Tag: ನವೀನ್ ಶೇಖರಪ್ಪ

  • ಸೋಮವಾರ ನಸುಕಿನಜಾವ ತಲುಪಲಿದೆ ನವೀನ್ ಶೇಖರಪ್ಪ ಮೃತದೇಹ

    ಸೋಮವಾರ ನಸುಕಿನಜಾವ ತಲುಪಲಿದೆ ನವೀನ್ ಶೇಖರಪ್ಪ ಮೃತದೇಹ

    ಹಾವೇರಿ: ಉಕ್ರೇನ್ ಯುದ್ಧದಲ್ಲಿ ಮಾರ್ಚ್ 1ರಂದು ಮೃತಪಟ್ಟ ಹಾವೇರಿ ಜಿಲ್ಲೆ ಚಳಗೇರಿಯ ನವೀನ್ ಶೇಖರಪ್ಪ ಗ್ಯಾನಗೌಡರ್ ಮೃತದೇಹ ಭಾರತಕ್ಕೆ ರವಾನೆ ಆಗುತ್ತಿದೆ. ಸದ್ಯ ನವೀನ್ ಮೃತದೇಹ ದುಬೈನಲ್ಲಿದೆ. ನವೀನ್ ಮೃತದೇಹ ಹೊತ್ತ ವಿಮಾನ ದುಬೈನಿಂದ ಬೆಂಗಳೂರು ಕಡೆಗೆ ಹೊರಟಿದ್ದು, ನಸುಕಿನಜಾವ ಮೂರು ಗಂಟೆ ಸುಮಾರಿಗೆ ನವೀನ್ ಮೃತದೇಹ ಬೆಂಗಳೂರು ತಲುಪಲಿದೆ.


    ಬೆಳಗ್ಗೆ ಒಂಬತ್ತು ಗಂಟೆಗೆಲ್ಲಾ ನವೀನ್ ಬಾಡಿಯನ್ನು ರಸ್ತೆ ಮಾರ್ಗವಾಗಿ ಹಾವೇರಿಯ ಚಳಗೇರಿಗೆ ಕೊಂಡೊಯ್ಯಲಾಗುತ್ತದೆ. ನವೀನ್ ಮೃತದೇಹವನ್ನು ಬರಮಾಡಿಕೊಳ್ಳಲು ಚಳಗೇರಿಯಿಂದ ಸಹೋದರ ಹರ್ಷ ಸೇರಿ 15 ಮಂದಿ ಬೆಂಗಳೂರಿಗೆ ಧಾವಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಅರುಣ್ ಕುಮಾರ್ ಪೂಜಾರ್ ಸೇರಿ ಹಲವು ಗಣ್ಯರು ನವೀನ್ ಮೃತದೇಹವನ್ನು ಬರ ಮಾಡಿಕೊಳ್ಳಲಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ತೈಲ ಶಾಕ್ – ಡೀಸೆಲ್ ಬೆಲೆ ಲೀ.25 ರೂ. ಏರಿಕೆ

    ಬಳಿಕ ಬೊಮ್ಮಾಯಿ ಚಳಗೇರಿಗೂ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ನವೀನ್ ಹುಟ್ಟೂರಿನಲ್ಲಿ ಅಂತಿಮ ವಿಧಿವಿಧಾನ ಪೂರೈಸಿದ ಬಳಿಕ ಕೆಲ ಹೊತ್ತು ಮನೆ ಬಳಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಮಧ್ಯಾಹ್ನದ ಅಂತಿಮ ಮೆರವಣಿಗೆ ಮೂಲಕ ನವೀನ್ ಮೃತದೇಹವನ್ನು ದಾವಣಗೆರೆಯ ಎಸ್‍ಎಸ್ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಗುತ್ತದೆ. ವೈದ್ಯ ವಿದ್ಯಾರ್ಥಿಗಳ ಅಧ್ಯಯನದ ಸಲುವಾಗಿ ನವೀನ್ ಮೃತದೇಹವನ್ನು ಕಾಲೇಜ್‍ಗೆ ದಾನ ನೀಡಲು ಈಗಾಗಲೇ ಶೇಖರಪ್ಪ ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ನಾವು ಸಹ ಹಿಂದೂಗಳೇ, ಭಗವದ್ಗೀತೆಯನ್ನು ಇಡೀ ದೇಶದ ಜನರಿಗೆ ತಲುಪಿಸಿದ್ದು ಕಾಂಗ್ರೆಸ್: ಡಿಕೆಶಿ

    ರಷ್ಯಾ-ಉಕ್ರೇನ್ ನಡುವಿನ ಯುದ್ಧ ತೀವ್ರಗೊಳ್ಳುತ್ತಿದೆ. ಆದಷ್ಟು ಬೇಗ ಉಕ್ರೇನ್ ತೊರೆಯಿರಿ ಎಂದು ಕೇಂದ್ರ ಸರ್ಕಾರ ಸೂಚನೆ ಕೊಟ್ಟ ಬೆನ್ನಲ್ಲೇ ರಷ್ಯಾ ಶೆಲ್ ದಾಳಿಗೆ ಕನ್ನಡಿಗ ನವೀನ್ ಬಲಿಯಾಗಿದ್ದರು. ಖಾರ್ಕಿವ್‌ನಲ್ಲಿ ಮೆಡಿಕಲ್ ಓದುತ್ತಿದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಚಳಗೇರಿಯ ನವೀನ್ ದುರಂತ ಸಾವನ್ನಪ್ಪಿದ್ದರು. ಖಾರ್ಕಿವ್‌ನಲ್ಲಿ  ಸೂಪರ್ ಮಾರ್ಕೆಟ್‍ಗೆ ಹೋಗಿ ಸಾಲಿನಲ್ಲಿ ನಿಂತಿದ್ದಾಗ ಶೆಲ್‌ ದಾಳಿಗೆ ನವೀನ್ ದುರ್ಮರಣಕ್ಕೀಡಾಗಿದ್ದರು.

  • ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ಮೃತದೇಹ ತರಿಸಲು ಮೋದಿ ಸೂಚನೆ

    ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ಮೃತದೇಹ ತರಿಸಲು ಮೋದಿ ಸೂಚನೆ

    ನವದೆಹಲಿ: ಮಾರ್ಚ್ 1 ರಂದು ರಷ್ಯಾ ದಾಳಿಗೆ ಬಲಿಯಾದ ಹಾವರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವೈದ್ಯ ವಿದ್ಯಾರ್ಥಿ ನವೀನ್ ಶೇಖರಪ್ಪ ಅವರ ಮೃತದೇಹವನ್ನು ಭಾರತಕ್ಕೆ ತರಿಸಲು ಅಗತ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ.

    ಭಾನುವಾರ ನಡೆದ ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿಯವರು ತಮ್ಮ ಅಧಿಕಾರಿಗಳಿಗೆ ಈ ಸಂಬಂಧ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ನವೀನ್ ಮೃತದೇಹ ತಾಯ್ನಾಡಿಗೆ ಬರುವ ನಿರೀಕ್ಷೆ ಇದೆ. ಇದನ್ನೂ ಓದಿ: ನವೀನ್ ದೇಹ ತರುವ ಬಗ್ಗೆ ಮಾತುಕತೆ ನಡೀತಿದೆ: ಬೊಮ್ಮಾಯಿ

    ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿದ್ದ ಪರಿಣಾಮ ವಿದ್ಯಾರ್ಥಿಗಳೆಲ್ಲರು ಬಂಕರ್ ಸೇರಿದ್ದರು. ಅಂತೆಯೇ ನವೀನ್ ಕೂಡ ಬಂಕರ್ ನಲ್ಲಿಯೇ ರಕ್ಷಣೆ ಪಡೆದಿದ್ದರು. ಆದರೆ ಆಹಾರ ಮತ್ತು ಹಣ ತರಲೆಂದು ಹೊರಬಂದಾಗ ರಷ್ಯಾ ದಾಳಿಗೆ ನವೀನ್ ಬಲಿಯಾಗಿದ್ದರು.

    ಇತ್ತ ನವೀನ್ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಹುಟ್ಟೂರಿನಲ್ಲಿ ನೀರವ ಮೌನ ಆವರಿಸಿತ್ತು. ಪೋಷಕರು ಹಾಗೂ ಕುಟುಂಬಸ್ಥರು ಮೃತದೇಹ ತಂದುಕೊಡುಂತೆ ಗೋಗರೆಯುತ್ತಿದ್ದರು. ನಿನ್ನೆಯಷ್ಟೇ ಸಿಎಂ ಬೊಮ್ಮಾಯಿ ಕೂಡ ಈ ಬಗ್ಗೆ ಮಾತನಾಡಿ ಮೃತದೇಹ ತರುವುದಾಗಿ ಭರವಸೆ ನೀಡಿದ್ದರು.