Tag: ನವ ಕರ್ನಾಟಕ ನಿರ್ಮಾಣ ಬಜೆಟ್

  • ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ 5,371 ಕೋಟಿ ರೂ.: ಬಜೆಟ್ ನಲ್ಲಿ ಮಹಿಳೆಯರಿಗೆ ಸಿಕ್ಕಿದ್ದು ಏನು?

    ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ 5,371 ಕೋಟಿ ರೂ.: ಬಜೆಟ್ ನಲ್ಲಿ ಮಹಿಳೆಯರಿಗೆ ಸಿಕ್ಕಿದ್ದು ಏನು?

    ಬೆಂಗಳೂರು: ಸಿಎಂ ಮತ್ತು ಹಣಕಾಸು ಸಚಿವರಾಗಿರುವ ಸಿದ್ದರಾಮಯ್ಯು ಇಂದು ತಮ್ಮ 13ನೇಯ ದಾಖಲೆ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‍ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿಗಾಗಿ 5,371 ಕೋಟಿ ರೂ. ಮೀಸಲಿರಸಲಾಗಿದೆ.

    2018-19ನೇ ಸಾಲಿನ ಹೊಸ ಯೋಜನೆಗಳು: ನಗರ ಪ್ರದೇಶಗಳಲ್ಲಿ ಹೊಸದಾಗಿ 250 ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲು 17.50 ಕೋಟಿ ಅನುದಾನ, ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ಪ್ರದೇಶಗಳಲ್ಲಿ ಅವರ ಮಕ್ಕಳ ಪಾಲನೆ ಮಾಡಲು 100 ಸಂಚಾರಿ ಅಂಗನವಾಡಿ ಕೇಂದ್ರ / ಶಿಶುಪಾಲನಾ ಕೇಂದ್ರಗಳ ಸ್ಥಾಪನೆಗೆ 10 ಕೋಟಿ ರೂ. ಮೀಸಲು.

    ಸ್ಕೂಟರ್ ಖರೀದಿಸಲು ಬಡ್ಡಿ ರಹಿತ ಸಾಲ: ಮಕ್ಕಳ ಸುರಕ್ಷತೆಗಾಗಿ, ಮಕ್ಕಳ ರಕ್ಷಣಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರತ್ಯೇಕ ನಿರ್ದೇಶನಾಲಯ ಪ್ರಾರಂಭ. ಇಲಾಖೆಯ ಮೇಲ್ವಿಚಾರಕಿಯರ ಕಾರ್ಯದಕ್ಷತೆಯನ್ನು ಹೆಚ್ಚಳ. 2,503 ಮೇಲ್ವಿಚಾರಕಿಯರಿಗೆ ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಸ್ಕೂಟರ್ ಖರೀದಿಸಲು 50,000 ರೂ.ಗಳ ಬಡ್ಡಿ ರಹಿತ ಸಾಲ ನೀಡುವುದರ ಜೊತೆ ಇಂಧನ ವೆಚ್ಚಕ್ಕಾಗಿ ಮಾಸಿಕ 1000 ರೂ. ಧನಸಹಾಯ. ರಾಜ್ಯದಲ್ಲಿನ ಅಂಗನವಾಡಿ ಮಕ್ಕಳ ಪೌಷ್ಟಿಕತಾ ಮಟ್ಟವನ್ನು ಮಾಪನ ಮಾಡಲು ನ್ಯೂಟ್ರೈನ್ ಸರ್ವೆಯನ್ನು ಆರಂಭ.

    ಬುದ್ಧಿಮಾಂದ್ಯ ವಯಸ್ಕರಿಗೆ ಸೂಕ್ತ ವೃತ್ತಿ ತರಬೇತಿ ನೀಡಿ, ಅವರನ್ನು ವೃತ್ತಿ ಚಟುವಟಿಕೆಗಳಲ್ಲಿ ತೊಡಗಿಸಿ ವಿಶ್ವಸಂಸ್ಥೆಯ 2030ರ ಅಭಿವೃದ್ಧಿ ಕಾರ್ಯಸೂಚಿಯಂತೆ ಎಲ್ಲರನ್ನೊಳಗೊಂಡ ಅಭಿವೃದ್ಧಿ ಸಾಧನೆಯ ಉದ್ದೇಶದಿಂದ ಪ್ರಾಯೋಗಿಕವಾಗಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ತಲಾ ಒಂದರಂತೆ ವೃತ್ತಿ ತರಬೇತಿ ಕೇಂದ್ರ ಸ್ಥಾಪಿಸಲು 1.80 ಕೋಟಿ ರೂ. ಅನುದಾನ.

    ವಿಕಲಚೇತನರ ಹಕ್ಕುಗಳ ಕಾಯ್ದೆ 2016ರ ಅನುಸಾರ ಅಂಗವಿಕಲತೆಯ ಪ್ರಮಾಣ ಹೊಂದಿರುವ ವ್ಯಕ್ತಿಗಳಿಗೆ ಎ ಮತ್ತು ಬಿ ಸಮೂಹದ ಹುದ್ದೆಗಳಲ್ಲಿ ಶೇ. 4ರಷ್ಟು ಮೀಸಲಾತಿ. ವಿಕಲಚೇತನರಿಗಾಗಿ ನಮ್ಮ ಸರ್ಕಾರವು ಸಿ ಮತ್ತು ಡಿ ಸಮೂಹದ ಹುದ್ದೆಗಳಿಗೆ ಈಗಾಗಲೇ ಶೇ. 5ರಷ್ಟು ಮೀಸಲಾತಿ.

    ಅಂಗವಿಕಲತೆಯ ಪ್ರಮಾಣ ಹೊಂದಿರುವವ್ಯಕ್ತಿಗಳಿಗೆ ವಿಕಲಚೇತನರ ಹಕ್ಕುಗಳ ಕಾಯ್ದೆ-2016ರ ಅನುಸಾರ ಕೆಳಕಂಡಂತೆ ಸೌಲಭ್ಯಗಳು.
    1. ಅಂಗವಿಕಲತೆಯ ಪ್ರಮಾಣಕ್ಕನುಸಾರ ಮಹಿಳೆಯರಿಗೆ ಸೂಕ್ತ ಆದ್ಯತೆ ನೀಡುವುದರೊಂದಿಗೆ ಎಲ್ಲಾ ಸಂಬಂಧಪಟ್ಟ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮ. ಕೃಷಿ ಭೂಮಿ ಹಂಚಿಕೆ ಮತ್ತು ವಸತಿಯಲ್ಲಿ ಶೇ. 5ರಷ್ಟು ಮೀಸಲಾತಿ.
    2. ಅಂಗವಿಕಲತೆಯ ಪ್ರಮಾಣಕ್ಕನುಸಾರವಾಗಿ ಮಹಿಳೆಯರಿಗೆ ಸೂಕ್ತ ಆದ್ಯತೆ ನೀಡುವುದರೊಂದಿಗೆ ಬಡತನ ನಿರ್ಮೂಲನೆ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಶೇ. 5ರಷ್ಟು ಮೀಸಲಾತಿ
    3. ವಸತಿ, ಆಶ್ರಯ, ವೃತ್ತಿ, ವ್ಯಾಪಾರ, ಉದ್ಯಮ, ಮನರಂಜನಾ ಕೇಂದ್ರಗಳು ಮತ್ತು ಉತ್ಪಾದನಾ ಕೇಂದ್ರಗಳನ್ನು ಪ್ರಾರಂಭಿಸಲು ಉತ್ತೇಜಿಸುವ ಉದ್ದೇಶಕ್ಕಾಗಿ ಭೂಮಿಯನ್ನು ಬಳಸಲು ರಿಯಾಯಿತಿ ದರದಲ್ಲಿ ಭೂಮಿ ಹಂಚಿಕೆಯಲ್ಲಿ ಶೇ. 5ರಷ್ಟು ಮೀಸಲಾತಿ.

    ಮಹಿಳೆಯರ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ಮೂಡಿಸಲು ಮತ್ತು ಸುರಕ್ಷಿತ ವಾತಾವರಣವನ್ನು ಕಲ್ಪಿಸಲು ಸರ್ಕಾರಿ ಸಿಬ್ಬಂದಿಗಳಿಗೆ / ಸಮುದಾಯ ಪೊಲೀಸ್ ಸ್ವಯಂ ಸೇವಕರು / ರೆಸಿಡೆಂಟ್ ವೆಲ್‍ಫೇರ್ ಅಸೋಸಿಯೇಷನ್ / ಶಾಲಾ / ಕಾಲೇಜು ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಬಾಲಕರಿಗೆ ಲಿಂಗತ್ವದ ಬಗ್ಗೆ ಅರಿವು ಮೂಡಿಸಲು 2 ಕೋಟಿ ರೂ. ಮೀಸಲು.

    ಮಹಿಳೆಯರಿಗಾಗಿ ಸಮಗ್ರ ಮಾಹಿತಿ ಸಂಪನ್ಮೂಲ ಪೋರ್ಟಲ್ ಅನ್ನು ಪ್ರಾರಂಭಿಸಿ, ಅವಶ್ಯಕ ಮಾಹಿತಿಗಳಾದ ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳು, ಸೌಲಭ್ಯಗಳು, ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಲು 1 ಕೋಟಿ ರೂ.ಗಳನ್ನು ಅನುದಾನ.

    ಟ್ರಾನ್ಸಿಟ್ ಹಾಸ್ಟೆಲ್: ಬೆಂಗಳೂರು ನಗರಕ್ಕೆ ಉದ್ಯೋಗ ಸಂದರ್ಶನ, ಪ್ರವೇಶ ಪರೀಕ್ಷೆ ಇತ್ಯಾದಿಗಳಿಗೆ ಹಾಜರಾಗಲು ಬರುವ ಯುವತಿಯರಿಗೆ ಸ್ವಯಂ ಸೇವಾ
    ಸಂಸ್ಥೆಗಳ / ಖಾಸಗಿ ಸಹಭಾಗಿತ್ವ ಸಹಾಯದೊಂದಿಗೆ ಟ್ರಾನ್ಸಿಟ್ ಹಾಸ್ಟೆಲ್‍ಗಳನ್ನು ಪ್ರಾರಂಭ. ಮಹಿಳಾ ಉದ್ದಿಮೆದಾರರನ್ನು ಪ್ರೋತ್ಸಾಹಿಸಲು ಸಾರ್ವಜನಿಕ ಸೇವೆಗಳ ಸಂಗ್ರಹಣೆಯಲ್ಲಿ (ಕ್ಯಾಟರಿಂಗ್, ಹೌಸ್ ಕೀಪಿಂಗ್, ನಗರ ಪ್ರದೇಶ ಸ್ಥಳೀಯ ಸಂಸ್ಥೆಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಇತ್ಯಾದಿ) ಮಹಿಳಾ ಸ್ವಸಹಾಯ.