Tag: ನಸೀರುದ್ದೀನ್ ಶಾ

  • Gadar 2 ಸನ್ನಿ ಡಿಯೋಲ್‌ ಚಿತ್ರವನ್ನು ಟೀಕಿಸಿದ ನಸೀರುದ್ದೀನ್ ಶಾ

    Gadar 2 ಸನ್ನಿ ಡಿಯೋಲ್‌ ಚಿತ್ರವನ್ನು ಟೀಕಿಸಿದ ನಸೀರುದ್ದೀನ್ ಶಾ

    ನ್ನಿ ಡಿಯೋಲ್ ನಟನೆಯ ‘ಗದರ್ 2’ (Gadar 2) ಸಿನಿಮಾ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಜನಮನ್ನಣೆ ಗಳಿಸಿದೆ. ಹೀಗಿರುವಾಗ ಗದರ್ 2 ಚಿತ್ರದ ಬಗ್ಗೆ ಬಾಲಿವುಡ್‌ನ ಖ್ಯಾತ ನಟ ನಸೀರುದ್ದೀನ್ ಶಾ (Naseeruddin Shah)  ಟೀಕಿಸಿದ್ದಾರೆ. ಈ ರೀತಿಯ ಸಿನಿಮಾಗಳು ಸಮಾಜಕ್ಕೆ ಹಾನಿಕರ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:‘ಛೂಮಂತರ್’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿದ ರವಿಚಂದ್ರನ್

    ಇತ್ತೀಚಿನ ಸಂದರ್ಶನವೊಂದರಲ್ಲಿ ಸನ್ನಿ ಡಿಯೋಲ್ (Sunny Deol) ನಟನೆಯ ಗದರ್ 2 (Gadar 2) ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅತಿಯಾದ ದೇಶಪ್ರೇಮ ಅಪಾಯಕಾರಿ. ಸಿನಿಮಾದ ಜನಪ್ರಿಯತೆ ಅನ್ನೋದು ಇದರಿಂದಲೇ ಪ್ರೇರಿತಗೊಂಡಿದೆ. ಇಂದು ನಿಮ್ಮ ದೇಶವನ್ನು ಪ್ರೀತಿಸಿದರೆ ಸಾಕಾಗುವುದಿಲ್ಲ, ಕಾಲ್ಪನಿಕ ಶತ್ರುಗಳನ್ನು ಸೃಷ್ಟಿಸಿಕೊಳ್ಳಬೇಕು. ದಿ ಕೇರಳ ಸ್ಟೋರಿ, ಗದರ್ 2 ಚಿತ್ರಗಳು ಸಾಕಷ್ಟು ಹಾನಿಕರ. ನಾನು ಆ ಚಿತ್ರಗಳನ್ನು ನೋಡಿಲ್ಲ. ಆದರೆ, ಅವು ಯಾವ ವಿಚಾರದ ಬಗ್ಗೆ ಇದೆ ಅನ್ನೋದು ಗೊತ್ತಿದೆ ಎಂದಿದ್ದಾರೆ.

    ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ಕಮಾಯಿ ಮಾಡಿತ್ತು. ಕೇರಳದ ಯುವತಿಯರನ್ನು ಮತಾಂತರ ಮಾಡಿ ಉಗ್ರ ಸಂಘಟನೆಗೆ ಅವರನ್ನು ಸೇರಿಸುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಇದು ನೈಜ ಘಟನೆ ಆಧಾರಿತ ಎಂದು ತಂಡ ಹೇಳಿಕೊಂಡಿತ್ತು. ಅಂದು ಚಿತ್ರವನ್ನು ನಸೀರುದ್ದೀನ್ ಶಾ (Naseeruddin Shah) ಟೀಕಿಸಿದ್ದರು.

    ‘ಗದರ್ 2’ ಚಿತ್ರದ ಕಥೆಯೂ ಭಾರತ – ಪಾಕಿಸ್ತಾನ ಕುರಿತು ಒಳಗೊಂಡ ಕಥೆಯಾಗಿದೆ. ಮಗನ ರಕ್ಷಣೆಗೆ ಪಾಕಿಸ್ತಾನಕ್ಕೆ ತೆರಳುವ ತಂದೆಯಾಗಿ ಸನ್ನಿ ಡಿಯೋಲ್ ಕಾಣಿಸಿಕೊಳ್ಳುತ್ತಾರೆ. ನಾಯಕಿಯಾಗಿ ಅಮೀಷಾ ಪಟೇಲ್ ನಟಿಸಿದ್ದಾರೆ. ಅಂದಹಾಗೆ ಇತ್ತೀಚಿಗೆ ಚಿತ್ರತಂಡ ಸಕ್ಸಸ್ ಪಾರ್ಟಿ ಕೂಡ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿತ್ತು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಎಎ, ಎನ್‌ಆರ್‌ಸಿ ವಿರೋಧಿಸಿ ಅಹೋರಾತ್ರಿ ಧರಣಿ – ಮಗು ಹಿಡಿದು ಕುಳಿತ ಸೌಮ್ಯ ರೆಡ್ಡಿ

    ಸಿಎಎ, ಎನ್‌ಆರ್‌ಸಿ ವಿರೋಧಿಸಿ ಅಹೋರಾತ್ರಿ ಧರಣಿ – ಮಗು ಹಿಡಿದು ಕುಳಿತ ಸೌಮ್ಯ ರೆಡ್ಡಿ

    ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರೋ ಪೌರತ್ವ ತಿದ್ದುಪಡಿ ಕಾಯ್ದೆಯನ್ನ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಅದರಲ್ಲೂ ದೆಹಲಿಯಲ್ಲಿ ಪೌರತ್ವ ಕಾಯ್ದೆಯ ವಿರುದ್ಧದ ಪ್ರತಿಭಟನೆಯೂ ಹಿಂಸಾತ್ಮಕ ರೂಪ ಪಡೆದು ಅನೇಕ ಮಂದಿಯನ್ನು ಬಲಿಪಡೆದಿದೆ.

    ರಾಷ್ಟ್ರ ರಾಜಧಾನಿ ಮಾತ್ರವಲ್ಲ, ರಾಜ್ಯ ರಾಜಧಾನಿಯಲ್ಲೂ ಒಂದಿಲ್ಲೊಂದು ಭಾಗದಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಬೆಂಗಳೂರಿನಲ್ಲೂ ಶಾಹಿನ್ ಬಾಗ್ ರೀತಿಯಲ್ಲಿ ಅಹೋರಾತ್ರಿ ಧರಣಿ, ಪ್ರತಿಭಟನೆ ಕಳೆದ 20 ದಿನಗಳಿಂದ ನಡೆಯುತ್ತಿದೆ.

    ಹೌದು ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿರೋ ಬಿಲಾಲ್ ಮಸೀದಿಯ ಮುಂಭಾಗದಲ್ಲಿ ಪ್ರತಿದಿನ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಈ ಬಿಲಾಲ್ ಮಸೀದಿಯ ಮುಂಭಾಗದಲ್ಲಿ ನಡೆಯುತ್ತಿರೋ ಪ್ರತಿಭಟನೆಗೆ ಮತ್ತೊಂದು ಶಾಹಿನ್ ಬಾಗ್ ಎಂದು ಹೆಸರು ಕೊಟ್ಟಿದ್ದು, ಬಿಲಾಲ್ ಬಾಗ್ ಬೆಂಗಳೂರು ಎಂಬ ಹೆಸರಿನಡಿಯಲ್ಲಿ ಸೇವ್ ಇಂಡಿಯಾ, ಸಂವಿಧಾನವನ್ನ ರಕ್ಷಸಿ ಎಂದು ಬ್ಯಾನರ್ ಹಾಕಿಕೊಂಡು ನೂರಾರು ಮಹಿಳೆಯರು ಮಕ್ಕಳ ಸಮೇತ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ.

    ಇವರ ಅಹೋರಾತ್ರಿ ಧರಣಿಗೆ ಬಾಲಿವುಡ್ ನಟ ನಸೀರುದ್ದೀನ್ ಶಾ, ಶಾಸಕಿ ಸೌಮ್ಯ ರೆಡ್ಡಿ ಸಹ ಸಾಥ್ ನೀಡಿದ್ದಾರೆ. ಕೇಂದ್ರ ಸರ್ಕಾರ ಸಿಎಎ ಹಾಗೂ ಎನ್‌ಆರ್‌ಸಿ ಕಾಯ್ದೆಯನ್ನ ಹಿಂಪಡೆಯುವವರೆಗೆ ಧರಣಿ ಮಾಡಲು ಇಲ್ಲಿನ ಮಹಿಳೆಯರು ಹಾಗೂ ಸಾರ್ವಜನಿಕರು ನಿರ್ಧಾರ ಮಾಡಿದ್ದಾರೆ.