Tag: ನಾಗಮ್ಮ

  • ದೊಡ್ಡಗಾಜನೂರಿನಲ್ಲಿ ಈಡಿಗ ಸಂಪ್ರದಾಯದಂತೆ ನೆರವೇರಿದ ಡಾ.ರಾಜ್ ಸಹೋದರಿ ಅಂತ್ಯಕ್ರಿಯೆ

    ದೊಡ್ಡಗಾಜನೂರಿನಲ್ಲಿ ಈಡಿಗ ಸಂಪ್ರದಾಯದಂತೆ ನೆರವೇರಿದ ಡಾ.ರಾಜ್ ಸಹೋದರಿ ಅಂತ್ಯಕ್ರಿಯೆ

    – ಡಾ.ರಾಜ್ ಕುಟುಂಬಸ್ಥರು ಭಾಗಿ

    ಚಾಮರಾಜನಗರ: ದೊಡ್ಮನೆ ಕುಟುಂಬದ ನಾಗಮ್ಮ ಇನ್ನು ನೆನಪು ಮಾತ್ರ. ವರನಟ ಡಾ.ರಾಜಕುಮಾರ್ (Dr Rajkumar) ಅವರ ಮಕ್ಕಳಿಗೆ ಸಾಕು ತಾಯಿಯೇ ಆಗಿದ್ದ ನಾಗಮ್ಮ (Nagamma) ಅವರ ಅಂತ್ಯಕ್ರಿಯೆ ಡಾ.ರಾಜ್ ಹುಟ್ಟೂರು ದೊಡ್ಡಗಾಜನೂರಿನಲ್ಲಿ (Doddagajanur) ನೆರವೇರಿತು. ಅಂತ್ಯಕ್ರಿಯೆಯಲ್ಲಿ ಡಾ.ರಾಜ್‌ಕುಮಾರ್ ಕುಟುಂಬಸ್ಥರು ಭಾಗಿಯಾದರು.

    ವರನಟನ ಮಕ್ಕಳಿಗೆ ಒಂದು ರೀತಿಯಲ್ಲಿ ಸಾಕು ತಾಯಿಯೇ ಆಗಿದ್ದ ನಾಗಮ್ಮ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಇಡೀ ರಾಜ್ ಕುಟುಂಬ ದೊಡ್ಡಗಾಜನೂರಿಗೆ ಆಗಮಿಸಿತ್ತು. ಶುಕ್ರವಾರ ಸಂಜೆಯೇ ರಾಘವೇಂದ್ರ ರಾಜಕುಮಾರ್ ಅವರು ತಮ್ಮ ಪತ್ನಿ ಹಾಗು ಮಕ್ಕಳಾದ ವಿನಯ್ ರಾಜ್‌ಕುಮಾರ್ ಹಾಗು ಯುವ ರಾಜ್‌ಕುಮಾರ್ ಅವರೊಂದಿಗೆ ದೌಡಾಯಿಸಿದ್ದರು. ನಮ್ಮ ಅತ್ತೆ ನಮ್ಮನ್ನೆಲ್ಲಾ ಎದೆ ಹಾಲು ಕುಡಿಸಿ ಬೆಳೆಸಿದ್ದಾರೆ ಎಂದು ಸ್ಮರಿಸಿಕೊಂಡಿದ್ದರು. ಇದನ್ನೂ ಓದಿ: ವಿಕಸಿತ ಭಾರತ್ @ 2047: ಹೂಡಿಕೆದಾರರ ದುಂಡುಮೇಜಿನ ಸಮ್ಮೇಳನ

    ಇನ್ನು ಶುಕ್ರವಾರ ಗೋವಾಗೆ ತೆರಳಿದ್ದ ಶಿವರಾಜಕುಮಾರ್ ಅವರು ನಾಗಮ್ಮ ನಿಧನದ ಮಾಹಿತಿ ತಿಳಿಯುತ್ತಿದ್ದಂತೆ ಅಲ್ಲಿಂದ ವಾಪಸ್ಸಾಗಿ ತಮ್ಮ ಪತ್ನಿ ಗೀತಾ ಶಿವರಾಜಕುಮಾರ್ ಹಾಗೂ ತಮ್ಮ ಪುತ್ರಿಯರೊಂದಿಗೆ ಮಧ್ಯರಾತ್ರಿಯೇ ದೊಡ್ಡಗಾಜನೂರಿಗೆ ಆಗಮಿಸಿದ್ದರು. ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಅವರ ಮಗಳು ವಂದಿತಾ, ಡಾ.ರಾಜಕುಮಾರ್ ಅವರ ಪುತ್ರಿಯರು, ಮೊಮ್ಮಕ್ಕಳು, ಪಾರ್ವತಮ್ಮ ರಾಜಕುಮಾರ್ ಅವರ ಸಹೋದರರಾದ ಎಸ್ ಎ ಗೋವಿಂದರಾಜು, ಚಿನ್ನೇಗೌಡ ಸೇರಿದಂತೆ ಅಪಾರ ಸಂಖ್ಯೆಯ ಬಂದು ಬಳಗದವರು ನಾಗಮ್ಮ ಅವರ ಅಂತಿಮ ದರ್ಶನ ಪಡೆದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಅತ್ಯಾಚಾರ ಕೇಸಲ್ಲಿ ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಜೈಲು – ಸಂತ್ರಸ್ತೆಗೆ 11 ಲಕ್ಷ ಪರಿಹಾರ

    ಈ ವೇಳೆ ಸೋದರತ್ತೆ ನಾಗಮ್ಮ ಅವರೊಡನೆ ಬಾಲ್ಯದ ನೆನಪು ಮೆಲಕು ಹಾಕಿದ ಡಾ.ಶಿವರಾಜಕುಮಾರ್, ನನಗೆ ನಮ್ಮವ್ವ ಒಬ್ಬರೇ ತಾಯಿಯಲ್ಲ, ಸಾಕಿ ಸಲಹಿದ ನಾಗಮ್ಮ ಕೂಡ ಒಬ್ಬರು ತಾಯಿಯಾಗಿದ್ದರು ಎಂದು ಸ್ಮರಿಸಿದರು. ಇದನ್ನೂ ಓದಿ: ಉತ್ತರಾಖಂಡದ ಚಮೋಲಿಯಲ್ಲಿ ಭೂಕುಸಿತ – ಹೈಡೆಲ್ ಪ್ರಾಜೆಕ್ಟ್ ಸೈಟ್‌ನಲ್ಲಿದ್ದ 12 ಕಾರ್ಮಿಕರಿಗೆ ಗಾಯ

    ನಾಗಮ್ಮ ಅವರು ಗುಡ್ಡೆ ಮಠ ದೀಕ್ಷೆ ಪಡೆದಿದ್ದು, ಗುಡ್ಡೆ ಮಠದ ರಾಘವೇಂದ್ರ ಸ್ವಾಮಿ ನೇತೃತ್ವದಲ್ಲಿ ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ದೊಡ್ಮನೆ ಸದಸ್ಯರೆಲ್ಲಾ ನಾಗಮ್ಮ ಅವರ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸುವ ಮೂಲಕ ನಾಗಮ್ಮ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಡಾ.ರಾಜಕುಮಾರ್ ಅವರ ಗಾಜನೂರಿನ ಮನೆಯ ಹಿಂಭಾಗದ ತೋಟದಲ್ಲಿ ನಾಗಮ್ಮ ಪತಿ ವೆಂಕಟೇಗೌಡ ಅವರ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದನ್ನೂ ಓದಿ: ತಾನು ಕಳ್ಳ ಪರರ ನಂಬ ಮಾನಸಿಕತೆಯಿರುವ ರಾಹುಲ್ ಗಾಂಧಿ ಮೆಡಿಕಲ್ ಚೆಕಪ್ ಮಾಡಿಸಿಕೊಳ್ಳಲಿ: ಸಿ.ಟಿ ರವಿ

  • `ವೇದ’ ಸಿನಿಮಾ ನೋಡಿ ಅಪ್ಪಾಜಿ ತರ ಕಾಣ್ತೀಯಾ ಅಂದಿದ್ರು – ಅತ್ತೆ ನಾಗಮ್ಮನ ನೆನೆದು ಶಿವಣ್ಣ ಭಾವುಕ

    `ವೇದ’ ಸಿನಿಮಾ ನೋಡಿ ಅಪ್ಪಾಜಿ ತರ ಕಾಣ್ತೀಯಾ ಅಂದಿದ್ರು – ಅತ್ತೆ ನಾಗಮ್ಮನ ನೆನೆದು ಶಿವಣ್ಣ ಭಾವುಕ

    ವೇದ ಸಿನಿಮಾ ನೋಡಿ ಅಪ್ಪಾಜಿ ತರ ಕಾಣ್ತೀಯಾ ಎಂದು ಹೇಳಿ ತುಂಬಾ ಖುಷಿಪಟ್ಟಿದ್ದರು ಎಂದು ಸೋದರತ್ತೆ ನಾಗಮ್ಮ ಅವರನ್ನು ನೆನೆದು ನಟ ಶಿವರಾಜ್‌ಕುಮಾರ್(Actor Shivarajkumar) ಭಾವುಕರಾದರು.

    ತಮಿಳುನಾಡಿನ (Tamilnadu) ತಾಳವಾಡಿ ತಾಲೂಕಿನ ದೊಡ್ಡಗಾಜನೂರಿನಲ್ಲಿ (Gajnuru) ನಡೆಯುತ್ತಿರುವ ರಾಜ್‌ಕುಮಾರ್ ಸಹೋದರಿ ನಾಗಮ್ಮ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಮಾತನಾಡಿದರು. ಅಪ್ಪಾಜಿ ಕುಟುಂಬದ ಕೊನೆಯ ಕೊಂಡಿ ಇವರು. ಅಪ್ಪು ನಿಧನ ಹೊಂದಿ 4 ವರ್ಷ ಕಳೆಯುತ್ತಾ ಬಂದರೂ ಈವರೆಗೂ ಆ ವಿಚಾರ ಅವರಿಗೆ ಗೊತ್ತಿರಲಿಲ್ಲ. ಅದಲ್ಲದೇ ಸ್ವಂತ ಮಗ ಭರತ್ ನಿಧನದ ಸುದ್ದಿಯೂ ಅವರಿಗೆ ಗೊತ್ತಿರಲಿಲ್ಲ. ನೆನೆಸಿಕೊಂಡರೆ ಮನಸ್ಸಿಗೆ ತುಂಬಾ ಕಷ್ಟವಾಗುತ್ತದೆ. ವೇದ ಪಿಕ್ಚರ್ ನೋಡಿ ತುಂಬಾ ಖುಷಿಪಟ್ಟಿದ್ದರು, ಅಪ್ಪಾಜಿ ತರ ಕಾಣ್ತೀಯಾ ಅಂತ ಹೇಳಿದ್ರು. ನನ್ನ, ಅಪ್ಪು ಸಿನಿಮಾ ತುಂಬಾ ನೋಡುತ್ತಿದ್ದರು. ನಮ್ಮೆಲ್ಲರಿಗೂ ನಾಗತ್ತೆ ಅಂದ್ರೆ ವಿಶೇಷ ಪ್ರೀತಿ ಎಂದು ಹೇಳಿದರು.ಇದನ್ನೂ ಓದಿ: ಗಾಜನೂರು ತೋಟದ ಮನೆಯ ಜಮೀನಿನಲ್ಲಿ ನಾಳೆ ವರನಟ ಡಾ.ರಾಜ್ ಸಹೋದರಿ ಅಂತ್ಯಕ್ರಿಯೆ

    ನಿಜಕ್ಕೂ ನಾಗಮ್ಮ ಇಲ್ಲ ಅಂದ್ರೆ ತುಂಬಾ ನೋವಾಗುತ್ತೆ. ಯಾವಾಗಲೂ ಗಾಜನೂರಿಗೆ ಅತ್ತೆ, ಅವ್ವ ಇಬ್ಬರು ಒಟ್ಟಿಗೆ ಬರುತ್ತಿದ್ದರು. ಅಪ್ಪಾಜಿ ಕಂಡರೆ ಅವರಿಗೆ ತುಂಬಾ ಪ್ರೀತಿ. ಯಾವಾಗಲೂ ಅಪ್ಪಾಜಿ ಜೊತೆಗೆ ಇರುತ್ತಿದ್ದರು. ನನಗೆ ಒಬ್ಬರೇ ತಾಯಿಯಲ್ಲ, ಸಿಕ್ಕಾಪಟ್ಟೆ ತಾಯಂದಿರಿದ್ದಾರೆ, ಅದರಲ್ಲಿ ನಾಗಮ್ಮ ಕೂಡ ಒಬ್ಬರು. ಚೆನ್ನೈ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ನಾಗಮ್ಮವರಿಗೆ ವಹಿಸಲಾಗಿತ್ತು. ಆದರೂ ಕೂಡ ನಮ್ಮ ಬಳಿಯೇ ಕೀ ಕೊಟ್ಟಿರುತ್ತಿದ್ದರು. ನಾನು ಗಾಜನೂರಿಗೆ ಬರಬೇಕು ಅಂದ್ಕೊಡಿದ್ದೆ ಸಾಧ್ಯವಾಗಿರಲಿಲ್ಲ. ಆದರೆ ಶುಕ್ರವಾರ ಶೂಟಿಂಗ್‌ಗಾಗಿ ಗೋವಾಕ್ಕೆ ಹೋಗಿದ್ದೆ. ಹೋದ ತಕ್ಷಣವೇ ನಿಧನ ಸುದ್ದಿ ಗೊತ್ತಾಯಿತು ಎಂದು ತಿಳಿಸಿದರು.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಶುಕ್ರವಾರ ತಮ್ಮ 93ನೇ ವಯಸ್ಸಿನಲ್ಲಿ ಗಾಜನೂರಿನಲ್ಲಿ ಕೊನೆಯುಸಿರೆಳೆದರು. ಇಂದು (ಆ.2) ಗಾಜನೂರಿನ ತೋಟದ ಮನೆಯ ಜಮೀನಿನಲ್ಲಿ ಅಂತಿಮ ವಿಧಿವಿಧಾನ ಆರಂಭವಾಗಲಿದ್ದು, ಈಡಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.ಇದನ್ನೂ ಓದಿ: ಅಣ್ಣಾವ್ರ ಸಹೋದರಿ ನಾಗಮ್ಮ ವಿಧಿವಶ

  • ಅಣ್ಣಾವ್ರ ಸಹೋದರಿ ನಾಗಮ್ಮ ವಿಧಿವಶ

    ಅಣ್ಣಾವ್ರ ಸಹೋದರಿ ನಾಗಮ್ಮ ವಿಧಿವಶ

    ಚಾಮರಾಜನಗರ: ನಟ ಸಾರ್ವಭೌಮ ಡಾ.ರಾಜ್‌ಕುಮಾರ್ (Dr.Rajkumar) ಅವರ ಸಹೋದರಿ ನಾಗಮ್ಮ ಅವರು ಇಂದು (ಆ.1) ವಿಧಿವಶರಾಗಿದ್ದಾರೆ.ಇದನ್ನೂ ಓದಿ: ಬೆಂಗಳೂರು | ರೈಲ್ವೇ ಪ್ಲಾಟ್​ಫಾರ್ಮ್‌ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

    ಚಾಮರಾಜನಗರ ಜಿಲ್ಲೆಯ ಗಾಜನೂರಿನ ಸ್ವಗ್ರಹದಲ್ಲಿ ವಾಸಿಸುತ್ತಿದ್ದ ನಾಗಮ್ಮ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

    ರಾಜ್‌ಕುಮಾರ್ ತಲೆಮಾರಿನ ಕೊನೆಯ ಹಿರಿಯ ಸದಸ್ಯೆಯಾಗಿದ್ದ ಇವರು ಇಂದು ತಮ್ಮ 92ನೇ ವಯಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.ಇದನ್ನೂ ಓದಿ: ಪಬ್, ಹೋಟೆಲ್‌ಗಳಿಗೆ BBMP ಶಾಕ್ – 1 ವಾರದಲ್ಲಿ ಸ್ಮೋಕಿಂಗ್ ಝೋನ್ ನಿರ್ಮಿಸದಿದ್ರೆ ಲೈಸೆನ್ಸ್ ರದ್ದು!

  • ಅಪ್ಪು ಕಂದ ಒಂದ್ಸಲ ಬಂದು ನನ್ನ ನೋಡ್ಕೊಂದು ಹೋಗು: ಪುನೀತ್ ಬಗ್ಗೆ ಸೋದರತ್ತೆ ಮಾತು

    ಅಪ್ಪು ಕಂದ ಒಂದ್ಸಲ ಬಂದು ನನ್ನ ನೋಡ್ಕೊಂದು ಹೋಗು: ಪುನೀತ್ ಬಗ್ಗೆ ಸೋದರತ್ತೆ ಮಾತು

    ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ಹುಟ್ಟುಹಬ್ಬದ ಹಿನ್ನೆಲೆ ಅವರ ಸೋದರ ಅತ್ತೆ ನಾಗಮ್ಮ ವಿಶೇಷವಾಗಿ ಬರ್ತ್‌ಡೇಗೆ ವಿಶ್ ಮಾಡಿದ್ದಾರೆ. ಅಪ್ಪು ನಿನಗೆ 50 ವರ್ಷ ಆಯಿತೇ? ಅಂತಲೂ ಆಶ್ಚರ್ಯಪಟ್ಟಿದ್ದಾರೆ. ಆದರೆ, ನಾಗಮ್ಮಗೆ ಅಪ್ಪು ಇಲ್ಲದೇ ಇರೋದು ಗೊತ್ತೇ ಇಲ್ಲ. ಅಸಲಿ ವಿಚಾರ ತಿಳಿಯದೇ ಅಪ್ಪುಗೆ ವಿಶ್ ಮಾಡಿರುವ ಹಿರಿಯ ಜೀವ ನಾಗಮ್ಮ ವಿಡಿಯೋ ಫ್ಯಾನ್ಸ್ ಪೇಜ್‌ಗಳಲ್ಲಿ ಇದೀಗ ವೈರಲ್ ಆಗುತ್ತಿದೆ.

    ನಿನಗೆ 50 ವರ್ಷ ಆಯ್ತಾ..ಅಬ್ಬಾ ಚೆನ್ನಾಗಿದಿಯಾ ಮಗನೇ? ಎಂದಿದ್ದಾರೆ. ನಿನ್ನ ಇನ್ನೂ ಮಗು ಅಂದುಕೊಂಡಿದ್ದೇನೆ ನಾನು. ನನ್ನನ್ನ ಒಂದ್ ಸಾರಿ ಬಂದು ನೋಡ್ಕೊಂಡ್ ಹೋಗು ಕಂದಾ. ನಿನಗೆ 50 ವರ್ಷ ಆಯ್ತಲ್ಲೋ ಎಂದು ಅವರು ಮಾತನಾಡಿದ್ದಾರೆ. ಅಪ್ಪುಗೆ 50 ವರ್ಷ ತುಂಬಿತು ಎಂದು ತಿಳಿದಾಗ ಖುಷಿಯಿಂದ ಸೋದರ ಅತ್ತೆ ನಾಗಮ್ಮ ಶುಭಹಾರೈಸಿದ್ದಾರೆ. ಇನ್ನೂ ಓದಿ:ಪುನೀತ್‌ ರಾಜ್‌ಕುಮಾರ್‌ ನೆನೆದ RCB ತರಬೇತುದಾರ ದಿನೇಶ್‌ ಕಾರ್ತಿಕ್‌

    ಅದಷ್ಟೇ ಅಲ್ಲ, ವಿಡಿಯೋದಲ್ಲಿ ಅಪ್ಪು ಬಗೆಗಿನ ಒಂದು ಘಟನೆಯನ್ನ ನಾಗಮ್ಮ ನೆನಪಿಸಿಕೊಂಡಿದ್ದಾರೆ. ಅಪ್ಪು ಬಂದಾಗ ಫ್ಯಾನ್ಸ್ ಮನೆ ಬಳಿ ಬಂದರು. ಎಲ್ಲರೂ ಬಂದವರೇ ಫೋಟೋಗಳನ್ನೆ ತೆಗೆಸಿಕೊಂಡ್ರು. ಆ ದಿನ ಶೂಟಿಂಗ್ ಮಾಡೋಕೂ ಬಿಡಲೇ ಇಲ್ಲ. ಬರೀ ಫೋಟೋ ತೆಗೆಸಿಕೊಳ್ಳುವುದೇ ಆಯಿತು ನೋಡಿ ಅಂತಲೇ ನಾಗಮ್ಮ ಹೇಳಿಕೊಂಡಿದ್ದಾರೆ. ಇನ್ನೂ ಅಪ್ಪು ಮೇಲಿನ ಅವರ ಪ್ರೀತಿ ನೋಡಿದ್ರೆ ಎಂತಹವರಿಗೂ ಹೃದಯಕ್ಕೆ ಟಚ್ ಆಗುತ್ತದೆ.

    ಅಂದಹಾಗೆ, ಪುನೀತ್ ಅವರು 46ನೇ ವಯಸ್ಸಿಯಲ್ಲಿ ನಿಧನರಾದರು. 2021ರ ಅಕ್ಟೋಬರ್ 2ರಂದು ಅಪ್ಪು ಇಹಲೋಕ ತ್ಯಜಿಸಿದರು.

  • ಕರ್ಮಭೂಮಿಯಿಂದ ಪುಣ್ಯ ಭೂಮಿವರೆಗೂ ಅಮರ ಜ್ಯೋತಿ ಯಾತ್ರೆ: ಡಾ.ರಾಜ್ ಸಹೋದರಿ ನಾಗಮ್ಮರಿಂದ ಚಾಲನೆ

    ಕರ್ಮಭೂಮಿಯಿಂದ ಪುಣ್ಯ ಭೂಮಿವರೆಗೂ ಅಮರ ಜ್ಯೋತಿ ಯಾತ್ರೆ: ಡಾ.ರಾಜ್ ಸಹೋದರಿ ನಾಗಮ್ಮರಿಂದ ಚಾಲನೆ

    ಚಾಮರಾಜನಗರ: ಏಪ್ರಿಲ್ 24 ರಂದು ದಿವಂಗತ ಮೇರುನಟ ಡಾ.ರಾಜ್‍ಕುಮಾರ್ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಅವರ ಜನ್ಮಸ್ಥಳದಿಂದ ಸಮಾಧಿಯವರೆಗೆ ಅಮರ ಜ್ಯೋತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಡಾ.ರಾಜ್ ಹಾಗೂ ಡಾ.ಪುನೀತ್ ರಾಜ್‍ಕುಮಾರ್ ಅವರ ಅಮರಜ್ಯೋತಿ ಯಾತ್ರೆಯನ್ನು ರಾಜ್ ಹುಟ್ಟೂರು ದೊಡ್ಡಗಾಜನೂರಿನಲ್ಲಿ ಇಂದು(ಗುರುವಾರ) ಚಾಲನೆ ನೀಡಲಾಯಿತು.

    ಗಾಜನೂರಿನಲ್ಲಿರುವ ಡಾ.ರಾಜ್ ಸಹೋದರಿ ನಾಗಮ್ಮರಿಂದ ಜ್ಯೋತಿ ಬೆಳಗಿಸಿ ಹಸ್ತಾಂತರಿಸುವ ಮೂಲಕ ಕರ್ಮಭೂಮಿಯಿಂದ ಪುಣ್ಯಭೂಮಿವರೆಗಿನ ಅಮರಜ್ಯೋತಿ ಯಾತ್ರೆ ಮೆರವಣಿಗೆಗೆ ಚಾಲನೆ ನೀಡಿದರು. ದೊಡ್ಮನೆ ಕುಟುಂಬದ ಅಭಿಮಾನಿಗಳ ಬಳಗದಿಂದ ಹಮ್ಮಿಕೊಂಡಿರುವ ಈ ಯಾತ್ರೆ ಇಂದು ಗಾಜನೂರಿನಿಂದ ಹೊರಟು ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಮೂಲಕ ತೆರಳಿ ಏಪ್ರಿಲ್ 24 ರಂದು ಬೆಂಗಳೂರಿಗೆ ತೆರಳಿ ರಾಜ್ ಹಾಗೂ ಪುನೀತ್‍ ರಾಜ್‍ಕುಮಾರ್ ಸಮಾಧಿ ತಲುಪಲಿದೆ. ಇದನ್ನೂ ಓದಿ:  ಧ್ವಂಸಗೊಂಡ ಅಪ್ಪನ ಅಂಗಡಿಯಲ್ಲಿ ಕಾಯಿನ್ ಸಂಗ್ರಸುತ್ತಿದ್ದ ಬಾಲಕ – ಫೋಟೋ ವೈರಲ್ 

    ಡಾ.ರಾಜ್ ಹಾಗೂ ಡಾ.ಪುನೀತ್ ರಾಜ್‍ಕುಮಾರ್ ಎಂದೆಂದಿಗೂ ಅಮರ ಎಂದು ಸಾರಲು ಹಾಗೂ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಆಶಿಸಿ ಈ ಅಮರ ಜ್ಯೋತಿ ಯಾತ್ರೆ ನಡೆಸಲಾಗುತ್ತಿದೆ ಎಂದು ದೊಡ್ಮನೆ ಕುಟುಂಬದ ಅಭಿಮಾನಿಗಳ ಬಳಗದ ಅಧ್ಯಕ್ಷ ಮುನಿಯಪ್ಪ ತಿಳಿಸಿದರು.