Tag: ನವವಿವಾಹಿತ

  • ಮದುವೆಗೆ ಗಿಫ್ಟ್ ಬಂದಿದ್ದ ಮ್ಯೂಸಿಕ್ ಸಿಸ್ಟಮ್ ಬ್ಲಾಸ್ಟ್ – ನವವಿವಾಹಿತ ಸೇರಿ ಇಬ್ಬರು ಸಾವು

    ಮದುವೆಗೆ ಗಿಫ್ಟ್ ಬಂದಿದ್ದ ಮ್ಯೂಸಿಕ್ ಸಿಸ್ಟಮ್ ಬ್ಲಾಸ್ಟ್ – ನವವಿವಾಹಿತ ಸೇರಿ ಇಬ್ಬರು ಸಾವು

    ರಾಯ್ಪುರ: ಮದುವೆಯಲ್ಲಿ ಉಡುಗೊರೆಯಾಗಿ (Wedding Gift) ಪಡೆದಿದ್ದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ (Music System) ಸ್ಫೋಟಗೊಂಡಿದ್ದು, ನವವಿವಾಹಿತ ಮತ್ತು ಆತನ ಹಿರಿಯ ಸಹೋದರ ಸಾವನ್ನಪ್ಪಿರುವ ಘಟನೆ ಛತ್ತೀಸ್‌ಗಢದ (Chhattisgarh) ಕಬೀರ್ಧಾಮ್ ಜಿಲ್ಲೆಯಲ್ಲಿ ನಡೆದಿದೆ.

    ಸೋಮವಾರ ಈ ಘಟನೆ ನಡೆದಿದ್ದು, ಸ್ಫೋಟಕ್ಕೆ (Blast) ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸ್ಫೋಟದ ಪರಿಣಾಮ ಹೋಮ್ ಥಿಯೇಟರ್ ಸಿಸ್ಟಮ್ ಅನ್ನು ಇರಿಸಲಾಗಿದ್ದ ಕೋಣೆಯ ಮೇಲ್ಛಾವಣಿ ಹಾಗೂ ಗೋಡೆಗಳೇ ಕುಸಿದು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಇನ್ನೂ ನಾಲ್ವರು ಗಾಯಗೊಂಡಿದ್ದಾರೆ.

    ವರದಿಗಳ ಪ್ರಕಾರ ಮೃತ ನವವಿವಾಹಿತ ವ್ಯಕ್ತಿ ಹೇಮೇಂದ್ರ ಮೇರಾವಿ (22) ಏಪ್ರಿಲ್ 1 ರಂದು ವಿವಾಹವಾಗಿದ್ದರು. ಸೋಮವಾರ ಹೇಮೇಂದ್ರ ಹಾಗೂ ಕುಟುಂಬದ ಇತರ ಸದಸ್ಯರು ತಮ್ಮ ಮನೆ ಕೋಣೆಯೊಳಗೆ ಮದುವೆಗೆ ಬಂದಿದ್ದ ಉಡುಗೊರೆಗಳನ್ನು ಬಿಚ್ಚುತ್ತಿದ್ದರು ಎನ್ನಲಾಗಿದೆ.

    ಉಡುಗೊರೆಗಳ ಪೈಕಿ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಕೂಡಾ ಒಂದಾಗಿತ್ತು. ಅದರ ತಂತಿಯನ್ನು ಎಲೆಕ್ಟ್ರಿಕ್ ಬೋರ್ಡ್‌ಗೆ ಜೋಡಿಸಿ ಬಳಿಕ ಅದನ್ನು ಆನ್ ಮಾಡಿದಾಗ ಭಾರೀ ಸ್ಫೋಟ ಉಂಟಾಗಿದೆ. ಘಟನೆಯಲ್ಲಿ ಮೇರಾವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬಾಯ್‍ಫ್ರೆಂಡ್ ಬಿಡುವಂತೆ ಹೇಳಿದ ತಾಯಿಯನ್ನು ಕೊಲೆಗೈದ 14ರ ಮಗಳು!

     

    ಮೇರಾವಿ ಸಹೋದರ ರಾಜ್‌ಕುಮಾರ್ (30) ಮತ್ತು ಒಂದೂವರೆ ವರ್ಷದ ಬಾಲಕ ಸೇರಿದಂತೆ ಇತರ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಕೌರಾದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಮೆರಾವಿ ಅವರ ಸಹೋದರ ಸಾವನ್ನಪ್ಪಿದ್ದಾರೆ. ಪ್ರಸ್ತುತ ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ವಿಷಯ ತಿಳಿದ ತಕ್ಷಣ ವಿಧಿವಿಜ್ಞಾನ ತಜ್ಞರೊಂದಿಗೆ ಪೊಲೀಸ್ ತಂಡ ಸ್ಥಳಕ್ಕೆ ತೆರಳಿದೆ. ಕೊಠಡಿಯನ್ನು ಪರಿಶೀಲಿಸಿದಾಗ ಸ್ಫೋಟಕ್ಕೆ ಕಾರಣವಾಗಿರುವ ಯಾವುದೇ ವಸ್ತು ಪತ್ತೆಯಾಗಿಲ್ಲ. ಮ್ಯೂಸಿಕ್ ಸಿಸ್ಟಮ್ ಮಾತ್ರವೇ ಕೋಣೆಯಲ್ಲಿ ಸ್ಫೋಟಗೊಂಡಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರೆಂಗಾಖರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ದುರ್ಗೇಶ್ ರಾವ್ಟೆ ತಿಳಿಸಿದ್ದಾರೆ. ಇದನ್ನೂ ಓದಿ: ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ಪಡೆದ ಫೋಕ್ಸ್‌ವ್ಯಾಗನ್ ವರ್ಟಸ್, ಸ್ಕೋಡಾ ಸ್ಲಾವಿಯಾ

  • ನಾನು ನಿನ್ನ ಪ್ರೀತಿಸ್ತಿಲ್ಲ- ಮದ್ವೆಯಾದ ಮರುದಿನವೇ ನಗದು, ಚಿನ್ನಾಭರಣ ಕದ್ದೊಯ್ದ ವಧು!

    ನಾನು ನಿನ್ನ ಪ್ರೀತಿಸ್ತಿಲ್ಲ- ಮದ್ವೆಯಾದ ಮರುದಿನವೇ ನಗದು, ಚಿನ್ನಾಭರಣ ಕದ್ದೊಯ್ದ ವಧು!

    ಲಕ್ನೋ: ನವವಿವಾಹಿತೆಯೊಬ್ಬಳು (Bride) ಮದುವೆಯಾದ (Marriage) ಮಾರನೇ ದಿನ ಅತ್ತೆ ಮನೆಯಲ್ಲಿದ್ದ ಎಲ್ಲಾ ನಗದು, ಚಿನ್ನಾಭರಣ ದೋಚಿಕೊಂಡು ಓಡಿಹೋಗಿ ನಂತರ ವರನಿಗೆ ನಾನು ನಿನ್ನನ್ನು ಪ್ರೀತಿಸುತ್ತಿಲ್ಲ, ಇನ್ನು ಮುಂದೆ ನನ್ನನ್ನು ಸಂಪರ್ಕಿಸಬೇಡಿ ಎಂದು ಹೇಳಿದ ಘಟನೆ ಉತ್ತರಪ್ರದೇಶದಲ್ಲಿ (Uttar Pradesh) ನಡೆದಿದೆ.

    ಉತ್ತರಪ್ರದೇಶದ ತಕತೌಲಿ ಗ್ರಾಮದ ನಿವಾಸಿ ಅರವಿಂದ್ ಮೋಸ ಹೋದ ನವವಿವಾಹಿತ. ಈತನಿಗೆ ಇಬ್ಬರು ವ್ಯಕ್ತಿಗಳು ಮದುವೆ ಮಾಡಿಸುವುದಾಗಿ ಹೇಳಿ 70,00 ರೂ. ಹಣ (Money) ತೆಗೆದುಕೊಂಡಿದ್ದರು. ಅದಾದ ನಂತರ ಬಿಹಾರದ ಗಯಾಗೆ ಹೋಗಿ ಅಲ್ಲಿ ಹಣ ಪಡೆದು ಮದುವೆಯನ್ನು ನಿಶ್ಚಯಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಗಯಾದ ದೇವಸ್ಥಾನದಲ್ಲಿ ಅರವಿಂದ್‍ಗೆ ವಿವಾಹ ನೆರವೆರಿದೆ. ನಂತರ ಅರವಿಂದ್ ಹಾಗೂ ಆತನ ಪತ್ನಿ ತಮ್ಮ ಸ್ವಂತ ನಿವಾಸಕ್ಕೆ ಮರಳಿದ್ದಾರೆ. ಅದಾದ ಬಳಿಕ ಮಾರನೇ ದಿನ ಅರವಿಂದ್ ಎಚ್ಚರಗೊಂಡು ನೋಡಿದಾಗ ಪತ್ನಿ ಇರಲಿಲ್ಲ. ಜೊತೆಗೆ ಮನೆಯಿಂದ ಬಾಕ್ಸ್‍ನಲ್ಲಿ ಇಟ್ಟಿದ್ದ 30,000 ರೂ. ಮೌಲ್ಯದ ನಗದು, ಆಭರಣ, ಮದುವೆಗೆ ನೀಡಿದ್ದ ಬಟ್ಟೆಗಳು ಕಾಣೆಯಾಗಿದ್ದವು. ಇದನ್ನೂ ಓದಿ: ಆಜಾದ್ ನಗರದಲ್ಲಿ ಕಾರು ಜಖಂ – ಹರ್ಷ ಸಹೋದರಿ ಅಶ್ವಿನಿ ವಿರುದ್ಧ FIR

    ಘಟನೆಗೆ ಸಂಬಂಧಿಸಿ ಅರವಿಂದ್ ವಿರುದ್ಧ ಇಬ್ಬರು ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾನೆ. ಘಟನೆಗೆ ಸಂಬಂಧಿಸಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೊಬೈಲ್‍ ನೋಡ್ತಿದ್ದಕ್ಕೆ ಗದರಿದ ತಾಯಿ – ಮನನೊಂದು ನೇಣಿಗೆ ಶರಣಾದ ಮಗಳು

    Live Tv
    [brid partner=56869869 player=32851 video=960834 autoplay=true]

  • ಟ್ರ್ಯಾಕ್ಟರ್ ಅಡಿ ಸಿಲುಕಿ 45 ದಿನಗಳ ಹಿಂದೆ ಮದ್ವೆಯಾಗಿದ್ದ ನವವಿವಾಹಿತ ದುರ್ಮರಣ

    ಟ್ರ್ಯಾಕ್ಟರ್ ಅಡಿ ಸಿಲುಕಿ 45 ದಿನಗಳ ಹಿಂದೆ ಮದ್ವೆಯಾಗಿದ್ದ ನವವಿವಾಹಿತ ದುರ್ಮರಣ

    ಚಿಕ್ಕಮಗಳೂರು: ಇಳಿಜಾರಿನಲ್ಲಿ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ನವವಿವಾಹಿತ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಳೇಕೋಟೆ ಬಳಿ ನಡೆದಿದೆ.

    ಮೃತನನ್ನು ಹರೀಶ್(28) ಎಂದು ಗುರುತಿಸಲಾಗಿದೆ. ಹರೀಶ್ ಕಳೆದ 45 ದಿನಗಳ ಹಿಂದಷ್ಟೆ ಮದುವೆಯಾಗಿದ್ದರು. ಆರ್.ಆರ್.ಎಸ್. ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಹರೀಶ್, ಶನಿವಾರ ಮಧ್ಯಾಹ್ನ ಹಳೇಕೋಟೆಯಿಂದ ಮೂಡಿಗೆರೆಗೆ ಬರುವಾಗ ಇಳಿಜಾರಿನಲ್ಲಿ ಟ್ರ್ಯಾಕ್ಟರ್ ಚಕ್ರ ಗುಂಡಿಗೆ ಇಳಿದಿದ್ದರಿಂದ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಟ್ರ್ಯಾಕ್ಟರ್ ಅಡಿ ಸಿಲುಕಿದ ಹರೀಶ್ ಮೇಲೇಳಲಾಗದೆ ಸಾವನ್ನಪ್ಪಿದ್ದಾರೆ.

    POLICE JEEP

    ಇತ್ತ ಮನೆಯವರು, ಸ್ನೇಹಿತರು ಫೋನ್ ಮಾಡಿದರು ಫೋನ್ ಪಿಕ್ ಮಾಡುತ್ತಿರಲಿಲ್ಲ. ಟ್ರ್ಯಾಕ್ಟರ್ ಕೂಡ ಇಲ್ಲ ಎಂದು ಮನೆಯವರು, ಸ್ನೇಹಿತರು ಹುಡುಕಾಡಿದಾಗ ಈ ದುರ್ಘಟನೆ ಸಂಭವಿಸಿರೋದು ರಾತ್ರಿ ಬೆಳಕಿಗೆ ಬಂದಿದೆ. ಮಲೆನಾಡಿನ ತಿರುವುಗಳಲ್ಲಿನ ಇಳಿಜಾರಿನಲ್ಲಿ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣಕ್ಕೆ ಸಿಗದೆ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ದೇವಸ್ಥಾನದ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡಿ ದೇಶವನ್ನು ಅದಾನಿ, ಅಂಬಾನಿಗೆ ಒತ್ತೆ ಇಡುತ್ತಿದೆ: ಸಿದ್ದರಾಮಯ್ಯ

    ಕಳೆದ ಒಂದೂವರೆ ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಹರೀಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಮಾಕೋನಹಳ್ಳಿಯ ಬಳಿಯೂ ಟಿಂಬರ್ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ರಸ್ತೆಯ ಅಪ್ ಹತ್ತಲಾಗದೆ ಇಳಿಜಾರಿನಲ್ಲಿ ಹಿಮ್ಮುಖವಾಗಿ ಸುಮಾರು 50 ಮೀಟರ್ ನಷ್ಟು ದೂರ ಬಂದು ಪಲ್ಟಿಯಾಗಿತ್ತು. ಈ ವೇಳೆ ಗಾಡಿ ಕಂಟ್ರೋಲ್‍ಗೆ ಸಿಗುತ್ತಿಲ್ಲ ಎಂದು ಡ್ರೈವರ್ ಗೆ ಅರಿವಾದಾಗ ಚಾಲಕ ಟ್ರ್ಯಾಕ್ಟರ್ ನಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾನೆ.

  • ಟಿಕ್‍ಟಾಕ್ ಹುಚ್ಚಿಗೆ ಬಲಿಯಾದ ನವವಿವಾಹಿತ – ಟ್ರ್ಯಾಕ್ಟರ್ ಸ್ಟಂಟ್ ಮಾಡಲು ಹೋಗಿ ಅಪ್ಪಚ್ಚಿಯಾಯ್ತು ದೇಹ

    ಟಿಕ್‍ಟಾಕ್ ಹುಚ್ಚಿಗೆ ಬಲಿಯಾದ ನವವಿವಾಹಿತ – ಟ್ರ್ಯಾಕ್ಟರ್ ಸ್ಟಂಟ್ ಮಾಡಲು ಹೋಗಿ ಅಪ್ಪಚ್ಚಿಯಾಯ್ತು ದೇಹ

    – ಹೋಳಿ ಹಬ್ಬದಂದೇ ಹರಿದ ರಕ್ತದೋಕುಳಿ
    – ವಿಡಿಯೋ ಮಾಡುವಾಗ್ಲೆ ಸಂಭವಿಸಿದ ಅಪಘಾತ

    ಲಕ್ನೋ: ಇತ್ತೀಚೆಗೆ ಟಿಕ್‍ಟಾಕ್ ಯುವಪೀಳಿಗೆಗೆ ಮಾರಕವಾಗುತ್ತಿದ್ದು, ಟಿಕ್‍ಟಾಕ್ ವಿಡಿಯೋ ಮಾಡುವ ಹುಚ್ಚಿಗೆ ಬಿದ್ದ ಬಳಕೆದಾರರು ತಮ್ಮ ಜೀವಕ್ಕೆ ಕಂಟಕ ತಂದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗೆ ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ನವವಿವಾಹಿತನೋರ್ವ ಜೀವ ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಖಿಂಡೀದಿಯಾ ಗ್ರಾಮದ ನಿವಾಸಿ ಕಪಿಲ್(23) ಎಂದು ಗುರುತಿಸಲಾಗಿದೆ. ಬುಧವಾರ ಹೋಳಿ ಹಬ್ಬದ ಹಿನ್ನೆಲೆ ಗ್ರಾಮದಲ್ಲಿ ಸಂಭ್ರಮದಿಂದ ಬಣ್ಣದ ಹಬ್ಬವನ್ನು ಆಚರಿಸಲಾಗುತ್ತಿತ್ತು. ಈ ವೇಳೆ ಟಿಕ್‍ಟಾಕ್ ವಿಡಿಯೋ ಮಾಡಲು ಕಪಿಲ್ ಹಾಗೂ ಆತನ ಸ್ನೇಹಿತರು ಮುಂದಾದರು. ಟಿಕ್‍ಟಾಕ್ ವಿಡಿಯೋಗಾಗಿ ಟ್ರ್ಯಾಕ್ಟರ್ ನಲ್ಲಿ ಸ್ಟಂಟ್ ಮಾಡಿ ಹೆಚ್ಚು ಲೈಕ್ಸ್ ಪಡೆಯಲು ಹೋಗಿ ಕಪಿಲ್ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಸ್ಟಂಟ್ ಮಾಡುವಾಗ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಕಪಿಲ್ ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಪತ್ನಿಯ ಟಿಕ್‍ಟಾಕ್ ವಿಚಾರ ಕೇಳಿ ವಿದೇಶದಿಂದ ಓಡಿ ಬಂದ ಪತಿ

    ಏಕಾಏಕಿ ವಾಹನ ಪಲ್ಟಿಯಾದ ಪರಿಣಾಮ ಕಪಿಲ್ ದೇಹ ಟ್ರ್ಯಾಕ್ಟರ್ ಅಡಿಕೆ ಸಿಲುಕಿ ಅಪ್ಪಚ್ಚಿಯಾಗಿದೆ. ಕಪಿಲ್ ಮಾಡುತ್ತಿದ್ದ ಸ್ಟಂಟ್‍ಗಳನ್ನು ವಿಡಿಯೋ ಮಾಡುತ್ತಿದ್ದ ಸ್ನೇಹಿತ ಆತನ ಸಹಾಯಕ್ಕೆ ಬರುವ ಮುನ್ನವೇ ಕಪಿಲ್ ಸಾವನ್ನಪ್ಪಿದ್ದನು. ಇದನ್ನೂ ಓದಿ: ಹೆಚ್ಚು ಲೈಕ್ಸಿಗೆ ಹುಚ್ಚು ಸಾಹಸ – ಸ್ನೇಹಿತರೆದುರೇ ಜೀವಬಿಟ್ಟ ಟಿಕ್‍ಟಾಕ್ ಸ್ಟಾರ್

    ಕಳೆದ ಎರಡು ತಿಂಗಳ ಹಿಂದೆಯಷ್ಟೇ ಕಪಿಲ್ ಮದುವೆಯಾಗಿತ್ತು. ಹೊಸ ಬಾಳನ್ನು ಆರಂಭಿಸಿದ ಕೆಲವೇ ದಿನಗಳಲ್ಲಿ ಕಪಿಲ್ ಟಿಕ್‍ಟಾಕ್ ಹುಚ್ಚಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಟ್ರ್ಯಾಕ್ಟರ್ ಚಲಾಯಿಸುತ್ತಾ ಅದರ ಮುಂದಿನ ಎರಡು ಟೈರ್ ಗಳನ್ನು ಎತ್ತಿ ಸ್ಟಂಟ್ ಮಾಡಲು ಕಪಿಲ್ ಮುಂದಾದಾಗ ಈ ಅನಾಹುತ ಸಂಭವಿಸಿದೆ.

    ಕಪಿಲ್ ಸಾವನ್ನಪ್ಪಿದ ಬಳಿಕ ಕುಟುಂಬಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ಆತನ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದಾರೆ. ಹೀಗಾಗಿ ಈ ಬಗ್ಗೆ ಪೊಲೀಸರಿಗೆ ಕೇಳಿದರೆ ನಮಗೆ ಯಾವುದೇ ದೂರು ಬಂದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಿಕ್‍ಟಾಕ್‍ನಿಂದ ಪತಿಯ 2ನೇ ಮದುವೆ ರಹಸ್ಯ ಬಯಲು

    ಈ ಹಿಂದೆ ಫೆ. 18ರಂದು ಮೀರತ್‍ನಲ್ಲಿ ಇದೇ ರೀತಿ ಪ್ರಕರಣ ಬೆಳಕಿಗೆ ಬಂದಿತ್ತು. 18 ವರ್ಷದ ಯುವಕನೋರ್ವ ಕಾಲುವೆಯಲ್ಲಿ ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದನು.

  • ಕತ್ತು ಕೊಯ್ದುಕೊಂಡು ನವವಿವಾಹಿತ ಆತ್ಮಹತ್ಯೆ

    ಕತ್ತು ಕೊಯ್ದುಕೊಂಡು ನವವಿವಾಹಿತ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಮನೆಯಲ್ಲಿ ಕತ್ತು ಕೊಯ್ದುಕೊಂಡು ನವವಿವಾಹಿತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚಾಕವೇಲು ಗ್ರಾಮದಲ್ಲಿ ನಡೆದಿದೆ.

    ನಾಗರಾಜು(25) ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತ. ತಂದೆ ಹಾಗೂ ತಾಯಿಯ ಅಗಲಿಕೆ ನಂತರ ನಾಗರಾಜ್ ತನ್ನ ತಮ್ಮನೊಂದಿಗೆ ವಾಸವಾಗಿದ್ದನು. ಕಳೆದ ಐದು ತಿಂಗಳ ಹಿಂದೆಯಷ್ಟೇ ನಾಗರಾಜ್ ಇದೇ ಗ್ರಾಮದ ವಿಜಯಲಕ್ಷ್ಮಿ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದನು. ವೃತ್ತಿಯಲ್ಲಿ ಪೇಂಟರ್ ಆಗಿದ್ದ ನಾಗರಾಜ್ ಮದುವೆಯಾದ ನಂತರ ನೆರೆ ರಾಜ್ಯ ಆಂಧ್ರದ ಕದಿರಿ ಬಳಿ ಪೇಂಟಿಂಗ್ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದನು.

    ಕಳೆದ ಒಂದು ವಾರದ ಹಿಂದೆ ನಾಗರಾಜ್ ತನ್ನ ಪತ್ನಿ ವಿಜಯಲಕ್ಷ್ಮಿ ಜೊತೆಗೆ ಸ್ವಗ್ರಾಮ ಚಾಕವೇಲುಗೆ ವಾಪಸ್ಸಾಗಿದ್ದನು. ಆದರೆ ಅದೇನಾಯ್ತೋ ಏನೋ ತನ್ನ ಮನೆಯಲ್ಲಿದ್ದ ನಾಗರಾಜ್ ಮನೆಯ ಒಳಭಾಗದಿಂದ ಬಾಗಿಲು ಹಾಕಿಕೊಂಡು ತನ್ನ ಕತ್ತನ್ನು ತಾನೇ ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಂಜೆಯಾದರೂ ನಾಗರಾಜ್ ಮನೆಯಿಂದ ಹೊರ ಬಂದಿಲ್ಲ ಎಂದು ಅನುಮಾನಗೊಂಡ ಪತ್ನಿ ಹಾಗೂ ಮೃತನ ಸಹೋದರ ಸೇರಿದಂತೆ ಸಂಬಂಧಿಕರು ಮನೆಯ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

    ರಕ್ತದ ಮಡುವಿನಲ್ಲಿ ನಾಗರಾಜ್ ಪತ್ತೆಯಾಗಿದ್ದು, ಘಟನೆ ಕಂಡ ಸಂಬಂಧಿಕರು ಶಾಕ್ ಆಗಿದ್ದಾರೆ. ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಬಾಗೇಪಲ್ಲಿ ವೃತ್ತ ನಿರೀಕ್ಷಕ ನಯಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

    ನಾಗರಾಜ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಇತ್ತೀಚೆಗೆ ಮೃತ ನಾಗರಾಜ್ ತನ್ನ ಮನಸ್ಸಿಗೆ ಯಾಕೋ ಬೇಜಾರ್ ಆಗುತ್ತಿದೆ, ತಾನು ಸಾಯುವುದಾಗಿ ಸಂಬಂಧಿಕರ ಬಳಿ ಆಗಾಗ ಹೇಳಿಕೊಳ್ಳುತ್ತಿದ್ದನು ಎನ್ನಲಾಗಿದೆ. ಆದರೆ ಸಂಬಂಧಿಕರು ಎಲ್ಲೋ ತಮಾಷೆಗೆ ಈ ರೀತಿ ಹೇಳುತ್ತಿದ್ದಾನೆ ಎಂದು ಸ್ವಲ್ಪ ಬುದ್ಧಿವಾದ ಹೇಳಿ ಸುಮ್ಮನಾಗಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ಪೊಲೀಸರ ತನಿಖೆಯಿಂದ ಸಾವಿನ ಸತ್ಯ ತಿಳಿದು ಬರಬೇಕಿದೆ.

  • ವಿಶ್ವವಿದ್ಯಾಲಯದ ಆವರಣದಲ್ಲಿ ನವವಿವಾಹಿತ ಜೋಡಿ ಶವವಾಗಿ ಪತ್ತೆ!

    ವಿಶ್ವವಿದ್ಯಾಲಯದ ಆವರಣದಲ್ಲಿ ನವವಿವಾಹಿತ ಜೋಡಿ ಶವವಾಗಿ ಪತ್ತೆ!

    – ಪ್ರಕರಣದ ಬಗ್ಗೆ ಭಾರೀ ಅನುಮಾನ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್ ಭುಮ್ ಜಿಲ್ಲೆಯಲ್ಲಿರುವ ವಿಶ್ವಭಾರತೀ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ನವ-ವಿವಾಹಿತ ಜೋಡಿಯ ಶವ ಪತ್ತೆಯಾಗಿದ್ದು, ಭಾರೀ ಅನುಮಾನಕ್ಕೀಡುಮಾಡಿದೆ.

    ಮೃತರನ್ನು 18 ವರ್ಷದ ಸೊಮಂತ್ ಮಹಾತೋ ಹಾಗೂ 19 ವರ್ಷದ ಅಬಂತಿಕಾ ಎಂದು ಗುರುತಿಸಲಾಗಿದೆ ಅಂತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಜೋಡಿಯ ಮೃತದೇಹ ಶನಿವಾರ ಕ್ಯಾಂಪಸ್ ಚೀನಾ ಭಾಷೆಯ ಅಧ್ಯಯನ ಕೇಂದ್ರದಲ್ಲಿ ದೊರೆತಿದ್ದು, ಇದೀಗ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಶುಕ್ರವಾರ ರಾತ್ರಿ ಈ ಜೋಡಿ ಆತ್ಮಹತ್ಯೆ ಶರಣಾಗಿದ್ದಾರೆ ಎನ್ನಲಾಗುತ್ತಿದ್ದು, ಆದರೆ ಮಧ್ಯರಾತ್ರಿ ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆ ಹೇಗೆ ಬಂದರು ಎಂಬುದು ಭಾರೀ ಚರ್ಚೆಗೀಡಾಗಿದೆ.

    ಮೃತರಿಬ್ಬರು ಬೋಲ್ಪುರದ ಶ್ರೀನಂದಾ ಹೈಸ್ಕೂಲಿನ ವಿದ್ಯಾರ್ಥಿಗಳಾಗಿದ್ದಾರೆ. ಸೊಮಂತ್ ಪಿಯುಸಿ ಮುಗಿಸಿದ್ದರೆ, ಅಬಂತಿಕಾ 10 ನೇ ತರಗತಿ ಮುಗಿಸಿದ್ದಾಳೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಆ ಬಳಿಕವಷ್ಟೇ ಇದು ಆತ್ಮಹತ್ಯೆಯೋ ಅಲ್ವೋ ಎಂಬುದು ಬೆಳಕಿಗೆ ಬರಬೇಕಿದೆ ಎಂದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಸೆಕ್ಯೂರಿಟಿಯವರು ಎಂದಿನಿಂತೆ ಚೀನಾ ಭವನದ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಇಬ್ಬರ ಮೃತದೇಹವಿರುವುದು ಕಂಡು ಬಂದಿದೆ. ಕೂಡಲೇ ಅವರು ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಪ್ರಕರಣ ಸಂಬಂಧ ಅವರು ರಾತ್ರೋರಾತ್ರಿ ವಿಶ್ವವಿದ್ಯಾಲಯದ ಒಳಗೆ ಹೇಗೆ ಬಂದರು ಎಂಬುದರ ಬಗ್ಗೆ ಮೊದಲು ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಬೈಕಿನಿಂದ ಬಿದ್ದ ಸವಾರನ ಮೇಲೆ ಹರಿದ ಬಸ್- ನವವಿವಾಹಿತ ಸ್ಥಳದಲ್ಲೇ ಸಾವು

    ಬೈಕಿನಿಂದ ಬಿದ್ದ ಸವಾರನ ಮೇಲೆ ಹರಿದ ಬಸ್- ನವವಿವಾಹಿತ ಸ್ಥಳದಲ್ಲೇ ಸಾವು

    ಮೈಸೂರು: ಬೈಕಿನಿಂದ ಆಯ ತಪ್ಪಿ ಬಿದ್ದ ನವವಿವಾಹಿತನ ಮೇಲೆ ಬಸ್ ಹರಿದು ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಎಚ್.ಡಿ ಕೋಟೆ ತಾಲೂಕಿನ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ.

    ಮುನೀಶ್ ಜೈನ್ ಅಪಘಾತದಲ್ಲಿ ಮೃತ ದುರ್ದೈವಿ. ಮುನೀಶ್ ಬಾಗಲಕೋಟೆ ಮೂಲದವನಾಗಿದ್ದು, ಕಳೆದ ವಾರ ಅಷ್ಟೇ ಸೃಷ್ಟಿ ಅವರನ್ನು ಮದುವೆ ಆಗಿದ್ದನು. ಮುನೀಶ್ ಬೆಂಗಳೂರಿಗೆ ಬಂದು ರಾಯಲ್ ಎನ್‍ಫೀಲ್ಡ್ ಬೈಕ್‍ನನ್ನು ಬಾಡಿಗೆಗೆ ಪಡೆದಿದ್ದನು.

    ಮದುವೆಯಾದ ಬಳಿಕ ಮುನೀಶ್ ತನ್ನ ಪತ್ನಿ ಸೃಷ್ಟಿ ಜೊತೆ ಎಚ್.ಡಿ ಕೋಟೆಯ ಕಬಿನಿ ಜಂಗಲ್ ರೆಸಾರ್ಟ್‍ಗೆ ಬಂದು ತಂಗಿದ್ದನು. ಇಂದು ರಾಯಲ್ ಎನ್‍ಫೀಲ್ಡ್‍ನಲ್ಲಿ ತನ್ನ ಪತ್ನಿಯನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ವಾಪಸ್ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

    ಎಚ್.ಡಿ ಕೋಟೆಯ ಹ್ಯಾಂಡ್ ಪೋಸ್ಟ್ ಬಳಿ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಮುನೀಶ್ ಹಿಂಬದಿ ಕುಳಿತಿದ್ದ ಸೃಷ್ಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಎಚ್.ಡಿ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ನೇಹಿತನ ಬರ್ತ್ ಡೇಗೆ ಕೇಕ್ ತರಲು ಹೋಗಿದ್ದ ನವವಿವಾಹಿತ ದುರ್ಮರಣ

    ಸ್ನೇಹಿತನ ಬರ್ತ್ ಡೇಗೆ ಕೇಕ್ ತರಲು ಹೋಗಿದ್ದ ನವವಿವಾಹಿತ ದುರ್ಮರಣ

    ಮೈಸೂರು: ಸ್ನೇಹಿತನ ಹುಟ್ಟುಹಬ್ಬಕ್ಕೆ ಕೇಕ್ ತರಲು ಎಂದು ಹೋಗಿದ್ದ ನವವಿವಾಹಿತ ಅಪಘಾತದಲ್ಲಿ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.

    ಹರ್ಷಕುಮಾರ್ ಸಿಂಗ್(28) ಅಪಘಾತದಲ್ಲಿ ಮೃತಪಟ್ಟ ವಿವಾಹಿತ. ಹರ್ಷಕುಮಾರ್ ಸಿಂಗ್ ಮೈಸೂರಿನ ಶಾರದಾದೇವಿನಗರದ ನಿವಾಸಿ ಎಂದು ಹೇಳಲಾಗಿದ್ದು, ಕಳೆದ ನಾಲ್ಕು ತಿಂಗಳ ಹಿಂದೆಷ್ಟೇ ವಿವಾಹವಾಗಿದ್ದರು ಎಂಬುದು ತಿಳಿದುಬಂದಿದೆ.

    ಮೈಸೂರಿನ ಕೆ.ಆರ್. ಆಸ್ಪತ್ರೆ ವೃತ್ತದಲ್ಲಿ ಈ ಅವಘಡ ಸಂಭವಿಸಿದೆ. ಇವರು ತನ್ನ ಸ್ನೇಹಿತನ ಹುಟ್ಟುಹಬ್ಬಕ್ಕೆ ಕೇಕ್ ತರಲು ಬೈಕಿನಲ್ಲಿ ಹೋಗಿದ್ದರು. ಹರ್ಷಕುಮಾರ್ ಬೈಕಿನಲ್ಲಿ ಹೋಗುವಾಗ ನಾಯಿ ಅಡ್ಡ ಬಂದಿದೆ. ಈ ವೇಳೆ ಹರ್ಷಕುಮಾರ್ ಸಿಂಗ್ ನಾಯಿಯನ್ನು ತಪ್ಪಿಸಲು ಹೋಗಿ ಆಯತಪ್ಪಿ ಬೈಕ್ ನಿಂದ ಬಿದ್ದಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಕುಸಿದುಬಿದ್ದಿದ್ದಾರೆ.

    ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಈ ಬಗ್ಗೆ ಮೈಸೂರಿನ ದೇವರಾಜ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv