Tag: ನಾಗರ್ಜುನ್ ಅಕ್ಕಿನೇನಿ

  • ಈಗ ಸಮಂತಾಗಾಗಿ ಕಾಯುತ್ತಿದ್ದಾರೆ ನಾಗಚೈತನ್ಯ ಕುಟುಂಬ!

    ಈಗ ಸಮಂತಾಗಾಗಿ ಕಾಯುತ್ತಿದ್ದಾರೆ ನಾಗಚೈತನ್ಯ ಕುಟುಂಬ!

    ಹೈದರಾಬಾದ್: ಟಾಲಿವುಡ್ ನ ಕ್ಯೂಟ್ ಕಪಲ್ ಆದ ನಾಗಚೈತನ್ಯ ಹಾಗೂ ಸಮಂತಾ ರೂತ್ ಪ್ರಭು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯದಂತೆ ಗೋವಾದಲ್ಲಿ ಮದುವೆಯಾಗಲಿದ್ದಾರೆ.

    ನಾಗರ್ಜುನ್ ಅಕ್ಕಿನೇನಿ ತಮ್ಮ ಮಗ ನಾಗಚೈತನ್ಯ ಜೊತೆಗೆ ಇರುವ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ನಾಗಚೈತನ್ಯ ಹಾಗೂ ಅವರ ಕುಟುಂಬದ ಫೋಟೋವೊಂದನ್ನು ಹಾಕಿ ‘ಸಮಂತಾಗಾಗಿ ಕಾಯುತ್ತಿದ್ದೇವೆ’ ಎಂದು ಟ್ವೀಟ್ ಮಾಡಿದ್ದಾರೆ.

    ನಾಗಚೈತನ್ಯ ಹಾಗೂ ಸಮಂತಾ ‘ಎ ಮಾಯಾ ಚೇಸಾವೆ’ ನತ್ತು ‘ತ್ರಾಯಾಮ್’ ಚಿತ್ರದಲ್ಲಿ ನಟಿಸಿದ್ದಾರೆ. ವರದಿಯೊಂದರ ಪ್ರಕಾರ ಕ್ರೈಸ್ತ ಸಮುದಾಯದಂತೆ ಅಕ್ಟೋಬರ್ 8 ರಂದು ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.