Tag: ನಾಗಣ್ಣ

  • ಕನಕದಾಸನಾಗಿ ಕಂಗೊಳಿಸಲಿದ್ದಾರೆ ರಿಯಲ್‌ ಸ್ಟಾರ್‌ ಉಪೇಂದ್ರ

    ಕನಕದಾಸನಾಗಿ ಕಂಗೊಳಿಸಲಿದ್ದಾರೆ ರಿಯಲ್‌ ಸ್ಟಾರ್‌ ಉಪೇಂದ್ರ

    ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ಸದ್ಯ ‘ಕಬ್ಜ’ (Kabza) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ‘ಯುಐ’ (UI) ಚಿತ್ರಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಇದೀಗ ಹೊಸ ಸಿನಿಮಾದ ಅಪ್‌ಡೇಟ್ ಮೂಲಕ ಸಿಹಿಸುದ್ದಿ ಸಿಕ್ಕಿದೆ. ಐತಿಹಾಸಿಕ ಸಿನಿಮಾ ಮಾಡಲು ಉಪ್ಪಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕನಕದಾಸನಾಗಲು ಉಪ್ಪಿ ರೆಡಿಯಾಗಿದ್ದಾರೆ.

    ಸದಾ ಭಿನ್ನ ಪಾತ್ರ, ವಿಭಿನ್ನ ಕಥೆಯನ್ನ ಆಯ್ಕೆ ಮಾಡೋದ್ರಲ್ಲಿ ನಟ ಉಪೇಂದ್ರ ಅವರು ಯಾವಾಗಲೂ ಮುಂದು. ಈಗಾಗಲೇ ನಾನಾ ಪಾತ್ರದ ಮೂಲಕ ಸಿನಿಮಾರಂಗದಲ್ಲಿ ಉಪೇಂದ್ರ ಅವರು ರಂಜಿಸಿದ್ದಾರೆ. ಹಾಗಾಗಿ ಈ ಬಾರಿ ಹಿಸ್ಟೋರಿಕಲ್ ಚಿತ್ರ ಮಾಡಲು ಉಪ್ಪಿ ಮನಸ್ಸು ಮಾಡಿದ್ದಾರೆ. ಕುಟುಂಬ, ಗೌರಮ್ಮ, ಗೋಕರ್ಣ, ದುಬೈ ಬಾಬು ಚಿತ್ರಗಳನ್ನ ಉಪ್ಪಿಗೆ ನಿರ್ದೇಶನ ಮಾಡಿದ್ದ ನಿರ್ದೇಶಕ ನಾಗಣ್ಣ ಈ ಹೊಸ ಚಿತ್ರಕ್ಕೆ ಡೈರೆಕ್ಷನ್ ಮಾಡ್ತಿದ್ದಾರೆ. ಈ ಮೂಲಕ 5ನೇ ಬಾರಿಗೆ ಉಪ್ಪಿ-ನಾಗಣ್ಣ (Naganna) ಒಂದಾಗುತ್ತಿದ್ದಾರೆ. ಇದನ್ನೂ ಓದಿ:8 ವರ್ಷದ ಪ್ರೀತಿಗೆ ಸೈನಿಕನ ಜೊತೆ ಮದುವೆಯೆಂಬ ಮುದ್ರೆ ಒತ್ತಲು ರೆಡಿಯಾದ ‘ಗಿಣಿರಾಮ’ ನಟಿ

    ಈ ಚಿತ್ರದಲ್ಲಿ ಉಪೇಂದ್ರ ಕನಕದಾಸರ ಪಾತ್ರ ನಿರ್ವಹಿಸಲಿದ್ದು, ಕಥೆ ಕೇಳಿ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಉಪೇಂದ್ರ ಅವರು ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ಲುಕ್ ಬದಲಿಸಿಕೊಳ್ಳಲಿದ್ದಾರೆ. ಈ ಸಿನಿಮಾಗಾಗಿ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆ 15ನೇ ಶತಮಾನದ್ದು. ಕನಕದಾಸರ ಸಿದ್ದಾಂತಗಳಿಂದ ಆದ ಪರಿಣಾಮಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ತೆರೆಮೇಲೆ ತರಲು ಡೈರೆಕ್ಟರ್ ನಾಗಣ್ಣ ಸಜ್ಜಾಗಿದ್ದಾರೆ. ಈ ಸಿನಿಮಾಗೆ ಖ್ಯಾತ ಚಿತ್ರಕಥೆಗಾರ ಜಿ.ಕೆ. ಭಾರವಿ ಚಿತ್ರಕಥೆ ಬರೆದಿದ್ದಾರೆ. ಹಂಸಲೇಖ ಸಂಗೀತ ಸಂಯೋಜನೆ ಮಾಡುತ್ತಿದ್ದು, ಈಗ ಕೆಲಸ ಆರಂಭಿಸಿದ್ದಾರೆ.

    ಈ ಸಿನಿಮಾದ ಕಥೆ ಮುಖ್ಯವಾಗಿ ಕನಕದಾಸರ ಬಗ್ಗೆ ಇದ್ದು, ಉಪೇಂದ್ರ ಅವರು ಕನಕದಾಸರಾಗಲಿದ್ದಾರೆ. ಈಗಾಗಲೇ ನಾವು ರಿಸರ್ಚ್ ವರ್ಕ್ ಮಾಡಿ ಕೆಲಸ ಆರಂಭಿಸಿಲಿದ್ದೇವೆ. ಉಪ್ಪಿ ಅವರು ಸಹ ಕಥೆ ಕೇಳಿ ಥ್ರಿಲ್ ಆಗಿದ್ದರೆ. ಎರಡು ಶೇಡ್‌ನಲ್ಲಿ ಅವರ ಪಾತ್ರ ಇರಲಿದೆ ಎಂದು ನಿರ್ದೇಶಕ ನಾಗಣ್ಣ ಮಾಹಿತಿ ನೀಡಿದ್ದಾರೆ.

    ಕನಕದಾಸರ ಐತಿಹಾಸಿಕ ಚಿತ್ರವನ್ನ ಅದ್ದೂರಿಯಾಗಿ ನಿರ್ಮಾಣ ಮಾಡಲಿದ್ದಾರೆ. ಈ ಹಿಂದೆ ‘ಎ’ ಚಿತ್ರ ನಿರ್ಮಿಸಿದ್ದ ಜಗನ್ನಾಥ್ ಅವರು ಉಪ್ಪಿ ಹೊಸ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಉಪ್ಪಿ ಜೊತೆ ಯಾರೆಲ್ಲಾ ನಟಿಸುತ್ತಾರೆ? ಶೂಟಿಂಗ್ ಯಾವಾಗ ಈ ಎಲ್ಲಾ ಮಾಹಿತಿಗಾಗಿ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

  • ಗ್ರಾಮ ವಾಸ್ತವ್ಯ ಮಾಡಿ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸ್ತಿದ್ದಾರೆ ತುಮಕೂರು ತಾ.ಪಂ.ಇಓ ನಾಗಣ್ಣ

    ಗ್ರಾಮ ವಾಸ್ತವ್ಯ ಮಾಡಿ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸ್ತಿದ್ದಾರೆ ತುಮಕೂರು ತಾ.ಪಂ.ಇಓ ನಾಗಣ್ಣ

    ತುಮಕೂರು: ಅಧಿಕಾರಿಗಳಲ್ಲಿ ಸೇವಾ ಮನೋಭಾವ, ಇಚ್ಚಾಶಕ್ತಿ ಇದ್ದರೆ ಸರ್ಕಾರದ ಎಲ್ಲಾ ಯೋಜನೆಗಳನ್ನು ಯಶಸ್ವಿಯಾಗಿಸಬಹುದು ಅನ್ನೋದಕ್ಕೆ ಈ ಅಧಿಕಾರಿ ಸ್ಪಷ್ಟ ಉದಾಹರಣೆ.

    ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಈ ಕಾರ್ಯನಿರ್ವಹಣಾಧಿಕಾರಿ ಹಗಲಿರುಳು ದುಡಿಯುತ್ತಿದ್ದಾರೆ. ತುಮಕೂರು ತಾಲೂಕು ಪಂಚಾಯತ್ ಇಓ ಡಾ.ನಾಗಣ್ಣ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಇವರ ಅವಿರತ ಪ್ರಯತ್ನದ ಫಲವಾಗಿ ಇಂದು ತುಮಕೂರು ತಾಲೂಕಿನಲ್ಲಿ 50455 ಟಾಯ್ಲೆಟ್ ನಿರ್ಮಾಣ ಆಗಿವೆ. ಇನ್ನು 3400 ಕುಟುಂಬಗಳು ಶೌಚಾಲಯ ನಿರ್ಮಿಸಿಕೊಂಡ್ರೆ, ತುಮಕೂರು ಬಯಲು ಶೌಚ ಮುಕ್ತ ತಾಲೂಕು ಎಂಬ ಗರಿಮೆಗೆ ಪಾತ್ರವಾಗುತ್ತದೆ.

    ಕಳೆದ 1 ವರ್ಷ 9 ತಿಂಗಳಿಂದ ಕೆಲ ಸರ್ಕಾರಿ ರಜೆ ಹೊರತುಪಡಿಸಿದ್ರೆ ಭಾನುವಾರವೂ ಸಹ ಹಳ್ಳಿಗಳಿಗೆ ತೆರಳಿ ಜಾಗೃತಿ ಮೂಡಿಸ್ತಿದ್ದಾರೆ. 120 ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಜಕ್ಕೆನಳ್ಳಿಯಲ್ಲಿ ಟಾಯ್ಲೆಟ್ ಕಟ್ಟಿಸಿಕೊಳ್ಳದ ಕುಟುಂಬಗಳ ವಿರುದ್ಧ ಗಾಂಧಿ ಅಸ್ತ್ರ ಪ್ರಯೋಗಿಸಿದ್ರು. ಸೆಪ್ಟೆಂಬರ್ 16ರಂದು ಗಾಂಧಿ ಟೊಪ್ಪಿಗೆ ಧರಿಸಿ ಸತ್ಯಾಗ್ರಹ ಕುಳಿತಿದ್ರು. ಪರಿಣಾಮ ಜಕ್ಕೆಹಳ್ಳಿ ಇಂದು ಬಯಲು ಶೌಚ ಮುಕ್ತ.

    ತುಮಕೂರು ತಾಲೂಕಿನಲ್ಲಿ ಈಗಾಗಲೇ ಶೇಕಡಾ 94.4 ರಷ್ಟು ಶೌಚಾಲಯ ನಿರ್ಮಾಣವಾಗಿದೆ. ಇನ್ನೆರಡು ತಿಂಗಳಲ್ಲಿ ತುಮಕೂರು ತಾಲೂಕು ಬಯಲು ಶೌಚಮುಕ್ತವಾಗುತ್ತೆ ಎಂಬ ವಿಶ್ವಾಸ ನಾಗಣ್ಣನವರದ್ದು. ಡಾ.ನಾಗಣ್ಣ ಸಚಿವ ಡಿಬಿ ಜಯಚಂದ್ರ ಬಳಿ ವಿಶೇಷಾಧಿಕಾರಿಯಾಗಿ ಸಹ ಕೆಲಸ ಮಾಡಿದ್ರು.

    https://www.youtube.com/watch?v=Q3G876gAxt4

  • ಮುನಿರತ್ನ ‘ಕುರುಕ್ಷೇತ್ರ’ದಲ್ಲಿ ದೀಪಾವಳಿ ಸಂಭ್ರಮಾಚರಣೆ

    ಮುನಿರತ್ನ ‘ಕುರುಕ್ಷೇತ್ರ’ದಲ್ಲಿ ದೀಪಾವಳಿ ಸಂಭ್ರಮಾಚರಣೆ

    ಬೆಂಗಳೂರು: ಶೂಟಿಂಗ್ ನಲ್ಲಿ ಫುಲ್ ಬ್ಯುಸಿಯಾಗಿರೋ ಮುನಿರತ್ನ ಕುರುಕ್ಷೇತ್ರ ಚಿತ್ರತಂಡ ಹೈದರಾಬಾದ್‍ನಲ್ಲಿ ದೀಪಾವಳಿ ಆಚರಿಸಿಕೊಂಡಿದೆ. ಅಭಿಮನ್ಯು ಪಾತ್ರಧಾರಿ ನಿಖಿಲ್ ಗೌಡ, ಕುರುಕ್ಷೇತ್ರದ ನಿರ್ಮಾಪಕ ಮುನಿರತ್ನ, ನಿರ್ದೇಶಕ ನಾಗಣ್ಣ ಸೇರಿದಂತೆ ಹಲವು ಸಹ ಕಲಾವಿದರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ರು.

    ಪಟಾಕಿ ಸಿಡಿಸಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿಕೊಂಡ ಚಿತ್ರತಂಡ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯ ಮಲ್ಟಿಸ್ಟಾರ್ ಕುರುಕ್ಷೇತ್ರ ಮುಂದಿನ ಸಂಕ್ರಾಂತಿಗೆ ತೆರೆಕಾಣುವ ಸಾಧ್ಯತೆಯಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಸ್ಯಾಂಡಲ್ ವುಡ್ ಖ್ಯಾತ ಕಲಾವಿದರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಎಂಬ ಖ್ಯಾತಿಯೂ ಮುನಿರತ್ನ ಕುರುಕ್ಷೇತ್ರಕ್ಕಿದೆ.