Tag: ನಾಗರ ಹಾವು

  • ನಾಗರ ಹಾವು ಓಡಿಸಲು ಹೊಗೆ ಹಾಕಿದ ಕುಟುಂಬ- ಇಡೀ ಮನೆ ಭಸ್ಮ

    ನಾಗರ ಹಾವು ಓಡಿಸಲು ಹೊಗೆ ಹಾಕಿದ ಕುಟುಂಬ- ಇಡೀ ಮನೆ ಭಸ್ಮ

    ಲಕ್ನೋ: ಮನೆಯೊಳಗೆ ಸೇರಿಕೊಂಡಿದ್ದ ನಾಗರಹಾವನ್ನು (Cobra) ಓಡಿಸುವ ಸಲುವಾಗಿ ಮನೆ ಮಂದಿ ಹೊಗೆ ಹಾಕಿದ್ದಾರೆ. ಆದರೆ ಈ ಹೊಗೆ ಇಡೀ ಮನೆಯನ್ನೇ ಭಸ್ಮವಾಗಿಸಿದ ಪ್ರಕರಣವೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಉತ್ತರಪ್ರದೇಶದ (Uttarpradesh) ಬಂದ ಎಂಬಲ್ಲಿ ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ. ಬೆಳಗ್ಗೆ ಕುಟುಂಬದ ಸದಸ್ಯರೊಬ್ಬರು ಮನೆಯೊಳಗೆ ಹಾವು ಸೇರಿಕೊಂಡಿದ್ದನ್ನು ಗಮನಿಸಿದ್ದಾರೆ. ಕೂಡಲೇ ಮನೆ ಮಂದಿಗೆ ಅವರು ತಿಳಿಸಿದ್ದು, ಎಲ್ಲರೂ ಸೇರಿ ಹಾವನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ.

    ಏನೇ ಮಾಡಿದರೂ ಹಾವು ಮನೆಯಿಂದ ಹೊರ ಹೋಗಲೇ ಇಲ್ಲ. ಹೀಗಾಗಿ ಹಸುವಿನ ಸೆಗಣಿ (ಭರಣಿ) ಮೂಲಕ ಹೊಗೆ ಹಾಕಿದ್ದಾರೆ. ಈ ಹೊಗೆಯಿಂದ ಬೆಂಕಿ ಮನೆಪೂರ್ತಿ ಹರಡಿಕೊಂಡಿದೆ. ಇಡೀ ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಹಲವಾರು ಕ್ವಿಂಟಾಲ್ ಇದ್ದ ಧಾನ್ಯಗಳು ಭಸ್ಮವಾದವು.

    ದೆಹಲಿಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ರಾಜ್‍ಕುಮಾರ್, ಪತ್ನಿ ಮತ್ತು ಐವರು ಮಕ್ಕಳೊಂದಿಗೆ ಮನೆಯಲ್ಲಿ ವಾಸವಾಗಿದ್ದರು. ಕುಟುಂಬದ ಜೀವಮಾನದ ಉಳಿತಾಯ, ಆಸ್ತಿ ಸೇರಿದಂತೆ ಲಕ್ಷಗಟ್ಟಲೆ ಹಣ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಕೇರಳದಲ್ಲಿ ಸ್ಫೋಟ ಪ್ರಕರಣ- ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

    ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಕಂದಾಯ ಇಲಾಖೆಗೂ ಮಾಹಿತಿ ನೀಡಲಾಗಿದ್ದು, ಸದ್ಯ ಹಾನಿಯ ಪ್ರಮಾಣವನ್ನು ಅಂದಾಜಿಸಲಾಗುತ್ತಿದೆ.

    ಹಾವನ್ನು ಓಡಿಸುವ ಸಲುವಾಗಿ ಮನೆಯೊಳಗೆ ಹೊಗೆ ಹಾಕಿರುವುದಾಗಿ ಕುಟುಂಬದವರು ತಿಳಿಸಿದ್ದು, ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಗರ ಹಾವು ಕಚ್ಚಿತೆಂದು ಪ್ರತಿಯಾಗಿ ಕಚ್ಚಿದ ಎಂಟರ ಬಾಲಕ – ಹಾವು ಸಾವು

    ನಾಗರ ಹಾವು ಕಚ್ಚಿತೆಂದು ಪ್ರತಿಯಾಗಿ ಕಚ್ಚಿದ ಎಂಟರ ಬಾಲಕ – ಹಾವು ಸಾವು

    ಚಂಡೀಗಢ: ಸಾಮಾನ್ಯವಾಗಿ ಹಾವು ಕಚ್ಚಿದರೆ ಮನುಷ್ಯ ಬದುಕುಳಿಯುವುದೇ ಕಷ್ಟ. ಆದರೆ, ಬಾಲಕನೋರ್ವ ತನಗೆ ಕಚ್ಚಿದ ಹಾವನ್ನೇ ಪ್ರತಿಯಾಗಿ ಕಚ್ಚಿ ಕೊಂದಿರುವ ವಿಚಿತ್ರ ಘಟನೆ ಛತ್ತೀಸ್‍ಗಢದಲ್ಲಿ (Chhattisgarh) ನಡೆದಿದೆ.

    ಹೌದು, ಛತ್ತೀಸ್‍ಗಢದ ಜಶ್‍ಪುರ (Jashpur) ಜಿಲ್ಲೆಯ ಎಂಟು ವರ್ಷದ ದೀಪಕ್ ಎಂಬ ಬಾಲಕ ಮನೆಯ ಹಿತ್ತಲಿನಲ್ಲಿ ಆಟವಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ನಾಗರ ಹಾವೊಂದು (Cobra) ಆತನ ಕೈಗೆ ಸುತ್ತಿಕೊಂಡು ಎರಡು ಬಾರಿ ಕಚ್ಚಿದೆ. ಈ ವೇಳೆ ಹಾವಿನಿಂದ ಬಿಡಿಸಿಕೊಳ್ಳಲಾಗದೇ, ಕೊನೆಗೆ ವಿಷಪೂರಿತ ಹಾವಿಗೆ ಬಾಲಕ ಕೂಡ ಎರಡು ಬಾರಿ ಕಚ್ಚಿ, ಅದನ್ನು ಕೊಂದಿದ್ದಾನೆ. ಇದನ್ನೂ ಓದಿ: ಅನೈತಿಕ ಸಂಬಂಧ ಹೊಂದಿದ್ದ ಮಗಳ ಹತ್ಯೆ- ವೀಡಿಯೋ ಮಾಡಿ ತಪ್ಪೊಪ್ಪಿಕೊಂಡ ತಂದೆ

    ಈ ಘಟನೆ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ದೀಪಕ್, ಹಾವು ನನ್ನ ಕೈಗೆ ಸುತ್ತಿಕೊಂಡು ಕಚ್ಚಿತು. ಇದರಿಂದ ನನಗೆ ಬಹಳ ನೋವಾಯಿತು. ಹಾವಿನಿಂದ ನನ್ನನ್ನು ಬಿಡಿಸಿಕೊಳ್ಳು ಸಾಕಷ್ಟು ಪ್ರಯತ್ನಿಸಿದೆ. ಆದರೆ ಅದು ಅಲುಗಾಡಲೇ ಇಲ್ಲ. ಕೊನೆಗೆ ಹಾವಿಗೆ ಎರಡು ಬಾರಿ ಕಚ್ಚಿದೆ. ಇದೆಲ್ಲವೂ ಕ್ಷಣಾರ್ಧದಲ್ಲಿ ಸಂಭವಿಸಿತು ಎಂದು ಬಾಲಕ ತಿಳಿಸಿದ್ದಾನೆ.

    ನಂತರ ಹಾವು ಕಚ್ಚಿದ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದಾಗ, ಬಾಲಕನ ಕುಟುಂಬಸ್ಥರು ಆತನನ್ನು ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ಬಾಲಕನಿಗೆ ಹಾವಿನ ವಿಷಕ್ಕೆ ಔಷಧಿ ನೀಡಲಾಯಿತು ಮತ್ತು ಒಂದು ದಿನದವರೆಗೆ ಆತನನ್ನು ಆಸ್ಪತ್ರೆಯಲ್ಲಿಯೇ ಇರಿಸಿಕೊಳ್ಳಲಾಯಿತು. ಇದನ್ನೂ ಓದಿ: ಮನೆ ಬಿಟ್ಟು ಹೋಗದ ಅತ್ತೆ ಮೇಲೆ ಸೊಸೆಯಿಂದ ಮಾರಣಾಂತಿಕ ಹಲ್ಲೆ – ವೃದ್ಧೆ ಸ್ಥಿತಿ ಚಿಂತಾಜನಕ

    ಹಾವು ಕಚ್ಚಿದ ಜಾಗದಲ್ಲಿ ದೀಪಕ್ ಹೆಚ್ಚು ನೋವು ಅನುಭವಿಸಿದ್ದಾರೆ. ಆದರೆ ಹಾವಿನ ವಿಷ ಸಂಪೂರ್ಣವಾಗಿ ಬಿಡುಗಡೆಯಾಗಿಲ್ಲ. ಸದ್ಯಕ್ಕೆ ಬಾಲಕನನ್ನು ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಲಾಗಿದ್ದು, ಇದೀಗ ದೀಪಕ್ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ ಜೆಮ್ಸ್ ಮಿಂಜ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 35 ಸಾವಿರಕ್ಕೂ ಹೆಚ್ಚು ಉರಗಗಳನ್ನು ರಕ್ಷಿಸಿದ್ದ ಸ್ನೇಕ್ ಲೋಕೇಶ್ ಇನ್ನಿಲ್ಲ

    35 ಸಾವಿರಕ್ಕೂ ಹೆಚ್ಚು ಉರಗಗಳನ್ನು ರಕ್ಷಿಸಿದ್ದ ಸ್ನೇಕ್ ಲೋಕೇಶ್ ಇನ್ನಿಲ್ಲ

    ಬೆಂಗಳೂರು/ನೆಲಮಂಗಲ: ನೆಲಮಂಗಲದ ಸ್ನೇಕ್ ಲೋಕೇಶ್ ಎಂದು ರಾಜ್ಯಾದ್ಯಂತ ಹೆಸರು ಮಾಡಿದ್ದ ಉರಗ ರಕ್ಷಕ, ಸ್ನೇಕ್ ಲೋಕೇಶ್ ಹಾವು ಕಡಿತದಿಂದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಸ್ನೇಕ್ ಲೋಕೇಶ್ ಕೊನೆಯುಸಿರೆಳೆದಿದ್ದಾರೆ. ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ ಕಳೆದ ಜುಲೈ 17ರಂದು ಸ್ನೇಕ್ ಲೋಕೇಶ್ ಬಲಗೈ ಬೆರಳಿಗೆ ವಿಷಪೂರಿತ ನಾಗರಹಾವು ಕಚ್ಚಿತ್ತು. ಇದನ್ನೂ ಓದಿ: ಪಬ್ಲಿಕ್ ಪ್ಲೇಸ್‍ನಲ್ಲಿ ಸ್ನಾನ ಮಾಡುವಂತೆ ಪತ್ನಿಗೆ ಕಿರುಕುಳ – ಪತಿ ವಿರುದ್ಧ ಕೇಸ್

    ಕೂಡಲೇ ಲೋಕೇಶ್ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆ ಕೊಡಿಸಿ ಬೆಂಗಳೂರಿನ ಮಣಿಪಾಲ್‍ಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ವಿಧಿಯಾಟ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೂ ಸ್ನೇಕ್ ಲೋಕೇಶ್ ಅವರು, 35 ಸಾವಿರಕ್ಕೂ ಹೆಚ್ಚು ವಿವಿಧ ಜಾತಿಯ ಉರಗಗಳು, ಪ್ರಾಣಿ, ಪಕ್ಷಿಗಳನ್ನು ರಕ್ಷಣೆ ಮಾಡಿದ್ದಾರೆ.

    ಸಂಗೀತದಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದ ಅವರು, ಕೆಲವು ಧಾರವಾಹಿ, ಕೆಲ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ನೆಲಮಂಗಲದಲ್ಲಿ ಪುಟ್ಟ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಆದರೆ ದುರದೃಷ್ಟವಶಾತ್ ಹಾವು ಕಡಿತದಿಂದ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನಪ್ಪಿದ್ದಾರೆ. ಇದನ್ನೂ ಓದಿ: ಮಡಿಕೇರಿಯಲ್ಲಿ ನಡೆದ ಮೊಟ್ಟೆ ಎಸೆತ ಪ್ರಕರಣ ನನಗೆ ಗೊತ್ತಿಲ್ಲ: ಅಪ್ಪಚ್ಚು ರಂಜನ್

    Live Tv
    [brid partner=56869869 player=32851 video=960834 autoplay=true]

  • ಕ್ಷಣಾರ್ಧದಲ್ಲಿ ಮಗನನ್ನು ಹಾವಿನಿಂದ ರಕ್ಷಿಸಿದ ತಾಯಿ – ವೀಡಿಯೋ ವೈರಲ್

    ಕ್ಷಣಾರ್ಧದಲ್ಲಿ ಮಗನನ್ನು ಹಾವಿನಿಂದ ರಕ್ಷಿಸಿದ ತಾಯಿ – ವೀಡಿಯೋ ವೈರಲ್

    ಮಂಡ್ಯ: ಮಹಿಳೆಯೊಬ್ಬರು ನಾಗರ ಹಾವಿನಿಂದ ಕ್ಷಣಾರ್ಧದಲ್ಲಿ ಮಗನನ್ನು ರಕ್ಷಿಸಿರುವ ಭಯಾನಕ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಮಂಡ್ಯ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮನೆಯ ಬಳಿ ಇದ್ದ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ವೀಡಿಯೋದಲ್ಲಿ ಬಾಲಕ ಶಾಲೆಗೆ ಹೊರಟ್ಟಿದ್ದ ವೇಳೆ ಮನೆಯ ಹೊರಗೆ ಮೆಟ್ಟಿಲ ಕೆಳಗೆ ನಾಗರಹಾವು ನುಸುಳಿತ್ತು. ಹಾವು ಇರುವುದನ್ನು ಕಾಣದೇ ಮೆಟ್ಟಿಲಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ ಹಾವು ಹಿಂದಕ್ಕೆ ಸರಿದಿದೆ. ಇದನ್ನು ಕಂಡ ಕೂಡಲೇ ಬಾಲಕನ ತಾಯಿ ಮೆಟ್ಟಿಲಿನಿಂದ ಇಳಿದು ಹೆಡೆ ಎತ್ತಿದ ನಾಗರಹಾವು ಬಾಲಕನನ್ನು ಕಚ್ಚಲು ಪ್ರಯತ್ನಿಸಿದಾಗ ಮಗನನ್ನು ದೂರಕ್ಕೆ ಎಳೆದೊಯ್ದು ಬಿಗಿದಪ್ಪಿಕೊಂಡು ರಕ್ಷಿಸಿದ್ದಾರೆ. ಇದನ್ನೂ ಓದಿ: ತ್ರಿವರ್ಣ ಧ್ವಜ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶಿಸಿ ಪೌರ ಕಾರ್ಮಿಕ ಸಾವು!

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ವೀಡಿಯೋ ಜೊತೆಗೆ ಕರ್ನಾಟಕದ ಮಂಡ್ಯದಲ್ಲಿ ತಾಯಿಯೊಬ್ಬಳು ತನ್ನ ಪುಟ್ಟ ಮಗನನ್ನು ದೊಡ್ಡ ನಾಗರ ಹಾವಿನಿಂದ ರಕ್ಷಿಸಿದ್ದಾರೆ ಎಂದು ಕ್ಯಾಪ್ಷನ್‍ನಲ್ಲಿ ಬರೆಯಲಾಗಿದೆ. ಒಟ್ಟಾರೆ ಪ್ರಾಣ ಒತ್ತೆ ಇಟ್ಟು ಮಗನನ್ನು ಹಾವಿನಿಂದ ಪಾರು ಮಾಡಿದ ತಾಯಿಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಾಲ್ನಡಿಗೆಯ ಟಿಪ್ಪು ಫ್ಲೆಕ್ಸ್ ಧ್ವಂಸ- ಪುನೀತ್ ಕೆರೆಹಳ್ಳಿ, ಬೆಂಬಲಿಗರಿಂದ ಕೃತ್ಯ

    Live Tv
    [brid partner=56869869 player=32851 video=960834 autoplay=true]

  • ಉರಗ ತಜ್ಞ ವಾವಾ ಸುರೇಶ್‍ಗೆ ಕಚ್ಚಿದ ನಾಗರಹಾವು – ಸ್ಥಿತಿ ಗಂಭೀರ

    ಉರಗ ತಜ್ಞ ವಾವಾ ಸುರೇಶ್‍ಗೆ ಕಚ್ಚಿದ ನಾಗರಹಾವು – ಸ್ಥಿತಿ ಗಂಭೀರ

    ತಿರುವನಂತಪುರಂ: ಕೇರಳದ ಹೆಸರಾಂತ ಉರಗ ತಜ್ಞ ವಾವಾ ಸುರೇಶ್ ಅವರಿಗೆ ಕೊಟ್ಟಾಯಂನಲ್ಲಿ ನಾಗರ ಹಾವು ಕಚ್ಚಿದ್ದು, ಇದೀಗ ತೀವ್ರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮೊದಲಿಗೆ ಸುರೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರನ್ನು ವೆಂಟಿಲೇಟರ್‍ನಲ್ಲಿ ಇರಿಸಿ, ಆಂಟಿ ವೆನಮ್ ನೀಡಲಾಯಿತು. ಬಳಿಕ ವಿಶೇಷ ಚಿಕಿತ್ಸೆಗಾಗಿ ಕೊಟ್ಟಾಯಂನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

    ಕೊಟ್ಟಾಯಂ ಬಳಿಯ ಕುರಿಚಿ ಗ್ರಾಮ ಪಂಚಾಯತ್‍ನ ನಿವಾಸಿಗಳು ದನದ ಕೊಟ್ಟಿಗೆಯ ಬಳಿ ಹಾಕಿದ್ದ ಕಲ್ಲಿನ ರಾಶಿಗಳ ನಡುವೆ ನಾಗರಹಾವನ್ನು ಕಂಡು ನಂತರ ಹಾವು ಹಿಡಿಯಲು ಸುರೇಶ್ ಅವರನ್ನು ಮನೆಗೆ ಕರೆದಿದ್ದಾರೆ. ಈ ವೇಳೆ ಸುರೇಶ್ ಹಾವು ಹಿಡಿಯಲು ನೋಡುವುದಕ್ಕೆ ಹಲವಾರು ಮಂದಿ ಸ್ಥಳಕ್ಕೆ ಆಗಮಿಸಿದ್ದರು. ಆದರೆ ವಿಷಕಾರಿ ಸರೀಸೃಪ ಒಂದು ಕೈಯಲ್ಲಿ ಬಾಲ ಹಿಡಿದುಕೊಂಡು ಗೋಣಿ ಚೀಲಕ್ಕೆ ಹಾಕಲು ಪ್ರಯತ್ನಿಸುತ್ತಿದ್ದ ವೇಳೆ ಸುರೇಶ್ ಅವರ ಬಲ ತೊಡೆಯ ಮೇಲೆ ಕಚ್ಚಿದೆ. ಇದನ್ನೂ ಓದಿ: Budget: 2022-23ರ ಹೊತ್ತಿಗೆ 5G ಮೊಬೈಲ್‌ ಸೇವೆ

    ತನಗೆ ಹಾವು ಕಚ್ಚಿ ತಪ್ಪಿಸಿಕೊಳ್ಳುತ್ತಿದ್ದರೂ, ನಾಗರ ಹಾವನ್ನು ಹಿಡಿದು ಸುರೇಶ್ ಅವರು ಪ್ಯಾಕ್ ಮಾಡಿದ್ದಾರೆ. ನಂತರ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದೀಗ ಸುರೇಶ್ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಎಲ್ಲೆಡೆ ಪ್ರಾರ್ಥಿಸಲಾಗುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸುರೇಶ್ ಶೀಘ್ರ ಗುಣಮುಖರಾಗಲಿ ಎಂದು ನೆಟ್ಟಿಗರು ಹಾರೈಸುತ್ತಿದ್ದಾರೆ.

    ಸುರೇಶ್ ಅವರು ಎರಡು ದಶಕಗಳ ಕಾಲದ ವೃತ್ತಿಜೀವನದಲ್ಲಿ 50,000ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದಾರೆ. ಇದರಲ್ಲಿ 200ಕ್ಕೂ ಹೆಚ್ಚು ಕಿಂಗ್ ಕೋಬ್ರಾಗಳನ್ನು ಹಿಡಿದಿದ್ದಾರೆ. ಅವರು ಸುಮಾರು 300 ಹಾವುಗಳ ಕಡಿತಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: Union Budget: ದುಡಿಯುವ ವರ್ಗದ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹುಸಿ ಮಾಡಿದೆ: ರಣದೀಪ್ ಸುರ್ಜೇವಾಲಾ ವ್ಯಂಗ್ಯ

  • ಟಾಯ್ಲೆಟ್ ಬಾಗಿಲು ತೆರೆದಾಗ ಮನೆಯೊಡತಿಗೆ ಶಾಕ್ – ಬುಸುಗುಟ್ಟಿದ ನಾಗಪ್ಪ

    ಟಾಯ್ಲೆಟ್ ಬಾಗಿಲು ತೆರೆದಾಗ ಮನೆಯೊಡತಿಗೆ ಶಾಕ್ – ಬುಸುಗುಟ್ಟಿದ ನಾಗಪ್ಪ

    ಶಿವಮೊಗ್ಗ: ಟಾಯ್ಲೆಟ್‍ನಲ್ಲಿ ನಾಗರ ಹಾವು ಪ್ರತ್ಯಕ್ಷವಾಗಿ, ಮನೆಯವರು ಭಯಭೀತರಾದ ಘಟನೆ ಶಿವಮೊಗ್ಗ ನಗರದ ಶಿವಪ್ಪನಾಯಕ ಬಡಾವಣೆಯಲ್ಲಿ ನಡೆದಿದೆ.

    ಶಿವಪ್ಪನಾಯಕ ಬಡಾವಣೆ ನಿವಾಸಿ ಶಬರಿ ಅವರು ಇಂದು ತಮ್ಮ ಮನೆಯ ಟಾಯ್ಲೆಟ್‍ಗೆ ಹೋದಾಗ, ಟಾಯ್ಲೆಟ್ ಪಿಟ್ ನಲ್ಲಿ ನಾಗರ ಹಾವು ಇರುವುದನ್ನು ಗಮನಿಸಿ ಗಾಬರಿಯಿಂದ ಹೊರಗೆ ಓಡಿ ಬಂದಿದ್ದಾರೆ. ತಕ್ಷಣ ಸ್ನೇಕ್ ಕಿರಣ್‍ಗೆ ಫೋನ್ ಮಾಡಿದ್ದು, ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್, ನಾಗರ ಹಾವನ್ನು ಸುರಕ್ಷಿತವಾಗಿ ಪಿಟ್‍ನಿಂದ ತೆಗೆದು ಹೊರಗೆ ತಂದಿದ್ದಾರೆ. ಇದನ್ನೂ ಓದಿ: ದೇವರ ಮುಂದೆ ಹಚ್ಚಿಟ್ಟಿದ್ದ ದೀಪದಿಂದ ಬೆಂಕಿ – ಮನೆಯಲ್ಲಿದ್ದ 3 ಲಕ್ಷ ನಗದು, ಚಿನ್ನಾಭರಣ ಭಸ್ಮ

    ಹಾವನ್ನು ಮನೆ ಹೊರಗೆ ತಂದ ಬಳಿಕ ಮನೆಯ ಒಡತಿ ನಾಗರ ಹಾವಿಗೆ ಆರತಿ ಬೆಳಗಿ, ಪೂಜೆ ಮಾಡಿದ್ದಾರೆ. ನಂತರ ಸ್ನೇಕ್ ಕಿರಣ್ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ನಾಗಪ್ಪ ಮನೆಯಿಂದ ಹೊರ ಹೋದ ಬಳಿಕ ಶಬರಿ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಕೊರೊನಾ ಸ್ಫೋಟ ಒಟ್ಟು 2,479 ಪ್ರಕರಣ – ಬೆಂಗ್ಳೂರಲ್ಲಿ 2,053 ಕೇಸ್

  • ನಾಗರಾಜನ ಹೊಟ್ಟೆ ಸೇರಿದ ದಡೂತಿ ಗಾತ್ರದ ಮಂಡಲ ಹಾವು

    ನಾಗರಾಜನ ಹೊಟ್ಟೆ ಸೇರಿದ ದಡೂತಿ ಗಾತ್ರದ ಮಂಡಲ ಹಾವು

    ಹಾಸನ: ನಾಗರ ಹಾವೊಂದು ದಡೂತಿ ಗಾತ್ರದ ವಿಷಕಾರಿ ಮಂಡಲ ಹಾವನ್ನು ಕೆಲವೇ ನಿಮಿಷಗಳ ಅಂತರದಲ್ಲಿ ಆಪೋಷಣೆ ಮಾಡಿದ ವಿಚಿತ್ರ ಘಟನೆ ಹಾಸನದ ಹೊರವಲಯದಲ್ಲಿ ನಡೆದಿದೆ.

    ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸಮುದ್ರವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೇವಲ 6 ನಿಮಿಷದಲ್ಲಿ ಮಂಡಲ ಹಾವನ್ನು ನುಂಗಿ ನಾಗರ ಹಾವು ಹೊಟ್ಟೆ ತುಂಬಿಸಿಕೊಂಡಿದೆ. ಹೌದು ಹರಿವ ನೀರಿನಲ್ಲಿದ್ದುಕೊಂಡು ಸರಾಗವಾಗಿ ಮಂಡಲ ಹಾವು ನುಂಗಿ ನಾಗರಾಜ ಮೈ ಮುರಿದಿದ್ದಾನೆ.

    ಮಂಡಲ ಹಾವು ಅತ್ಯಂತ ವಿಷಕಾರಿ ಸರೀಸೃಪ ಎನ್ನಲಾಗುತ್ತೆ. ಆದರೆ ಇಂತಹ ಹಾವನ್ನು ನಾಗರ ಹಾವು ತಲೆ ಭಾಗದಿಂದಲೇ ಸಲೀಸಾಗಿ ನುಂಗಿರುವುದು ವಿಚಿತ್ರ ಸಂಗತಿಯಾಗಿದೆ.

    ಈ ವಿಚಿತ್ರ ದೃಶ್ಯವನ್ನು ಕಂಡ ಜನತೆ ಅಚ್ಚರಿ ಪಟ್ಟಿದ್ದಾರೆ. ಅಲ್ಲದೆ ಈ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    https://www.youtube.com/watch?v=DWkZx1IelsY

  • ತುಮಕೂರು, ಚಾಮರಾಜನಗರದಲ್ಲಿ ಕೆರೆ ಹಾವನ್ನು ನುಂಗಿದ ನಾಗ!

    ತುಮಕೂರು, ಚಾಮರಾಜನಗರದಲ್ಲಿ ಕೆರೆ ಹಾವನ್ನು ನುಂಗಿದ ನಾಗ!

    ತುಮಕೂರು/ಚಾಮರಾಜನಗರ: ನಾಗರಹಾವೊಂದು ಕೆರೆ ಹಾವನ್ನು ನುಂಗಿದ ಘಟನೆ ತುಮಕೂರಿನ ರಂಗಾಪುರದಲ್ಲಿ ನಡೆದಿದೆ.

    ನಾಗರ ಹಾವೊಂದು ಕೆರೆ ಹಾವನ್ನು ಬೆನ್ನತ್ತಿದ್ದು, ಇದರಿಂದ ಬೆದರಿದ ಕೆರೆ ಹಾವು ಈರುಳ್ಳಿ ಅಂಗಡಿಗೆ ನುಗ್ಗಿದೆ. ಈ ವೇಳೆ ನಾಗರಹಾವು ಕೆರೆ ಹಾವನ್ನು ಸೆಣಸಿ ಅದನ್ನು ನುಂಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಉರಗ ರಕ್ಷಕ ದಿಲೀಪ್, ನಾಗರಹಾವನ್ನು ಹಿಡಿದು ನಾಮದ ಚಿಲುಮೆ ಅರಣ್ಯಕ್ಕೆ ಬಿಟ್ಟಿದ್ದಾರೆ. ಕೆರೆ ಹಾವು ಹಾಗೂ ನಾಗರ ಹಾವನ್ನು ನೋಡಿ ಸ್ಥಳೀಯರು ಗಾಬರಿಗೊಂಡಿದ್ದರು.

    ಇತ್ತ ಚಾಮರಾಜನಗರ ಸಮೀಪ ತಾಳವಾಡಿಯ ಕಲ್ಮಂಡಿಪುರದಲ್ಲೂ ಕೂಡ ನಾಗರಹಾವೊಂದು ಕೆರೆ ಹಾವನ್ನು ನುಂಗಿತ್ತು. ರಸ್ತೆ ಬದಿಯಲ್ಲಿ ಮಲಗಿದ್ದ ನಾಗರಹಾವು ಹಸಿವು ತಾಳಲಾರದೆ ಅಲ್ಲಿಯೇ ಇದ್ದ ಕೆರೆ ಹಾವನ್ನು ನುಂಗಿದೆ. ನಾಗರಹಾವು ಕೆರೆ ಹಾವನ್ನು ನುಂಗಲು ಸಾಕಷ್ಟು ಸಮಯ ತೆಗೆದು ಕೊಂಡಿದ್ದು ಈ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.

    ಹಾವುಗಳು ಕಪ್ಪೆ ಅಥವಾ ಇಲಿಯನ್ನು ನುಂಗುವುದು ಸಾಮಾನ್ಯ. ಆದರೆ ಇಲ್ಲಿ ಹಾವು-ಹಾವನ್ನೇ ನುಂಗಿರುವುದು ಆಶ್ಚರ್ಯ ಮೂಡಿಸಿದೆ.

    https://www.youtube.com/watch?v=O52eQlt43G0

  • ಬಾಗಿಲಲ್ಲಿದ್ದ ಅಥಿತಿ ಕಂಡು ದಂಗಾದ ಮನೆಮಂದಿ!

    ಬಾಗಿಲಲ್ಲಿದ್ದ ಅಥಿತಿ ಕಂಡು ದಂಗಾದ ಮನೆಮಂದಿ!

    ಮೈಸೂರು: ಮನೆಯ ಬಾಗಿಲ ಮೇಲೆ ನೇತಾಡುತ್ತಿದ್ದ ನಾಗರಹಾವೊಂದನ್ನು ಕಂಡು ಮನೆಯವರೆನ್ನೆಲ್ಲ ಗಾಬರಿಗೊಂಡ ಘಟನೆ ಮೈಸೂರಿನ ಶ್ರೀರಾಂಪುರದಲ್ಲಿ ನಡೆದಿದೆ.

    ಶ್ರೀರಾಂಪುರದ ನಿವಾಸಿ ನಾಗೇಂದ್ರ ಅವರ ಮನೆಯ ಬಾಗಿಲ ಮೇಲೆ ನಾಗರಹಾವು ಪ್ರತ್ಯಕ್ಷವಾಗಿತ್ತು. ಇದನ್ನು ಕಂಡು ಭಯಗೊಂಡ ಮನೆಯವರು ತಕ್ಷಣ ಮನೆಯಿಂದ ಹೊರ ಓಡಿಬಂದಿದ್ದಾರೆ. ಅಲ್ಲದೆ ಮನೆಯ ಬಾಗಿಲ ಮೇಲೆ ಆರಾಮಾಗಿ ಮಲಗಿದ್ದ ಹಾವಿನ ಬಗ್ಗೆ ಉರಗ ತಜ್ಞರಿಗೆ ಮಾಹಿತಿ ತಿಳಿಸಿದ್ದಾರೆ. ಇದನ್ನೂ ಓದಿ:ವಿಡಿಯೋ: ಮೊಟ್ಟೆಯಿಂದ ಹೊರಬರ್ತಿದ್ದಂತೆ ಹೆಡೆಯೆತ್ತುತ್ತಿವೆ 16 ನಾಗರ ಹಾವಿನ ಮರಿಗಳು!

    ತಕ್ಷಣ ಉರಗ ತಜ್ಞ ಕೆಂಪರಾಜು ಅವರು ಸ್ಥಳಕ್ಕೆ ಆಗಮಿಸಿ, ಸುಮಾರು ಎರಡೂವರೆ ಅಡಿ ಉದ್ದದ ನಾಗರಹಾವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

  • ವಿಡಿಯೋ: ಮೊಟ್ಟೆಯಿಂದ ಹೊರಬರ್ತಿದ್ದಂತೆ ಹೆಡೆಯೆತ್ತುತ್ತಿವೆ 16 ನಾಗರ ಹಾವಿನ ಮರಿಗಳು!

    ವಿಡಿಯೋ: ಮೊಟ್ಟೆಯಿಂದ ಹೊರಬರ್ತಿದ್ದಂತೆ ಹೆಡೆಯೆತ್ತುತ್ತಿವೆ 16 ನಾಗರ ಹಾವಿನ ಮರಿಗಳು!

    ಬೆಂಗಳೂರು: ನಾಗರಹಾವಿನ ಮೊಟ್ಟೆಗಳಿಂದ ಬರೋಬ್ಬರಿ 16 ಮರಿಗಳು ಹೊರಬಂದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ನಡೆದಿದೆ.

    ನೆಲಮಂಗಲದ ಸ್ನೇಕ್ ಲೋಕೇಶ್ ಕಳೆದ ಮೂರು ತಿಂಗಳ ಹಿಂದೆ ಹೆಸರಘಟ್ಟ ಗ್ರಾಮದಲ್ಲಿ ಮೊಟ್ಟೆಗಳನ್ನ ಸಂಗ್ರಹಿಸಿದ್ದರು. ಮೂರು ತಿಂಗಳ ಬಳಿಕ ಮೊಟ್ಟೆಯಿಂದ ಹಾವಿನ ಮರಿಗಳು ಹೊರಬಂದಿವೆ. ಹುಟ್ಟುತ್ತಲೇ ಹೆಡೆಯೆತ್ತಿ ನಾಗರಹಾವಿನ ಮರಿಗಳು ಬುಸುಗುಡುತ್ತಿವೆ. ಮೊಟ್ಟೆಯಿಂದ ಹಾವು ಮರಿಗಳು ಹೊರ ಬರುವ ಅಪರೂಪದ ದೃಶ್ಯವನ್ನು ಲೋಕೇಶ್ ಕುಟುಂಬಸ್ಥರು ಸೆರೆಹಿಡಿದ್ದಾರೆ.

    ಮಾರ್ಚ್ ತಿಂಗಳು ಸಾಮಾನ್ಯವಾಗಿ ನಾಗರಹಾವು ಮೊಟ್ಟೆಯಿಡುವ ಸಮಯವಾಗಿದೆ. ಹೆಸರಘಟ್ಟದಲ್ಲಿ ನಾರಾಯಣ ಎಂಬವರ ಮನೆಯಲ್ಲಿ ನಾಗರಹಾವು ಮೊಟ್ಟೆ ಇಟ್ಟು ಹೋಗಿತ್ತು. ಇದನ್ನು ಗಮನಿಸಿದ ಮನೆ ಮಾಲೀಕ ನನಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದರು. ನಾನು ಹೋಗಿ ನಾಗರಹಾವಿನ ಮೊಟ್ಟೆಗಳನ್ನು ತಂದು ನಮ್ಮ ಮನೆಯಲ್ಲಿ ಪೋಷಣೆ ಮಾಡುತ್ತಿದ್ದು, ಇಂದು 16 ನಾಗರಹಾವಿನ ಮರಿಮಗಳು ಮೊಟ್ಟೆಯಿಂದ ಹೊರ ಬಂದಿವೆ. ಸದ್ಯಕ್ಕೆ 16 ಹಾವಿನ ಮರಿಗಳು ಆರೋಗ್ಯವಾಗಿವೆ ಎಂದು ಲೋಕೇಶ್ ತಿಳಿಸಿದ್ದಾರೆ.

    ನಮ್ಮ ತಂದೆ ತುಂಬ ವರ್ಷದಿಂದ ನಾಗರಹಾವನ್ನು ರಕ್ಷಣೆ ಮಾಡುತ್ತಿದ್ದಾರೆ. ಅನೇಕ ಕಡೆಯಿಂದ ಹಾವಿನ ಮರಿಗಳನ್ನು ತರುತ್ತಿರುತ್ತಾರೆ. ಇಂದು ನಮ್ಮ ಮನೆಯಲ್ಲಿ 16 ನಾಗರಹಾವಿನ ಮರಿಗಳಾಗಿವೆ. ಇದರಿಂದ ಎಲ್ಲರಿಗೂ ಸಂತೋಷವಾಗಿದೆ ಎಂದು ಲೋಕೇಶ್ ಅವರ ಮಗ ಹೇಳಿದ್ದಾರೆ.