Tag: ನವಾಜ್ ಷರೀಫ್

  • ನವಾಜ್ ಷರೀಫ್, ಪುತ್ರಿ ಬಂಧನಕ್ಕೆ ಲಾಹೋರ್ ವಿಮಾನ ನಿಲ್ದಾಣದಲ್ಲಿ ಭಾರೀ ಸಿದ್ಧತೆ!

    ನವಾಜ್ ಷರೀಫ್, ಪುತ್ರಿ ಬಂಧನಕ್ಕೆ ಲಾಹೋರ್ ವಿಮಾನ ನಿಲ್ದಾಣದಲ್ಲಿ ಭಾರೀ ಸಿದ್ಧತೆ!

    ಲಾಹೋರ್: ಪನಾಮಾ ಪೇಪರ್ಸ್ ಹಗರಣದಲ್ಲಿ 7 ವರ್ಷ ಜೈಲು ಶಿಕ್ಷೆಗೊಳಗಾಗಿರುವ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ ಲಂಡನ್‍ನಿಂದ ಪಾಕಿಸ್ತಾನಕ್ಕೆ ಮರಳುತ್ತಿದ್ದಂತೆ ಏರ್ ಫೋರ್ಟ್‍ನಲ್ಲೇ ಬಂಧನಕ್ಕೊಳಗಾಗುವ ಸಾಧ್ಯತೆಯಿದೆ.

    ಲಂಡನ್ ನಿಂದ ಲಾಹೋರ್ ಗೆ ಶುಕ್ರವಾರ ಸಂಜೆ ವೇಳಗೆ ನವಾಜ್ ಷರೀಫ್ ಪುತ್ರಿ ಮಾರಿಯಾಮ್ ಜೊತೆ ಆಗಮಿಸುತ್ತಿದ್ದು, ಈ ವೇಳೆ ಸ್ವಾಗರ ಕೋರಿ ಬೆಂಬಲಿಗರು ಮೆರವಣಿಗೆ ನಡೆಸುವ ಸಾಧ್ಯತೆಯಿರುವುದರಿಂದ ಎಚ್ಚರಿಕೆ ವಹಿಸಿ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿದೆ. ಭದ್ರತೆಗೆ 10 ಸಾವಿರ ಪೊಲೀಸ್ ನಿಯೋಜನೆ ಮಾಡಲಾಗಿದ್ದು, ಬಂಧನದ ಬಳಿಕ ಹೆಲಿಕಾಪ್ಟರ್ ಮೂಲಕ ಇಸ್ಲಾಮಾಬಾದ್ ನ ಅದೀಲಾ ಜೈಲಿಗೆ ಕರೆದ್ಯೊಯುವ ಸಾಧ್ಯತೆ ಇದೆ.

    ಪಾಕಿಸ್ತಾನ ಸುಪ್ರೀಂಕೋರ್ಟ್ ನವಾಜ್ ಷರೀಫ್ ದೋಷಿ ಎಂದು 2017ರ ಜುಲೈ 28 ರಂದು ತೀರ್ಪು ನೀಡಿತ್ತು. ಅಲ್ಲದೇ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ನವಾಜ್ ಷರೀಫ್ ಅರ್ಹರಲ್ಲ ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ಬಳಿಕ ಈ ವೇಳೆ ಶರೀಫ್ ತಮ್ಮ ಹುದ್ದೆ ತೋರೆದು ಅನಾರೋಗ್ಯದ ಕಾರಣ ಕೆಲ ದಿನಗಳ ಹಿಂದೆ ಲಂಡನ್ ಗೆ ತೆರಳಿದ್ದರು.

    2017ರ ಜುಲೈನಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿ ಎಂದು ನವಾಜ್ ಷರೀಫ್ ವಿರುದ್ಧ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ನಂತರ ಕಳೆದ ವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು, ಲಂಡನ್‍ನಲ್ಲಿ ಐಷಾರಾಮಿ ಬಂಗಲೆ ಸೇರಿದಂತೆ ಅಕ್ರಮ ಆಸ್ತಿ ಖರೀದಿಸಿದ್ದ ಆರೋಪದ ಮೇರೆಗೆ ನವಾಜ್ ಷರೀಫ್‍ಗೆ 10 ವರ್ಷ ಜೈಲು ಶಿಕ್ಷೆ ಮತ್ತು ಪನಾಮ ಹಗರಣದಲ್ಲಿ ಪುತ್ರಿ ಮರಿಯಮ್ ನವಾಜ್‍ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

    ಏನಿದು ಪ್ರಕರಣ?
    ಪನಾಮ ಪೇಪರ್ ಹೊರ ಹಾಕಿರುವ ಮಾಹಿತಿ ಆಧಾರವನ್ನು ಇಟ್ಟುಕೊಂಡು ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಸುಪ್ರೀಂಕೋರ್ಟ್ ನಲ್ಲಿ ಷರೀಫ್ ವಿರುದ್ಧ ಕೇಸ್ ದಾಖಲಿಸಿದ್ದರು. ಏಪ್ರಿಲ್ ನಲ್ಲಿ ಸುಪ್ರೀಂ ಕೋರ್ಟ್ ಪ್ರಧಾನಿ ಷರೀಫ್ ಹಾಗೂ ಭ್ರಷ್ಟಾಚಾರದ ಪ್ರಕರಣದ ಕುರಿತು ಜಂಟಿ ತನಿಖಾ ತಂಡ(ಜೆಐಟಿ) ತನಿಖೆ ನಡೆಸುವಂತೆ ಆದೇಶಿಸಿತ್ತು. ಷರೀಫ್ ಲಂಡನ್ ನಲ್ಲಿ 2 ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಜೆಐಟಿ ವರದಿ ನೀಡಿತ್ತು. ಆದರೆ ಷರೀಫ್ ಅವರು ನನ್ನ ಮೇಲಿರುವ ಆರೋಪಗಳು ಎಲ್ಲ ಸುಳ್ಳು, ಯಾವುದೇ ಸಾಕ್ಷ್ಯಧಾರಗಳು ಇಲ್ಲ ಎಂದು ವಾದಿಸಿದ್ದರು.

    ಏನಿದು ಪನಾಮ ಪೇಪರ್ ಕೇಸ್?
    ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ) ಎಂಬ ಅಮೆರಿಕ ಮೂಲದ ಸರ್ಕಾರೇತರ ಸಂಘಟನೆಯೊಂದು `ಪನಾಮ ಪೇಪರ್’ ಹೆಸರಿನಲ್ಲಿ ದಾಖಲೆಗಳನ್ನು 2015ರ ಏಪ್ರಿಲ್ ನಲ್ಲಿ ಬಿಡುಗಡೆ ಮಾಡಿತ್ತು. ಪನಾಮ ಮೂಲದ ಕಾನೂನು ಸೇವಾ ಕಂಪನಿ ಮೊಸ್ಸಾಕ್ ಫೋನ್ಸೆಕಾದಿಂದ ಗುಪ್ತವಾಗಿ ಪಡೆದಿದ್ದ ಮಾಹಿತಿಗಳನ್ನು ಐಸಿಐಜೆ ಬಿಡುಗಡೆ ಮಾಡಿತ್ತು. ವಿಶ್ವದ ಸುಮಾರು 12 ವಿವಿಧ ಈಗಿನ ಮತ್ತು ಮಾಜಿ ನಾಯಕರು, 128 ವಿವಿಧ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು, ಸಿನಿಮಾ ಸೆಲೆಬ್ರಿಟಿಗಳು ವಿವಿಧ ಕಡೆ ಹಣವನ್ನು ಸಂಗ್ರಹಿಸಿದ್ದ ಮಾಹಿತಿ ಈ ವರದಿಯಲ್ಲಿತ್ತು. 1977 ರಿಂದ 2015 ರವರೆಗೆ 40 ವರ್ಷದ ಅವಧಿಯ ಮಾಹಿತಿಗಳು, 2.14 ಲಕ್ಷ ವಿದೇಶಿ ಸಂಸ್ಥೆಗಳ ಮಾಹಿತಿಗಳು ಇದರಲ್ಲಿತ್ತು.

  • ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ 10 ವರ್ಷ ಜೈಲು

    ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ 10 ವರ್ಷ ಜೈಲು

    ಇಸ್ಲಾಮಾಬಾದ್: ಪನಾಮಾ ಪೇಪರ್ಸ್ ಹಗರಣದಲ್ಲಿ ದೋಷಿಯಾಗಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ ಇಸ್ಲಾಮಾಬಾದಿನ ಕೋರ್ಟ್  7 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಷರೀಫ್ ಜೊತೆಗೆ ಮಗಳು ಮಾರಿಯಾಮ್‍ಗೆ 7 ವರ್ಷ, ಅಳಿಯ ಸಫ್ದಾರಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲದೇ ಬೇನಾಮಿ ಆಸ್ತಿಯನ್ನು ಸರ್ಕಾರ ವಶ ಪಡಿಸಿಕೊಳ್ಳುವಂತೆ ಆದೇಶ ನೀಡಿದೆ.

    ಪ್ರಧಾನಿ ನವಾಜ್ ಷರೀಫ್ ದೋಷಿ ಎಂದು ಪಾಕಿಸ್ತಾನ ಸುಪ್ರೀಂಕೋರ್ಟ್ ಪಂಚಸದಸ್ಯ ಪೀಠ 2017ರ ಜುಲೈ 28 ರಂದು ತೀರ್ಪು ನೀಡಿತ್ತು. ಪಾಕ್ ಪ್ರಧಾನಿಯಾಗಿ ಮುಂದುವರಿಯಲು ನವಾಜ್ ಷರೀಫ್ ಅರ್ಹರಲ್ಲ ಎಂದು ಅಲ್ಲ ಎಂದು ಕೋರ್ಟ್ ತೀರ್ಪು ಪ್ರಕಟಿಸಿತ್ತು. ತನ್ನ ವಿರುದ್ಧ ತೀರ್ಪು ಬಂದ ಹಿನ್ನೆಲೆಯಲ್ಲಿ ಷರೀಫ್ ಪ್ರಧಾನಿ ಪಟ್ಟದಿಂದ ಇಳಿದಿದ್ದರು. ಷರೀಫ್ ಅವರು ಸಂಸತ್ತಿನ ಪ್ರಾಮಾಣಿಕ ಸದಸ್ಯರಾಗುವ ಅರ್ಹತೆಯನ್ನು ಹೊಂದಿಲ್ಲ ಎಂದು ಪಂಚ ನ್ಯಾಯಾಧೀಶ ಪೀಠದಲ್ಲಿ ಒಬ್ಬರಾಗಿರುವ ಇಜಾಜ್ ಅಫ್ಜಲ್ ಖಾನ್ ಅವರು ತೀರ್ಪಿನಲ್ಲಿ ಉಲ್ಲೇಖಿಸಿದ್ದರು.

    ಏನಿದು ಪ್ರಕರಣ?
    ಪನಾಮ ಪೇಪರ್ ಹೊರ ಹಾಕಿರುವ ಮಾಹಿತಿ ಆಧಾರವನ್ನು ಇಟ್ಟುಕೊಂಡು ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಸುಪ್ರೀಂಕೋರ್ಟ್ ನಲ್ಲಿ ಷರೀಫ್ ವಿರುದ್ಧ ಕೇಸ್ ದಾಖಲಿಸಿದ್ದರು. ಏಪ್ರಿಲ್ ನಲ್ಲಿ ಸುಪ್ರೀಂ ಕೋರ್ಟ್ ಪ್ರಧಾನಿ ಷರೀಫ್ ಹಾಗೂ ಭ್ರಷ್ಟಾಚಾರದ ಪ್ರಕರಣದ ಕುರಿತು ಜಂಟಿ ತನಿಖಾ ತಂಡ(ಜೆಐಟಿ) ತನಿಖೆ ನಡೆಸುವಂತೆ ಆದೇಶಿಸಿತ್ತು. ಷರೀಫ್ ಲಂಡನ್ ನಲ್ಲಿ 2 ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಜೆಐಟಿ ವರದಿ ನೀಡಿತ್ತು. ಆದರೆ ಷರೀಫ್ ಅವರು ನನ್ನ ಮೇಲಿರುವ ಆರೋಪಗಳು ಎಲ್ಲ ಸುಳ್ಳು, ಯಾವುದೇ ಸಾಕ್ಷ್ಯಧಾರಗಳು ಇಲ್ಲ ಎಂದು ವಾದಿಸಿದ್ದರು.

    ಏನಿದು ಪನಾಮ ಪೇಪರ್ ಕೇಸ್?
    ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ) ಎಂಬ ಅಮೆರಿಕ ಮೂಲದ ಸರ್ಕಾರೇತರ ಸಂಘಟನೆಯೊಂದು `ಪನಾಮ ಪೇಪರ್’ ಹೆಸರಿನಲ್ಲಿ ದಾಖಲೆಗಳನ್ನು 2015ರ ಏಪ್ರಿಲ್ ನಲ್ಲಿ ಬಿಡುಗಡೆ ಮಾಡಿತ್ತು. ಪನಾಮ ಮೂಲದ ಕಾನೂನು ಸೇವಾ ಕಂಪನಿ ಮೊಸ್ಸಾಕ್ ಫೋನ್ಸೆಕಾದಿಂದ ಗುಪ್ತವಾಗಿ ಪಡೆದಿದ್ದ ಮಾಹಿತಿಗಳನ್ನು ಐಸಿಐಜೆ ಬಿಡುಗಡೆ ಮಾಡಿತ್ತು. ವಿಶ್ವದ ಸುಮಾರು 12 ವಿವಿಧ ಈಗಿನ ಮತ್ತು ಮಾಜಿ ನಾಯಕರು, 128 ವಿವಿಧ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು, ಸಿನಿಮಾ ಸೆಲೆಬ್ರಿಟಿಗಳು ವಿವಿಧ ಕಡೆ ಹಣವನ್ನು ಸಂಗ್ರಹಿಸಿದ್ದ ಮಾಹಿತಿ ಈ ವರದಿಯಲ್ಲಿತ್ತು. 1977 ರಿಂದ 2015 ರವರೆಗೆ 40 ವರ್ಷದ ಅವಧಿಯ ಮಾಹಿತಿಗಳು, 2.14 ಲಕ್ಷ ವಿದೇಶಿ ಸಂಸ್ಥೆಗಳ ಮಾಹಿತಿಗಳು ಇದರಲ್ಲಿತ್ತು.

  • ಮುಂಬೈ ದಾಳಿಗೆ ಪಾಕಿಸ್ತಾನದ ಉಗ್ರ ಸಂಘಟನೆಗಳೆ ಕಾರಣ: ನವಾಜ್ ಷರೀಫ್

    ಮುಂಬೈ ದಾಳಿಗೆ ಪಾಕಿಸ್ತಾನದ ಉಗ್ರ ಸಂಘಟನೆಗಳೆ ಕಾರಣ: ನವಾಜ್ ಷರೀಫ್

    ಲಾಹೋರ್: ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರು 2008ರ ಮುಂಬೈ ಉಗ್ರ ದಾಳಿಯಲ್ಲಿ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳ ಪಾತ್ರ ಇದೆ ಎಂದು ಬಹಿರಂಗವಾಗಿ ಹೇಳಿದ್ದಾರೆ.

    ಪಾಕಿಸ್ತಾನದ ಡಾನ್ ಪತ್ರಿಕೆ ಜತೆ ಮಾತನಾಡಿರುವ ಅವರು, ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ. ಅವುಗಳು ಸರ್ಕಾರೇತರ ಶಕ್ತಿಗಳಾಗಿವೆ. ಗಡಿಯನ್ನು ದಾಟಿ ಮುಂಬೈಯಲ್ಲಿ 150ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲು ಅವಕಾಶ ಮಾಡಿಕೊಡಬೇಕೆ ಎಂದು ಪ್ರಶ್ನಿಸಿದ್ದಾರೆ.

    10 ಜನ ಲಷ್ಕರ್-ಇ-ತೊಯ್ಬಾ ಉಗ್ರರು ನವೆಂಬರ್ 26, 2008 ರಿಂದ ನವೆಂಬರ್ 29 ರವರೆಗೆ ಮುಂಬೈಯಲ್ಲಿ ಸಂಘಟಿತ ಶೂಟಿಂಗ್ ಮತ್ತು ಬಾಂಬ್ ದಾಳಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

    2008 ನವೆಂಬರ್ 26 ರಂದು ಆಗಿದ್ದೇನು?
    ನವೆಂಬರ್ 23 ರಂದು 10 ಜನ ಉಗ್ರರು ಕರಾಚಿಯಿಂದ ಅರೇಬಿಯನ್ ಸಮುದ್ರದ ಮೂಲಕ ದೋಣಿಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ಮಾರ್ಗದ ಮಧ್ಯೆ ಭಾರತದ ಮೀನುಗಾರರ ದೋಣಿಯನ್ನು ಅಪಹರಿಸಿ, 4 ಜನರನ್ನು ಕೊಂದು ದೋಣಿಯ ಕ್ಯಾಪ್ಟನ್ ಅನ್ನು ಭಾರತಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಮುಂಬೈಗೆ 7 ಕಿಮೀ ಇರುವಂತೆ ಕ್ಯಾಪ್ಟನ್ ಅನ್ನು ಕೊಂದುಹಾಕಿ ಮುಂಬೈ ತಲಪುತ್ತಿದ್ದಂತೆ ತಂಡಗಳಾಗಿ ಬೇರೆ ಬೇರೆ ಹಾದಿಯಲ್ಲಿ ನಡೆದಿದ್ದಾರೆ.

    ನವೆಂಬರ್ 26 ರಂದು ಮೊಹಮ್ಮದ್ ಅಜ್ಮಲ್ ಕಸಬ್, ಇಸ್ಮಾಯಿಲ್ ಖಾನ್ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮೇಲೆ ದಾಳಿ ಮಾಡಿ 58 ಜನರನ್ನು ಸಾಯಿಸಿದ್ದರು. ನಂತರ ನಾರಿಮನ್ ಹೌಸ್, ತಾಜ್, ಒಬೆರಾಯ್-ಟ್ರೈಡೆಂಟ್ ಹೋಟೆಲ್ ಮೇಲೆ ದಾಳಿ ಮಾಡಿ 100ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದ್ದರು.

    ಈ ಕೃತ್ಯವನ್ನು ಮಾಡಿರುವವರು ಉಗ್ರರೇ ಅವರಿಗೆ ಪಾಕಿಸ್ತಾನ ಬೆಂಬಲಿಸಿ ನೆಲೆಕೊಟ್ಟಿದೆ ಎಂದು ಭಾರತ ಪದೇ ಪದೇ ದಾಖಲೆ ಸಹಿತ ಆರೋಪ ಮಾಡುತ್ತಲೇ ಬಂದಿತ್ತು.

  • ಪನಾಮ ಪ್ರಕರಣದಲ್ಲಿ ಷರೀಫ್ ದೋಷಿ: ಪ್ರಧಾನಿಯಾಗಿ ಮುಂದುವರಿಯಲು ಅನರ್ಹ ಎಂದ ಸುಪ್ರೀಂ

    ಪನಾಮ ಪ್ರಕರಣದಲ್ಲಿ ಷರೀಫ್ ದೋಷಿ: ಪ್ರಧಾನಿಯಾಗಿ ಮುಂದುವರಿಯಲು ಅನರ್ಹ ಎಂದ ಸುಪ್ರೀಂ

    ಇಸ್ಲಾಮಾಬಾದ್: ಪನಾಮಾ ಪೇಪರ್ಸ್ ಹಗರಣದಲ್ಲಿ ಪ್ರಧಾನಿ ನವಾಜ್ ಷರೀಫ್ ದೋಷಿ ಎಂದು ಪಾಕಿಸ್ತಾನ ಸುಪ್ರೀಂಕೋರ್ಟ್ ಪಂಚಸದಸ್ಯ ಪೀಠ ಶುಕ್ರವಾರ ತೀರ್ಪು ನೀಡಿದೆ.

    ಪಾಕ್ ಪ್ರಧಾನಿಯಾಗಿ ಮುಂದುವರಿಯಲು ನವಾಜ್ ಷರೀಫ್ ಅರ್ಹರಲ್ಲ ಎಂದು ಅಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ. ತೀರ್ಪು ಬಂದ ಹಿನ್ನೆಲೆಯಲ್ಲಿ ಷರೀಫ್ ಪ್ರಧಾನಿ ಪಟ್ಟದಿಂದ ಇಳಿಯಬೇಕಿದೆ.

    ಷರೀಫ್ ಅವರು ಸಂಸತ್ತಿನ ಪ್ರಾಮಾಣಿಕ ಸದಸ್ಯರಾಗುವ ಅರ್ಹತೆಯನ್ನು ಹೊಂದಿಲ್ಲ ಎಂದು ಪಂಚ ನ್ಯಾಯಾಧೀಶ ಪೀಠದಲ್ಲಿ ಒಬ್ಬರಾಗಿರುವ ಇಜಾಜ್ ಅಫ್ಜಲ್ ಖಾನ್ ಅವರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

    ಏನಿದು ಪ್ರಕರಣ?
    ಪನಾಮ ಪೇಪರ್ ಹೊರ ಹಾಕಿರುವ ಮಾಹಿತಿ ಆಧಾರವನ್ನು ಇಟ್ಟುಕೊಂಡು ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಸುಪ್ರೀಂಕೋರ್ಟ್ ನಲ್ಲಿ ಷರೀಫ್ ವಿರುದ್ಧ ಕೇಸ್ ದಾಖಲಿಸಿದ್ದರು. ಏಪ್ರಿಲ್ ನಲ್ಲಿ ಸುಪ್ರೀಂ ಕೋರ್ಟ್ ಪ್ರಧಾನಿ ಷರೀಫ್ ಹಾಗೂ ಭ್ರಷ್ಟಾಚಾರದ ಪ್ರಕರಣದ ಕುರಿತು ಜಂಟಿ ತನಿಖಾ ತಂಡ(ಜೆಐಟಿ) ತನಿಖೆ ನಡೆಸುವಂತೆ ಆದೇಶಿಸಿತ್ತು. ಷರೀಫ್ ಲಂಡನ್ ನಲ್ಲಿ 2 ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಜೆಐಟಿ ವರದಿ ನೀಡಿತ್ತು. ಆದರೆ ಷರೀಫ್ ಅವರು ನನ್ನ ಮೇಲಿರುವ ಆರೋಪಗಳು ಎಲ್ಲ ಸುಳ್ಳು, ಯಾವುದೇ ಸಾಕ್ಷ್ಯಧಾರಗಳು ಇಲ್ಲ ಎಂದು ಹೇಳಿದ್ದರು.

    ಏನಿದು ಪನಾಮ ಪೇಪರ್ ಕೇಸ್?
    ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ) ಎಂಬ ಅಮೆರಿಕ ಮೂಲದ ಸರ್ಕಾರೇತರ ಸಂಘಟನೆಯೊಂದು ‘ಪನಾಮ ಪೇಪರ್’ ಹೆಸರಿನಲ್ಲಿ ದಾಖಲೆಗಳನ್ನು 2015ರ ಏಪ್ರಿಲ್ ನಲ್ಲಿ  ಬಿಡುಗಡೆ ಮಾಡಿತ್ತು. ಪನಾಮ ಮೂಲದ ಕಾನೂನು ಸೇವಾ ಕಂಪನಿ ಮೊಸ್ಸಾಕ್ ಫೋನ್ಸೆಕಾದಿಂದ ಗುಪ್ತವಾಗಿ ಪಡೆದಿದ್ದ ಮಾಹಿತಿಗಳನ್ನು ಐಸಿಐಜೆ ಬಿಡುಗಡೆ ಮಾಡಿತ್ತು. ವಿಶ್ವದ ಸುಮಾರು 12 ವಿವಿಧ ಈಗಿನ ಮತ್ತು ಮಾಜಿ ನಾಯಕರು, 128 ವಿವಿಧ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು, ಸಿನಿಮಾ ಸೆಲೆಬ್ರಿಟಿಗಳು ವಿವಿಧ ಕಡೆ ಹಣವನ್ನು ಸಂಗ್ರಹಿಸಿದ್ದ ಮಾಹಿತಿ ಈ ವರದಿಯಲ್ಲಿತ್ತು. 1977 ರಿಂದ 2015 ರವರೆಗೆ 40 ವರ್ಷದ ಅವಧಿಯ ಮಾಹಿತಿಗಳು, 2.14 ಲಕ್ಷ ವಿದೇಶಿ ಸಂಸ್ಥೆಗಳ ಮಾಹಿತಿಗಳು ಇದರಲ್ಲಿತ್ತು.