Tag: ನಾಗರ ಹಾವು

  • ಹಾವಿನ ಜೊತೆ ಆಟವಾಡಲು ಹೋಗಿ ಒದ್ದಾಡಿ, ಒದ್ದಾಡಿ ಪ್ರಾಣ ಬಿಟ್ಟ!

    ಹಾವಿನ ಜೊತೆ ಆಟವಾಡಲು ಹೋಗಿ ಒದ್ದಾಡಿ, ಒದ್ದಾಡಿ ಪ್ರಾಣ ಬಿಟ್ಟ!

    ಬಳ್ಳಾರಿ: ಹಾವಿನ ಜೊತೆ ಆಟವಾಡಲು ಹೋಗಿ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡ ಘಟನೆ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಗ್ರಾಮದಲ್ಲಿ ನಡೆದಿದೆ.

    ಬಸರಕೋಡು ಗ್ರಾಮದ ಕೆಂಚಪ್ಪ ಹರಿಜನ (40) ಮೃತಪಟ್ಟ ವ್ಯಕ್ತಿ. ಹಾವು ಕಚ್ಚಿದ 2 ಗಂಟೆಯ ಬಳಿಕ ಕೆಂಚಪ್ಪ ಸಾವನ್ನಪ್ಪಿದ್ದಾನೆ. ಈ ದೃಶ್ಯವನ್ನು ಸ್ಥಳದಲ್ಲಿಯೇ ಇದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಆಗಿದ್ದೇನು?:
    ಕೆಂಚಪ್ಪ ಹರಿಜನ ಕಳೆದ ಐದು ವರ್ಷಗಳಿಂದ ಗ್ರಾಮದಲ್ಲಿ ಹಾವು ಬಂದರೆ ಅದನ್ನು ಹಿಡಿದು, ಆಟ ಆಡಿಸುತ್ತಿದ್ದ. ಬಳಿಕ ಅದನ್ನು ಗ್ರಾಮದಿಂದ ದೂರದ ಪ್ರದೇಶದಲ್ಲಿ ಬಿಟ್ಟು ಬರುತ್ತಿದ್ದ. ಗ್ರಾಮದಲ್ಲಿ ಬಂದಿದ್ದ ನಾಗರಹಾವನ್ನು ಹಿಡಿದು ಇಂದು ಆಟವಾಡಿಸುತ್ತಿದ್ದ. ಈ ವೇಳೆ ಹಾವು ಆತನ ಎಡಗೈಗೆ ಕಚ್ಚಿದೆ. ತಕ್ಷಣವೇ ಹಾವನ್ನು ಎಸೆದು ಸ್ವಲ್ಪ ಮುಂದೆ ಹೋಗಿದ್ದ. ಮರಳಿ ಹಾವಿನ ಬಳಿಗೆ ಬಂದು ಬಾಲ ಹಿಡಿದು ಗ್ರಾಮದಿಂದ ದೂರದ ಪ್ರದೇಶ ಒಯ್ದು ಬಿಟ್ಟಿದ್ದ.

    ಹಾವು ಕಚ್ಚಿದೆ, ಚಿಕಿತ್ಸೆ ತಗೆದುಕೊಳ್ಳುವಂತೆ ಗ್ರಾಮಸ್ಥರು ಕೆಂಚಪ್ಪ ಹರಿಜನಗೆ ತಿಳಿಸಿದ್ದರು. ಆದರೆ ಇದಕ್ಕೆ ಒಪ್ಪದ ಅವನು, ನನಗೆ ಈ ಹಿಂದೆ ಅನೇಕ ಬಾರಿ ಹಾವು ಕಚ್ಚಿದ್ದರೂ ಚಿಕಿತ್ಸೆ ತೆಗೆದುಕೊಂಡಿಲ್ಲ. ನನಗೆನೂ ಆಗಿಲ್ಲ ಎಂದು ಹೇಳಿದ್ದ.

    ಕೆಂಚಪ್ಪ ಮನೆಗೆ ಮರಳಿ ವಿಶ್ರಾಂತಿ ಪಡೆಯುತ್ತಿದ್ದಾಗ ಹಾವಿನ ವಿಷ ತೀವ್ರತೆ ಏರಿದೆ. ಇದರಿಂದಾಗಿ ಒದ್ದಾಡಿ, ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

  • ನಡೆದಾಡುವ ದೇವರಿಗೆ ನಮನ – ಭಾವಚಿತ್ರದ ಮುಂದೆ 1 ಗಂಟೆ ಇತ್ತು ನಾಗರಹಾವು!

    ನಡೆದಾಡುವ ದೇವರಿಗೆ ನಮನ – ಭಾವಚಿತ್ರದ ಮುಂದೆ 1 ಗಂಟೆ ಇತ್ತು ನಾಗರಹಾವು!

    ದಾವಣಗೆರೆ: ನಡೆದಾಡುವ ದೇವರು ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರದ ಮುಂಭಾಗ ನಾಗರಹಾವೊಂದು ಒಂದು ಗಂಟೆಗಳ ಕಾಲ ಕುಳಿತ ಅಚ್ಚರಿಯ ಘಟನೆ ಚನ್ನಗಿರಿ ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ನಡೆದಿದೆ.

    ನಾಗೇನಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಗ್ರಾಮಸ್ಥರು ಶ್ರೀಗಳ ಭಾವಚಿತ್ರವಿಟ್ಟು ಶ್ರದ್ಧಾಂಜಲಿ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡಿದ್ದಾರೆ. ಗ್ರಾಮಸ್ಥರು ಶ್ರದ್ಧಾಂಜಲಿ ಸಲ್ಲಿಸಿ ತೆರಳಿದ ಬಳಿಕ ಅಲ್ಲಿಗೆ ನಾಗರಹಾವೊಂದು ಆಗಮಿಸಿದೆ. ಇದನ್ನೂ ಓದಿ: ಅನ್ನ ಚೆಲ್ಲಲು ಬಂದ ಭಕ್ತನಿಗೆ ಮಠದ ವಿದ್ಯಾರ್ಥಿಯಿಂದ ಅನ್ನದ ಪಾಠ! – ವಿಡಿಯೋ ನೋಡಿ

    ಎಲ್ಲಿಂದಲೋ ಬಂದಿದ್ದ ನಾಗರಹಾವು ಸಿದ್ದಗಂಗಾ ಶ್ರೀಗಳ ಭಾವಚಿತ್ರದ ಮುಂದೆ ಒಂದು ಗಂಟೆಗೂ ಅಧಿಕ ಕಾಲ ಕುಳಿತಿತ್ತು. ಈ ವಿಶೇಷ ದೃಶ್ಯವನ್ನು ನೋಡಿದ ಗ್ರಾಮಸ್ಥರು ಆಶ್ಚರ್ಯ ಪಟ್ಟಿದ್ದಾರೆ. ಸಾಧಾರಣವಾಗಿ ಕಾಣಿಸಿಕೊಳ್ಳದ ನಾಗರಹಾವು ಸಿದ್ದಗಂಗಾ ಶ್ರೀಗಳ ಭಾವಚಿತ್ರ ಮುಂದೆ ಕಾಣಿಸಿದ್ದನ್ನು ಕಂಡು ಜನರು ಇದೊಂದು ವಿಸ್ಮಯ ಎಂದಿದ್ದಾರೆ. ಕೇವಲ ಮನುಷ್ಯರು ಮಾತ್ರವಲ್ಲದೇ ಮೂಖ ಜೀವಿ ಕೂಡ ಸಿದ್ದಗಂಗಾ ಶ್ರೀಗಳಿಗೆ ನಮನ ಸಲ್ಲಿಸಿದೆ ಎಂದು ಬರೆದು ಭಾವಚಿತ್ರ ಮುಂದಿರುವ ನಾಗರಹಾವಿನ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಕೂಟಿಯಲ್ಲಿ ನಾಗರಹಾವು ಪ್ರತ್ಯಕ್ಷ – ಬಿಡಿ ಭಾಗವನ್ನು ತೆಗೆದು ಕೊನೆಗೂ ಹಿಡಿದ್ರು : ವಿಡಿಯೋ

    ಸ್ಕೂಟಿಯಲ್ಲಿ ನಾಗರಹಾವು ಪ್ರತ್ಯಕ್ಷ – ಬಿಡಿ ಭಾಗವನ್ನು ತೆಗೆದು ಕೊನೆಗೂ ಹಿಡಿದ್ರು : ವಿಡಿಯೋ

    ಕೋಲಾರ: ಮನೆ ಬಳಿ ನಿಲ್ಲಿಸಿದ್ದ ಸ್ಕೂಟಿಯೊಂದರಲ್ಲಿ ನಾಗರ ಹಾವೊಂದು ಸೇರಿಕೊಂಡು ಜನರನ್ನು ಗಾಬರಿಗೊಳಿಸಿದ ಘಟನೆ ಜಿಲ್ಲೆಯ ಬಂಗಾರಪೇಟೆಯ ಶಾಂತಿ ನಗರದಲ್ಲಿ ನಡೆದಿದೆ.

    ಜಿಲ್ಲೆಯ ಬಂಗಾರಪೇಟೆ ಶಾಂತಿ ನಗರದ ನಿವಾಸಿ ಶಿವಾರೆಡ್ಡಿ ಎಂಬವರ ಸ್ಕೂಟಿಯಲ್ಲಿ ಬೃಹತ್ ಗಾತ್ರದ ನಾಗರ ಹಾವೊಂದು ಪತ್ತೆಯಾಗಿದೆ. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಶಿವಾರೆಡ್ಡಿಯವರು ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸ್ಕೂಟಿ ಬಳಿ ಹೋದಾಗ ಏನೋ ಸದ್ದು ಬರುತ್ತಿರುವುದನ್ನು ಗಮನಿಸಿದ್ದಾರೆ. ಬಳಿಕ ಸೂಕ್ಷ್ಮವಾಗಿ ಆಲಿಸಿ ಕೇಳಿದಾಗ ಹಾವು ಬುಸುಗುಡುತ್ತಿದ್ದ ಸದ್ದು ಬಂದಿದೆ. ಆಗ ಸ್ಕೂಟಿಯಲ್ಲಿ ಹಾವು ಸೇರಿಕೊಂಡಿರುವುದು ಖಚಿತವಾದ ಕೂಡಲೇ ಉರಗ ತಜ್ಞರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

    ಸ್ಥಳಕ್ಕೆ ಬಂದ ಪಲವತಿಮ್ಮನಹಳ್ಳಿಯ ಉರಗ ತಜ್ಞ ನದೀಮ್ ಅವರು ಸತತ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು. ಕೊನೆಗೆ ಸ್ಕೂಟಿಯ ಬಿಡಿ ಭಾಗಗಳನ್ನು ತೆಗೆದು ಒಳಗಡೆ ಅಡಗಿದ್ದ ನಾಗರ ಹಾವನ್ನು ಹೊರತೆಗೆದಿದ್ದಾರೆ. ಈ ವೇಳೆ ಬುಸುಗುಡುತ್ತ ಹಿಡಿಯಲು ಬಂದಿದ್ದ ಉರಗ ತಜ್ಞರನ್ನೇ ಹೆದರಿಸಲು ನಾಗರ ಹಾವು ಪ್ರಯತ್ನಿಸಿದೆ.

    ಹಾವು ಬುಸುಗುಡುತ್ತಿದ್ದರೂ ಧೈರ್ಯ ಮಾಡಿ ಬಹಳ ಕಷ್ಟಪಟ್ಟು ನದೀಮ್ ಅವರು ನಾಗರ ಹಾವನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಸುರಕ್ಷಿತವಾಗಿ ಹಾವನ್ನು ಕಾಡಿಗೆ ಬಿಟ್ಟು ಬಂದಿದ್ದಾರೆ. ನಾಗರ ಹಾವನ್ನು ನೋಡಲು ಕೆಲಕಾಲ ಸ್ಥಳದಲ್ಲಿ ಜನರು ಮುಗಿಬಿದ್ದು ನಿಂತಿದ್ದರು.

    https://www.youtube.com/watch?v=6LmpsAxY6ls

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಗರಹಾವನ್ನು ಅಟ್ಟಿಸಿಕೊಂಡು ಬಂದ 13 ಅಡಿ ಉದ್ದದ ಕಾಳಿಂಗ- 1 ವಾರ ಅಡಿಕೆ ಮರದೊಳಗೆ ವಾಸ

    ನಾಗರಹಾವನ್ನು ಅಟ್ಟಿಸಿಕೊಂಡು ಬಂದ 13 ಅಡಿ ಉದ್ದದ ಕಾಳಿಂಗ- 1 ವಾರ ಅಡಿಕೆ ಮರದೊಳಗೆ ವಾಸ

    ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಸೋಮ್ಲಾಪುರದ ಗ್ರಾಮದಲ್ಲಿ ನಾಗರಹಾವನ್ನು ಅಟ್ಟಿಸಿಕೊಂಡು ಬಂದು ಅದು ಕೈತಪ್ಪಿದರಿಂದ 13 ಅಡಿ ಉದ್ದದ ಕಾಳಿಂಗ ಸರ್ಪ ಕಳೆದೊಂದು ವಾರದಿಂದ ಅಡಿಕೆ ಮರದ ಲಾಟಿನಲ್ಲೇ ವಾಸವಾಗಿದೆ.

    ಚೈತ್ರಕುಮಾರ್ ಅವರ ಮನೆ ಮುಂದೆ ಅಡಿಕೆ ಮರಗಳನ್ನು ಕಡಿದು ಲಾಟು ಹಾಕಿದ್ದಾರೆ. ಕಳೆದೊಂದು ವಾರದ ಹಿಂದೆ ಕಾಳಿಂಗ ಸರ್ಪವೊಂದು ನಾಗರಹಾವನ್ನು ಅಟ್ಟಿಸಿಕೊಂಡು ಬಂದಿತ್ತು. ಈ ವೇಳೆ ನಾಗರಹಾವು ಅಡಿಕೆ ಮರಗಳ ಮಧ್ಯೆ ಸೇರಿತ್ತು. ಆಗ ಅಡಿಕೆ ಮರಗಳೊಳಗೆ ಹೋದ ಕಾಳಿಂಗ ಒಂದು ವಾರದಿಂದ ಅಲ್ಲೇ ವಾಸವಿದೆ.

    ಇದನ್ನು ನೋಡಿದ ಮನೆಯವರು ಹಾಗೂ ಸ್ಥಳೀಯರು ನಾಗರಹಾವು ಹಾಗೂ ಕಾಳಿಂಗ ಎರಡೂ ಒಂದೇ ಜಾಗದಲ್ಲಿ ಬಹಳ ದಿನ ಇರೋದಿಲ್ಲ, ಹೋಗಿವೆ ಎಂದು ಸುಮ್ಮನಾಗಿದರು. ಆದರೆ ಸೋಮವಾರ ಹೊರಬಂದ ಕಾಳಿಂಗನನ್ನು ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

    ಗ್ರಾಮಸ್ಥರು ಕೂಡಲೇ ಸ್ನೇಕ್ ಹರೀಂದ್ರಾರನ್ನು ಕರೆಸಿ ಕಾಳಿಂಗನನ್ನು ಸೆರೆಹಿಡಿದಿದ್ದಾರೆ. ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಒಂದು ಗಂಟೆಯ ಕಾರ್ಯಚರಣೆ ನಡೆಸಿ ಸೆರೆ ಹಿಡಿದ ಕಾಳಿಂಗನನ್ನು ಸ್ಥಳೀಯ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಭೂಮಂಡಲದಲ್ಲಿ ವಿಶೇಷವಾಗಿ ಪತ್ತೆ ಆಯ್ತು ನಾಗರಹಾವು!

    ಭೂಮಂಡಲದಲ್ಲಿ ವಿಶೇಷವಾಗಿ ಪತ್ತೆ ಆಯ್ತು ನಾಗರಹಾವು!

    ಚಿಕ್ಕಮಗಳೂರು: ಭೂಮಂಡಲದಲ್ಲಿ ವಿಭಿನ್ನವಾಗಿ ನಾಗರಹಾವು ಕಂಡು ಬಂದಿದ್ದು, ಸೂರ್ಯನ ಕಿರಣಕ್ಕೆ ಹಾವಿನ ತಲೆ ಹೊಳೆಯುತ್ತಿರುವ ಫೋಟೋ ಈಗ ವೈರಲ್ ಆಗಿದೆ.

    ಜಿಲ್ಲೆಯ ಕೊಪ್ಪ ತಾಲೂಕಿನ ಹೊಳೆಮಕ್ಕಿ ಗ್ರಾಮದ ತೋಟದಲ್ಲಿ ನಾಯಿ ಹಾಗೂ ಹಾವಿನ ಕಾಳಗದ ವೇಳೆ ಅಪರೂಪದ ಫೋಟೋ ಪತ್ತೆಯಾಗಿದೆ.

    ಅವಿನಾಶ್ ಎಂಬವರ ತೋಟದಲ್ಲಿ ನಾಯಿ ಮತ್ತು ನಾಗರಹಾವು ಮಧ್ಯೆ ಅರ್ಧ ಗಂಟೆಗಳ ಕಾಲ ಜಗಳ ನಡೆದಿದೆ. ಶ್ವಾನದ ಮೇಲೆ ನಾಗರಾಜ ರೋಷಾವೇಷವಾಗಿ ಹೋರಾಡಿದೆ. ಇತ್ತ ನಾಗರ ಹಾವು ನಾಯಿಯ ಜಗಳ ಕಂಡು ಮಾಲೀಕರು ದಂಗಾಗಿದ್ದಾರೆ.

    ಸ್ವಲ್ಪ ಹೊತ್ತಾದ ಬಳಿಕ ನಾಯಿ ಸಹವಾಸವೇ ಬೇಡ ಎಂದು ನಾಗರ ಹಾವು ವಾಪಸ್ ಹೋಗಿದೆ. ಈ ಘಟನೆಯನ್ನು ತೋಟದ ಮಾಲೀಕರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=U6CV8gPdtNY

  • ಮೀನಿನ ಬಲೆಯಲ್ಲಿ ಸಿಲುಕಿದ್ದ ನಾಗರಹಾವಿನ ರಕ್ಷಣೆ: ವಿಡಿಯೋ ನೋಡಿ

    ಮೀನಿನ ಬಲೆಯಲ್ಲಿ ಸಿಲುಕಿದ್ದ ನಾಗರಹಾವಿನ ರಕ್ಷಣೆ: ವಿಡಿಯೋ ನೋಡಿ

    ಕಾರವಾರ: ದನಗಳು ಹೂವುಗಳನ್ನು ತಿನ್ನಬಾರದೆಂದು ಗಿಡಗಳ ಮೇಲೆ ಹಾಕಿದ್ದ ಮೀನಿನ ಬಲೆಗೆ ಸಿಲುಕಿಕೊಂಡಿದ್ದ ನಾಗರಹಾವನ್ನು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿಯಲ್ಲಿ ನಡೆದಿದೆ.

    ಆಹಾರ ಅರಸಿ ಮುಂಡಳ್ಳಿ ಗ್ರಾಮದ ತಿರಗನಮನೆ ಶನಿಯಾರ ನಾಯ್ಕ ಎಂಬುವವರ ಮನೆಗೆ ರಾತ್ರಿ ವೇಳೆಯಲ್ಲಿ ಬಂದಿದ್ದ ನಾಗರಹಾವು, ಗಿಡಗಳ ಮೇಲೆ ಹಾಕಲಾಗಿದ್ದ ಮೀನಿನ ಬಲೆಗೆ ಸಿಲುಕಿದೆ. ಇದು ಬೆಳಗ್ಗೆ ಮನೆಯ ಮಾಲೀಕರ ಗಮನಕ್ಕೆ ಬಂದಕೂಡಲೇ ಸ್ಥಳೀಯ ಉರಗ ತಜ್ಞ ಮಾದೇವ ನಾಯ್ಕರವರಿಗೆ ಮಾಹಿತಿ ನೀಡಿದ್ದಾರೆ.

    ಹಾವಿನ ರಕ್ಷಣಾ ಕಾರ್ಯವನ್ನ ನಡೆಸುವ ಕಾರ್ಯವನ್ನು ಮಾಡುತ್ತಿರುವ ಮಾದೇವ ಅವರು ತಕ್ಷಣ ಸ್ಥಳಕ್ಕೆ ಆಗಮಿಸಿ ಬಲೆಯಲ್ಲಿ ಸಿಲುಕಿದ್ದ ನಾಗರಹಾವನ್ನು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಬಲೆಯಲ್ಲಿ ಸಿಲುಕಿದ್ದ ನಾಗರಹಾವು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಗಾಯಗಳನ್ನು ಮಾಡಿಕೊಂಡಿದ್ದು ಉರಗ ತಜ್ಞ ಮಾದೇವನಾಯ್ಕ ಅದರ ದೇಹಕ್ಕೆ ಅರಿಶಿನ ಹಚ್ಚಿ ಉಪಚಾರ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=MXWKyYCwlco

     

  • ಹಾಸ್ಟೆಲ್ ವರಾಂಡದಲ್ಲಿ ಹೆಡೆಎತ್ತಿದ 5 ಅಡಿ ಉದ್ದದ ನಾಗರಹಾವು!

    ಹಾಸ್ಟೆಲ್ ವರಾಂಡದಲ್ಲಿ ಹೆಡೆಎತ್ತಿದ 5 ಅಡಿ ಉದ್ದದ ನಾಗರಹಾವು!

    ಭವನೇಶ್ವರ್: ಒಡಿಶಾದ ಹಾಸ್ಟೆಲ್ ವೊಂದರ ಆವರಣದಲ್ಲಿ ಭಾನುವಾರ 5 ಅಡಿ ಉದ್ದದ ನಾಗರ ಹಾವೊಂದು ಪ್ರತ್ಯಕ್ಷವಾಗಿದ್ದು, ವಿದ್ಯಾರ್ಥಿನಿಯರು ಬೆಚ್ಚಿಬಿದ್ದಿದ್ದಾರೆ.

    ಈ ಹಾಸ್ಟೆಲ್ ಒಡಿಶಾದ ಮಯೂರ್‍ಭಂಜ್ ಜಿಲ್ಲೆಯ ಬರಿಪಡ ನಗರದಲ್ಲಿದೆ. ವಿದ್ಯಾರ್ಥಿನಿಯೊಬ್ಬಳ ಬಳಿಯಲಿದ್ದ ಹಾವನ್ನು ಗಮನಿಸಿದ ಆಕೆಯ ಸಹಪಾಠಿ ಆಕೆಯನ್ನು ಕೂಡಲೇ ಪಾರು ಮಾಡಿದ್ದಾರೆ. ಇದರಿಂದ ಇಬ್ಬರೂ ಬೆಚ್ಚಿಬಿದ್ದಿದ್ದು, ಜೋರಾಗಿ ಕಿರುಚಿಕೊಂಡಿದ್ದಾರೆ. ವಿದ್ಯಾರ್ಥಿನಿಯರ ಚೀರಾಟ ಕೇಳಿದ ಹಾಸ್ಟೆಲ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಏನಾಯ್ತು ಅನ್ನೋವಷ್ಟರಲ್ಲಿ ಹಾವು ಹೆಡೆ ಎತ್ತಿರುವುದು ಕಂಡು ಬಂದಿದೆ. ಹಾವನ್ನು ನೋಡಿ ಗಾಬರಿಗೊಂಡ ಸಿಬ್ಬಂದಿ ಕೂಡಲೇ ಸ್ಥಳೀಯ ಫೇಮಸ್ ಉರಗತಜ್ಞರಿಗೆ ಮಾಹಿತಿ ರವಾನಿಸಿದ್ದಾರೆ.

    ಮಾಹಿತಿ ಪಡೆದ ಉರಗತಜ್ಞ ಕೃಷ್ಣಚಂದ್ರ ಗೊಚ್ಚಾಯಟ್ ಕೂಡಲೇ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಬಂದು ಫಿಶಿಂಗ್ ನೆಟ್ ಮೂಲಕ ಹಾವನ್ನು ಹಿಡಿದು ರಕ್ಷಿಸಿದ್ದಾರೆ. ಉರಗ ತಜ್ಞರು ಹಾವನ್ನು ಹಿಡಿದ ಬಳಿಕ ವಿದ್ಯಾರ್ಥಿನಿಯರು ನಿಟ್ಟಿಸಿರು ಬಿಟ್ಟಿದ್ದಾರೆ.

    ಸಾಮಾನ್ಯವಾಗಿ ನಾಗರಹವುಗಳು ಯಾರಿಗೂ ತೊಂದರೆ ಕೊಡಲ್ಲ. ಆದ್ರೆ ಅವುಗಳಿಗೆ ಮನುಷ್ಯರು ತೊಂದ್ರೆ ಅಥವಾ ಕೆರಳಿಸಿದ್ರೆ ಕೊಟ್ರೆ ಮಾತ್ರ ತಿರುಗಿ ಬೀಳುತ್ತವೆ. ಹಾವನ್ನು ಈಗಾಗಲೇ ಸೆರೆಹಿಡಿಯುವ ಮೂಲಕ ರಕ್ಷಿಸಲಾಗಿದೆ ಅಂತ ಕೃಷ್ಣಚಂದ್ರ ಗೊಚ್ಚಾಯಟ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಳಗ್ಗೆಯಿಂದ ದೇವರ ಫೋಟೋ ಮುಂದೆ ಹೆಡೆ ಎತ್ತಿ ಕುಳಿತಿದ್ದ ನಾಗ

    ಬೆಳಗ್ಗೆಯಿಂದ ದೇವರ ಫೋಟೋ ಮುಂದೆ ಹೆಡೆ ಎತ್ತಿ ಕುಳಿತಿದ್ದ ನಾಗ

    ದಾವಣಗೆರೆ: ದೇವರ ಮನೆಯಲ್ಲಿ ನಾಗರಹಾವೊಂದು ಹೆಡೆ ಎತ್ತಿ ಕುಳಿತಿದ್ದ ಘಟನೆ ಜಿಲ್ಲೆಯ ಕುಂದುವಾಡ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಚಂದ್ರಪ್ಪ ಎಂಬವರ ಮನೆಯಲ್ಲಿ ಇಂದು ಬೆಳಗ್ಗೆ ನಾಗರಹಾವು ಕಾಣಿಸಿಕೊಂಡಿತ್ತು. ಬೆಳಗ್ಗೆಯಿಂದ ದೇವರ ಮನೆಯನ್ನು ಬಿಟ್ಟು ಬಾರದೆ ದೇವರ ಫೋಟೋ ಮುಂದೆ ಇರುವ ಪುಸ್ತಕಗಳ ಮೇಲೆ ಹೆಡೆ ಎತ್ತಿ ಕುಳಿತಿತ್ತು.

    ಕಳೆದ ಆರು ತಿಂಗಳುಗಳಿಂದ ಈ ನಾಗರಹಾವು ಗ್ರಾಮದ ಹಲವು ಮನೆಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇಂದು ಬೆಳಗ್ಗೆ ಚಂದ್ರಪ್ಪ ಅವರ ಮನೆಯಲ್ಲಿ ಕಾಣಿಸಿಕೊಂಡಿತ್ತು. ಆದರೆ ಬೆಳಿಗ್ಗೆಯಿಂದ ಒಂದೇ ಮನೆಯಲ್ಲಿ ಇರುವುದಕ್ಕೆ ಗ್ರಾಮಸ್ಥರು ಭಯಭೀತರಾಗಿದ್ದರು. ಆದ್ದರಿಂದ ಈ ಹಾವನ್ನು ಹಿಡಿಯಲು ಗ್ರಾಮಸ್ಥರು ಉರಗ ತಜ್ಞರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಉರಗ ತಜ್ಞರು ಬಂದು ಹಾವನ್ನ ರಕ್ಷಣೆ ಮಾಡಿದ್ದಾರೆ. ಇದನ್ನು ಓದಿ: ಒಂದೇ ಜಾಗದಲ್ಲಿ ಎರಡು ಹಾವು, 300ಕ್ಕೂ ಹೆಚ್ಚು ಮೊಟ್ಟೆ – ಅಚ್ಚರಿಗೊಳಗಾದ ಸ್ಥಳೀಯರು!

  • ಬರೋಬ್ಬರಿ 33 ಸಾವಿರ ಹಾವುಗಳ ರಕ್ಷಣೆಗೈದ್ರು ಮೈಸೂರಿನ ಸ್ನೇಕ್ ಶ್ಯಾಮ್

    ಬರೋಬ್ಬರಿ 33 ಸಾವಿರ ಹಾವುಗಳ ರಕ್ಷಣೆಗೈದ್ರು ಮೈಸೂರಿನ ಸ್ನೇಕ್ ಶ್ಯಾಮ್

    ಮೈಸೂರು: ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿ ನಾಗರಹಾವು ರಕ್ಷಿಸುವ ಮೂಲಕ ಸ್ನೇಕ್ ಶ್ಯಾಮ್ ಬರೋಬ್ಬರಿ 33 ಸಾವಿರ ಹಾವುಗಳನ್ನು ಹಿಡಿದು ರಕ್ಷಣೆ ಮಾಡಿ ಹೊಸ ದಾಖಲೆಯನ್ನು ಬರೆದಿದ್ದಾರೆ.

    ನಗರದ ಚಾಮುಂಡೇಶ್ವರಿ ಬಡಾವಣೆಯ ನಿವಾಸಿ ಜಯಭಾಯಿ ಎಂಬವರ ಮನೆಯಲ್ಲಿ ಸಿಲಿಂಡರ್ ಕೆಳಗೆ ನಾಗರ ಹಾವೊಂದು ಸೇರಿಕೊಂಡಿತ್ತು. ಕೂಡಲೇ ಜಯಭಾಯಿ ಅವರು ಸ್ನೇಕ್ ಶ್ಯಾಮ್ ಅವರನ್ನು ಕರೆಸಿದ್ದಾರೆ. ಈ ನಾಗರ ಹಾವನ್ನು ಹಿಡಿದು, ತಮ್ಮ ರಿಜಿಸ್ಟರ್ ನ 33000 ನಂಬರ್ ನಲ್ಲಿ ದಾಖಲಿಸಿಕೊಂಡಿದ್ದಾರೆ.

    ಮೈಸೂರು ಮಹಾನಗರ ಪಾಲಿಕೆಯ ಸದಸ್ಯರು ಆಗಿರುವ ಸ್ನೇಕ್ ಶ್ಯಾಮ್ 1997ರಿಂದ ರಿಜಿಸ್ಟರ್ ಮೂಲಕ ಹಾವುಗಳ ರಕ್ಷಣೆಯ ಲೆಕ್ಕೆ ಹಾಕುತ್ತಿದ್ದಾರೆ. 1997ಕ್ಕಿಂತ ಮುಂಚೆ ಅನೇಕ ಹಾವುಗಳನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.

    ಬಿಜೆಪಿಯಿಂದ ಸ್ಪರ್ಧಿಸಿ ಪಾಲಿಕೆಗೆ ಆಯ್ಕೆಯಾಗಿರುವ ಉರಗ ತಜ್ಞ ಶ್ಯಾಮ್ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

  • ನಾಗರ ಹಾವಿನ ಮೂಗಿನೊಳಗೆ ಸೇರಿತು ಮರಿ ಹಾವು!

    ನಾಗರ ಹಾವಿನ ಮೂಗಿನೊಳಗೆ ಸೇರಿತು ಮರಿ ಹಾವು!

    ಬೆಳಗಾವಿ: ಹಾವುಗಳು ಇಲಿ, ಕಪ್ಪೆ ನುಂಗೋದು ಸಾಮಾನ್ಯ. ಆದ್ರೆ ಇಲ್ಲೊಂದು ನಾಗರ ಹಾವಿನ ಮೂಗಿನೊಳಗೆ ಮರಿ ಹಾವು ಹೊಕ್ಕಿದ ವಿಚಿತ್ರ ಘಟನೆ ನಡೆದಿದೆ.

    ಈ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ನಗರದ ಬ್ರಹ್ಮ ನಗರದ ಸಿಮೆಂಟ್ ಇಟ್ಟಿಗೆ ಭಟ್ಟಿಯಲ್ಲಿ ಹಾವು ಪತ್ತೆಯಾಗಿದೆ. ಈ ನಾಗರ ಹಾವಿನ ಮೂಗಿನೊಳಗೆ ಮರಿ ಹಾವೊಂದು ಸಿಲುಕಿರುವುದನ್ನು ಕಂಡ ಸ್ಥಳೀಯರು ಕೂಡಲೇ ಉರಗ ತಜ್ಞರಿಗೆ ತಿಳಿಸಿದ್ದಾರೆ.

    ಅಂತೆಯೇ ಸ್ಥಳಕ್ಕೆ ದೌಡಾಯಿಸಿದ ಖ್ಯಾತ ಉರಗ ತಜ್ಞ ಆನಂದ ಚಿಟ್ಟಿ ಹಾವನ್ನು ಸಿಮೆಂಟ್ ಇಟ್ಟಿಗೆಯಿಂದ ಹೊರತೆಗೆದು ರಕ್ಷಿಸಿದ್ದಾರೆ. ಈ ವೇಳೆ ಹಾವಿನ ಮೂಗಿನಲ್ಲಿ ಅರ್ಧದಷ್ಟು ಹೊಕ್ಕಿದ್ದ ಹಾವಿನ ಮರಿಯನ್ನು ಹೊರತೆಗೆದಿದ್ದಾರೆ. ಆದ್ರೆ ಮರಿ ಹಾವು ಅದಾಗಲೇ ಮೃತಪಟ್ಟಿತ್ತು.

    ಈ ರೀತಿಯ ಘಟನೆಯನ್ನು ನೋಡಿದ್ದು ಇದೇ ಮೊದಲ ಬಾರಿಗೆ ಅಂತ ಉರಗ ತಜ್ಞ ಹೇಳಿದ್ದಾರೆ.