Tag: ನಾಗಮಂಡಲ

  • ನಾಗಮಂಡಲ ಎಂದರೇನು? ಇದರ ಆಚರಣೆ, ಮಹತ್ವವೇನು?

    ನಾಗಮಂಡಲ ಎಂದರೇನು? ಇದರ ಆಚರಣೆ, ಮಹತ್ವವೇನು?

    ಭಾರತದ ದಕ್ಷಿಣ ಭಾಗದಲ್ಲಿ ಆಚರಿಸಲಾಗುವ ಪ್ರಮುಖ ನಾಗಪೂಜಾ ವಿಧಾನಗಳಲ್ಲಿ ನಾಗಮಂಡಲ (Nagamandala) ಪೂಜೆಯು ಅತ್ಯಂತ ಪವಿತ್ರವಾದ ಹಾಗೂ ಶ್ರದ್ಧಾ ಭಕ್ತಿಯಿಂದ ಕೂಡಿರುವ ಒಂದು ಶಕ್ತಿಶಾಲಿ ಆಚರಣೆ ಆಗಿದೆ. ಕರಾವಳಿ ಕರ್ನಾಟಕದ ತುಳುನಾಡಿನಲ್ಲಿ ಇದು ವಿಶೇಷವಾಗಿ ಪ್ರಸಿದ್ಧವಾಗಿದ್ದು, ಈ ನಾಗಮಂಡಲಕ್ಕೆ ನಾನಾ ಅಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಜ್ಯೋತಿಷ್ಯಶಾಸ್ತ್ರದ ಹಿನ್ನೆಲೆಯನ್ನು ಹೊಂದಿದೆ.

    ನಾಗಮಂಡಲ ಎಂದರೇನು?

    ನಾಗಮಂಡಲ ಎಂದರೆ ನಾಗ ದೇವತೆಯು ನೃತ್ಯ ರೂಪದಲ್ಲಿ ಪೂಜಿಸಲ್ಪಡುವ ಒಂದು ವಿಶಿಷ್ಟ ಆಚರಣೆ. ಇದು ನಾಗದೋಷ ನಿವಾರಣೆಗೆ ಮತ್ತು ಕುಟುಂಬದ ಕ್ಷೇಮ ಸಮೃದ್ಧಿಗೆ ಮಾಡಲಾಗುವ ಒಂದು ದೇವಪೂಜೆ. ಇದರಲ್ಲಿ ಎರಡು ಪ್ರಮುಖ ಪಾತ್ರಗಳು ಇರುತ್ತವೆ. ಅವುಗಳೆಂದರೆ ವೈದ್ಯರು(ಹೆಣ್ಣು ನಾಗ) ಮತ್ತು ಪಾತ್ರಿ(ನಾಗದ ಪುರುಷನ ಪ್ರತಿನಿಧಿ).

    ಆಚರಣೆ ಹೇಗೆ ನಡೆಯುತ್ತದೆ?

    ಮಂಡಲ: ಪೂಜೆಗೆ ಮುನ್ನ ನೆಲದಲ್ಲಿ ನಾಗ ದೇವರಿಗೆ ಸಂಬಂಧಿಸಿದ ರಂಗೋಲಿಯನ್ನು ಬಿಡಿಸಲಾಗಿರುತ್ತದೆ. ಇದನ್ನು ನಾಗಮಂಡಲ ಎಂದು ಕರೆಯುತ್ತಾರೆ. 2-3 ಅಡಿ ಎತ್ತರದ ಚೌಕಾಕಾರದ ವೇದಿಕೆಯನ್ನು ನಿರ್ಮಿಸುತ್ತಾರೆ. ಚಪ್ಪರದ ಸುತ್ತ ರೇಷ್ಮೆ ವಸ್ತ್ರದಿಂದ ಅಲಂಕರಿಸಿರುತ್ತಾರೆ. ಚಪ್ಪರವನ್ನು ಅಡಿಕೆಯ ಹಿಂಗಾರದಿಂದ, ಅಡಿಕೆಯ ಮಾಲೆಯಿಂದ, ಬಾಳೆಗೊನೆ ಹಾಗೂ ಎಳನೀರಿನಿಂದ ಶೃಂಗರಿಸುತ್ತಾರೆ.

    ಕೊಳನಾಗ: ಏಳು ಹೆಡೆಯ ದೊಡ್ಡ ಸರ್ಪದ ಚಿತ್ರಣಕ್ಕೆ ಕೊಳನಾಗ, ಗುಳಿಕ, ಅಥವಾ ಕಾಡ್ಯ ಎನ್ನುತ್ತಾರೆ.

    ನಾಗಯಕ್ಷ: ಕೊಳನಾಗನ ಸಮೀಪದಲ್ಲಿಯೇ ಕೇವಲ ಹೆಡೆಯಂತೆ ಕಾಣುವ ಒಂದು ರೂಪಕ್ಕೆ ಎರಡು ಕಣ್ಣುಗಳನ್ನು ಚಿತ್ರಿಸುತ್ತಾರೆ. ಇದರ ಆಕಾರ ಶಂಖವನ್ನು ಹೋಲುತ್ತದೆ. ಇದನ್ನು ಕೆಲವರು ಮರಿನಾಗ ಎಂದರೆ ಕೆಲವರು ನಾಗಯಕ್ಷಿ ಎನ್ನುತ್ತಾರೆ.

    ಬ್ರಹ್ಮ: ಕೊಳನಾಗನ ಎಡಭಾಗದಲ್ಲಿ ಕೆಳಗೆ ಒಂದು ವಿಶಿಷ್ಟ ಮಾನವಾಕೃತಿಯನ್ನು ಚಿತ್ರಿಸುತ್ತಾರೆ. ಇದಕ್ಕೆ ಕೈ ಕಾಲುಗಳಿಲ್ಲ. ಗಂಡುರೂಪ, ಮೀಸೆ ಇದೆ. ಹೊರಚಾಚಿದಂತಿರುವ ಹಲ್ಲುಗಳು, ಹಾಗೂ ಎರಡು ಕೋರೆ ಹಲ್ಲುಗಳಿವೆ. ತಲೆಗೆ ಚೂಪಾದ ಟೊಪ್ಪಿಗೆಯನ್ನು ಧರಿಸಿದಂತೆ ಕಾಣುತ್ತದೆ. ಇದನ್ನು ವೈದ್ಯರು ಬ್ರಹ್ಮಯಕ್ಷ ಎನ್ನುತ್ತಾರೆ. ತುಳುವರು ಬೆರ್ಮೆರ್ ಎನ್ನುತ್ತಾರೆ.

    ತ್ರಿಶೂಲ: ನಾಗನ ಹೆಡೆಯ ಮೇಲುಭಾಗಕ್ಕೆ ಒಂದು ತ್ರಿಶೂಲವನ್ನು ಬರೆಯುತ್ತಾರೆ. ಇದರ ಕೆಳಭಾಗವು ಬಲಭಾಗಕ್ಕೆ ಸ್ವಲ್ಪ ಬಾಗಿರುತ್ತದೆ.

    ಗಣಪತಿ: ಬಲತುದಿಗೆ ಸೇರಿಕೊಂಡಂತೆ ತ್ರಿಕೋನಗಳಿಂದ ರಚಿತವಾದ ವೃತ್ತಾಕಾರವಿದೆ. ಇದು ಶ್ರೀಚಕ್ರವನ್ನು ಹೋಲುತ್ತದೆ. ಇದಕ್ಕೆ ಮಂಡಲವನ್ನು ರಚಿಸುವ ವೈದ್ಯರು ಗಣಪತಿ ಎನ್ನುತ್ತಾರೆ.

    ಪ್ರೇತಯಕ್ಷ: ಇದೊಂದು ಎರಡು ಕಣ್ಣುಗಳುಳ್ಳ ವಿಶಿಷ್ಟ ಆಕೃತಿಯಾಗಿದೆ.

    ನಾಗಮಂಡಲ ನೃತ್ಯ: ನಾಗಮಂಡಲದ ಸುತ್ತ ನೃತ್ಯದಲ್ಲಿ ಇಬ್ಬರು ಪ್ರಧಾನ ಪಾತ್ರ ವಹಿಸುತ್ತಾರೆ. ಒಬ್ಬರು ನಾಗಪಾತ್ರಿಯಾಗಿರುತ್ತಾರೆ. ಅವರು ಮುಂಗೈಗೆ ಕಡಗ, ಮೈಗೆ ಕೆಂಪುಬಟ್ಟೆ, ಕೆದರಿದ ಕೂದಲು, ಕೊರಳಿನಲ್ಲಿ ನಾಗನ ಚಿಹ್ನೆಯ ಪದಕವಿರುವ ಹಾರವನ್ನು ಧರಿಸಿರುತ್ತಾರೆ.

    ಇನ್ನೊಂದು ಪ್ರಧಾನ ಪಾತ್ರ ವೈದ್ಯರು ಎನ್ನುತ್ತಾರೆ. ವೈದ್ಯರು ಅರ್ಧನಾರಿ ವೇಷವನ್ನು ಧರಿಸಿರುತ್ತಾರೆ. ಯಕ್ಷಗಾನ ಬಡಗುತಿಟ್ಟಿನ ಸ್ತ್ರೀವೇಷವನ್ನು ಹೋಲುವ ಇವರು ಕೆಂಪುಬಣ್ಣದ ಚೌಕುಳಿಸೀರೆ, ಕಾಲಿಗೆ ಗೆಜ್ಜೆ, ಕೊರಳಿಗೆ ಗುಂಡುಸರ, ಸೊಂಟಕ್ಕೆ ಬೆಳ್ಳಿಪಟ್ಟಿ, ಕೈಗೆ ಚಿನ್ನದ ಕಡಗ, ತಲೆಗೆ ಮುಂಡಾಸು, ಜರಿರುಮಾಲು ಧರಿಸುತ್ತಾರೆ. ಹಾಡುವ ಹಿಮ್ಮೇಳದ ಮೂರು ಜನ ವೈದ್ಯರು ಬಿಳಿಧೋತರವನ್ನು ಕಚ್ಚೆ ಹಾಕಿ ಉಟ್ಟು, ಬಿಳಿ ಅಂಗಿ ತೊಟ್ಟಿರುತ್ತಾರೆ. ನಾಗಮಂಡಲದ ವೇದಿಕೆಯ ಮಧ್ಯಭಾಗದಲ್ಲಿ ರಚಿಸಿದ ಚಿತ್ತಾರದ ಸುತ್ತ ಪಾತ್ರಿ ಮತ್ತು ವೈದ್ಯರು ನರ್ತಿಸುತ್ತಾರೆ.

    ನಾಗಮಂಡಲ ಪೂಜೆಯ ಹಿಂದಿನ ತಾತ್ವಿಕ ಅರ್ಥ : ನಾಗ ದೇವತೆಗಳನ್ನು ಭೂಮಿ, ಜಲ, ಅಡಿಸ್ಥಾನ ಶಕ್ತಿಗಳ ಪ್ರತಿನಿಧಿಗಳಾಗಿ ಪರಿಗಣಿಸಲಾಗುತ್ತದೆ. ಈ ಪೂಜೆಯು ದುಷ್ಟಶಕ್ತಿಗಳನ್ನು ನಿವಾರಿಸಿ ಆತ್ಮಶುದ್ಧಿಗೆ ಕಾರಣವಾಗುತ್ತದೆ. ಮನೆಯಲ್ಲಿ ಸಂತಾನ ಸಮಸ್ಯೆ, ಕುಲದ ಅಭಿವೃದ್ದಿ ಅಡಚಣೆ, ವಿವಾಹ ವಿಳಂಬ, ವ್ಯಾಧಿ ಸಮಸ್ಯೆಗಳಾಗಿದ್ದರೆ ನಾಗಮಂಡಲ ಮಾಡಿದರೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಇದೆ.

    ನಾಗಮಂಡಲ ಪೂಜೆಯು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ. ಇದು ಪ್ರಕೃತಿ, ಪವಿತ್ರತೆಯ ಮಿಶ್ರಣವಾಗಿದೆ. ಪೂರ್ವಜರಿಂದ ಬಂದಿರುವ ಈ ಪಾರಂಪರಿಕ ಆಚರಣೆಯು ಕರಾವಳಿ ಭಾಗಗಳಲ್ಲಿ ಇಂದಿಗೂ ಚಾಲ್ತಿಯಲ್ಲಿದೆ.

  • ಮತ್ತೆ ಹಳೆಯ ವಿಜಯಲಕ್ಷ್ಮಿಯಾಗಿ ತೆರೆ ಮೇಲೆ ಬರ್ತೇನೆ: ನಾಗಮಂಡಲ ನಟಿ

    ಮತ್ತೆ ಹಳೆಯ ವಿಜಯಲಕ್ಷ್ಮಿಯಾಗಿ ತೆರೆ ಮೇಲೆ ಬರ್ತೇನೆ: ನಾಗಮಂಡಲ ನಟಿ

    – ಬಿಗ್‍ಬಾಸ್ ಮನೆಗೂ ಆಫರ್ ಬಂದಿದೆ

    ಬೆಂಗಳೂರು: ಮಾತೃ ವಿಯೋಗ ಮತ್ತು ಹಲವು ವೈಯಕ್ತಿಕ ಸಮಸ್ಯೆಗಳಿಂದ ನೊಂದಿದ್ದ ನಟಿ ವಿಜಯಲಕ್ಷ್ಮಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ನನ್ನ ತಂದೆಯನ್ನ ಕಳೆದುಕೊಂಡ ಮೇಲೆ ಸಾಕಷ್ಟು ಕಷ್ಟಕ್ಕೆ ಸಿಲುಕಿದ್ದೆ. ಈ ವೇಳೆ ಜೀವನದಲ್ಲಿ ಹಲವು ಕೆಟ್ಟ ಘಟನೆಗಳನ್ನ ಅನುಭವಿಸಿದ್ದೇನೆ. ಈ ನಡುವೆ ನಾನು ನನ್ನ ತಾಯಿಯನ್ನ ಕಳೆದುಕೊಂಡೆ, ನನ್ನ ಅಕ್ಕನ ಆರೋಗ್ಯವು ಹಾಳಾಗಿತ್ತು. ಈ ಎಲ್ಲಾ ಕಷ್ಟಗಳಿಂದ ನಾನು ನೊಂದಿದ್ದೆ ಎಂದರು. ಇದನ್ನೂ ಓದಿ: ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ: ನಟಿ ವಿಜಯಲಕ್ಷ್ಮಿ

    ಈಗ ನನಗೆ ನನ್ನ ಕನ್ನಡ ಅಭಿಮಾನಿಗಳು ನನ್ನ ಕುಟುಂಬವಾಗಿ ನನಗೆ ಸಹಾಯ ಮಾಡಿದ್ದಾರೆ. ನಾನು ಅವರೆಲ್ಲರಿಗೂ ಚಿರ ಋಣಿ. ಮುಂದಿನ ದಿನಗಳಲ್ಲಿ ನಾನು ಮತ್ತೆ ಈ ಹಿಂದಿನ ವಿಜಯಲಕ್ಷ್ಮಿಯಂತೆ ಪರೆದೆ ಮೇಲೆ ನಿಮ್ಮೆಲ್ಲರ ಆಶೀರ್ವಾದದಿಂದ ಕಾಣಿಸಿಕೊಳ್ಳುತ್ತೇನೆ. ಜೊತೆಗೆ ಬಿಗ್ ಬಾಸ್ ಮನೆಗೂ ಸಹ ಆಫರ್ ಬಂದಿದೆ. ಅಲ್ಲದೆ ಈಗಾಗಲೇ ಹಲವು ಕಥೆಗಳು ಸಹ ನನ್ನನ್ನು ಹುಡುಕಿ ಬರುತ್ತಿವೆ. ನಾನು ಖಂಡಿತವಾಗಿಯೂ ಮತ್ತೆ ಪರದೆಯ ಮೇಲೆ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದರು.

  • ಕೃಷ್ಣಮಠದಲ್ಲಿ ನಾಗನಿಗೆ ಢಮರು ಸೇವೆ- ಮಠದಲ್ಲಿ ನಾಗಮಂಡಲ ಆರಂಭ ಮಾಡಿದ್ಯಾರು?

    ಕೃಷ್ಣಮಠದಲ್ಲಿ ನಾಗನಿಗೆ ಢಮರು ಸೇವೆ- ಮಠದಲ್ಲಿ ನಾಗಮಂಡಲ ಆರಂಭ ಮಾಡಿದ್ಯಾರು?

    ಉಡುಪಿ: ಶ್ರೀಕೃಷ್ಣ ಉಡುಪಿ ಮಠದ ಆರಾಧ್ಯ ದೈವ. ಮುಖ್ಯಪ್ರಾಣ ಊರಿನ ಭಕ್ತರಿಗೆ, ಊರಿಗೆ ಶಕ್ತಿಕೊಡುವ ದೇವರು. ಈ ಇಬ್ಬರಿಗೆ ಪ್ರತಿದಿನ ಕೃಷ್ಣಮಠದಲ್ಲಿ ಪೂಜೆ ನಡೆಯುತ್ತದೆ. ಈ ನಡುವೆ ಎಲ್ಲರ ರಕ್ಷಕನಾಗಿರುವ- ಕಲಿಯುಗದಲ್ಲೂ ಕಾಣುವ ದೇವರು ಎಂದು ಪ್ರಸಿದ್ಧಿ ಪಡೆದಿರುವ ನಾಗರಾಜನಿಗೆ ಢಮರು ಸೇವೆ ನಡೆದಿದೆ. ಇಷ್ಟಕ್ಕೂ ಪಲಿಮಾರು ಪರ್ಯಾಯ ಮುಗಿಯುತ್ತಿರುವ ಸಂದರ್ಭದಲ್ಲಿ ನಡೆದ ವಿಶೇಷ ನಾಗಮಂಡಲ ಸೇವೆಗೊಂದು ಧಾರ್ಮಿಕ ಹಿನ್ನೆಲೆ ಇದೆ.

    ನಾಗ ತುಳುವರ ಆರಾಧ್ಯ ಶಕ್ತಿ. ಉಡುಪಿ- ದಕ್ಷಿಣ ಕನ್ನಡದಲ್ಲಿ ನಾಗದೇವರ ಪೂಜೆಗೆ ವಿಶೇಷ ಸ್ಥಾನಮಾನವಿದೆ. ನಾಗಮಂಡಲೋತ್ಸವ ನಾಗರಾಜನಿಗೆ ಬಲು ಪ್ರಿಯವಾದ ಸೇವೆ ಎಂಬೂದು ಕರಾವಳಿಗರ ನಂಬಿಕೆ. ಇಷ್ಟಾರ್ಥ ಸಿದ್ಧಿ, ಕಷ್ಟ ಪರಿಹಾರ, ಹರಕೆ ತೀರಿಸಲು ನಾಗಮಂಡಲ ಸೇವೆ ಮಾಡುವುದು ವಾಡಿಕೆ. ಕಡೆಗೋಲು ಶ್ರೀಕೃಷ್ಣ ಮಠದಲ್ಲಿ ವಿಶೇಷ ನಾಗಮಂಡಲೋತ್ಸವ ನಡೆದಿದೆ.

    ಪರ್ಯಾಯ ಪಲಿಮಾರು ಸ್ವಾಮೀಜಿ ಮಠದ ಕಡೆಯಿಂದ ನಾಗಾರಾಧನೆ ನಡೆದಿದೆ. ಬಡಗು ಮಾಳಿಗೆ ಮುಂಭಾಗದ ನಾಗರಾಜಗುಡಿಯಲ್ಲಿ ನಾಗಮಂಡಲ ಸೇವೆ ನಡೆದಿದೆ. ಪರ್ಯಾಯ ವಿದ್ಯಾಧೀಶ ಸ್ವಾಮೀಜಿಯ ಪರ್ಯಾಯ ಜನವರಿ 18ಕ್ಕೆ ಮುಕ್ತಾಯವಾಗಲಿದ್ದು, ಪರ್ಯಾಯ ಪೂಜೆಯಿಂದ ಶ್ರೀಗಳು ಏಳುವ ಮುನ್ನ ನಾಗಮಂಡಲ ನೀಡುವುದು ಸಂಪ್ರದಾಯ.

    ಈಗಿನ ಪರ್ಯಾಯ ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ವಾದಿರಾಜ ಗುರುಸಾರ್ವಭೌಮರ ಕಾಲದಿಂದ ನಾಗಮಂಡಲ ನಡೆದುಕೊಂಡು ಬಂದಿದೆ. ಸಂಪತ್ತಿನ ರಕ್ಷಕನಿಗೆ ಸೇವೆ ಕೊಡುವುದು ನಮ್ಮ ಕರ್ತವ್ಯ. ಕರಾವಳಿಯ ನಾಸ್ತಿಕ ಕುಟುಂಬವೂ ವರ್ಷಕ್ಕೊಮ್ಮೆಯಾದರೂ ಯಾವುದಾದರೂ ನಾಗಸೇವೆ ಮಾಡದೆ ಇರುವುದಿಲ್ಲ ಎಂದರು.

    ಬೃಹತ್ ಮಂಡಲ, ಅದರ ಸುತ್ತಲೂ ಅಡಿಕೆ ಮರದ ಹಿಂಗಾರ, ಮಂಡಲ ಪೂಜೆ ಹಾಲಿಟ್ಟು ಸೇವೆಯ ಮೂಲಕ ನಾಗಮಂಡಲಕ್ಕೆ ಚಾಲನೆ ಸಿಗುತ್ತದೆ. ಅದ್ಧೂರಿ ಮಂಟಪದಲ್ಲಿ ನಾಗಪಾತ್ರಿ ಮತ್ತು ನಾಗ ಕನ್ನಿಕೆಯ ನರ್ತನ ಸೇವೆ ಕಣ್ಣಿಗೆ ಹಬ್ಬ ತರುತ್ತದೆ. ಮಂಡಲದ ಸುತ್ತ ನಾಗಪಾತ್ರಿ ಮತ್ತು ಕನ್ನಿಕೆ ನರ್ತಿಸುತ್ತಾರೆ. ಸರ್ಪಗಳ ಮಿಥುನ ಪ್ರಕ್ರಿಯೆಯೇ ಧಾರ್ಮಿಕ ವಿಧಿಯ ವಸ್ತು. ನಾಗ ಪಾತ್ರಿ ಬುಟ್ಟಿಗಟ್ಟಲೆ ಹಿಂಗಾರವನ್ನು ಅರ್ಪಣೆ ಮಾಡಿಕೊಳ್ಳುವ ಪ್ರಕ್ರಿಯೆ ಜನರನ್ನು ಭಕ್ತಿಕಡಲಲ್ಲಿ ತೇಲುವಂತೆ ಮಾಡಿತು.

    ಹಿಂಗಾರದಿಂದ ಹೊರ ಸೂಸುವ ಪರಿಮಳ ಗಂಡು-ಹೆಣ್ಣಿನ ನಡುವಿನ ಸಂತಾನ ಪ್ರಾಪ್ತಿಗೆ ಉಪಯುಕ್ತ ಎಂಬ ನಂಬಿಕೆಯೂ ಜನರಲ್ಲಿದೆ. ಕೃಷ್ಣಮಠದ ನಾಗಮಂಡಲ ಸೇವೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು. ಅಪರೂಪದ ಸೇವೆಯನ್ನು ಕೆಲ ಶ್ರೀಮಂತ ಕುಟುಂಬಗಳು ಮಾಡಿಸುತ್ತದೆ. ಕೃಷ್ಣಮಠದಲ್ಲಿ ಎರಡು ವರ್ಷಕ್ಕೊಮ್ಮೆ ನಾಗಮಂಡಲ ಸೇವೆ ನಡೆದುಕೊಂಡು ಬಂದಿದೆ.

  • ದಕ್ಷಿಣ ಕನ್ನಡದಲ್ಲಿ ಅದ್ಧೂರಿ ನಾಗಮಂಡಲ – ರಾತ್ರಿಯಿಡೀ ನಡೀತು ನಾಗದೇವನ ಪೂಜೆ

    ದಕ್ಷಿಣ ಕನ್ನಡದಲ್ಲಿ ಅದ್ಧೂರಿ ನಾಗಮಂಡಲ – ರಾತ್ರಿಯಿಡೀ ನಡೀತು ನಾಗದೇವನ ಪೂಜೆ

    ಮಂಗಳೂರು: ಕರಾವಳಿಯ ಪ್ರಸಿದ್ಧ ಆರಾಧನೆಗಳಲ್ಲಿ ನಾಗಮಂಡಲ ಕೂಡಾ ಒಂದು. ನಾಗದೋಷ ಪರಿಹಾರಕ್ಕೆ ಅಂತಾನೇ ನಾಗಮಂಡಲ ಆರಾಧನೆ ಮಾಡಲಾಗುತ್ತದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿರುವ ಮಣಿಲ ಶ್ರೀ ಧಮ್ಮ ದೇವಸ್ಥಾನದಲ್ಲಿ ನಾಗಮಂಡಲ ನಡೆಯಿತು. ಬೆಳಗ್ಗೆಯಿದ ಶುರುವಾಗಿ 24 ಗಂಟೆ ಅದ್ಧೂರಿಯಾಗಿ ನಡೆದ ನಾಗಪೂಜೆಗೆ ವೇದಮೂರ್ತಿ ಕಕ್ಕುಂಜೆ ನಾಗನಾಂದ ವಾಸುದೇವ ಆಚಾರ್ಯ, ಕೃಷ್ಣಪ್ರಸಾದ್ ವೈದ್ಯ ಮುಡೂರು ನಾಗಪತ್ರಿಗಳಾಗಿ ಭಾಗವಹಿಸಿದ್ರು.

    ಬೆಳಗ್ಗೆ ನಾಗಪೂಜೆಯೊಂದಿಗೆ ನಾಗಮಂಡಲ ಆರಂಭವಾಯಿತು. ಮಣಿಲ ದೇವಸ್ಥಾನದ ಮೋಹನದಾಸ ಪರಮಹಂಸ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಾಗಮಂಡಲ ನೆರವೇರಿತು. ಇದರಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ರು.