Tag: ನವೀಕರಿಸಬಹುದಾದ ಇಂಧನ

  • ನವೀಕರಿಸಬಹುದಾದ ಇಂಧನದಲ್ಲಿ ಭಾರತ ಗಮನಾರ್ಹ ಸಾಧನೆ – 24.2 GW ಸಾಮರ್ಥ್ಯ ವೃದ್ಧಿ: ಜೋಶಿ

    ನವೀಕರಿಸಬಹುದಾದ ಇಂಧನದಲ್ಲಿ ಭಾರತ ಗಮನಾರ್ಹ ಸಾಧನೆ – 24.2 GW ಸಾಮರ್ಥ್ಯ ವೃದ್ಧಿ: ಜೋಶಿ

    ಹುಬ್ಬಳ್ಳಿ: ಭಾರತ ನವೀಕರಿಸಬಹುದಾದ ಇಂಧನ (Renewable Energy) ವಲಯದಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿದ್ದು, ಒಂದೇ ವರ್ಷದಲ್ಲಿ 24.2 GW (13.5%) ರಷ್ಟು ಸಾಮರ್ಥ್ಯ ವೃದ್ಧಿಸಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ.

    ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 24 GW, ಸೌರಶಕ್ತಿ 20 GW ಹೆಚ್ಚಿದೆ. 2023ರ ಅಕ್ಟೋಬರ್ ನಿಂದ 2024ರ ಅಕ್ಟೋಬರ್ ವರೆಗೆ ಭಾರತ ಗಣನೀಯ ಬೆಳವಣಿಗೆ ಕಂಡಿದೆ ಎಂದು ಹೇಳಿದ್ದಾರೆ. 2023ರ ಅಕ್ಟೋಬರ್‌ನಲ್ಲಿ 178.98 GW ಇದ್ದ ಸೌರಶಕ್ತಿ ಸಾಮರ್ಥ್ಯ ಪ್ರಸ್ತುತ 203.18 GW ತಲುಪಿದೆ. ಈ ಗಮನಾರ್ಹ ಏರಿಕೆ RE ವಲಯದ ಕ್ಷೇತ್ರದಲ್ಲಿ ಭಾರತದ ಮಹತ್ವಾಕಾಂಕ್ಷೆಯ ಗುರಿ ಸಾಧನೆಗೆ ಪೂರಕವಾಗಿದೆ ಎಂದು ಹೇಳಿದ್ದಾರೆ.

    ಪರಮಾಣು ಶಕ್ತಿ ಒಳಗೊಂಡಂತೆ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ 2023 ರಲ್ಲಿ 186.46 GW ಇತ್ತು. ಅದೀಗ 211.36 GWಗೆ ಏರಿದೆ ಎಂದಿದ್ದಾರೆ. ಇದನ್ನೂ ಓದಿ: ರಿಯಲ್‌ ಎಸ್ಟೇಟ್‌ ಮಾಫಿಯಾದಿಂದ ಮನನೊಂದು ದಂಪತಿ ಆತ್ಮಹತ್ಯೆ; 12 ಮಂದಿ ವಿರುದ್ಧ FIR

    ಸೌರ ಮತ್ತು ಪವನ ವಿದ್ಯುತ್ ಹೆಚ್ಚಳ: ಸೌರಶಕ್ತಿ ವಲಯ 20.1 GW ( 27.9%) ಗಮನಾರ್ಹ ಏರಿಕೆ ಕಂಡಿದೆ. 2023ರ ಅಕ್ಟೋಬರ್ ನಲ್ಲಿ 72.02 GW ಇದ್ದದ್ದು ನಿಂದ 2024ರ ಅಕ್ಟೋಬರ್‌ಗೆ 92.12 GW ಗೆ ವಿಸ್ತರಣೆ ಕಂಡಿದೆ. ಪ್ರಸ್ತುತದಲ್ಲಿ ಅನುಷ್ಠಾನದಲ್ಲಿರುವ ಮತ್ತು ಟೆಂಡರ್ ಮಾಡಲಾದ ಯೋಜನೆ ಸೇರಿದಂತೆ ಒಟ್ಟು ಸೌರ ಸಾಮರ್ಥ್ಯವು ಈಗ 250.57 GW (ಕಳೆದ ವರ್ಷ 166.49 GW) ಗಮನಾರ್ಹ ಹೆಚ್ಚಳ ಕಂಡಿದೆ ಎಂದಿದ್ದಾರೆ.

    ಪವನ ಶಕ್ತಿ: ಪವನ ಶಕ್ತಿ ಸಹ ಸ್ಥಿರವಾದ ಬೆಳವಣಿಗೆ ಪ್ರದರ್ಶಿಸಿದೆ. ಸ್ಥಾಪಿತ ಸಾಮರ್ಥ್ಯವು 7.8% ರಷ್ಟು ಹೆಚ್ಚಾಗಿದೆ. 2023ರ ಅಕ್ಟೋಬರ್‌ನಲ್ಲಿ 44.29 GW ಇದ್ದದ್ದು ಈಗ 47.72 GWಗೆ ಆಗಿದೆ. ಗಾಳಿ ಯೋಜನೆಗಳಿಗೆ ಪೈಪ್‌ಲೈನ್‌ನಲ್ಲಿ ಒಟ್ಟು ಸಾಮರ್ಥ್ಯ ಈಗ 72.35 GW ತಲುಪಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಕಬ್ಬು ಬೆಲೆ ನಿಗದಿಗಾಗಿ ಹೋರಾಟ- ಸಿಎಂಗೆ ಘೇರಾವ್ ಹಾಕಲು ನಿರ್ಧರಿಸಿದ ಮುಧೋಳ ರೈತರು

    2024ರ ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ, ಭಾರತ 12.6 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸೇರಿಸಿದೆ. ಅಕ್ಟೋಬರ್ ತಿಂಗಳಲ್ಲೇ 1.72 GW ಸ್ಥಾಪಿಸಲಾಯಿತು. ಇದು ನವೀಕರಿಸಬಹುದಾದ ವೇಗದ ಬದಲಾವಣೆ ತೋರುತ್ತಿದೆ ಎಂದಿದ್ದಾರೆ.

    ಜಲ-ಪರಮಾಣು ಕೊಡುಗೆ: 2024ರ ಅಕ್ಟೋಬರ್ ಹೊತ್ತಿಗೆ, ದೊಡ್ಡ ಜಲವಿದ್ಯುತ್ ಯೋಜನೆಗಳು ಭಾರತದ ನವೀಕರಿಸಬಹುದಾದ ಬಂಡವಾಳಕ್ಕೆ 46.93 GW ಕೊಡುಗೆ ನೀಡಿದರೆ, ಪರಮಾಣು ಶಕ್ತಿ ಸಾಮರ್ಥ್ಯವು 8.18 GW ಕೊಡುಗೆ ನೀಡಿದೆ ಎಂದು ತಿಳಿಸಿದ್ದಾರೆ.

    ಈ ಕೊಡುಗೆಗಳು ಭಾರತದ ನವೀಕರಿಸಬಹುದಾದ ಇಂಧನ ಮಿಶ್ರಣದ ವೈವಿಧ್ಯತೆ ಮತ್ತು ಸ್ಥಿತಿಸ್ಥಾಪಕತ್ವ ಬಲಪಡಿಸುತ್ತದೆ. ಅಲ್ಲದೇ, ಹಸಿರು ಶಕ್ತಿ ಪರಿವರ್ತನೆಗೆ ಸಮಗ್ರ ವಿಧಾನವನ್ನು ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭತ್ತ ಖರೀದಿಸಿ ಕೋಟಿ ಕೋಟಿ ವಂಚನೆ, ತಿರುಪತಿಯಲ್ಲೂ ರೈತರಿಗೆ ನಾಮ – ಆರೋಪಿ ಅರೆಸ್ಟ್!

  • 2030 ರ ವೇಳೆಗೆ 32.5 ಲಕ್ಷ ಕೋಟಿ ರೂ. ಮೌಲ್ಯದ ಸಾಲ ನೀಡಲು ಬ್ಯಾಂಕ್‌ಗಳ ಬದ್ಧ

    2030 ರ ವೇಳೆಗೆ 32.5 ಲಕ್ಷ ಕೋಟಿ ರೂ. ಮೌಲ್ಯದ ಸಾಲ ನೀಡಲು ಬ್ಯಾಂಕ್‌ಗಳ ಬದ್ಧ

    -ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರಿ ಹೂಡಿಕೆ ಸುಳಿವು

    ಗಾಂಧಿನಗರ: ನವೀಕರಿಸಬಹುದಾದ ಇಂಧನ (Renewable Energy) ವಲಯದಲ್ಲಿ ಭಾರೀ ಹೂಡಿಕೆ ಸುಳಿವು ಸಿಕ್ಕಿದ್ದು, 2030ರ ವೇಳೆಗೆ 32.5 ಲಕ್ಷ ಕೋಟಿ ರೂ. ಮೌಲ್ಯದ ಸಾಲಗಳನ್ನು ನೀಡಲು ಬ್ಯಾಂಕ್‌ಗಳ ಬದ್ಧವಾಗಿದೆ ಎಂದು ಸಚಿವಾಲಯ ನೀಡಿದ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. 4ನೇ ಜಾಗತಿಕ ಮಟ್ಟದ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಮತ್ತು ಎಕ್ಸ್ ಪೋ ಆಯೋಜಿಸಿದ್ದು ಇಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲಾಗುತ್ತಿದೆ.

    ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಒದಗಿಸಿದ ಡೇಟಾ ಪ್ರಕಾರ ಆರ್‌ಇ ಇನ್ವೆಸ್ಟ್ 2024 ರ ಸಮಾವೇಶದಲ್ಲಿ 6 ಟ್ರಿಲಿಯನ್ ರೂ. ಮೌಲ್ಯದ ಸಾಲ ಒದಗಿಸುವ ಪ್ರಸ್ತಾಪಗಳು ಬಂದಿದೆ. ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಈಆರ್‌ಇಡಿಎ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಲಾ 5 ಲಕ್ಷ ಕೋಟಿ ರೂ. ಮೌಲ್ಯದ ಸಾಲ ನೀಡುವ ವಾಗ್ದಾನ ಮಾಡಿದೆ. ಇದನ್ನೂ ಓದಿ: ದರ್ಶನ್‌ಗೆ ರಾಜಾತಿಥ್ಯ – ಕಲಬುರಗಿ ಜೈಲಿಗೆ ವಿಲ್ಸನ್‌ ಗಾರ್ಡನ್‌ ನಾಗ ಶಿಫ್ಟ್‌

    ಪವರ್ ಫೈನಾನ್ಸ್ ಕಾರ್ಪೊರೇಷನ್ (PFC) ಮತ್ತು ನ್ಯಾಷನಲ್ ಬ್ಯಾಂಕ್ ಫಾರ್ ಫೈನಾನ್ಸಿಂಗ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಡೆವಲಪ್‌ಮೆಂಟ್ (NBFID) ಕ್ರಮವಾಗಿ 3 ಟ್ರಿಲಿಯನ್ ರೂ. ಮತ್ತು 1.86 ಟ್ರಿಲಿಯನ್ ರೂ. ಸಾಲ ನೀಡುವುದಾಗಿ ಭರವಸೆ ನೀಡಿವೆ. ಈ ಬಗ್ಗೆ ಮಾತನಾಡಿರುವ ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ, ಈ ದಶಕದ ಅಂತ್ಯದ ವೇಳೆಗೆ ನವೀಕರಿಸಬಹುದಾದ ಇಂಧನ ಕಂಪನಿಗಳು ಸುಮಾರು 32.5 ಟ್ರಿಲಿಯನ್ ರೂ. ಹೂಡಿಕೆ ಮಾಡಲು ಬದ್ಧವಾಗಿವೆ. ಭಾರತವು ಐದನೇ ದೊಡ್ಡದು ಮಾತ್ರವಲ್ಲದೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಬೆಳವಣಿಗೆಯು ಶಕ್ತಿಯ ಅಭೂತಪೂರ್ವ ಬೇಡಿಕೆಯನ್ನು ಹೆಚ್ಚಿಸುತ್ತಿದೆ. ಈ ಬೇಡಿಕೆಯನ್ನು ಸುಸ್ಥಿರವಾಗಿ ಪೂರೈಸಲು ನಾವು ಬದ್ಧರಾಗಿದ್ದೇವೆ ಎಂದರು. 2030ರ ವೇಳೆಗೆ ಸುಮಾರು 570 ಜಿಡಬ್ಯೂ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದುವ ಗುರಿಯನ್ನು ಸರ್ಕಾರ ಹೊಂದಿದೆ. ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಕೇಸ್‌ – ಡಿಕೆಶಿ, ಸಿಬಿಐಗೆ ಸುಪ್ರೀಂ ನೋಟಿಸ್

    ಈ ನಡುವೆ ನವೀಕರಿಸಬಹುದಾದ ಇಂಧನ ಸಚಿವಾಲಯದ 100 ದಿನಗಳ ಸಾಧನೆ ಬಿಡುಗಡೆ ಮಾಡಿದೆ. 4.5 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದಬೇಕೆಂಬ ಜೂನ್, ಜುಲೈ ತಿಂಗಳ ಗುರಿಗೆ ಪೂರಕವಾಗಿ 6 ಗಿ.ವ್ಯಾ. ಸ್ಥಾಪಿತ ಇಂಧನ ಸಾಮರ್ಥ್ಯ ಹೊಂದಲಾಗಿದೆ. ಕಚ್ಚಾ ಅಲ್ಲದ ಇಂಧನಗಳ ಸ್ಥಾಪಿತ ಸಾಮರ್ಥ್ಯ 207.76 ಗಿ.ವ್ಯಾಟ್ ಗೆ ತಲುಪಿದೆ. ಎರಡು ಸೋಲಾರ್ ಪಾರ್ಕ್ಗಳು ಪೂರ್ಣಗೊಂಡಿವೆ. ಇದನ್ನೂ ಓದಿ: ಯುಪಿಯಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ – ಇಬ್ಬರು ಮಕ್ಕಳು ಸೇರಿ ಐವರು ಸಾವು, ಹಲವರಿಗೆ ಗಾಯ

    ಪಿಎಂ ಕುಸುಮ್ ಯೋಜನೆ ಅಡಿಯಲ್ಲಿ 1 ಲಕ್ಷ ಸೌರ ಪಂಪ್‌ಗಳನ್ನು ಸ್ಥಾಪಿಸಲಾಗಿದೆ. ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿಯಲ್ಲಿ, 3.56 ಲಕ್ಷ ರೂಫ್‌ಟಾಪ್ ಸೋಲಾರ್ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ. ಸಂಚಿತ 13.8 ಗಿಗಾ ವ್ಯಾಟ್ ಸೋಲಾರ್ ಮಾಡ್ಯೂಲ್ ಉತ್ಪಾದನೆ ಪ್ರಾರಂಭವಾಗಿದೆ. ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಎರಡನೇ ಹಂತದ ಎಲೆಕ್ಟ್ರೋಲೈಸರ್ ತಯಾರಿಕೆಗೆ 11 ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ.

    ಕಡಲಾಚೆಯ ಪವನಶಕ್ತಿ ಯೋಜನೆಗೆ ಜೂನ್ 19ರಂದು ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಇಂಡಿಯನ್ ರಿನಿವೇಬಲ್ ಎನರ್ಜಿ ಡೆವಲಪ್ಮೆಂಟ್ ಏಜೆನ್ಸಿಯು ಐಆರ್‌ಇಡಿಎ ಗ್ಲೋಬಲ್ ಗ್ರೀನ್ ಎನರ್ಜಿ ಫೈನಾನ್ಸ್- ಐಎಫ್‌ಎಸ್‌ಸಿ ಲಿಮಿಟೆಡ್ ಎಂಬ ಅಂಗಸಂಸ್ಥೆಯನ್ನು ಆರಂಭಿಸಿದೆ ಎಂದು ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಮಾಗಡಿಯಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ – ಒಂದೇ ಕುಟುಂಬದ ಐವರು ದುರ್ಮರಣ

  • 2030 ರ ವೇಳೆಗೆ 500 GW ಗ್ರೀನ್ ಎನರ್ಜಿ ಉತ್ಪಾದನೆ ಗುರಿ: ಮೋದಿ

    2030 ರ ವೇಳೆಗೆ 500 GW ಗ್ರೀನ್ ಎನರ್ಜಿ ಉತ್ಪಾದನೆ ಗುರಿ: ಮೋದಿ

    – ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆಯಲ್ಲಿ ವಾಗ್ದಾನ

    ಅಹಮಾದಾಬಾದ್‌:  200 ಗಿಗಾವ್ಯಾಟ್‌ ನವೀಕರಿಸಬಹುದಾದ ಇಂಧನ ಉತ್ಪಾದನೆ ಮಾಡುವ ಗುರಿಯನ್ನು ನಾವು ತಲುಪಿದ್ದೇವೆ. 2030 ರ ವೇಳೆಗೆ 500 GW ಗ್ರೀನ್ ಎನರ್ಜಿ ಉತ್ಪಾದನೆ ಗುರಿಯನ್ನು ಹಾಕಿಕೊಂಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ನವೀಕರಿಸಬಹುದಾದ ಇಂಧನ ಇಲಾಖೆಯಿಂದ ಆಯೋಜಿಸಿರುವ 4ನೇ ಜಾಗತಿಕ ಮಟ್ಟದ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಮತ್ತು ಎಕ್ಸ್ ಪೋ‌ಗೆ (4th Global Renewable Energy Investor’s Meet and Expo) ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿದರು.

    ಗುಜರಾತ್‌ನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಎಕ್ಸ್‌ಪೋ ನಡೆಯುತ್ತಿದ್ದು ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prhlad Joshi) ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

    200 ಅಧಿಕ ವಿದೇಶಿ ಪ್ರತಿನಿಧಿಗಳು, ವಿವಿಧ ಕಂಪನಿಗಳು ಹಾಗೂ 10,000 ಸಾರ್ವಜನಿಕರು ಇದರಲ್ಲಿ ಭಾಗಿಯಾಗಿದ್ದರು. ಮೂರು ದಿನಗಳಲ್ಲಿ 40 ಸೆಷನ್ ಗಳು ನಡೆಯುತ್ತಿದ್ದು ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದಲ್ಲಿರುವ ಅವಕಾಶಗಳುತ್ತು ಹೂಡಿಕೆ ಬಗ್ಗೆ ಸುಧೀರ್ಘ ಚರ್ಚೆ ನಡೆಯಲಿದೆ.

    ಕಾರ್ಯಕ್ರಮ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಮುಂದಿನ ಮೂರು ದಿನ ಇಂಧನದ ಭವಿಷ್ಯ ಮತ್ತು ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ, ಈ ವಲಯದ ತಜ್ಞರಿದ್ದಾರೆ ಇದರಿಂದ ನಮಗೆ ಮಾರ್ಗದರ್ಶನ ಸಿಗಲಿದೆ ಒಬ್ಬರಿಂದ ಮತ್ತೊಬ್ಬರು ಈ ಎಕ್ಸ್‌ಪೋದಿಂದ ಹೊಸತನ್ನು ಕಲಿಯಲಿದ್ದೇವೆ ಎಂದರು.

    ಭಾರತದ (India) ಜನರು ಐವತ್ತು ವರ್ಷಗಳ ನಂತರ ಒಂದೇ ಪಕ್ಷಕ್ಕೆ ಮೂರನೇ ಬಾರಿಗೆ ಸತತವಾಗಿ ಅಧಿಕಾರ ನೀಡಿದ್ದಾರೆ. 140 ಜನರಿಗೆ, ಭಾರತದ ಯುವಕರಿಗೆ ಭರವಸೆ ಇದೆ ಅವರ ಭರವಸೆಗಳನ್ನು ನಾವು ಈಡೇರಿಸಬೇಕಿದೆ. ದೇಶದ ಬಡವರು, ದಲಿತರು, ಹಿಂದೂಳಿದ, ವಂಚಿತರಿಗೆ ಆರಾಮದಾಯಕ ಜೀವನದ ಭರವಸೆ ನೀಡಬೇಕು. ವಿಶ್ವದ ಮೂರನೇ ಬಲಿಷ್ಠ ಆರ್ಥಿಕತೆಯ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನು ಮಾಡಬೇಕಿದೆ ಇದರ ಟ್ರೇಲರ್ ನಮ್ಮ ಮೂರನೇ ಅವಧಿಯ ಮೊದಲ ನೂರು ದಿನದಲ್ಲಿ ತೋರುತ್ತದೆ ನಮ್ಮ ಆದ್ಯತೆ ಮತ್ತು ನಮ್ಮ ವೇಗ ಕಾಣ ಸಿಗಲಿದೆ.  ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ವಲಯದಲ್ಲಿ ಕರ್ನಾಟಕಕ್ಕೆ ನಾಲ್ಕು ಪ್ರಶಸ್ತಿ

    ಪ್ರತಿಯೊಂದು ಸೆಕ್ಟರ್ ಅನ್ನು ಗಮನ ಹರಿಸಿ, ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ, 7 ಕೋಟಿ ಮನೆ ನಿರ್ಮಾಣ ಮಾಡುತ್ತಿದ್ದೇವೆ, ಹಿಂದಿನ ಎರಡು ಅವಧಿಯಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕು ಕೋಟಿ ಮನೆ ನಿರ್ಮಾಣ ಮಾಡಿದ್ದೇವೆ. ಕಳೆದ ನೂರು ದಿನಗಳಲ್ಲಿ 15 ವಂದೇ ಭಾರತ್ ಟ್ರೈನ್ ಚಾಲನೆ ನೀಡಲಾಗಿದೆ. 2025 ಒಳಗೆ ಪೆಟ್ರೋಲ್ ಒಳಗೆ 20% ಎಥಿನಾಲ್ ಬ್ಲೆಡಿಂಗ್ ಮಾಡಲಿದ್ದೇವೆ

    ಭಾರತದಲ್ಲಿ ನವೀಕರಿಸಬಹುದಾದ ಇಂಧನಕ್ಕೆ ಬೇಡಿಕೆ ಹೆಚ್ಚುತ್ತಿದೆ, ಅದಕ್ಕಾಗಿ ನಾವು ಹೊಸ ಯೋಜನೆಗಳನ್ನು ಆರಂಭಿಸುತ್ತಿದ್ದೇವೆ, ಹೀಗಾಗಿ ಭಾರತದಲ್ಲಿ ಹೂಡಿಕೆಗೆ ಅವಕಾಶಗಳಿದೆ, ಈ ವಲಯದಲ್ಲಿ ಭಾರತಕ್ಕಿಂತ ಉತ್ತಮ ಸ್ಥಳ ಮತ್ತೊಂದಿಲ್ಲ ಎಂದರು. ಪ್ರಹ್ಲಾದ್ ಜೋಶಿ ಕಳೆದ ಬಾರಿ ಕಲ್ಲಿದ್ದಲು ಸಚಿವರಾಗಿದ್ದರು, ಈಗ ಅವರು ನವೀಕರಿಸಬಹುದಾದ ಇಂಧನ ಸಚಿವರಾಗಿದ್ದಾರೆ ಅವರು ಈಗ ಅಪ್ಡೇಟ್ ಆಗಿದ್ದಾರೆ ಎಂದು ಭಾಷಣದಲ್ಲಿ ಪ್ರಹ್ಲಾದ್ ಜೋಶಿ ಉಲ್ಲೇಖಿಸಿ ಮೋದಿ ಹಾಸ್ಯ ಚಟಾಕಿ ಹಾರಿಸಿದರು‌.


    ಭಾರತದಲ್ಲಿ ಕಲ್ಲಿದ್ದಲು ಗ್ಯಾಸ್ ನಿಕ್ಷೇಪ ಹೆಚ್ಚಿನ ಪ್ರಮಾಣ ಇಲ್ಲ. ಹೀಗಾಗಿ ಸೋಲಾರ್ ಮತ್ತು ನ್ಯೂಕ್ಲಿಯರ್ ಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. 2030 ರ ವೇಳೆ 500 GW ಗ್ರೀನ್ ಎನರ್ಜಿ ಉತ್ಪಾದನೆ ಗುರಿ ಹೊಂದಿದೆ. ಸೂರ್ಯಘರ್ ಯೋಜನೆ ಅಧ್ಯಯನ ಮಾಡಬೇಕು, ಮನೆ ಛಾವಣಿ ಮೇಲೆ ಸೋಲಾರ್ ಅಳವಡಿಸಲು ಸಬ್ಸಿಡಿ ನೀಡುವುದಲ್ಲದೇ ಸರ್ಕಾರ ಸಹಾಯ ಮಾಡುತ್ತಿದೆ, 1.30 ಕೋಟಿ ಜನರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. 3.5 ಲಕ್ಷ ಮನೆಗಳಲ್ಲಿ ಸೋಲಾರ್ ಅಳವಡಿಕೆಯಾಗಿದೆ. ಈಗ ಜನರು ವಿದ್ಯುತ್ ಉತ್ಪಾದಿಸಿ ಮಾರಾಟ ಮಾಡುತ್ತಿದ್ದಾರೆ ಇದರಿಂದ ವಿದ್ಯುತ್ ಉಳಿತಾಯದ ಜೊತೆಗೆ ಹಣ ಮದ ಸಂಪಾದನೆಯಾಗಲಿದೆ ಎಂದರು.

    ಇಲ್ಲಿ ವಿದ್ಯುತ್ ಉತ್ಪಾದನೆ ಜೊತೆಗೆ ಉದ್ಯೋಗ ಸೃಷ್ಟಿಯಾಗಲಿದೆ ಮತ್ತು ಪ್ರಕೃತಿಯ ರಕ್ಷಣೆಯೂಯಾಗಲಿದೆ. ಮೂಡೇರಾ ದೇಶದ ಮೊದಲ ಗ್ರಾಮವಾಗಿದೆ, ಇಲ್ಲ ಎಲ್ಲ ಮನೆಗಳಿಗೆ ಸೋಲಾರ್ ಅಳವಡಿಸಿದೆ ಸೋಲಾರ್ ಮೂಲಕ ಈ ಹಳ್ಳಿ ವಿದ್ಯುತ್ ನಲ್ಲಿ ಸ್ವಾವಲಂಬಿಯಾಗಿದೆ. ಅಯೋಧ್ಯೆಯನ್ನು ಮಾಡೆಲ್‌ ಸೋಲಾರ್ ಸಿಟಿ ಮಾಡುವ ಚಿಂತನೆ ಇದೆ. ಈಗಾಗಲೇ ಈ ಕಾರ್ಯ ಶುರುವಾಗಿದೆ. ಬೀದಿ ದೀಪ, ಬೋರ್ಡ್, ಎಟಿಎಂ ಸೇರಿ ಹಲವು ಕಡೆ ಸೋಲಾರ್ ಬಳಸಲಾಗುತ್ತಿದೆ. ಭಾರತದಲ್ಲಿ 17 ಸೋಲಾರ್ ಸಿಟಿ ನಿರ್ಮಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.

    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ, ನವೀಕರಿಸಬಹುದಾದ ಇಂಧನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ, ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನವೀಕರಿಸಬಹುದಾದ ಇಂಧನ ಶಕ್ತಿ ಹೆಚ್ಚಿದೆ, ಭಾರತದ ಸೋಲಾರ್ ಶಕ್ತಿ 33% ಹೆಚ್ಚಾಗಿದೆ. ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯಲ್ಲಿ ಸಾಕಷ್ಟು ಜನರು ಇಂದು ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ, 32.45 ಲಕ್ಷ ಕೋಟಿ 2030 ರೊಳಗೆ ಹೂಡಿಕೆ ಮಾಡಲು ಹೂಡಿಕೆದಾರರು ಮುಂದೆ ಬಂದಿದ್ದಾರೆ ಎಂದರು.

    ಸಿಎಂ ಭೂಪೇಂದ್ರ ಪಟೇಲ್ ಮಾತಾನಾಡಿ, ಪ್ರಧಾನಿ ನರೇಂದ್ರ ಮೋದಿ ಸಿಎಂಯಾಗಿದ್ದ ವೇಳೆ ಗುಜರಾತ್ ನಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಆರಂಭಿಸಿದರು. ಹವಮಾನ ಬದಲಾವಣೆ ಬಗ್ಗೆ ಚರ್ಚೆ ನಡೆಯುವ ಹೊತ್ತಲ್ಲಿ ಅವರು ಅದಕ್ಕಾಗಿ ಪ್ರತ್ಯೇಕ ಇಲಾಖೆ ತೆರೆದರು‌ ಗುಜರಾತ್ ನಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದರು. ವಿಂಡ್ ಎನರ್ಜಿ ಯಲ್ಲಿ ಗುಜರಾತ್ ಎರಡನೇ ಸ್ಥಾನದಲ್ಲಿದೆ. ಗುಜರಾತ್ ಅನ್ನು ಗ್ರೀನ್ ಎನರ್ಜಿ ಹಬ್ ಮಾಡುವ ಗುರಿ ಹೊಂದಿದೆ, ಅದಕ್ಕಾಗಿ ಸಾಕಷ್ಟು ಸ್ಥಳ ಪರಿಶೀಲನೆ ಮಾಡಿದೆ ಎಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ ಕನಸು ಸಾಕಾರಗೊಳಿಸಲು ಗುಜರಾತ್ ತನ್ನದೇಯಾದ ಯೋಗದಾನ ಮಾಡಲಿದೆ, ನವೀಕರಿಸಬಹುದಾದ ಇಂಧನದ ಶಕ್ತಿ ಪ್ರಯೋಜನ ಸಾಮಾನ್ಯ ಜನರು ಪಡೆಯಬೇಕು ಎಂಬುದು ಮೋದಿ ಅವರು ಚಿಂತನೆ. ಸೂರ್ಯಘರ್ ಯೋಜನೆ ಮೂಲಕ ಅದನ್ನು ಸಾಕಾರಗೊಳಿಸಲಾಗುತ್ತಿದೆ. ಸೋಲಾರ್, ಸೆಮಿಕಂಡಕ್ಟರ್, ನಾಗರಿಕ ವಿಮಾನಯಾನ, ಗ್ರೀನ್ ಎನರ್ಜಿ ಹೀಗೆ ಹಲವು ವಲಯಗಳಲ್ಲಿ ಸಂಬಂಧಿಸಿದಂತೆ ಎಕ್ಸ್‌ಪೊ ನಡೆಸಲಾಗುತ್ತಿದೆ.ವಿಶ್ವದಲ್ಲಿ ಸೋಲಾರ್ ಬಗ್ಗೆ ಚರ್ಚೆ ಇರಲಿಲ್ಲ, ಆದರೆ ಗುಜರಾತ್ ನಲ್ಲಿ ಸೋಲಾರ್ ಅಳವಡಿಕೆ ಆರಂಭವಾಗಿತ್ತು, ಹವಾಮಾನ ಬದಲಾವಣೆಗೆ ಮೊದಲು ಸಚಿವಾಲಯ ಶುರು ಮಾಡಿದ್ದು ಗುಜರಾತ್ ನಲ್ಲಿ ಮಹಾತ್ಮ ಗಾಂಧಿ ಅವರ ಕನಸು ನನಸು ಮಾಡಬೇಕಿದೆ ಗ್ರೀನ್ ಎನರ್ಜಿ ಇಂದಿನ ಭಾರತದ ಅಗತ್ಯವಾಗಿದೆ ಎಂದರು.