Tag: ನವಾಜ್

  • ನವಾಜ್‌ ರೀತಿ ಸಖತ್ತಾಗಿ ನಟಿಸಿದ ಪ್ರಥಮ್..!‌

    ನವಾಜ್‌ ರೀತಿ ಸಖತ್ತಾಗಿ ನಟಿಸಿದ ಪ್ರಥಮ್..!‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಗ್‍ಬಾಸ್ ಮನೆಯಿಂದ ನವಾಜ್ ಔಟ್- ಇಷ್ಟವಾಗಲಿಲ್ಲ ಹುಡುಗನ ನಡೆ

    ಬಿಗ್‍ಬಾಸ್ ಮನೆಯಿಂದ ನವಾಜ್ ಔಟ್- ಇಷ್ಟವಾಗಲಿಲ್ಲ ಹುಡುಗನ ನಡೆ

    ಪಂಚಿಂಗ್ ಡೈಲಾಗ್ ಹೇಳುತ್ತಾ ಬಿಗ್ ಬಾಸ್ (Bigg Boss) ಮನೆಯೊಳಗೆ ಕಾಲಿಟ್ಟಿದ್ದ ನವಾಜ್, ಎರಡನೇ ವಾರಕ್ಕೆ ಮನೆಯಿಂದ ಆಚೆ ಬರುವಂತಾಗಿದೆ. ನವಾಜ್ (Nawaz) ಚೆನ್ನಾಗಿ ಆಡುತ್ತಾನೆ ಎನ್ನುವ ನಂಬಿಕೆಯನ್ನು ಹುಸಿಗೊಳಿಸಿದ ಕಾರಣಕ್ಕಾಗಿ ಆ ಹುಡುಗನನ್ನು ಎಲಿಮಿನೇಟ್ ಮಾಡಲಾಗಿದೆ. ಅರುಣ್ ಸಾಗರ್ (Arun Sagar) ಜೊತೆ ಸದಾ ಅಂಟಿಕೊಂಡೇ ಇರುತ್ತಿದ್ದ ಈ ಹುಡುಗ, ಅರುಣ್ ಸಾಗರ್ ಅವರನ್ನು ಒಂಟಿಯಾಗಿ ಬಿಟ್ಟು ಬಂದಿದ್ದಾರೆ.

    ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಎರಡ್ಮೂರು ದಿನ ನವಾಜ್ ಸೈಲೆಂಟ್ ಆಗಿ ಉಳಿದುಕೊಂಡರು. ಆನಂತರ ಎಲ್ಲರೊಂದಿಗೆ ಬೆರೆತರು. ಅದರಲ್ಲೂ ಕಳೆದ ವಾರ ದೊಡ್ಮನೆಯಿಂದ ಹೊರಬಂದ ಐಶ್ವರ್ಯ ಪಿಸ್ಸೆ ಜೊತೆ ತುಸು ಸಲುಗಿಂದ ಇದ್ದ ಈ ಹುಡುಗ, ಆಕೆಗೆ ಪ್ರಪೋಸ್ ಕೂಡ ಮಾಡಿದರು. ಏನೇ ಮಾಡಿದರೂ ಟಾಸ್ಕ್ ನಲ್ಲಿ ಹಿಂದುಳಿಯುತ್ತಲೇ ಹೋದರು. ಹಾಗಾಗಿ ಎರಡನೇ ವಾರಕ್ಕೆ ಮನೆಯಿಂದ ಆಚೆ ಬರುವಂತಾಗಿದೆ. ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಲ್ಲಿ ಅಮೂಲ್ಯ ತುಟಿ ನೋಡಿ ಜ್ಯೋತಿಷ್ಯ ಹೇಳಿದ ಗುರೂಜಿ

    ಮೊದ, ಮೊದಲು ಮೌನಿ ಅನಿಸಿದ್ದ ನವಾಜ್, ಒಂದು ವಾರ ಕಳೆಯುತ್ತಿದ್ದಂತೆ ಚಿಗುರಿಕೊಂಡರು. ಮನೆಯಲ್ಲಿ ಇದ್ದ ಕೆಲವರನ್ನು ಹೊಡೆಯಬೇಕು ಅನಿಸ್ತಿದೆ ಅಂತ ಭಯದ ವಾತಾವರಣ ಸೃಷ್ಟಿ ಮಾಡಿದರು. ಆಗಾಗ್ಗೆ ಕಾಲು ಕೆರೆದುಕೊಂಡು ಜಗಳಕ್ಕೂ ನಿಲ್ಲುತ್ತಿದ್ದರು. ಅರುಣ್ ಸಾಗರ್ ಹೊರತಾಗಿ ಉಳಿದವರ ಜೊತೆ ಅಷ್ಟಾಗಿ ಬೆರೆಯದೇ ಇರುವ ಕಾರಣವೇ, ಅವರು ಮನೆಯಿಂದ ಆಚೆ ಬರುವಂತಾಗಿದೆ.

    ಈ ವಾರ ನವಾಜ್ ಗೆ ಯಾರೋ ಹೊಸ ಹೊಸ ಬಟ್ಟೆಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಿ ಕೊಟ್ಟಿದ್ದರು. ಅದನ್ನು ನೋಡಿ ಭಾವುಕರಾಗಿದ್ದ ಈ ಹುಡುಗ, ಜೀವನದಲ್ಲಿ ಎರಡೇ ಎರಡು ಬಟ್ಟೆಗಳನ್ನು ಕಂಡಿದೆ. ಯಾರೋ ಇಷ್ಟೊಂದು ಹೊಸ ಬಟ್ಟೆಗಳನ್ನು ಕಳುಹಿಸಿದ್ದಾರೆ ಎಂದು ಕಣ್ಣೀರಿಟ್ಟಿದ್ದರು. ಈ ಕಣ್ಣೀರು ಕೂಡ ಅವರನ್ನು ಕೈ ಹಿಡಿಯಲಿಲ್ಲ. ಈ ಕಾರಣಕ್ಕಾಗಿ ಮನೆಯಾಚೆ ಅವರು ಟ್ರೋಲ್ (Troll) ಆದರು. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಐಶ್ವರ್ಯ ಪಿಸ್ಸೆ ಔಟ್’

    ವಾರಕ್ಕೊಂದು ಹೊಸ ಬಟ್ಟೆ ಹಾಕಿಕೊಂಡು ಥಿಯೇಟರ್ ಗೆ ಬರುವ ನವಾಜ್ ಬಟ್ಟೆ ವಿಷಯದಲ್ಲಿ ಸುಳ್ಳು ಹೇಳಿಬಿಟ್ಟರು ಅಂತ ಕಾಮೆಂಟ್ ಮಾಡಲಾಯಿತು. ಈ ಸುಳ್ಳು ಕೂಡ ಅವರಿಗೆ ಮುಳುವಾಗಿರಬಹುದು.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್‌ಗೆ ಬರುವ ಮುಂಚೆ ಎರಡೇ ಬಟ್ಟೆ ಇತ್ತು, ಕಷ್ಟದ ದಿನಗಳ ಬಗ್ಗೆ ಮಾತನಾಡಿದ ನವಾಜ್

    ಬಿಗ್ ಬಾಸ್‌ಗೆ ಬರುವ ಮುಂಚೆ ಎರಡೇ ಬಟ್ಟೆ ಇತ್ತು, ಕಷ್ಟದ ದಿನಗಳ ಬಗ್ಗೆ ಮಾತನಾಡಿದ ನವಾಜ್

    ಬಿಗ್ ಬಾಸ್ ಮನೆ(Bigg Boss House) ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿದೆ. ಸೈಕ್ ನವಾಜ್(Nawaz) ಸಾಕಷ್ಟು ವಿಷ್ಯವಾಗಿ ದೊಡ್ಮನೆಯ ಹೈಲೆಟ್ ಆಗಿದ್ದಾರೆ. ಹಬ್ಬದ ಸಂಭ್ರಮದ ಮಧ್ಯೆ ಸ್ಪರ್ಧಿಗಳಿಗೆ ಬಟ್ಟೆಗಳನ್ನ ಬಿಗ್ ಬಾಸ್ ಕಳುಹಿಸಿದ್ದಾರೆ. ವೆರೈಟಿ ಬಟ್ಟೆಗಳನ್ನ ನೋಡಿ, ತಮ್ಮ ಕಷ್ಟದ ಜೀವನದ ಬಗ್ಗೆ ನವಾಜ್ ಭಾವುಕರಾಗಿದ್ದಾರೆ.

    ಬಡ ಕುಟುಂಬದಿಂದ ಬಂದಿರುವ ನವಾಜ್, ತಮ್ಮದೇ ಭಿನ್ನ ಶೈಲಿಯಲ್ಲಿ ಸಿನಿಮಾ ವಿಮರ್ಶೆ  ಮಾಡುತ್ತ ಬಂದವರು. ಅವರಿಗೆ ಬಿಗ್ ಬಾಸ್(Bigg Boss) ಬಹುದೊಡ್ಡ ಅವಕಾಶವಾಗಿದೆ. ಮೊದಲ ವಾರ ಅವರು ಸಾಕಷ್ಟು ಸಿಟ್ಟು ಮಾಡುತ್ತಿದ್ದರು. ಆದರೆ, ಈಗ ಬದಲಾಗಿದ್ದಾರೆ. ಶಾಂತಿಯುತವಾಗಿ ವರ್ತಿಸುತ್ತಿದ್ದಾರೆ. ಅವರನ್ನು ಟ್ರಿಗರ್ ಮಾಡುವ ಯಾವುದೇ ವಿಚಾರವೂ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿಲ್ಲ. ಇನ್ನೂ ಅರುಣ್ ಸಾಗರ್ ಜತೆಯಾದ ಮೇಲೆ ನವಾಜ್ ಕೊಂಚ ಬದಲಾಗಿದ್ದಾರೆ. ಹೊಡಿ, ಬಡಿ, ಕಡಿ ಎಂದು ಹೇಳುವ ಬಾಯಲ್ಲಿ ಇದೀಗ ಕೂಲ್ ಆಗಿದ್ದಾರೆ. ಈ ಮಧ್ಯೆ ತಮ್ಮ ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.

    ನವರಾತ್ರಿ ಹಬ್ಬದ ಪ್ರಯುಕ್ತ ಎಲ್ಲರಿಗೂ ಮನೆಯಿಂದ ಬಟ್ಟೆ ಕಳುಹಿಸಲಾಗಿತ್ತು. ಅದೇ ರೀತಿ ನವಾಜ್​ಗೂ ವಿವಿಧ ರೀತಿಯ ಬಟ್ಟೆಗಳು ಬಂದವು. ಅದರಲ್ಲಿ ಯಾವುದನ್ನು ಹಾಕಿಕೊಳ್ಳಬೇಕು ಎಂಬುದೇ ಅವರಿಗೆ ಗೊಂದಲ ಆಯಿತು. ಈ ಕ್ಷಣವನ್ನು ನೋಡಿ ಅವರು ಸಖತ್ ಖುಷಿಪಟ್ಟರು. ಕಷ್ಟದ ದಿನಗಳನ್ನು ಅವರು ನೆನಪಿಸಿಕೊಂಡರು.

    ಹೊರಗಡೆ ಇದ್ದಾಗ ನನ್ನ ಬಳಿ ಎರಡು ಬಟ್ಟೆ ಮಾತ್ರ ಇತ್ತು. ಎರಡು ಜೀನ್ಸ್, ಎರಡು ಶರ್ಟ್‌ ಇತ್ತು. ಅದನ್ನೇ ಎಲ್ಲ ಕಡೆಗಳಲ್ಲೂ ಹಾಕಿಕೊಂಡು ಹೋಗ್ತಿದ್ದೆ. ಎಲ್ರೂ ಯಾಕೆ ಬೇರೆ ಬಟ್ಟೆ ಹಾಕಿಕೊಂಡು ಬರಲ್ಲ ಎಂದು ಕೇಳುತ್ತಿದ್ದರು. ಇದು ನನ್ನ ಇಷ್ಟದ ಡ್ರೆಸ್ ಅದಕ್ಕೆ ಹಾಕಿಕೊಂಡು ಬರ್ತೀನಿ ಅಂತಿದ್ದೆ. ಆದರೆ, ನನ್ನತ್ರ ಬಟ್ಟೆಯೇ ಇರಲಿಲ್ಲ. ಈಗ ಇಷ್ಟು ಬಟ್ಟೆ ಕಳುಹಿಸಿದ್ದಾರೆ. ಬಹುಶಃ ಇದನ್ನು ಕಳುಹಿಸಿದ್ದು ನನ್ನ ಫ್ರೆಂಡ್ಸ್ ಅನಿಸುತ್ತದೆ. ಈಗ ಯಾವ ಬಟ್ಟೆಯನ್ನು ಹಾಕಿಕೊಳ್ಳಬೇಕು ಎಂಬುದೇ ಕನ್ಫ್ಯೂಸ್ ಆಗ್ತಿದೆ ಎಂದು ನವಾಜ್ ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ಅಮ್ಜಾದ್ ಖಾನ್ ಧರ್ಮಕ್ಕೆ ಮತಾಂತರ ಆಗಿ ಮದುವೆ ಆಗಿರುವೆ: ನಟಿ ದಿವ್ಯಾ ಶ್ರೀಧರ್

    ಇನ್ನೂ ನವಾಜ್ ಈ ವಾರ ನಾಮಿನೇಷನ್ ಸಾಲಿನಲ್ಲಿದ್ದಾರೆ. ತಮ್ಮನ್ನ ಟಾಸ್ಕ್ ಪ್ರೂವ್ ಮಾಡಿಕೊಳ್ಳಲು ಯಾವುದೇ ಚಾನ್ಸ್ ಸಿಗದೇ ಬೇಸರ ಮಾಡಿಕೊಂಡಿದ್ದರು. ಇದೀಗ ಎರಡನೇ ವಾರ ನವಾಜ್ ಸೇಫ್ ಆಗುತ್ತಾರಾ. ಮನೆಯಿಂದ ಹೊರನಡೆಯುವ ಸ್ಪರ್ಧಿ ಯಾರು ಎಂಬುದನ್ನು ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಗೊಬ್ಬರಗಾಲ ಮೈ ಮೇಲೆ ದೆವ್ವ: ಹೆದರಿ ಓಡಿದ ನವಾಜ್, ರೂಪೇಶ್ ರಾಜಣ್ಣ

    ಗೊಬ್ಬರಗಾಲ ಮೈ ಮೇಲೆ ದೆವ್ವ: ಹೆದರಿ ಓಡಿದ ನವಾಜ್, ರೂಪೇಶ್ ರಾಜಣ್ಣ

    ಬಿಗ್ ಬಾಸ್ ಮನೆ(Bigg Boss House) ಇದೀಗ ರಣರಂಗವಾಗಿದೆ. ಎರಡನೇ ವಾರಕ್ಕೆ ಕಾಲಿಟ್ಟಿರುವ ದೊಡ್ಮನೆ ಆಟ ರೋಚಕ ತಿರುವುಗಳನ್ನ ಪಡೆಯುತ್ತಿದೆ. ಇನ್ನೂ ಗೊಬ್ಬರಗಾಲ(Vinod Gobbaragala) ಮಧ್ಯರಾತ್ರಿ 12 ಗಂಟೆಗೆ ವಿಚಿತ್ರ ಧ್ವನಿಯಲ್ಲಿ ಮಾತನಾಡಿದ್ದಾರೆ. ಗೊಬ್ಬರಗಾಲ ನಡೆ ನುಡಿ ನೋಡಿ ನವಾಜ್ (Nawaz) ಫುಲ್ ಕಂಗಲಾಗಿದ್ದಾರೆ. ಅಷ್ಟಕ್ಕೂ ಗೊಬ್ಬರಗಾಲಗೆ ಎನಾಯ್ತು ಎಂದು‌ ಮನೆ ಮಂದಿ ಕೂಡ ಅಚ್ಚರಿಪಟ್ಟಿದ್ದಾರೆ.

    ದೊಡ್ಮನೆಯಲ್ಲಿ ರಾಕೇಶ್(Rakesh Adiga) ಫ್ರ‍್ಯಾಂಕ್ ಮಾಡಿದ್ದ ಬೆನ್ನಲ್ಲೇ ಮತ್ತೆ ಹೊಸ ಪ್ಲ್ಯಾನ್ ಯೋಚಿಸಿದ್ದಾರೆ. ವಿಚಿತ್ರ ಧ್ವನಿಯಲ್ಲಿ ಮಾತನಾಡು ಎಂದು ರಾಕೇಶ್ ಅಡಿಗ ಅವರು ಗೊಬ್ಬರಗಾಲಗೆ ಸಲಹೆ ನೀಡಿದ್ದಾರೆ. ರೂಪೇಶ್ ರಾಜಣ್ಣ ಮುಂದೆ ರಾಕೇಶ್ ಅವರು, ಬಿಗ್ ಬಾಸ್ ವಿನೋದ್ ಅವರು ವಿಚಿತ್ರವಾಗಿ ಆಡ್ತಿದ್ದಾನೆ. ದಯವಿಟ್ಟು ಏನಾದರೂ ಮಾಡಿ, ಸೀರಿಯಸ್ ಸಮಸ್ಯೆ ತರ ಅನಿಸ್ತಿದೆ. ಏನಾಯ್ತು ಗೊಬ್ಬರ ಎಂದಿದ್ದಾರೆ. ಇದನ್ನೂ ಓದಿ:ರೂಪೇಶ್‌ಗೆ ಕೊನೆಯುಸಿರು ಇರುವವರೆಗೂ ಪ್ರೀತಿ ಮಾಡುತ್ತೀನಿ ಎಂದ ಸಾನ್ಯ

    ರೂಪೇಶ್ ರಾಜಣ್ಣ(Rooopesh Rajanna) ಅವರ ಹಿಂದೆಯೇ ವಿನೋದ್ ಓಡಾಡಿದ್ದಾರೆ. ರೂಪೇಶ್ ಅವರು ಹೆದರಿ ಓಡಿದ್ದಾರೆ. ಆಮೇಲೆ ಮತ್ತೆ ವಿನೋದ್ ಬಳಿ ಬಂದ ರೂಪೇಶ್, ಏನಾಯ್ತು? ಸ್ಕಿಟ್ ಮಾಡ್ತಿದ್ದೀರಾ ಅಂತ ಭಯದಿಂದ ಪ್ರಶ್ನೆ ಮಾಡಿದ್ದಾರೆ. ಆಗ ಪ್ರಶಾಂತ್ (Prashanth Sambargi) ಕೂಡ ಎದ್ದು ಬಂದು, ಮಾತನಾಡದೆ ಬಾತ್‌ರೂಮ್‌ಗೆ ಹೋಗಿದ್ದಾರೆ. ಆಗ ರೂಪೇಶ್‌ಗೆ ಇದು ಫ್ರಾಂಕ್ ಅಂತ ಗೊತ್ತಾಗಿದೆ. ನಿಮಗೆ ಏನು ಬಂದೈತೋ ಕೇಡುಕಾಲ ಎಂದು ರೂಪೇಶ್ ಅವರು ಬಕ್ರಾ ಆದೆ ಎಂದು ಹೇಳಿಕೊಂಡು ನಕ್ಕಿದ್ದಾರೆ. ಆಗ ಗೊಬ್ಬರಗಾಲ, ಇದು ಸೆಂಟ್‌ ಫ್ರಾಂಕ್, ಬೇರೆಯವರನ್ನು ಹೆದರಿಸಲು ಸಹಾಯ ಮಾಡಿ ಎಂದಿದ್ದಾರೆ.

    ಮರುದಿನ ರೂಪೇಶ್ ಅವರು ಎಲ್ಲರ ಮುಂದೆ ಹೇಳಿಕೊಂಡು ನಕ್ಕಿದ್ದಾರೆ. ವಿನೋದ್ ಮೇಲೆ ದೆವ್ವ ಬಂದಿದೆ ಅಂತ ಹೇಳಿಲ್ಲ, ಆದರೆ ವಿಚಿತ್ರವಾಗಿ ಆಡ್ತಿದ್ದಾನೆ ಅಂತ ಹೇಳಿದ್ವಿ ಎಂದು ರಾಕೇಶ್ ಅವರು ವಿವರಿಸಿದ್ದಾರೆ. ನಾನು ಹೆದರಿಸಿದಾಗ ನವಾಜ್ ಅವರು ಓಡಿಹೋದರು, ಆಮೇಲೆ ರೂಪೇಶ್ ಹೆದರಿದರು ಎಂದು ಹೇಳಿಕೊಂಡು ವಿನೋದ್(Vinod)  ನಕ್ಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಐಶ್ವರ್ಯ ಪಿಸ್ಸೆ ನಂತರ ದೀಪಿಕಾ ದಾಸ್ ಅಂದ್ರೆ ನನಗಿಷ್ಟ ಎಂದ ಸೈಕ್ ನವಾಜ್

    ಐಶ್ವರ್ಯ ಪಿಸ್ಸೆ ನಂತರ ದೀಪಿಕಾ ದಾಸ್ ಅಂದ್ರೆ ನನಗಿಷ್ಟ ಎಂದ ಸೈಕ್ ನವಾಜ್

    ಟಿವಿ ಬಿಗ್ ಬಾಸ್‌ನಲ್ಲಿ(Bigg Boss Kannada) ಈ ಬಾರಿ ಸಾಕಷ್ಟು ಪ್ರೇಮ ಕಥೆಗಳು ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ರೇಸರ್ ಐಶ್ವರ್ಯಗೆ ಪ್ರೀತ್ಸೆ ಎಂದು ಪ್ರಪೋಸ್ ಮಾಡಿದ್ದ ಸೈಕ್ ನವಾಜ್ ಈಗ ದೀಪಿಕಾ ದಾಸ್ ಅಂದ್ರೆ ನನಗಿಷ್ಟ ಎಂದು ಹೇಳಿ ಮನೆಯವರೆಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

    ದೊಡ್ಮನೆಯಲ್ಲಿ ಮನೆ ಮಂದಿ ಎಲ್ಲರೂ ಟ್ರೂತ್ ಆ್ಯಂಡ್ ಡೇರ್ ಆಡುತ್ತಿದ್ದರು. ಈ ವೇಳೆ ದೀಪಿಕಾ ದಾಸ್(Deepika Das) ಅವರಿಗೆ ಟಾಸ್ಕ್‌ವೊಂದು ಎದುರಾಗಿದೆ. ನವಾಜ್ ಕಡೆಯಿಂದ ದೀಪಿಕಾ ಅಂದ್ರೆ ನನಗೆ ತುಂಬಾ ಇಷ್ಟ ಎಂದು ಕ್ಯಾಮೆರಾ ಮುಂದೆ ಹೇಳಿಸಬೇಕು ಎಂದು ಇದು ದೀಪಿಕಾ ಅವರ ಟಾಸ್ಕ್ ಆಗಿತ್ತು. ಅದರಂತೆಯೇ ದೀಪಿಕಾ ಕೂಡ ನವಾಜ್ ಬಳಿ ಹೇಳಿಸಿದ್ದಾರೆ.

     

    View this post on Instagram

     

    A post shared by Deepika Das (@deepika__das)

    ನಿಮಗೆ ಐಶ್ವರ್ಯ (Aishwarya) ಮಾತ್ರ ಇಷ್ಟ ಆಗುತ್ತಾರಾ, ನಾನು ಕೂಡ ಮೇಕಪ್ ಮಾಡಿಕೊಳ್ಳುವುದಿಲ್ಲ. ನಾನು ಅಂದ್ರೆ ಇಷ್ಟ ಇಲ್ವಾ. ಹೋಗಲಿ ನೀವು ಇಷ್ಟಪಡುವ ರೀತಿಯಲ್ಲಿ ಆದ್ರೂ ಇದ್ದೀನಾ ಎಂದು ಕೇಳಿದ್ದಾರೆ. ಹಾಗಲ್ಲ, ನೀವೆಂದ್ರೆ ನನಗೆ ಇಷ್ಟ ಆದರೆ ನೀವು ನನಗಿಂತ ದೊಡ್ಡವರು ಎಂದು ನವಾಜ್ ಹೇಳಿದ್ದಾರೆ. ಹಾಗೇ ಇಷ್ಟಪಡಲು ವಯಸ್ಸ್ಯಾಕೆ ಎಂದು ದೀಪಿಕಾ ಹೇಳಿದ್ದಾರೆ. ಬಳಿಕ ನವಾಜ್(Nawaz) ಬಳಿ ಮಾತನಾಡಿ ಕ್ಯಾಮೆರಾ ಮುಂದೆ ದೀಪಿಕಾ ಅಂದ್ರೆ ನನಗೆ ತುಂಬಾ ಇಷ್ಟ ಎಂದು ನವಾಜ್ ಹೇಳಿದ್ದಾರೆ. ಮನೆಮಂದಿ ಕೊಟ್ಟ ಟ್ರೂತ್ ಆ್ಯಂಡ್ ಡೇರ್ ಟಾಸ್ಕ್‌ನಲ್ಲಿ ದೀಪಿಕಾ ದಾಸ್ ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ:ಕಾವ್ಯಶ್ರೀ ಔಟ್: ರೂಪೇಶ್ ಶೆಟ್ಟಿ ಮೇಲೆ‌ ಶುರುವಾಯ್ತು `ಪುಟ್ಟಗೌರಿ’ಗೆ ಪ್ಯಾರ್

    ಒಟ್ನಲ್ಲಿ ಬಿಗ್ ಬಾಸ್ ಪ್ರೇಕ್ಷಕರು ಐಶ್ವರ್ಯ ಮತ್ತು ನವಾಜ್ ಜೊತೆ ದೀಪಿಕಾ ದಾಸ್ ಜೊತೆಗಿನ ಫ್ರೆಂಡ್‌ಶಿಪ್ ನೋಡಿ ಏಂಜಾಯ್ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ಏನೆಲ್ಲಾ ಬದಲಾವಣೆ ಆಗಬಹುದು ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಐಶ್ವರ್ಯ ಪಿಸ್ಸೆಗೆ ಐ ಲವ್‌ ಯೂ ಎಂದ ಸೈಕ್‌ ನವಾಜ್

    ಐಶ್ವರ್ಯ ಪಿಸ್ಸೆಗೆ ಐ ಲವ್‌ ಯೂ ಎಂದ ಸೈಕ್‌ ನವಾಜ್

    ಬಿಗ್ ಬಾಸ್ (Bigg Boss House) ಮನೆಯಲ್ಲಿ ಪ್ರತಿ ಸೀಸನ್‌ನಲ್ಲೂ ಒಂದಲ್ಲಾ ಒಂದು ಪ್ರೇಮ ಕಥೆಗಳು ಶುರುವಾಗುತ್ತೆ. ಓಟಿಟಿಯಲ್ಲಿ ಶುರುವಾಗಿದ್ದ ಸಾನ್ಯ ಅಯ್ಯರ್ ಮತ್ತು ರೂಪೇಶ್ ಫ್ರೆಂಡ್ ಶಿಪ್ ಕಾವ್ಯಶ್ರೀ ಎಂಟ್ರಿಯಿಂದ ಕೊಂಚ ಬದಲಾಗಿದೆ. ಈ ಬೆನ್ನಲ್ಲೇ ಹೊಸ ಲವ್ ಸ್ಟೋರಿಯೊಂದು ಸದ್ದು ಮಾಡುತ್ತಿದೆ. ಐಶ್ವರ್ಯ ಪಿಸ್ಸೆಗೆ(Aishwarya Pissay) ಪ್ರೀತ್ಸೆ ಅಂತಾ ನವಾಜ್ (Nawaz) ಎಲ್ಲರ ಎದುರೇ ಪ್ರಪೋಸ್ ಮಾಡಿದ್ದಾರೆ.

    ಎಲ್ಲರಿಗೂ ಹೊಡೆಯುತ್ತೀನಿ ಎಂದು ರಾಂಗ್ ಆಗಿ ಮಾತನಾಡುತ್ತಿದ್ದ ನವಾಜ್(Nawaz) ಬಾಯಲ್ಲಿ ಕ್ಯೂಟ್ ಪ್ರಪೋಸಲ್ ಕೇಳಿ ಮನೆಮಂದಿ ಅಚ್ಚರಿ ಪಟ್ಟಿದ್ದಾರೆ. ದೊಡ್ಮನೆಗೆ ಬಂದ ಸಮಯದಲ್ಲಿ ನವಾಜ್ ಅವರು ಐಶ್ವರ್ಯಾ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದರು. ನನಗೆ ಹಾಲಿವುಡ್ ಹೀರೋಯಿನ್‌ಗಳು ಎಂದರೆ ಇಷ್ಟ. ಐಶ್ವರ್ಯಾ ಅವರು ನೋಡೋಕೆ ಹಾಲಿವುಡ್ ಹೀರೋಯಿನ್ ತರಹವೇ ಇದ್ದಾರೆ. ಅವರನ್ನು ಕಂಡರೆ ತುಂಬಾ ಇಷ್ಟ ಎಂದು ಹೇಳಿದ್ದರು ನವಾಜ್. ಇದೀಗ ಸೈಕ್‌ ನವಾಜ್ ಒಂದು ಹೆಜ್ಜೆ ಮುಂದೆ ಹೋಗಿ, ಪ್ರಪೋಸ್ ಮಾಡಿದ್ದಾರೆ. ಇದನ್ನೂ ಓದಿ:ಯಶ್‌ ಅಭಿವೃದ್ಧಿ ಪಡಿಸಿದ್ದ ತಲ್ಲೂರು ಕೆರೆ ಕೋಡಿ ಬಿತ್ತು – ಗ್ರಾಮಸ್ಥರಿಗೆ ಸಂತಸ

    ನೋಡಿ ಐಶ್ವರ್ಯಾ ಪಿಸ್ಸೆ ಅವರೇ, ನಿಮ್ಮನ್ನು ನೋಡಿದಾಗಲೇ ಫಿದಾ ಆದೆ. ನಿಮ್ಮ ರೀತಿ ಇಂಗ್ಲಿಷ್‌ ನಲ್ಲಿ ಐ ಲವ್ ಯೂ ಅಂತ ಹೇಳೋಕೆ ಬರಲ್ಲ. ನಮ್ಮ ಮನೆ ತುಂಬಾ ಚಿಕ್ಕದು, ಆದರೆ ಮನಸ್ಸು ದೊಡ್ಡದು. ಚಿಕ್ಕದಾಗಿ ಸೇರಿಕೊಂಡು, ದೊಡ್ಡದಾಗಿ ಪ್ರೀತಿ ಮಾಡೋಣ. ದೊಡ್ಡದಾಗಿ ಪ್ರೀತಿ ಮಾಡಿ, ಚಿಕ್ಕದಾಗಿ ಖುಷಿಪಡೋಣ. ಚಿಕ್ಕ ಖುಷಿಯಲ್ಲಿ ಮಕ್ಕಳಿಗೆ ಜನ್ಮ ಕೊಡೋಣ. ಆ ಚಿಕ್ಕ ಮಕ್ಕಳನ್ನು ದೊಡ್ಡವರಾಗಿ ಬೆಳೆಸೋಣ. ದೊಡ್ಡವರಾಗಿ ಸಾಯುವಾಗ ಚಿಕ್ಕದಾಗಿ ನಗೋಣ. ನಮ್ಮ ಮಕ್ಕಳು ದೊಡ್ಡದಾಗಿ ಸಮಾಧಿ ಕಟ್ಟಿಸುತ್ತಾರೆ, ಅವರ ಮನದಲ್ಲಿ ಚಿಕ್ಕ ಜಾಗದಲ್ಲಿರೋಣ ಎಂದು ಮುದ್ದಾಗಿ ಪ್ರಿತ್ಸೆ ಅಂತಾ ನವಾಜ್ (Nawaz) ಪ್ರಪೋಸ್ ಮಾಡಿದ್ದಾರೆ.

    ಇದಕ್ಕೆ ಪ್ರತಿಯುತ್ತರವಾಗಿ ಐಶ್ವರ್ಯ ಕೂಡ ನಿನಗೆ ಒಳ್ಳೆಯ ಹುಡುಗಿ ಸಿಗುತ್ತಾಳೆ ಎಂದು ಹೇಳಿದ್ದಾರೆ. ಯಾಕೆ ನೀವು ಸಿಗಲ್ವಾ ಎಂದು ಮತ್ತೆ ನವಾಜ್ ಐಶ್ವರ್ಯಗೆ ಕಿಚ್ಚಾಯಿಸಿದ್ದಾರೆ. ಒಂದ್ ಕಡೆ ರೂಪೇಶ್ ಕಾವ್ಯಶ್ರೀ, ಅಮೂಲ್ಯ ಮತ್ತು ರಾಕೇಶ್ ವಿಚಾರವೇ ಸಖತ್ ಸದ್ದು ಮಾಡುತ್ತಿರಬೇಕಾದರೆ, ಇದೀಗ ಐಶ್ವರ್ಯ ನವಾಜ್ ಜೋಡಿಯ ಪ್ರಪೋಸ್ ಸ್ಟೋರಿ ಎಲ್ಲರ ಗಮನ ಸೆಳೆಯುತ್ತಿದೆ

    Live Tv
    [brid partner=56869869 player=32851 video=960834 autoplay=true]

  • ‘ಸೈಕ್’ ನವಾಜ್ ಬೆದರಿಕೆಗೆ ತತ್ತರಿಸಿ ಹೋದ ಬಿಗ್ ಬಾಸ್ ಮನೆಯ ಸದಸ್ಯರು

    ‘ಸೈಕ್’ ನವಾಜ್ ಬೆದರಿಕೆಗೆ ತತ್ತರಿಸಿ ಹೋದ ಬಿಗ್ ಬಾಸ್ ಮನೆಯ ಸದಸ್ಯರು

    ನಾನು ಸರಿಯಿಲ್ಲ, ಸರಿಯಿಲ್ಲ ಅಂತಾನೇ ನನ್ನ ರಾತ್ರಿ ಆಚೆ ಬಿಡುವುದಿಲ್ಲ ಎಂದು ಹೇಳುವ ಮೂಲಕ ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಆತಂಕ ಮೂಡಿಸಿದ್ದಾರೆ ಸೈಕ್ ನವಾಜ್. ನನ್ನ ತಂದೆ ತಾಯಿ ಒಂದು ರಾತ್ರಿಯೂ ನನ್ನನ್ನು ಬಿಟ್ಟು ಮಲಗುವುದಿಲ್ಲ. ರಾತ್ರಿ ಎಲ್ಲಿಯೂ ನನ್ನನ್ನು ಕಳುಹಿಸುವುದಿಲ್ಲ. ಅದಕ್ಕೆ ಕಾರಣ, ನನ್ನ ಮೇಲೆ ಅವರ ಪ್ರೀತಿ ಇದೆ ಅಂತಲ್ಲ, ರಾತ್ರಿ ವೇಳೆ ನಾನೇನಾದರೂ ಮಾಡಿಬಿಡ್ತೀನಿ ಅನ್ನೋ ಭಯ ಅವರಿಗೆ ಎನ್ನುತ್ತಾರೆ ನವಾಜ್. ನಾನು ಯಾರನ್ನಾದರೂ ಹೊಡೆದು, ಕಿರಿಕ್ ಮಾಡ್ತೀನಿ ಅನ್ನೋ ಕಾರಣಕ್ಕಾಗಿಯೇ ನನ್ನನ್ನು ಆಚೆಯೇ ಬಿಡುವುದಿಲ್ಲ ಎಂದು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ.

    ಬಿಗ್ ಬಾಸ್ ಮನೆಯ ಟಾಸ್ಕ್ ಪ್ರಕಾರ ಅರುಣ್ ಸಾಗರ್ ಮತ್ತು ನವಾಜ್ ಒಟ್ಟೊಟ್ಟಿಗೆ ಓಡಾಡಬೇಕಿದೆ. ಹಾಗಾಗಿ ಈ ಎಲ್ಲ ವಿಷಯವನ್ನು ಅರುಣ್ ಸಾಗರ್ ಮುಂದೆ ನವಾಜ್ ಹೇಳಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕೆಲವರನ್ನು ಕಂಡರೆ ಹೊಡೆಯಬೇಕು ಅನಿಸ್ತಿದೆ. ಜಗಳ ಆಗತ್ತೆ ಅಂತಾನೂ ಫೀಲ್ ಆಗುತ್ತಿದೆ. ಆರ್ಯವರ್ಧನ್, ದರ್ಶ್ ನೋಡಿ ಅವರನ್ನು ಹೊಡೆಯಬೇಕು ಅನಿಸ್ತು ಎನ್ನುವ ಮೂಲಕ ಬಿಗ್ ಬಾಸ್ ಮನೆಯಲ್ಲಿ ಆತಂಕ ಸೃಷ್ಟಿ ಮಾಡಿದ್ದಾರೆ. ಇದನ್ನೂ ಓದಿ:ರಿಲೇಶನ್ ಶಿಪ್ ಇಟ್ಕೊಳ್ಳೋಕೆ ಬಿಗ್ ಬಾಸ್ ಮನೆಗೆ ಬಂದಿಲ್ಲ ಎಂದು ಕಣ್ಣೀರಿಟ್ಟ ನಟಿ ಮಯೂರಿ

    ನಾನು ಮರ್ಯಾದೆಗೆ ಅಂಜುವುದಿಲ್ಲ, ನನಗೆ ಬೇಗ ಕೋಪ ಬರುತ್ತದೆ ಎಂದೂ ಹೇಳಿರುವ ನವಾಜ್ (Nawaz), ಈತನ ಮಾತಿಗೆ ಸ್ವತಃ ಪ್ರಶಾಂತ್ ಸಂಬರ್ಗಿ (Prashant Sambargi) ಕೂಡ ಬೆಚ್ಚಿಬಿದ್ದಿದ್ದಾರೆ. ನವಾಜ್ ಹೇಳಿದ ಮಾತು ಭಯ ಹುಟ್ಟಿಸುತ್ತಿದೆ ಎಂದೂ ಮಾತನಾಡಿದ್ದಾರೆ. ಅಲ್ಲದೇ ಹೊಡಿತಿನಿ ಅನ್ನೋದು ಸರಿಯಿಲ್ಲ. ಪ್ರೌಢಿಮೆ ಇಲ್ಲದೇ ಅವನು ವರ್ತಿಸುತ್ತಿದ್ದಾನೆ. ಇದು ಸರಿಯಾದದ್ದು ಅಲ್ಲ ಎಂದಿದ್ದಾರೆ ರಾಕೇಶ್ ಅಡಿಗ (Rakesh Adiga). ವಿನೋದ್ ಕೂಡ ಈ ಮಾತಿಗೆ ಧ್ವನಿಗೂಡಿಸಿ, ನವಾಜ್ ಜಗಳ ಆಡಬೇಕು, ಹೊಡೆಯಬೇಕು ಎಂದು ಕಾಯುತ್ತಿದ್ದಾನೆ ಎಂದು ತಮ್ಮ ಆತಂಕವನ್ನು ಹೊರ ಹಾಕಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಯಾವುದೇ ಕಾರಣಕ್ಕೂ ದೈಹಿಕ ಮತ್ತು ಮಾನಸಿಕವಾಗಿ ಹಲ್ಲೆ ಮಾಡುವಂತಿಲ್ಲ. ಹಾಗೇನಾದರೂ ಕಂಡು ಬಂದಲ್ಲ, ಅವರನ್ನು ಮನೆಯಿಂದ ಆಚೆ ಹಾಕಲಾಗುತ್ತದೆ. ಈ ಹಿಂದೆ ಹುಚ್ಚ ವೆಂಕಟ್ (Huchcha Venkat) ಇದೇ ಕಾರಣಕ್ಕಾಗಿಯೇ ಬಿಗ್ ಬಾಸ್ ಮನೆಯಿಂದ ಹೊರ ಬಂದರು. ನವಾಜ್ ಕೂಡ ಮಾತೆತ್ತಿದರೆ ಹೊಡೀತೀನಿ, ಜಗಳ ಮಾಡ್ತೀನಿ ಎನ್ನುತ್ತಿದ್ದಾರೆ. ಒಂದು ವೇಳೆ ಹಾಗೆ ಮಾಡಿದರೆ, ಅವರನ್ನು ಮನೆಯಿಂದಲೇ ಹೊರ ದಬ್ಬಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • Exclusive- ಬಿಗ್ ಬಾಸ್ 9 ಮನೆಗೆ ಎಂಟ್ರಿ ಕೊಟ್ಟಿರುವ ವಿಚಿತ್ರ, ವಿಶೇಷ, ವಿಕ್ಷಿಪ್ತ ಸ್ಪರ್ಧಿಗಳು

    Exclusive- ಬಿಗ್ ಬಾಸ್ 9 ಮನೆಗೆ ಎಂಟ್ರಿ ಕೊಟ್ಟಿರುವ ವಿಚಿತ್ರ, ವಿಶೇಷ, ವಿಕ್ಷಿಪ್ತ ಸ್ಪರ್ಧಿಗಳು

    ಬಿಗ್ ಬಾಸ್ ಮನೆಗೆ ಹೋಗಲು ಅರ್ಹತೆ ಏನಿರಬೇಕು? ಅವರು ಕೇವಲ ಸಿನಿಮಾ ಮತ್ತು ಕಿರುತೆರೆಯ ಸಿಲೆಬ್ರಿಟಿಗಳೇ ಆಗಿರಬೇಕಾ? ಆಯ್ಕೆಗೆ ಇಂಥದ್ದೇ ಮಾನದಂಡಗಳು ಇಲ್ಲವಾದ್ದರಿಂದ, ಎಲ್ಲಾ ಕ್ಷೇತ್ರಗಳಿಂದಲೂ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅದರಲ್ಲೂ ಜನರಿಗೆ ಗೊತ್ತಿರುವ, ಸೋಷಿಯಲ್ ಮೀಡಿಯಾದಲ್ಲೂ ಆರ್ಭಟಿಸಿದವರಿಗೂ ಅವಕಾಶ ನೀಡಲಾಗುತ್ತಿದೆ. ಅಂತಹ ವಿಚಿತ್ರ, ವಿಶೇಷ ವ್ಯಕ್ತಿಗಳು ಕೂಡ ಈ ಬಾರಿ ಬಿಗ್ ಬಾಸ್ (Bigg Boss Season 9) ಮನೆ ಪ್ರವೇಶ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಕಾಫಿನಾಡು ಚಂದು

    ನಾನು ಪುನೀತಣ್ಣ, ಶಿವಣ್ಣನ ಅಭಿಮಾನಿ ಎಂದು ಹೇಳುತ್ತಲೇ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆದವರು ಕಾಫಿನಾಡು ಚಂದು (Coffenadu chandu). ಬಿಗ್ ಬಾಸ್ ಓಟಿಟಿಯಲ್ಲೇ ಚಂದು ಕಾಣಿಸಿಕೊಳ್ಳಬೇಕಿತ್ತು ಎಂದು ಹಲವರು ಅಪೇಕ್ಷೆ ಪಟ್ಟಿದ್ದರು. ಆದರೆ, ಈ ಬಾರಿ ಅವರಿಗೆ ಅವಕಾಶ ಸಿಕ್ಕಿದೆ. ಹ್ಯಾಪಿ ಬರ್ತಡೇ ಪದಗಳನ್ನು ತಮ್ಮದೇ ಆದ ಹಾಡಿನ ಮೂಲಕ ಹೇಳಿ ಫೇಮಸ್ ಆದವರು. ಮೂಲತಃ ಚಿಕ್ಕಮಗಳೂರಿನವರಾದು ಚಂದು, ಅಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಅಲ್ಲದೇ, ಸಣ್ಣಪುಟ್ಟ ಸಮಾಜ ಸೇವೆ ಮಾಡುವ ಇವರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಇದನ್ನೂ ಓದಿ : ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಎಕ್ಸ್‌ಕ್ಲೂಸಿವ್ ಸೆಲೆಬ್ರಿಟಿಗಳು

    ಐಶ್ವರ್ಯಾ ಪಿಸ್ಸೆ

    ಬೆಂಗಳೂರು ಮೂಲದ ಐಶ್ವರ್ಯ ಪಿಸ್ಸೆ (Aishwarya Pissay) ಭಾರತೀಯ ಸರ್ಕ್ಯೂಟ್ ಮತ್ತು ಆಫ್ ರೋಡ್ ಮೋಟಾರ್ ಸೈಕಲ್ ರೇಸರ್. ವಿಶ್ವ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮೋಟಾರ್ ಸೈಕಲ್ ಕ್ರೀಡೆಯ ಆಟಗಾರ್ತಿ ಕೂಡ ಇವರಾಗಿದ್ದಾರೆ. ಬೆಂಗಳೂರಿನ ಪುಟ್ಟ ಪುಟ್ಟ ರಸ್ತೆಗಳಲ್ಲಿ ಬೈಕ್ ರೇಸ್ ಮಾಡುತ್ತಿದ್ದ ಈ ಹುಡುಗಿ ಆ ನಂತರ ಇದೀಗ ರಾಷ್ಟ್ರೀಯ ಕ್ರೀಡಾಪಟುವಾಗಿ ಮಿಂಚಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಐಶ್ವರ್ಯಾ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಬೆಂಗಳೂರಿನಲ್ಲೇ ಮೋಟಾರ್ ಸೈಕಲ್ ತರಬೇತಿ ಪಡೆದಿರುವ ಐಶ್ವರ್ಯಾ, ಆ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ ಬೈಕರ್ ಎನ್ನುವುದು ವಿಶೇಷ.

    ರಿವ್ಯೂ  ನವಾಜ್

    ಇತ್ತೀಚಿನ ದಿನಗಳಲ್ಲಿ ಸಿನಿಮಾ ರಿವ್ಯೂ ವ್ಯಾಖ್ಯಾನವನ್ನೇ ಬದಲಿಸಿದವರು ನವಾಜ್ (Nawaz). ಪ್ರಾಸ ಪದಗಳನ್ನು ಪಂಚಿಂಗ್ ಡೈಲಾಗ್ ನಂತೆ ಹೇಳುತ್ತಾ, ತಮ್ಮದೇ ಆದ ನೋಡುಗರನ್ನು ಹೊಂದಿದವರು ನವಾಜ್. ಮೂಲತಃ ಬೆಂಗಳೂರಿನ ಹುಡುಗ. ಬಾಲ್ಯದಿಂದಲೇ ಬಡತನದಲ್ಲಿ ಬೆಳೆದವರು. ನವಾಜ್ ಹೇಳುವ ಪಂಚಿಂಗ್ ಡೈಲಾಗ್‍ ಗೆ ಉಪೇಂದ್ರ, ಡಾಲಿ ಧನಂಜಯ್ ಸೇರಿದಂತೆ ಹಲವರು ಫಿದಾ ಆಗಿದ್ದಾರೆ. ಇವರ ಮಾತುಗಳನ್ನು ಕೇಳಲೆಂದೇ ಹಲವರು ಸಿನಿಮಾ ರಿಲೀಸ್ ಆದಾಗ ಇವರ ಮುಂದೆ ನಿಂತು ಕೇಳಿದ್ದೂ ಇದೆ. ಒಂದು ರೀತಿಯಲ್ಲಿ ಸಿನಿಮಾ ರಂಗದ ಡಾರ್ಲಿಂಗ್ ಆಗಿಯೇ ನವಾಜ್ ಹೆಸರು ಮಾಡಿದ್ದಾರೆ. ಈ ರೀತಿಯ ರಿವಿವ್ಯುಗೆ ಕೆಲವರು ಆಕ್ಷೇಪವನ್ನೂ ವ್ಯಕ್ತ ಪಡಿಸಿದ್ದಾರೆ. ಎಲ್ಲ ಸಿನಿಮಾಗೂ ಒಂದೇ ರೀತಿಯಲ್ಲಿ ಡೈಲಾಗ್ ಹೊಡೆಯುವುದು ಸಿನಿಮಾಗೆ ಮಾಡುವ ಅವಮಾನ ಎಂದೇ ಕೆಲವರು ಟೀಕಿಸಿದ್ದಾರೆ. ಈ ಬಾರಿ ಇವರು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ.

    ಸಂದೇಶ್ ಪ್ರಸನ್ನ ಕುಮಾರ್

    ಬೆಂಗಳೂರು ಮೂಲದ ಮತ್ತೋರ್ವ ಬೈಕ್ ರೇಸರ್ ಆಗಿರುವ ಸಂದೇಶ್ ಪ್ರಸನ್ನ (Sandesh Prasannakumar) ಕೂಡ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಹೋಗುತ್ತಿದ್ದಾರೆ. ಸಂದೇಶ್ ಪ್ರಸನ್ನ ಕುಮಾರ್ ಕೂಡ ಈಗಾಗಲೇ ಹಲವು ರೇಸ್ ಗಳಲ್ಲಿ ಭಾಗಿಯಾಗಿ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಂತಾರಾಷ್ಟ್ರೀಯ ರೇಸ್ ನಲ್ಲೂ ಭಾಗಿಯಾದ ಹೆಗ್ಗಳಿಕೆ ಇವರದ್ದು. ಬಿಗ್ ಬಾಸ್ ಮನೆಗೆ ಸಂದೇಶ್ ಹೋಗುತ್ತಾರೆ ಎನ್ನುವ ಕಲ್ಪನೆ ಕೂಡ ಯಾರಿಗೂ ಇರಲಿಲ್ಲ. ಅಚ್ಚರಿ ಎನ್ನುವಂತೆ ಇವರ ಪ್ರವೇಶ ಆಗಿದೆ. ಈಗಾಗಲೇ ಮೋಟಾರ್ ಸೈಕಲ್ ರೇಸರ್ ಆಗಿರುವ ಐಶ್ವರ್ಯ ಕೂಡ ಮನೆಯಲ್ಲಿ ಇದ್ದಾರೆ. ಅವರ ಜೊತೆ ಇವರೂ ಸೇರ್ಪಡೆ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]