ಮಂಡ್ಯ: ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್, ವೀವ್ಸ್‌ಗಾಗಿ ದೆವ್ವದ (Ghost) ಫೇಕ್ ವಿಡಿಯೋ ಹಂಚಿಕೊಂಡಿದಾತನಿಗೆ ಮಂಡ್ಯ ಪೊಲೀಸರು (Mandya Police) ಕ್ಲಾಸ್ ತೆಗೆದುಕೊಂಡಿದ್ದಾರೆ.
ಹೌದು, ನಾಗಮಂಗಲದಲ್ಲಿ ಬೈಕ್ ಸವಾರನಿಗೆ ಕಾಣಿಸಿಕೊಂಡ ದೆವ್ವದ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ನೋಡಿ ಆ ರಸ್ತೆಯಲ್ಲಿ ದೆವ್ವ ಇದೆ ಎಂದು ಜನರು ಓಡಾಡಲು ಹೆದರುತ್ತಿದ್ದರು. ಈ ಬಗ್ಗೆ ಮಂಡ್ಯ ಪೊಲೀಸರು ಫ್ಯಾಕ್ಟ್‌ಚೆಕ್ ನಡೆಸಿದ್ದು, ಬಳಿಕ ವಿಡಿಯೋದ ಅಸಲಿಯತ್ತು ಬಯಲಾಗಿದೆ. ಇದನ್ನೂ ಓದಿ: ಅನಧಿಕೃತ ಮಸೀದಿಯನ್ನು ಜೆಸಿಬಿಯಿಂದ ಕೆಡವಿದ UP ಮುಸ್ಲಿಮರು!
ನಾಗಮಂಗಲ ಟೌನ್ ನಿವಾಸಿಯಾಗಿರುವ ಗೋಪಿಯು ದೇವಲಾಪುರ ಹ್ಯಾಂಡ್‌ಪೋಸ್ಟ್ ಬಳಿ ಪ್ರೇತಾತ್ಮ ಎಂಬ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದ. ವಿಡಿಯೋ ಅಸಲಿಯತ್ತು ತಿಳಿಯಲು ನಾಗಮಂಗಲ ಪೊಲೀಸರು ಫ್ಯಾಕ್ಟ್‌ಚೆಕ್ ಮಾಡಿದ್ದರು. ಈ ವೇಳೆ ಗೋಪಿಯು ಲೈಕ್ಸ್, ವೀವ್ಸ್‌ಗಾಗಿ ಫೇಕ್ ವಿಡಿಯೋ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಇದೀಗ ಪೊಲೀಸರು ಯುವಕನ ತಪ್ಪೊಪ್ಪಿಗೆಯ ವಿಡಿಯೋ ಪೋಸ್ಟ್ ಮಾಡಿ, ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ ಫೇಕ್ ವಿಡಿಯೋಗಳನ್ನು ನಂಬಿ ಭಯಬೀಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಮಂಡ್ಯ: 39 ವರ್ಷಗಳ ಬಳಿಕ ಮಂಡ್ಯದಲ್ಲಿ ನಡೆಯುತ್ತಿರುವ 14 ಕೂಟದ ದೇವರುಗಳ ದೊಡ್ಡ ಹಬ್ಬದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು ಭಾಗಿಯಾಗಲಿದ್ದಾರೆ.
ಜಿಲ್ಲೆಯ ನಾಗಮಂಗಲ (Nagamangala) ತಾಲೂಕಿನ ದೊಡ್ಡಬಾಲ ಗ್ರಾಮದಲ್ಲಿ ಸೋಮವಾರದಿಂದ ಬೀರ ದೇವರುಗಳ ಜಾತ್ರಾ ಮಹೋತ್ಸವ ನಡೆಯುತ್ತಿದೆ. 14 ಕೂಟದ ದೇವರುಗಳ ಈ ಹಬ್ಬ 39 ವರ್ಷಗಳ ಬಳಿಕ ಜರುಗುತ್ತಿದೆ. ಇದನ್ನೂ ಓದಿ: ವಿಂಗ್ ಕಮಾಂಡರ್ ಹಣೆಯಲ್ಲಿ ರಕ್ತ ಸೋರಿದ್ದು ಹೇಗೆ?
ಇಂದು ಬೆಳಗ್ಗೆ 11 ಗಂಟೆಗೆ ನಾಗಮಂಗಲದ ಹದ್ದಿಹಳ್ಳಿ ಹೆಲಿಪ್ಯಾಡ್‌ಗೆ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ. ಬಳಿಕ ಅಲ್ಲಿಂದ ನೇರವಾಗಿ ದೊಡ್ಡಬಾಲ ಗ್ರಾಮಕ್ಕೆ ತೆರಳಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಸಚಿವರಾದ ಚಲುವರಾಯಸ್ವಾಮಿ, ಭೈರತಿ ಸುರೇಶ್ ಸಿಎಂಗೆ ಸಾಥ್ ನೀಡಲಿದ್ದಾರೆ.
ಮಂಡ್ಯ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ನಾಗಮಂಗಲ (Nagamangala) ತಾಲೂಕಿನ ಕದಬಹಳ್ಳಿ ಗ್ರಾಮದ ಬಳಿ ಜರುಗಿದೆ.
ಗ್ರಾಮದಲ್ಲಿ ಜಾತ್ರೆ ಇದ್ದ ಕಾರಣ ಬೆಂಗಳೂರಿನಿಂದ ತಮ್ಮ ಗ್ರಾಮಕ್ಕೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಕದಬಹಳ್ಳಿ ಗ್ರಾಮದ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದುಕೊಂಡು ಹೋಗಿದ್ದು, ಸ್ಥಳದಲ್ಲೇ ದಂಪತಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ನಾಗಮಂಗಲ ತಾಲೂಕಿನ ಬಿಂಡಿಗನ ನವಿಲೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜಾತಿಗಣತಿ ವರದಿ ಯಾರನ್ನೋ ಕೂರಿಸಿ ಬರೆಸಿದಂತೆ ಇದೆ: ಸೂರಜ್ ರೇವಣ್ಣ ಕಿಡಿ
ವಿದ್ಯಾರ್ಥಿಗಳನ್ನು ಹರಿಯಂತ್ ಪಾಟೀಲ್ ಹಾಗೂ ಪಾರ್ಥ ಎಂದು ತಿಳಿಯಲಾಗಿದ್ದು, ಜೈನ ಬಸದಿ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಆಂಜನೇಯ ಬೆಟ್ಟದ ದೇವಸ್ಥಾನದ ಸುತ್ತ ಸ್ವಚ್ಛಕಾರ್ಯಕ್ಕಾಗಿ ವಿದ್ಯಾರ್ಥಿಗಳು ತೆರಳಿದ್ದರು. ಈ ವೇಳೆ ವಿದ್ಯಾರ್ಥಿಗಳು ಕಸದ ರಾಶಿಗೆ ಕೈ ಹಾಕಿದ್ದು, ಬಾಂಬ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಓರ್ವನ ಅಂಗೈ ಛಿದ್ರವಾಗಿದ್ದು, ಇನ್ನೋರ್ವನ ಮುಖದ ಭಾಗಕ್ಕೆ ಗಾಯವಾಗಿದೆ.
ಕಾಡು ಹಂದಿ ಬೇಟೆಗಾಗಿ ನಾಡ ಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಕಿಡಿಗೇಡಿಗಳ ಕೆಲಸದಿಂದ ಅಮಾಯಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡ ವಿದ್ಯಾರ್ಥಿಗಳಿನ್ನು ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಂಡಿಗನವಿಲೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕಾಗಿ ಯುವತಿಯ ಕಾರು, ಬೈಕ್‌ಗಳಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ
ಮಂಡ್ಯ: ಆಟವಾಡುತ್ತಿರುವಾಗ ಬಾಲಕನೋರ್ವ ಅಸಲಿ ಬಂದೂಕು ಎಂದು ತಿಳಿಯದೇ ಫೈರಿಂಗ್ ಮಾಡಿದ ಪರಿಣಾಮ 3 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಮಂಡ್ಯ (Mandya) ಜಿಲ್ಲೆ ನಾಗಮಂಗಲ (Nagamangala) ತಾಲ್ಲೂಕಿನ ದೊಂದೇಮಾದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದವರಾದ ಶಶಾಂಕ್ ಹಾಗೂ ಲಿಪಿಕಾ ದಂಪತಿಯ ಮಗ ಅಭಿಷೇಕ್(3) ಮೃತಪಟ್ಟ ಬಾಲಕ. ಕಾಂಗ್ರೆಸ್ ಮುಖಂಡ ನರಸಿಂಹಮೂರ್ತಿ ಅವರ ಕೋಳಿ ಫಾರಂನಲ್ಲಿ ಕಳೆದು ಕೆಲವು ವರ್ಷಗಳಿಂದ ಈ ದಂಪತಿ ಕೆಲಸ ಮಾಡುತ್ತಿದ್ದರು. ದಂಪತಿಯನ್ನು ಭೇಟಿಯಾಗಲು ಭಾವಶಂಕರ್ ದಾಸ್ ಹಾಗೂ ಆತನ ಮಗ ಸುದೀಪ್ ದಾಸ್ ಬಂದಿದ್ದರು. ಈ ವೇಳೆ ಮಕ್ಕಳಿಬ್ಬರು ಆಟವಾಡುತ್ತಿದ್ದರು.
ಆಟವಾಡುತ್ತಿದ್ದಾಗ ಪರವಾನಗಿ ಪಡೆದು ಇಟ್ಟುಕೊಂಡಿದ್ದ ನರಸಿಂಹಮೂರ್ತಿ ಅವರ ಬಂದೂಕು ಸುದೀಪ್ ಕೈಗೆ ಸಿಕ್ಕಿದ್ದು, ಅಸಲಿ ಬಂದೂಕು ಎಂದು ತಿಳಿಯದೇ ಫೈರಿಂಗ್ ಮಾಡಿದ್ದಾನೆ. ಪರಿಣಾಮ ಅಲ್ಲಿಯೇ ಇದ್ದ ಅಭಿಷೇಕ್ ಹೊಟ್ಟೆಯೊಳಗೆ ಗುಂಡು ಹೊಕ್ಕಿದ್ದು, ತಾಯಿ ಲಿಪಿಕಾ ಕೂಡ ಗಾಯಗೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಕೂಡಲೇ ನಾಗಮಂಗಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಇನ್ನೂ ಸ್ಥಳಕ್ಕೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ನಾಗಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಬಂದೂಕು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಮಂಡ್ಯ: ವಿಚಾರಣೆಗೆ ಕರೆದ ಎಎಸ್‌ಐ (ASI) ಮೇಲೆ ನಡುರಸ್ತೆಯಲ್ಲೇ ಹಲ್ಲೆಗೆ ಯತ್ನಿಸಿ ರಂಪಾಟ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಮಂಡ್ಯ (Mandya) ಜಿಲ್ಲೆಯ ನಾಗಮಂಗಲದಲ್ಲಿ (Nagamangala) ನಡೆದಿದೆ.
ನಾಗಮಂಗಲ ಗ್ರಾಮಾಂತರ ಎಎಸ್‌ಐ ರಾಜು ಮೇಲೆ ಮಜ್ಜನಕೊಪ್ಪಲು ಪೂಜಾರಿ ಕೃಷ್ಣ ಹಲ್ಲೆಗೆ ಯತ್ನಿಸಿ ದರ್ಪ ತೋರಿದ್ದಾನೆ. ಆರೋಪಿ ಕೃಷ್ಣನ ವಿರುದ್ಧ ಆತನ ತಾಯಿ ಠಾಣೆಗೆ ದೂರು ನೀಡಿದ್ದರು. ಹಣಕ್ಕೆ ಬೇಡಿಕೆ ಇಟ್ಟು ನಿತ್ಯ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ಸಲ್ಲಿಸಲಾಗಿತ್ತು. ದೂರಿನ ಹಿನ್ನೆಲೆ ಕೃಷ್ಣನನ್ನು ಠಾಣೆಗೆ ಕರೆತರಲು ಎಎಸ್‌ಐ ರಾಜು ತೆರಳಿದ್ದರು. ನಾಗಮಂಗಲದ ಕೋರ್ಟ್ ಬಳಿ ನಿಂತಿದ್ದ ಕೃಷ್ಣನನ್ನು ಎಎಸ್‌ಐ ರಾಜು ಠಾಣೆಗೆ ಕರೆದಿದ್ದರು. ಇದನ್ನೂ ಓದಿ: ಆನೇಕಲ್| ತಾಯಿ ಕೊಂದು ಬಳಿಕ ಮಗನೂ ನೇಣು ಬಿಗಿದುಕೊಂಡು ಆತ್ಮಹತ್ಯೆ
ಠಾಣೆಗೆ ಬರಲು ಒಪ್ಪದಿದ್ದಾಗ ಕೃಷ್ಣನ ಕಾಲರ್ ಹಿಡಿದು ಬಲವಂತವಾಗಿ ಆಟೋಗೆ ಹತ್ತಿಸಲು ಎಎಸ್‌ಐ ಯತ್ನಿಸಿದ್ದಾರೆ. ಈ ವೇಳೆ ಎಎಸ್‌ಐ ರಾಜುವನ್ನು ಕೃಷ್ಣ ತಳ್ಳಿದ್ದಾನೆ. ತಳ್ಳಾಡಿದಾಗ ರಾಜು ಕೆಳಗೆ ಬಿದ್ದಿದ್ದಾರೆ. ಬಳಿಕ ಕೃಷ್ಣನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಎಲ್ಲಾ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನೂ ಓದಿ: ಕೋಲಾರ | ಮದುವೆ ಮಾಡ್ಕೊಡಿ ಎಂದಿದ್ದಕ್ಕೆ ವಿವಾಹಿತನನ್ನು ಅಟ್ಟಾಡಿಸಿ ಕೊಂದ ಪ್ರೇಯಸಿ ಮನೆಯವ್ರು!
ಮಂಡ್ಯ: ನಾಗಮಂಗಲದಲ್ಲಿ (Nagamangala) ಗಣೇಶ ಮೂರ್ತಿ ವಿಸರ್ಜನೆ ವೇಳೆ ಉಂಟಾದ ಗಲಭೆಯಿಂದ ಹಾನಿಗೊಳಗಾದ ಅಂಗಡಿ ಮಾಲೀಕರಿಗೆ ಕೊನೆಗೂ ಸರ್ಕಾರ ಪರಿಹಾರ ನೀಡಿದೆ.
ನಾಗಮಂಗಲ ಗಲಭೆಯಲ್ಲಿ (Nagamangala Violence) ಹಲವು ಅಂಗಡಿ ಮುಂಗಟ್ಟುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಕಾರಣ ಸುಮಾರು 22 ಮಂದಿ ವ್ಯಾಪಾರಸ್ಥರಿಗೆ ವೃತ್ತಿ ಜೀವನ ನಡೆಸಲು ತೊಂದರೆಯಾಗಿತ್ತು. ಇಂದು (ನ.22) ಸಚಿವ ಚಲುವರಾಯಸ್ವಾಮಿ ತೊಂದರೆಗೀಡಾಗಿದ್ದ ವ್ಯಾಪರಸ್ಥರು ಹಾಗೂ ಅಂಗಡಿ ಮಾಲೀಕರಿಗೆ ಸರ್ಕಾರದಿಂದ (Government) ನೀಡಿದ್ದ ಒಟ್ಟು 76,45,000 ರೂ. ಪರಿಹಾರ ಧನ ವಿತರಣೆ ಮಾಡಿದ್ದಾರೆ. ಇದನ್ನೂ ಓದಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಹೆಚ್ಚುವರಿ 10,000ಕ್ಕೂ ಹೆಚ್ಚು ಸೈನಿಕರ ನಿಯೋಜನೆ
ಸರ್ಕಾರದಿಂದ ಇಂತಹ ಅವಘಡ ಪ್ರಕರಣಗಳಲ್ಲಿ ಸುಮಾರು 10,000 ರೂ. ಮಾತ್ರ ಪರಿಹಾರ ನೀಡಲಾಗುತ್ತಿತ್ತು, ಇದರಿಂದ ವೃತ್ತಿ ಜೀವನ ಪುನಃ ಕಟ್ಟಿಕೊಳ್ಳಲು ಸಾಕಾಗುವುದಿಲ್ಲ ಎಂದು ವರ್ತಕರು ಮನವಿ ಮಾಡಿದ್ದರು. ವರ್ತಕರ ಮನವಿ ಪುರಸ್ಕರಿಸಿದ ಸರ್ಕಾರ ದೊಡ್ಡ ಮೊತ್ತದ ಪರಿಹಾರ ನೀಡಿದೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ: ಸಾಂಗ್ಲಿ ರಸಗೊಬ್ಬರ ಘಟಕದಲ್ಲಿ ಗ್ಯಾಸ್ ಲೀಕ್: ಮೂವರ ಸಾವು, 9 ಮಂದಿ ಆಸ್ಪತ್ರೆಗೆ ದಾಖಲು
ಮಂಡ್ಯ: ಕೋಮುಗಲಭೆ ನಡೆದ ನಾಗಮಂಗಲದಲ್ಲಿ (Nagamangala) ಇಂದು ಕೋಟೆ ವಿದ್ಯಾಗಣಪತಿ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಕೋಮುಗಲಭೆ ನಡೆದ ಬಳಿಕ ನಡೆಯುವ ದೊಡ್ಡ ಕಾರ್ಯಕ್ರಮ ಇದಾಗಿದ್ದು ಬೃಹತ್ ಶೋಭಾಯಾತ್ರೆ ನಡೆಸಿ ವಿಸರ್ಜನೆಗೆ ಸಿದ್ಧತೆ ನಡೆದಿದೆ.
ನಾಗಮಂಗಲದ ಕೋಟೆ ಆಂಜನೇಯ ದೇವಸ್ಥಾನದ ಬಳಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿಯನ್ನು ಪ್ರತೀ ವರ್ಷ ಪ್ರತಿಷ್ಠಾಪನೆಯಾದ 48ನೇ ದಿನಕ್ಕೆ ವಿಸರ್ಜನೆ ಮಾಡಲಾಗುತ್ತದೆ. ಈ ಬಾರಿಯು ಬೃಹತ್ ಶೋಭಾಯಾತ್ರೆಯೊಂದಿಗೆ ವಿಸರ್ಜನೆ ಮಾಡುವ ಚಿಂತನೆಯನ್ನು ಸಮಿತಿಯು ಮಾಡಿದೆ. ಯಾತ್ರೆಗೆ ಸುಮಾರು 30 ಸಾವಿರಕ್ಕೂ ಅಧಿಕ ಹಿಂದೂಗಳನ್ನ ಸೇರಿಸುವ ನಿರೀಕ್ಷೆ ಇದ್ದು, ಕಳೆದ 72 ವರ್ಷಗಳಿಂದ ಸಮಿತಿಯು ಅದ್ಧೂರಿಯಾಗಿ ಗಣೇಶೋತ್ಸವವನ್ನು (Ganeshostav) ನಡೆಸಿಕೊಂಡು ಬರುತ್ತಿದೆ. ಇದನ್ನೂ ಓದಿ: ಒಡಿಶಾ ತೀರಕ್ಕೆ ಅಪ್ಪಳಿಸಿದ ಡಾನಾ ಚಂಡಮಾರುತ – ಗಂಟೆಗೆ 120 ಕಿ.ಮೀ ವೇಗದಲ್ಲಿ ಬೀಸುತ್ತಿದೆ ಗಾಳಿ
ಇಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿವರೆಗೂ ಯಾತ್ರೆ ನಡೆಯಲಿದೆ. ವಿವಾದಿತ ಮಸೀದಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗುತ್ತದೆ. ಕಳೆದ ಸೆಪ್ಟೆಂಬರ್ 11ರಂದು ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕೋಮುಗಲಭೆ ನಡೆದಿತ್ತು. ಮಸೀದಿ ಮುಂಭಾಗ ಮೆರವಣಿಗೆ ವಿರೋಧಿಸಿ ಆರಂಭವಾದ ಗಲಾಟೆಯಿಂದ ಕೋಮುಗಲಭೆ ಸೃಷ್ಟಿಯಾಗಿತ್ತು. ಇಂದು ಅದೇ ಮಸೀದಿ ಮುಂದೆ ಹಿಂದೂ ಸಂಘಟನೆಗಳು ಶೋಭಾಯಾತ್ರೆ ನಡೆಸಲಿದೆ. ವಿವಿಧ ಕಲಾತಂಡಗಳು ಈ ಶೋಭಾಯಾತ್ರೆಗೆ ಮೆರುಗು ನೀಡಲಿದೆ. ಇದನ್ನೂ ಓದಿ: ಬಿಬಿಎಂಪಿಗೆ ಡಿಸಿಎಂ ಖಡಕ್ ವಾರ್ನಿಂಗ್ – ಸೋಮವಾರದಿಂದ ಅನಧಿಕೃತ ಕಟ್ಟಡಗಳ ಸರ್ವೆ ಆರಂಭ
ಮಂಡ್ಯ: ನಾಗಮಂಗಲ ಕೋಮುಗಲಭೆ ಪ್ರಕರಣಕ್ಕೆ (Nagamangala Communal Violence) ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ಎಲ್ಲಾ ಆರೋಪಿಗಳಿಗೆ ಮಂಡ್ಯದ (Mandya) ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು (Bail) ಮಂಜೂರು ಮಾಡಿದೆ.
ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣ ಸೋಮವಾರ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. ಸೆ.11ರಂದು ಆರೋಪಿಗಳ ಬಂಧನವಾಗಿತ್ತು. ಸೆ.12 ರಿಂದ ಆರೋಪಿಗಳು ಮಂಡ್ಯ ಕಾರಾಗೃಹದಲ್ಲಿದ್ದಾರೆ.
ಮಂಡ್ಯ: ನಾಗಮಂಗಲ ಗಲಭೆ ಪ್ರಕರಣ (Nagamangala Violence) ಹಿನ್ನೆಲೆ ಇಂದು (ಸೆ.19) ಜಿಲ್ಲೆಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (H D Kumarswamy) ಭೇಟಿ ನೀಡಲಿದ್ದು, ನೊಂದ ಕುಟುಂಬಗಳಿಗೆ ಧನ ಸಹಾಯ ಮಾಡಲು ಮುಂದಾಗಿದ್ದಾರೆ.
ನಾಗಮಂಗಲದಲ್ಲಿ (Nagamangala) ನಡೆದ ಗಲಭೆಯಿಂದಾಗಿ ಹಲವು ಬದುಕು ಬೀದಿಗೆ ಬಂದಿದೆ. ಈ ಸಂಬಂಧ ಸಚಿವ ಚೆಲುವರಾಯಸ್ವಾಮಿ (Cheluvarayaswamy) ಹಾನಿಗೊಳಗಾದವರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವುದರ ಜೊತೆಗೆ ವೈಯಕ್ತಿಕವಾಗಿಯೂ ಪರಿಹಾರ ಕೊಡುವುದಾಗಿಯೂ ತಿಳಿಸಿದ್ದಾರೆ. ಇತ್ತ ಕಡೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾತಲ್ಲಿ ಹೇಳುವುದು ಬೇಡ ಮಾಡಿತೋರಿಸಬೇಕೆಂದು, ತಮ್ಮ ಸ್ವಂತ ಹಣದಲ್ಲಿ ನೊಂದ ಕುಟುಂಬಗಳಿಗೆ ಧನ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಇದನ್ನೂ ಓದಿ: ಬಿಗ್ ಬಾಸ್‌ಗೆ ಹೋಗ್ತಾರಾ ಅವಳಿ ಸಹೋದರಿಯರು?- ಸ್ಪಷ್ಟನೆ ನೀಡಿದ ಅದ್ವಿತಿ ಶೆಟ್ಟಿ
ಗಲಭೆಯಿಂದಾಗಿ ಹಲವು ಅಂಗಡಿಗಳು ಸುಟ್ಟು ಕರಕಲಾಗಿದ್ದು, ಇದರಿಂದ ಮಾಲೀಕರ ಬದುಕು ಬೀದಿಗೆ ಬಂದಂತಾಗಿದೆ. ಹೀಗಾಗಿ ಸಚಿವ ಚಲುವರಾಯಸ್ವಾಮಿ ಗಲಭೆಯಾದ ಮಾರನೇ ದಿನವೇ ಹಾನಿಗೆ ಒಳಗಾದವರಿಗೆ ಸರ್ಕಾರದಿಂದ ಪರಿಹಾರ ನೀಡುವುದರ ಜೊತೆ ವೈಯಕ್ತಿಕವಾಗಿಯೂ ಪರಿಹಾರ ನೀಡುವ ಭರವಸೆ ನೀಡಿದ್ದರು. ಇತ್ತ ಘಟನೆಯಾದ ಒಂದು ದಿನದ ಬಳಿಕ ನಾಗಮಂಗಲಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾನಿಗೊಳಗಾದ ಸ್ಥಳಗಳಿಗೆ ತೆರಳಿ ಬಳಿಕ ಸಂಬಂಧಪಟ್ಟವರಿಗೆ ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ಮಾಡಿದ್ದಾರೆ.
ಇದೀಗ ಮತ್ತೆ ಹೆಚ್.ಡಿ ಕುಮಾರಸ್ವಾಮಿ ಎರಡನೇ ಬಾರಿಗೆ ಆರ್ಥಿಕ ಸಹಾಯ ಮಾಡಲು ಮುಂದಾಗಿದ್ದಾರೆ. ಇಂದು (ಸೆ.19) ಸಂಜೆ 5:30ಕ್ಕೆ ನಾಗಮಂಗಲದ ಬದ್ರಿಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಲಿರುವ ಕುಮಾರಸ್ವಾಮಿ, ಆ ಗ್ರಾಮದಲ್ಲಿ ಗಲಭೆ ಸಂಬಂಧ ಜೈಲು ಸೇರಿರುವವರ ಹಾಗೂ ಪೊಲೀಸರಿಗೆ ಹೆದರಿ ಊರು ಬಿಟ್ಟಿರುವವರ ಕುಟುಂಬಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಆ ಕುಟುಂಬಸ್ಥರಿಗೆ ಆರ್ಥಿಕ ಸಹಾಯ ಮಾಡಿ ಧೈರ್ಯ ತುಂಬಲಿದ್ದಾರೆ. ಈ ಮೂಲಕ ನೊಂದ ಜನರ ಕಣ್ಣೀರು ಒರೆಸಲು ಹೆಚ್‌ಡಿಕೆ ಮುಂದಾಗಿದ್ದಾರೆ.ಇದನ್ನೂ ಓದಿ: 2040ಕ್ಕೆ ಮಾನವ ಸಹಿತ ಚಂದ್ರಯಾನ – 2,104 ಕೋಟಿ ಅನುದಾನಕ್ಕೆ ಕೇಂದ್ರ ಅಸ್ತು
ಜಿಲ್ಲಾಡಳಿತ ಈಗಷ್ಟೇ ಹಾನಿಯಾಗಿರುವ ಪ್ರಮಾಣವನ್ನು ಅಂದಾಜಿಸಲಾಗಿದೆ. ಇನ್ನೂ ಸಚಿವ ಚೆಲುವರಾಯಸ್ವಾಮಿ ವೈಯಕ್ತಿಕ ಪರಿಹಾರವನ್ನು ನೀಡಿಲ್ಲ. ಈ ಮಧ್ಯೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪರಿಹಾರವನ್ನು ನೀಡುವ ಮೂಲಕ ರಾಜ್ಯ ಸರ್ಕಾರ ಹಾಗೂ ಸಚಿವ ಚಲುವರಾಯಸ್ವಾಮಿಯನ್ನು ಓವರ್ ಟೇಕ್ ಮಾಡುವ ಮೂಲಕ ಜನರ ಕಣ್ಣೀರು ಒರೆಸಲು ಮುಂದಾಗಿದ್ದಾರೆ.