Tag: ನವೀನ್ ಉಲ್ ಹಕ್

  • ದುಷ್ಮನ್‌ ಅಲ್ಲ ದೋಸ್ತಿ – ಕೊಹ್ಲಿಯನ್ನು ಹಾಡಿ ಹೊಗಳಿದ ಗಂಭೀರ್‌, ಫ್ಯಾನ್ಸ್‌ ವಿರುದ್ಧ ಮತ್ತೆ ಗರಂ

    ದುಷ್ಮನ್‌ ಅಲ್ಲ ದೋಸ್ತಿ – ಕೊಹ್ಲಿಯನ್ನು ಹಾಡಿ ಹೊಗಳಿದ ಗಂಭೀರ್‌, ಫ್ಯಾನ್ಸ್‌ ವಿರುದ್ಧ ಮತ್ತೆ ಗರಂ

    ನವದೆಹಲಿ: ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ವಿರಾಟ್‌ ಕೊಹ್ಲಿ (Virat Kohli) ಹಾಗೂ ನವೀನ್‌ ಉಲ್‌ ಹಕ್‌ (Naveen-ul-Haq) ಮೈದಾನದಲ್ಲಿ ಮುಖಾಮುಖಿಯಾಗುವ ಬಗ್ಗೆ ಸಾಕಷ್ಟು ಕುತೂಹಲವಿತ್ತು. 2023ರ ಐಪಿಎಲ್‌ ಬಳಿಕ ಇದೇ ಮೊದಲಬಾರಿಗೆ ಮುಖಾಮುಖಿಯಾಗಿದ್ದು, ಮತ್ತೆ ಕಿರಿಕ್‌ ಆಗಬಹುದೇ? ಕೊಹ್ಲಿ ಕಣಕ್ಕಿಳಿದ್ರೆ ಬ್ಯಾಟಿಂಗ್‌ನಲ್ಲಿ ಹೇಗೆ ಅಬ್ಬರಿಸುತ್ತಾರೆ? ಅನ್ನೋದನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದುಕುಳಿತಿದ್ದರು. ಆದ್ರೆ ಮೈದಾನದಲ್ಲಿ ನಡೆದಿದ್ದೇ ಬೇರೆ.

    ಇಲ್ಲಿನ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ (Afghanistan) ನೀಡಿದ 273 ರನ್‌ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಪರ ರೋಹಿತ್‌ ಶರ್ಮಾ ಹಾಗೂ ಇಶಾನ್‌ ಕಿಶನ್‌ ಜೋಡಿ ಮೊದಲ ವಿಕೆಟ್‌ಗೆ 156 ರನ್‌ಗಳ ಜೊತೆಯಾಟ ನೀಡಿತ್ತು. ಸ್ಫೋಟಕ ಇನ್ನಿಂಗ್ಸ್‌ ಆರಂಭಿಸಿದ್ದ ರೋಹಿತ್‌ ಶರ್ಮಾಗೆ ಸಾಥ್‌ ನೀಡುತ್ತಿದ್ದ ಇಶಾನ್‌ ಕಿಶನ್‌ 47 ರನ್‌ಗಳಿಗೆ ಔಟಾಗಿ ಪೆವಿಲಿಯನ್‌ಗೆ ಮರಳಿದರು. ಬಳಿಕ 3ನೇ ಕ್ರಮಾಂಕದಲ್ಲಿ ಕೊಹ್ಲಿ ಕ್ರೀಸ್‌ಗೆ ಇಳಿಯುತ್ತಿದ್ದಂತೆ ಅಭಿಮಾನಿಗಳು ಜೈಕಾರ ಹಾಕುವ ಮೂಲಕ ಸ್ವಾಗತ ಕೋರಿದರು. ಕೊಹ್ಲಿ ಕ್ರೀಸ್‌ಗೆ ಬಂದು ನವೀನ್‌ ಉಲ್‌ ಹಕ್‌ ಬೌಲಿಂಗ್‌ನಲ್ಲಿ ಎದುರಾದ ಕೊಹ್ಲಿ ಅಬ್ಬರಿಸುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೆ ಅಭಿಮಾನಿಗಳ ನಿರೀಕ್ಷೆ ಹುಸಿಯಾಯಿತು.

    ನವೀನ್‌ ಉಲ್‌ ಹಕ್‌ ಅವರ ಹಲವು ಎಸೆತಗಳನ್ನು ಕೊಹ್ಲಿ ಡಾಟ್‌ ಮಾಡಿಸಿದರು. ಜೊತೆಗೆ ಕೊಹ್ಲಿ… ಕೊಹ್ಲಿ… ಎಂದು ಜೈಕಾರ ಕೂಗುತ್ತಾ ನವೀನ್‌ ಉಲ್‌ ಹಕ್‌ ನನ್ನ ರೇಗಿಸುತ್ತಿದ್ದ ಅಭಿಮಾನಿಗಳನ್ನ ಕೈಸನ್ನೆಯಲ್ಲೇ ಸುಮ್ಮನಿರುವಂತೆ ಮನವಿ ಮಾಡಿದರು. ಅಷ್ಟೇ ಅಲ್ಲದೇ ಪಂದ್ಯದ ವೇಳೆ ನವೀನ್‌ ಉಲ್‌ ಹಕ್‌ನನ್ನ ಆತ್ಮೀಯವಾಗಿ ಅಪ್ಪಿಕೊಂಡು ಮಾತನಾಡಿಸಿದರು. ನವೀನ್‌ ಹೆಗಲಮೇಲೆ ಕೈಯಿಟ್ಟು ಪ್ರೀತಿಯಿಂದ ಮಾತನಾಡಿಸಿದರು. ವಿರಾಟ್‌ ಕೊಹ್ಲಿ ನಡೆಗೆ ಅಭಿಮಾನಿಗಳೂ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: World Cup 2023: ಗುಡ್‌ನ್ಯೂಸ್‌ – ಪಾಕ್‌ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಸೇರಲಿದ್ದಾರೆ ಗಿಲ್‌

    ಕೊಹ್ಲಿ ಫ್ಯಾನ್ಸ್‌ ವಿರುದ್ಧ ಗಂಭೀರ್‌ ಗರಂ:
    ಇನ್ನೂ ಕೊಹ್ಲಿ-ನವೀನ್‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ (Gautam Gambhir), ಕೊಹ್ಲಿಯನ್ನು ಹೊಗಳುತ್ತಲೇ ಅಭಿಮಾನಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಪ್ರತಿಯೊಬ್ಬ ಆಟಗಾರನೂ ತನ್ನ ತಂಡಕ್ಕಾಗಿ ಹೋರಾಡುತ್ತಾನೆ ಅನ್ನೋದಕ್ಕೆ ಕೊಹ್ಲಿ ಸಾಕ್ಷಿಯಾಗಿದ್ದಾರೆ. ಯಾರು ಯಾವ ದೇಶದವರು ಅನ್ನೋದಕ್ಕಿಂತ ಕ್ರೀಡೆಯಲ್ಲಿ ಎಷ್ಟು ಉತ್ತಮವಾಗಿ ಆಡುತ್ತಾರೆ ಎಂಬುದು ಮುಖ್ಯವಾಗುತ್ತದೆ. ಕೊಹ್ಲಿ ಮತ್ತು ನವೀನ್‌ ಅವರನ್ನು ಕ್ರೀಡೆಯ ಉದ್ದೇಶದಿಂದಲೇ ನೋಡಿದ್ರೆ ಒಳ್ಳೆಯದು. ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾಗಿ ಆಟಗಾರರನ್ನ ಟ್ರೋಲ್‌ ಮಾಡುವುದನ್ನು ನಿಲ್ಲಿಸಬೇಕು ಎಂದು ಕೊಹ್ಲಿ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

    ನವೀನ್‌ ಉಲ್‌ ಹಕ್‌ ರಿಯಾಕ್ಷನ್‌ ಏನು?
    ಇನ್ನೂ ಪಂದ್ಯ ಮುಗಿದ ಬಳಿಕ ಕೊಹ್ಲಿ ಜೊತೆಗಿನ ಮಾತುಗಳನ್ನ ರಿವೀಲ್‌ ಮಾಡಿರುವ ನವೀನ್‌ ಉಲ್‌ ಹಕ್‌, ಕೊಹ್ಲಿ ತುಂಬಾ ಒಳ್ಳೆಯ ವ್ಯಕ್ತಿ, ಉತ್ತಮ ಆಟಗಾರ ಕೂಡ ಹೌದು. ಪಂದ್ಯದ ವೇಳೆ ಪರಸ್ಪರ ಕೈಕುಲುಕಿದೆವು. ಆದ್ರೆ ಅಭಿಮಾನಿಗಳೇ ಅದನ್ನ ದೊಡ್ಡದು ಮಾಡ್ತಿದ್ದಾರೆ. ಅಂದು ನಡೆದ ಘಟನೆಯನ್ನ ನಾವು ಅಲ್ಲಿಗೆ ಬಿಟ್ಟಿದ್ದೇವೆ. ಅಭಿಮಾನಿಗಳು ಅದನ್ನ ಮುಂದುವರಿಸಿದ್ದಾರೆ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.

    ಒಟ್ಟಿನಲ್ಲಿ ವಿರಾಟ್‌ ಕೊಹ್ಲಿ ಹಾಗೂ ನವೀನ್‌ ಉಲ್‌ ಹಕ್‌ ನಡುವಣ ಕದನ ಅಂತ್ಯವಾಗಿದೆ ಎಂದೆಲ್ಲಾ ನೆಟ್ಟಿಗರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರೋಹಿತ್‌ ಶರ್ಮಾ ಸ್ಫೋಟಕ ಶತಕ – 8 ವಿಕೆಟ್‌ಗಳ ಜಯದೊಂದಿಗೆ ಪಾಕ್‌ ಹಿಂದಿಕ್ಕಿದ ಭಾರತ

    2023ರ ಐಪಿಎಲ್‌ನಲ್ಲಿ ಏನಾಗಿತ್ತು?
    2023ರ ಐಪಿಎಲ್‌ ಟೂರ್ನಿವೇಳೆ ಏಕನಾ ಕ್ರೀಡಾಂಗಣದಲ್ಲಿ ನಡೆದ 43ನೇ ಪಂದ್ಯದಲ್ಲಿ ಆರ್‌ಸಿಬಿ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 18 ರನ್‌ಗಳ ಜಯ ಸಾಧಿಸಿತು. ಈ ಹಿಂದೆ ಆರ್‌ಸಿಬಿ ತವರಿನಲ್ಲಿ ಲಕ್ನೋ ವಿರುದ್ಧದ ವಿರೋಚಿತ ಸೋಲಿಗೆ ಸೇಡು ತೀರಿಸಿಕೊಂಡಿತು. ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಈ ಹಿಂದೆಯೂ ಹಲವು ಬಾರಿ ಜಗಳ ನಡೆದಿವೆ. ಆ ನಂತರ ಇಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು. ಆದರೆ ಅಂದು ನಡೆದ ಪಂದ್ಯದ ಬಳಿಕ ಇವರಿಬ್ಬರ ನಡುವಿನ ಜಗಳ ಅತಿರೇಕಕ್ಕೆ ತಲುಪಿತ್ತು. ಒಂದು ವೇಳೆ ಸಹ ಆಟಗಾರರು ಮಧ್ಯ ಬಾರದೇ ಇದ್ದಿದ್ದರೆ ಕೈಕೈ ಮಿಲಾಯಿಸುವುದಕ್ಕೂ ಕಾರಣವಾಗುತ್ತಿತ್ತು.

    ಅಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ನಡುವಣ ಪಂದ್ಯದಲ್ಲಿ ಲಕ್ನೋ ತಂಡ 1 ವಿಕೆಟ್‌ಗಳ ಜಯ ದಾಖಲಿಸಿತ್ತು. ಆ ಪಂದ್ಯದ ಬಳಿಕ ಗಂಭೀರ್ ಬಾಯ್ಮೇಲೆ ಬೆರೆಳಿಟ್ಟು ಆರ್‌ಸಿಬಿ ಪ್ರೇಕ್ಷಕರು ಸುಮ್ಮನಿರುವಂತೆ ಸೂಚಿಸಿ ಸಂಭ್ರಮಿಸಿದ್ದರು. ಲಕ್ನೋ ತಂಡದ ಅವೇಶ್ ಖಾನ್ ಹೆಲ್ಮೆಟ್ ಕಿತ್ತೆಸೆದು ಅತಿರೇಖದ ವರ್ತನೆ ತೋರಿಸಿದ್ದರು. ಇದಕ್ಕೆ ಪ್ರತಿಯಾಗಿ ತವರಿನಲ್ಲಿ ಬುದ್ಧಿ ಕಲಿಸಲು ನಿರ್ಧರಿಸಿದ್ದ ಕೊಹ್ಲಿ ಪಂದ್ಯದ ನಡುವೆ ಅಭಿಮಾನಿಗಳು ಸುಮ್ಮನಿರಬಾರದು? ಹೃದಯತುಂಬಿ ಸಂಭ್ರಮಿಸಬೇಕು ಎಂದು ಸನ್ನೆ ಮೂಲಕ ತೋರಿಸಿದ್ದರು. ಇದನ್ನೂ ಓದಿ: ಲಂಕಾ ವಿರುದ್ಧ ಮೋಸದಾಟವಾಡಿತಾ ಪಾಕ್‌? – ಮತ್ತೆ ಮತ್ತೆ ಟೀಕೆಗೆ ಗುರಿಯಾಗ್ತಿರೋದೇಕೆ?

    127 ರನ್ ಗುರಿ ಬೆನ್ನತ್ತಿದ್ದ ಲಕ್ನೋ ತಂಡ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇನಿಂಗ್ಸ್ ಅಂತ್ಯದಲ್ಲಿ ಅಮಿತ್ ಮಿಶ್ರಾ 19 ರನ್ ಮತ್ತು ವೇಗಿ ನವೀನ್ ಉಲ್ ಹಕ್ 13 ನಡುವೆ ಸಣ್ಣ ಜೊತೆಯಾಟವೊಂದು ಮೂಡಿಬಂದಿತ್ತು. ಕವರ್ಸ್ ವಿಭಾಗದಲ್ಲಿ ಒಂದು ಫೋರ್ ಕೂಡ ಬಾರಿಸಿದ್ದ ನವೀನ್ ಉಲ್‌ಹಕ್‌ ಆರ್‌ಸಿಬಿ ಸ್ಟಾರ್‌ ವಿರಾಟ್ ಕೊಹ್ಲಿ ಅವರನ್ನ ದುರುಗುಟ್ಟಿ ನೋಡಿ, ದೊಡ್ಡ ಜಗಳಕ್ಕೆ ಸಣ್ಣ ಕಿಡಿ ಹಚ್ಚಿದ್ದರು. ಪಂದ್ಯ ಮುಗಿದ ಬಳಿಕ ನವೀನ್ ಮತ್ತು ಕೊಹ್ಲಿ ಕೈ ಕುಲುಕುವಾಗಲೂ ಮಾತಿನ ಚಕಮಕಿ ನಡೆದಿತ್ತು. ಕೈ-ಕೈ ಮಿಲಾಯಿಸುವುದಕ್ಕೂ ಮುಂದಾಗಿದ್ದರು. ಆದ್ರೆ ಮ್ಯಾಕ್ಸ್ವೆಲ್ ಹಾಗೂ ಹರ್ಷಲ್ ಪಟೇಲ್ ಸಮಾಧಾನಪಡಿಸಿ ಕಳುಹಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: ಇಂದು ಇಂಡೋ-ಅಫ್ಘಾನ್‌ ಕದನ – ಕೊಹ್ಲಿ ಅಬ್ಬರ ನೋಡಲು ಅಭಿಮಾನಿಗಳ ಕಾತರ

    World Cup 2023: ಇಂದು ಇಂಡೋ-ಅಫ್ಘಾನ್‌ ಕದನ – ಕೊಹ್ಲಿ ಅಬ್ಬರ ನೋಡಲು ಅಭಿಮಾನಿಗಳ ಕಾತರ

    ನವದೆಹಲಿ: ವಿಶ್ವಕಪ್‌ (Cricket World Cup 2023) ಆರಂಭಿಕ ಪಂದ್ಯದಲ್ಲಿ ಸ್ಪಿನ್‌ ಸ್ನೇಹಿ ಪಿಚ್‌ನಲ್ಲೂ ಆಸೀಸ್‌ ವಿರುದ್ಧ ಗೆದ್ದು, ವಿಶ್ವಕಪ್‌ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿರುವ ಭಾರತ ಇಂದು ಅಫ್ಘಾನಿಸ್ತಾನ (Afghanistan) ತಂಡದ ವಿರುದ್ಧ ಸೆಣಸಲಿದೆ.

    ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭಗೊಳ್ಳಲಿದ್ದು, ಭಾರತ ತಂಡ ನಿರಾಯಾಸವಾಗಿ ಗೆಲ್ಲುವ ಗುರಿ ಹೊಂದಿದೆ. ಅದರಲ್ಲೂ ಮುಖ್ಯವಾಗಿ ಅಫ್ಘಾನ್‌ ಬೌಲರ್‌ ನವೀನ್‌ ಉಲ್‌ ಹಕ್‌ನನ್ನ ಕೆಣಕುವ ಸಲುವಾಗಿಯೇ ಮೈದಾನದಲ್ಲಿ ಕೊಹ್ಲಿ (Virat Kohli) ಅಬ್ಬರಿಸೋದನ್ನ ನೋಡಲು ಕಾದು ಕುಳಿತಿದ್ದಾರೆ.

    ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದು, ಭಾರತ 2 ಬಾರಿ ಗೆಲುವು ಸಾಧಿಸಿದೆ. ಒಂದು ಬಾರಿ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇದನ್ನೂ ಓದಿ: ಶತಕ ಸಿಡಿಸಿ ಎರಡು ದಾಖಲೆ ಬರೆದ ಮಲಾನ್‌ – ಇಂಗ್ಲೆಂಡ್‌ಗೆ 137ರನ್‌ಗಳ ಭರ್ಜರಿ ಜಯ

    ಪಿಚ್‌ ರಿಪೋರ್ಟ್‌ ಹೇಗಿದೆ?
    ಅರುಣ್‌ ಜೇಟ್ಲಿ ಕ್ರೀಡಾಂಗಣವು ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆಗಿದ್ದು, ಟಾಸ್‌ ಗೆದ್ದ ತಂಡವು ಬ್ಯಾಟಿಂಗ್‌ ಆಯ್ದುಕೊಳ್ಳುವ ಸಾಧ್ಯತೆಗಳು ಹೆಚ್ಚಿದೆ. ಇದೇ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 428 ರನ್‌ ಸಿಡಿಸಿ ವಿಶ್ವದಾಖಲೆ ಬರೆದಿತು. ದಕ್ಷಿಣ ಆಫ್ರಿಕಾದ ಮೂವರು ಬ್ಯಾಟರ್‌ಗಳು ಶತಕ ಸಿಡಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ ಬರೋಬ್ಬರಿ 31 ಸಿಕ್ಸರ್‌ಗಳು ದಾಖಲಾಗಿದ್ದವು. ಹಾಗಾಗಿ ಉತ್ತಮ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಪಡೆಯನ್ನು ಹೊಂದಿರುವ ಭಾರತ ಗೆಲುವಿನ ವಿಶ್ವಾಸದಲ್ಲಿದೆ. ಇದನ್ನೂ ಓದಿ: Olympics 2028: ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್​ಗೆ ಕ್ರಿಕೆಟ್‌ ಸೇರ್ಪಡೆ ಖಚಿತ – ಅಧಿಕೃತ ಘೋಷಣೆಯಷ್ಟೇ ಬಾಕಿ

    ಕೊಹ್ಲಿ ಫ್ಯಾನ್ಸ್‌ಗೆ ನವೀನ್‌ ಆಹಾರವಾಗ್ತಿರೋದೇಕೆ?
    2023ರ ಐಪಿಎಲ್‌ ಟೂರ್ನಿವೇಳೆ ಏಕನಾ ಕ್ರೀಡಾಂಗಣದಲ್ಲಿ ನಡೆದ 43ನೇ ಪಂದ್ಯದಲ್ಲಿ ಆರ್‌ಸಿಬಿ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 18 ರನ್‌ಗಳ ಜಯ ಸಾಧಿಸಿತು. ಈ ಹಿಂದೆ ಆರ್‌ಸಿಬಿ ತವರಿನಲ್ಲಿ ಲಕ್ನೋ ವಿರುದ್ಧದ ವಿರೋಚಿತ ಸೋಲಿಗೆ ಸೇಡು ತೀರಿಸಿಕೊಂಡಿತು. ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಈ ಹಿಂದೆಯೂ ಹಲವು ಬಾರಿ ಜಗಳ ನಡೆದಿವೆ. ಆ ನಂತರ ಇಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು. ಆದರೆ ಅಂದು ನಡೆದ ಪಂದ್ಯದ ಬಳಿಕ ಇವರಿಬ್ಬರ ನಡುವಿನ ಜಗಳ ಅತಿರೇಕಕ್ಕೆ ತಲುಪಿತ್ತು. ಒಂದು ವೇಳೆ ಸಹ ಆಟಗಾರರು ಮಧ್ಯ ಬಾರದೇ ಇದ್ದಿದ್ದರೆ ಕೈಕೈ ಮಿಲಾಯಿಸುವುದಕ್ಕೂ ಕಾರಣವಾಗುತ್ತಿತ್ತು. ಇದನ್ನೂ ಓದಿ: World Cup 2023: ಅ.14 ರಂದು ಪಾಕ್‌ ವಿರುದ್ಧ ಹೈವೋಲ್ಟೇಜ್‌ ಕದನ – ಗಿಲ್‌ ಕಣಕ್ಕಿಳಿಯೋದು ಡೌಟ್‌

    ಅಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ನಡುವಣ ಪಂದ್ಯದಲ್ಲಿ ಲಕ್ನೋ ತಂಡ 1 ವಿಕೆಟ್‌ಗಳ ಜಯ ದಾಖಲಿಸಿತ್ತು. ಆ ಪಂದ್ಯದ ಬಳಿಕ ಗಂಭೀರ್ ಬಾಯ್ಮೇಲೆ ಬೆರೆಳಿಟ್ಟು ಆರ್‌ಸಿಬಿ ಪ್ರೇಕ್ಷಕರು ಸುಮ್ಮನಿರುವಂತೆ ಸೂಚಿಸಿ ಸಂಭ್ರಮಿಸಿದ್ದರು. ಲಕ್ನೋ ತಂಡದ ಅವೇಶ್ ಖಾನ್ ಹೆಲ್ಮೆಟ್ ಕಿತ್ತೆಸೆದು ಅತಿರೇಖದ ವರ್ತನೆ ತೋರಿಸಿದ್ದರು. ಇದಕ್ಕೆ ಪ್ರತಿಯಾಗಿ ತವರಿನಲ್ಲಿ ಬುದ್ಧಿ ಕಲಿಸಲು ನಿರ್ಧರಿಸಿದ್ದ ಕೊಹ್ಲಿ ಪಂದ್ಯದ ನಡುವೆ ಅಭಿಮಾನಿಗಳು ಸುಮ್ಮನಿರಬಾರದು? ಹೃದಯತುಂಬಿ ಸಂಭ್ರಮಿಸಬೇಕು ಎಂದು ಸನ್ನೆ ಮೂಲಕ ತೋರಿಸಿದ್ದರು. ಇದನ್ನೂ ಓದಿ: ಪಾಕ್‌ ಉಗ್ರರನ್ನ ಹತ್ಯೆಗೈದ ಕಮಾಂಡೋಗಳಿಂದಲೇ ಭಾರತ-ಪಾಕ್ ಪಂದ್ಯಕ್ಕೆ ಭದ್ರತೆ – ಇಲ್ಲಿದೆ ಡಿಟೇಲ್ಸ್‌

    127 ರನ್ ಗುರಿ ಬೆನ್ನತ್ತಿದ್ದ ಲಕ್ನೋ ತಂಡ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇನಿಂಗ್ಸ್ ಅಂತ್ಯದಲ್ಲಿ ಅಮಿತ್ ಮಿಶ್ರಾ 19 ರನ್ ಮತ್ತು ವೇಗಿ ನವೀನ್ ಉಲ್ ಹಕ್ 13 ನಡುವೆ ಸಣ್ಣ ಜೊತೆಯಾಟವೊಂದು ಮೂಡಿಬಂದಿತ್ತು. ಕವರ್ಸ್ ವಿಭಾಗದಲ್ಲಿ ಒಂದು ಫೋರ್ ಕೂಡ ಬಾರಿಸಿದ್ದ ನವೀನ್ ಉಲ್‌ಹಕ್‌ ಆರ್‌ಸಿಬಿ ಸ್ಟಾರ್‌ ವಿರಾಟ್ ಕೊಹ್ಲಿ ಅವರನ್ನ ದುರುಗುಟ್ಟಿ ನೋಡಿ, ದೊಡ್ಡ ಜಗಳಕ್ಕೆ ಸಣ್ಣ ಕಿಡಿ ಹಚ್ಚಿದ್ದರು. ಪಂದ್ಯ ಮುಗಿದ ಬಳಿಕ ನವೀನ್ ಮತ್ತು ಕೊಹ್ಲಿ ಕೈ ಕುಲುಕುವಾಗಲೂ ಮಾತಿನ ಚಕಮಕಿ ನಡೆದಿತ್ತು. ಕೈ-ಕೈ ಮಿಲಾಯಿಸುವುದಕ್ಕೂ ಮುಂದಾಗಿದ್ದರು. ಆದ್ರೆ ಮ್ಯಾಕ್ಸ್ವೆಲ್ ಹಾಗೂ ಹರ್ಷಲ್ ಪಟೇಲ್ ಸಮಾಧಾನಪಡಿಸಿ ಕಳುಹಿಸಿದ್ದರು.

    ಕೊಹ್ಲಿ ಮತ್ತು ನವೀನ್ ಉಲ್‌ ಹಕ್‌ ನಡುವಣ ಸಣ್ಣ ಜಗಳವನ್ನು ಅಲ್ಲೇ ಇದ್ದ ಎರಡೂ ತಂಡಗಳ ಆಟಗಾರರು ಬಗೆ ಹರಿಸಿದ್ದರು. ಆದರೆ, ಡಗೌಟ್‌ನಿಂದ ಹೊರಬಂದ ಗೌತಮ್ ಗಂಭೀರ್ ಜಗಳವನ್ನು ಮತ್ತಷ್ಟು ಗಂಭೀರವಾಗಿಸಿದರು. ವಿರಾಟ್ ಜೊತೆಗೆ ಮಾತನಾಡುತ್ತಿದ್ದ ಎಲ್‌ಎಸ್‌ಜಿ ಆಟಗಾರ ಕೈಲ್ ಮೇಯರ್ಸ್ ಅವರನ್ನು ಎಳೆದೊಯ್ದ ಗಂಭೀರ್ ಈ ಸಂದರ್ಭದಲ್ಲಿ ಮಾತಿನ ಚಕಮಕಿಯೇ ನಡೆಸಿದ್ದರು. ಕೊಹ್ಲಿ ಮತ್ತು ಗಂಭೀರ್‌ನ ತಡೆದು ನಿಲ್ಲಿಸಲು ಎರಡೂ ತಂಡದ ಆಟಗಾರರು ಹರಸಾಹನ ನಡೆಸಿದರು. ಈ ವೇಳೆ ಕೆ.ಎಲ್ ರಾಹುಲ್ ಹಾಗೂ ಅಮಿತ್ ಮಿಶ್ರಾ ಪರಿಸ್ಥಿತಿಯನ್ನು ತಣ್ಣಗಾಗಿಸಿದರು. ಇದನ್ನೂ ಓದಿ:

    ಅಫ್ಘಾನ್‌ ವಿರುದ್ಧ ಭಾರತ ಪ್ಲೇಯಿಂಗ್‌-11: ರೋಹಿತ್‌ ಶರ್ಮಾ (ನಾಯಕ), ಇಶಾನ್‌ ಕಿಶನ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಕೆ.ಎಲ್‌ ರಾಹುಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್‌ ಅಶ್ವಿನ್‌, ಕುಲ್ದೀಪ್‌ ಯಾದವ್‌, ಜಸ್ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಹ್ಲಿ ಕೆಣಕಿದ ನವೀನ್‌ಗೆ ಮುಂಬೈ ಸ್ಟಾರ್ಸ್‌ ಕೊಟ್ರು ಪಂಚ್‌ – RCB ಫ್ಯಾನ್ಸ್‌ಗೆ ಡಬಲ್‌ ಖುಷಿ

    ಕೊಹ್ಲಿ ಕೆಣಕಿದ ನವೀನ್‌ಗೆ ಮುಂಬೈ ಸ್ಟಾರ್ಸ್‌ ಕೊಟ್ರು ಪಂಚ್‌ – RCB ಫ್ಯಾನ್ಸ್‌ಗೆ ಡಬಲ್‌ ಖುಷಿ

    ಚೆನ್ನೈ: ಮುಂಬೈ ಇಂಡಿಯನ್ಸ್ (MI) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ನಡುವೆ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 81 ರನ್‌ ಗಳಿಂದ ಭರ್ಜರಿ ಜಯ ಸಾಧಿಸಿ, 2ನೇ ಹಂತಕ್ಕೆ ತಲುಪಿದೆ.

    ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು ಮತ್ತು ಲಕ್ನೋಗೆ 20 ಓವರ್‌ ಗಳಲ್ಲಿ 182 ರನ್‌ ಗುರಿಯನ್ನು ನೀಡಿತು. ಆದ್ರೆ ಲಕ್ನೋ ತಂಡ 101 ರನ್‌ ಗಳಿಗೆ ಆಲ್ ಔಟ್ ಹೀನಾಯ ಸೋಲನುಭವಿಸಿತು. ಇದನ್ನೂ ಓದಿ: IPL 2023 Eliminator: 5 ರನ್‌ಗೆ 5 ವಿಕೆಟ್‌ ಉಡೀಸ್‌ – ಲಕ್ನೋ ಮನೆಗೆ, ಮುಂಬೈಗೆ 81ರನ್‌ಗಳ ಭರ್ಜರಿ ಜಯ

    ಈ ಐಪಿಎಲ್ ಸೀಸನ್‌ ನಲ್ಲಿ ಬಹಳ ವೈರಲ್ ಆದ ‘ಸ್ವೀಟ್ ಮ್ಯಾಂಗೊ’ ಎಂಬ ಪದವನ್ನು ನೀವೆಲ್ಲರೂ ಕೇಳಿರಬಹುದು. ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ ನಡುವೆ 2ನೇ ಬಾರಿಗೆ ನಡೆದ ಲೀಗ್ ‌ಪಂದ್ಯದಲ್ಲಿ ವಿರಾಟ್‌ ಕೊಹ್ಲಿ (Virat Kohli), ಪಿಯೂಷ್‌ ಚಾವ್ಲಾ ಅವರ ಬೌಲಿಂಗ್‌ಗೆ ಔಟಾಗುತ್ತಿದ್ದಂತೆ, ಪಿಯೂಷ್‌ ಅವರ ಚಿತ್ರವನ್ನು ಕ್ಲಿಕ್ಕಿಸಿದ್ದ ಅಫ್ಘಾನಿಸ್ತಾನ ಮೂಲದ ಲಕ್ನೋ ಆಟಗಾರ ನವೀನ್ ಉಲ್ ಹಕ್ (Naveen ul Haq) ʻಸ್ವೀಟ್‌ ಮ್ಯಾಂಗೋಸ್‌ʼ ಪದದೊಂದಿಗೆ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಮೂಲಕ ಲಕ್ನೋ ಪಂದ್ಯದ ವೇಳೆ ನಡೆದ ಮಾತಿನ ಚಕಮಕಿ ಬಳಿಕ ಕೊಹ್ಲಿಯನ್ನ ಮತ್ತೆ ಕೆಣಕಿದ್ದರು.

    ಇದರಿಂದ ಕೊಹ್ಲಿ ಮತ್ತು ಆರ್‌ಸಿಬಿ ಫ್ಯಾನ್ಸ್‌ (RCB Fans) ಕೆಂಡಾಮಂಡಲವಾಗಿದ್ದರು. ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಇದೇ ವೇಳೆ ಮುಂಬೈ ಮತ್ತು ಲಖನೌ ನಡುವಿನ ಎಲಿಮಿನೇಟರ್-1 ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡುತ್ತಿದ್ದ ನವೀನ್ 4 ಓವರ್‌ ಗಳಲ್ಲಿ 38 ರನ್ ನೀಡಿದರೂ 4 ವಿಕೆಟ್ ಕಬಳಿಸಿ ಮುಂಬೈ ತಂಡವನ್ನು ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿಸಿದ್ದರು. ರೋಹಿತ್ ಶರ್ಮಾರನ್ನ ಔಟ್‌ ಮಾಡಿದ ನಂತರ ನವೀನ್ ಉಲ್ ಹಕ್ ಕಿವಿ ಮುಚ್ಚಿಕೊಂಡು, ಕೆ.ಎಲ್‌ ರಾಹುಲ್‌ ಸ್ಟೈಲ್‌ ಕಾಪಿ ಮಾಡಿ ಸಂಭ್ರಮಿಸಿದ್ದರು.

    ಅದೇ ರೀತಿಯಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರು ಪಂದ್ಯ ಗೆದ್ದ ಬಳಿಕ ರೆಸ್ಟ್‌ ರೂಮ್‌ನಲ್ಲಿ ಕುಳಿತಿದ್ದಾಗ, ಮೂರು ಮಾವಿನ ಹಣ್ಣುಗಳನ್ನು ಮೇಜಿನ ಮೇಲೆ ಇಟ್ಟುಕೊಂಡು ಕಿವಿ, ಕಣ್ಣು, ಬಾಯಿ ಮುಚ್ಚಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೋಟೋ ಸದ್ದು ಮಾಡುತ್ತಿದ್ದಂತೆ ಆರ್‌ಸಿಬಿ ಹಾಗೂ ವಿರಾಟ್‌ ಕೊಹ್ಲಿ ಅಭಿಮಾನಿಗಳು ನವೀನ್‌ನನ್ನ ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದಾರೆ.

    ಮತ್ತೊಂದೆಡೆ ಆರ್‌ಸಿಬಿ ತಂಡವನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಸೋಲಿಸಿ, ಪ್ಲೇ ಆಫ್‌ಗೆ ಬರದಂತೆ ಮಾಡಿದ ಗುಜರಾತ್‌ ಟೈಟಾನ್ಸ್‌, ಪ್ಲೇ ಆಫ್‌ ಮೊದಲ ಪಂದ್ಯದಲ್ಲಿ ಸೋತಿದ್ದು ಅಭಿಮಾನಿಗಳಿಗೆ ಡಬಲ್‌ ಖುಷಿ ಕೊಟ್ಟಿದೆ. ಆರ್‌ಸಿಬಿ ಅಭಿಮಾನಿಗಳೂ ಸಹ ಇದರಿಂದ ಸಿಎಸ್‌ಕೆಗೆ ಸಪೋರ್ಟ್‌ ಮಾಡಿದ್ದಾರೆ. ಇದನ್ನೂ ಓದಿ: IPL 2023: ಧೋನಿಯಿಂದ ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ- ಲಾಸ್ಟ್ 5 ಓವರ್‌ಗೂ ಮುನ್ನ ನಡೆದಿದ್ದೇನು?