Tag: ನವೀನ್

  • ನವೀನ್ ಮೃತದೇಹ ಸಿಕ್ಕಿದೆ: ಬೊಮ್ಮಾಯಿ

    ನವೀನ್ ಮೃತದೇಹ ಸಿಕ್ಕಿದೆ: ಬೊಮ್ಮಾಯಿ

    ಬೆಂಗಳೂರು: ನವೀನ್ ಮೃತದೇಹ ಸಿಕ್ಕಿದೆ. ಉಕ್ರೇನಿನ ಶವಾಗಾರದಲ್ಲಿ ನವೀನ್‍ನ ಮೃತ ದೇಹ ಇಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನವೀನ್ ಮೃತ ದೇಹವನ್ನು ತರುವ ಬಗ್ಗೆ ಕೇಂದ್ರ ಸಚಿವ ಜೈಶಂಕರ್ ಅವರ ಜತೆ ಮಾತಾಡಿದ್ದೇನೆ. ರಾಯಭಾರಿ ಕಚೇರಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆ. ಮೃತದೇಹ ತರುವ ಬಗ್ಗೆ ಮಾತುಕತೆ ನಡೆಸುತ್ತೇವೆ ಎಂದು ಹೇಳಿದರು.

    ರಷ್ಯಾ ಉಕ್ರೇನ್ ಮೇಲೆ ಇನ್ನೂ ದಾಳಿ ನಡೆಸುತ್ತಿದೆ. ಜೊತೆಗೆ ಉಕ್ರೇನ್‍ನಲ್ಲಿ ಶೆಲ್ ದಾಳಿ ಇನ್ನೂ ನಡೀತಿದೆ. ಅದು ನಿಂತ ಮೇಲೆ ಮೃತ ದೇಹ ತರುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಪಡೆಗೆ ಸೇರಿದ ತಮಿಳುನಾಡಿನ ಯುವಕ

    ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸುವುದು ಚುನಾವಣೆ ವೇಳೆಯೇ ನಿರೀಕ್ಷೆ ಇತ್ತು. ಯುಪಿ, ಉತ್ತರಾಖಂಡ್, ಗೋವಾ, ಮಣಿಪುರಗಳಲ್ಲಿ ಜಯ ಸಾಧಿಸುವುದು ಗೊತ್ತಾಗಿತ್ತು. ಆ ನಿರೀಕ್ಷೆಗೆ ತಕ್ಕಂತೆ ಚುನಾವಣಾ ಸಮಿಕ್ಷೆಗಳು ಸಹ ಬಂದಿದೆ. ಇನ್ನೂ ಎರಡು ದಿನ ಕಾದು ನೋಡೋಣ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿಶ್ವ ಯುದ್ಧ ನಂತ್ರ ಫಸ್ಟ್ ಟೈಂ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರ

  • ನವೀನ್ ಬೆಳಗ್ಗೆ ನಮ್ಮೊಂದಿಗೆ ಬರುತ್ತಿದ್ದರೆ ಉಳಿಯುತ್ತಿದ್ದ: ಸ್ನೇಹಿತೆ ವರ್ಷಿತಾ

    ನವೀನ್ ಬೆಳಗ್ಗೆ ನಮ್ಮೊಂದಿಗೆ ಬರುತ್ತಿದ್ದರೆ ಉಳಿಯುತ್ತಿದ್ದ: ಸ್ನೇಹಿತೆ ವರ್ಷಿತಾ

    ಕೋಲಾರ: ನವೀನ್ ಬೆಳಗ್ಗೆ 6 ಗಂಟೆಗೆ ನಮ್ಮ ಜೊತೆ ಬರುತ್ತಿದ್ದರೆ ಉಳಿಯುತ್ತಿದ್ದ. 10 ಗಂಟೆಗೆ ನವೀನ್ ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಅನ್ನೋದನ್ನು ಕೇಳಿ ಅತೀವ ದುಃಖವಾಯಿತು ಎಂದು ಉಕ್ರೇನ್‍ನಿಂದ ವಾಪಸ್ ಆದ ಕೋಲಾರದ ವರ್ಷಿತಾ ಬೇಸರ ವ್ಯಕ್ತಪಡಿಸಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ನವೀನ್ ಒಳ್ಳೆಯ ಸ್ನೇಹಿತರು. ಇಬ್ಬರೂ ವಾಪಸ್ ಭಾರತಕ್ಕೆ ಬರುವ ಬಗ್ಗೆ ಮಾತನಾಡಿಕೊಂಡಿದ್ದವು. ಎಲ್ಲದರಲ್ಲೂ ನವೀನ್ ತುಂಬಾ ಒಳ್ಳೆಯ ಸ್ನೇಹಿತನಾಗಿದ್ದ. ಎಲ್ಲರೊಂದಿಗೆ ಸಂತೋಷದಿಂದ, ತಮಾಷೆ ಮಾಡಿಕೊಂಡು ನಗುನಗುತ್ತಾ ಇರ್ತಿದ್ದ. ನವೀನ್‍ಗೆ ಯಾರೂ ವಿರೋಧಿಗಳಿರಲಿಲ್ಲ. ಎಲ್ಲರೊಂದಿಗೆ ಕುಟುಂಬಸ್ಥರಂತೆ ಬೆರೆಯುತ್ತಿದ್ದ ಎಂದು ಹೇಳಿದರು.

    ನಾನು ರೈಲ್ವೇ ನಿಲ್ದಾಣದಲ್ಲಿದ್ದಾಗ ನವೀನ್ ಇಲ್ಲಾ ಅನ್ನೋ ವಿಷಯ ಕೇಳಿ ದು:ಖವಾಯಿತು. ನನಗೆ ಹೆಚ್ಚಾಗಿ ಉಕ್ರೇನ್‍ನಲ್ಲಿ ಏನೂ ಗೊತ್ತಿರಲಿಲ್ಲ, ಎಲ್ಲವನ್ನೂ ತೋರಿಸಿ ನನ್ನ ಜೊತೆಗಿದ್ದವನು ನವೀನ್. ಇಂದಿಗೂ ನವೀನ್ ಇಲ್ಲಾ ಅನ್ನೋದನ್ನ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಕಣ್ಣೀರು ಹಾಕಿದರು. ಇದನ್ನೂ ಓದಿ: ಚಿಕ್ಕೋಡಿ ಯೋಧನಿಂದ ನಾಲ್ಕು ಯೋಧರಿಗೆ ಗುಂಡು – ಹತ್ಯೆಯ ಹಿಂದಿನ ಕಾರಣ ರಿವೀಲ್

    ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ, ರಾಯಭಾರಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಪೋಲ್ಯಾಂಡ್ ಗಡಿಯಿಂದ ನಮ್ಮ ಮನೆಯವರೆಗೆ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ. ಬಾಂಬ್ ದಾಳಿ, ಗುಂಡಿನ ದಾಳಿ ನೋಡಿದರೆ ನಾನು ವಾಪಸ್ ಬರುತ್ತೇನೆ ಅನ್ನೋ ನಂಬಿಕೆ ಇರಲಿಲ್ಲ. ತಂದೆ-ತಾಯಿ ಧೈರ್ಯ ಹೇಳಿದ ಮೇಲೆ ಎಲ್ಲಾ ಕಷ್ಟವನ್ನು ಎದುರಿಸಿಕೊಂಡು ಇಂದು ವಾಪಸ್ಸಾಗಿದ್ದೇನೆ. ಅಷ್ಟು ದೂರದಿಂದ ಇಲ್ಲಿಗೇಕೆ ಬಂದೆ ಎನ್ನಿಸಿತ್ತು. ಆದರೆ ತಂದೆ ಹೇಳಿದ ಧೈರ್ಯದ ಮಾತುಗಳಿಂದ ನಾನು ವಾಪಸ್ಸಾಗಿದ್ದೇನೆ ಎಂದರು.

    ಕೇಂದ್ರ ಸರ್ಕಾರ ಜವಬ್ದಾರಿ ವಹಿಸಿದ್ದಕ್ಕೆ ನಾನು ಇಂದು ಸುರಕ್ಷಿತವಾಗಿ ವಾಪಸ್ಸಾಗಿದ್ದೇನೆ. ಎಲ್ಲ ವ್ಯವಸ್ಥೆಗಳನ್ನು ಮಾಡಿ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ವರ್ಷಿತಾ ತಿಳಿಸಿದರು. ಇದನ್ನೂ ಓದಿ: ಭಾರತೀಯರಿಗೆ ಎರಡು ಮಾರ್ಗ ತೆರೆದ ರಷ್ಯಾ

  • ನವೀನ್ ಕುಟುಂಬಕ್ಕೆ 1 ಲಕ್ಷ ರೂ. ವಿತರಿಸಿದ ಎಂ.ಪಿ.ರೇಣುಕಾಚಾರ್ಯ

    ನವೀನ್ ಕುಟುಂಬಕ್ಕೆ 1 ಲಕ್ಷ ರೂ. ವಿತರಿಸಿದ ಎಂ.ಪಿ.ರೇಣುಕಾಚಾರ್ಯ

    ಹಾವೇರಿ: ರಷ್ಯಾ ಮತ್ತು ಉಕ್ರೇನ್ ಯುದ್ಧ ಪ್ರಾರಂಭವಾಗಿ 11 ದಿನಗಳು ಕಳೆದಿದೆ. ಯುದ್ಧ ನಿಲ್ಲುವ ಯಾವ ಲಕ್ಷಗಳು ಕೂಡ ಕಾಣುತ್ತಿಲ್ಲ. ಇಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಉಕ್ರೇನ್‍ನಲ್ಲಿ ಶೆಲ್ ದಾಳಿಗೆ ತುತ್ತಾದ ನವೀನ್ ನಿವಾಸಕ್ಕೆ ಭೇಟಿ ಸಾಂತ್ವನ ಹೇಳಿದರು.

    ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸಕ್ಕೆ ಭೇಟಿ ನೀಡಿ ನವೀನ್ ಭಾವಚಿತ್ರಕ್ಕೆ ಪುಷ್ಪ ಹಾಕಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ರೇಣುಕಾಚಾರ್ಯ ಅವರು ವೈಯಕ್ತಿಕವಾಗಿ ಒಂದು ಲಕ್ಷ ರುಪಾಯಿ ವಿತರಿಸಿದರು. ಇದನ್ನೂ ಓದಿ: ನವೀನ್ ಕುಟುಂಬಸ್ಥರಿಗೆ 1 ಲಕ್ಷ ರೂ. ಚೆಕ್ ವಿತರಿಸಿದ ಸಲೀಂ ಅಹಮದ್

    ಬಳಿಕ ಮಾತನಾಡಿದ ಅವರು, ನವೀನ್ ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ಮನೆಯವರು ಹಾಗೂ ಸ್ಥಳೀಯ ಶಾಸಕರ ಜೊತೆಗೂ ನಿರಂತರ ಸಂಪರ್ಕದಲ್ಲಿದ್ದರು. ಕೊನೆಯ ಬಾರಿ ನವೀನ್ ಮುಖ ನೋಡಬೇಕು ಎಂಬುದು ಮನೆಯವರ ಆಸೆಯಾಗಿದೆ. ಅವರ ಪಾರ್ಥಿವ ಶರೀರ ತರುವ ಸಲುವಾಗಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರ ಕೂಡ ಪಾರ್ಥಿವ ಶರೀರ ತರುವ ಸಲುವಾಗಿ ಪ್ರಯತ್ನ ನಡೆಸಿದೆ ಎಂದರು.

    ಉಕ್ರೇನ್‍ನಲ್ಲಿರುವ ಇನ್ನೂ ಹಲವು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಸಿವಿನಿಂದ ಬಳಲುವ ಸಂದರ್ಭದಲ್ಲಿ ಉಪಹಾರ ತರಲು ಹೋಗಿ ನವೀನ್ ಮೃತಪಟ್ಟಿದ್ದಾರೆ. ಆ ದೇಶದ ಆಂತರಿಕ ವಿಚಾರಗಳಿಂದ ಒಬ್ಬ ವಿದ್ಯಾರ್ಥಿಯನ್ನು ಕಳೆದುಕೊಂಡಿದ್ದೇವೆ. ಇದು ಅತ್ಯಂತ ನೋವಿನ ಸಂಗತಿ. ನವೀನ ಕುಟುಂಬ ಸಾಕಷ್ಟು ನೋವಿನಲ್ಲಿ ನರಳುತ್ತಿದೆ ಎಂದರು. ಇದನ್ನೂ ಓದಿ: ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ನೆರವು ನೀಡಿದ ಬಿಎಸ್‍ವೈ

    ಕೇಂದ್ರ ಮತ್ತು ರಾಜ್ಯ ಸರ್ಕಾರ ನಾವೆಲ್ಲರೂ ಸೇರಿ ನವೀನ್ ಕುಟುಂಬದ ಓರ್ವ ಸದಸ್ಯರಾಗಿ ಪಾರ್ಥಿವ ಶರೀರ ತರುವ ಕೆಲಸ ಮಾಡುತ್ತಿದ್ದೇವೆ. ನವೀನ್ ಕಳೆದುಕೊಂಡ ದುಃಖ ಭರಿಸುವ ಶಕ್ತಿಯನ್ನ ದೇವರು ಅವರ ತಂದೆ-ತಾಯಿಗೆ ನೀಡಲಿ ಎಂದು ರೇಣುಕಾಚಾರ್ಯ ಅವರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

  • ನವೀನ್ ಕುಟುಂಬಸ್ಥರಿಗೆ 1 ಲಕ್ಷ ರೂ. ಚೆಕ್ ವಿತರಿಸಿದ ಸಲೀಂ ಅಹಮದ್

    ನವೀನ್ ಕುಟುಂಬಸ್ಥರಿಗೆ 1 ಲಕ್ಷ ರೂ. ಚೆಕ್ ವಿತರಿಸಿದ ಸಲೀಂ ಅಹಮದ್

    ಹಾವೇರಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಕನ್ನಡಿಗ ನವೀನ್ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ಅವರ ನಿವಾಸಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಭೇಟಿ ನೀಡಿದ್ದಾರೆ.

    ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರೋ ನಿವಾಸಕ್ಕೆ ಭೇಟಿ ನೀಡಿ, ನವೀನ್ ಭಾವಚಿತ್ರಕ್ಕೆ ಹೂಮಾಲೆ ಹಾಕಿ ನಂತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೆ ಕುಟುಂಬಸ್ಥರಿಗೆ ಸಲೀಂ 1 ಲಕ್ಷ ರೂ. ಚೆಕ್ ವಿತರಿಸಿದರು. ಈ ವೇಳೆ ನವೀನ್ ಪಾರ್ಥೀವ ಶರೀರ ತರಬೇಕೆಂಬುದು ಕುಟುಂಬಸ್ಥರು ಸಲೀಂ ಮುಂದೆ ಆಗ್ರಹಿಸಿದರು. ಇದನ್ನೂ ಓದಿ: ಮೃತ ನವೀನ್ ಕುಟುಂಬಕ್ಕೆ ಸಾಂತ್ವನ ಹೇಳಿ 25 ಲಕ್ಷ ರೂ. ಚೆಕ್ ಕೊಟ್ಟ ಸಿಎಂ

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಲೀಂ, ಆದಷ್ಟು ಬೇಗ ಸರ್ಕಾರ ನವೀನ್ ಪಾರ್ಥಿವ ಶರೀರ ತರುವ ಕೆಲಸ ಮಾಡಬೇಕು. ಮೃತದೇಹ ತರುವುದರ ಜೊತೆಗೆ ಉಕ್ರೇನ್ ನಲ್ಲಿ ಸಿಲುಕಿರುವ ಎಲ್ಲ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಮಾಡಬೇಕು. ನವೀನ್ ಸಾವು ಸಾಕಷ್ಟು ದುಃಖ ತಂದಿದೆ. ನಮ್ಮಲ್ಲಿನ ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ನವೀನ್ ಸಾವು ರಾಜ್ಯಕ್ಕೆ ಒಂದು ಸಂದೇಶ ಕೊಟ್ಟಿದೆ ಎಂದು ಹೇಳಿದರು.

  • ಮೃತ ನವೀನ್ ಕುಟುಂಬಕ್ಕೆ ಸಾಂತ್ವನ ಹೇಳಿ 25 ಲಕ್ಷ ರೂ. ಚೆಕ್ ಕೊಟ್ಟ ಸಿಎಂ

    ಮೃತ ನವೀನ್ ಕುಟುಂಬಕ್ಕೆ ಸಾಂತ್ವನ ಹೇಳಿ 25 ಲಕ್ಷ ರೂ. ಚೆಕ್ ಕೊಟ್ಟ ಸಿಎಂ

    ಹಾವೇರಿ: ಉಕ್ರೇನ್-ರಷ್ಯಾ ಯುದ್ಧದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿ ನವೀನ್ ಕುಟುಂಬಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಾಂತ್ವನ ಹೇಳಿ 25 ಲಕ್ಷ ರೂ. ಪರಿಹಾರದ ಚೆಕ್ ಕೊಟ್ಟಿದ್ದಾರೆ.

    ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಕೇರಿ ಗ್ರಾಮದಲ್ಲಿರುವ ನವೀನ್ ಕುಟುಂಬವನ್ನು ಬೊಮ್ಮಾಯಿ ಮತ್ತು ಬಿಜೆಪಿ ಮುಖಂಡರು ಭೇಟಿ ಮಾಡಿ ಅವರಿಗೆ ಸಾಂತ್ವದ ಮಾತುಗಳನ್ನಾಡಿದ್ದಾರೆ. ಸಿಎಂ ಬೊಮ್ಮಾಯಿ ಅವರು ನವೀನ್ ಭಾವಚಿತ್ರಕ್ಕೆ ಹೂವು ಹಾಕಿ ನಮನ ಸಲ್ಲಿಸಿದರು.

    ತಂದೆ ಶೇಖರ್ ಗೌಡ ಅವರ ಕೈಗೆ 25 ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಿದ ವೇಳೆ ನವೀನ್ ಮೃತ ದೇಹ ಚಳಗೇರಿಗೆ ತರುವಂತೆ ಪೋಷಕರು ಮತ್ತು ಗ್ರಾಮಸ್ಥರು ಲಿಖಿತ ಮನವಿ ನೀಡಿದರು.

    ಈ ವೇಳೆ ಮಾತನಾಡಿದ ಸಿಎಂ, ಬಾಂಬಿಂಗ್ ಪರಿಣಾಮ ನವೀನ ಸಾವನ್ನಪ್ಪಿದ್ದಾನೆ. ವಿದ್ಯಾರ್ಜನೆಗೆ ತೆರಳಿದ್ದ ನವೀನ್‍ಗೆ ಈ ರೀತಿ ಆಗುತ್ತೆ ಅಂತಾ ಯಾರೂ ಊಹಿಸಿರಲಿಲ್ಲ. ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ನವೀನ್ ಪಾರ್ಥೀವ ಶರೀರವನ್ನು ತಾಯ್ನಾಡಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ನಿರಂತರವಾಗಿ ಪ್ರಯತ್ನ ಮಾಡಲಾಗುತ್ತಿದೆ. ವಿದೇಶಾಂಗ ಸಚಿವರ ಜೊತೆಗೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದರು.

    ಉಕ್ರೇನ್ ನಲ್ಲಿ ಸುತ್ತಲೂ ಬಾಂಬಿಂಗ್ ಅಗ್ತಿದೆ. ಹೀಗಾಗಿ ತರಲು ಆಗುತ್ತಿಲ್ಲ. ಇವತ್ತು ಯುದ್ದ ವಿರಾಮ ಆಗಿದೆ. ಆದಷ್ಟು ಬೇಗ ಪಾರ್ಥೀವ ಶರೀರವನ್ನ ತರೋ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಯುದ್ಧ ನಿಲ್ಲಲಿ ಎಂದು ವಿನಂತಿ. ಕೆಲವರು ನಡೆದುಕೊಂಡು ಬಂದಿದ್ದಾರೆ. ಕೆಲವರು ಬಂಕರ್ ಗಳಲ್ಲಿದ್ದಾರೆ. ನಮ್ಮ ಜಿಲ್ಲೆಯಿಂದ ಹತ್ತು ಜನರು ಹೋಗಿದ್ದರು ಎಂದು ವಿವರಿಸಿದರು.

    ಐವರು ಬಂದಿದ್ದಾರೆ, ಉಳಿದ ಐವರನ್ನ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ. ಇಪ್ಪತ್ತೈದು ಲಕ್ಷ ರುಪಾಯಿ ಸರ್ಕಾರದಿಂದ ಪರಿಹಾರ ನೀಡಲಾಗಿದೆ. ಹಿರಿಯ ಮಗನಿಗೆ ಸೂಕ್ತ ಉದ್ಯೋಗದ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ವ್ಯವಸ್ಥೆ ಪರಿಶೀಲನೆ ಬಗ್ಗೆ ಕೇಂದ್ರ ಮಟ್ಟದಲ್ಲೂ ದೊಡ್ಡ ಚರ್ಚೆ ಆಗಿದೆ. ಸೆಲೆಕ್ಷನ್ ಪ್ರಕ್ರಿಯೆ, ಸೀಟು ಹಂಚಿಕೆ ಕೇಂದ್ರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಪಾರ್ಥೀವ ಶರೀರ ಹಾಗೂ ಅಲ್ಲಿ ಸಿಲುಕಿಕೊಂಡಿರೋರನ್ನು ಕರೆತರುವುದು ನಮ್ಮ ಮುಂದಿರುವ ಎರಡು ದೊಡ್ಡ ಕೆಲಸಗಳು ಎಂದು ಹೇಳಿದರು.

    ಈ ವೇಳೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.

  • ನವೀನ್ ಮೃತದೇಹ ಪಡೆಯಲು ಎಲ್ಲ ಪ್ರಯತ್ನ: ಬಸವರಾಜ ಬೊಮ್ಮಾಯಿ

    ನವೀನ್ ಮೃತದೇಹ ಪಡೆಯಲು ಎಲ್ಲ ಪ್ರಯತ್ನ: ಬಸವರಾಜ ಬೊಮ್ಮಾಯಿ

    ಬೆಂಗಳೂರು: ನವೀನ್ ಮೃತದೇಹವನ್ನು ಪಡೆಯುವ ಪ್ರಯತ್ನ ಜಾರಿಯಲ್ಲಿದೆ. ನಿಖರ ಮಾಹಿತಿ ಪಡೆಯಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಆರ್.ಟಿ.ನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಕ್ರೇನ್‍ನಿಂದ ಹಲವಾರು ಕನ್ನಡಿಗರನ್ನು ಕರೆತರಲಾಗಿದೆ. ಖರಕಾಯ್, ಕೀವ್‍ನಲ್ಲಿ ಹೊರಬರಲಾರದ ಪರಿಸ್ಥಿತಿಯೂ ಇದೆ. ಸಿಲುಕಿಕೊಂಡವರನ್ನು ಪತ್ತೆ ಹಚ್ಚಲು ರಾಯಭಾರಿ ಕಚೇರಿಯವರು ಕಾರ್ಯನಿರತರಾಗಿದ್ದಾರೆ ಅಂತ ಹೇಳಿದ್ದಾರೆ. ದಾಳಿ ಕಡಿಮೆಯಾದ ಕೂಡಲೇ ಸಂಪರ್ಕ ಸಾಧಿಸಲಾಗುವುದು ಎಂದಿದ್ದಾರೆ. ನಿನ್ನೆಯೂ ಕೇಂದ್ರ ವಿದೇಶಾಂಗ ಸಚಿವರೊಂದಿಗೆ ಮಾತನಾಡಿದ್ದು, ಉಕ್ರೇನ್ ರಾಯಭಾರ ಕಚೇರಿಯೊಂದಿಗೂ ಮಾತನಾಡಲಾಗಿದೆ ಎಂದರು.

    ಕೇಂದ್ರ ಜಲಶಕ್ತಿ ಸಚಿವರು ಭಾಗವಹಿಸುವ ಜಲಜೀವನ್ ಮಿಷನ್ ಕುರಿತು ದಕ್ಷಿಣ ರಾಜ್ಯಗಳ ಪ್ರಾದೇಶಿಕ ಸಭೆಯಲ್ಲಿ ಭಾಗವಹಿಸಿ ನಂತರ ಶಿಕಾರಿಪುರದಲ್ಲಿ ರೈತರ ಸಭೆಯಲ್ಲಿ ಪಾಲ್ಗೊಂಡು, ರಾಣಿಬೆನ್ನೂರಿನಲ್ಲಿ ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಅವರ ತಂದೆಯವರನ್ನು ಭೇಟಿಯಾಗಲಿದ್ದೇನೆ. ಸರ್ಕಾರದಿಂದ ನವೀನ್ ಕುಟುಂಬಕ್ಕೆ ಪರಿಹಾರ ಕೊಡಲು ನಿರ್ಧರಿಸಲಾಗಿದೆ ಎಂದರು. ಇದನ್ನೂ ಓದಿ: ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು

  • ಹೊಂದಿಸಿ ಬರೆಯಿರಿ ಸಿನಿಮಾ ಸ್ಪೆಷಲ್ ಯಾಕೆ?

    ಹೊಂದಿಸಿ ಬರೆಯಿರಿ ಸಿನಿಮಾ ಸ್ಪೆಷಲ್ ಯಾಕೆ?

    ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಹೊಂದಿಸಿ ಬರೆಯಿರಿ’ ಸಿನಿಮಾ ಹತ್ತು ಹಲವು ವಿಶೇಷತೆಗಳನ್ನು ಹೊಂದಿದೆ. ಈ ಸಿನಿಮಾದ ಸ್ಪೆಷಲ್ ಅಂದರೆ ತಾರಾಗಣ. ಮೊದಲ ಸಿನಿಮಾದಲ್ಲಿಯೇ ಭವರಸೆ ಮೂಡಿಸಿದ್ದ ಸಾಕಷ್ಟು ಪ್ರತಿಭೆಗಳು ಈ ಸಿನಿಮಾದಲ್ಲಿ ಒಂದಾಗಿವೆ. ಇದನ್ನೂ ಓದಿ : ಆತ ವಾರದಿಂದ ಮಾನಸಿಕ ಹಿಂಸೆ ಕೊಟ್ಟಿದ್ದಾನೆ : ಫ್ಯಾಶನ್ ಐಕಾನ್ ಪುತ್ರನ ವಿಚಿತ್ರ ಖಯಾಲಿ ಬಿಚ್ಚಿಟ್ಟ ನಟಿ ಸಂಜನಾ

    ಜತೆಗೆ ಒಂದಷ್ಟು ಪ್ರೇಮಕಥೆಗಳನ್ನು ವಿಭಿನ್ನ ದೃಷ್ಟಿಯಲ್ಲಿ ಹೇಳುವ ಪ್ರಯತ್ನವಾಗಿದೆಯಂತೆ. ನಮ್ಮ ಬದುಕಿನಲ್ಲಿ ಏನೇ ಆದರೂ, ಅದಕ್ಕೆ ನಾವೇ ಹೊಣೆ. ಆಗಿರುವ ವಿಷಯಗಳನ್ನು ನೀಟಾಗಿ, ಹೊಂದಿಸಿ ಬರೆದುಕೊಂಡು ಜೀವನ ಸಾಗಿಸಬೇಕು ಎನ್ನುವ ಸಂದೇಶವನ್ನು ಈ ಸಿನಿಮಾ ನೀಡಲಿದೆಯಂತೆ. ಇದನ್ನೂ ಓದಿ : ಬಜೆಟ್ ನಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಸಂಚಾರಿ ವಿಜಯ್ ಪ್ರಸ್ತಾಪ

    ಈಗಷ್ಟೇ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ ಆಗಿದ್ದು, ಅಲ್ಲಿರುವ ಕಲಾವಿದರಿಂದಾಗಿಯೇ ಸಿನಿಮಾ ಕುತೂಹಲ ಮೂಡಿಸಿದೆ. ಇದನ್ನೂ ಓದಿ : ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್

    ಏಳು ಯುವಕ-ಯುವತಿಯರ ಒಂದೊಂದು ಕಥೆಯೇ ‘ಹೊಂದಿಸಿ ಬರೆಯಿರಿ’ ಚಿತ್ರ. ಚೂರಿಕಟ್ಟೆ ಖ್ಯಾತಿಯ ಪ್ರವೀಣ್, ಗುಳ್ಟು ಖ್ಯಾತಿಯ ನವೀನ್, ರಾಕೇಟ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಐಶಾನಿ ಶೆಟ್ಟಿ, ಇದನ್ನೂ ಓದಿ : ಜನಾರ್ದನ ರೆಡ್ಡಿ ಪುತ್ರನ ಸಿನಿಮಾದಲ್ಲಿ ಇಬ್ಬರು ನಾಯಕಿಯರು?

    ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ಗೆ ಅಮ್ಮನಾಗಿ ನಟಿಸಿದ್ದ ರಚನಾ ಜೋಯಿಸ್, ವಗ್ಗರಣೆ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಸಂಯುಕ್ತ ಹೊರನಾಡು, ಇಷ್ಟದೇವತೆ ಧಾರಾವಾಹಿಯ ಖ್ಯಾತಿಯ ಶ್ರೀಮಹಾದೇವ್, ಗಾಳಿಪಟ ಚಿತ್ರಖ್ಯಾತಿಯ ಭಾವನಾ ಹೀಗೆ ಪ್ರತಿಭೆಗಳ ಗಣಿಯೇ ಸಿನಿಮಾದಲ್ಲಿ. ಇದನ್ನೂ ಓದಿ: ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದಲ್ಲಿ ಪ್ರಶಾಂತ್ ಸಿದ್ದಿ ವಿಶೇಷ ಪಾತ್ರ

    ಈಗಾಗಲೇ ಬಹುತೇಕ ಶೂಟಿಂಗ್ ಆಗಿದ್ದು, ಮಾಸ್ತಿ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಸಾಹಿತಿ ಶ್ರೀಧರ್ ಬನವಾಸಿ ಕೂಡ ಸಿನಿಮಾದ ಭಾಗವಾಗಿದ್ದಾರೆ.

  • ಹೆಣ ಬಿದ್ದ ಜಾಗದಲ್ಲಿ ಮತ್ತೊಬ್ಬ ಹೋಗಿ ಹೆಣ ಆಗಲು ಯಾರೂ ತಯಾರಿಲ್ಲ: ಶಿವರಾಮ್ ಹೆಬ್ಬಾರ್

    ಹೆಣ ಬಿದ್ದ ಜಾಗದಲ್ಲಿ ಮತ್ತೊಬ್ಬ ಹೋಗಿ ಹೆಣ ಆಗಲು ಯಾರೂ ತಯಾರಿಲ್ಲ: ಶಿವರಾಮ್ ಹೆಬ್ಬಾರ್

    ಧಾರವಾಡ: ಉಕ್ರೇನ್ ದೇಶದಲ್ಲಿ ರಷ್ಯಾ ನಡೆಸಿದ ದಾಳಿಯಿಂದಾಗಿ ಮೃತಪಟ್ಟಿರುವ ಹಾವೇರಿ ಜಿಲ್ಲೆಯ ನವೀನ್ ಶೇಖರಪ್ಪನ  ಶವವನ್ನು ತರಲು ಸರ್ಕಾರ ಎಲ್ಲ ರೀತಿಯಿಂದಲೂ ಪ್ರಯತ್ನ ಮಾಡುತ್ತಿದೆ. ಆದರೆ, ಹೆಣ ಬಿದ್ದ ಜಾಗಕ್ಕೆ ಹೋಗಿ ಮತ್ತೊಬ್ಬ ಹೆಣವಾಗಲು ಯಾರೂ ಸಿದ್ಧರಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

    ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಹೆಸರಿನಡಿ 42 ವಿಮಾನಗಳನ್ನು ಉಕ್ರೇನ್ ಪಕ್ಕದ ದೇಶಗಳಿಗೆ ಕಳುಹಿಸಿ, ಆ ಮೂಲಕ ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗಿದೆ. ಹೀಗಾಗಿ ಉಕ್ರೇನ್‍ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಪಕ್ಕದ ದೇಶಗಳಿಗೆ ಬಂದು ಮುಟ್ಟಬೇಕಿದೆ. ಯುದ್ಧದ ತೀವ್ರತೆ ಉಕ್ರೇನ್‍ನಲ್ಲಿ ಹೆಚ್ಚಾಗಿರುವುದರಿಂದ ಅಲ್ಲಿ ವಿಮಾನಗಳು ಲ್ಯಾಂಡ್ ಆಗಲು ಸಾಧ್ಯವಿಲ್ಲ. ಆದರೂ ಭಾರತ ಸರ್ಕಾರದ ನಾಲ್ಕು ಜನ ಮಂತ್ರಿಗಳು ನಾಲ್ಕು ದಿಕ್ಕಿನಲ್ಲಿ ನಿಂತು ರಕ್ಷಣಾ ಕಾರ್ಯ ಪರಿಶೀಲಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!

    ದುರದೃಷ್ಟವಶಾತ್ ನಮ್ಮ ನಾಡಿನ ನವೀನ್ ಈ ಯುದ್ಧದಲ್ಲಿ ಅಸುನೀಗಿದ್ದಾನೆ. ನಾನು ಹಾವೇರಿ ಜಿಲ್ಲೆಯ ಉಸ್ತುವಾರಿಯನ್ನು ಹೊಂದಿದ್ದೇನೆ. ನವೀನ್ ಮನೆಗೆ ಭೇಟಿ ನೀಡಿ ಬಂದಿದ್ದೇನೆ. ಆತನ ಶವ ತರಲು ಸರ್ವ ಪ್ರಯತ್ನ ನಡೆದಿದೆ. ನವೀನ್‍ನ್ನು ಜೀವಂತವಾಗಿ ಮನೆಗೆ ಕರೆ ತರಲು ಆಗಲಿಲ್ಲ. ಕಡೆ ಪಕ್ಷ ಆತನ ಪೋಷಕರಿಗೆ ಕೊನೆಯ ಬಾರಿಗೆ ನವೀನ್‍ನ ಮುಖವನ್ನಾದರೂ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಯುದ್ಧ ಮನುಕುಲದ ಶತ್ರು, ಸದ್ಯ ನಡೆಯುತ್ತಿರುವುದು ದುರದೃಷ್ಟಕರ ಸಂಗತಿ: ಬಸವಾನಂದ ಶ್ರೀ

  • ರಷ್ಯಾದ ವಿರೋಧ ನಾವು ಹೋಗಲು ಕಷ್ಟವಿದೆ: ಪ್ರತಾಪ್ ಸಿಂಹ

    ರಷ್ಯಾದ ವಿರೋಧ ನಾವು ಹೋಗಲು ಕಷ್ಟವಿದೆ: ಪ್ರತಾಪ್ ಸಿಂಹ

    ಮೈಸೂರು: ತನ್ನ ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಕೋನದಲ್ಲಿ ರಷ್ಯಾ, ಉಕ್ರೇನ್ ಮೇಲೆ ಯುದ್ಧ ಮಾಡುತ್ತಿದೆ. ಹೀಗಾಗಿ ರಷ್ಯಾದ ವಿರೋಧ ನಾವು ಹೋಗಲು ಕಷ್ಟವಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

    ಸುದ್ದಿಗಾರರೊಂದಿಎಗ ಮಾತನಾಡಿದ ಅವರು, ನೆಹರು ಕಾಂಗ್ರೆಸ್ ನವರು ನಮಗೆ ವಿದೇಶಾಂಗ ನೀತಿ ಬಗ್ಗೆ ಪಾಠ ಹೇಳುತ್ತಿದ್ದಾರೆ. ಅವರ ಆಡಳಿತದ ವಿದೇಶಾಂಗ ನೀತಿ ಹೇಗೆ ಇತ್ತು. ಅದರಿಂದ ದೇಶಕ್ಕೆ ಆದ ನಷ್ಟ ಎಷ್ಟು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಕಾಂಗ್ರೆಸ್ ನವರಿಗೆ ವಿದೇಶಾಂಗ ನೀತಿಯೇ ಗೊತ್ತಿಲ್ಲ. ಚೀನಾ ಟಿಬೆಟ್ ಕಬಳಿಸಿದ್ದಾಗ ಸುಮ್ಮನೆ ಇದ್ದ ಕಾಂಗ್ರೆಸ್ ಈಗ ವಿದೇಶಾಂಗ ನೀತಿಯ ಪಾಠ ನಮಗೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜೀವಂತ ಇದ್ದವ್ರನ್ನೇ ತರೋದು ಕಷ್ಟವಿದ್ದು, ನವೀನ್ ಶವ ತರುವುದು ಇನ್ನೂ ಡಿಫಿಕಲ್ಟ್: ಬೆಲ್ಲದ್

    ರಷ್ಯಾದ ವಿರೋಧ ನಾವು ಹೋಗಲು ಕಷ್ಟವಿದೆ. ತನ್ನ ಭದ್ರತೆ, ಸುರಕ್ಷತೆ ದೃಷ್ಟಿಕೋನದಲ್ಲಿ ರಷ್ಯಾ, ಉಕ್ರೇನ್ ಮೇಲೆ ಯುದ್ಧ ಮಾಡುತ್ತಿದೆ. ರಷ್ಯಾದ ಮೇಲೆ ಭಾರತ ಅತಿ ಹೆಚ್ಚು ಅವಲಂಬಿತವಾಗಿದೆ. ಈ ಅವಲಂಬನೆಗೆ ಸೃಷ್ಟಿಸಿದ್ದು ಕಾಂಗ್ರೆಸ್. ರಷ್ಯಾವನ್ನು ಎದುರು ಹಾಕಿಕೊಂಡರೆ ಮುಂದೆ ನಮಗೆ ಯುದ್ಧದಂತಹ ಸಂದರ್ಭ ಸೃಷ್ಟಿಯಾದರೆ ರಷ್ಯಾ ನಮ್ಮ ನೆರವಿಗೆ ಬರುತ್ತಾ?. ಹೀಗಾಗಿ ಪ್ರಧಾನಿಗಳು ಈಗ ತಟಸ್ಥ ನಿಲುವಿಗೆ ಬಂದಿದ್ದಾರೆ.ಅಲ್ಲಿನ ಎಲ್ಲಾ ಭಾರತೀಯ ವಿದ್ಯಾರ್ಥಿಗಳ ರಕ್ಷಣಾ ಕಾರ್ಯ ವ್ಯವಸ್ಥಿತವಾಗಿ ಸಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡರು.

    ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ನೀಟ್ ಬ್ಯಾನ್ ಕ್ಯಾಂಪೈನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ನೀಟ್ ತರಲಾಗಿದೆ. 138 ಕೋಟಿ ಜನಸಂಖ್ಯೆ ದೇಶಕ್ಕೆ, ಒಂದೂವರೆ ಲಕ್ಷ ಮೆಡಿಕಲ್ ಸೀಟ್ ಇದೆ. ಇದರಿಂದ ಪೈಪೋಟಿ ಹೆಚ್ಚಾಗಿದೆ. ಪ್ರತಿ ಜಿಲ್ಲೆಯಲ್ಲೂ ಮೆಡಿಕಲ್ ಕಾಲೇಜ್ ಬರಬೇಕು. ಆಗ ಸೀಟ್ ಹೆಚ್ಚಾಗುತ್ತೆ. ಎಲ್ಲರಿಗೂ ಅವಕಾಶ ಸಿಗುತ್ತೆ. ಉಕ್ರೇನ್‍ನಲ್ಲಿ ಓದುವುದಕ್ಕೆ ಹೋಗಿರುವವರು ಕೂಡ ಬುದ್ಧಿವಂತರು ಎಂದರು. ಇದನ್ನೂ ಓದಿ: ಯುದ್ಧ ನಿಲ್ಲಿಸಿ ಅಂತ ಪುಟಿನ್‌ಗೆ ನಾವು ಹೇಳಬಹುದೇ: ಸಿಜೆಐ ಪ್ರಶ್ನೆ

    ನವೀನ್ ಸಾವಿನ ಹಿನ್ನೆಲೆಯಲ್ಲಿ ಕೆಲವರು ಮೀಸಲಾತಿ ವಿರುದ್ಧ ಕೆಲವರು ಮಾತಾಡುತ್ತಿದ್ದಾರೆ. ಪ.ಜಾತಿ, ಪ. ಪಂಗಡ ಎಷ್ಟೋ ವರ್ಷ ಶೋಷಣೆಗೆ ಒಳಗಾಗಿದೆ. ಅವರಿಗೆ ಮೀಸಲಾತಿ ಕೊಟ್ಟಿರುವುದರಲ್ಲಿ ಯಾವ ತಪ್ಪು ಇಲ್ಲ. ಜಾತಿ ತಾರತಮ್ಯ ನಿವಾರಣೆಯಾಗಿ ಸಮಾಜ ಜಾತಿ ಬಂಧನದಿಂದ ಹೊರ ಬರುವವರೆಗೂ ಮೀಸಲಾತಿ ಇರುತ್ತೆ. ಮೀಸಲಾತಿ ಇವತ್ತು ಇರುತ್ತೆ ಮುಂದೆಯೂ ಇರುತ್ತೆ. ಯಾರದ್ದೋ ಮನೆಯ ಗಂಟು ತಂದು ಅವರಿಗೆ ಕೊಡುತ್ತಿದ್ದೇವೆ ಎನ್ನುವ ರೀತಿ ಮಾತಾಡಬೇಡಿ. ಶೋಷಣೆ ಒಳಗಾದ ಸಹೋದರರಿಗೆ ಮೀಸಲಾತಿ ಕೊಡುತ್ತಿದ್ದೇವೆ. ಇದರಲ್ಲಿ ತಪ್ಪು ಏನಿದೆ ಎಂದು ಸಂಸದರು ಪ್ರಶ್ನಿಸಿದರು.

  • ಜೀವಂತ ಇದ್ದವ್ರನ್ನೇ ತರೋದು ಕಷ್ಟವಿದ್ದು, ನವೀನ್ ಶವ ತರುವುದು ಇನ್ನೂ ಡಿಫಿಕಲ್ಟ್: ಬೆಲ್ಲದ್

    ಜೀವಂತ ಇದ್ದವ್ರನ್ನೇ ತರೋದು ಕಷ್ಟವಿದ್ದು, ನವೀನ್ ಶವ ತರುವುದು ಇನ್ನೂ ಡಿಫಿಕಲ್ಟ್: ಬೆಲ್ಲದ್

    ಧಾರವಾಡ: ಜೀವಂತವಾಗಿರುವವರನ್ನೇ ಭಾರತಕ್ಕೆ ವಾಪಸ್ ಕರೆತರುವುದು ಕಷ್ಟವಿದೆ. ಹೀಗಿರುವಾಗ ನವೀನ್ ಮೃತದೇಹ ತರುವುದು ಇನ್ನೂ ಕಷ್ಟವಿದೆ ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಮಾನದಲ್ಲಿ ಶವ ತರಲು ಹೆಚ್ಚು ಜಾಗಬೇಕು. ಶವ ಇರುವ ಜಾಗದಲ್ಲೇ 8 ಜನ ತರಬಹುದು. ಭಾರತ ಸರ್ಕಾರದ ವಿದೇಶಾಂಗ ಇಲಾಖೆ ಎಂಬಿಬಿಎಸ್ ವಿದ್ಯಾರ್ಥಿ ಶವ ತರಲು ಪ್ರಯತ್ನ ಮಾಡುತ್ತಿದೆ. ಸ್ವತಃ ಪ್ರಧಾನಿ ಮೋದಿ ಅವರೇ ಮುತುವರ್ಜಿ ವಹಿಸಿದ್ದಾರೆ. ಭಾರತೀಯ ವಿದ್ಯಾರ್ಥಿಗಳನ್ನು ಕರೆ ತರುವ ಪ್ರಯತ್ನ ನಡೆದಿದೆ. ಅಲ್ಲಿ ಯುದ್ದ ಭೂಮಿ ಇದೆ. ಮಾಧ್ಯಮದವರೇ ಅದನ್ನ ತೊರಿಸುತ್ತಿದ್ದಾರೆ. ಸಾಧ್ಯವಾದರೆ ಮೃತದೇಹ ತರುವ ಕೆಲಸ ಆಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಯುದ್ಧ ನಿಲ್ಲಿಸಿ ಅಂತ ಪುಟಿನ್‌ಗೆ ನಾವು ಹೇಳಬಹುದೇ: ಸಿಜೆಐ ಪ್ರಶ್ನೆ

    ಅಲ್ಲಿ ಇದ್ದವರು ಒತ್ತಡದಲ್ಲಿ ಇದ್ದಾರೆ. ರೊಮೇನಿಯಾಗೆ ಬಂದಿದ್ದಾರೆ ಅಂದರೆ ಸೇಫ್ ಆಗಿದ್ದಾರೆ ಎಂದರ್ಥ. ಅಲ್ಲಿ ನಮ್ಮ ವಿದೇಶಾಂಗ ಇಲಾಖೆ ಅವರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಮಾಡಿದೆ. ಅವರನ್ನು ತರುವ ಕೆಲಸ ಬೇಗ ಆಗಲಿದೆ. ನಮ್ಮ ವಿದ್ಯಾರ್ಥಿಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಅಲ್ಲಿ ಯಾಕೆ ಎಂಬಿಬಿಎಸ್ ಗೆ ಹೋಗುತ್ತಿದ್ದಾರೆ. ಅದಕ್ಕೆ ಕಾರಣ ನಮ್ಮಲ್ಲಿ ವೈದ್ಯಕೀಯ ಕಲಿಯುವುದು ದೊಡ್ಡ ಖರ್ಚು ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ನವೀನ್ ಸಾವು – ಬಿಜೆಪಿ ನಾಯಕರ ವಿರುದ್ಧ ಸ್ಟಾಲಿನ್ ಕಿಡಿ

    ನಮ್ಮಲ್ಲ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಇದೆ. ಇದೊಂದು ಖಾಸಗಿ ಸಂಸ್ಥೆ. ಇವರು ಎಂಬಿಬಿಎಸ್ ಸಿಟ್ ಅಭಾವ ಸೃಷ್ಟಿ ಮಾಡಿದ್ದಾರೆ. ಹೆಚ್ಚು ಮೆಡಿಕಲ್ ಸಿಟ್ ಕೊಡುವಂತೆ ಇಲ್ಲ. ಅದರಲ್ಲೂ ಭ್ರಷ್ಟಾಚಾರ ಇರುತ್ತೆ. ಈ ಎಂಸಿಐ ಮೇಲೆ ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕಿದೆ. ಇದನ್ನ ಬೈಪಾಸ್ ಮಾಡಬೇಕು. ಅದಕ್ಕೆ ಇರುವ ಅಧಿಕಾರ ಕಟ್ ಮಾಡಬೇಕು. ಬೇರೆ ರಾಷ್ಟ್ರ ದಂತೆಯೇ ನಮ್ಮಲ್ಲಿ ಕಡಿಮೆ ಖರ್ಚಿನಲ್ಲಿ ಮೆಡಿಕಲ್ ಯಾಕೆ ಮಾಡಬಾರದು ಎಂದು ಶಾಸಕರು ಪ್ರಶ್ನಿಸಿದರು. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಮಾಡಿದ್ದ ಆರೋಪ ನಿರಾಕರಿಸಿದ ಭಾರತ!