Tag: ನವೀನ್‌ ಪೋಲಿ ಶೆಟ್ಟಿ

  • ಮ್ಯಾರೇಜ್ ಪ್ಲ್ಯಾನ್ ಬಗ್ಗೆ ಅನುಷ್ಕಾ ಶೆಟ್ಟಿ ಸ್ಪಷ್ಟನೆ

    ಮ್ಯಾರೇಜ್ ಪ್ಲ್ಯಾನ್ ಬಗ್ಗೆ ಅನುಷ್ಕಾ ಶೆಟ್ಟಿ ಸ್ಪಷ್ಟನೆ

    ನ್ನಡತಿ ಅನುಷ್ಕಾ ಶೆಟ್ಟಿ (Anushka Shetty) ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಸಿನಿಮಾ ಇದೇ ಸೆ.7ಕ್ಕೆ ರಿಲೀಸ್ ಆಗುತ್ತಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಟಿ ಭಾಗಿಯಾಗಿದ್ದಾರೆ. ಈ ವೇಳೆ, ಮದುವೆ, ಟ್ರೋಲ್ ಮತ್ತು ಪ್ರಭಾಸ್ ಜೊತೆಗಿನ ಸಿನಿಮಾ ಬಗ್ಗೆ ಅನುಷ್ಕಾ ಶೆಟ್ಟಿ ಮುಕ್ತವಾಗಿ ಮಾತನಾಡಿದ್ದಾರೆ.

    ತಮ್ಮ ಮದುವೆಯ ವಿಚಾರದ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಮದುವೆ (Wedding) ಪ್ಲ್ಯಾನ್ ಏನಾದರೂ ಇದ್ಯಾ? ಎನ್ನುವ ನಿರೂಪಕಿಯ ಪ್ರಶ್ನೆಗೆ ಸ್ವೀಟ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಮದುವೆಗೆ ವಿರುದ್ಧ ಅಲ್ಲ. ನಾನು ಸಂಗಾತಿಯನ್ನು ಹೊಂದಲು ಮತ್ತು ಕುಟುಂಬ ಆರಂಭಿಸಲು ಇಷ್ಟಪಡುತ್ತೇನೆ. ಅದರಲ್ಲಿ ನನಗೆ ನಂಬಿಕೆ ಇದೆ. ಆದರೆ ಅದು ಸ್ವಾಭಾವಿಕವಾಗಿ ಆಗಬೇಕು. ಬರೀ ಸಮಾಜದ ಒತ್ತಡಕ್ಕೆ ಆಗುವುದಲ್ಲ ಎಂದಿದ್ದಾರೆ. ಇದನ್ನೂ ಓದಿ:ರಾಕಿಭಾಯ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್- ಅಕ್ಟೋಬರ್‌ನಲ್ಲಿ Yash 19ಗೆ ಮುಹೂರ್ತ ಫಿಕ್ಸ್

    ಸೋಶಿಯಲ್ ಮೀಡಿಯಾದಲ್ಲಿ ನಾನು ಹೆಚ್ಚು ಆ್ಯಕ್ಟೀವ್ ಆಗಿಲ್ಲ. ಸಿನಿಮಾ ರಿಲೀಸ್ ಸಂದರ್ಭದಲ್ಲಿ ಪ್ರಮೋಷನ್‌ಗೆ ಸಾಮಾಜಿಕ ಜಾಲತಾಣದ ಬಳಕೆ ಮಾಡುತ್ತೇನೆ. ಎಲ್ಲರಿಗೂ ಅವರದ್ದೇ ಆದ ಸಮಸ್ಯೆ ಇರುತ್ತದೆ. ಮೊದಲು ನಾವು ಮನುಷ್ಯರಾಗಬೇಕು ಎಂದಿದ್ದಾರೆ ಅನುಷ್ಕಾ ಶೆಟ್ಟಿ. ಇದನ್ನೂ ಓದಿ:ರಾಕಿಭಾಯ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್- ಅಕ್ಟೋಬರ್‌ನಲ್ಲಿ Yash 19ಗೆ ಮುಹೂರ್ತ ಫಿಕ್ಸ್

    ಒಳ್ಳೆಯ ಕಥೆ ಸಿಕ್ಕರೆ ಖಂಡಿತವಾಗಿ ಪ್ರಭಾಸ್ (Prabhas) ಜೊತೆ ನಟಿಸುತ್ತೇನೆ. ಒಳ್ಳೆಯ ಕಥೆ ಬರಬೇಕು ಅಷ್ಟೇ ಎಂದು ಬಾಹುಬಲಿ ನಟಿ ಸ್ಪಷ್ಟನೆ ನೀಡಿದ್ದಾರೆ.

    ನವೀನ್ ಪೋಲಿ ಶೆಟ್ಟಿಗೆ ಜೋಡಿಯಾಗಿ ಅನುಷ್ಕಾ ಶೆಟ್ಟಿ ನಟಿಸಿದ್ದಾರೆ. ಮೊದಲ ಬಾರಿಗೆ ಶೆಫ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಬಹುಭಾಷೆಗಳಲ್ಲಿ ಸೆ.7ರಂದು ರಿಲೀಸ್ ಆಗುತ್ತಿದೆ. ಜವಾನ್ ಮುಂದೆ ಅನುಷ್ಕಾ ಸಿನಿಮಾ ಬಿಡುಗಡೆ ಆಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 3 ವರ್ಷಗಳ ನಂತರ ಸ್ವೀಟಿ ಅನುಷ್ಕಾ ಶೆಟ್ಟಿ ಕಮ್‌ಬ್ಯಾಕ್

    3 ವರ್ಷಗಳ ನಂತರ ಸ್ವೀಟಿ ಅನುಷ್ಕಾ ಶೆಟ್ಟಿ ಕಮ್‌ಬ್ಯಾಕ್

    ರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ ಅವರು 3 ವರ್ಷಗಳ ನಂತರ ಕಮ್‌ಬ್ಯಾಕ್ ಆಗಿದ್ದಾರೆ. ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ (Miss Shetty Mr Poli Shetty) ಸಿನಿಮಾ ಮೂಲಕ ಸ್ವೀಟಿ ಸದ್ದು ಮಾಡ್ತಿದ್ದಾರೆ. ಸದ್ಯ ಚಿತ್ರದ ಟೀಸರ್ ಝಲಕ್‌ನಿಂದ ಅನುಷ್ಕಾ ಶೆಟ್ಟಿ (Anushka Shetty) ಹೈಪ್ ಕ್ರಿಯೇಟ್ ಮಾಡಿದ್ದಾರೆ.

    ಬಾಹುಬಲಿ 2 (Bahubali 2), ನಿಶಬ್ಧಂ ಚಿತ್ರದ ನಂತರ ಸ್ವೀಟಿ, ಅನ್ವಿತಾ ರಾವಲಿ ಶೆಟ್ಟಿಯಾಗಿ ಬರುತ್ತಿದ್ದಾರೆ. ಹೋಟೆಲ್‌ವೊಂದರ ಶೆಫ್ ಆಗಿ ಅನುಷ್ಕಾ ನಟಿಸಿದ್ದಾರೆ. ಅನ್ವಿತಾ ರಾವಲಿ ಶೆಟ್ಟಿಗೆ ಮದುವೆ ಅಂದ್ರೆ ಇಷ್ಟ ಇರಲ್ಲ, ಆ ವಿಷಯದಲ್ಲಿ ಫ್ಯಾಮಿಲಿ ಸಪೋರ್ಟ್ ಕೂಡ ಇರುತ್ತದೆ. ಮತ್ತೊಂದು ಕಡೆ ಪೋಷಕರಿಗೆ ಇಷ್ಟವಿಲ್ಲದಿದ್ದರೂ ಸ್ಟ್ಯಾಂಡಪ್ ಕಾಮೆಡಿಯನ್ ಆಗಬೇಕು ಎನ್ನುವ ಕನಸು ಕಾಣುವ ಯುವಕ ನವೀನ್ ಪೋಲಿ ಶೆಟ್ಟಿ. ಆಕಸ್ಮಿಕವಾಗಿ ಇವರಿಬ್ಬರ ನಡುವೆ ಪರಿಚಯ ಆಗಿ ಅದು ಸ್ನೇಹಕ್ಕೆ ತಿರುಗುತ್ತದೆ. ಮುಂದೆ ಆ ಸ್ನೇಹ ಎಲ್ಲಿಗೆ ಹೋಗಿ ತಲುಪುತ್ತದೆ ಅನ್ನೋದನ್ನು ತೆರೆಮೇಲೆಯೇ ನೋಡಬೇಕು. ಇಬ್ಬರ ನಡುವಿನ ದೃಶ್ಯಗಳು ತುಂಬಾ ಫ್ರೆಶ್ ಆಗಿ ಮೋಡಿ ಬಂದಿದೆ. ವಿಶೇಷವಾಗಿ ರಾವಲಿ ಶೆಟ್ಟಿ, ಪೋಲಿ ಶೆಟ್ಟಿನ ಸಂದರ್ಶನ ಮಾಡುವ ಸನ್ನಿವೇಶ ಮಜವಾಗಿದೆ.ಇದನ್ನೂ ಓದಿ:ಪತ್ನಿಗೆ ಸಿನಿಮಾ ಮಾಡಲು ಬಿಡಿ ಎಂದ ಅಭಿಮಾನಿಗೆ ಅಭಿಷೇಕ್ ಬಚ್ಚನ್ ಏನಂದ್ರು ಗೊತ್ತಾ?

    ನವೀನ್‌ನ ನಿನ್ನ ಸ್ಟ್ರೆಂತ್ ಏನು ಎಂದು ಆಕೆ ಕೇಳಿದಾಗ ಅವಕಾಶ ಸಿಕ್ಕಾಗಲೆಲ್ಲಾ ಕಾಮಿಡಿ ಮಾಡ್ತೀನಿ ಅಂತಾನೆ. ವೀಕ್‌ನೆಸ್ ಏನು ಅಂದ್ರೆ ಸಿಚ್ಯುವೇಷನ್‌ಗೆ ಸಂಬಂಧ ಇಲ್ಲದೇ ಕಾಮಿಡಿ ಮಾಡ್ತಿರ್ತೀನಿ ಅಂತಾ ಉತ್ತರ ಕೊಡುತ್ತಾನೆ. ಇನ್ನು ಕೊನೆಗೆ ನಿನ್ನ ಟೈಮಿಂಗ್ ಯಾವಾಗಲೂ ಹೀಗೇನಾ? ಎನ್ನುವ ಪ್ರಶ್ನೆಗೆ ಕಾಮಿಡಿ ಟೈಮಿಂಗ್ ಮಾತ್ರ ಪರ್ಫೆಕ್ಟ್ ಆಗಿ ಇರುತ್ತೆ ಎನ್ನುತ್ತಾನೆ. ಟೀಸರ್ ನೋಡಿದ್ಮೇಲೆ ಇದು ಪಕ್ಕಾ ಕಾಮೆಡಿ ಎಂಟರ್‌ಟೈನರ್ ಸಿನಿಮಾ ಅನ್ನೋದು ಅರ್ಥವಾಗ್ತಿದೆ. ಟೀಸರ್ ಹೊಸ ಫೀಲ್ ಕೊಡುವಂತಿದೆ. ಯುವಿ ಕ್ರಿಯೇಷನ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಮಹೇಶ್ ಬಾಬು ಪಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ.

    ಡಿಫರೆಂಟ್ ಲುಕ್, ಫ್ರೆಶ್ ಕಥೆ ಜೊತೆ ಬರುತ್ತಿರುವ ಅನುಷ್ಕಾಳನ್ನ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ನವೀನ್ ಪೋಲಿ ಶೆಟ್ಟಿ- ಅನುಷ್ಕಾ ನಟನೆಯ ಈ ಚಿತ್ರ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರ ಮೂಡಿ ಬಂದಿದೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.

  • ಈ ಕಾರಣಕ್ಕಾಗಿ ಅನುಷ್ಕಾ ಶೆಟ್ಟಿ ಕ್ಯಾಮೆರಾ ಕಣ್ಣಿಂದ ದೂರವಿದ್ದಾರೆ

    ಈ ಕಾರಣಕ್ಕಾಗಿ ಅನುಷ್ಕಾ ಶೆಟ್ಟಿ ಕ್ಯಾಮೆರಾ ಕಣ್ಣಿಂದ ದೂರವಿದ್ದಾರೆ

    ಕ್ಷಿಣದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿ ಗಮನ ಸೆಳೆದಿರುವ ಅನುಷ್ಕಾ ಶೆಟ್ಟಿ ಈಗ ನವೀನ್ ಪೋಲಿ ಶೆಟ್ಟಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗಾಗಿ ಅನುಷ್ಕಾ ಶೆಟ್ಟಿ ಮತ್ತೆ ತೂಕ ಹೆಚ್ಚಿಸಿಕೊಂಡಿದ್ದಾರೆ.

    `ಬಾಹುಬಲಿ’ ನಟಿ ಅನುಷ್ಕಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಪಿ ನಿರ್ದೇಶನದ ಚಿತ್ರದಲ್ಲಿ ಅನುಷ್ಕಾ ನಾಯಕಿಯಾಗಿ ಜೀವ ತುಂಬುತ್ತಿದ್ದಾರೆ. ಹೀಗಿರುವಾಗ ಈ ಚಿತ್ರಕ್ಕಾಗಿ ಮತ್ತೆ ತಮ್ಮ ತೂಕವನ್ನ ಹೆಚ್ಚಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅನುಷ್ಕಾ 40 ವರ್ಷದ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಪಾತ್ರಕ್ಕಾಗಿ ಮತ್ತಷ್ಟು ತೂಕವನ್ನ ನಟಿ ಹೆಚ್ಚಿಸಿಕೊಂಡಿಕೊಂಡಿದ್ದಾರೆ. ನಾಯಕಿಗಿಂತ ನಾಯಕ ಚಿಕ್ಕ ವಯಸ್ಸಿನವನಾಗಿದ್ದು, ವಯಸ್ಸಿನ ಅಂತರವಿರುವ ಕಥೆಯಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ʻರಶ್ಮಿಕಾ ನನ್ನ ಡಾರ್ಲಿಂಗ್ʼ ಎಂದ ವಿಜಯ್ ದೇವರಕೊಂಡ

    ಇದೇ ಕಾರಣಕ್ಕಾಗಿ ಅನುಷ್ಕಾ ಕೂಡ ಕ್ಯಾಮೆರಾ ಕಣ್ಣಿಂದ ದೂರವಿದ್ದಾರೆ. ಸದ್ದಿಲ್ಲದೇ ನವೀನ್ ಪೋಲಿ ಶೆಟ್ಟಿ ಚಿತ್ರಕ್ಕೆ `ಬಾಹುಬಲಿ’ ನಟಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದೀಗ ತೆರೆಮರೆಯಲ್ಲಿ ಸಿನಿಮಾಗಾಗಿ ಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳಲು ತಯಾರಿ ಮಾಡಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೇಕ್ ಕತ್ತರಿಸುವ ಮೂಲಕ 17 ವರ್ಷದ ಸಿನಿಪಯಣದ ಸಂಭ್ರಮ ಆಚರಿಸಿದ ಅನುಷ್ಕಾ ಶೆಟ್ಟಿ

    ಕೇಕ್ ಕತ್ತರಿಸುವ ಮೂಲಕ 17 ವರ್ಷದ ಸಿನಿಪಯಣದ ಸಂಭ್ರಮ ಆಚರಿಸಿದ ಅನುಷ್ಕಾ ಶೆಟ್ಟಿ

    ಕ್ಷಿಣದ ಸಿನಿಮಾರಂಗದಲ್ಲಿ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ಕನ್ನಡತಿ ಅನುಷ್ಕಾ ಶೆಟ್ಟಿ ಸಿನಿಬದುಕಿಗೆ ಇಂದು 17 ವರ್ಷಗಳ ಸಂಭ್ರಮ. ನಾಯಕಿಯಾಗಿ ಹಲವು ಬಗೆಯ ಪಾತ್ರಗಳ ಮೂಲಕ ರಂಜಿಸಿರುವ ಸ್ವೀಟಿ ಸಿನಿಪಯಣಕ್ಕೆ 17 ವರ್ಷವಾಗಿದೆ. ಇದೇ ಖುಷಿಯಲ್ಲಿ ಅನುಷ್ಕಾ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    17 ವರ್ಷಗಳಿಂದ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ, ಭಿನ್ನ ಪಾತ್ರಗಳ ಮೂಲಕ ಮನರಂಜಿಸಿದ್ದಾರೆ. ಮಹಾನ್‌ ನಟಿ ಅನುಷ್ಕಾ ಸದ್ಯ ತಮ್ಮ ಹೊಸ ಚಿತ್ರತಂಡದೊಂದಿಗೆ 17 ವರ್ಷದ ಸಿನಿ ಬದುಕನ್ನ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ.

    ಪುರಿ ಜಗನ್ನಾಥ್ ನಿರ್ದೇಶನದ `ಸೂಪರ್’ ಚಿತ್ರದ ಮೂಲಕ ಟಾಲಿವುಡ್ ಅಂಗಳಕ್ಕೆ ನಾಯಕಿಯಾಗಿ ಪರಿಚಿತರಾದ್ದರು. ತೆಲುಗು ಮತ್ತು ತಮಿಳು ಚಿತ್ರಗಳ ಮೂಲಕ ಸಿನಿರಸಿಕರ ಮನಗೆದ್ದಿರುವ ಸ್ವೀಟಿ 40ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.

    `ಬಾಹುಬಲಿ’ ಚಿತ್ರದ ದೇವಸೇನಾ ಆಗಿ ವರ್ಲ್ಡ್ ವೈಡ್ ಗುರುತಿಸಿಕೊಂಡ ನಟಿ, ಸದ್ಯ ನವೀನ್ ಪೋಲಿ ಶೆಟ್ಟಿಗೆ ನಾಯಕಿಯಾಗಿ ಹೊಸ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೀಗ ಇದೇ ಚಿತ್ರತಂಡದ ಜತೆ ಕೇಕ್ ಕತ್ತರಿಸಿ 17 ವರ್ಷದ ಸಿನಿಬದುಕಿನ ಪಯಣವನ್ನ ನಟಿ ಅನುಷ್ಕಾ ಶೆಟ್ಟಿ ಸ್ಮರಿಸಿದ್ದಾರೆ. ನೆಚ್ಚಿನ ನಟಿಯ ಸಿನಿ ಬದುಕಿಗೆ ಫ್ಯಾನ್ಸ್‌ ಕೂಡ ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]