Tag: ನಾಗರಪಂಚಮಿ

  • ಆಶ್ಲೇಷ ಬಲಿ ಯಾಕೆ ಮಾಡುತ್ತಾರೆ? ಸುಬ್ರಹ್ಮಣ್ಯನಿಗೂ ನಾಗನಿಗೂ ಏನು ಸಂಬಂಧ?

    ಆಶ್ಲೇಷ ಬಲಿ ಯಾಕೆ ಮಾಡುತ್ತಾರೆ? ಸುಬ್ರಹ್ಮಣ್ಯನಿಗೂ ನಾಗನಿಗೂ ಏನು ಸಂಬಂಧ?

    ಹಿಂದೂ ಧರ್ಮದಲ್ಲಿ ದೇವರಂತೆ ನಾಗದೇವರನ್ನೂ ಪೂಜಿಸಲಾಗುತ್ತದೆ. ಜಾತಕದಲ್ಲಿ ನಾಗದೋಷ, ಕುಟುಂಬದಲ್ಲಿ ಸಮಸ್ಯೆ, ನಾಗರ ಹಾವನ್ನು ಹತ್ಯೆ.. ಇತ್ಯಾದಿ ಕಾರಣಕ್ಕೆ ಆಶ್ಲೇಷ ಬಲಿ ಸೇವೆಯನ್ನು ಭಕ್ತರು ಮಾಡುತ್ತಾರೆ. ಸಾಧಾರಣವಾಗಿ ಕುಕ್ಕೆ ಸುಬ್ರಹ್ಮಣ್ಯ (Kukke Subramanya) ಕ್ಷೇತ್ರದಲ್ಲಿ ಹೆಚ್ಚಾಗಿ ಆಶ್ಲೇಷ ಬಲಿ (Ashlesha Bali ಸೇವೆಯನ್ನು ಮಾಡುತ್ತಾರೆ. ಒಂದು ವೇಳೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಲು ಸಾಧ್ಯವಾಗದೇ ಇದ್ದವರು ಸಮೀಪದ ಸುಬ್ರಹ್ಮಣ್ಯ ದೇವಸ್ಥಾನ ಅಥವಾ ನಾಗನ ಕಟ್ಟೆಗಳಲ್ಲೂ ಆಶ್ಲೇಷ ಬಲಿ ಸೇವೆ ಮಾಡುತ್ತಾರೆ. 

     

    ಸುಬ್ರಹ್ಮಣ್ಯನಿಗೂ ನಾಗನಿಗೂ ಏನು ಸಂಬಂಧ?
    ಸುಬ್ರಹ್ಮಣ್ಯನಿಗೂ ನಾಗನಿಗೂ ಏನು ಸಂಬಂಧ ಎಂದು ತಿಳಿಯಬೇಕಾದರೆ ಪುರಾಣ ಕಥೆಗೆ ಹೋಗಬೇಕಾಗುತ್ತದೆ. ಕದ್ರು ಮತ್ತು ವಿನತೆ ಇಬ್ಬರೂ ಕಶ್ಯಪ ಮಹರ್ಷಿಗಳ ಪತ್ನಿಯರು. ಅವರು ಮಕ್ಕಳನ್ನು ಪಡೆಯಲು ಬಯಸಿದಾಗ, ಕದ್ರು ಸಾವಿರ ನಾಗಗಳಿಗೆ ಜನ್ಮ ನೀಡಿದರೆ, ವಿನತೆ ಇಬ್ಬರು ಮಕ್ಕಳಾದ ಅರುಣ ಮತ್ತು ಗರುಡನಿಗೆ ಜನ್ಮ ನೀಡುತ್ತಾಳೆ.

    ಒಂದು ದಿನ ಉಚ್ಚೈಶ್ರವಸ್ ಎಂಬ ಕುದುರೆಯ ಬಾಲದ ಬಣ್ಣದ ಬಗ್ಗೆ ಕದ್ರು ಮತ್ತು ವಿನತೆಯರ ನಡುವೆ ಪಣ ಏರ್ಪಡುತ್ತದೆ. ಕದ್ರು ಬಾಲ ಕಪ್ಪು ಎಂದು ವಾದಿಸಿದರೆ, ವಿನತೆ ಬಾಲ ಬಿಳಿ ಎಂದು ಹೇಳುತ್ತಾಳೆ. ಕದ್ರು ತನ್ನ ನಾಗಪುತ್ರರನ್ನು ಕುದುರೆಯ ಬಾಲಕ್ಕೆ ಅಂಟಿಕೊಂಡು ಕಪ್ಪಾಗಿ ಕಾಣುವಂತೆ ಮಾಡುತ್ತಾಳೆ, ಇದರಿಂದ ವಿನತೆ ಸೋತು ಗುಲಾಮಳಾಗುತ್ತಾಳೆ. ಕದ್ರು ವಿನತೆಯನ್ನು ತನ್ನ ಗುಲಾಮೆಯನ್ನಾಗಿ ನಡೆಸಿಕೊಳ್ಳುತ್ತಾಳೆ. ತಾಯಿಯನ್ನು ಗುಲಾಮೆಯನ್ನಾಗಿ ನಡೆಸಿದ್ದಕ್ಕೆ ಸಿಟ್ಟಾದ ಗರುಡ ನಾಗಪುತ್ರರನ್ನು ತಿನ್ನಲು ಮುಂದಾಗುತ್ತಾನೆ. ಈ ಸಂದರ್ಭದಲ್ಲಿ ಗರುಡನಿಂದ ಪಾರಾಗಲು ನಾಗಗಳು ಸುಬ್ರಹ್ಮಣ್ಯನ ಮೊರೆ ಹೋಗುತ್ತವೆ. ಸುಬ್ರಹ್ಮಣ್ಯ ನಾಗಗಳನ್ನು ರಕ್ಷಿಸುತ್ತಾನೆ. ಇದನ್ನೂ ಓದಿ: ನಾಗರ ಪಂಚಮಿಯಂದು ಹೀಗೆ ಮಾಡಿ – ಕಾಳ ಸರ್ಪದೋಷಕ್ಕೆ ಸಿಗುತ್ತೆ ಪರಿಹಾರ

    kukke subramanya

     

    ಸ್ಕಂದ ಪುರಾಣದ ಪ್ರಕಾರ ಒಮ್ಮೆ ಸುಬ್ರಹ್ಮಣ್ಯ ಬ್ರಹ್ಮನ ಮುಂದೆ ನಿನಗಿಂತ ನನಗೆ ಹೆಚ್ಚು ಜ್ಞಾನವಿದೆ ಎಂದು ಹೇಳಿ ಅಪಹಾಸ್ಯ ಮಾಡಿದ್ದ. ಈ ವಿಚಾರ ತಂದೆಯಾದ ಶಿವನಿಗೆ ತಿಳಿಯುತ್ತದೆ. ಸುಬ್ರಹ್ಮಣ್ಯನನ್ನು ಕರೆದು, ಸೃಷ್ಟಿಕರ್ತನನ್ನು ಅವಮಾನ ಮಾಡಿದ್ದಕ್ಕೆ ನಿನಗೆ ನೀನೇ ಶಿಕ್ಷಿ ವಿಧಿಸಬೇಕೆಂದು ಸೂಚಿಸುತ್ತಾನೆ. ತಂದೆಯ ಮಾತಿನಂತೆ ಸುಬ್ರಹ್ಮಣ್ಯ ಸರ್ಪದ ರೂಪವನ್ನು ತಾಳಿ ಹಲವು ವರ್ಷ ಬದುಕಿದ್ದ ಎಂಬ ಕಥೆಯೂ ಇದೆ.

    ಆಶ್ಲೇಷ ಬಲಿ ಯಾಕೆ ಮಾಡುತ್ತಾರೆ?
    ವ್ಯಕ್ತಿಯ ಜಾತಕದಲ್ಲಿ ಕಾಳಸರ್ಪದೋಷ ಇರುವವರು ಮಾಡುತ್ತಾರೆ. ಹಿಂದೆ ತಿಳಿದೋ ಅಥವಾ ತಿಳಿಯದೆಯೋ ಸರ್ಪಗಳಿಗೆ ಹಾನಿ ಮಾಡಿದ್ದರೆ, ಅಂತಹ ದೋಷಗಳನ್ನು ಪರಿಹರಿಸಲು ಆಶ್ಲೇಷಾ ಪೂಜೆ ಮಾಡಲಾಗುತ್ತದೆ.

    ಅಷ್ಟೇ ಅಲ್ಲದೇ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಸಮಸ್ಯೆ, ವಿವಾಹ, ಭೂ, ಜಲ, ಬೆಳೆ ಅಭಿವೃದ್ಧಿಗಾಗಿ ಈ ಸೇವೆಯನ್ನು ಮಾಡಿದರೆ ಶುಭವಾಗುತ್ತದೆ ಎಂಬ ನಂಬಿಕೆಯಿದೆ. ಮನೆಯಲ್ಲಿ ಶಾಂತಿ ನೆಲೆಸಲು, ವಿವಾಹ ಸಮಸ್ಯೆಗಳು ನಿವಾರಣೆಯಾಗಲು ಮತ್ತು ಸಂತಾನ ಭಾಗ್ಯಕ್ಕಾಗಿ ಈ ಪೂಜೆ ಮಾಡಲಾಗುತ್ತದೆ.  ವಿಶೇಷವಾಗಿ ಆಶ್ಲೇಷ ನಕ್ಷತ್ರದಂದು ಈ ಪೂಜೆಯನ್ನು ಮಾಡುವುದರಿಂದ ಸರ್ಪ ದೋಷಗಳು ನಿವಾರಣೆಯಾಗುತ್ತವೆ ಮತ್ತು ಜೀವನದಲ್ಲಿ ಸುಖ-ಸಮೃದ್ಧಿ ಉಂಟಾಗುತ್ತದೆ ಎಂಬ ನಂಬಿಕೆಯಿದೆ.

  • ನಾಗರಪಂಚಮಿಯಂದು ನಾಗದೇವರಿಗೆ ಬೆಣ್ಣೆ ಸೇವೆ ಮಾಡಿದ ಶ್ರೀನಿಧಿ ಶೆಟ್ಟಿ

    ನಾಗರಪಂಚಮಿಯಂದು ನಾಗದೇವರಿಗೆ ಬೆಣ್ಣೆ ಸೇವೆ ಮಾಡಿದ ಶ್ರೀನಿಧಿ ಶೆಟ್ಟಿ

    ಚಿಕ್ಕಬಳ್ಳಾಪುರ: ನಾಡಿನೆಲ್ಲೆಡೆ ನಾಗರಪಂಚಮಿಯ ಸಂಭ್ರಮ ಮನೆ ಮಾಡಿದ್ದು, ನಾಗರಕಲ್ಲುಗಳಿಗೆ ಭಕ್ತರು ವಿಶೇಷ ಪೂಜೆ ಪುನಸ್ಕಾರ ನೇರವೇರಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಆದಿಯೋಗಿ ಇಶಾ ಕೇಂದ್ರದಲ್ಲೂ ನಾಗರಪಂಚಮಿಯ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಇದೀಗ ಸದ್ಗುರು ಸನ್ನಿಧಿಯಲ್ಲಿ ‘ಕೆಜಿಎಫ್’ (KGF) ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರು ಭೇಟಿ ನೀಡಿ ನಾಗರಪಂಚಮಿ ಹಬ್ಬವನ್ನು (Nagapanchami Festival) ವಿಶೇಷವಾಗಿ ಆಚರಿಸಿದ್ದಾರೆ.

    ನಾಗರಪಂಚಮಿ ಅಂಗವಾಗಿ ಸದ್ಗುರು ಸನ್ನಿಧಿಯಲ್ಲಿನ ನಾಗಮಂಟಪದ ನಾಗನಾಥನಿಗೆ ಶ್ರೀನಿಧಿ ಶೆಟ್ಟಿ ಬೆಣ್ಣೆ ಸೇವೆ ಮಾಡುವ ಮೂಲಕ ನಾಗರಪಂಚಮಿ ಆಚರಿಸಿಕೊಂಡಿದ್ದಾರೆ. ತಂದೆಯೊಂದಿಗೆ ಇಶಾ ಆದಿಯೋಗಿ ಕೇಂದ್ರಕ್ಕೆ ಆಗಮಿಸಿರುವ ನಟಿ ಶ್ರೀನಿಧಿ ಶೆಟ್ಟಿ ಬೆಣ್ಣೆ ಸೇವೆ ಮಾಡಿ ಗಮನ ಸೆಳೆದರು. ಇದನ್ನೂ ಓದಿ:ಮುತ್ತಿನ ಉಡುಗೆಯಲ್ಲಿ ಕಂಗೊಳಿಸಿದ ರಶ್ಮಿಕಾ ಮಂದಣ್ಣ ಲುಕ್‌ಗೆ ಫ್ಯಾನ್ಸ್ ಫಿದಾ

    ಪೂಜೆಯ ಬಳಿಕ ಮಾತನಾಡಿದ ಶ್ರೀನಿಧಿ ಶೆಟ್ಟಿ, ನಾಗರಪಂಚಮಿಯ ಶುಭಾಶಯಗಳನ್ನು ಕೋರಿದರು. ನಮ್ಮ ಮನೆಯಲ್ಲಿ ಸಹ ನಾಗರಪಂಚಮಿ ಹಬ್ಬ ಆಚರಣೆ ಮಾಡುತ್ತೇವೆ. ಈ ಬಾರಿ ಸದ್ಗುರು ಸನ್ನಿಧಿಯಲ್ಲಿ ನಾಗರಪಂಚಮಿ ಆಚರಣೆ ಮಾಡುವ ಅವಕಾಶ ದೊರೆತಿದ್ದು, ನನ್ನ ಪುಣ್ಯ. ಇಶಾ ಆದಿಯೋಗಿ ಕೇಂದ್ರದಲ್ಲಿ ಯಾವುದೇ ಕಾರ್ಯಕ್ರಮ ಇದ್ರೂ ಭಾಗವಹಿಸಲು ಇಷ್ಟಪಡುತ್ತೇನೆ. ನಾಗರಪಂಚಮಿಯಂದು ಇಲ್ಲಿಗೆ ಬಂದು ಸೇವೆ ಮಾಡುವ ಅವಕಾಶದಕ್ಕಿದ್ದು, ಬಹಳ ಸಂತೋಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ರಾಜ್‌ಕುಮಾರ್ ರಾವ್‌ಗೆ ಮಾನುಷಿ ಚಿಲ್ಲರ್ ನಾಯಕಿ

    ಅಂದಹಾಗೆ, ‘ಕೆಜಿಎಫ್ 2’ (KGF 2) ಸಕ್ಸಸ್ ಬಳಿಕ ಕಿಚ್ಚ ಸುದೀಪ್ (Sudeep) ನಟನೆಯ 47ನೇ ಸಿನಿಮಾ ಶ್ರೀನಿಧಿ ಶೆಟ್ಟಿ ಹೀರೋಯಿನ್ ಆಗಿದ್ದಾರೆ. ‘ಡಿಜೆ ಟಿಲ್ಲು’ (DJ Tillu) ಹೀರೋ ಸಿದ್ದು ನಟನೆಯ ಸಿನಿಮಾಗೂ ನಾಯಕಿಯಾಗಿದ್ದಾರೆ. ಕನ್ನಡದ ಜೊತೆ ಪರಭಾಷೆಯಲ್ಲೂ ನಟಿ ಬ್ಯುಸಿಯಾಗಿದ್ದಾರೆ.

  • ನಾಗರಪಂಚಮಿ ಹಬ್ಬ ಹೆಣ್ಣುಮಕ್ಕಳಿಗೆ ವಿಶೇಷ ಯಾಕೆ?

    ನಾಗರಪಂಚಮಿ ಹಬ್ಬ ಹೆಣ್ಣುಮಕ್ಕಳಿಗೆ ವಿಶೇಷ ಯಾಕೆ?

    ಇಂದು ನಾಗರಪಂಚಮಿ (Nagarapanchami). ನಾಡಿನಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ನಾಗ ದೇವನಿಗೆ ಹಾಲೆರೆಯುವ ಮೂಲಕ ನಾಡಿನಾದ್ಯಂತ ಸುಖ-ಸಮೃದ್ಧಿಯನ್ನು ಬೆಳಗಿಸಿಕೊಡುವಂತೆ ಪ್ರಾರ್ಥಿಸಲಾಗುತ್ತಿದೆ. ಅಂತೆಯೇ ನಾಗರಪಂಚಮಿಯನ್ನು ಹೆಣ್ಣು ಮಕ್ಕಳ ಹಬ್ಬವೆಂದೂ ಕರೆಯುತ್ತಾರೆ. ಹಾಗಾದ್ರೆ ನಾಗರಪಂಚಮಿಗೂ ಹೆಣ್ಣು ಮಕ್ಕಳಿಗೂ ಇರುವ ಸಂಬಂಧವೇನು..? ಈ ಹಬ್ಬ ಅಣ್ಣ-ತಂಗಿಯರಿಗೆ ಯಾಕೆ ವಿಶೇಷ ಎಂಬುದನ್ನು ಮುಂದೆ ಓದಿ..

    ಸ್ಕಂದ ಪುರಾಣದಲ್ಲಿ ಶ್ರೀಕೃಷ್ಣನ ಮಗನಾದ ಸಾಂಬನು ಶಿವಸುತ ಸುಬ್ರಹ್ಮಣ್ಯನಲ್ಲಿ ನಾಗರ ಪಂಚಮಿಯನ್ನು ಯಾಕೆ ಆಚರಿಸಲಾಗುತ್ತದೆ ಎಂದು ಪ್ರಶ್ನೆ ಕೇಳುತ್ತಾನೆ. ಆಗ ಆತ ಒಂದು ಕಥೆಯನ್ನು ಹೇಳುತ್ತಾನೆ. ಇದನ್ನೂ ಓದಿ: Nagara Panchami: ಮಹಾರಾಷ್ಟ್ರದಲ್ಲಿ ನಾಗರಪಂಚಮಿ ಆಚರಣೆ ಹೇಗೆ?

    ಹಿಂದೆ ದೇವಶರ್ಮ ಎಂಬ ಬ್ರಾಹ್ಮಣನೊಬ್ಬನಿದ್ದನು. ಆತನಿಗೆ ಓರ್ವ ಹೆಣ್ಣು ಹಾಗೂ 8 ಮಂದಿ ಗಂಡು ಮಕ್ಕಳಿದ್ದರು. ಒಂದು ದಿನ ಗರುಡನಿಂದ ಹೆದರಿದ್ದ ನಾಗರವೊಂದು ಈ ಹೆಣ್ಣುಮಗಳ ಬಳಿ ಬಂದು ಆಶ್ರಯವನ್ನು ಕೇಳುತ್ತದೆ. ಕೂಡಲೇ ಈಕೆ ಭಕ್ತಿಯಿಂದ ನಾಗನಿಗೆ ಹಾಲು, ಫಲವಸ್ತುಗಳನ್ನು ಇಟ್ಟು ಸಾಕುತ್ತಾಳೆ. ಹೀಗೆ ಸಾಕಿ-ಸಲಹಿದ ಹೆಣ್ಣು ಮಗಳಿಗೆ ನಾಗನು ಪ್ರತಿದಿನ ಆಕೆಗೆ ಒಂದು ತೊಲೆ ಚಿನ್ನವನ್ನು ನೀಡುತ್ತಿರುತ್ತದೆ. ಹೀಗಿರುವಾಗ ಒಂದು ದಿನ 8 ಮಂದಿ ಗಂಡು ಮಕ್ಕಳಲ್ಲಿ ಓರ್ವ ನನಗೆ ಚಿನ್ನ ಬೇಕು ಎಂದು ನಾಗರಾಜನನ್ನು ಪೀಡಿಸಿ, ಕಾಲಿನಿಂದ ಒದೆಯುತ್ತಾನೆ.

    ಇದರಿಂದ ಕೋಪಗೊಂಡ ನಾಗಪ್ಪ, ಈತನ ಜೊತೆ ಉಳಿದ 7 ಮಂದಿಯನ್ನೂ ಕೊಂದು ಹೊರಟು ಹೋಗುತ್ತದೆ. ಇತ್ತ ತನ್ನ ಅಣ್ಣಂದಿರ ಸಾವಿಗೆ ತಾನೇ ಕಾರಣವೆಂದು ಆಕೆ ದೇವರ ಎದುರಿನಲ್ಲಿಯೇ ಶಿರಚ್ಛೇದನಕ್ಕೆ ಮುಂದಾಗುತ್ತಾಳೆ. ಈ ವೇಳೆ ನಾರಾಯಣ ದೇವ ಪ್ರತ್ಯಕ್ಷವಾಗಿ ವಾಸುಕಿಗೆ ಆ ಸತ್ತ ಹುಡುಗರನ್ನು ಬದುಕಿಸಲು ಹೇಳುತ್ತಾನೆ. ಈ ರೀತಿ ಪುನಃ ಅಣ್ಣಂದಿರ ಜೀವವನ್ನು ಮರಳಿ ಪಡೆದುಕೊಳ್ಳುವಲ್ಲಿ ಆಕೆ ಯಶಸ್ವಿಯಾಗುತ್ತಾಳೆ. ಈ ದಿನವನ್ನೇ ಇಂದು ನಾವು ನಾಗರ ಪಂಚಮಿ ಹಬ್ಬವಾಗಿ ಆಚರಿಸುತ್ತೇವೆ. ಈ ಹಿನ್ನೆಲೆಯಿಂದಾಗಿ ನಾಗರಪಂಚಮಿ ಹೆಣ್ಣುಮಕ್ಕಳಿಗೆ ವಿಶೇಷವೂ ಆಗಿದೆ. ಇದನ್ನೂ ಓದಿ: Nagara Panchami: ಕರ್ನಾಟಕದ 10 ಪುಣ್ಯ ನಾಗಕ್ಷೇತ್ರ

    ನಾಗರ ಪಂಚಮಿ ನಾಡಿಗೆ ದೊಡ್ಡ ಹಬ್ಬ, ಅಣ್ಣ ಬರಲಿಲ್ಲಾ ಕರಿಯಾಕ ಅಂತ ಜಾನಪದ ಗೀತೆಯಿದೆ. ಉತ್ತರ ಕರ್ನಾಟಕ ಭಾಗದ ಹಬ್ಬಗಳ ಹೆಬ್ಬಾಗಿಲಾಗಿರುವ ಶ್ರಾವಣ ಮಾಸದಲ್ಲಿ ಆಚರಿಸುವ ಬಹು ದೊಡ್ಡ ಹಬ್ಬ ಇದು. ಈ ಹಬ್ಬಕ್ಕೆ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಕರೆದುಕೊಂಡು ಬರುವ ಪದ್ಧತಿ ಉತ್ತರ ಕರ್ನಾಟಕದಲ್ಲಿ ಇಂದಿಗೂ ಪ್ರಚಲಿತದಲ್ಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Naga Panchami 2023: ಬಾಯಲ್ಲಿ ನೀರೂರಿಸುವ ಅಳ್ಳಿಟ್ಟು, ಅರಿಶಿನ ಎಲೆ ಕಡುಬು ಮಾಡಿ ನೋಡಿ

    Naga Panchami 2023: ಬಾಯಲ್ಲಿ ನೀರೂರಿಸುವ ಅಳ್ಳಿಟ್ಟು, ಅರಿಶಿನ ಎಲೆ ಕಡುಬು ಮಾಡಿ ನೋಡಿ

    ನಮ್ಮಲ್ಲಿ ಸರ್ಪಗಳು ಧಾರ್ಮಿಕ ನಂಬಿಕೆಗೆ ಹೆಸರುವಾಸಿ ಮತ್ತು ಅವುಗಳನ್ನು ವಿವಿಧ ದಿನಾಂಕಗಳು ಮತ್ತು ಹಬ್ಬಗಳಲ್ಲಿ ಪೂಜಿಸಲಾಗುತ್ತದೆ. ಪ್ರತಿ ವರ್ಷ ನಾಗರ ಪಂಚಮಿಯಂದು (Naga Panchami) ಹಾವಿಗೆ ಪೂಜೆ ಸಲ್ಲಿಸುವ ವೇಳೆ ಹಾಲೆರೆಯಲಾಗುತ್ತದೆ. ಇದರಿಂದ ನಾಗ ದೇವತೆಯ ಕೃಪೆಯು ನಮ್ಮೆಲ್ಲರ ಮೇಲೆ ಉಳಿಯುತ್ತದೆ ಮತ್ತು ನಮ್ಮ ಕುಟುಂಬವನ್ನು ಹಾವು ಕಡಿತದಿಂದ ರಕ್ಷಿಸಬಹುದು ಎಂಬ ನಂಬಿಕೆ. ಹಾಗೆಯೇ ನಾಗರಪಂಚಮಿ ಹಬ್ಬಕ್ಕೆ ವಿಶೇಷ ತಿನಿಸುಗಳನ್ನ (Special Food) ಮಾಡಿ ಮನೆಮಂದಿಗೆಲ್ಲಾ ನೀಡಿ ನಾಗರ ಪಂಚಮಿಗೊಂದು ಅರ್ಥಕೊಡುತ್ತಾರೆ. ಹಾಗಾದ್ರೆ ಏನೇನು ವಿಶೇಷ ತಿನಿಸುಗಳನ್ನ ಮಾಡುತ್ತಾರೆ ಅನ್ನೋದನ್ನೊಮ್ಮೆ ನೋಡೋಣ…

    ಅಳ್ಳಿಟ್ಟು
    ನಾಗರಪಂಚಮಿ ಹಬ್ಬಕ್ಕೆ ಅಳ್ಳಿಟ್ಟು ಬಹಳ ಫೇಮಸ್‌. ಅದರಲ್ಲೂ ಉತ್ತರ ಕರ್ನಾಟಕದ ಮಂದಿಗೆ ಅಳ್ಳಿಟ್ಟು ಇಲ್ಲದ ನಾಗರಪಂಚಮಿಯನ್ನ ಊಹಿಸೋದೂ ಸಾಧ್ಯವಿಲ್ಲ.

    ಬೇಕಾಗುವ ಸಾಮಗ್ರಿಗಳು
    ಜೋಳದ ಅರಳು – 1 ಕಪ್‌, ಗೋದಿ ಹಿಟ್ಟು – 1 ಕಪ್‌, ಬೆಲ್ಲದ ಪುಡಿ – 1 ಕಪ್‌, ತುಪ್ಪ – 2 ರಿಂದ 3 ಚಮಚ, ಅಕ್ಕಿ – 1 ಚಮಚ, ಗಸಗಸೆ – 1/4 ಸ್ಪೂನ್‌, ಏಲಕ್ಕಿ, ಲವಂಗ, ಚಿಟಿಕೆ ಜಾಯಿಕಾಯಿ ಪುಡಿ, ನೀರು 2 ಕಪ್‌.

    ಮಾಡುವ ವಿಧಾನ
    ಮೊದಲು ಒಂದು ಚಮಚದಷ್ಟು ಅಕ್ಕಿಯನ್ನ ಹುರಿಯಿರಿ. ಹದವಾಗಿ ಹುರಿದ ಬಳಿಕ ತೆಗೆದು ಪಕ್ಕಕ್ಕಿಡಿ. ಅದು ತಣ್ಣಗಾಗಲಿ. ಈಗ ಜೋಳದ ಅರಳು, ಹುರಿದಿಟ್ಟ ಅಕ್ಕಿ ಸೇರಿಸಿ ಮಿಕ್ಸರ್‌ನಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ. ಇದಕ್ಕೆ ಮತ್ತೆ ಗೋಧಿ ಹಿಟ್ಟು, ತುಪ್ಪ ಸೇರಿಸಿ ಚೆನ್ನಾಗಿ ಹುರಿಯಿರಿ. ಚೆನ್ನಾಗಿ ಘಮಲು ಬರುತ್ತೆ. ಈಗ ಸ್ವಲ್ಪ ನೀರು ಕಾಯಿಸಿ, ಆ ನೀರಿಗೆ ಬೆಲ್ಲದ ಪುಡಿ ಹಾಕಿ ಬೆಲ್ಲ ಕರಗಿಸಿ. ಹುರಿದ ಅರಳು ಮತ್ತು ಅಕ್ಕಿ ಹಿಟ್ಟಿನ ಮಿಶ್ರಣ ಹಾಕಿ ಚೆನ್ನಾಗಿ ತಿರುವಿ.

    ಸ್ವಲ್ಪ ಗಟ್ಟಿಯಾಗುತ್ತಾ ಬಂದ ಹಾಗೆ ಇದು ತಳಬಿಟ್ಟು ಮೇಲಕ್ಕೆ ಏಳತೊಡಗುತ್ತದೆ. ಆಗ ಸ್ಟೌ ಆಫ್‌ ಮಾಡಿ. ಇನ್ನೊಂದು ಕಡೆ ಏಲಕ್ಕಿ, ಲವಂಗ ಮತ್ತು ಗಸಗಸೆ, ಜಾಯಿಕಾಯಿ ಎಲ್ಲ ಸೇರಿಸಿ ಪುಡಿ ಮಾಡಿ ಹಾಕಿ. ಇದನ್ನ ರೆಡಿ ಆಗಿರುವ ಹಿಟ್ಟಿಗೆ ಸೇರಿಸಿ, ಇನ್ನೊಮ್ಮೆ ಬೆರೆಸಿ. ಈಗ ಕೈಗೆ ತುಪ್ಪ ಹಚ್ಚಿ ಬಟ್ಟಲಿನ ಆಕಾರ ಕೊಟ್ಟು ಅಳ್ಳಿಟ್ಟು ಮಾಡಿ. ತಿನ್ನಲು ಬಹಳ ರುಚಿ. ನಾಗರ ಪಂಚಮಿ ಹಬ್ಬದ ದಿನ ಅಳ್ಳಿಟ್ಟು ಸೇವೆ ಬಹಳ ವಿಶೇಷ. ಈ ಅಳ್ಳಿಟ್ಟು ಬಿಸಿ ಬಿಸಿ ತಿನ್ನೋದಕ್ಕೆ ಬಹಳ ರುಚಿ.

    ಅರಿಶಿನ ಎಲೆ ಕಡುಬು
    ಇದು ದಕ್ಷಿಣ ಕನ್ನಡ, ಉಡುಪಿ ಭಾಗಗಳಲ್ಲಿ ಬಹಳ ಜನಪ್ರಿಯವಾದ ಅಡುಗೆ. ಅದರಲ್ಲೂ ನಾಗರಪಂಚಮಿ ಹಬ್ಬದಂದು ವಿಶೇಷವಾಗಿ ಈ ಖಾದ್ಯಗಳನ್ನ ಮಾಡೇ ಮಾಡುತ್ತಾರೆ. ಅರಶಿನದ ಘಮದೊಂದಿಗೆ ಬಾಯಿಗೆ ಸಖತ್‌ ರುಚಿ ಅನಿಸೋ ಈ ತಿಂಡಿಯನ್ನು ಬೆಳಗಿನ ಉಪಹಾರಕ್ಕೆ, ಸಂಜೆಯ ತಿಂಡಿಗೆ, ಕೆಲವೊಮ್ಮೆ ರಾತ್ರಿಯ ಊಟದ ಬದಲಿಗೆ ಬಳಸೋದೂ ಇದೆ. ಅರಿಶಿನ ಎಲೆಯ ಸತ್ವವನ್ನು ಹೀರಿಕೊಂಡು ತಯಾರಾಗುವ ಈ ಕಡುಬು ಆರೋಗ್ಯಕ್ಕೂ ಬಹಳ ಒಳ್ಳೆಯದು. ತಯಾರಿಕೆ ಸ್ವಲ್ಪ ಹೆಚ್ಚು ಹೊತ್ತು ತೆಗೆದುಕೊಂಡರೂ, ಆರೋಗ್ಯಕರವಾದ ಸಾಂಪ್ರದಾಯಿಕ ಅಡುಗೆಯೊಂದನ್ನು ಮಾಡಿ ತಿನ್ನುವ ಮಜವೇ ಬೇರೆ.

    ಮಾಡುವ ವಿಧಾನ
    ಕಪ್ ಅಕ್ಕಿ ಹಿಟ್ಟು, 1.5 – 2 ಕಪ್ ನೀರು (ಅಕ್ಕಿ ಹಿಟ್ಟಿನ ಗುಣಮಟ್ಟವನ್ನು ಅವಲಂಬಿಸಿರುತ್ತದೆ), 1 ಕಪ್ ತುರಿದ ತೆಂಗಿನಕಾಯಿ, 1/2 ಕಪ್ ಪುಡಿ ಮಾಡಿದ ಬೆಲ್ಲ, 2 ಚಮಚ ತುಪ್ಪ, ಒಂದು ದೊಡ್ಡ ಚಿಟಿಕೆ ಏಲಕ್ಕಿ, 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ), 12 ಅರಿಶಿನ ಎಲೆಗಳು.

    ಮಾಡುವ ವಿಧಾನ
    ಎಲೆ ಕಡುಬು ಮಾಡಲು ಮೊದಲು ಅಕ್ಕಿ ನೆನೆಸಬೇಕು. ಹಿಂದಿನ ದಿನ ರಾತ್ರಿಯೇ ಅಕ್ಕಿ ನೆನೆಹಾಕಿದರೆ ಒಳ್ಳೆಯದು. ದೋಸೆ ಅಕ್ಕಿಯಾದರೆ ಮೂರು ಗಂಟೆ ನೆನೆದರೂ ಸಾಕು. ಆದರೆ ಮಂಗಳೂರು ರೈಸ್‌ನಲ್ಲಿ ಈ ತಿಂಡಿ ತಯಾರಿಸೋದಾದರೆ ಹಿಂದಿನ ರಾತ್ರಿ ನೆನೆಸಿಡೋದು ಕಡ್ಡಾಯ. ನೆನೆಸಿಟ್ಟ ಅಕ್ಕಿಯನ್ನು ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಕೊನೆಯಲ್ಲಿ ಉಪ್ಪು ಹಾಕಿ ಮತ್ತೊಮ್ಮೆ ರುಬ್ಬಿ. ಇದಕ್ಕೆ ಹೆಚ್ಚು ನೀರು ಹಾಕಬಾರದು. ಆದರೆ ನುಣ್ಣಗೆ ರುಬ್ಬಬೇಕು. ಈಗ ಬೌಲ್‌ನಲ್ಲಿ ತೆಗೆದಿಟ್ಟ ಬೆಲ್ಲವನ್ನು ಹಾಕಿ. ಬೆಲ್ಲದ ಪುಡಿ ಇದ್ದರೆ ಒಳ್ಳೆಯದು. ಇಲ್ಲವಾದರೆ ಬೆಲ್ಲ ತುರಿದು ಹಾಕಿದರೂ ನಡೆಯುತ್ತೆ. ಹೀಗೆ ತುರಿದ ಬೆಲ್ಲಕ್ಕೆ ಅದಕ್ಕೆ 1 ಕಪ್ ಕಾಯಿತುರಿ ಸೇರಿಸಿ ಮಿಕ್ಸ್ ಮಾಡಬೇಕು.

    ಈ ಮಿಶ್ರಣಕ್ಕೆ ಹುರಿದ ಕಪ್ಪು ಎಳ್ಳು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡ ನಂತರ ಅರಶಿನ ಎಲೆ ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟನ್ನು ಸವರಿ, ತೆಳ್ಳಗೆ ಹಾಕಬೇಕು. ಇದರ ಮೇಲೆ ಬೆಲ್ಲ, ಕಾಯಿತುರಿಯ ಮಿಶ್ರಣ ಹಾಕಿ ಎಲೆಯನ್ನ ಮಡಚಿ. ನಂತರ ಇದನ್ನು ಇಡ್ಲಿ ಪಾತ್ರೆಯಲ್ಲಿಟ್ಟು 10-15 ನಿಮಿಷ ಕಾಲ ಹಬೆಯಲ್ಲಿ ಬೇಯಿಸಿದರೆ ಬಾಯಲ್ಲಿ ನೀರೂರುವ ರುಚಿಯಾದ ಅರಶಿನ ಎಲೆ ಕಡುಬು ರೆಡಿ. ಅಷ್ಟೇ ಅಲ್ಲದೇ ತಂಬಿಟ್ಟು ಉಂಡೆ, ರವೆ ಉಂಡೆ ಇನ್ನಿತರ ತಿನಿಸುಗಳನ್ನ ಮಾಡುವುದು ನಾಗರ ಪಂಚಮಿಯ ವಿಶೇಷ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಡಿಯೂರಪ್ಪರಿಗಾಗಿ ದೇವಸ್ಥಾನದ ಬಾಗಿಲು ತೆರೆದ ಆಡಳಿತ ಮಂಡಳಿ!

    ಯಡಿಯೂರಪ್ಪರಿಗಾಗಿ ದೇವಸ್ಥಾನದ ಬಾಗಿಲು ತೆರೆದ ಆಡಳಿತ ಮಂಡಳಿ!

    ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿರುವ ಘಾಟಿ ಸುಬ್ರಮಣ್ಯ ದೇವಾಲಯದ ಬಾಗಿಲು ಓಪನ್ ಮಾಡಲಾಗಿದೆ.

    ವೀಕೆಂಡ್ ಹಾಗೂ ವಿಶೇಷ ಹಾಗೂ ರಜಾ ದಿನಗಳಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ವ್ಯಾಪ್ತಿಯಲ್ಲಿರುವ ದೇವಾಲಯಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಶ್ರೀನಿವಾಸ್ ಆದೇಶ ಹೊರಡಿಸಿದ್ದರು. ನಾಗರ ಪಂಚಮಿಯಂದು ಭಕ್ತರು ಹೆಚ್ಚಿರ್ತಾರೆ ಎಂಬ ಕಾರಣಕ್ಕೆ ಘಾಟಿ ಸುಬ್ರಹ್ಮಣ್ಯಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಇದೀಗ ಮಾಜಿ ಸಿಎಂ ಅವರಿಗೋಸ್ಕರ ದೇವಸ್ಥಾನವನ್ನು ಓಪನ್ ಮಾಡಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

    ಯಡಿಯೂರಪ್ಪ ಬರ್ತಾರೆ ಎಂಬ ಕಾರಣಕ್ಕೆ ಉಳಿದ ಭಕ್ತರಿಗೂ ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಈ ಮೂಲಕ ಯಡಿಯೂರಪ್ಪಗೆ ಮಾತ್ರ ಅವಕಾಶ ಎಂಬ ಆರೋಪ ತಪ್ಪಿಸಿಕೊಳ್ಳಲು ಯತ್ನ ಇದಾಗಿದೆ. ಒಟ್ಟಿನಲ್ಲಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಿಎಸ್‍ವೈಗೆ ಪುತ್ರ ವಿಜಯೇಂದ್ರ ಹಾಗೂ ಶಾಸಕ ಎಸ್ ಆರ್ ವಿಶ್ವನಾಥ್ ಸಾಥ್ ನೀಡಿದರು. ಇದನ್ನೂ ಓದಿ: ಶಿರಾ ವಿಚಾರಕ್ಕೆ ಬಂದ್ರೆ ಹುಷಾರ್ – ಮಾಧುಸ್ವಾಮಿಗೆ ಟಿ.ಬಿ ಜಯಚಂದ್ರ ಖಡಕ್ ವಾರ್ನಿಂಗ್

    ದೇವರ ದರ್ಶನ ಪಡೆದ ಬಳಿಕ ಸಿಎಂ ಅಲ್ಲಿಯೇ ಇದ್ದ ಗೋಶಾಲೆಗೆ ಭೇಟಿ ನೀಡಿದ್ದಾರೆ. ನಂತರ ಸಸಿ ನೆಡುವ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

  • ಇತಿಹಾಸದಲ್ಲೇ ಮೊದಲ ಬಾರಿಗೆ ಕುಕ್ಕೆಯಲ್ಲಿ ಭಕ್ತರಿಲ್ಲದೆ ನಡೆದ ನಾಗರಪಂಚಮಿ

    ಮಂಗಳೂರು: ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಲ್ಲದೆ ನಾಗರಪಂಚಮಿ ಹಬ್ಬವನ್ನು ಆಚರಿಸಲಾಯಿತು.

    ಕೊರೊನಾ ಮಹಾಮಾರಿಯ ಅಟ್ಟಹಾಸದಿಂದಾಗಿ ಈ ಬಾರಿಯ ಕುಕ್ಕೆ ಕ್ಷೇತ್ರದಲ್ಲಿ ನಾಗರಪಂಚಮಿಯ ವಿಶೇಷ ದಿನವಾದ ಇಂದು ನಿರ್ಬಂಧ ಹೇರಲಾಗಿತ್ತು. ಭಕ್ತರು ಬಂದರೆ ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ರೀತಿಯಿಂದಲೂ ತೊಂದರೆಯಾಗುತ್ತದೆ. ಹೀಗಾಗಿ ಇಂದು ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.

    ನಾಗರಪಂಚಮಿಯ ದಿನ ನಾಗದೇವರಿಗೆ ವಿಶೇಷ ದಿನವಾಗಿರುವುದರಿಂದ ಕುಕ್ಕೆ ಕ್ಷೇತ್ರದಲ್ಲಿ ಅರ್ಚಕರು ನಾಗದೇವರ ಕಲ್ಲಿಗೆ ಸೀಯಾಳಾಭಿಷೇಕ, ಹಾಲಿನ ಅಭಿಷೇಕ ನಡೆಸಿದರು. ಜೊತೆಗೆ ನಾಗರಪಂಚಮಿಯ ವಿಧಿ ವಿಧಾನದಂತೆ ಪೂಜೆ ಸಲ್ಲಿಸಿದರು. ಈ ಸಂದರ್ಭ ಕ್ಷೇತ್ರದ ಸಿಬ್ಬಂದಿ ಹಾಗೂ ಅರ್ಚಕರು ಮಾತ್ರ ಉಪಸ್ಥಿತರಿದ್ದರು.

    ಪ್ರತಿ ವರ್ಷ ನಾಗರಪಂಚಮಿಯ ದಿನದಂದು ಲಕ್ಷಾಂತರ ಮಂದಿ ಕುಕ್ಕೆಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಈ ಬಾರಿ ಮಾತ್ರ ಬೆರಳೆಣಿಕೆಯ ಭಕ್ತರು ದೇವಸ್ಥಾನದ ಹೊರಗಿನಿಂದಲೇ ನಮಸ್ಕರಿಸಿ ತೆರಳಿದರು.

  • ಮನೆಗಳಲ್ಲಿ ನಾಗರಪಂಚಮಿ ಆರಾಧಿಸಿ, ಸಾರ್ವಜನಿಕವಾಗಿ ಬೇಡ: ಉಡುಪಿ ಡಿಸಿ

    ಮನೆಗಳಲ್ಲಿ ನಾಗರಪಂಚಮಿ ಆರಾಧಿಸಿ, ಸಾರ್ವಜನಿಕವಾಗಿ ಬೇಡ: ಉಡುಪಿ ಡಿಸಿ

    – ನನ್ನ ಹೆಸರಿನಲ್ಲಿ ತಪ್ಪು ಸಂದೇಶ ರವಾನೆಯಾಗುತ್ತಿದೆ

    ಉಡುಪಿ: ಶನಿವಾರ ನಾಗರ ಪಂಚಮಿ ಹಬ್ಬ. ಉಡುಪಿ ಜಿಲ್ಲೆಯಲ್ಲಿ ಸಾಮೂಹಿಕ ನಾಗರಪಂಚಮಿಗೆ ಜಿಲ್ಲೆಯಲ್ಲಿ ಅವಕಾಶ ಇಲ್ಲ. ನಾಗಾರಾಧನೆ ಪೂಜೆ ಮಾಡಬಾರದು ಎಂದು ನಾನು ಹೇಳಿಲ್ಲ. ಮನೆಗಳಲ್ಲಿ ನಾಗಾರಾಧನೆ ಮಾಡಲು ಯಾವುದೇ ನಿರ್ಬಂಧ ಇಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

    ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಹೆಸರಿನಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಮೆಸೇಜನ್ನು ಸಾಮಾಜಿಕ ಜಾಲತಾಣದಲ್ಲಿ ಫಾರ್ವರ್ಡ್ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಉಡುಪಿಯಲ್ಲಿ ನಾಗಪೂಜೆಗೆ ಅವಕಾಶ ಇಲ್ಲವೆಂಬ ಯಾರೂ ಸಂದೇಶ ರವಾನೆ ಮಾಡಬೇಡಿ ಎಂದರು.

    ಕೊರೊನಾ ಕಾಲದಲ್ಲಿ ಯಾವುದೇ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆ ಮಾಡಬಾರದು. ಅವರವರ ಮನೆಯಲ್ಲಿ ನಾಗನ ಕಲ್ಲಿಗೆ ಹಾಲು ಎರೆಯಲು ಅಡ್ಡಿಯಿಲ್ಲ. ಮನೆಯಲ್ಲಿ ಆಚರಣೆ ಮಾಡಲು ಯಾರ ಅನುಮತಿಯ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಸಾರ್ವಜನಿಕರು ಒಟ್ಟಿಗೆ ಸೇರಿ ಆಚರಣೆ ಮಾಡಲು ಅವಕಾಶ ಇಲ್ಲ. ಎಲ್ಲರಿಗೂ ನಾಗರಪಂಚಮಿ ಶುಭಾಶಯ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಶುಭ ಹಾರೈಸಿದ್ದಾರೆ.