Tag: ನವವಿವಾಹಿತ ದಂಪತಿ

  • ಮದುವೆ ಮಂಟಪದಿಂದಲೇ ಮತದಾನಕ್ಕೆ ಬಂದ ಯುಪಿ ನವವಿವಾಹಿತ ದಂಪತಿ

    ಮದುವೆ ಮಂಟಪದಿಂದಲೇ ಮತದಾನಕ್ಕೆ ಬಂದ ಯುಪಿ ನವವಿವಾಹಿತ ದಂಪತಿ

    ಲಕ್ನೋ: ಯುಪಿಯಲ್ಲಿ ನವವಿವಾಹಿತ ದಂಪತಿಯು ಮದುವೆ ಮಂಟಪದಿಂದಲೇ ನೇರವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿ ಗಮನ ಸೆಳೆದಿದ್ದಾರೆ.

    ಸಾಮಾನ್ಯವಾಗಿ ಚುನಾವಣೆಯಲ್ಲಿ ನವವಿವಾಹಿತರು ಮತದಾನ ಮಾಡಲು ಮತಗಟ್ಟೆಗಳಿಗೆ ಧಾವಿಸುವ ಚಿತ್ರಗಳು ಮತ್ತು ವೀಡಿಯೋಗಳು ಸಾಕಷ್ಟು ಬಾರಿ ಸುದ್ದಿಯಾಗಿವೆ. ಆದರೆ ಇಲ್ಲಿ ಕೇವಲ ನವವಿವಾಹಿತ ದಂಪತಿ ಮಾತ್ರ ಭಾನುವಾರ ಫಿರೋಜಾಬಾದ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಗೆ ಆಗಮಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ

    ನವವಿವಾಹಿತ ವಧು, ಜೂಲಿ ತನ್ನ ಅತ್ತೆಯ ಮನೆಗೆ ಹೊರಡುವ ಮೊದಲು ಫಿರೋಜಾಬಾದ್ ಜಿಲ್ಲೆಯಲ್ಲಿ ವಧುವಿನ ಅವತಾರದಲ್ಲೇ ಮತ ಚಲಾಯಿಸಿದ್ದಾರೆ. ನಿನ್ನೆ ರಾತ್ರಿ ಮದುವೆಯಾಗಿರುವ ಅವರು ಇಂದು ಬೆಳಗ್ಗೆ ಅತ್ತೆಯ ಮನೆಗೆ ತೆರಳುತ್ತಿದ್ದರು. ಇದನ್ನೂ ಓದಿ:  ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲು!

    ಹತ್ರಾಸ್, ಫಿರೋಜಾಬಾದ್, ಇಟಾಹ್, ಕಾಸ್ಗಂಜ್, ಮೈನ್‍ಪುರಿ, ಫರೂಕಾಬಾದ್, ಕನೌಜ್, ಇಟಾವಾ, ಔರೈಯಾ, ಕಾನ್ಪುರ್ ದೇಹತ್, ಕಾನ್ಪುರ್ ನಗರ್, ಜಲೌನ್, ಝಾನ್ಸಿ, ಲಲಿತ್‍ಪುರ್, ಹಮೀರ್‍ಪುರ್ ಮತ್ತು ಮಹೋಬಾದಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದ್ದು, ಸಂಜೆ 6ರವರೆಗೆ ನಡೆಯಲಿದೆ.

    2017ರ ಚುನಾವಣೆಯಲ್ಲಿ, ಬಿಜೆಪಿಯು ಈ 59 ಸ್ಥಾನಗಳಲ್ಲಿ 49 ಸ್ಥಾನಗಳನ್ನು ಗೆದ್ದಿದ್ದರೆ, ಸಮಾಜವಾದಿ ಪಕ್ಷ 9 ಸ್ಥಾನ ಹಾಗೂ ಕಾಂಗ್ರೆಸ್ 1 ಸ್ಥಾನ ಪಡೆದಿತ್ತು. ಆದರೆ ಬಹುಜನ ಸಮಾಜವಾದಿ ಪಕ್ಷವೂ ಈ ಕ್ಷೇತ್ರಗಳಲ್ಲಿ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ.