Tag: ನಾಗಮಂಗಲ ಪೊಲೀಸ್

  • ನಾಗಮಂಗಲ ಗಲಭೆಯಲ್ಲಿ ಹಾನಿಗೊಳಗಾದ ಅಂಗಡಿ ಮಾಲೀಕರಿಗೆ ಪರಿಹಾರ ವಿತರಣೆ

    ನಾಗಮಂಗಲ ಗಲಭೆಯಲ್ಲಿ ಹಾನಿಗೊಳಗಾದ ಅಂಗಡಿ ಮಾಲೀಕರಿಗೆ ಪರಿಹಾರ ವಿತರಣೆ

    ಮಂಡ್ಯ: ನಾಗಮಂಗಲದಲ್ಲಿ (Nagamangala) ಗಣೇಶ ಮೂರ್ತಿ ವಿಸರ್ಜನೆ ವೇಳೆ ಉಂಟಾದ ಗಲಭೆಯಿಂದ ಹಾನಿಗೊಳಗಾದ ಅಂಗಡಿ ಮಾಲೀಕರಿಗೆ ಕೊನೆಗೂ ಸರ್ಕಾರ ಪರಿಹಾರ ನೀಡಿದೆ.

    ನಾಗಮಂಗಲ ಗಲಭೆಯಲ್ಲಿ (Nagamangala Violence) ಹಲವು ಅಂಗಡಿ ಮುಂಗಟ್ಟುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಕಾರಣ ಸುಮಾರು 22 ಮಂದಿ ವ್ಯಾಪಾರಸ್ಥರಿಗೆ ವೃತ್ತಿ ಜೀವನ ನಡೆಸಲು ತೊಂದರೆಯಾಗಿತ್ತು. ಇಂದು (ನ.22) ಸಚಿವ ಚಲುವರಾಯಸ್ವಾಮಿ ತೊಂದರೆಗೀಡಾಗಿದ್ದ ವ್ಯಾಪರಸ್ಥರು ಹಾಗೂ ಅಂಗಡಿ ಮಾಲೀಕರಿಗೆ ಸರ್ಕಾರದಿಂದ (Government) ನೀಡಿದ್ದ ಒಟ್ಟು 76,45,000 ರೂ. ಪರಿಹಾರ ಧನ ವಿತರಣೆ ಮಾಡಿದ್ದಾರೆ. ಇದನ್ನೂ ಓದಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಹೆಚ್ಚುವರಿ 10,000ಕ್ಕೂ ಹೆಚ್ಚು ಸೈನಿಕರ ನಿಯೋಜನೆ

    ನಾಗಮಂಗಲ ತಾಲ್ಲೂಕು‌ ಕಚೇರಿಯಲ್ಲಿ 22 ಅಂಗಡಿ ಮಾಲೀಕರಿಗೆ 26,45,000 ರೂ. ಹಾಗೂ 22 ಸಣ್ಣಪುಟ್ಟ ವ್ಯಾಪಾರಿಗಳಿಗೆ 47,85,000 ರೂ. ಪರಿಹಾರ ಮಂಜೂರಾತಿ ಪತ್ರವನ್ನು ವಿತರಿಸಿದರು. ಇದನ್ನೂ ಓದಿ: ಯಾರಾಗ್ತಾರೆ ಮಹಾರಾಷ್ಟ್ರ ಸಿಎಂ – ರಾತ್ರೋರಾತ್ರಿ ತಲೆ ಎತ್ತಿದೆ ಅಜಿತ್ ಪವಾರ್ ಪೋಸ್ಟರ್

    ಸರ್ಕಾರದಿಂದ ಇಂತಹ ಅವಘಡ ಪ್ರಕರಣಗಳಲ್ಲಿ ಸುಮಾರು 10,000 ರೂ. ಮಾತ್ರ ಪರಿಹಾರ ನೀಡಲಾಗುತ್ತಿತ್ತು, ಇದರಿಂದ ವೃತ್ತಿ ಜೀವನ‌ ಪುನಃ ಕಟ್ಟಿಕೊಳ್ಳಲು ಸಾಕಾಗುವುದಿಲ್ಲ ಎಂದು ವರ್ತಕರು ಮನವಿ ಮಾಡಿದ್ದರು. ವರ್ತಕರ ಮನವಿ ಪುರಸ್ಕರಿಸಿದ ಸರ್ಕಾರ ದೊಡ್ಡ ಮೊತ್ತದ ಪರಿಹಾರ ನೀಡಿದೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ: ಸಾಂಗ್ಲಿ ರಸಗೊಬ್ಬರ ಘಟಕದಲ್ಲಿ ಗ್ಯಾಸ್ ಲೀಕ್: ಮೂವರ ಸಾವು, 9 ಮಂದಿ ಆಸ್ಪತ್ರೆಗೆ ದಾಖಲು

  • ನಾಗಮಂಗಲದ ಕೋಮು ಗಲಭೆಗೆ ಕೇರಳ ಲಿಂಕ್ – ಕೇರಳ ಮುಸ್ಲಿಮರ ಕೈವಾಡ ಇದ್ಯಾ? – ವಿಶ್ವ ಹಿಂದೂ ಪರಿಷತ್‌ ಆರೋಪ ಏನು?

    ನಾಗಮಂಗಲದ ಕೋಮು ಗಲಭೆಗೆ ಕೇರಳ ಲಿಂಕ್ – ಕೇರಳ ಮುಸ್ಲಿಮರ ಕೈವಾಡ ಇದ್ಯಾ? – ವಿಶ್ವ ಹಿಂದೂ ಪರಿಷತ್‌ ಆರೋಪ ಏನು?

    – FIRನಲ್ಲಿರೋ 74 ಆರೋಪಿಗಳ ಪೈಕಿ ಇಬ್ಬರು ಕೇರಳದವರು!

    ಮಂಡ್ಯ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟದಿಂದ (Nagamangala Violence) ನಿಗಿನಿಗಿ ಕೆಂಡವಾಗಿದ್ದ ನಾಗಮಂಗಲ ಈಗ ಸಹಜ ಸ್ಥಿತಿಗೆ ಮರಳಿದೆ. ಸಚಿವ ಚಲುವನಾರಾಯಣಸ್ವಾಮಿ ನೇತೃತ್ವದಲ್ಲಿ ನಡೆದ ಶಾಂತಿಸಭೆ ಯಶಸ್ವಿಯಾಗಿದೆ. ಅಲ್ಲದೇ ಭಾನುವಾರ (ಇಂದು) ನಿಷೇಧಾಜ್ಞೆ ತೆರವಾಗಿದೆ. ಈ ನಡುವೆ ಕೋಮು ಗಲಭೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯಲ್ಲಿ ಸ್ಫೋಟಕ ವಿಚಾರಗಳು ಬೆಳಿಗೆ ಬಂದಿದೆ.

    ನಾಗಮಂಗಲದ ಕೋಮು ಗಲಭೆಗೆ ಕೇರಳ ಲಿಂಕ್ (Kerala Link) ಇರೋದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೇ ನಿಷೇಧಿತ ಪಿಎಫ್‌ಐ (PFI) ಸಂಘಟನೆ ಸದಸ್ಯರೂ ಈ ಗಲಭೆ ಹಿಂದಿದ್ದಾರೆ, ಕೃತ್ಯಕ್ಕೆ ಮೊದಲೇ ಪ್ಲ್ಯಾನ್‌ ಮಾಡಿದ್ದರು ಎಂಬ ಶಂಕೆಯೂ ವ್ಯಕ್ತವಾಗಿದೆ. ಇದನ್ನೂ ಓದಿ: ಭಾನುವಾರದ ಬಾಡೂಟ; ಆಂಧ್ರ ಶೈಲಿಯ ತಲೆಮಾಂಸದ ಸಾಂಬಾರ್ ಮಾಡೋದು ಹೇಗೆ?

    ಈ ಅನುಮಾನಕ್ಕೆ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿರುವ ಆ ಎರಡು ಹೆಸರುಗಳು ಕಾರಣವಾಗಿದೆ. ಹೌದು. ಎಫ್‌ಐಆರ್‌ನಲ್ಲಿರುವ 74 ಆರೋಪಿಗಳ ಪೈಕಿ ಇಬ್ಬರು ಕೇರಳದವರಾಗಿದ್ದಾರೆ. ಪ್ರಕರಣದ 44ನೇ ಆರೋಪಿ ಯೂಸೂಫ್‌, 61ನೇ ಆರೋಪಿ ನಾಸೀರ್‌ ಇಬ್ಬರೂ ಕೇರಳ ರಾಜ್ಯದ ಮಲ್ಲಪುರಂ ನಿವಾಸಿಗಳು ಎಂದು ತಿಳಿದುಬಂದಿದೆ. ಇದನ್ನೂ ಓದಿ: Kolkata Horror | ಸಾಕ್ಷಿ ನಾಶ, FIR ದಾಖಲಿಸಲು ವಿಳಂಬ; ಸಂದೀಪ್‌ ಘೋಷ್‌ ಸೇರಿ ಸಿಬಿಐನಿಂದ ಇಬ್ಬರ ಬಂಧನ

    ಈ ನಡುವೆ ಆರೋಪಿಗಳಿಬ್ಬರೂ ನಿಷೇಧಿತ ಪಿಎಫ್‌ಐ ಸಂಘಟನೆ ಸದಸ್ಯರು ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ. ಗಲಭೆ ನಡೆಸಲು ಪೂರ್ವ ತಯಾರಿ ನಡೆದಿದೆ. ಗಲಾಟೆ ನಡೆದ ದಿನ ಮೆಡಿಕಲ್‌ನಲ್ಲಿ 200 ಮಾಸ್ಕ್ ಖರೀದಿ ಮಾಡಲಾಗಿದೆ. ಪೆಟ್ರೋಲ್ ಬಾಂಬ್ ಬಳಕೆಯಲ್ಲೂ ಕೇರಳ ಮುಸ್ಲಿಮರ ಕೈವಾಡದ ಇದೆ. ಆದ್ದರಿಂದ ಈ ಪ್ರಕರಣದ ತನಿಖೆಯನ್ನ ಎನ್‌ಐಎ ನಡೆಸಬೇಕು ಎಂದು ವಿಹೆಚ್‌ಪಿ ಆಗ್ರಹಿಸಿದೆ. ಇದನ್ನೂ ಓದಿ: ಪ್ರಧಾನಿ ಹುದ್ದೆಗೆ ಬೆಂಬಲಿಸುವ ಆಫರ್‌ ಬಂದಿತ್ತು, ನಾನೇ ತಿರಸ್ಕರಿಸಿದೆ: ನಿತಿನ್‌ ಗಡ್ಕರಿ

  • ನಿಗಿ ನಿಗಿ ಕೆಂಡವಾಗಿದ್ದ ನಾಗಮಂಗಲ ಶಾಂತ – ಸಚಿವ ಚಲುವರಾಯಸ್ವಾಮಿ ಶಾಂತಿಸಭೆ ಸಕ್ಸಸ್

    ನಿಗಿ ನಿಗಿ ಕೆಂಡವಾಗಿದ್ದ ನಾಗಮಂಗಲ ಶಾಂತ – ಸಚಿವ ಚಲುವರಾಯಸ್ವಾಮಿ ಶಾಂತಿಸಭೆ ಸಕ್ಸಸ್

    – ನಿಷೇಧಾಜ್ಞೆ ತೆರವು, ಗಣೇಶ ವಿಸರ್ಜನೆಗೆ ಅವಕಾಶ

    ಮಂಡ್ಯ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟದಿಂದ ನಿಗಿನಿಗಿ ಕೆಂಡವಾಗಿದ್ದ ನಾಗಮಂಗಲ (Nagamangala Violence) ಈಗ ಸಹಜ ಸ್ಥಿತಿಗೆ ಮರಳಿದೆ. ಎರಡೂ ಸಮುದಾಯದ ಮುಖಂಡರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಚಲುವನಾರಾಯಣಸ್ವಾಮಿ (Chaluvarayaswamy) ನೇತೃತ್ವದಲ್ಲಿ ನಡೆದ ಶಾಂತಿಸಭೆ ಯಶಸ್ವಿಯಾಗಿದೆ. ಅಲ್ಲದೇ ಭಾನುವಾರ (ಇಂದು) ನಿಷೇಧಾಜ್ಞೆ ಮುಕ್ತಾಯವಾಗಲಿದ್ದು, ಇಂದಿನಿಂದ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆಗೆ ಅವಕಾಶ ನೀಡಲಾಗಿದೆ.

    ಬುಧವಾರ ರಾತ್ರಿ ನಾಗಮಂಗಲದಲ್ಲಿ ಗಣೇಶ ಮೂರ್ತಿ (Ganesha Idol) ವಿಸರ್ಜನೆ ವೇಳೆ ಕಲ್ಲು ತೂರಾಟದಿಂದಾಗಿ ಗಲಭೆ ಉಂಟಾಗಿ ಅಂದು ರಾತ್ರಿ ಜಾರಿಗೊಳಿಸಿದ್ದ ನಿಷೇಧಾಜ್ಞೆ ತೆರವಾಗಲಿದೆ. ನಿನ್ನೆ ನಾಗಮಂಗಲದ ಸಮುದಾಯ ಭವನದಲ್ಲಿ ಉಭಯ ಸಮುದಾಯದ ಮುಖಂಡರೊಂದಿಗೆ ಸಚಿವ ಚಲುವರಾಯಸ್ವಾಮಿ ಶಾಂತಿಸಭೆ ನಡೆಸಿದ್ರು. ಘಟನೆಗೆ ಕಾರಣವಾದ ಕಿಡಿಗೇಡಿಗಳನ್ನು ಚಾರ್ಜ್‌ಶೀಟ್‌ನಲ್ಲಿ ಸೇರಿಸಿದ ಅಮಾಯಕರನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ರು. ಅಲ್ಲದೇ ನಾಗಮಂಗಲದ ಉಳಿದ ಗಣೇಶ್ ಮೂರ್ತಿಗಳನ್ನು ಶಾಂತಿಯುವಾಗಿ ವಿಸರ್ಜನೆ ಮಾಡಲು ಸಹಕರಿಸಬೇಕೆಂದು ಮನವಿ ಮಾಡಿದ್ರು.

    ಶಾಂತಿಸಭೆ ಯಶಸ್ವಿಯ ಬಳಿಕ ಇಂದಿನಿಂದ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆಗೆ ಅವಕಾಶ ನೀಡಲಾಯಿತು. ಎಂದಿನಂತೆ ಸಂಭ್ರಮದಿಂದ ಆಚರಣೆಗೆ ಅನುಮತಿ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆ ವೇಳೆ ಬಿಗಿ ಭದ್ರತೆಗೆ ಸೂಚಿಸಲಾಗಿದೆ. ಈ ಹಿಂದೆ ನಡೆಯುತ್ತಿದ್ದ ರಸ್ತೆಗಳಲ್ಲಿ 7 ಗಣಪತಿಗಳ ವಿಸರ್ಜನೆ ಮೆರವಣಿಗೆ ಅನುವು ಮಾಡಿಕೊಡಬೇಕೆಂದು ಎರಡು ಸಮುದಾಯದ ಮುಖಂಡರಿಗೆ ಮನವಿ ಮಾಡಲಾಗಿದೆ. ಇದಕ್ಕೆ ಎಲ್ಲಾ ಮುಖಂಡರು ಸಮ್ಮತಿದ್ದಾರೆ.

    ಗಣೇಶ ವಿಸರ್ಜನೆ ಮೆರವಣಿಗೆ ಬಳಿಕ ಪ್ರತಿವರ್ಷದಂತೆ ಸೌಮ್ಯಕೇಶ್ವರ ದೇವಸ್ಥಾನದ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಅದ್ರೆ ನಾಳೆ ಈದ್ ಮಿಲಾದ್ ಹಬ್ಬ ಆಚರಣೆ ಇದ್ದ ಕಾರಣ ಅಂದು ಮಾತ್ರ ಗಣಪತಿ ವಿಸರ್ಜನೆ ಮಾಡಲು ಅನುಮತಿ ನೀಡಿಲ್ಲ. ಎರಡು ಕೋಮುಗಳ ಮಧ್ಯೆ ಮತ್ತೆ ಘರ್ಷಣೆ ಆಗೋ ಸಾಧ್ಯತೆ ಇರುತ್ತೆ ಅನ್ನೋ ಕಾರಣದಿಂದ ಶಾಂತಿ ಸುವ್ಯವಸ್ಥೆ ಕಾರಣಕ್ಕೆ ಅನುಮತಿ ಕೊಟ್ಟಿಲ್ಲ.

    ಒಟ್ಟಿನಲ್ಲಿ ಗಲಭೆಯಿಂದ ಸಹಜಸ್ಥಿತಿಯತ್ತ ಮರಳಿದ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಯಾವುದೇ ಅವಘಡ ನಡೆಯದಂತೆ ಪೊಲೀಸರು ಮುನ್ನಚ್ಚೆರಿಕೆ ಬಿಗಿ ಭದ್ರತೆ ಮಾಡಿದ್ದಾರೆ.

  • ಮಹಿಳಾ ಪೇದೆಗೆ ಠಾಣೆಯಲ್ಲೇ ಸೀಮಂತ – ಮಂಡ್ಯ ಪೊಲೀಸರಿಗೆ ನೆಟ್ಟಿಗರಿಂದ ಮೆಚ್ಚುಗೆ

    ಮಹಿಳಾ ಪೇದೆಗೆ ಠಾಣೆಯಲ್ಲೇ ಸೀಮಂತ – ಮಂಡ್ಯ ಪೊಲೀಸರಿಗೆ ನೆಟ್ಟಿಗರಿಂದ ಮೆಚ್ಚುಗೆ

    ಮಂಡ್ಯ: ಗರ್ಭಿಣಿ ಮಹಿಳೆಯರಿಗೆ (Pregnant Women) ಸೀಮಂತ ಕಾರ್ಯಕ್ರಮವನ್ನ ಕುಟುಂಬಸ್ಥರು ವಿಜೃಂಭಣೆಯಿಂದ ಮಾಡೋದನ್ನ ನೋಡಿರುತ್ತೇವೆ. ಆದ್ರೆ ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಯೊಬ್ಬರಿಗೆ ಸಹೋದ್ಯೋಗಿಗಳು ಠಾಣೆಯಲ್ಲಿಯೇ ಸೀಮಂತ ಕಾರ್ಯಕ್ರಮ ನೆರವೇರಿಸಿ, ಶುಭ ಹಾರೈಸಿದ್ದಾರೆ.

    ನಾಗಮಂಗಲ ಟೌನ್ ಪೊಲೀಸ್ ಠಾಣೆಯ (Nagamangala Town Police Station) ಮಹಿಳಾ ಪೇದೆ ನೇಹಾ ತುಂಬು ಗರ್ಭಿಣಿಯಾಗಿದ್ದು, ಹೆರಿಗೆ ಸುಖಕರವಾಗಿ ಆಗಲಿ ಎಂದು ಹಾರೈಸಿ, ಠಾಣೆಯ ಸಹದ್ಯೋಗಿಗಳೆಲ್ಲ ಬಾಗೀನ ಅರ್ಪಿಸಿ ಸೀಮಂತ ನೆರವೇರಿಸಿದ್ದಾರೆ. ಇದನ್ನೂ ಓದಿ: ಇಬ್ಬರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ- ಐಪಿಎಸ್ ರೂಪಾ, ಐಎಎಸ್ ರೋಹಿಣಿ ಸಿಂಧೂರಿ ವರ್ಗಾವಣೆ

    ಸದಾ ಕಾನೂನು ಸುವ್ಯವಸ್ಥೆ ಕಾಪಾಡುವ ಜಂಜಾಟದಲ್ಲಿಯೇ ಮುಳುಗಿರುವ ಪೊಲೀಸರ ಈ ಕಾರ್ಯಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಅಭಿವೃದ್ಧಿ ಮಾಡಿದ್ದು ಯಾರು? – ವೇದಿಕೆಯಲ್ಲೇ ಅಶ್ವಥ್ ನಾರಾಯಣ್ Vs ಅನಿತಾ ಕುಮಾರಸ್ವಾಮಿ ವಾಗ್ವಾದ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k