ಡ್ರಗ್ಸ್, ಕೊಲೆ, ಪ್ರೀತಿ, ಪ್ರೇಮ, ಕುಟುಂಬದ ಸುತ್ತ ಹೆಣಿದಿರುವ ಟೀಸರ್ ನೋಡುಗರ ನಿರೀಕ್ಷೆಯನ್ನು ಹೆಚ್ಚಿಸಿದೆ. ಇದೊಂದು ಡಿಫರೆಂಟ್ ಕಥೆ ಎಂಬುದನ್ನು ನಿರ್ದೇಶಕರು ಅಚ್ಚುಕಟ್ಟಾಗಿ ರೂಪಿಸಿದ್ದಾರೆ. ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿರುವ ‘ಧರಣಿ ಮಂಡಲ ಮಧ್ಯದೊಳಗೆ’ ಟೀಸರ್ ಸಂಚಲನ ಸೃಷ್ಟಿಸ್ತಿದೆ.
ಬೋಲ್ಡ್ ಲುಕ್‌ನಲ್ಲಿ ಐಶಾನಿ ಶೆಟ್ಟಿ ಗಮನಸೆಳೆದ್ರೆ, ನವೀನ್ ನಾಯಕನಾಗಿ ತಮ್ಮ ಪಾತ್ರ ಪೋಷಣೆ ಮಾಡಿದ್ದಾರೆ. ಇವರೊಂದಿಗೆ ಯಶ್ ಶೆಟ್ಟಿ ,ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡ್ ಓಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭಾವಿ ತಮ್ಮ ಪಾತ್ರಗಳ ಮೂಲಕ ಜೀವಿಸಿದ್ದಾರೆ. ಇದನ್ನೂ ಓದಿ: ಅಮ್ಮ ಅಂತಾ ಎಷ್ಟೇ ಹೇಳಿಕೊಟ್ಟರೂ ಕೊನೆಗೆ ಅಪ್ಪ ಎಂದು ಕರೆದ ರಾಯನ್
ಟಾಲಿವುಡ್ ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ ಅವರೊಂದಿಗೆ ಕೆಲಸ ಮಾಡಿರುವ ಅನುಭವ ಶ್ರೀಧರ್ ಶಿಕಾರಿಪುರ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಹೈಪರ್ ಲಿಂಕ್ ಶೈಲಿಯ ಕ್ರೈಂ ಡ್ರಾಮಾ ಈ ಚಿತ್ರವನ್ನು ಓಂಕಾರ್ ನಿರ್ಮಿಸಿದ್ದಾರೆ. ವೀರೇಂದ್ರ ಕಾಂಚನ್, ಕೆ ಗೌತಮಿ ರೆಡ್ಡಿ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಕೀರ್ತನ್ ಪೂಜಾರಿ ಕ್ಯಾಮೆರಾ, ರೋಣದ ಬಕ್ಕೇಶ್, ಕಾರ್ತಿಕ್ ಚೆನ್ನೋಜಿರಾವ್ ಅವರ ಸಂಗೀತ ಉಜ್ವಲ್ ಚಂದ್ರ ಸಂಕಲನವಿದೆ.
ಬೆಂಗಳೂರು: ನವೀನ್ ಪಾರ್ಥಿವ ಶರೀರವನ್ನು ತವರಿಗೆ ತರಲು ಸಹಾಯ ಮಾಡಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.
ಉಕ್ರೇನ್‌ನಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೆರಿ ಗ್ರಾಮದ ನವೀನ್ ಅವರ ಅಂತಿಮ ದರ್ಶನ ಪಡೆದರು. ನಂತರ ಸುಮಾರು ಮೂರು ನಿಮಿಷಗಳ ಕಾಲ ಪ್ರಧಾನಿಯವರೊಂದಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿಯವರು, ನವೀನ್ ಪಾರ್ಥಿವ ಶರೀರವನ್ನು ದೇಶಕ್ಕೆ ತರುವಲ್ಲಿ ತಮ್ಮ ಪಾತ್ರ ಮುಖ್ಯವಾಗಿದೆ. ನವೀನ್ ಮುಖ ನೋಡಬೇಕೆಂಬ ಆತನ ತಂದೆ, ತಾಯಿಯ ಆಸೆಯನ್ನು ಈಡೇರಿಸಿದ್ದೀರಿ. ಅದಕ್ಕಾಗಿ ರಾಜ್ಯದ ಪರವಾಗಿ ತಮಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ನವೀನ್ ಮೃತದೇಹ ರಾಜ್ಯಕ್ಕೆ ಆಗಮನ – ಕುಟುಂಬಕ್ಕೆ ಹಸ್ತಾಂತರಿಸಿದ ಸಿಎಂ
ಯುದ್ಧಭೂಮಿಯಿಂದ ಮೃತದೇಹ ತರುವುದು ಸುಲಭದ ಮಾತಲ್ಲ. ತಮ್ಮ ಉತ್ತಮ ರಾಜತಾಂತ್ರಿಕ ಬಾಂಧವ್ಯಗಳ ಕಾರಣ ಇದು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಎಸ್‍ಎಸ್ ಮೆಡಿಕಲ್ ಕಾಲೇಜ್‍ಗೆ ನವೀನ್ ಮೃತದೇಹ ದಾನ
ದಾವಣಗೆರೆ: ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ಮೃತದೇಹ ಇಂದು ತಾಯ್ನಾಡಿಗೆ ಆಗಮಿಸಿದ್ದು, ಇದೀಗ ಅದನ್ನು ಎಸ್‍ಎಸ್ ಮೆಡಿಕಲ್ ಕಾಲೇಜ್‍ಗೆ ದಾನ ಮಾಡಲಾಗಿದೆ.
ಹಾವೇರಿ ಸ್ವಗ್ರಾಮ ಚಳಗೇರೆಯಿಂದ ಎಸ್‍ಎಸ್ ಮೆಡಿಕಲ್ ಕಾಲೇಜ್‍ಗೆ ಪೊಲೀಸರ ಭದ್ರತೆಯಲ್ಲಿ ಮೃತದೇಹ ಆಗಮಿಸಿದೆ. ನಂತರ ಅದನ್ನು ಎಸ್‍ಎಸ್ ಮೆಡಿಕಲ್ ಕಾಲೇಜ್ ಅನಾಟಮಿ ಡಿಪಾರ್ಟ್ ಮೆಂಟ್ ಹಸ್ತಾಂತರಿಸಲಾಯಿತು. ಹಸ್ತಾಂತರಕ್ಕೂ ಮುನ್ನ ತಾಯಿ ವಿಜಯಲಕ್ಷ್ಮಿ, ಸಹೋದರ ಹರ್ಷ ಪೂಜೆ ಮಾಡಿದರು. ಇದನ್ನೂ ಓದಿ: ನವೀನ್ ಮೃತದೇಹ ರಾಜ್ಯಕ್ಕೆ ಆಗಮನ – ಕುಟುಂಬಕ್ಕೆ ಹಸ್ತಾಂತರಿಸಿದ ಸಿಎಂ
ಮಗನ ಮೃತದೇಹದ ಮುಂದೆ ತಾಯಿ ಹಾಗೂ ಸಹೋದರ ಕಣ್ಣೀರಿಟ್ಟರು. ಅಲ್ಲದೆ ಮಗನಿಗೆ ಲಟಿಕೆ ತೆಗೆದು ತಾಯಿ ಕೈ ಮುಗಿದರೆ, ಸಹೋದರ ನವೀನ್ ಮೃತದೇಹಕ್ಕೆ ಮುತ್ತಿಟ್ಟರು. ಇತ್ತ ಎಸ್‍ಎಸ್ ಮೆಡಿಕಲ್ ಕಾಲೇಜು ಉಪನ್ಯಾಸಕರು ಹಾಗೂ ಸಿಬ್ಬಂದಿ ಕೂಡ ನವೀನ್ ಮೃತದೇಹಕ್ಕೆ ಪೂಜೆ ಸಲ್ಲಿಸಿದರು. ಮಗನ ಮೃತದೇಹದ ಮೇಲೆಯೇ ಬಿದ್ದು ತಾಯಿ ಅತ್ತ ದೃಶ್ಯ ಕಣ್ಣೀರು ತರಿಸುವಂತಿತ್ತು. ಪೂಜೆ ವೇಳೆ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಯಿ ಹಾಗೂ ಸಹೋದರ ದೇಹದಾನದ ಪ್ರಕ್ರಿಯೆಗೆ ಸಹಿ ಹಾಕಿದರು. ಎಸ್ ಎಸ್ ಮೆಡಿಕಲ್ ಕಾಲೇಜು ಪ್ರಿನ್ಸಿಪಲ್ ಡಾ ಪ್ರಸಾದ್ ಸಂತಾಪ ಸೂಚಿಸಿ ದೇಹದಾನದ ಪತ್ರವನ್ನು ತೋರಿಸಿದರು. ಇದೇ ವೇಳೆ ಡಾ. ಪ್ರಸಾದ್ ಹಸ್ತಾಂತರ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ವೈದ್ಯರು ನವೀನ್ ತಾಯಿಗೆ ಧನ್ಯವಾದ ತಿಳಿಸಿದ ಪ್ರಮಾಣ ಪತ್ರ ನೀಡಿದರು.
ಬೆಂಗಳೂರು: ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷದಲ್ಲಿ ಮಾರ್ಚ್ 1ರಂದು ಮೃತಪಟ್ಟ ಹಾವೇರಿ ಜಿಲ್ಲೆಯ ಚಳ್ಳಗೇರಿಯ ನವೀನ್ ಶೇಖರಪ್ಪ ಗ್ಯಾನಗೌಡರ್ ಮೃತದೇಹ ಎಮಿರೆಟ್ಸ್ ವಿಮಾನದ ಮೂಲಕ ಕೆಐಎಎಲ್ ಏರ್‌ಪೋರ್ಟ್‌ಗೆ ಆಗಮಿಸಿದೆ.
ನವೀನ್ ಮೃತದೇಹ ತೆಗೆದುಕೊಂಡು ಹೋಗಲು 22 ಮಂದಿ ನವೀನ್ ಕುಟುಂಬ ಸದಸ್ಯರು ಹಾಗೂ ಗ್ರಾಮದ ಮುಖಂಡರು ಆಗಮಿಸಿದ್ದರು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರು ನವೀನ್ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ದಾಳಿ – ಮೂವರು ಆರೋಪಿಗಳ ಬಂಧನ
Received & honoured body of our student Naveen Gyanagoudar killed in indiscriminate bomb shelling in Russia-Ukraine war.
ಬೆಂಗಳೂರಿನಿಂದ ಆಂಬುಲೆನ್ಸ್ ಮೂಲಕ ಹೊರಟಿರುವ ನವೀನ್ ಮೃತದೇಹ ಬೆಳಗ್ಗೆ 9 ಗಂಟೆ ಸುಮಾರಿಗೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸಕ್ಕೆ ತಲುಪಲಿದೆ. ನವೀನ್ ಪಾರ್ಥಿವ ಶರೀರ ಆಗಮಿಸಿದ ಬಳಿಕ ಮೊದಲು ಕುಟುಂಬಸ್ಥರು ವೀರಶೈವ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ನಂತರ ನಿವಾಸದ ಮುಂದೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಿದ್ದಾರೆ. ಎರಡ್ಮೂರು ಗಂಟೆಗಳ ನಂತರ ಗ್ರಾಮದಲ್ಲಿ ನವೀನ್ ಪಾರ್ಥೀವ ಶರೀರವನ್ನು ಮೆರವಣಿಗೆ ನಡೆಸಲಾಗುತ್ತದೆ.
ಉಕ್ರೇನ್ ನಲ್ಲಿ ಮೃತಪಟ್ಟಿದ್ದ ರಾಣೆಬೆನ್ನೂರಿನ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಅವರ ಪಾರ್ಥಿವ ಶರೀರವನ್ನು ಇಂದು ಬೆಂಗಳೂರಿನಲ್ಲಿ ಬರಮಾಡಿಕೊಂಡು ಗೌರವ ನಮನಗಳನ್ನು ಸಲ್ಲಿಸಿದೆನು.
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ನವೀನ್ ತಂದೆ, ನವೀನ್ ಡಾಕ್ಟರ್ ಆಗಿ ಜನರ ಸೇವೆ ಮಾಡಬೇಕು ಅಂದುಕೊಂಡಿದ್ದ. ಆದರೆ ಅದು ಸಾಧ್ಯವಾಗಲಿಲ್ಲ ಅದಕ್ಕಾಗಿ ಅವನ ಮೃತದೇಹ ಮೆಡಿಕಲ್ ಕಾಲೇಜಿಗೆ ದಾನ ಮಾಡಿ ಆತನ ಕೊನೆಯ ಆಸೆ ಈಡೇರಿಸುತ್ತೇವೆ. ಈಗಾಗಲೇ ಮಾತು ಕತೆಯಾಗಿ ದಾವಣಗೆರೆಯಿಂದ ವೈದ್ಯರ ತಂಡ ಬರುತ್ತದೆ. ಅಲ್ಲಿಯವರೆಗೆ ವೀರಶೈವ ಸಂಪ್ರದಾಯದಂತೆ ನಮ್ಮ ಮನೆಯ ಗುರುಗಳ ನೇತೃತ್ವದಲ್ಲಿ ಕೊನೆಯ ಪೂಜೆ ನಡೆಯುತ್ತದೆ. ನಮ್ಮ ಮಗನ ಮೃತದೇಹದ ತರಲು ಸಹಾಯ ಮಾಡಿದ ಪ್ರಧಾನಿ ಮೋದಿ ಮತ್ತು ನಮ್ಮ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು ಎಂದಿದ್ದಾರೆ. ಇದನ್ನೂ ಓದಿ: ಸೋಮವಾರ ನಸುಕಿನಜಾವ ತಲುಪಲಿದೆ ನವೀನ್ ಶೇಖರಪ್ಪ ಮೃತದೇಹ
ಮತ್ತೊಂದೆಡೆ ನವೀನ್ ತಾಯಿ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಇವತ್ತು ಮಗ ಮನೆಗೆ ಬರುತ್ತಿದ್ದಾನೆ. ಒಂದು ಕಡೆ ಸಂತೋಷ ಇನ್ನೊಂದು ಕಡೆ ದುಃಖ. ಮಗನ ಆಸೆಯಂತೆ ಡಾಕ್ಟರ್ ಓದಿಸಿದ್ದೇವು. ಆದರೆ ಮಗ ಬಹಳ ಪ್ರತಿಭಾವಂತ ಆಗಿದ್ದ. ಜಮೀನಿನಲ್ಲಿ ಕೆಲಸ ಸಹ ಮಾಡುತ್ತಿದ್ದ. ನಾನು ನವೀನ್ ದೇವಸ್ಥಾನಕ್ಕೆ ಹೋದಾಗ ಬಡವರಿಗೆ ಭಿಕ್ಷೆ ಹಾಕುತ್ತಿದ್ದ. ಡಾಕ್ಟರ್ ಆಗಿ ಬಡವರ ಸೇವೆ ಮಾಡುವ ಆಸೆ ಹೊಂದಿದ್ದ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ದೇಹದಾನ ಮಾಡಿದ್ದಾನೆ ಎಂದು ಮಗನನ್ನು ನೆನೆಯುತ್ತಾ ಕಣ್ಣೀರು ಹಾಕಿದ್ದಾರೆ.
ಹಾವೇರಿ: ಕೊನೆಗೂ ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ಮೃತದೇಹ ತಾಯ್ನಾಡಿಗೆ ಬರುತ್ತಿದೆ. ಸೋಮವಾರ ಬೆಳಗ್ಗೆ ಸುಮಾರು 9.30ಗೆ ಮೃತದೇಹ ಮನೆಗೆ ಬರಲಿದೆ ಎಂದು ಶೇಖರ ಗೌಡ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೆಡಿಕಲ್ ವಿದ್ಯಾರ್ಥಿಗಳ ಅಧ್ಯಯನದ ಅನುಕೂಲತೆಗಾಗಿ ಮೆಡಿಕಲ್ ಕಾಲೇಜಿಗೆ ನವೀನ್ ಮೃತದೇಹ ಡೊನೇಟ್ ಮಾಡುತ್ತೇವೆ ಎಂದ ಅವರು ಮೃತದೇಹ ಬರಲು ಶ್ರಮಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ನವೀನ್ ಮೃತದೇಹ ಮೆಡಿಕಲ್ ಕಾಲೇಜಿಗೆ ದಾನಮಾಡಲು ಕುಟುಂಬಸ್ಥರ ನಿರ್ಧಾರ
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಕನ್ನಡಿಗ ನವೀನ್ ಮೃತಪಟ್ಟು ಇಂದಿಗೆ 19 ದಿನಗಳು ಕಳೆದಿದೆ. ಇಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರೋ ನವೀನ್ ನಿವಾಸಕ್ಕೆ ರಾಣೆಬೆನ್ನೂರು ಕ್ಷೇತ್ರದ ಶಾಸಕ ಅರುಣಕುಮಾರ ಪೂಜಾರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮಾರ್ಚ್ 21ಕ್ಕೆ ಬೆಳಗ್ಗೆ ನವೀನ್ ಮೃತದೇಹ ಬರುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿವಾಸಕ್ಕೆ ಸಾಸಕರು ಭೇಟಿ ನೀಡಿದ್ದಾರೆ.
ಹಾವೇರಿ: ಉಕ್ರೇನ್‌ನಲ್ಲಿ ಶೆಲ್ ದಾಳಿಯಿಂದ ಮೃತಪಟ್ಟ ಹಾವೇರಿಯ ಚಳಗೇರಿ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ ಮೃತದೇಹವನ್ನು ಕುಟುಂಬಸ್ಥರು ಮೆಡಿಕಲ್ ಕಾಲೇಜಿಗೆ ದಾನ ಮಾಡಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಯೊಂದಿಗೆ ಮಾತನಾಡಿದ ನವೀನ್ ತಂದೆ ಶೇಖರಪ್ಪ ದಾವಣಗೆರೆಯಲ್ಲಿರುವ ಮೆಡಿಕಲ್ ಕಾಲೇಜಿಗೆ ಮಗನ ಮೃತದೇಹ ದಾನ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಥಿಯೇಟರ್ ಮೇಲೆ ಬಾಂಬ್ ದಾಳಿ – 130 ಮಂದಿಯ ರಕ್ಷಣೆ
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹ ಭಾನುವಾರ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿಗೆ ಬರಲಿದೆ. ಸೋಮವಾರ ಮುಂಜಾನೆ 3 ಗಂಟೆಗೆ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಮೃತದೇಹ ಬರಲಿದ್ದು, ಸಂಜೆ ಹೊತ್ತಿಗೆ ಹುಟ್ಟೂರು ತಲುಪುವ ಸಾಧ್ಯತೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ಶೆಲ್ ದಾಳಿಗೊಳಗಾದ ಯುವತಿ ನೋಡಲು ಆಸ್ಪತ್ರೆಗೆ ಭೇಟಿಕೊಟ್ಟ ಉಕ್ರೆನ್ ಅಧ್ಯಕ್ಷ
ಭಾರತ ಆಪರೇಷನ್ ಗಂಗಾ ಮಿಷನ್ ಅಡಿಯಲ್ಲಿ ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಕರೆತಂದು ನಿಟ್ಟುಸಿರು ಬಿಟ್ಟಿದೆ.
ಚಾಮರಾಜನಗರ: ರಷ್ಯಾ ಹಾಗೂ ಉಕ್ರೇನ್ ಯುದ್ದದಲ್ಲಿ ಮೃತಪಟ್ಟ ವಿದ್ಯಾರ್ಥಿ ನವೀನ್ ಪ್ರಾರ್ಥಿವ ಶರೀರವನ್ನು ದೇಶಕ್ಕೆ ತರುವಲ್ಲಿ ಭಾರತ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್, ರಾಜ್ಯ ಸರ್ಕಾರದವರು ಮೃತನ ನಿವಾಸಕ್ಕೆ ತೆರಳಿ ಸುಮ್ಮನೆ ಮೊಸಳೆ ಕಣ್ಣೇರು ಹಾಕಿ ಸಾಂತ್ವನ ಹೇಳಿದೆಯೇ ಹೊರತು ಪ್ರಾರ್ಥಿವ ಶರೀರ ತರುವ ಪ್ರಯತ್ನ ಮಾಡಿಲ್ಲ. ನವೀನ್ ಪ್ರಾರ್ಥಿವ ಶರೀರ ತರುವಂತೆ ಒತ್ತಾಯಿಸಿ ಮಾರ್ಚ್ 18 ರಂದು ಹಾವೇರಿ ಜಿಲ್ಲಾಡಳಿತ ಭವನದ ಎದುರು ಸತ್ಯಾಗ್ರಹ ಹಮ್ಮಿಕೊಳ್ಳಲಾಗುವು ಎಂದು ತಿಳಿಸಿದರು. ಇದನ್ನೂ ಓದಿ: ಉಕ್ರೇನ್‌ನ ಭಾರತೀಯ ರಾಯಭಾರ ಕಚೇರಿ ಪೋಲೆಂಡ್‌ಗೆ ತಾತ್ಕಾಲಿಕ ಸ್ಥಳಾಂತರ
ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ದೊಡ್ಡಮಟ್ಟದ ಅನಾಹುತ ನಡೆದಿದೆ. ಆದರೆ ಯಾವೊಬ್ಬ ಅಧಿಕಾರಿಗೂ ಶಿಕ್ಷೆಯಾಗಿಲ್ಲ. ಕ್ವಾರೆಯ ಉಪ ಗುತ್ತಿಗೆದಾರನ ಬಂಧನವೂ ಆಗಿಲ್ಲ. ಇದನ್ನು ನೋಡಿದರೆ ಜಿಲ್ಲಾಡಳಿತ ಪ್ರಕರಣವನ್ನು ಮುಚ್ಚಿ ಹಾಕುವಂತೆ ಕಾಣುತ್ತಿದೆ ಎಂದು ದೂರಿದರು. ಘಟನೆಯಲ್ಲಿ ಮೃತಪಟ್ಟ ಕಾರ್ಮಿಕರಿಗೆ 25 ಲಕ್ಷ ರೂ. ಪರಿಹಾರ ಕೊಡುವಂತೆ ಆಗ್ರಹಿಸಿದರು.
ಬೆಂಗಳೂರು: ಯುಕ್ರೇನ್‍ನಲ್ಲಿರುವ ಭಾರತೀಯರ ಸ್ಥಳಾಂತರ ಅಂತಿಮ ಹಂತಕ್ಕೆ ಬಂದಿದೆ. ನವೀನ್ ದೇಹ ತರುವ ಬಗ್ಗೆ ಮಾತುಕತೆ ನಡೀತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್‍ನಲ್ಲಿ ಬಾಂಬಿಂಗ್ ಇನ್ನೂ ನಡೀತಿದೆ. ದಾಳಿ ನಿಂತ ನಂತರ ದೇಹ ತರುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಉಕ್ರೇನ್‍ನಲ್ಲಿ ಉಳಿದವರಿಗೂ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡಲು ಭಾರತ ಮುಂದಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವಧಿಪೂರ್ವ ಚುನಾವಣೆ ಚರ್ಚೆ ಮಾಧ್ಯಮಗಳಲ್ಲಿ ನಡೀತಿದೆ. ನಮ್ಮ ಪಕ್ಷದಲ್ಲಿ ಅವಧಿಪೂರ್ವ ಚುನಾವಣೆ ಬಗ್ಗೆ ಚರ್ಚೆ ನಡೀತಿಲ್ಲ. ಯಾವುದೇ ಹಂತದಲ್ಲೂ, ಎಲ್ಲೂ ಕೂಡಾ ಪಕ್ಷದಲ್ಲಿ ಚರ್ಚೆ ನಡೀತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ದೆಹಲಿ ಡಿಸಿಪಿ ಕಾರಿಗೆ ಡಿಕ್ಕಿ ಹೊಡೆದಿದ್ದ Paytm ಸಿಇಒ – ಜಾಮೀನಿನ ಮೇಲೆ ಬಿಡುಗಡೆ
ದೆಹಲಿಗೆ ಹೋಗುವ ವಿಚಾರವಾಗಿ ಮಾತನಾಡಿ, ವರಿಷ್ಠರು ಇನ್ನೂ ಸೂಚನೆ ಕೊಟ್ಟಿಲ್ಲ. ವರಿಷ್ಠರ ಸೂಚನೆ ಕೊಟ್ಟ ಮೇಲೆ ದೆಹಲಿಗೆ ಹೋಗುತ್ತೇನೆ. ವರಿಷ್ಠರು ಯಾವಾಗ ಹೇಳ್ತಾರೋ ಆಗ ಸಚಿವ ಸಂಪುಟ ಪುನಾರಚನೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ನಮ್ಮ ಪಕ್ಷ ಬಿಟ್ಟು ಯಾರೂ ಹೋಗಲ್ಲ. ಇನ್ನೊಂದು ಪಕ್ಷಕ್ಕೆ ಯಾರೂ ನಮ್ಮಿಂದ ಹೋಗಲ್ಲ. ಬೇರೆ ಪಕ್ಷದಿಂದ ಬರುವವರ ಬಗ್ಗೆ ಕಾದು ನೋಡಿ ಎಂದು ಕಾಂಗ್ರೆಸ್, ಜೆಡಿಎಸ್‍ನಿಂದ ಬರುವವರ ಬಗ್ಗೆ ಸುಳಿವು ನೀಡಿದರು. ಇದೇ 30, 31 ರಂದು ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ಸಭೆ ಇದೆ. ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಪ್ರವಾಸ ಸೇರಿ ಎಲ್ಲ ವಿಚಾರಗಳು ಚರ್ಚೆ ಆಗುತ್ತವೆ ಎಂದು ತಿಳಿಸಿದರು. ಇದನ್ನೂ ಓದಿ: ಉಕ್ರೇನ್‍ಗೆ 200 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡಿದ ಅಮೆರಿಕ
ಬೆಂಗಳೂರು: ಸರ್ಕಾರ ಏನೂ ಕೆಲಸ ಮಾಡದೇ ಹೋಗಿದ್ದರೆ ಇಂದು ವಿದ್ಯಾರ್ಥಿಗಳು ಉಕ್ರೇನ್‌ನಿಂದ ಬರಲು ಸಾಧ್ಯವಾಗುತ್ತಿರಲಿಲ್ಲ. ಯಾಕೆ ಕೆಲ ವಿದ್ಯಾರ್ಥಿಗಳು ಆಕ್ರೋಶದಲ್ಲಿ ಹೀಗೆ ಹೇಳಿದರು ಎಂಬುದು ತಿಳಿಯುತ್ತಿಲ್ಲ. ಉಕ್ರೇನ್ ಇಲ್ಲಿಂದ ಶ್ರೀನಿವಾಸಪುರ ಅಥವಾ ಬಸವನಗುಡಿಗೆ ಹೋದಷ್ಟು ಹತ್ತಿರವಿಲ್ಲ. ಅವರೆಲ್ಲರನ್ನೂ ಅಷ್ಟು ದೂರದಿಂದ ಕೆರೆದುಕೊಂಡು ಬಂದಿರುವ ಬಳಿಕವೂ ಸರ್ಕಾರ ಏನೂ ಮಾಡಿಲ್ಲ ಎನ್ನುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಸರ್ಕಾರಿ ವಿರೋಧಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಉಕ್ರೇನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು ತಮ್ಮ ಮೊಬೈಲಿನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಬಂದ್ರಾ ಅಥವಾ ನಮ್ಮ ದೇಶ ಕಳುಹಿಸಿದ ವಿಮಾನದಲ್ಲಿ ಬಂದ್ರಾ..? ಈ ರೀತಿಯಾಗಿ ಸರ್ಕಾರವನ್ನು ದೂರುವುದು ತಪ್ಪು ಎಂದು ಹೇಳಿದರು. ಇದನ್ನೂ ಓದಿ: ಕಂದಾಯ ದಾಖಲೆ ಮನೆ ಬಾಗಿಲಿಗೆ- ಯೋಜನೆಗೆ ಸಿಎಂ ಚಾಲನೆ
ನವೀನ್ ಮೃತದೇಹ ತರುವ ವಿಚಾರವಾಗಿ ಮಾತನಾಡಿದ ತೇಜಸ್ವಿ ಸೂರ್ಯ, ಅಲ್ಲಿನ ಇಂಡಿಯನ್ ಎಂಬಸಿ ಮೃತದೇಹ ಪತ್ತೆ ಮಾಡಿದೆ. ಭಾರತಕ್ಕೆ ಕರೆತರುವ ವ್ಯವಸ್ಥೆ ಮಾಡುತ್ತಿದೆ. ಜನರಲ್ ರಾವತ್ ಮರಣ ಸಂದರ್ಭದಲ್ಲೂ ದೇಹವನ್ನು ಗುರುತಿಸುವಲ್ಲಿ ತಡವಾಗಿತ್ತು. ಈ ಬಗ್ಗೆ ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ. ಅಲ್ಲಿ ಯುದ್ಧದ ಪರಿಸ್ಥಿತಿ ಹೇಗೆ ಇರುತ್ತದೆ ಎಂಬುದು ಅಲ್ಲಿಯವರಿಗೆ ಮಾತ್ರ ತಿಳಿದಿರುತ್ತದೆ. ಹೀಗಾಗಿ ನವೀನ್ ಮೃತದೇಹ ಬರುತ್ತದೆ ಎಂಬ ಭರವಸೆ ಇಟ್ಟುಕೊಳ್ಳೋಣ ಎಂದು ಹೇಳಿದರು.
3 ವಾರಗಳಿಂದ ಆಪರೇಶನ್ ಗಂಗಾ ಯೋಜನೆ ಜಾರಿಯಲ್ಲಿತ್ತು. ಉಕ್ರೇನ್‌ನ ವಿವಿಧ ಭಾಗಗಳಲ್ಲಿ ಸಿಲುಕಿದ್ದ 19,448 ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆದುಕೊಂಡು ಬರಲಾಗಿದೆ. ಅದರಲ್ಲಿ 633 ಕರ್ನಾಟಕದ ವಿದ್ಯಾರ್ಥಿಗಳು ಇದ್ದರು. ಆಪರೇಶನ್ ಗಂಗಾ ಕಾರ್ಯಾಚರಣೆ ಅತ್ಯಂತ ಜಟಿಲವಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಸತತ ಪ್ರಯತ್ನದಿಂದ ಉಕ್ರೇನ್ ಹಾಗೂ ರಷ್ಯಾ ಅಧ್ಯಕ್ಷರ ಜೊತೆ ಸಂಪರ್ಕ ಮಾಡಿ ಅದನ್ನು ಯಶಸ್ವಿಯಾಗಿಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಪರವಾಗಿ ನಾನು ಪ್ರಧಾನಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. ಇದನ್ನೂ ಓದಿ: ಸರ್ಕಾರ ತಾರತಮ್ಯ ಮಾಡುತ್ತಿದೆ, ಬಿಜೆಪಿ ಶಾಸಕರಿಗೆ ಹೆಚ್ಚು ನಮಗೆ ಕಡಿಮೆ ಅನುದಾನ ನೀಡಿದೆ: ರಾಮಲಿಂಗಾ ರೆಡ್ಡಿ
ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ, ಅವರ ಸಾಕು ಪ್ರಾಣಿಗಳನ್ನೂ ಆಪರೇಶನ್ ಗಂಗಾ ಮೂಲಕ ಸುರಕ್ಷಿತವಾಗಿ ಕರೆತರಲಾಗಿದೆ. ನನ್ನ ಕಚೇರಿಯಿಂದಲೂ ಸಾಕಷ್ಟು ಕೆಲಸ ಮಾಡಲಾಗಿದೆ. 400 ವಿದ್ಯಾರ್ಥಿಗಳ ಪಟ್ಟಿ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಉಕ್ರೇನ್‌ನ ವಾಟ್ಸಪ್ ಗ್ರೂಪ್‌ಗಳಿಗೆ ಸೇರಿಸಿ ವಿದ್ಯಾರ್ಥಿಗಳ ಸಂಪರ್ಕ ಪಡೆಯಲಾಗಿತ್ತು. ಈ ವಿಚಾರವಾಗಿ ಕೆಲಸ ಮಾಡಿದ ವಿದೇಶಾಂಗ ಸಚಿವ ಜೈಶಂಕರ್, ವಿದ್ಯಾರ್ಥಿಗಳನ್ನು ಕರೆತರಲು ಹೋಗಿದ್ದ ಹರ್ದೀಪ್ ಸಿಂಗ್, ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.
2014ರ ಮೊದಲು ಈ ದೇಶದಲ್ಲಿ ಮೆಡಿಕಲ್ ಕಾಲೇಜು ಸೀಟ್‌ಗಳ ಸಂಖ್ಯೆ 54 ಸಾವಿರ ಇತ್ತು. ಮೋದಿ ಪ್ರಧಾನಿಯಾದ ಬಳಿಕ 86,648 ರಷ್ಟು ಹೆಚ್ಚಳವಾಗಿದೆ. ಮೋದಿ 7 ವರ್ಷಗಳಲ್ಲಿ ಶೇ.55 ರಷ್ಟು ಮೆಡಿಕಲ್ ಸೀಟ್‌ಗಳನ್ನು ಹೆಚ್ಚಳ ಮಾಡಿದ್ದಾರೆ. ಪಿಜಿ ಸೀಟ್‌ಗಳು 24 ಸಾವಿರ ಇತ್ತು. 6 ವರ್ಷಗಳಲ್ಲಿ ಶೇ.73 ರಷ್ಟು ಹೆಚ್ಚಳ ಮಾಡಿದ್ದಾರೆ ಎಂದರು.
ಹಾವೇರಿ: ರಷ್ಯಾ ಸೈನಿಕರ ದಾಳಿಗೆ ಖಾರ್ಕೀವ್‍ನಲ್ಲಿ ಮೃತರಾಗಿದ್ದ ನವೀನ್ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ,ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಭೇಟಿ ನೀಡಿದ್ದಾರೆ.
ಹಾವೇರಿಯ ರಾಣೆಬೆನ್ನೂರಿನ ಚಳಗೇರಿಯಲ್ಲಿರುವ ನವೀನ್ ನಿವಾಸಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ವಿದ್ಯಾರ್ಥಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ನವೀನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೆ ನವೀನ್ ಮೃತದೇಹ ತರುವ ಪ್ರಯತ್ನ ನಡೆಯುತ್ತಿದೆ ಎಂದು ಕುಟುಂಬಸ್ಥರಿಗೆ ಭರವಸೆ ನಿಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್ ನಲ್ಲಿ ಮೆಡಿಕಲ್ ಓಡಲು ಹೋಗಿದ್ದ ನವೀನ್ ನಾಲ್ಕನೇ ವರ್ಷದ ವಿದ್ಯಾರ್ಥಿ. ತಂದೆ-ತಾಯಿ ನವೀನ್ ಬಗ್ಗೆ ದೊಡ್ಡ ಆಸೆ ಇಟ್ಟುಕೊಂಡಿದ್ದರು. ದುರದೃಷ್ಟವಶಾತ್ ನವೀನ್ ಓದು ಮುಗಿಸಲು ಆಗಲಿಲ್ಲ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಮೃತಪಟ್ಟಿದ್ದಾನೆ. ಮಾರ್ಚ್ 1 ರಂದು ಬಂಕರ್ ನಲ್ಲಿದ್ದವರಿಗೆ ತಿಂಡಿ ತರೋಕೆ ಹೋಗಿದ್ನಂತೆ. ಕ್ಯೂನಲ್ಲಿ ನಿಂತಾಗ ಆಗಿದ್ದಂತಹ ಶೆಲ್ ದಾಳಿಗೆ ನವೀನ್ ಬಲಿಯಾಗಿದ್ದಾನೆ. ಮೃತದೇಹ ಅಲ್ಲಿಯೇ ಇದೆ ಎಂದರು. ಇದನ್ನೂ ಓದಿ: ನವೀನ್ ಕುಟುಂಬಸ್ಥರಿಗೆ 1 ಲಕ್ಷ ರೂ. ಚೆಕ್ ವಿತರಿಸಿದ ಸಲೀಂ ಅಹಮದ್
ಇನ್ನೂ ಬಾಳಿ ಬದುಕಬೇಕಾದ ಯುವಕ ನವೀನ್. ಸಮಾಜದಲ್ಲಿ ಆತನ ಮೇಲೆ ಹಲವು ನಿರೀಕ್ಷೆಗಳಿದ್ದವು. ಮೃತದೇಹ ತರುವ ಪ್ರಯತ್ನ ನಡೆಯುತ್ತಿವೆ. ಭಾರತ ಸರ್ಕಾರ ಕೂಡಲೇ ಮೃತದೇಹ ತರುವ ಪ್ರಯತ್ನ ಮಾಡಬೇಕು. ಸಂಬಂಧಿಸಿದವರಿಗೆ ಈ ಬಗ್ಗೆ ಮಾತನಾಡುವೆ. ಪ್ರಧಾನಮಂತ್ರಿಯವರಿಗೆ ಮೃತದೇಹ ತರಿಸುವ ಸಲುವಾಗಿ ಪತ್ರ ಬರೆಯುವೆ. ಕೋಳಿವಾಡರ ಪುತ್ರ ಅನುಮತಿ ಕೊಟ್ರೆ ತಮ್ಮ ವಿಮಾನದಲ್ಲಿ ಮೃತದೇಹ ತರುವುದಾಗಿ ಕೇಂದ್ರಕ್ಕೆ ಪತ್ರ ಬರೆದಿದ್ದರು. ಕೇಂದ್ರ ಸರ್ಕಾರದಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.
ಚಿಕ್ಕವಯಸ್ಸಿನ ನವೀನ್ ಆತ್ಮಕ್ಕೆ ಚಿರಶಾಂತಿ ಸಿಗಲಿ. ಆತ ನಮ್ಮ ಮೈಸೂರಿನಲ್ಲಿ ಓದಿದ ಹುಡುಗ. ನಂಜನಗೂಡು ಪೇಪರ್ ಮಿಲ್ ನಲ್ಲಿ ಕೆಲಸ ಮಾಡ್ತಿದ್ರು ನವೀನ್ ತಂದೆ. ಮೃತ ನವೀನ್ ಅಣ್ಣ ಹರ್ಷ ಪಿಎಚ್‍ಡಿ ಮಾಡುತ್ತಿದ್ದಾನೆ. ನವೀನ್ ತಂದೆ-ತಾಯಿಗೆ ಬಹಳ ನೋವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ನೋವು ತಂದೆ-ತಾಯಿಗೆ ಕಾಡುತ್ತಿದೆ ಎಂದರು. ಇದನ್ನೂ ಓದಿ: ಮೃತ ನವೀನ್ ಕುಟುಂಬಕ್ಕೆ ಸಾಂತ್ವನ ಹೇಳಿ 25 ಲಕ್ಷ ರೂ. ಚೆಕ್ ಕೊಟ್ಟ ಸಿಎಂ
ಇಲ್ಲಿ ಸರ್ಕಾರಿ ಕೋಟಾದಲ್ಲಿ ಮೆಡಿಕಲ್ ಸೀಟು ಸಿಗದ್ದಕ್ಕೆ ನವೀನ್ ಉಕ್ರೇನ್ ಗೆ ಹೋಗಿದ್ದ. ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿತ್ತು. ರಾಜಕೀಯಕ್ಕೊಸ್ಕರ ಈ ಮಾತು ಹೇಳುತ್ತಿಲ್ಲ. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆಗುತ್ತದೆ ಎಂಬುದು ಮಾಹಿತಿ ಇತ್ತು. ಯುದ್ಧ ಪ್ರಾರಂಭದ ಮುಂಚೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ಬೇರೆ ದೇಶದವರು ತಮ್ಮ ತಮ್ಮ ದೇಶದವರನ್ನ ಕರೆದುಕೊಂಡು ಹೋಗಿದ್ದಾರೆ. ಭಾರತ ದೇಶ ಮುಂಜಾಗ್ರತಾ ಕ್ರಮ ಕೈಗೊಂಡು ಅಲ್ಲಿನವರ ಕರೆದುಕೊಂಡು ಬರುವಲ್ಲಿ ಎಡವಿದೆ. ಅದನ್ನ ಮಾಡೋದರಲ್ಲಿ ಕೇಂದ್ರ ಸರ್ಕಾರ ಫೇಲ್ ಆಗಿದೆ. ಕೂಡಲೇ ನವೀನ್ ಮೃತದೇಹ ಭಾರತ ದೇಶಕ್ಕೆ ತರಿಸುವ ಕೆಲಸವನ್ನ ಮಾಡಬೇಕೆಂದು ಪ್ರಧಾನಿಯವರಿಗೆ ಒತ್ತಾಯಿಸಿದರು.
ಕೇಂದ್ರ ಸರ್ಕಾರ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದೆ ಎಂಬುದು ಗೊತ್ತಾಗುತ್ತದೆ. ವಿದೇಶಾಂಗ ಸಚಿವಾಲಯ ಜವಾಬ್ದಾರಿಯಿಂದ ಕೆಲಸ ಮಾಡಬೇಕಿತ್ತು. ಅವರು ಜಾಗೃತರಾಗಿದ್ದರೆ ನವೀನ್ ಜೀವ ಉಳಿಸಬಹುದಿತ್ತು. ನವೀನ್ ಮೃತದೇಹವನ್ನಾದರೂ ತರಿಸುವ ಕೆಲಸ ಮಾಡಬೇಕಿತ್ತು. 8-9 ದಿನಗಳ ಕಾಲ ವಿದ್ಯಾರ್ಥಿಗಳು ಬಂಕರ್ ನಲ್ಲಿ ಇದ್ದರಂತೆ. ಇದು ಬಹಳ ನೋವಿನ ಸಂಗತಿ. ಅಲ್ಲಿ ಓದಿ ಬಂದು ಹಳ್ಳಿನಲ್ಲಿ ಮಗ ಸೇವೆ ಮಾಡಬೇಕೆಂಬ ಆಸೆ ತಂದೆಯದಾಗಿತ್ತು. ಅದನ್ನ ಕೇಳಿ ಕರುಳು ಕಿತ್ತು ಬಂತು. ಯುವಕರು ದೇಶದ ಆಸ್ತಿ ಎಂದು ಸಿದ್ದರಾಮಯ್ಯ ಹೇಳಿದರು.