Tag: ನಾಗರಿಕರು

  • ಜಮ್ಮು ಕಾಶ್ಮೀರದಲ್ಲಿ ಶಂಕಿತ ಉಗ್ರರ ದಾಳಿ- ಮೂವರು ನಾಗರಿಕರು ಸಾವು

    ಜಮ್ಮು ಕಾಶ್ಮೀರದಲ್ಲಿ ಶಂಕಿತ ಉಗ್ರರ ದಾಳಿ- ಮೂವರು ನಾಗರಿಕರು ಸಾವು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಗ್ರಾಮವೊಂದಕ್ಕೆ ನುಗ್ಗಿದ ಶಂಕಿತ ಉಗ್ರರು ದಾಳಿ ನಡೆಸಿದ ಪರಿಣಾಮ ಮೂವರು ನಾಗರಿಕರು (Civilians) ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದಾರೆ.

    ಇಂದು ಸಂಜೆ ಡ್ಯಾಂಗ್ರಿ ಗ್ರಾಮದಲ್ಲಿ ಶಂಕಿತ ಉಗ್ರರು (Suspected Terror) ಗ್ರಾಮಸ್ಥರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ 3 ಮನೆಗಳ ಮೇಲೆ ದಾಳಿ ನಡೆದಿದೆ. ಪರಿಣಾಮ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

    ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಸ್ಥಳೀಯ ವರದಿ ಪ್ರಕಾರ ಗಾಯಗೊಂಡ 8 ಜನರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಭೀಕರ ಅಪಘಾತ- ಡಿಕ್ಕಿ ಹೊಡೆದು 12 ಕಿ.ಮೀ ಎಳೆದೊಯ್ದ ಕಾರು, ಯುವತಿ ದುರ್ಮರಣ

    ಕಳೆದ ಎರಡು ವಾರಗಳಲ್ಲಿ ಜಿಲ್ಲೆಯಲ್ಲಿ ನಾಗರಿಕರ ಹತ್ಯೆಯ ಎರಡನೇ ಘಟನೆ ಇದಾಗಿದೆ. ಡಿ. 16ರಂದು ರಾಜೌರಿಯ ಸೇನಾ ಶಿಬಿರದ ಹೊರಗೆ ಇಬ್ಬರು ನಾಗರಿಕರು ಕೊಲ್ಲಲ್ಪಟ್ಟರು. ಇದನ್ನೂ ಓದಿ: ಮಹದಾಯಿ ಯೋಜನೆಗೆ ಡಿಪಿಆರ್‌ ಆಗಿದೆ; ಕಾಂಗ್ರೆಸ್‌ ಟೀಕೆಗೆ ತಲೆಕೆಡಿಸಿಕೊಳ್ಳಲ್ಲ – ಸಿಎಂ

    Live Tv
    [brid partner=56869869 player=32851 video=960834 autoplay=true]

  • ರಷ್ಯಾ ಯುದ್ಧ: 2 ಸಾವಿರ ಉಕ್ರೇನ್‌ ನಾಗರಿಕರು ಸಾವು

    ರಷ್ಯಾ ಯುದ್ಧ: 2 ಸಾವಿರ ಉಕ್ರೇನ್‌ ನಾಗರಿಕರು ಸಾವು

    ಕೀವ್: ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣ ಮುಂದುವರಿದಿದ್ದು, ದಾಳಿಗೆ ಉಕ್ರೇನ್‌ನಲ್ಲಿ ಇದುವರೆಗೆ 2 ಸಾವಿರ ನಾಗರಿಕರು ಬಲಿಯಾಗಿದ್ದಾರೆ.

    ರಷ್ಯಾ ಯುದ್ಧದಿಂದಾಗಿ ಉಕ್ರೇನ್‌ನಲ್ಲಿ ನೂರಾರು ಸಂಖ್ಯೆಯಲ್ಲಿ ಸಾರಿಗೆ ವ್ಯವಸ್ಥೆ, ಆಸ್ಪತ್ರೆಗಳು, ಮನೆಗಳು, ಕಿಂಡರ್‌ಗಾರ್ಡನ್ಸ್‌ ನಾಶವಾಗಿವೆ ಎಂದು ಉಕ್ರೇನ್‌ನ ತುರ್ತು ಸೇವಾ ವಿಭಾಗ ತಿಳಿಸಿದೆ. ಇದನ್ನೂ ಓದಿ: ಈ ಕೂಡಲೇ ಖಾರ್ಕಿವ್ ತೊರೆಯಿರಿ: ಭಾರತೀಯರಿಗೆ ರಾಯಭಾರ ಕಚೇರಿಯಿಂದ ತುರ್ತು ಸಂದೇಶ

    ಪ್ರತಿ ಗಂಟೆಗೆ ಮಕ್ಕಳು, ಮಹಿಳೆಯರು, ರಕ್ಷಣಾ ಪಡೆ ಸಿಬ್ಬಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ರಷ್ಯಾ ದಾಳಿಗೆ ಪ್ರತಿ ದಾಳಿ ನಡೆಸುತ್ತಿದ್ದು, ಇದುವರೆಗೆ ರಷ್ಯಾದ 6 ಸಾವಿರ ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ತಿಳಿಸಿದ್ದಾರೆ.

    ರಷ್ಯಾದ ನಿರಂತರ ಶೆಲ್‌, ಕ್ಷಿಪಣಿ ದಾಳಿಗಳಿಂದಾಗಿ ಉಕ್ರೇನ್‌ನ ಬೃಹತ್‌ ಕಟ್ಟಡಗಳು ಧರೆಗುರುಳಿವೆ. ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾಗಿದೆ. ಯುದ್ಧಪೀಡತ ಪ್ರದೇಶಗಳಲ್ಲಿ ಅಭದ್ರತೆ ಭೀತಿ ಹೆಚ್ಚಾಗಿದ್ದು, ಉಕ್ರೇನಿಯನ್‌ ಜನತೆಗೆ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನೂ ಓದಿ: ರಷ್ಯಾ- ಉಕ್ರೇನ್‌ ಯುದ್ಧ: ಕಚ್ಚಾ ತೈಲ ಬೆಲೆ ಭಾರೀ ಏರಿಕೆ

    ರಷ್ಯಾ ಸೇನಾ ಪಡೆ ಹಂತ ಹಂತವಾಗಿ ಉಕ್ರೇನ್‌ ರಾಜಧಾನಿ ಕೀವ್‌ ಅನ್ನು ಆಕ್ರಮಿಸುತ್ತಿದ್ದು, ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಳ್ಳಲು ದಾಳಿಗಳನ್ನು ತೀವ್ರಗೊಳಿಸಿದೆ. ಇದನ್ನರಿತ ಭಾರತದ ರಾಯಭಾರಿ ಕಚೇರಿಯು ಕೀವ್‌ನಲ್ಲಿರುವ ಭಾರತೀಯ ಪ್ರಜೆಗಳು ಕೂಡಲೇ ಗಡಿ ಪ್ರದೇಶಗಳಿಗೆ ತೆರಳುವಂತೆ ಸೂಚಿಸಿತ್ತು. ಅಲ್ಲದೇ ಖಾರ್ಕಿವ್‌ ನಗರದಲ್ಲಿ ಭಾರೀ ಪ್ರಮಾಣದಲ್ಲಿ ರಷ್ಯಾ ಸೇನಾ ಪಡೆ ದಾಳಿ ನಡೆಸುತ್ತಿದ್ದು, ಇಲ್ಲಿ ಸಿಲುಕಿರುವವರೂ ಸುರಕ್ಷಿತ ಸ್ಥಳಗಳಿಗೆ ಬರುವಂತೆ ಸೂಚಿಸಲಾಗಿದೆ.

  • ಕೊರೊನಾ ಸಂಕಷ್ಟ- ಆದಷ್ಟು ಬೇಗ ಭಾರತ ತೊರೆಯಿರಿ, ತನ್ನ ಪ್ರಜೆಗಳಿಗೆ ಅಮೆರಿಕ ಸೂಚನೆ

    ಕೊರೊನಾ ಸಂಕಷ್ಟ- ಆದಷ್ಟು ಬೇಗ ಭಾರತ ತೊರೆಯಿರಿ, ತನ್ನ ಪ್ರಜೆಗಳಿಗೆ ಅಮೆರಿಕ ಸೂಚನೆ

    ನವದೆಹಲಿ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಯಾವುದೇ ಕಾರಣಕ್ಕೂ ಭಾರತಕ್ಕೆ ಪ್ರಯಾಣ ಬೆಳೆಸಬೇಡಿ, ಅಲ್ಲದೆ ಭಾರತದಲ್ಲಿರುವ ಅಮೆರಿಕ ಪ್ರಜೆಗಳು ಆದಷ್ಟು ಬೇಗ ತೊರೆಯಿರಿ ಎಂದು ತನ್ನ ಪ್ರಜೆಗಳಿಗೆ ಅಮೆರಿಕ ಸಲಹೆ ನೀಡಿದೆ.

    ಅಮೆರಿಕ ಭಾರತವನ್ನು ಲೆವೆಲ್ 4 ಟ್ರಾಲೆವ್ ಅಡ್ವೈಸರಿಯಲ್ಲಿರಿಸಿದ್ದು, ಭಾರತದಲ್ಲಿ ವೈದ್ಯಕೀಯ ಆರೈಕೆ ತುಂಬಾ ಸೀಮಿತವಾಗಿದೆ, ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ ಭಾರತಕ್ಕೆ ಪ್ರಯಾಣ ಬೆಳೆಸಬೇಡಿ, ಭಾರತದಲ್ಲಿನ ಅಮೆರಿಕನ್ನರು ಸಹ ತಾಯ್ನಾಡಿಗೆ ಮರಳಿ ಎಂದು ಅಮೆರಿಕ ತಿಳಿಸಿದೆ.

    ಭಾರತದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚುತ್ತಿರುವ ಕಾರಣ ವೈದ್ಯಕೀಯ ಆರೈಕೆ ತುಂಬಾ ಸೀಮಿತವಾಗಿದೆ. ಹೀಗಾಗಿ ಅಮೆರಿಕ ಪ್ರಜೆಗಳು ಆದಷ್ಟು ಬೇಗ ಮರಳಲು ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಳ್ಳಿ. ದಿನ ನಿತ್ಯ ಅಮೆರಿಕಕ್ಕೆ ವಿಮಾನಗಳಿದ್ದು, ಪ್ಯಾರಿಸ್ ಹಾಗೂ ಫ್ರಾಂಕ್‍ಫರ್ಟ್ ಮಾರ್ಗವಾಗಿ ಸಂಚರಿಸಲಿವೆ ಎಂದು ಟ್ರಾವೆಲ್ ಸ್ಟೇಟ್ ಡಿಪಾರ್ಟ್‍ಮೆಂಟ್ ತನ್ನ ಟ್ವಿಟ್ಟರ್ ನಲ್ಲಿ ತಿಳಿಸಿದೆ.

    ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ ಸಹ ಈ ಕುರಿತು ಟ್ವೀಟ್ ಮಾಡಿದ್ದು, ಅಮೆರಿಕ ನಾಗರಿಕರು ಸ್ಟೆಪ್(ಸ್ಮಾರ್ಟ್ ಟ್ರಾವೆಲರ್ ಎನ್ರೋಲ್‍ಮೆಂಟ್ ಪ್ರೊಗ್ರಾಮ್) ನಲ್ಲಿ ನೋಂದಾಯಿಸಿಕೊಳ್ಳಬಹುದು. step.state.gov ವೆಬ್‍ಸೈಟ್‍ನಲ್ಲಿ ಭಾರತದಲ್ಲಿ ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ರಾಯಭಾರ ಕಚೇರಿಯಿಂದ ಮಾಹಿತಿ ಪಡೆಯವಹುದು ಎಂದು ತಿಳಿಸಿದೆ.

    ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಮತ್ತು ಮೃತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಯಲ್ಲಿ 3,645 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 2 ಲಕ್ಷದ ಗಡಿ ದಾಟಿದೆ. ಮರಣ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಕೊರೊನಾ ಎರಡನೇ ಅಲೆಯ ಆತಂಕ ಜನರಲ್ಲಿ ಹೆಚ್ಚಾಗಿದೆ. ಕಳೆದ 24 ಗಂಟೆಯಲ್ಲಿ 3,79,257 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 1,83,76,524ಕ್ಕೆ ಏರಿಕೆಯಾಗಿದೆ.

  • ಹಿಮದಲ್ಲಿ ಸಿಲುಕಿದ್ದ 10 ಜನರನ್ನು ರಕ್ಷಿಸಿದ ವೀರ ಯೋಧರು

    ಹಿಮದಲ್ಲಿ ಸಿಲುಕಿದ್ದ 10 ಜನರನ್ನು ರಕ್ಷಿಸಿದ ವೀರ ಯೋಧರು

    – ಹಿಮಪಾತದಲ್ಲಿ 5 ಗಂಟೆ ನಡೆದ ಸೈನಿಕರು

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾಗುತ್ತಿದ್ದು, ಅಲ್ಲಿನ ಜನ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹಲವು ಜನ ಹಿಮದಡಿಯೇ ಸಿಲುಕುತ್ತಿದ್ದಾರೆ. ಇದೇ ರೀತಿ ಹಿಮದಲ್ಲಿ ಸಿಲುಕಿದ್ದ 10 ಜನರನ್ನು ನಮ್ಮ ವೀರ ಯೋಧರು ರಕ್ಷಿಸಿದ್ದಾರೆ.

    ಭಾರೀ ಪ್ರಮಾಣದಲ್ಲಿ ಹಿಮಪಾತವಾಗುತ್ತಿರುವುದರಿಂದ ಜಮ್ಮು ಕಾಶ್ಮೀರದ ಹಲವು ಭಾಗಗಳಲ್ಲಿ ರಸ್ತೆಗಳು ಬಂದ್ ಆಗಿವೆ. ಹೀಗಾಗಿ ಸಿಂಥಾನ್ ಪಾಸ್ ಬಳಿ ಚಿಂಗಮ್ ಮಾರ್ಗದ ಎನ್‍ಎಚ್-244 ನಲ್ಲಿ ಸಿಲುಕಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಸೈನಿಕರು ಹಾಗೂ ಜಮ್ಮು ಕಾಶ್ಮೀರ ಪೊಲೀಸರು ತಂಡ ಅವರನ್ನು ರಕ್ಷಿಸಿದೆ.

    ತೀವ್ರ ದುಸ್ತರ ದಾರಿಯಲ್ಲಿ ಸಾಗಿ 10 ಜನರನ್ನು ಯೋಧರು ರಕ್ಷಿಸಿದ್ದು, ರಾತ್ರಿ ಇಡೀ ಬರೋಬ್ಬರಿ 5 ಗಂಟೆಗಳ ಕಾಲ ನಡೆದುಕೊಂಡು ಹೋಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮಂಜು ಆವರಿಸಿದೆ, ಕತ್ತಲಾಗಿದೆ, ದಾರಿ ಸಹ ತಿಳಿಯುತ್ತಿಲ್ಲ. ಇಂತಹ ದುಸ್ತರ ಸ್ಥಿತಿಯಲ್ಲಿ ಸೈನಿಕರು ಕಾರ್ಯಾಚರಣೆ ನಡೆಸಿ 10 ಜನರನ್ನು ರಕ್ಷಿಸಿದ್ದಾರೆ.

    ರಕ್ಷಿಸಿದ 10 ಜನ ನಾಗರಿಕರನ್ನು ಸಿಂಥಾನ್ ಮೈದಾನಕ್ಕೆ ಕರೆ ತರಲಾಗಿದ್ದು, ಅವರಿಗೆ ಆಹಾರ ಹಾಗೂ ವಸತಿ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಜಮ್ಮು ಕಾಶ್ಮೀರದ ಬಹುತೇಕ ಭಾಗಗಳಲ್ಲಿ ತಾಪಮಾನ ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ಕಳೆದ 24 ಗಂಟೆಗಳಲ್ಲಿ ಭಾರೀ ಪ್ರಮಾಣದ ಮಳೆ ಹಾಗೂ ಹಿಮಪಾತವಾಗುತ್ತಿದೆ.

    ಗುಲ್ಮಾರ್ಗ್ ಹಾಗೂ ಪಹಲ್ಗಮ್ ನಂತರ ಗಿರಿಧಾಮಗಳು ಸೇರಿದಂತೆ ಕಾಶ್ಮೀರ ಕಣಿವೆಯ ಮೇಲ್ಭಾಗದಲ್ಲಿ ಹೆಚ್ಚು ಹಿಮಪಾತವಾಗುತ್ತಿದೆ. ಬಹುತೇಕ ಬಯಲು ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ವಿಪರೀತ ಮಳೆಯಾಗಿದೆ. ಅಧಿಕೃತ ಮೂಲಗಳ ಪ್ರಕಾರ ಶ್ರೀನಗರದಲ್ಲಿ ಕಳೆದ ಸೋಮವಾರ 3.7 ಮಿ.ಮೀ. ಮಳೆಯಾಗಿದೆ. ಮಾತ್ರವಲ್ಲದೆ ರಾತ್ರಿ ವೇಳೆ 2.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

    ಖಾಜಿಗುಂಡ್‍ನ ಕಾಶ್ಮೀರದ ಗೇಟ್‍ವೇ ಬಳಿ 16.2 ಮಿ.ಮೀ. ಪಹಲ್ಗಮ್ 15.0 ಮಿ.ಮೀ. ಮಳೆ ಸುರಿದರೆ, 10 ಮಿ.ಮೀ.ಹಿಮಪಾತವಾಗಿದೆ. ಗುಲ್ಮಾರ್ಗ್ ಬಳಿ ಮಳೆ 30.6 ಮಿ.ಮೀ ಮಳೆ ಹಾಗೂ ಹಿಮಪಾತವಾಗಿದೆ. ಮುಂದಿನ 24 ಗಂಟೆಗಳ ನಂತರ ಶುಷ್ಕ ಹವಾಮಾನ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  • ಇಟಲಿ, ಡೆನ್ಮಾರ್ಕ್ ಬಳಿಕ ಕುವೈತ್ ಸಂಪೂರ್ಣ ಬಂದ್

    ಇಟಲಿ, ಡೆನ್ಮಾರ್ಕ್ ಬಳಿಕ ಕುವೈತ್ ಸಂಪೂರ್ಣ ಬಂದ್

    – ಖಾಲಿ ಹೊಡೆಯುತ್ತಿದೆ ರಸ್ತೆ, ಬೀಚ್ ಮಾಲ್
    – ಮನೆಯಿಂದ ಯಾರೂ ಹೊರಬಾರದಂತೆ ಆದೇಶ
    – 60 ದಿನಕ್ಕೆ ಸಮಸ್ಯೆ ಇಲ್ಲ ಎಂದ ಸರ್ಕಾರ

    ಮಂಗಳೂರು: ಕೊರೊನಾ ಎಫೆಕ್ಟ್‍ಗೆ ಕುವೈತ್‍ನಲ್ಲಿರುವ ಕರಾವಳಿಗರು ಅತಂತ್ರವಾಗಿದ್ದು, ಸರ್ಕಾರದಿಂದಲೇ ಕೆಲ ಘಟಕಗಳ ಮೂಲಕ ಆಹಾರ ಒದಗಿಸುವುದನ್ನು ಹೊರತು ಪಡಿಸಿದರೆ ಯಾರೂ ಹೊರಗೆ ಬರುವಂತಿಲ್ಲ ಎಂಬ ಆದೇಶ ನೀಡಲಾಗಿದೆ. ಹೀಗಾಗಿ ಕುವೈತ್ ಸಂಪೂರ್ಣ ಸ್ತಬ್ಧವಾಗಿದೆ.

    ರಾಜ್ಯದ ಕರಾವಳಿ ಭಾಗದ 30 ಸಾವಿರಕ್ಕೂ ಅಧಿಕ ಮಂದಿ ಕುವೈತ್‍ನಲ್ಲಿದ್ದು ಆತಂಕದಲ್ಲಿದ್ದಾರೆ. ಕುವೈತ್ ನ ರಸ್ತೆ, ಬೀಚ್, ಮಾಲ್ ಗಳು ಮತ್ತು ಏರ್ ಪೋರ್ಟ್ ಗಳು ಜನರಿಲ್ಲದೆ ಖಾಲಿ ಹೊಡೆಯುತ್ತಿದ್ದು, ಇಂದಿನಿಂದ ಬಸ್ ಸಂಚಾರವನ್ನು ಸಹ ಬಂದ್ ಮಾಡಲಾಗಿದೆ. ಈಗಾಗಲೇ ಅಂತಾರಾಷ್ಟ್ರೀಯ ವಿಮಾನಗಳನ್ನು ಸರ್ಕಾರ ಬಂದ್ ಮಾಡಿದೆ.

    ನಾಗರಿಕರು ಮನೆಯಲ್ಲೇ ಇರುವಂತೆ ಕುವೈತ್ ಸರ್ಕಾರ ಆದೇಶ ನೀಡಿದೆ. ಅಗತ್ಯ ಸೇವೆ ನೀಡುವ ಇಲಾಖೆಯನ್ನು ಹೊರತು ಪಡಿಸಿ ಸರ್ಕಾರದ ಎಲ್ಲ ಇಲಾಖೆ, ಬ್ಯಾಂಕ್, ಶಾಲಾ, ಕಾಲೇಜುಗಳನ್ನು ಬಂದ್ ಮಾಡಲಾಗಿದೆ.

    ಈ ಕುರಿತು ಕನ್ನಡಿಗ ಮೋಹನ್ ದಾಸ್ ಅವರು ವಿಡಿಯೋ ಮೂಲಕ ಅಲ್ಲಿನ ಚಿತ್ರಣವನ್ನು ವಿವರಿಸಿದ್ದಾರೆ. ವೈಯಕ್ತಿಕ ಕೆಲಸಕ್ಕಾಗಿ ಫೆಬ್ರವರಿ 24ಕ್ಕೆ ಮಂಗಳೂರಿಗೆ ಹೋಗಿದ್ದೆ, ಮಾ.1ಕ್ಕೆ ಮತ್ತೆ ಕುವೈತ್‍ಗೆ ಮರಳಿದೆ. ಇಲ್ಲಿಗೆ ಬಂದ ಮೇಲೆ ಫೆಬ್ರವರಿ 27ರ ನಂತರ ಕುವೈತ್‍ಗೆ ಬಂದವರು ಮೆಡಿಕಲ್ ಚೆಕಪ್ ಮಾಡಿಸಿಕೊಳ್ಳಬೇಕು ಎಂದು ಹೇಳಿದರು. ಅದರ ಪ್ರಕಾರ ನಾನು ಮೆಡಿಕಲ್ ಚೆಕಪ್‍ಗೆ ಒಳಗಾದೆ. ಈ ವೇಳೆ ಕೊರೊನಾ ವೈರಸ್ ಇರುವ ಕುರಿತು ನೆಗಟಿವ್ ರಿಪೋರ್ಟ್ ಬಂದರೂ 14 ದಿನಗಳ ಕಾಲ ಮನೆಯಲ್ಲೇ ಇರಬೇಕು ಹೊರಗಡೆ ಬರಬಾರದು ಎಂಬ ನಿಯಮವನ್ನು ರೂಪಿಸಲಾಗಿದೆ. ಅದರ ಪ್ರಕಾರ ನಾವು ಮನೆಯಲ್ಲೇ ಇದ್ದೇವೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.

    ಮಾರ್ಚ್ 11ರಂದು ಮತ್ತೆ ಹೊಸ ಕಾನೂನು ತಂದರು, ಎಲ್ಲ ಶಾಲೆಗಳು, ಬ್ಯಾಂಕ್, ಸರ್ಕಾರಿ ಕಚೇರಿಗಳು, ಬಸ್ ಸೇರಿದಂತೆ ಎಲ್ಲ ಸೌಲಭ್ಯವನ್ನು ಬಂದ್ ಮಾಡಿದ್ದಾರೆ. ಕೇವಲ ಎಟಿಎಂಗಳು ಮಾತ್ರ ತೆರೆದಿವೆ. ಇದರಿಂದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಜನರ ಓಡಾಟ ಕಡಿಮೆಯಾಗಿದ್ದರಿಂದ ರೋಗದ ಭೀತಿ ಇರುವುದಿಲ್ಲ. ಜನ ಹೆಚ್ಚು ಪ್ಯಾನಿಕ್ ಆಗಿದ್ದರು, ಈಗ ಎಲ್ಲವೂ ನಾರ್ಮಲ್ ಆಗಿದೆ. ಕೆಲವು ಪ್ರವಾಸಿ ತಾಣಗಳ ಭೇಟಿಯನ್ನು ಸಹ ಪೊಲೀಸರು ನಿರ್ಬಂಧಿಸಿದ್ದಾರೆ. 14 ದಿನದ ಬಳಿಕ ಮತ್ತೆ ಆಸ್ಪತ್ರೆಗೆ ಮತ್ತು ತಪಾಸಣೆಗೆ ಒಳಾಗಗಬೇಕು ಎಂದು ಸರ್ಕಾರ ಆದೇಶಿಸಿದೆ ಎಂದು ತಿಳಿಸಿದರು.

    ಜನತೆ ಆಹಾರಕ್ಕೆ ಯಾವುದೇ ಸಮಸ್ಯೆ ಇಲ್ಲ. 60 ದಿನಕ್ಕೆ ಆಗುವಷ್ಟು ಸಂಗ್ರಹ ನಮ್ಮ ಜೊತೆ ಇದೆ ಎಂದು ಕುವೈತ್ ಹೇಳಿಕೊಂಡಿದೆ. ಕುವೈತ್ ನಲ್ಲಿ ಇಲ್ಲಿಯವರಗೆ 100 ಕೇಸ್ ದಾಖಲಾಗಿದೆ. ಆದರೆ ಯಾರೂ ಮೃತಪಟ್ಟಿಲ್ಲ. ಆದರೂ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ದೇಶವನ್ನೇ ಬಂದ್ ಮಾಡಿದೆ.

  • ಎಲ್‍ಒಸಿ ಬಳಿ ಪಾಕ್ ದಾಳಿ – ಇಬ್ಬರು ಸಾವು, ಆರು ಮಂದಿಗೆ ಗಾಯ

    ಎಲ್‍ಒಸಿ ಬಳಿ ಪಾಕ್ ದಾಳಿ – ಇಬ್ಬರು ಸಾವು, ಆರು ಮಂದಿಗೆ ಗಾಯ

    ಶ್ರೀನಗರ: ಎಲ್‍ಒಸಿ(ಗಡಿ ನಿಯಂತ್ರಣ ರೇಖೆ) ಬಳಿ ಪಾಕಿಸ್ತಾನ ಸೈನಿಕರು ಮಾಡಿದ ಅಪ್ರಚೋದಿತ ಗುಂಡಿನ ದಾಳಿಗೆ ಇಬ್ಬರು ನಾಗರಿಕರು ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಬಂಡಿ ಚೆಚಿಯನ್ ಪ್ರದೇಶದ ಮೇಲೆ ಪಾಕಿಸ್ತಾನ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಇದಕ್ಕೆ ಭಾರತೀಯ ಸೇನೆ ಸೂಕ್ತವಾದ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

    ಇಂದು ಮಧ್ಯಾಹ್ನ 2:30ರ ಸುಮಾರಿಗೆ ಭಾರತದ ನಾಗರೀಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೈನಿಕರು ಗುಂಡಿನ ದಾಳಿ ಮತ್ತು ಶೆಲ್ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಗುಲ್ನಾಜ್ ಅಖ್ತರ್ (35) ಮತ್ತು ಶೋಹೈಬ್ (16) ಮೃತಪಟ್ಟಿದ್ದಾರೆ ಮತ್ತು ಆರು ಜನ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ ಎಂದು ಸೇನೆ ತಿಳಿಸಿದೆ.

    ಕಳೆದ ಒಂದು ವಾರದಿಂದ ಪಾಕಿಸ್ತಾನ ಎಲ್‍ಒಸಿ ಬಳಿ ತನ್ನ ಪುಂಡಾಟ ಮುಂದುವರಿಸಿದ್ದು, ಭಾರತೀಯ ನಾಗರಿಕ ಪ್ರದೇಶದ ಮೇಲೆ ಅಪ್ರಚೋದಿತ ಶೆಲ್ ದಾಳಿ ಮತ್ತು ಗುಂಡಿನ ದಾಳಿ ನಡೆಸುತ್ತಿದೆ. ಕಳೆದ ಮೂರು ದಿನಗಳಲ್ಲಿ ಇದಕ್ಕೆ ಎರಡನೇ ಬಾರಿ ಪೂಂಚ್ ಜಿಲ್ಲೆಯ ಎಲ್‍ಒಸಿ ಬಳಿ ಪಾಕಿಸ್ತಾನ ಗುಂಡಿನ ದಾಳಿ ಮಾಡುತ್ತಿದೆ. ನವೆಂಬರ್ 25 ರಿಂದ ಸತತವಾಗಿ ಅಖ್ನೂರ್ ವಲಯದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಲೇ ಇದೆ ಎಂದು ಸೇನೆ ಹೇಳಿದೆ.

  • ಸಿಯಾಚಿನ್‍ನಲ್ಲಿ ಹಿಮಪಾತ – ನಾಲ್ವರು ಯೋಧರು, ಇಬ್ಬರು ನಾಗರಿಕರು ಬಲಿ

    ಸಿಯಾಚಿನ್‍ನಲ್ಲಿ ಹಿಮಪಾತ – ನಾಲ್ವರು ಯೋಧರು, ಇಬ್ಬರು ನಾಗರಿಕರು ಬಲಿ

    ನವದೆಹಲಿ: ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್ ಉತ್ತರ ಭಾಗದಲ್ಲಿ ಸಂಭವಿಸಿದ ಹಿಮಪಾತಕ್ಕೆ ನಾಲ್ವರು ಯೋಧರು ಹಾಗೂ ಇಬ್ಬರು ನಾಗರಿಕರು ಬಲಿಯಾಗಿದ್ದಾರೆ.

    ಸಿಯಾಚಿನ್‍ನಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಹಿಮಪಾತದಲ್ಲಿ ಸುಮಾರು 8ಕ್ಕೂ ಹೆಚ್ಚು ಯೋಧರು ಸಿಲುಕಿದ್ದಾರೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿದ್ದವು. ಈ ವೇಳೆ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಹಿಮದಡಿಯಲ್ಲಿ ಸಿಲುಕಿದವರನ್ನು ರಕ್ಷಿಸಿ, ಹೆಲಿಕಾಪ್ಟರ್ ಮೂಲಕ ಮಿಲಿಟರಿ ಆಸ್ಪತ್ರೆಗೆ ರವಾನಿಸಲಾಗಿತ್ತು.

    ಯೋಧರು ಎಂದಿನಂತೆ ಗಸ್ತಿನಲ್ಲಿದ್ದಾಗ ಈ ಅವಘಡ ಸಂಭವಿಸಿದ್ದು, ಸೋಮವಾರ ಮಧ್ಯಾಹ್ನ 3.30ರ ವೇಳೆಗೆ ಘಟನೆ ನಡೆದಿತ್ತು. ತಕ್ಷಣ ಸೈನಿಕರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಹಿಮದಡಿ ಸಿಲುಕಿದ ದುರ್ಗ ರೆಜಿಮೆಂಟ್‍ನ 6 ಯೋಧರು ಮತ್ತು ಇಬ್ಬರು ನಾಗರಿಕರನ್ನು ಹೊರ ತೆಗೆದು ಹತ್ತಿರದ ಮಿಲಟರಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಅದರಲ್ಲಿ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದ ಕಾರಣ ಮೃತಪಟ್ಟಿದ್ದಾರೆ.

    2016ರಲ್ಲೂ ಹೀಗೆಯೇ ಆಗಿತ್ತು!: 2016ರಲ್ಲಿ ಸಿಯಾಚಿನ್‍ನಲ್ಲಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ ಸಿಲುಕಿ ಕರ್ನಾಟಕದ ವೀರಯೋಧ ಹನುಮಂತಪ್ಪ ಕೊಪ್ಪದ್ 6 ದಿನಗಳ ಬಳಿಕ ಪತ್ತೆಯಾಗಿದ್ದರು. ಅವರನ್ನು ಜೀವಂತವಾಗಿ ಪತ್ತೆ ಮಾಡಿದ್ದರೂ ಬಹು ಅಂಗಾಂಗ ವೈಫಲ್ಯದಿಂದ ಅವರು ವೀರ ಮರಣ ಹೊಂದಿದ್ದರು. ಸಾವಿಗೆ ಸವಾಲೊಡ್ಡಿ ಮಂಜುಗಡ್ಡೆಗಳ ಮಧ್ಯೆ ಜೀವನ್ಮರಣ ಹೋರಾಟ ನಡೆಸಿದ್ದ ವೀರಯೋಧ ಹನುಮಂತಪ್ಪ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

    1984 ರಲ್ಲೂ ಇದೇ ರೀತಿ ಹಿಮಪಾತವಾಗಿ ಭಾರತ ಸೇನೆಯ ಸಾವಿರಕ್ಕೂ ಹೆಚ್ಚಿನ ಯೋಧರು ಹುತಾತ್ಮರಾಗಿದ್ದರು. ಇದರಲ್ಲಿ 35 ಜನ ಮಿಲಿಟರಿ ಆಫೀಸರ್ ಗಳು ಇದ್ದರು.