Tag: ನಾಗರ ಹಾವು

  • ಫೈಟ್ ಮಾಡಿ ಕೊನೆಗೆ ನಾಗರಹಾವನ್ನು ಗುಳುಂ ಮಾಡಿತು ಹುಂಜ: ವಿಡಿಯೋ ನೋಡಿ

    ಫೈಟ್ ಮಾಡಿ ಕೊನೆಗೆ ನಾಗರಹಾವನ್ನು ಗುಳುಂ ಮಾಡಿತು ಹುಂಜ: ವಿಡಿಯೋ ನೋಡಿ

    ಕೋಲಾರ: ಬುಸುಗುಟ್ಟಿದ ನಾಗರಹಾವನ್ನು ಸಲೀಸಾಗಿ ಹುಂಜ ನುಂಗಿದ ಘಟನೆಯೊಂದು ವಕ್ಕಲೇರಿ ಗ್ರಾಮದಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ.

    ಮಂಜುನಾಥ್ ಎಂಬುವವರ ಮನೆಯಲ್ಲಿರುವ ಹುಂಜ ಈ ಸಾಹಸ ಮಾಡಿದೆ. ಮನೆಯ ಹತ್ತಿರ ತಿರುಗಾಡುತ್ತಿದ್ದಾಗ ಅಲ್ಲಿ ನಾಗರಹಾವಿನ ಮರಿಯೊಂದು ಕಾಣಿಸಿಕೊಂಡಿತ್ತು. ತನ್ನ ಮೇಲೆ ಬುಸುಗುಟ್ಟಿದ ನಾಗರಹಾವನ್ನು ಕಂಡು ಅದನ್ನು ಹಿಡಿಯಲು ಹುಂಜ ನಾಗರಹಾವಿನ ಜೊತೆ ಸೆಣಸಾಡಿದೆ.

    ನಾಗರಹಾವು ಹಾಗೂ ಹುಂಜ ಸೆಣಸಾಡಿ ಕೊನೆಯಲ್ಲಿ ನಾಗರಹಾವುವನ್ನೇ ಸಲಿಸಾಗಿ ನುಂಗಿ ನೀರು ಕುಡಿದಿದೆ. ಹುಂಜ ಹಾಗೂ ನಾಗರಹಾವಿನ ನಡುವಿನ ಕಾಳಗದ ಭಯಾನಕ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ವೈರಲ್ ಆಗುತ್ತಿದೆ.

    http://www.youtube.com/watch?v=KALZ-I6b5pU

  • ಲೇಡಿಸ್ ಹಾಸ್ಟೆಲ್‍ಗೆ ಬಂತು ನಾಗರ- ಹಾವು ಕಂಡು ಹುಡುಗಿಯರೆಲ್ಲಾ ಶಾಕ್

    ಲೇಡಿಸ್ ಹಾಸ್ಟೆಲ್‍ಗೆ ಬಂತು ನಾಗರ- ಹಾವು ಕಂಡು ಹುಡುಗಿಯರೆಲ್ಲಾ ಶಾಕ್

    ಮೈಸೂರು: ನಗರದ ಮಾನಸಗಂಗೋತ್ರಿಯಲ್ಲಿನ ವಿದ್ಯಾರ್ಥಿನಿಯರ ವಸತಿ ನಿಲಯದ ಕೊಠಡಿಯಲ್ಲಿ ಹಾವು ಕಾಣಿಸಿಕೊಂಡು ಕೆಲ ಕಾಲ ಆತಂಕ ಮೂಡಿಸಿದ ಘಟನೆ ನಡೆದಿದೆ.

    ಮಾನಸಗಂಗೋತ್ರಿ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರು ಮಲಗಿದ್ದ ಮಂಚದ ಕೆಳಗೆ ದೊಡ್ಡದಾದ ನಾಗರಹಾವು ಬುಸುಗುಡುತ್ತಿತ್ತು. ಏನಿದು ಬುಸುಗುಡುವ ಸದ್ದು ಬರ್ತಿದೆ ಅಂತಾ ವಿದ್ಯಾರ್ಥಿನಿಯರು ಮಂಚದ ಕೆಳಗೆ ಇಣುಕಿ ನೋಡಿದಾಗ ಹಾವು ಮಲಗಿರುವುದು ಕಂಡಿದೆ. ತಕ್ಷಣ ಕೊಠಡಿಯಿಂದ ಓಡಿ ಹೊರ ಬಂದು ವಿದ್ಯಾರ್ಥಿನಿಯರು ಕಿರುಚಾಡಿದ್ದಾರೆ.

    ವಾರ್ಡನ್ ತಕ್ಷಣ ಉರಗ ತಜ್ಞ ಸ್ನೇಕ್ ರಮೇಶ್ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದಾರೆ. ಉರಗ ತಜ್ನ ರಮೇಶ್ ಅವರು ಹಾವು ಹಿಡಿದು ವಿದ್ಯಾರ್ಥಿನಿಯರ ಆತಂಕವನ್ನ ದೂರ ಮಾಡಿದ್ದಾರೆ. ವಸತಿ ನಿಲಯದ ಸುತ್ತಾ ಗಿಡಗಂಟೆಗಳು ಬೆಳೆದಿದ್ದು ಶುಚಿತ್ವ ಕಾಪಾಡಿಕೊಳ್ಳದಿರುವುದೇ ಈ ರೀತಿ ಹಾವುಗಳು ವಸತಿ ನಿಲಯದ ಕೊಠಡಿಗೆ ಸೇರುವುದಕ್ಕೆ ಕಾರಣವಾಗಿದೆ.

    ಹಾವಿನಿಂದ ಯಾವ ವಿದ್ಯಾರ್ಥಿನಿಯರಿಗೂ ತೊಂದರೆ ಆಗಿಲ್ಲ.

  • ನಾಗಬನ ಪ್ರವೇಶಿಸಿದ ನಿಜವಾದ ನಾಗಪ್ಪನಿಗೆ ಪೂಜೆಗೈದ ಜನತೆ!

    ನಾಗಬನ ಪ್ರವೇಶಿಸಿದ ನಿಜವಾದ ನಾಗಪ್ಪನಿಗೆ ಪೂಜೆಗೈದ ಜನತೆ!

    ಕಾರವಾರ: ಇಂದು ನಾಗರ ಪಂಚಮಿಯ ಸಂಭ್ರಮ. ನಾಗನ ಕಲ್ಲಿಗೆ ಭಕ್ತರು ಹಾಲೆರೆದು ಪೂಜೆ ಮಾಡುವುದು ಸಾಮಾನ್ಯ. ಆದರೆ ಅಂಕೋಲ ತಾಲೂಕಿನ ನಾಗನಬನಕ್ಕೆ ನಾಗರ ಹಾವು ಬಂದಿತ್ತು.

    ಹೌದು. ಅಂಕೋಲ ತಾಲೂಕಿನ ಅವರ್ಸಾ ಗ್ರಾಮದ ದಂಡೇಭಾಗದಲ್ಲಿರುವ ನಾಗಬನಕ್ಕೆ ಮುಂಜಾನೆ ನಾಗರ ಹಾವೊಂದು ಪ್ರವೇಶಿಸಿದೆ. ನಾಗರ ಹಾವು ಕಲ್ಲಿನ ಮೇಲೆ ಹರಿದಾಡಿ ಹೆಡೆಎತ್ತಿ ಬುಸುಗುಡುತಿತ್ತು. ಇದನ್ನು ಗಮನಿಸಿದ ಸ್ಥಳೀಯರು ದೇವರ ಹಾವೆಂದು ಅಕ್ಕಪಕ್ಕದವರಿಗೆ ತಿಳಿಸಿದ್ದಾರೆ.

    ಇಂದು ನಾಗರ ಪಂಚಮಿಯಾಗಿದ್ದರಿಂದ ಜನರೂ ಭಕ್ತಿ ಭಾವದಿಂದ ಇಲ್ಲಿಗೆ ಆಗಮಿಸಿ ನಾಗಬನದೊಳಗಿದ್ದ ನಾಗನಿಗೆ ಪೂಜೆಗೈದು ಸಂತಸಪಟ್ಟರು. ನಾಗಬನಕ್ಕೆ ಬಂದಿರುವುದನ್ನ ಸ್ಥಳೀಯರು ಉರಗ ತಜ್ಞ ಮಹೇಶ್ ನಾಯ್ಕ ಅವರಿಗೆ ತಿಳಿಸಿದ ಬಳಿಕ ಹಾವನ್ನು ರಕ್ಷಿಸಲಾಯಿತು.

    https://www.youtube.com/watch?v=O9fz5O1mk_w

     

  • ನಾಗರ ಪಂಚಮಿ ದಿನವೇ ಮನೆಗೆ ಬಂದ ನಾಗಪ್ಪ!

    ನಾಗರ ಪಂಚಮಿ ದಿನವೇ ಮನೆಗೆ ಬಂದ ನಾಗಪ್ಪ!

    ಧಾರವಾಡ: ನಾಗರ ಪಂಚಮಿ ದಿನ ಎಲ್ಲರೂ ಮಣ್ಣಿನ ಹುತ್ತಕ್ಕೆ ಹಾಲೆರೆಯುತ್ತಾರೆ. ಆದರೆ ನಿಜವಾಗಿಯೂ ಈ ಹಬ್ಬದ ದಿನವೇ ಮನೆಗೆ ನಾಗಪ್ಪ ಬಂದ್ರೆ ಹೇಗಾಗಬಾರದು ಹೇಳಿ.

    ಹೌದು. ನಾಗರ ಪಂಚಮಿ ದಿನವೇ ಧಾರವಾಡದ ಗರಗ ಗ್ರಾಮದ ಮಡಿವಾಳೆಪ್ಪ ಎಂಬವರ ಮನೆಗೆ ನಾಗಪ್ಪ ಬಂದಿದ್ದಾನೆ. ಇದನ್ನ ಕಂಡು ಮೊದಲು ಭಯ ಪಟ್ಟ ಈ ಕುಟುಂಬದವರು ನಂತರ ಇದು ದೈವ ಸ್ವರೂಪ ಅಂತಾ ಹೇಳಿ ನಾಗಪ್ಪನಿಗೆ ಪೂಜೆ ಕೂಡ ಮಾಡಿದ್ದಾರೆ. ಪಂಚಮಿಯ ದಿನವೇ ಮನೆಗೆ ಈ ನಾಗಪ್ಪ ಬಂದಿದ್ದರಿಂದ ಆ ಮನೆ ಮಹಿಳೆಯರು ಆರತಿ ಬೆಳಗಿ ನಂತರ ಸ್ನೇಕ್ ತಜ್ಞ ಎಲ್ಲಪ್ಪ ಅವರನ್ನು ಕರೆಸಿ ನಾಗರಹಾವನ್ನ ಕಾಡಿಗೆ ಬಿಡಿಸಿದ್ದಾರೆ.

    ಇದನ್ನ ನೋಡಲು ಗ್ರಾಮದ ಜನರು ಕೂಡಾ ಮುಗಿ ಬಿದ್ದಿದ್ರು. ಇನ್ನೂ ಕೆಲವರು ಈ ಎಲ್ಲಾ ದೃಶ್ಯವನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.

    ಹಾಗೆ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕೂಡ ನಾಗರ ಪಂಚಮಿ ಸಂಭ್ರಮ ಜೋರಾಗಿದೆ. ನಾಗಪ್ರತಿಷ್ಟಾ ಮಂಟಪದಲ್ಲಿ ನಾಗನ ವಿಗ್ರಹಕ್ಕೆ ಭಕ್ತರು ಹಾಲನ್ನು ಎರೆದರು. ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಹರಿದುಬರುತ್ತಿದೆ.

  • ಮೊಟ್ಟೆ ಎಂದು ತಿಳಿದು ಪೈಪನ್ನೇ ನುಂಗಿದ ನಾಗರಹಾವು!

    ಮೊಟ್ಟೆ ಎಂದು ತಿಳಿದು ಪೈಪನ್ನೇ ನುಂಗಿದ ನಾಗರಹಾವು!

    ಕಾರವಾರ: ನಾಗರಹಾವು ಕೋಳಿ, ಕುರಿ, ನಾಯಿ ನುಂಗುವುದನ್ನು ಕೇಳಿರುತ್ತೀರಿ ಅಥವಾ ನೋಡಿರುತ್ತೀರಿ. ಆದರೆ ಇಲ್ಲಿ ನಾಗರಹಾವೊಂದು ಮೊಟ್ಟೆ ಎಂದು ತಪ್ಪಾಗಿ ತಿಳಿದು ಪೈಪನ್ನ ನುಂಗಿದ ವಿಚಿತ್ರ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಹೊಟ್ಟೆ ಹಸಿವು ತಾಳಲಾರದೆ ಬೇಟೆ ಅರಸಿ ಬಂದ ಹಾವೊಂದು ಶಿರಸಿಯ ಚಿಪ್ಪಗಿ ಗ್ರಾಮದ ಅಬ್ದುಲ್ ಎಂಬುವವರ ಮನೆಗೆ ಬಂದಿದೆ. ಕೋಳಿ ಗೂಡಿಗೆ ನುಗ್ಗಿದ ಹಾವು, ಮೊಟ್ಟೆ ಎಂದುಕೊಂಡು ಪಕ್ಕದಲ್ಲೇ ಇದ್ದ ಎರಡೂವರೆ ಅಡಿ ಉದ್ದದ ಪೈಪನ್ನು ನುಂಗಿದೆ.

    ಬಳಿಕ ತುಂಬಾ ಸಮಯ ಒದ್ದಾಡಿದ ಹಾವನ್ನು ಉರಗ ತಜ್ಞ ಪ್ರಶಾಂತ್ ಹುಲೇಕಲ್ ಸ್ಥಳಕ್ಕೆ ಬಂದು ರಕ್ಷಿಸಿದ್ದಾರೆ.

    https://www.youtube.com/watch?v=23e5Ur5e-qs&feature=youtu.be