂದ್ರ ನಡುವೆ ಮೆಟ್ರೋ ರೈಲು ಸಂಚಾರ ಮಾಡಲಿದೆ.

    ಮಂಗಳವಾರ ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿಯಾದ ನಂತರ ವಿಸ್ತರಿತ ಹಸಿರು ಮಾರ್ಗದ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ಸಂತಸದ ವಿಷಯವನ್ನು ಸಂಸದ ತೇಜಸ್ವಿ ಸೂರ್ಯ ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದರು.

     

    ವಿಸ್ತರಿತ ಹಸಿರು ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರುಕಲ್ಲು, ಮಾದಾವರ ಗಳನ್ನು ಒಳಗೊಂಡ 3 ಮೆಟ್ರೋ ನಿಲ್ದಾಣಗಳಿವೆ. ತುಮಕೂರು ರಸ್ತೆಯಲ್ಲಿನ ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಈ ಮಾರ್ಗವು ಬಹುಮುಖ್ಯ ಪಾತ್ರ ವಹಿಸಲಿದೆ. 91 ತಿಂಗಳ ಅವಧಿ ತೆಗೆದುಕೊಂಡ ನಂತರ ಇದೀಗ ಸಾರ್ವಜನಿಕರ ಸೇವೆಗೆ ಮುಕ್ತವಾಗಿದೆ.

    ವಿಸ್ತರಿತ 3.14 ಕಿ.ಮೀ ಸೇರಿ ಬೆಂಗಳೂರು ಮೆಟ್ರೋ 76.95 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಮೆಟ್ರೋ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಆದ್ಯತೆ ನೀಡಲಾಗುತ್ತಿದ್ದು, ಮುಂದಿನ ವರ್ಷಕ್ಕೆ ಇನ್ನೂ 30 ಕಿ.ಮೀ. ಸೇರ್ಪಡೆಯಾಗಲಿದೆ. 2026ಕ್ಕೆ ಬೆಂಗಳೂರು ಮೆಟ್ರೋದ ಒಟ್ಟು ವ್ಯಾಪ್ತಿ 175 ಕಿ.ಮೀ ಆಗಲಿದೆ.

  • ನಾಗಸಂದ್ರ – ಮಾದಾವರ ವಿಸ್ತರಿತ ಮಾರ್ಗ ಬುಧವಾರ ಸಾರ್ವಜನಿಕರಿಗೆ ಮುಕ್ತ?

    ನಾಗಸಂದ್ರ – ಮಾದಾವರ ವಿಸ್ತರಿತ ಮಾರ್ಗ ಬುಧವಾರ ಸಾರ್ವಜನಿಕರಿಗೆ ಮುಕ್ತ?

    ಬೆಂಗಳೂರು: ಮೆಟ್ರೋ (Namma Metro) ಹಸಿರು ವಿಭಾಗದ ನಾಗಸಂದ್ರ – ಮಾದಾವರ (Nagasandra – Madavara) ವಿಸ್ತರಿತ ಮಾರ್ಗ ಬುಧವಾರ ಸಾರ್ವಜನಿಕರ ಸೇವೆಗೆ ತೆರೆದುಕೊಳ್ಳುವ ಸಾಧ್ಯತೆಯಿದೆ.

    ಮಂಗಳವಾರ ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿಯಾದ ನಂತರ ವಿಸ್ತರಿತ ಹಸಿರು ಮಾರ್ಗದ ಸಾರ್ವಜನಿಕ ಸೇವೆಗೆ  ಮುಕ್ತಗೊಳಿಸುವ ಸಂತಸದ ವಿಷಯವನ್ನು ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

    ಕಳೆದ ವರ್ಷ ನೇರಳೆ ಮಾರ್ಗದ ಉದ್ಘಾಟನೆಯನ್ನು ಕೂಡ ಯಾವುದೇ ವಿಐಪಿ ಕಾರ್ಯಕ್ರಮಗಳ ಆಯೋಜನೆ ಇಲ್ಲದೇ ಸಾರ್ವಜನಿಕ ಸೇವೆಗೆ ಮುಕ್ತಗೊಂಡಿತ್ತು.

    ವಿಸ್ತರಿತ ಹಸಿರು ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರುಕಲ್ಲು, ಮಾದಾವರ ಗಳನ್ನು ಒಳಗೊಂಡ 3 ಮೆಟ್ರೋ ನಿಲ್ದಾಣಗಳಿವೆ. ತುಮಕೂರು ರಸ್ತೆಯಲ್ಲಿನ ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಈ ಮಾರ್ಗವು ಬಹುಮುಖ್ಯ ಪಾತ್ರ ವಹಿಸಲಿದೆ. 91 ತಿಂಗಳ ಅವಧಿ ತೆಗೆದುಕೊಂಡ ನಂತರ ಇದೀಗ ಸಾರ್ವಜನಿಕರ ಸೇವೆಗೆ ಮುಕ್ತವಾಗಿದೆ.

     

  • ಇಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಪೀಣ್ಯ – ನಾಗಸಂದ್ರ ನಡುವೆ ಮೆಟ್ರೋ ಸಂಚಾರ ಸ್ಥಗಿತ

    ಇಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಪೀಣ್ಯ – ನಾಗಸಂದ್ರ ನಡುವೆ ಮೆಟ್ರೋ ಸಂಚಾರ ಸ್ಥಗಿತ

    ಬೆಂಗಳೂರು: ನಾಗಸಂದ್ರ (Nagasandra) ಹಾಗೂ ಮಾದಾವರ (Madavara) ನಡುವಿನ ಹೊಸ ರೈಲು ಮಾರ್ಗದಲ್ಲಿ ಸುರಕ್ಷತಾ ತಪಾಸಣೆ ಹಿನ್ನಲೆಯಲ್ಲಿ ಇಂದು ಮೆಟ್ರೋ ರೈಲು (Namma Metro) ಸೇವೆಯಲ್ಲಿ ವ್ಯತ್ಯಾಸವಾಗಲಿದೆ.

    ನಾಗಸಂದ್ರ ಹಾಗೂ ಪೀಣ್ಯ ಇಂಡಸ್ಟ್ರಿ ಮೆಟ್ರೋ ನಿಲ್ದಾಣಗಳ ನಡುವೆ ಬೆಳಗ್ಗೆ 10 ಗಂಟೆಯಿಂದ 2 ಗಂಟೆವರೆಗೆ ವಾಣಿಜ್ಯ ಸೇವೆ ಸ್ಥಗಿತವಾಗಲಿದೆ. ಇದನ್ನೂ ಓದಿ: 50 ಕೋಟಿ ನೀಡುವಂತೆ ಬೆದರಿಕೆ – ಹೆಚ್‌ಡಿಕೆ, ರಮೇಶ್ ಗೌಡ ವಿರುದ್ಧ ದೂರು

     

    ಈ ಅವಧಿಯಲ್ಲಿ ಪೀಣ್ಯ ಹಾಗೂ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಎಂದಿನಂತೆ ಸಂಚರಿಸಲಿದೆ. ನೇರಳೆ ಮಾರ್ಗದ ರೈಲು ಸೇವೆಯಲ್ಲಿ ಯಾವುದೇ ಬದಲಾವಣೆಯಿಲ್ಲ.

    ಹಸಿರು ಮಾರ್ಗದಲ್ಲಿ ವಿಸ್ತರಿತಗೊಂಡಿರುವ 3.7 ಕಿ.ಮೀ ದೂರದ ಈ ಮಾರ್ಗದಲ್ಲಿ ಮಂಜುನಾಥನಗರ, ಚಿಕ್ಕಬಿದರಕಲ್ಲು (ಜಿಂದಾಲ್‌), ಮಾದಾವರ ಮೆಟ್ರೊ ನಿಲ್ದಾಣಗಳಿವೆ. ಸಿವಿಲ್‌ ಕಾಮಗಾರಿ ಬಳಿಕ ಆಗಸ್ಟ್‌ನಿಂದ ಸಾಮರ್ಥ್ಯ ಪರೀಕ್ಷೆ, ಸಿಗ್ನಲಿಂಗ್‌, ದೂರಸಂಪರ್ಕ, ವಿದ್ಯುತ್‌ ಸರಬರಾಜು ವ್ಯವಸ್ಥೆ ಸಿಸ್ಟಂ ಸಂಯೋಜನೆ, ಸಾಮರ್ಥ್ಯ ಪರಿಶೀಲನೆ ಸಹಿತ ಪ್ರಮುಖ ಪರೀಕ್ಷೆಗಳು ನಡೆದಿತ್ತು. ಸುರಕ್ಷತಾ ತಪಾಸಣೆ ತೃಪ್ತಿಕರವಾದರೆ ಆಯುಕ್ತರು ಶೀಘ್ರವೇ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡುವ ಸಾಧ್ಯತೆ ಇದೆ.

     

  • ನಾಗಸಂದ್ರ-ಮಾದವರ ನಡುವೆ ಸಿಗ್ನಲಿಂಗ್ ಕಾರ್ಯ; ಹಸಿರು ಮಾರ್ಗದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ

    ನಾಗಸಂದ್ರ-ಮಾದವರ ನಡುವೆ ಸಿಗ್ನಲಿಂಗ್ ಕಾರ್ಯ; ಹಸಿರು ಮಾರ್ಗದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ

    ಬೆಂಗಳೂರು: ವಿಸ್ತರಿಸಿದ ಹಸಿರು ಮಾರ್ಗದ (Greenline Metro) ನಾಗಸಂದ್ರದಿಂದ ಮಾದವರ ನಡುವೆ ಸಿಗ್ನಲಿಂಗ್ ಸಂಬಂಧಿತ ಪರೀಕ್ಷೆ ಮುಂದುವರಿಸುವ ಸಲುವಾಗಿ ಕೆಲವು ದಿನಗಳಂದು ರೈಲು ಸೇವೆಯ ಸಮಯ ಮತ್ತು ಕಾರ್ಯಾಚರಣೆಗಳಲ್ಲಿ ಬದಲಾವಣೆಯಾಗಲಿದೆ ಎಂದು ಬಿಎಂಆರ್‌ಸಿಎಲ್ (BMRCL) ತಿಳಿಸಿದೆ.

    ಆ.20, ಆ.23 ಮತ್ತು ಆ.30 ಹಾಗೂ ಸೆ.6 ಮತ್ತು ಸೆ.11ರಂದು  ಪೀಣ್ಯ ಕೈಗಾರಿಕಾ ಪ್ರದೇಶ (Peenya Industry) ಮತ್ತು ನಾಗಸಂದ್ರ (Nagasandra) ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸೇವೆಗಳನ್ನು ಪೂರ್ಣ ದಿನ ಸ್ಥಗಿತಗೊಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ನೈತಿಕತೆ ಇದ್ದರೆ ಸಿದ್ದರಾಮಯ್ಯ ಮುಡಾ ಸೈಟ್ ವಾಪಸ್ ಕೊಡಲಿ: ಎಸ್.ಆರ್.ಹಿರೇಮಠ್

    ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಪೀಣ್ಯ ಇಂಡಸ್ಟ್ರಿ ಕಡೆಗೆ:
    ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಪೀಣ್ಯ ಇಂಡಸ್ಟ್ರಿ ಕಡೆಗೆ ಆ.24ರಂದು ಕೊನೆಯ ರೈಲು ಸೇವೆಯು ರಾತ್ರಿ 11:05ರ ಬದಲಾಗಿ 10:00 ಗಂಟೆಗೆ ಪ್ರಾರಂಭವಾಗಲಿದೆ. ಆ.25ರಂದು ಮೊದಲ ರೈಲು ಸೇವೆಯು ಬೆಳಗ್ಗೆ 5:00 ಗಂಟೆಯ ಬದಲಾಗಿ 06:00 ಗಂಟೆಗೆ ಪ್ರಾರಂಭವಾಗಲಿದೆ. ಇದನ್ನೂ ಓದಿ: ಕೇಂದ್ರದ ವಿರೋಧ ಪಕ್ಷವನ್ನು ಮಣಿಸಲು ರಾಜ್ಯಪಾಲರನ್ನು ಏಜೆಂಟರಾಗಿ ಬಳಸುತ್ತಿದ್ದಾರೆ: ಆರ್.ವಿ ದೇಶಪಾಂಡೆ

    ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದ ಕಡೆಗೆ:
    ಆ.24ರಂದು ಕೊನೆಯ ರೈಲು ರಾತ್ರಿ 11:12ಕ್ಕೆ ಸಂಚರಿಸಲಿದೆ. ಆ.25 ರಂದು ಮೊದಲ ರೈಲು ಸೇವೆಯು ಬೆಳಗ್ಗೆ 05:00ಕ್ಕೆ ಪ್ರಾರಂಭವಾಗಲಿದೆ. ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನಮ್ಮ ಮೆಟ್ರೋ ತಿಳಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಏನಾದರೂ ಗಲಾಟೆಯಾದರೆ ಅದಕ್ಕೆ ರಾಜ್ಯಪಾಲರೇ ಹೊಣೆ – ಜಮೀರ್ ಅಹ್ಮದ್ ಎಚ್ಚರಿಕೆ

    ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ: ನನ್ನ ರಾಜೀನಾಮೆ ಕೇಳೋ ಅಶೋಕ್ ಮೊದಲು ವಾಸ್ತವಾಂಶ ತಿಳಿಯಲಿ: ಸಿದ್ದರಾಮಯ್ಯ