Tag: ನವಾಜ್ ಷರೀಫ್

  • ಅಮೆರಿಕದಲ್ಲಿ ಅವಮಾನ – ಸಿಂಗ್‌ ಬೆಂಬಲಿಸಿ  ಪಾಕ್‌ ಪ್ರಧಾನಿ ಷರೀಫ್‌ ವಿರುದ್ಧ ಗುಡುಗಿದ್ದ ಮೋದಿ

    ಅಮೆರಿಕದಲ್ಲಿ ಅವಮಾನ – ಸಿಂಗ್‌ ಬೆಂಬಲಿಸಿ ಪಾಕ್‌ ಪ್ರಧಾನಿ ಷರೀಫ್‌ ವಿರುದ್ಧ ಗುಡುಗಿದ್ದ ಮೋದಿ

    ಪ್ರಧಾನಿ ಮನಮೋಹನ್‌ ಸಿಂಗ್‌ (Manmohan Singh) ಅವರನ್ನು ಹೀಯಾಳಿಸಿದ್ದಕ್ಕೆ 2013ರಲ್ಲಿ ಪಾಕಿಸ್ತಾನ (Pakistan) ಪ್ರಧಾನಿ ನವಾಜ್ ಷರೀಫ್ (Nawaz Sharif) ಅವರನ್ನು ನರೇಂದ್ರ ಮೋದಿ (Narendra Modi) ಸಾರ್ವಜನಿಕವಾಗಿಯೇ ಟೀಕಿಸಿದ್ದರು.

    ನ್ಯೂಯಾರ್ಕ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಪತ್ರಕರ್ತರ ಜತೆಗೆ ನಡೆಸಿದ ಸಭೆಯಲ್ಲಿ ಷರೀಫ್ ಅವರು ಪ್ರಧಾನಿ ಸಿಂಗ್ ಅವರನ್ನು `ಹಳ್ಳಿಯ ಮಹಿಳೆ’ (ದೆಹತಿ ಔರತ್) ಎಂದು ಬಣ್ಣಿಸಿದ್ದರು ಎಂದು ವರದಿಯಾಗಿತ್ತು.

    ಮಾಧ್ಯಮಗಳಲ್ಲಿಈ ವರದಿ ಪ್ರಕಟವಾದ ಬಳಿಕ ಬಿಜೆಪಿಯ ವಿಕಾಸ್ ರ್‍ಯಾಲಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋದಿ, ನನ್ನ ದೇಶದ ಪ್ರಧಾನಿಯನ್ನು ಹಳ್ಳಿಯ ಮಹಿಳೆ ಎಂದು ಸಂಬೋಧಿಸಲು ನಿಮಗೆ ಎಷ್ಟು ಧೈರ್ಯ ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: ಪಾಕ್‌ ಪ್ರಧಾನಿ ಜೊತೆ ವಿಶ್ವಕಪ್‌ ವೀಕ್ಷಣೆ – ಇಂಡೋ -ಪಾಕ್‌ ಕ್ರಿಕೆಟ್‌ಗೆ ಮತ್ತೆ ಚಾಲನೆ ನೀಡಿದ್ದ ಸಿಂಗ್‌!

     

    ದೇಶದೊಳಗೆ ನಾನು ಮನಮೋಹನ್‌ ಸಿಂಗ್ ಅವರನ್ನು ವಿರೋಧಿಸಬಹುದು. ಆದರೆ ವಿದೇಶದಲ್ಲಿ ಅವರಿಗೆ ಆಗುವ ಅವಮಾನವನ್ನು ಸಹಿಸುವುದಿಲ್ಲ. 1.2 ಶತಕೋಟಿ ಜನಸಂಖ್ಯೆಯ ಈ ರಾಷ್ಟ್ರವು ತನ್ನ ಪ್ರಧಾನಿಯ ಅವಮಾನವನ್ನು ಎಂದಿಗೂ  ಸಹಿಸುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದರು.

    ವಿದೇಶದಲ್ಲಿ ಭಾರತಕ್ಕೆ ಮಾಡುವ ಯಾವುದೇ ಅವಮಾನವನ್ನು ನಾವು ಸಹಿಸುವುದಿಲ್ಲ. ಇದೊಂದು ಗಂಭೀರ ವಿಷಯ ಎಂದು ಕಿಡಿಕಾರಿದ್ದರು. ಈ ಸಂರ್ಭದಲ್ಲಿ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದರೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿತವಾಗಿದ್ದರು.

     

  • ವಾಜಪೇಯಿ ಜೊತೆ ಸಹಿ ಹಾಕಿದ್ದ ಒಪ್ಪಂದವನ್ನು ನಾವು ಉಲ್ಲಂಘನೆ ಮಾಡಿದ್ದೆವು:  ತಪ್ಪೊಪ್ಪಿಕೊಂಡ ನವಾಜ್‌ ಷರೀಫ್‌

    ವಾಜಪೇಯಿ ಜೊತೆ ಸಹಿ ಹಾಕಿದ್ದ ಒಪ್ಪಂದವನ್ನು ನಾವು ಉಲ್ಲಂಘನೆ ಮಾಡಿದ್ದೆವು: ತಪ್ಪೊಪ್ಪಿಕೊಂಡ ನವಾಜ್‌ ಷರೀಫ್‌

    ಇಸ್ಲಾಮಾಬಾದ್‌: ಪಾಕಿಸ್ತಾನದ (Pakistan) ರಾಜಕಾರಣಿಗಳು ಭಾರತದ ಅಭಿವೃದ್ಧಿಯ ಬಗ್ಗೆ ಮೆಚ್ಚುಗೆ ಮಾತನಾಡುತ್ತಿದ್ದಂತೆ ಈಗ ಮಾಜಿ ಪ್ರಧಾನಿ ನವಾಜ್ ಷರೀಫ್ ಪಾಕಿಸ್ತಾನ ಕಾರ್ಗಿಲ್‌ ಯುದ್ಧ ಮಾಡಿದ್ದು ತಪ್ಪು ಎಂದು ಅಧಿಕೃತವಾಗಿ ಹೇಳಿದ್ದಾರೆ.

    ಭಾರತದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ (Atal Bihari Vajpayee ) ಜೊತೆ 1999 ರಲ್ಲಿ ಸಹಿ ಹಾಕಿದ್ದ ಒಪ್ಪಂದವನ್ನು ನಾವು ಉಲ್ಲಂಘನೆ ಮಾಡಿದ್ದೆವು ಎಂದು ನವಾಜ್ ಷರೀಫ್ (Nawaz Sharif) ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

    ಸುಪ್ರೀಂ ಕೋರ್ಟ್‌ 6 ವರ್ಷ ಅನರ್ಹಗೊಳಿಸಿದ ನಂತರ ಇಂದು ಲಾಹೋರ್‌ನಲ್ಲಿ (Lahore) ಪಾಕಿಸ್ತಾನ ಮುಸ್ಲಿಂ ಲೀಗ್‌-ನವಾಜ್‌ ಪಕ್ಷದ ಅಧ್ಯಕ್ಷರನ್ನಾಗಿ ನವಾಜ್ ಷರೀಫ್ ಅವರನ್ನು ಮರು ಆಯ್ಕೆ ಮಾಡಲಾಯಿತು.

    ಈ ವೇಳೆ ಅವರು ಮಾತನಾಡಿದ ಅವರು, ಮೇ 28, 1998 ರಂದು, ಪಾಕಿಸ್ತಾನವು ಐದು ಪರಮಾಣು ಪರೀಕ್ಷೆಗಳನ್ನು (Nuclear Test) ನಡೆಸಿತು. ಅದರ ನಂತರ ವಾಜಪೇಯಿ ಅವರು ಇಲ್ಲಿಗೆ ಬಂದು ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡರು. ಆದರೆ ನಾವು ಆ ಒಪ್ಪಂದವನ್ನು ಉಲ್ಲಂಘಿಸಿ ಕಾರ್ಗಿಲ್‌ ಯುದ್ಧ (Kargil War) ಮಾಡಿದೆವು. ಇದು ನಾವು ಮಾಡಿದ ತಪ್ಪು ಎಂದು ಹೇಳಿದರು.

    ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಪರಮಾಣು ಪರೀಕ್ಷೆಗಳನ್ನು ನಡೆಸುವುದನ್ನು ತಡೆಯಲು ಪಾಕಿಸ್ತಾನಕ್ಕೆ 5 ಬಿಲಿಯನ್ ಡಾಲರ್‌ ನೀಡುವುದಾಗಿ ಹೇಳಿದ್ದರು. ಆದರೆ ನಾನು ಈ ಪ್ರಸ್ತಾಪವನ್ನು ನಿರಾಕರಿಸಿದೆ. ಒಂದು ವೇಳೆ ನನ್ನ ಸ್ಥಾನದಲ್ಲಿ ಇಮ್ರಾನ್‌ ಖಾನ್‌ ಇದ್ದಿದ್ದರೆ ಕ್ಲಿಂಟನ್‌ ಪ್ರಸ್ತಾಪವನ್ನು ಒಪ್ಪಿಕೊಳ್ಳುತ್ತಿದ್ದರು ಎಂದು ತಿಳಿಸಿದರು.

    1999ರಲ್ಲಿ ಏನಾಗಿತ್ತು?
    ಐತಿಹಾಸಿಕ ಶೃಂಗಸಭೆಯ ನಂತರ ನವಾಜ್ ಷರೀಫ್ ಮತ್ತು ಅಟಲ್‌ ಬಿಹಾರಿ ವಾಜಪೇಯಿ ಅವರು ಫೆಬ್ರವರಿ 21, 1999 ರಂದು ಲಾಹೋರ್ ಘೋಷಣೆಗೆ ಸಹಿ ಹಾಕಿದ್ದರು. ಉಭಯ ದೇಶಗಳ ನಡುವಿನ ಶಾಂತಿ ಮತ್ತು ಸ್ಥಿರತೆಯ ಕಾಪಾಡುವ ದೃಷ್ಟಿಯಿಂದ ಈ ಐತಿಹಾಸಿಕ ಒಪ್ಪಂದ ಭಾರೀ ಮಹತ್ವ ಪಡೆದಿತ್ತು. ಇದನ್ನೂ ಓದಿ: ಚನ್ನಗಿರಿ ಗಲಭೆ ಕೇಸ್‌ – ಬಂಧನ ಭೀತಿಯಿಂದ ಗ್ರಾಮವನ್ನೇ ತೊರೆದ ಜನ

    ಈ ಒಪ್ಪಂದ ನಡೆದ ಬಳಿಕ ಪಾಕಿಸ್ತಾನವು ತನ್ನ ಪಡೆಗಳನ್ನು ಮತ್ತು ಅರೆಸೈನಿಕ ಪಡೆಗಳನ್ನು ಆಪರೇಷನ್ ಬದ್ರ್ ಅಡಿಯಲ್ಲಿ ಎಲ್‍ಒಸಿಯ(ಗಡಿ ನಿಯಂತ್ರಣ ರೇಖೆ) ಭಾರತದ ಕಾರ್ಗಿಲ್‌ಗೆ ರಹಸ್ಯವಾಗಿ ಕಳುಹಿಸಿತ್ತು. ನಂತರ ಪಾಕಿಸ್ತಾನವು ಕಾರ್ಗಿಲ್‍ನ 130 ರಿಂದ 200 ಚದರ ಕಿ.ಮೀ ನಡುವಿನ ಪ್ರದೇಶವನ್ನು ಆಕ್ರಮಿಸಿಕೊಂಡಿತ್ತು. ಈ ವಿಚಾರ ಭಾರತೀಯ ಸೈನಿಕರಿಗೆ ತಿಳಿದ ಬಳಿಕ ಮೇ 3 ರಿಂದ ಯುದ್ಧ ಆರಂಭವಾಯಿತು. ಮೂರು ತಿಂಗಳು ಕಾದಾಟ ನಡೆದು ಜುಲೈ 26ರಂದು ಆಕ್ರಮಿತ ಭಾರತೀಯ ಪ್ರದೇಶಗಳನ್ನು ತೊರೆಯುವಂತೆ ಪಾಕಿಸ್ತಾನಿ ಪಡೆಗಳಿಗೆ ಸೂಚಿಸುವ ಮೂಲಕ ಯುದ್ಧ ಕೊನೆಗೊಂಡಿತು.

    ಅಚ್ಚರಿಯ ವಿಷಯ ಏನೆಂದರೆ ನಾವು ಭಾರತದ ಮೇಲೆ ದಾಳಿ ಮಾಡುತ್ತಿದ್ದೇವೆ ಎಂಬ ವಿಚಾರ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರಿಗೆ ತಿಳಿದಿರಲಿಲ್ಲ. ಕಾರ್ಗಿಲ್‌ ಯುದ್ಧದ ಹಿಂದಿನ ಮಾಸ್ಟರ್‌ ಮೈಂಡ್‌ ಪಾಕಿಸ್ತಾನದ ಆಗಿನ ಆರ್ಮಿ ಜನರಲ್ ಪರ್ವೇಜ್ ಮುಷರಫ್, ಪಾಕಿಸ್ತಾನ್ ಎಕ್ಸ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮಹ್ಮದ್ ಅಹ್ಮದ್, ಮೇಜರ್ ಜನರಲ್ ಜಾವೇದ್ ಹಸನ್, ಪಾಕಿಸ್ತಾನದ ಸೇನೆಯ ಮೇಜರ್ ಜನರಲ್ ಅಶ್ರಫ್ ರಶೀದ್ ಆಗಿದ್ದರು.

    ಕಾರ್ಗಿಲ್ ಬೆಟ್ಟದ ಎತ್ತರದ ಪ್ರದೇಶದಲ್ಲಿ ಪಾಕ್ ಸೈನಿಕರು ಅವಿತಿದ್ದರೆ ಭಾರತದ ಸೈನಿಕರು ಕೆಳಗಡೆ ಇದ್ದರು. ಭಾರತ ಸೈನಿಕರ ಚಲನವಲನಗಳನ್ನು ತಿಳಿದುಕೊಳ್ಳುತ್ತಿದ್ದ ಪಾಕ್ ಸೈನಿಕರು ಸುಲಭವಾಗಿ ಮೇಲಿನಿಂದ ದಾಳಿ ಮಾಡುತ್ತಿದ್ದರು. ಪರಿಸ್ಥಿತಿ ಕಠಿಣವಾಗಿದ್ದರೂ ಕಾರ್ಗಿಲ್‍ನ್ನು ರಕ್ಷಿಸಲು ಭಾರತ ವಿಶೇಷ ಪಡೆಗಳೊಂದಿಗೆ ಸುಮಾರು 30,000 ಸೈನಿಕರನ್ನು ಕಾರ್ಗಿಲ್ ದ್ರಾಸ್ ಪ್ರದೇಶಕ್ಕೆ ಕಳುಹಿಸಿತ್ತು. ಈ ಯುದ್ಧದಲ್ಲಿ 527ಕ್ಕೂ ಹೆಚ್ಚು ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು.

     

  • ಪಾಕಿಸ್ತಾನದಲ್ಲಿ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ನವಾಜ್‌ ಷರೀಫ್‌ ಪುತ್ರಿ ಆಯ್ಕೆ

    ಪಾಕಿಸ್ತಾನದಲ್ಲಿ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ನವಾಜ್‌ ಷರೀಫ್‌ ಪುತ್ರಿ ಆಯ್ಕೆ

    ಲಾಹೋರ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ (Nawaz Sharif) ಅವರ ಪುತ್ರಿಯೂ ಆಗಿರುವ ಪಿಎಂಎಲ್-ಎನ್ ನಾಯಕಿ ಮರ್ಯಮ್‌ ನವಾಜ್‌ (Maryam Nawaz) ಪಾಕಿಸ್ತಾನ ಪಂಜಾಬ್‌ ಪ್ರಾಂತ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

    12 ಕೋಟಿ ಜನ ನೆಲೆಸಿರುವ ಪಂಜಾಬ್‌ ಪ್ರಾಂತ್ಯದಲ್ಲಿ ನಡೆದ ಚುನಾವಣೆಯಲ್ಲಿ ಇಮ್ರಾನ್‌ ಖಾನ್‌ ಅವರ ಪಿಟಿಐ ಬೆಂಬಲಿತ ಪಕ್ಷದ ಬಸುನ್ನಿ ಇತ್ತೆಹಾದ್‌ ಕೌನ್ಸಿಲ್‌ (SIC)ನ ನಾಯಕ ರಾಣಾ ಅಫ್ತಾಬ್‌ ವಿರುದ್ಧ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML-N) ಪಕ್ಷದ ಮರ್ಯಮ್‌ (50) ಜಯಗಳಿಸಿದ್ದಾರೆ.

    ಪಂಜಾಬ್‌ ಅಸೆಂಬ್ಲಿ ಚುನಾವಣೆಗೆ ಹೋಗುವ ಮುನ್ನ ಮರ್ಯಮ್‌ ತನ್ನ ಜತಿ ಉಮ್ರಾದಲ್ಲಿರುವ ತನ್ನ ತಾಯಿಯ ಸಮಾಧಿಗೆ ಭೇಟಿ ನೀಡಿದ್ದರು. ಈ ಸಂದೇಶವನ್ನು ಎಕ್ಸ್‌ ಖಾತೆಯಲ್ಲೂ ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ: ಕ್ರೀಡಾಂಗಣದಲ್ಲಿ ಸಾರ್ವಜನಿಕವಾಗಿ ಇಬ್ಬರ ತಲೆಗೆ 15 ಬಾರಿ ಗುಂಡಿಟ್ಟು ಮರಣದಂಡನೆ

    ಮರ್ಯಮ್‌ ನವಾಜ್‌ ಯಾರು?
    50 ವರ್ಷ ವಯಸ್ಸಿನ ಮರ್ಯಮ್‌ ಪಾಕಿಸ್ತಾನದಲ್ಲಿ 3 ಬಾರಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ಪುತ್ರಿ. 1992ರಲ್ಲಿ, ಅವರು ಸಫರ್ ಅವನ್ ಎಂಬವರೊಂದಿಗೆ ವಿವಾಹವಾದರು, ದಂಪತಿಗೆ ಈಗ ಮೂವರು ಮಕ್ಕಳಿದ್ದಾರೆ. ಸಫರ್ ಆ ಸಮಯದಲ್ಲಿ ಪಾಕಿಸ್ತಾನದ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಬಳಿಕ ನವಾಜ್ ಷರೀಫ್‌ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರದಲ್ಲಿದ್ದಾಗ ಭದ್ರತಾ ಅಧಿಕಾರಿಯಾಗಿದ್ದರು. ಆರಂಭದಿಂದಲೇ ತನ್ನನ್ನು ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಮರ್ಯಮ್‌ 2012ರಲ್ಲಿ ಅವರು ರಾಜಕೀಯಕ್ಕೆ ಪ್ರವೇಶಿಸಿದ್ದರು.

    2013ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಚುನಾವಣಾ ಪ್ರಚಾರದ ಉಸ್ತುವಾರಿ ವಹಿಸಿದ್ದರು. 2024ರ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ, ಅವರು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಮತ್ತು ಪಂಜಾಬ್‌ನ ಪ್ರಾಂತೀಯ ಅಸೆಂಬ್ಲಿಗೆ ಮೊದಲ ಬಾರಿಗೆ ಚುನಾಯಿತರಾಗಿದ್ದಾರೆ. ಇದನ್ನೂ ಓದಿ: ಕಾಶ್ಮೀರ ಸುರಕ್ಷಿತವಾಗಿದೆ, ನಾನು ಸ್ವತಂತ್ರಳಾಗಿದ್ದೇನೆ – ಬ್ರಿಟನ್ ಸಂಸತ್‌ನಲ್ಲಿ ಕಾಶ್ಮೀರದ ಪತ್ರಕರ್ತೆ ಶ್ಲಾಘನೆ

  • ಲಂಡನ್‌ ಪ್ಲಾನ್‌ ವಿಫಲವಾಗಿದೆ- ಫಲಿತಾಂಶ ಘೋಷಣೆಗೂ ಮುನ್ನ ಇಮ್ರಾನ್‌ ವಿಜಯದ ಭಾಷಣ

    ಲಂಡನ್‌ ಪ್ಲಾನ್‌ ವಿಫಲವಾಗಿದೆ- ಫಲಿತಾಂಶ ಘೋಷಣೆಗೂ ಮುನ್ನ ಇಮ್ರಾನ್‌ ವಿಜಯದ ಭಾಷಣ

    ಇಸ್ಲಾಮಾಬಾದ್:‌ ಪಾಕಿಸ್ತಾನದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವಂತೆಯೇ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಇಲ್ಲಿಯವರೆಗೆ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ನಡುವೆ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ವಿಜಯದ ಭಾಷಣವನ್ನು ಮಾಡಿದ್ದಾರೆ.

    AI ಮೂಲಕ  ಅವರ ಧ್ವನಿಯನ್ನು ನೀಡಿ ಭಾಷಣದ ವಿಡಿಯೋವನ್ನು ಸೃಷ್ಟಿಸಿ ಬಿಡುಗಡೆ ಮಾಡಲಾಗಿದೆ.   ಪ್ರತಿಸ್ಪರ್ಧಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML- N) ಮುಖ್ಯಸ್ಥ ನವಾಜ್ ಷರೀಫ್ (Nawaz Sharif) ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಾಕ್‌ ಚುನಾವಣೆ; ಪಿಎಂಎಲ್‌-ಎನ್‌ ಅತಿ ದೊಡ್ಡ ಪಕ್ಷ?- ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾದ ಮಾಜಿ ಪ್ರಧಾನಿ

    ಇಮ್ರಾನ್‌ ಖಾನ್‌ ಹೇಳಿದ್ದೇನು..?: ನನ್ನ ಪ್ರೀತಿಯ ದೇಶವಾಸಿಗಳೇ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಮತ್ತು ನಿಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸುವ ಮೂಲಕ ಸ್ವಾತಂತ್ರ್ಯದ ಮರುಸ್ಥಾಪನೆಗೆ ನೀವು ಅಡಿಪಾಯವನ್ನು ಹಾಕಿದ್ದೀರಿ. ಚುನಾವಣೆಯಲ್ಲಿ ಸುಸೂತ್ರವಾಗಿ ಗೆಲ್ಲಲು ಸಹಾಯ ಮಾಡಿದ್ದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ.

    ನೀವೆಲ್ಲರೂ ಮತ ಚಲಾಯಿಸಲು ಬರುತ್ತೀರಿ ಎಂದು ನಾನು ನಂಬಿದ್ದೇ. ಅದರಂತೆ ನೀವೆಲ್ಲರೂ ನನ್ನ ನಂಬಿಕೆಯನ್ನು ಗೌರವಿಸಿದ್ದೀರಿ. ನೀವೆಲ್ಲರೂ ಅತೀ ಹೆಚ್ಚು ಮತಗಳನ್ನು ನೀಡಿದ್ದೀರಿ. ಇದು ಕೆಲವರಿಗೆ ಆಘಾತವುಂಟು ಮಾಡಿದೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ನಿಮ್ಮ ಸಕ್ರಿಯ ಭಾಗವಹಿಸುವಿಕೆಯಿಂದಾಗಿ ‘ಲಂಡನ್ ಯೋಜನೆ’ ವಿಫಲವಾಗಿದೆ ಎಂದು ಇಮ್ರಾನ್‌ ಖಾನ್‌ ವಾಗ್ದಾಳಿ ನಡೆಸಿದರು.

    ಇದೇ ವೇಳೆ ಚುನಾವಣಾ ಅಕ್ರಮಗಳ ಬಗ್ಗೆ ಮಾತನಾಡುತ್ತಾ, ಚುನಾವಣಾ ದುಷ್ಕೃತ್ಯಗಳನ್ನು ಯಾವುದೇ ಪಾಕಿಸ್ತಾನಿ ಒಪ್ಪಿಕೊಳ್ಳುವುದಿಲ್ಲ. ಹಿಂಸಾತ್ಮಕ ಘಟನೆಗಳ ಬಗ್ಗೆ ಅಂತರಾಷ್ಟ್ರೀಯ ಮಾಧ್ಯಮಗಳು ಸಹ ವ್ಯಾಪಕವಾಗಿ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ನಾವು 170 ಸ್ಥಾನಗಳನ್ನು ಗಳಿಸುವ ಮೂಲಕ ರಾಷ್ಟ್ರೀಯ ಅಸೆಂಬ್ಲಿಯನ್ನು ಗೆಲ್ಲುವ ಹಾದಿಯಲ್ಲಿದ್ದೇವೆ. ನನ್ನ ದೇಶವಾಸಿಗಳೇ, ನೀವೆಲ್ಲರೂ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ದಿನಾಂಕವನ್ನು ನಿಗದಿಪಡಿಸಿದ್ದೀರಿ. 2024ರ ಚುನಾವಣೆಯಲ್ಲಿ ನಾವು ಮೂರನೇ ಎರಡರಷ್ಟು ಬಹುಮತದೊಂದಿಗೆ ಗೆಲ್ಲುತ್ತೇವೆ. ನಿಮ್ಮ ಮತದ ಶಕ್ತಿಯನ್ನು ಎಲ್ಲರೂ ನೋಡಿದ್ದಾರೆ ಎಂದರು.

    ಈ ನಡುವೆ ನವಾಜ್ ಷರೀಫ್ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಹಾಗೂ ಸಹ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಲಾಹೋರ್‌ನಲ್ಲಿ ಸಭೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

  • Pakistan Polls: ಲಾಹೋರ್‌ನಲ್ಲಿ 55 ಸಾವಿರ ಮತಗಳಿಂದ ನವಾಜ್ ಷರೀಫ್‌ಗೆ ಗೆಲುವು

    Pakistan Polls: ಲಾಹೋರ್‌ನಲ್ಲಿ 55 ಸಾವಿರ ಮತಗಳಿಂದ ನವಾಜ್ ಷರೀಫ್‌ಗೆ ಗೆಲುವು

    ಇಸ್ಲಾಮಾಬಾದ್:‌ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ (Nawaz Sharif) ಅವರು ಲಾಹೋರ್ ಕ್ಷೇತ್ರದಲ್ಲಿ ಯಾಸ್ಮಿನ್ ರಶೀದ್ ವಿರುದ್ಧ 55,000 ಮತಗಳಿಂದ ಗೆದ್ದಿದ್ದಾರೆ.

    ಹಿಂಸಾಚಾರದ ನಡುವೆಯೂ ಪಾಕಿಸ್ತಾನದಲ್ಲಿ (Pakistan) ಮತದಾನ ನಡೆದಿದೆ. ಈ ಮೂಲಕ ಪಾಕಿಸ್ತಾನ ಗುರುವಾರ ತನ್ನ ಹೊಸ ಸರ್ಕಾರವನ್ನು ಆಯ್ಕೆ ಮಾಡಲು ಮತ ಚಲಾಯಿಸಿದೆ. ಸದ್ಯ ಮತ ಎಣಿಕೆ ನಡೆಯುತ್ತಿದ್ದು, ಇಲ್ಲಿಯವರೆಗೆ 265 ಸ್ಪರ್ಧಿಗಳ ಪೈಕಿ 13 ಸ್ಥಾನಗಳ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.

    ಸ್ವತಂತ್ರವಾಗಿ ಸ್ಪರ್ಧಿಸಿದ್ದ ಇಮ್ರಾನ್ ಖಾನ್ (Imran Khan) ಬೆಂಬಲಿತ ಅಭ್ಯರ್ಥಿಗಳು ಐದು ಸ್ಥಾನಗಳನ್ನು ಪಡೆದುಕೊಂಡಿದ್ದರೆ, ನಾಲ್ಕು ಸ್ಥಾನಗಳನ್ನು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಕ್ಷವಾದ ಪಾಕಿಸ್ತಾನ್ ಮುಸ್ಲಿಂ ಲೀಗ್ (Pakistan Muslim League) ಗೆದ್ದಿದೆ. ಇದನ್ನೂ ಓದಿ: ಸುಳ್ಳು ಮಾಹಿತಿ ಹರಡಿ ದೊಡ್ಡ ತಪ್ಪು ಮಾಡಿದೆ- ಕ್ಷಮೆಯಾಚಿಸಿದ ಎಬಿಡಿ

    ಹತ್ಯೆಗೀಡಾದ ಪ್ರಧಾನಿ ಬೆನಜೀರ್ ಭುಟ್ಟೊ (Benazir Bhutto) ಅವರ ಪುತ್ರ, ಜರ್ದಾರಿಯ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಬಿಲಾವಲ್ ಭುಟ್ಟೋ ಮೂರು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಇತ್ತ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್  ಪುತ್ರ ತಲ್ಹಾ ಹಫೀಜ್ ಸಯೀದ್ ಲಾಹೋರ್ ಕ್ಷೇತ್ರದಿಂದ ಸೋತಿದ್ದಾರೆ.

    12 ಕೋಟಿಗೂ ಹೆಚ್ಚು ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ದೇಶಾದ್ಯಂತ ನಿನ್ನೆ ರಜೆ ಘೋಷಿಸಲಾಗಿತ್ತು. ಮತದಾನದ ನಂತರ ಮತಗಳ ಎಣಿಕೆ ಪ್ರಾರಂಭವಾಯಿತು.

  • ಭಾರತವು ಚಂದ್ರನನ್ನು ತಲುಪಿದ್ರೆ, ಪಾಕ್ ಪ್ರಪಂಚದ ಮುಂದೆ ಭಿಕ್ಷೆ ಬೇಡುತ್ತಿದೆ: ನವಾಜ್ ಷರೀಫ್

    ಭಾರತವು ಚಂದ್ರನನ್ನು ತಲುಪಿದ್ರೆ, ಪಾಕ್ ಪ್ರಪಂಚದ ಮುಂದೆ ಭಿಕ್ಷೆ ಬೇಡುತ್ತಿದೆ: ನವಾಜ್ ಷರೀಫ್

    ಇಸ್ಲಾಮಾಬಾದ್: ಭಾರತವು ಚಂದ್ರನನ್ನು (Chandrayaan-3) ತಲುಪಿ ವಿಶ್ವದಾದ್ಯಂತ ಹೆಗ್ಗಳಿಕೆಗೆ ಪಾತ್ರವಾದರೆ, ಇತ್ತ ಪಾಕಿಸ್ತಾನವು ಪ್ರಪಂಚದ ಮುಂದೆ ಭಿಕ್ಷೆ ಬೇಡುತ್ತಿದೆ ಎಂದು ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ (Nawaz Sharif) ಬೇಸರ ವ್ಯಕ್ತಪಡಿಸಿದ್ದಾರೆ.

    ವೀಡಿಯೋ ಲಿಂಕ್ ಮೂಲಕ ಲಾಹೋರ್ ನ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಭಾರತವು (India) ಚಂದ್ರನನ್ನು ತಲುಪಿ ಜಿ20 ಶೃಂಗಸಭೆಯನ್ನು (G-20 Summit) ಬಹಳ ಯಶಸ್ವಿಯಾಗಿ ನಡೆಸಿದೆ. ಆದರೆ ಇಂದು ಪಾಕಿಸ್ತಾನದ (Pakistan) ಪ್ರಧಾನಿ ಹಣಕ್ಕಾಗಿ ಪ್ರಪಂಚದ ಶ್ರೀಮಂತ ದೇಶಗಳ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ. ಭಾರತ ಮಾಡಿದ ಸಾಧನೆಯನ್ನು ಪಾಕಿಸ್ತಾನಕ್ಕೆ ಸಾಧಿಸಲು ಏಕೆ ಸಾಧ್ಯವಾಗಲಿಲ್ಲ? ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

    1990 ರಲ್ಲಿ ತಮ್ಮ ಸರ್ಕಾರ ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳನ್ನು ಭಾರತ ಅನುಸರಿಸಿದೆ. ಅಟಲ್ ಬಿಹಾರಿ ವಾಜಪೇಯಿ (Atal Bihari Vijapayee) ಅವರು ಭಾರತದ ಪ್ರಧಾನಿಯಾದಾಗ ಭಾರತದ ವಿದೇಶಿ ವಿನಿಮಯ ಕೇವಲ ಒಂದು ಶತಕೋಟಿ ಡಾಲರ್‍ಗಳಷ್ಟಿತ್ತು. ಆದರೆ ಈಗ ಅದು 600 ಶತಕೋಟಿ ಡಾಲರ್‍ಗೆ ಏರಿದೆ. ಭಾರತ ಇಂದು ಎಲ್ಲಿಗೆ ತಲುಪಿದೆ?, ಪಾಕಿಸ್ತಾನ ಭಿಕ್ಷಾಟನೆಯಿಂದ ಎಲ್ಲಿದೆ ಎಂದು ಪ್ರಶ್ನಿಸಿದರು.

    ಇದೇ ವೇಳೆ ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ, ಮಾಜಿ ಐಎ ಮುಖ್ಯಸ್ಥ ಫೈಜ್ ಹಮೀದ್ ಮತ್ತು ಮಾಜಿ ಮುಖ್ಯ ನ್ಯಾಯಮೂರ್ತಿ ಮಿಯಾನ್ ಸಾಕಿಬ್ ನಿಸಾರ್ ಅವರು ಪಾಕಿಸ್ತಾನದ ಈ ಸ್ಥಿತಿಗೆ ಕಾರಣ ಎಂದು ನವಾಜ್ ಷರೀಫ್ ದೂರಿದ್ದಾರೆ. ಇದನ್ನೂ ಓದಿ: ಉಲ್ಟಾ ಹೊಡೆದ ಕೆನಡಾ- ಭಾರತವನ್ನು ಪ್ರಚೋದಿಸುತ್ತಿಲ್ಲವೆಂದ ಟ್ರುಡೋ

    ಮುಂಬರುವ ಚುನಾವಣೆಗಳಲ್ಲಿ ಪಕ್ಷದ ರಾಜಕೀಯ ಪ್ರಚಾರವನ್ನು ಮುನ್ನಡೆಸಲು ಷರೀಫ್ ಮೊದಲ ಬಾರಿಗೆ ಅಕ್ಟೋಬರ್ 21 ರಂದು ದೇಶಕ್ಕೆ ಹಿಂದಿರುಗುವುದಾಗಿ ಘೋಷಿಸಿದ್ದಾರೆ. ಯುಕೆಯಲ್ಲಿ ನಾಲ್ಕು ವರ್ಷಗಳ ಸ್ವಯಂ-ಘೋಷಿತ ಗಡಿಪಾರು ಕೊನೆಗೊಳ್ಳಲಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷ ಗೆಲ್ಲಲಿದೆ ಎಂದು ಷರೀಫ್ ಘೋಷಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕ್ ಪ್ರಧಾನಿ ಆತ್ಮಹತ್ಯೆ ಮಾಡಿಕೊಳ್ಳುವ ದಿನ ಎದುರು ನೋಡುತ್ತಿರುವೆ: ನವಾಜ್ ಷರೀಫ್

    ಪಾಕ್ ಪ್ರಧಾನಿ ಆತ್ಮಹತ್ಯೆ ಮಾಡಿಕೊಳ್ಳುವ ದಿನ ಎದುರು ನೋಡುತ್ತಿರುವೆ: ನವಾಜ್ ಷರೀಫ್

    ಲಂಡನ್: ಪಾಕ್ ಪ್ರಧಾನ ಮಂತ್ರಿ  ಇಮ್ರಾನ್ ಖಾನ್ ಆತ್ಮಹತ್ಯೆ ಮಾಡಿಕೊಳ್ಳುವ ದಿನ ಎದುರು ನೋಡುತ್ತಿದ್ದೇನೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಕಿಡಿಕಾರಿದ್ದಾರೆ.

    ಲಂಡನ್‍ನಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಷರೀಫ್ ಲಾಹೋರ್‌ನಲ್ಲಿ ನಡೆದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷದ ಸಾಮಾನ್ಯ ಸಭೆಯಲ್ಲಿ ಆನ್‍ಲೈನ್ ಮೂಲಕ ಪಾಲ್ಗೊಂಡು ಮಾತನಾಡಿದರು. ಭಾರತದಲ್ಲಿ ಇಮ್ರಾನ್ ಖಾನ್ ಕೀಲುಗೊಂಬೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ವಡಿವೇಲುಗೆ ಕೊರೊನಾ- ಓಮಿಕ್ರಾನ್ ಸೋಂಕು ಶಂಕೆ

    ದೇಶದಲ್ಲಿ ಇಮ್ರಾನ್ ಖಾನ್ ಹೇಗೆ ಅಧಿಕಾರಕ್ಕೆ ಬಂದಿದ್ದಾರೆ ಎಂಬುದು ಇಡೀ ಜಗತ್ತಿಗೇ ಗೊತ್ತಿದೆ. ಇಮ್ರಾನ್ ಜನರ ಮತಗಳ ಬದಲು ಸೇನಾ ನೆರವಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಬಳಿ ನೆರವಿಗೆ ಹೋಗುವ ಬದಲು ಆತ್ಮಹತ್ಯೆ ಮಾಡಿಕೊಳ್ಳಲು ಇಷ್ಟಪಡುವುದುದಾಗಿ ಇಮ್ರಾನ್ ಖಾನ್ ಹೇಳಿದ್ದಾರೆ. ಆದರೆ ಇಮ್ರಾನ್ ಖಾನ್ ಯಾವಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಎದುರುನೋಡುತ್ತಿರುವೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 1.83 ಕೋಟಿ ಮೌಲ್ಯದ 3.6 ಕೆ.ಜಿ ಚಿನ್ನ ತಿರುಪತಿ ತಿಮ್ಮಪ್ಪನಿಗೆ ಅರ್ಪಣೆ

    ಪಾಕಿಸ್ತಾನದಲ್ಲಿ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ದೋಷಿಯಾಗಿರುವ 71 ವರ್ಷದ ನವಾಜ್ ಷರೀಫ್, ಲಾಹೋರ್ ಹೈಕೋರ್ಟ್ ಅನುಮತಿ ನೀಡಿದ ನಂತರ ವೈದ್ಯಕೀಯ ಚಿಕಿತ್ಸೆಗಾಗಿ ನಾಲ್ಕು ವಾರಗಳ ಕಾಲ ವಿದೇಶಕ್ಕೆ ಪ್ರಯಾಣಿಸಿದ್ದರು. ನವೆಂಬರ್ 2019 ರಿಂದ ಲಂಡನ್‍ನಲ್ಲಿ ವಾಸವಾಗಿದ್ದಾರೆ. 2018ರಲ್ಲಿ ಸೇನೆಯ ನೆರವಿನಿಂದ ಅಧಿಕಾರಕ್ಕೆ ಬಂದ ಇಮ್ರಾನ್ ಸರ್ಕಾರ ಮೊದಲ ಮೂರು ವರ್ಷಗಳಲ್ಲಿ ವಿದೇಶಿ ಸರ್ಕಾರ ಹಾಗೂ ಹಣಕಾಸು ಸಂಸ್ಥೆಗಳಿಂದ 34 ಬಿಲಿಯನ್ ಡಾಲರ್‌ಗೂ ಹೆಚ್ಚು ಸಾಲ ಪಡೆದಿದೆ ಎಂದು ಪಾಕ್ ಆಡಳಿತ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ.

  • ಸಾವು ಬದುಕಿನ ಮಧ್ಯೆ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಹೋರಾಟ

    ಸಾವು ಬದುಕಿನ ಮಧ್ಯೆ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಹೋರಾಟ

    ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.

    69 ವರ್ಷದ ನವಾಜ್ ಷರೀಫ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಅಡ್ನಾನ್ ಖಾನ್ ಸರಣಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ‘ಮಾಜಿ ಪ್ರಧಾನಿ ಗಂಭೀರವಾಗಿ ಅಸ್ವಸ್ಥರಾಗಿದ್ದು, ಆರೋಗ್ಯ ಮತ್ತು ಜೀವನಕ್ಕಾಗಿ ಹೋರಾಡುತ್ತಿದ್ದಾರೆ. ಮೂತ್ರಪಿಂಡದ ಕಾರ್ಯ ಕ್ಷೀಣಿಸುವ ಮೂಲಕ ಥ್ರಂಬೋಸೈಟೋಪೆನಿಯಾ ಮತ್ತು ಎನ್‍ಎಸ್‍ಟಿಇಎಂಐ ಮತ್ತಷ್ಟು ಜಟಿಲವಾಗಿದೆ. ಮಧುಮೇಹ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಸಿಗುತ್ತಿಲ್ಲ’ ಎಂದು ಡಾ.ಅಡ್ನಾನ್ ಖಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿಯೊಂದಿಗೆ ಕೊನೆಯದಾಗಿ ಮಾತನಾಡಿದ ನವಾಜ್ ಶರೀಫ್- ಭಾವನಾತ್ಮಕ ವಿಡಿಯೋ ವೈರಲ್

    ಸ್ಟೀಲ್ ಮಿಲ್ಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಷರೀಫ್ ಅವರಿಗೆ 2018ರ ಡಿಸೆಂಬರ್ ನಲ್ಲಿ ನ್ಯಾಯಾಲಯವು 7 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಚೌಧರಿ ಶುಗರ್ ಮಿಲ್ಸ್ ಪ್ರಕರಣದಲ್ಲಿ ನವಾಜ್ ಷರೀಫ್ ಹಾಗೂ ಅವರ ಕುಟುಂಬದವರನ್ನು ರಾಷ್ಟ್ರೀಯ ತನಿಖಾ ದಳವು ವಿಚಾರಣೆ ಮಾಡುತ್ತಿದೆ. ಆದರೆ ಮೂರು ದಿನಗಳ ಹಿಂದಷ್ಟೇ ಮಾಜಿ ಪ್ರಧಾನಿಯ ಅನಾರೋಗ್ಯ ಕಾರಣದಿಂದ ಜಾಮೀನು ನೀಡಲಾಗಿತ್ತು.

    ನವಾಜ್ ಷರೀಫ್ ರಕ್ತದಲ್ಲಿನ ಬಿಳಿರಕ್ತಕಣಗಳ (ಪ್ಲೇಟ್‍ಲೇಟ್) ಸಂಖ್ಯೆಯು ನಿರಂತರವಾಗಿ ಕುಸಿಯುತ್ತಿದೆ. ಭಾನುವಾರ ಒಂದೇ ದಿನ ಅವರ ಪ್ಲೇಟ್‍ಲೇಟ್ ಸಂಖ್ಯೆಯು 45 ಸಾವಿರದಿಂದ 25 ಸಾವಿರಕ್ಕೆ ಇಳಿದಿತ್ತು. ಹೀಗಾಗಿ ಅವರಿಗೆ ನೀಡಲಾಗುತ್ತಿದ್ದ ಹೃದಯ ಸಂಬಂಧಿ ಚಿಕಿತ್ಸೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

  • ಭಾರತ ಒಂದು ಹೆಜ್ಜೆ ಮುಂದಿಟ್ಟರೆ, ನಾನು ಎರಡು ಹೆಜ್ಜೆ ಮುಂದಿಡುತ್ತೇನೆ: ಇಮ್ರಾನ್ ಖಾನ್

    ಭಾರತ ಒಂದು ಹೆಜ್ಜೆ ಮುಂದಿಟ್ಟರೆ, ನಾನು ಎರಡು ಹೆಜ್ಜೆ ಮುಂದಿಡುತ್ತೇನೆ: ಇಮ್ರಾನ್ ಖಾನ್

    ಕರಾಚಿ: ಭಾರತ ಹಾಗೂ ಪಾಕ್ ದ್ವಿಪಕ್ಷಿಯ ಸುಧಾರಣೆಯಲ್ಲಿ ಭಾರತ ಒಂದು ಹೆಜ್ಜೆ ಮುಂದಿಟ್ಟರೆ, ನಾನು ಎರಡು ಹೆಜ್ಜೆ ಮುಂದಿಡುತ್ತೇನೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಹೇಳಿದ್ದಾರೆ.

    ಪಾಕಿಸ್ತಾನ ನಡೆದ ಚುನಾವಣೆಯಲ್ಲಿ ಬಹು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಬಳಿಕ ಮಾತನಾಡಿದ ಅವರು, ಭಾರತ ಹಾಗೂ ಪಾಕಿಸ್ತಾನ ದ್ವಿಪಕ್ಷಿಯ ಸಂಬಂಧದಲ್ಲಿ ಅವರು ಒಂದು ಹೆಜ್ಜೆ ಮುಂದೆ ಬಂದರೆ ನಾವು ಎರಡು ಹೆಜ್ಜೆ ಮುಂದಿಡುತ್ತೇವೆ. ಎರಡು ದೇಶಗಳ ನಡುವಿನ ಸಂಬಂಧ ಉತ್ತಮಗೊಳ್ಳುವುದು ಮುಖ್ಯ ಎಂದರು.

    ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಕುರಿತು ಉಲ್ಲಂಘನೆ ಪ್ರತಿಕ್ರಿಯೆ ನೀಡಿರುವ ಇಮ್ರಾನ್ ಖಾನ್, ಯಾವುದೇ ಒಂದು ಪ್ರದೇಶದಕ್ಕೆ ಸಶಸ್ತ್ರ ಪಡೆಗಳನ್ನು ಕಳುಹಿಸಿದರೆ ಇಂತಹ ಘಟನೆಗಳು ಬೆಳಕಿಗೆ ಬರುತ್ತದೆ. ಆದರೆ ಸಮಸ್ಯೆ ಪರಿಹಾರ ಆಗುವುದಿಲ್ಲ. ಭಾರತದ ಮಾಧ್ಯಮಗಳು ನನ್ನನ್ನು ಬಾಲಿವುಡ್ ವಿಲನ್ ರೀತಿ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದ್ದಾರೆ.

    ತಮ್ಮ ಮೊದಲ ಭಾಷಣದಲ್ಲೇ ವಿದೇಶಾಂಗ ನೀತಿಯನ್ನು ಪ್ರಸ್ತಾಪಿಸಿದ ಇಮ್ರಾನ್ ಖಾನ್ ಚೀನಾ, ಅಫ್ಘಾನಿಸ್ತಾನ, ಇರಾನ್ ಹಾಗೂ ಸೌದಿ ರಾಷ್ಟ್ರಗಳು ಸೇರಿದಂತೆ ಭಾರತದೊಂದಿಗೆ ಉತ್ತಮ ಸಂಬಂಧ ಬೆಳಸುವ ಕುರಿತು ಹೇಳಿದರು.

    ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆದಿರುವ ಪಿಟಿಐ ಮುಖಂಡರು ಸಂತಸ ವ್ಯಕ್ತಪಡಿಸಿದ್ದು, ಮತ್ತೊಂದೆಡೆ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಪಕ್ಷದ ಮುಖಂಡರು ಚುನಾವಣೆಯಲ್ಲಿ ಅಕ್ರಮ ನಡೆದಿದೆ. ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಆರೋಪಿಸಿದ್ದಾರೆ.

    342 ಸ್ಥಾನಗಳಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ 76 ಸ್ಥಾನಗಳಲ್ಲಿ ಗೆಲುವು ಪಡೆದಿದ್ದು, 43 ರಲ್ಲಿ ಮುನ್ನಡೆ ಸಾಧಿಸಿದೆ. ಇತ್ತ ನವಾಜ್ ಷರೀಫ್ ಅವರ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) 43 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, 20 ರಲ್ಲಿ ಮುನ್ನಡೆ ಸಾಧಿಸಿದೆ. ಉಳಿದಂತೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಟಿ) 18 ಸ್ಥಾನಗಳಲ್ಲಿ ಜಯಗಳಿಸಿದೆ.

    ಪಾಕಿಸ್ತಾನದಲ್ಲಿ ಸರ್ಕಾರ ರಚಿಸಲು ಚುನಾವಣೆಯಲ್ಲಿ ನೇರವಾಗಿ 137 ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಅಗತ್ಯವಾಗಿದೆ. ಅಂದಹಾಗೇ 342 ಸ್ಥಾನಗಳ ಪೈಕಿ 272 ಸ್ಥಾನಗಳನ್ನು ನೇರವಾಗಿ ಆಯ್ಕೆ ಮಾಡಲಾಗುತ್ತದೆ. ಉಳಿದ 60 ಸ್ಥಾನಗಳಲ್ಲಿ ಮಹಿಳೆಯರು ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲಾಗುತ್ತದೆ. ಒಟ್ಟಾರೆ 172 ಸ್ಥಾನಗಳು ಪಡೆದ ಸರ್ಕಾರ ರಚಿಸುವ ಅವಕಾಶ ಪಡೆಯುತ್ತದೆ.

     

     

  • ಪಾಕಿಸ್ತಾನ ಚುನಾವಣೆ ಫಲಿತಾಂಶ – ಯಾವುದೇ ಪಕ್ಷಕ್ಕಿಲ್ಲ ಗೆಲುವಿನ ರನ್ – ಪೊಲಿಟಿಕಲ್ ಸೆಂಚುರಿ ಬಾರಿಸಿದ ಇಮ್ರಾನ್ ಖಾನ್

    ಪಾಕಿಸ್ತಾನ ಚುನಾವಣೆ ಫಲಿತಾಂಶ – ಯಾವುದೇ ಪಕ್ಷಕ್ಕಿಲ್ಲ ಗೆಲುವಿನ ರನ್ – ಪೊಲಿಟಿಕಲ್ ಸೆಂಚುರಿ ಬಾರಿಸಿದ ಇಮ್ರಾನ್ ಖಾನ್

    ಇಸ್ಲಾಮಾಬಾದ್: ಬುಧವಾರ ನಡೆದ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ತೆಹ್ರೀಕ್-ಎ-ಇನ್ಸಾಫ್ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರ್ಕಾರ ರಚಿಸಲು ಅಗತ್ಯವಿರುವ ಸಂಖ್ಯಾಬಲ ಯಾವುದೇ ಪಕ್ಷಕ್ಕೆ ಸಿಕ್ಕಿಲ್ಲ. ಹೀಗಾಗಿ ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ಎಲ್ಲಾ ಸಾಧ್ಯತೆಗಳು ಇವೆ.

    272 ಸ್ಥಾನಗಳ ಪೈಕಿ ಮಾಹಿತಿ ಪ್ರಕಾರ ಪಿಟಿಐ 112 ಸ್ಥಾನ ಗೆದ್ದಿದ್ರೆ, ನವಾಜ್ ಷರೀಫ್ ನೇತೃತ್ವದ ಪಿಎಂಎಲ್-ಎನ್ (Pakistan Muslim League) ಪಾರ್ಟಿ 63 ಸ್ಥಾನ, ಬಿಲಾವಲ್ ಭುಟ್ಟೋ ನೇತೃತ್ವದ ಪಿಪಿಪಿ (Pakistan Peoples Party) 38 ಸ್ಥಾನಗಳನ್ನು ಪಡೆದಿದೆ. ಇತರರು ಬರೋಬ್ಬರಿ 57 ಕಡೆ ಜಯಭೇರಿ ಬಾರಿಸಿದ್ದಾರೆ. ಇವತ್ತು ಮಧ್ಯಾಹ್ನ ಸ್ಪಷ್ಟ ಚಿತ್ರಣ ಸಿಗಲಿದೆ. ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪ್ರಧಾನಿಯಾಗುವ ಸಾಧ್ಯತೆ ಹೆಚ್ಚಿದೆ.

    ಈಗಾಗಲೇ ಪಾಕಿಸ್ತಾನ ರಾಜಕೀಯ ಅಂಗಳದಲ್ಲಿ ಮೈತ್ರಿ ಚರ್ಚೆಗಳು ಆರಂಭಗೊಂಡಿವೆ. ಈ ಚುನಾವಣೆಯಲ್ಲಿ ಬೃಹತ್ ಅಕ್ರಮಗಳು ನಡೆದಿವೆ ಎಂದು ಆಪಾದಿಸಿ ಪಿಎಂಎಲ್-ಎನ್‍ಪಕ್ಷದ ಪ್ರಧಾನಿ ಅಭ್ಯರ್ಥಿ ಶಾಹಬಾಜ್ ಷರೀಫ್ ಚುನಾವಣಾ ಫಲಿತಾಂಶವನ್ನು ತಿರಸ್ಕರಿಸಿದ್ದು ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಭಯಾನಕ ರಾಜಕೀಯ ದೃಶ್ಯ ನೋಡಿಲ್ಲ. ಪಾಕಿಸ್ತಾನದ ಇತಿಹಾಸದಲ್ಲಿ ಇದು ಕೆಟ್ಟ ಚುನಾವಣೆ ಎಂದಿದ್ದಾರೆ. ಇನ್ನು ಪಿಟಿಐ ಬೆಂಬಲಿಗರು ಲಾಹೋರ್, ಇಸ್ಲಾಮಾಬಾದ್, ಮುಲ್ತಾನ್ ಸೇರಿ ಹಲವೆಡೆ ನೃತ್ಯ, ಬಾಣ ಬಿರುಸುಗಳೊಂದಿಗೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

    ಇನ್ನು ಪಾಕಿಸ್ತಾನ ಚುನಾವಣೆಯಲ್ಲಿ ಮುಂಬೈ ದಾಳಿಯ ಸಂಚುಕೋರ, ಕುಖ್ಯಾತ ಭಯೋತ್ಪಾದಕ ಹಫೀಜ್ ಸಯೀದ್ ಬೆಂಬಲಿಸಿದ್ದ ಅಲ್ಲಾಹೋ ಅಕ್ಬರ್ ತೆಹ್ರಿಕ್ ಪಾರ್ಟಿ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಚುನಾವಣೆಯಲ್ಲಿ ಹಫೀಜ್ ಸಯೀದ್ ಬೆಂಬಲದೊಂದಿಗೆ ಎಎಟಿ ಪಕ್ಷದ ವತಿಯಿಂದ 200ಕ್ಕೂ ಅಧಿಕ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ ಯಾವುದೇ ಅಭ್ಯರ್ಥಿ ಕನಿಷ್ಠ ಠೇವಣಿಯನ್ನು ಪಡೆಯದೇ ಹೀನಾಯವಾಗಿ ಸೋತಿರುವುದು ಹಫೀಜ್‍ಗೆ ತೀವ್ರ ಮುಖಭಂಗವಾಗಿದೆ.