Tag: ನಾಗಲಕ್ಷ್ಮೀ ಚೌಧರಿ

  • ಪ್ರಜ್ವಲ್ ರೇವಣ್ಣ ಕೇಸ್ – ನೊಂದ ಮಹಿಳೆಯಿಂದ ಮಹಿಳಾ ಆಯೋಗಕ್ಕೆ ದೂರು

    ಪ್ರಜ್ವಲ್ ರೇವಣ್ಣ ಕೇಸ್ – ನೊಂದ ಮಹಿಳೆಯಿಂದ ಮಹಿಳಾ ಆಯೋಗಕ್ಕೆ ದೂರು

    ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಮಹಿಳೆಯೊಬ್ಬರು ಮಹಿಳಾ ಆಯೋಗಕ್ಕೆ (Women’s Commission) ದೂರು ನೀಡಿದ್ದಾರೆ.

    ಹಾಸನ (Hassan) ಮೂಲದ ನೊಂದ ಮಹಿಳೆಯೊಬ್ಬರು ಮಹಿಳಾ ಆಯೋಗಕ್ಕೆ ಶನಿವಾರ ಸಂಜೆ ದೂರು ನೀಡಿದ್ದಾರೆ. ತಂದೆ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಇಬ್ಬರ ವಿರುದ್ಧವೂ ದೂರು ನೀಡಿದ್ದು, ಇಬ್ಬರೂ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಹಿಳೆಯ ದೂರನ್ನು ಸ್ವೀಕರಿಸಿ ರಾಜ್ಯ ಮಹಿಳಾ ಆಯೋಗ ತನಿಖೆಗೆ ಮುಂದಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ (Nagalakshmi Choudhary) ‘ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ – ಸಮಗ್ರ ತನಿಖೆಗೆ ಎಸ್‌ಐಟಿ ರಚನೆ

    ಈ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ನಾಗಲಕ್ಷ್ಮೀ ಚೌಧರಿ, ಶನಿವಾರ ಸಂಜೆ ಸಂತ್ರಸ್ಥೆ ದೂರು ದಾಖಲಿಸಿದರು. ಸಂಸದ ಪ್ರಜ್ವಲ್ ರೇವಣ್ಣ ಅವರ ಕುಟುಂಬದವರಿಂದ ಕಿರುಕುಳ ಹಾಗೂ ಜೀವ ಬೆದರಿಕೆ ಇದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ವಾಟ್ಸಾಪ್ ಮೂಲಕ ದೂರಿನ ಪ್ರತಿಯನ್ನು ಕಳುಹಿಸಿಕೊಟ್ಟಿದ್ದಾರೆ. ಕೇವಲ ಒಬ್ಬ ಸಂತ್ರಸ್ಥೆ ಮಾತ್ರ ನಮಗೆ ದೂರು ಕೊಟ್ಟಿರೋದು. ಉಳಿದಂತೆ ಬೇರೆ ಯಾರೂ ದೂರು ನೀಡಿಲ್ಲ. ಮಹಿಳಾ ಸಂಘಟನೆ, ಕೆಲ ಸಂಘಟನೆಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರಿನ ಮನವಿಯನ್ನು ನೀಡಿದ್ದರು. ಇದರ ಸೂಕ್ಷ್ಮತೆ ಅರಿತುಕೊಂಡು ಸಿಎಂ, ಗೃಹ ಸಚಿವರಿಗೆ, ಪೊಲೀಸ್ ಜನರಲ್‌ಗೆ ಪತ್ರ ಬರೆದಿದ್ದೆ. ಗುರುವಾರ ಸಂಜೆ ಎಲ್ಲರಿಗೂ ಪತ್ರ ಬರೆದಿದ್ದೆ. ಎಸ್‌ಐಟಿ (SIT) ರಚನೆ ಆಗಬೇಕು. ನ್ಯಾಯ ಸಿಗಬೇಕೆಂದು ಪ್ರಕರಣದ ಗಂಭೀರತೆಯನ್ನು ಪತ್ರದಲ್ಲಿ ಬರೆದಿದ್ದೆ. ಅಪರಾಧ ಮಾಡಿದವರಿಗೆ ಶಿಕ್ಷೆಯಾಗೋ ಭರವಸೆಯಿದೆ. ಸರ್ಕಾರದ ದೊಡ್ಡ ಕೆಲಸ ಇದು ಎಂದು ತಿಳಿಸಿದರು. ಇದನ್ನೂ ಓದಿ: ಸಂಘ ಪರಿವಾರ ಎಂದಿಗೂ ಮೀಸಲಾತಿ ವಿರೋಧಿಸಿಲ್ಲ: ಆರ್‌ಎಸ್‌ಎಸ್‌ ಮುಖ್ಯಸ್ಥ

    ಒಬ್ಬ ಸಂತ್ರಸ್ಥೆ ಮಾತ್ರ ನಮ್ಮ ಸಂಪರ್ಕಕ್ಕೆ ಬಂದಿದ್ದಾರೆ. ಬೇರೆ ಯಾರೂ ನಮ್ಮ ಸಂಪರ್ಕಕ್ಕೆ ಬಂದಿಲ್ಲ. ನಾವೇ ಇತರೆ ಸಂತ್ರಸ್ಥರನ್ನು ಸಂಪರ್ಕ ಮಾಡೋದಿಲ್ಲ. ಸಂತ್ರಸ್ಥೆಯರು ತಾವಾಗಿ ತಾವೇ ಮುಂದೆ ಬಂದರೆ ಅವರ ಧ್ವನಿಯಾಗಿ ನಾವು ಇರುತ್ತೇವೆ. ಆರೋಪಿ ಸ್ಥಾನದಲ್ಲಿದ್ದವರಿಗೆ ನೋಟಿಸ್ ಕೊಡಬಹುದು. ಮಹಿಳಾ ಆಯೋಗಕ್ಕೆ ಕರೆಸಬಹುದು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು ಎಂದರು. ಇದನ್ನೂ ಓದಿ: ನರೇಂದ್ರ ಮೋದಿ ಪ್ರಧಾನ ಮಂತ್ರಿ ಅಲ್ಲ, ಪ್ರಧಾನ ಸುಳ್ಳುಗಾರ: ಬಿ.ಕೆ.ಹರಿಪ್ರಸಾದ್