Tag: ನವೆಹಲಿ

  • ಪಕ್ಷದ ಅಧ್ಯಕ್ಷರು ಇಡಿ ಮುಂದೆ ಹೋಗುವಾಗ ನಾನು ಹುಟ್ಟುಹಬ್ಬ ಆಚರಿಸೋದು ಸರಿಯಲ್ಲ: ಖರ್ಗೆ

    ಪಕ್ಷದ ಅಧ್ಯಕ್ಷರು ಇಡಿ ಮುಂದೆ ಹೋಗುವಾಗ ನಾನು ಹುಟ್ಟುಹಬ್ಬ ಆಚರಿಸೋದು ಸರಿಯಲ್ಲ: ಖರ್ಗೆ

    ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜುಲೈ 21ಕ್ಕೆ ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ. ವಿಪರ್ಯಾಸ ಎಂದರೆ 21ರಂದು ನನ್ನ 81ನೇ ವರ್ಷದ ಜನ್ಮದಿನ. ಹೀಗಾಗಿ ಅವರು ಇಡಿ ಮುಂದೆ ಹೋಗುವಾಗ ನಾನು ಹುಟ್ಟುಹಬ್ಬ ಆಚರಿಸುವುದು ಸರಿಯಲ್ಲ ಎಂದು ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬೆಂಬಲಿಗರು, ಅಭಿಮಾನಿಗಳು ಬೆಂಗಳೂರಿಗೆ ಬರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. 1 ತಿಂಗಳಿಂದ ಜನ್ಮ ದಿನಾಚರಣೆ ಚರ್ಚೆ ಮಾಡುತ್ತಿದ್ದರು. ಆದರೆ ನಮ್ಮ ಅಧ್ಯಕ್ಷರಾದ ಸೋನಿಯಾ ಅವರು ತೊಂದರೆಯಲ್ಲಿದ್ದಾರೆ, ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಇಡಿ ಮುಂದೆ ಅವರು ಹೋಗುವಾಗ ನಾನು ಹುಟ್ಟು ಹಬ್ಬ ಆಚರಿಸುವುದು ಸರಿಯಲ್ಲ. ಹೀಗಾಗಿ ನಮ್ಮ ಬೆಂಬಲಿಗರಿಗೆ, ಹಿತೈಷಿಗಳಿಗೆ ಯಾರೂ ಬೆಂಗಳೂರು, ದೆಹಲಿಗೆ ಬರುವುದು ಬೇಡ ಎಂದು ಕೇಳಿಕೊಳ್ಳುತ್ತೇನೆ. ಜನ್ಮ ದಿನಾಚರಣೆ ಆಚರಿಸುವುದಿಲ್ಲ. ನಾವು ಸೋನಿಯಾ ಗಾಂಧಿ ಅವರಿಗೆ ನೈತಿಕ ಬೆಂಬಲ ನೀಡಬೇಕಿದೆ ಎಂದು ಹೇಳಿದರು.

    ಒಕ್ಕಲಿಗ ಜಾತಿಯ ವ್ಯಕ್ತಿ ಸಿಎಂ ಆಗಬೇಕು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊದಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ನಾವು ಹೋರಾಟ ಮಾಡುತ್ತಿದ್ದೇವೆ. ಬಹುಮತ ಬಂದ ಮೇಲೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ತತ್ವ, ಸಿದ್ದಾಂತ ಉಳಿಸಲು ನಾವು ಹೋರಾಟ ಮಾಡಬೇಕು. ಎಷ್ಟೋ ಪಕ್ಷಗಳು ಒಮ್ಮೆಯೂ ಅಧಿಕಾರಕ್ಕೆ ಬಂದಿಲ್ಲ. ಆದರೂ ಅವು ನಂಬಿದ ಸಿದ್ಧಾಂತ ಬಿಟ್ಟು ಬೇರೆ ಕಡೆ ಹೋಗಿಲ್ಲ. ಪ್ರಜಾಪ್ರಭುತ್ವ ಮತ್ತು ಕಾಂಗ್ರೆಸ್ ಸಿದ್ಧಾಂತಕ್ಕೆ ನಾವು ಬದ್ಧರಾಗಿರಬೇಕು ಎಂದರು.

    ಸಿದ್ದರಾಮೋತ್ಸವ ಬಗ್ಗೆ ನಾನು ಏನೂ ಹೇಳಲಾರೆ. ಅದು ಆಗಸ್ಟ್ 3ಕ್ಕೆ ನಡೆಯುತ್ತೆ, ನನ್ನ ಜನ್ಮದಿನ 21ಕ್ಕೆ ನಡೆಯುತ್ತೆ ಎಂದು ಖರ್ಗೆ ತಿಳಿಸಿದರು. ಇದನ್ನೂ ಓದಿ: ನೂಪುರ್ ಶರ್ಮಾಗೆ ಬಿಗ್ ರಿಲೀಫ್- ಆಗಸ್ಟ್ 10ರವರೆಗೂ ಬಂಧಿಸದಂತೆ ಸುಪ್ರೀಂ ಸೂಚನೆ

    Live Tv
    [brid partner=56869869 player=32851 video=960834 autoplay=true]

  • ನಾಳೆ ಸಂಪೂರ್ಣ ಸೂರ್ಯಗ್ರಹಣ – ಭಾರತದ ಮೇಲೆ ಪರಿಣಾಮ ಬೀರಲಿದ್ಯಾ?

    ನಾಳೆ ಸಂಪೂರ್ಣ ಸೂರ್ಯಗ್ರಹಣ – ಭಾರತದ ಮೇಲೆ ಪರಿಣಾಮ ಬೀರಲಿದ್ಯಾ?

    ನವದೆಹಲಿ: ಆಗಸ್ಟ್ 21ರಂದು ಸಂಪೂರ್ಣ ಸೂರ್ಯ ಗ್ರಹಣ. 38 ವರ್ಷಗಳ ಬಳಿಕ ಅಂದ್ರೆ 1979ರ ಬಳಿಕ ಸಂಭವಿಸುತ್ತಿರುವ ಮೊದಲ ಅತೀ ದೊಡ್ಡ ಸೂರ್ಯ ಗ್ರಹಣ ಇದಾಗಿದ್ದು ಅಮೆರಿಕಾ, ಯುರೋಪ್ ಮತ್ತು ಆಫ್ರಿಕಾ ದೇಶಗಳಲ್ಲಿ ಮಾತ್ರ ಇದರ ದರ್ಶನ ಆಗಲಿದೆ.

    ನ್ಯೂಯಾರ್ಕ್ ಕಾಲಮಾನ ಪ್ರಕಾರ ಮಧ್ಯಾಹ್ನ 12.05 ಗಂಟೆಗೆ ಆರಂಭವಾಗುವ ಸೂರ್ಯಗ್ರಹಣ ಸಂಜೆ 4.09ರ ಹೊತ್ತಿಗೆ ಮುಗಿಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಸೂರ್ಯಗ್ರಹಣ ಸಂಭವಿಸಿದಾಗ ಭಾರತದಲ್ಲಿ ರಾತ್ರಿ ಆಗಿರುತ್ತದೆ. ಹೀಗಾಗಿ ಭಾರತದಲ್ಲಿ ಇದರ ಪರಿಣಾಮವಿರಲ್ಲ.

    ಪೂರ್ಣ ಗ್ರಹಣದ ವೇಳೆ ಗ್ರಹಣ ಕಾಣಿಸುವ ದೇಶದ ಬಹುತೇಕ ಭಾಗಗಳಲ್ಲಿ ಕತ್ತಲು ಆವರಿಸಲಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದು ಹೋಗುವ ಮೂಲಕ ಭೂಮಿಯ ಮೇಲೆ ಚಂದ್ರನ ನೆರಳು ಆವರಿಸುವ ಈ ವಿದ್ಯಮಾನವು ಸುಮಾರು ಮೂರು ಗಂಟೆಗಳ ಕಾಲ ನಡೆಯಲಿದೆ. 2 ನಿಮಿಷ 40 ಸೆಕೆಂಡ್‍ಗಳ ಕಾಲ ಸೂರ್ಯನನ್ನು ಚಂದ್ರ, ಭೂಮಿ ಸಂಪೂರ್ಣವಾಗಿ ಮರೆ ಮಾಡಲಿದೆ. ಆಫ್ರಿಕಾ ಮತ್ತು ಯೂರೋಪ್‍ನಿಂದಲೂ ಪಾರ್ಶ್ವ ಗ್ರಹಣ ದರ್ಶನವಾಗಲಿದೆ ಎಂದು ಖಗೋಳ ತಜ್ಞರು ಹೇಳಿದ್ದಾರೆ.

    ಈ ಖಗ್ರಾಸ ಸೂರ್ಯಗ್ರಹಣವನ್ನು ಬರೀಗಣ್ಣಿನಿಂದ ನೋಡಬೇಡಿ. ಯಾಕೆಂದರೆ ಇದರಿಂದ ಕಣ್ಣಿನ ರೆಟಿನಾ (ಅಕ್ಷಿಪಟಲ) ಸುಟ್ಟು ಹೋಗಬಹುದು ಅಥವಾ ಕಣ್ಣಿನಲ್ಲಿ ಶಾಶ್ವತ ಅಂಧತ್ವ ಉಂಟಾಗಬಹುದು ಎಂದು ಪರಿಣತ ತಜ್ಞರು ಎಚ್ಚರಿಕೆ ನೀಡಿದ್ದಾರೆ.