Tag: ನವಾಜುದ್ದೀನ್‌ ಸಿದ್ಧಿಕಿ

  • ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ನವಾಜುದ್ದೀನ್ ಸಿದ್ಧಿಕಿ ವಿಲನ್?

    ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ನವಾಜುದ್ದೀನ್ ಸಿದ್ಧಿಕಿ ವಿಲನ್?

    ‘ಅನಿಮಲ್’ ಸಿನಿಮಾದ ಸಕ್ಸಸ್ ಬಳಿಕ ರಶ್ಮಿಕಾ ಮಂದಣ್ಣಗೆ (Rashmika Mandanna) ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಜೋಡಿಯಾಗಿ ನಟಿಸುತ್ತಿರುವ ಹೊಸ ಚಿತ್ರಕ್ಕೆ ನವಾಜುದ್ದೀನ್ ಸಿದ್ಧಿಕಿ (Nawazuddin Siddiqui) ವಿಲನ್ ಆಗಿ ಅಬ್ಬರಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಮೊದಲ ಬಾರಿಗೆ ಆಯುಷ್ಮಾನ್ ಮತ್ತು ರಶ್ಮಿಕಾ ಜೊತೆಯಾಗಿ ನಟಿಸುತ್ತಿದ್ದಾರೆ. 14ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಇತಿಹಾಸದ ಬಗ್ಗೆ ಚಿತ್ರದ ಕಥೆ ಒಳಗೊಂಡಿದೆ. ಈ ಚಿತ್ರಕ್ಕೆ ಸದ್ಯ ತಂಬಾ ಎಂದು ಟೈಟಲ್ ಇಡಲಾಗಿದ್ದು, ಸಿನಿಮಾದಲ್ಲಿ ಆಯುಷ್ಮಾನ್ ಮತ್ತು ರಶ್ಮಿಕಾಗೆ ನವಾಜುದ್ದೀನ್ ಸಿದ್ಧಿಕಿ ಅವರು ವಿಲನ್ ಆಗಿ ಅಬ್ಬರಿಸಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:‘ಪುಷ್ಪ 3’ ಬರೋದು ಖಚಿತ ಎಂದ ನಿರ್ಮಾಪಕ ರವಿಶಂಕರ್

    ಈಗಾಗಲೇ ಬದ್ಲಾಪುರ, ಕಿಕ್ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿ ಸೈ ಎನಿಸಿಕೊಂಡಿರುವ ನವಾಜುದ್ದೀನ್ ಈ ಚಿತ್ರದಲ್ಲೂ ಖಳನಟನಾಗಿ ನಟಿಸಿದ್ರೆ ಸೂಕ್ತ ಎಂದು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ನಟನ ಜೊತೆ ಕೂಡ ಒಂದು ಮಾತುಕತೆ ಕೂಡ ಮಾಡಿದೆಯಂತೆ. ಇದು ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನು ಚಿತ್ರತಂಡ ಅಧಿಕೃತವಾಗ ಅನೌನ್ಸ್ ಮಾಡುವವರೆಗೂ ಕಾದುನೋಡಬೇಕಿದೆ.

    ಇನ್ನೂ ‘ತಂಬಾ’ (Thamba) ಚಿತ್ರದ ಶೂಟಿಂಗ್ ಈ ವರ್ಷದ ಅಂತ್ಯದಲ್ಲಿ ಶುರುವಾಗಲಿದೆ. ಮುಂಬೈ ಮಾತ್ರವಲ್ಲ, ಕರ್ನಾಟಕದ ಹಂಪಿಯಲ್ಲೂ ಶೂಟಿಂಗ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ. ಇನ್ನೂ ರಶ್ಮಿಕಾ ಸದ್ಯ ನಟಿಸಿರುವ ‘ಪುಷ್ಪ 2’ ಮತ್ತು ‘ಛಾವಾ’ ಎರಡು ಚಿತ್ರಗಳು ಡಿಸೆಂಬರ್‌ನಲ್ಲಿ ರಿಲೀಸ್ ಆಗುತ್ತಿದೆ. ಶ್ರೀವಲ್ಲಿ ನಟನೆ ನೋಡೋಕೆ ಫ್ಯಾನ್ಸ್ ಕಾಯುತ್ತಿದ್ದಾರೆ.

  • Bigg Boss OTT 2: ದೊಡ್ಮನೆಯಿಂದ ನವಾಜುದ್ದೀನ್ ಸಿದ್ಧಿಕಿ ಪತ್ನಿ ಆಲಿಯಾ ಔಟ್

    Bigg Boss OTT 2: ದೊಡ್ಮನೆಯಿಂದ ನವಾಜುದ್ದೀನ್ ಸಿದ್ಧಿಕಿ ಪತ್ನಿ ಆಲಿಯಾ ಔಟ್

    ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ (Nawazuddin Siddiqui) ಅವರ ಪತ್ನಿ ಆಲಿಯಾ (Aaliya) ಅವರು ಬಿಗ್ ಬಾಸ್ ಹಿಂದಿ ಒಟಿಟಿ 2ಗೆ (Bigg Boss Ott2) ಕಾಲಿಟ್ಟಿದ್ದರು. ಜೂನ್ 17ಕ್ಕೆ ಆರಂಭವಾದ ಈ ಶೋ ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಮೂಡಿ ಬರುತ್ತಿದೆ. ಬಿಗ್ ಬಾಸ್ ಒಟಿಟಿಯಲ್ಲಿನ ಆಲಿಯಾ ಸಿದ್ಧಿಕಿ ಆಟಕ್ಕೆ ಈಗ ಬ್ರೇಕ್ ಬಿದ್ದಿದೆ. ದೊಡ್ಮನೆಗೆ ಕಾಲಿಟ್ಟ 2ನೇ ವಾರಕ್ಕೆ ಆಲಿಯಾ ಔಟ್ ಆಗಿದ್ದಾರೆ. ಇದನ್ನೂ ಓದಿ:ಹೊಸ ಸಿನಿಮಾ ಮುನ್ನ ಫ್ಯಾಮಿಲಿ ಜೊತೆ ರಾಜಮೌಳಿ ಟ್ರಿಪ್

    ಹಿಂದಿ ಸಿನಿಮಾರಂಗದ ಪ್ರತಿಭಾನ್ವಿತ ನಟ ನವಾಜುದ್ದೀನ್ ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾಗಿಂತ ಪತ್ನಿ ಆಲಿಯಾ ಜೊತೆಗಿನ ಸಂಸಾರದ ಗಲಾಟೆ ಮೂಲಕವೇ ಸುದ್ದಿಯಲ್ಲಿದ್ರು. ನವಾಜುದ್ದೀನ್ ತಮಗೆ ಹಿಂಸೆ ಮಾಡುತ್ತಾರೆ. ಮನೆಯಿಂದ ಹೊರ ದಬ್ಬಿದ್ದಾರೆ ಎಂದು ನಟನ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಗೋಗರೆದಿದ್ರು. ಡಿವೋರ್ಸ್ ಆಗುವ ಹಂತದಲ್ಲಿದೆ ಎಂದು ಹೇಳಾಗುತ್ತಿದೆ. ಇದೀಗ ಬಿಗ್ ಬಾಸ್ ಶೋಗೆ ಬಂದು ಏನೋ ಸಾಬೀತು ಮಾಡಲು ಹೋಗಿ ಆಲಿಯಾ ಮುಖಭಂಗ ಅನುಭವಿಸಿದ್ದಾರೆ.

    ಆಲಿಯಾ ಸಿದ್ಧಿಕಿ ಅವರು ನಿರ್ಮಾಪಕಿ ಕೂಡ ಹೌದು. ಆದರೆ ಅವರಿಗೆ ತಮ್ಮದೇ ಆದಂತಹ ಐಡೆಂಟಿಟಿ ಇರಲಿಲ್ಲ. ಕೇವಲ ಸ್ಟಾರ್ ನಟನ ಪತ್ನಿ ಎಂದು ಅವರನ್ನು ಗುರುತಿಸಲಾಗಿತ್ತು. ಅಲ್ಲದೇ ಗಂಡನ ಜೊತೆ ಕಿರಿಕ್ ಮಾಡಿಕೊಂಡ ಬಳಿಕ ಅವರಿಗೆ ಬೇರೆ ಐಡೆಂಟಿಟಿ ಪಡೆಯುವುದು ಅನಿವಾರ್ಯ ಆಗಿತ್ತು. ಆ ಕಾರಣಕ್ಕಾಗಿ ಅವರು ಬಿಗ್ ಬಾಸ್ ಒಟಿಟಿ 2 ಶೋಗೆ ಬಂದಿದ್ದರು. ಈ ವೇದಿಕೆಯಲ್ಲಿ ತಮ್ಮ ಜೀವನದ ವಿವರಗಳನ್ನು ಜನರಿಗೆ ತಿಳಿಸಬೇಕು ಎಂಬುದು ಅವರ ಉದ್ದೇಶ ಆಗಿತ್ತು. ಆದರೆ ಈಗ ಆಲಿಯಾ ಮಿಡ್ ಮೀಕ್‌ನಲ್ಲಿ ಎಲಿಮಿನೇಟ್ (Elimination) ಆಗಿದ್ದಾರೆ. ಹಾಗಾಗಿ ಅವರ ಯೋಜನೆಗೆ ಬ್ರೇಕ್ ಬಿದ್ದಿದೆ.

    ನವಾಜುದ್ದೀನ್ ಜೊತೆಗಿನ ಮನಸ್ತಾಪದ ನಂತರ ಹೊಸ ಬಾಯ್‌ಫ್ರೆಂಡ್ ಜೊತೆ ಆಲಿಯಾ ಎಂಗೇಜ್ ಆಗುತ್ತಿದ್ದಾರೆ. ನವಾಜುದ್ದೀನ್ ಜೊತೆಗಿನ ದಾಂಪತ್ಯಕ್ಕೆ ಡಿವೋರ್ಸ್ ಸಿಕ್ಕ ಮೇಲೆ ಬಾಯ್‌ಫ್ರೆಂಡ್ ಜೊತೆ ಆಲಿಯಾ ಮದುವೆ ಎಂದು ಹೇಳಲಾಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಗಳ ವಯಸ್ಸಿನ ನಟಿ ಜೊತೆ ಲಿಪ್‌ಲಾಕ್ ಮಾಡಿದ ನವಾಜುದ್ದೀನ್‌ಗೆ ನೆಟ್ಟಿಗರಿಂದ ತರಾಟೆ

    ಮಗಳ ವಯಸ್ಸಿನ ನಟಿ ಜೊತೆ ಲಿಪ್‌ಲಾಕ್ ಮಾಡಿದ ನವಾಜುದ್ದೀನ್‌ಗೆ ನೆಟ್ಟಿಗರಿಂದ ತರಾಟೆ

    ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ (Nawazuddin Siddiqui) ಅವರು ಸಾಕಷ್ಟು ವಿಭಿನ್ನ ಪಾತ್ರಗಳ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರ ಮನೋಜ್ಞ ನಟನೆಗೆ ಬಿಟೌನ್ ಭೇಷ್ ಎಂದಿದ್ದು ಇದೆ. ಈಗ ‘ಟೀಕು ವೆಡ್ಸ್ ಶೇರು’ (Tiku Weds Sheru) ಚಿತ್ರದ ಮೂಲಕ ಸದ್ದು ಮಾಡ್ತಿರೋ ನವಾಜುದ್ದೀನ್ ಮೇಲೆ ಅಭಿಮಾನಿಗಳು ಕಿಡಿಕಾರಿದ್ದಾರೆ. ಮಗಳ ವಯಸ್ಸಿನ ಹುಡುಗಿ ಜೊತೆ ರೊಮ್ಯಾನ್ಸ್, ಮತ್ತು ಲಿಪ್‌ಲಾಕ್ ಮಾಡಿರೋ ನವಾಜುದ್ದೀನ್‌ಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.

    ನವಾಜುದ್ದೀನ್ ಸಿದ್ಧಿಕಿ ಅವರು ಇತ್ತೀಚಿಗೆ ತಮ್ಮ ವೈಯಕ್ತಿಕ ವಿಷ್ಯವಾಗಿ ಭಾರಿ ಸುದ್ದಿಯಲ್ಲಿದ್ದಾರೆ. ಕುಟುಂಬಿಕ ಕಲಹ ಬೀದಿಯಲ್ಲಿ ರಂಪಾಟ ಆಗುತ್ತಿದೆ. ಇದರ ನಡುವೆ ಅವರ ನಟನೆಯ ಸಿನಿಮಾದ ಟ್ರೈಲರ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ‘ಟೀಕು ವೆಡ್ಸ್ ಶೇರು’ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ನವಾಜುದ್ದೀನ್ ಅವರು ಶೇರು ಎಂಬ ಜ್ಯೂನಿಯರ್ ಆರ್ಟಿಸ್ಟ್ ಪಾತ್ರ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ಸೆಟ್ಲ್ ಆಗಬೇಕು ಎಂಬುದು ಶೇರು ಕನಸಾಗಿರುತ್ತದೆ. ಟೀಕು (ಅವ್ನೀತ್) ಕೂಡ ಹೀರೋಯಿನ್ ಆಗಬೇಕು ಎಂದು ಕನಸು ಕಂಡವಳು. ಶೇರುನ ಮದುವೆ ಆದರೆ ಭೋಪಾಲ್ ಬಿಟ್ಟು ಮುಂಬೈ ಸೇರಬಹುದು, ಸಿನಿಮಾ ಆಫರ್ ಪಡೆಯಬಹುದು ಎಂಬುದು ಟೀಕು ಆಲೋಚನೆ. ಈ ಕಾರಣಕ್ಕೆ ಆಕೆ ಮದುವೆಗೆ ಒಪ್ಪಿಕೊಳ್ಳುತ್ತಾಳೆ. ಇದು ಟ್ರೈಲರ್‌ನಲ್ಲಿ ತೋರಿಸಿರುವ ಅಂಶವಾಗಿದೆ. ಇದನ್ನೂ ಓದಿ:ಮಾಡ್ರನ್ ಅವತಾರ ಬದಿಗಿಟ್ಟು ಲೆಹೆಂಗಾದಲ್ಲಿ ಮಿಂಚಿದ ‘ಪುಟ್ಟಗೌರಿ’- ಸೊಂಟ ಸೂಪರ್ ಎಂದ ನೆಟ್ಟಿಗರು

    ನವಾಜುದ್ದೀನ್, ಅವ್ನೀತ್ ಕೌರ್ ಲಿಪ್ ಲಾಕ್ ದೃಶ್ಯ ಇದೆ. ನವಾಜುದ್ದೀನ್ ವಯಸ್ಸು 49. ಅವ್ನೀತ್‌ಗೆ 21 ವರ್ಷ. ಮಗಳ ವಯಸ್ಸಿನ ಹುಡುಗಿಯ ಜೊತೆ ನವಾಜುದ್ದೀನ್ ಲಿಪ್ ಲಾಕ್ ಮಾಡಿದ್ದು ಎಷ್ಟು ಸರಿ ಎಂಬುದು ಅನೇಕರ ಪ್ರಶ್ನೆಯಾಗಿದೆ. ಈ ಬಗ್ಗೆ ಸಾಕಷ್ಟು ಟೀಕೆ ಕೇಳಿ ಬಂದಿದೆ. 21 ವರ್ಷದ ಯುವತಿ ಜೊತೆ ರೊಮ್ಯಾನ್ಸ್ ಮಾಡೋ ಅವಶ್ಯಕತೆ ಇದ್ಯಾ.? ಇಬ್ಬರಿಗೂ ವಯಸ್ಸಿನ ಅಂತರ ಎಷ್ಟಿದೆ ಗೊತ್ತಾ ಅಂತಾ ಸಿನಿಮಾ ತಂಡಕ್ಕೂ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಟೀಂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಓಟಿಟಿ ಮೂಲಕ ಈ ಸಿನಿಮಾ ಜೂನ್ 23ರಂದು ರಿಲೀಸ್ ಆಗಲಿದೆ.

    ನಟ ನವಾಜುದ್ದೀನ್ ಬಾಲಿವುಡ್‌ನ ಖ್ಯಾತ ನಟ, ವಿಭಿನ್ನ ಪಾತ್ರ, ಕಥೆಯ ಮೂಲಕ ಬಿಟೌನ್‌ನಲ್ಲಿ ಗಟ್ಟಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ರಿಲೀಸ್‌ಗಿರೋ ‘ಟೀಕು ವೆಡ್ಸ್ ಶೇರು’ ಅದೆಷ್ಟರ ಮಟ್ಟಿಗೆ ಸಿನಿಮಾ ಸೌಂಡ್ ಮಾಡುತ್ತೆ ಅಂತಾ ಕಾದುನೋಡಬೇಕಿದೆ.