Tag: ನವವಧು

  • ಚಾ.ನಗರ| ತಾಳಿ ಕಟ್ಟಿಸಿಕೊಂಡ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ವಧು

    ಚಾ.ನಗರ| ತಾಳಿ ಕಟ್ಟಿಸಿಕೊಂಡ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ವಧು

    ಚಾಮರಾಜನಗರ: ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು ಹಸಮಣೆಯಿಂದ ನೇರವಾಗಿ ಪರೀಕ್ಷೆಗೆ ಹಾಜರಾದ ಪ್ರಸಂಗ ಚಾಮರಾಜನಗರ (Chamarajanagara) ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.

    ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದ ಯೋಗೇಶ್ ಜೊತೆ ಕೊಳ್ಳೇಗಾಲದ ಆರ್.ಸಂಗೀತ ವಿವಾಹ ಇಂದು ನಿಶ್ಚಯವಾಗಿತ್ತು. ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ವಿವಾಹ ನೆರವೇರಿತು. ಕೊಳ್ಳೇಗಾಲದ ವಾಸವಿ ಕಾಲೇಜಿನಲ್ಲಿ ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಸಂಗೀತ ವ್ಯಾಸಂಗ ಮಾಡುತ್ತಿದ್ದರು. ಇದನ್ನೂ ಓದಿ: ಮದುವೆ ಮಂಟಪದಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಎಕ್ಸಾಂ ಬರೆದ ನವವಧು

    ಇಂದು ಪರೀಕ್ಷೆ ಇದ್ದ ಹಿನ್ನೆಲೆಯಲ್ಲಿ ತಾಳಿ ಕಟ್ಟಿಸಿಕೊಂಡ ಮರುಕ್ಷಣವೇ ನವವಧು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಎಕ್ಸಾಂ ಬರೆದಿದ್ದಾರೆ. ಮದುವೆ ಸಂಭ್ರಮದ ನಡುವೆಯೂ ಯುವತಿ ಶಿಕ್ಷಣದ ಮಹತ್ವ ಸಾರುವ ಕೆಲಸ ಮಾಡಿದ್ದಾರೆ.

  • ಮದುವೆಯಾಗಿ ನವವಧುವನ್ನು ಸೇನಾ ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದ ತಾಲಿಬಾನ್‌ ಕಮಾಂಡರ್‌

    ಮದುವೆಯಾಗಿ ನವವಧುವನ್ನು ಸೇನಾ ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದ ತಾಲಿಬಾನ್‌ ಕಮಾಂಡರ್‌

    ಕಾಬೂಲ್: ತಾಲಿಬಾನ್ ಕಮಾಂಡರ್ ತನ್ನ ನವವಿವಾಹಿತ ಪತ್ನಿಯನ್ನು ಮನೆಗೆ ಕರೆದೊಯ್ಯಲು ಮಿಲಿಟರಿ ಹೆಲಿಕಾಪ್ಟರ್ ಅನ್ನು ಬಳಸಿದ್ದಾರೆ. ಮದುವೆ ಸಮಾರಂಭ ಮುಗಿದ ನಂತರ ಪತ್ನಿಯನ್ನು ಲೋಗರ್‌ನಿಂದ ಪೂರ್ವ ಅಫ್ಘಾನಿಸ್ತಾನದ ಖೋಸ್ಟ್ ಪ್ರಾಂತ್ಯಕ್ಕೆ ಮಿಲಿಟರಿ ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದಿದ್ದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

    ನವವಧುವನ್ನು ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದ ವ್ಯಕ್ತಿ, ತಾಲಿಬಾನ್‌ನ ಹಕ್ಕಾನಿ ಶಾಖೆಯ ಕಮಾಂಡರ್ ಎಂದು ಗುರುತಿಸಲಾಗಿದೆ. ಕಮಾಂಡರ್‌ ಖೋಸ್ಟ್‌ನಲ್ಲಿ ನಿವಾಸಿಯಾಗಿದ್ದು, ನವವಧು ಮನೆ ಲೋಗರ್‌ನ ಬಾರ್ಕಿ ಬರಾಕ್ ಜಿಲ್ಲೆಯಲ್ಲಿದೆ. ಇದನ್ನೂ ಓದಿ: ಚಿಕಾಗೋ ಪರೇಡ್‌ ವೇಳೆ ಶೂಟೌಟ್‌, ದಿಕ್ಕಾಪಾಲಾಗಿ ಓಡಿದ ಜನ – 6 ಬಲಿ, 24 ಮಂದಿಗೆ ಗಾಯ

    ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ, ಕಮಾಂಡರ್ ತನ್ನ ನವವಧು ಮನೆಯ ಬಳಿ ಇಳಿಯುತ್ತಿರುವುದನ್ನು ದೃಶ್ಯ ಸೆರೆಯಾಗಿದೆ. 1,200,000 ಅಫ್ಘಾನಿಸ್‌ ಹಣವನ್ನು (1.07 ಕೋಟಿ ರೂ.) ವಧುವಿನ ತಂದೆ ವರದಕ್ಷಿಣೆಯಾಗಿ ಕಮಾಂಡರ್‌ಗೆ ನೀಡಿದ್ದಾರೆ ಎಂದು ಹೇಳಲಾಗಿದೆ.

    ಕಮಾಂಡರ್ ಅನ್ನು ಸಮರ್ಥಿಸಿಕೊಂಡ ತಾಲಿಬಾನ್‌ನ ಉಪ ವಕ್ತಾರ ಕ್ವಾರಿ ಯೂಸುಫ್ ಅಹ್ಮದಿ, ಆರೋಪಗಳು ಸುಳ್ಳು. ಶತ್ರುಗಳು ಇಲ್ಲಸಲ್ಲದ ಪ್ರಚಾರ ಮಾಡುತ್ತಿದ್ದಾರೆ. ತಾಲಿಬಾನಿ ಕಮಾಂಡರ್‌ನಿಂದ ಮಿಲಿಟರಿ ಹೆಲಿಕಾಪ್ಟರ್‌ನ್ನು ವೈಯಕ್ತಿಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪವನ್ನು ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ತಳ್ಳಿಹಾಕಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಳಿಗೆ ಅವಮಾನ – ಸಾಕ್ಷ್ಯಚಿತ್ರ ಪ್ರದರ್ಶನ ಮಾಡದಂತೆ ಸೂಚನೆ

    Live Tv
    [brid partner=56869869 player=32851 video=960834 autoplay=true]

  • ನವವಧು ಕಿಡ್ನಾಪ್ ಕೇಸ್‍ಗೆ ಟ್ವಿಸ್ಟ್- ಆ್ಯಸಿಡ್ ಬೆದರಿಕೆ, ಬಲವಂತದ ಮದುವೆ ಅಂತ ಯುವತಿ ಹೇಳಿಕೆ

    ನವವಧು ಕಿಡ್ನಾಪ್ ಕೇಸ್‍ಗೆ ಟ್ವಿಸ್ಟ್- ಆ್ಯಸಿಡ್ ಬೆದರಿಕೆ, ಬಲವಂತದ ಮದುವೆ ಅಂತ ಯುವತಿ ಹೇಳಿಕೆ

    ನೆಲಮಂಗಲ: ನವಜೋಡಿಯ ಕಿಡ್ನಾಪ್ ಕಹಾನಿಗೆ ಇದೀಗ ಯುವತಿಯೇ ಟ್ವಿಸ್ಟ್ ಕೊಟ್ಟಿದ್ದಾಳೆ.

    ಹೌದು. ಮೇ 25ರಂದು ಜಲಜಾ ಮತ್ತು ಗಂಗಾಧರಯ್ಯ ಮದುವೆ ನಡೆದಿತ್ತು. ಆದರೆ ಮೇ 31ಕ್ಕೆ ತನ್ನ ಹೆಂಡ್ತಿ ಕಿಡ್ನಾಪ್ ಆಗಿದ್ದಾಳೆ ಅಂತಾ ಇದೇ ವರ ಕಣ್ಣೀರಿಟ್ಟಿದ್ರು. ತನ್ನ ಹೆಂಡ್ತಿಯನ್ನು ವಾಪಸ್ ಕೊಡುವಂತೆ ಬೇಡಿಕೊಂಡಿದ್ರು. ಆದರೆ ಈಗ ಈ ಕಿಡ್ನ್ಯಾಪ್ ಕೇಸ್‍ಗೆ ಟ್ವಿಸ್ಟ್ ಸಿಕ್ಕಿದೆ. ಯುವತಿ ಜಲಜಾ ತನ್ನ ಪತಿ ವಿರುದ್ಧವೇ ಆರೋಪಗಳ ಸುರಿಮಳೆಗೈದಿದ್ದಾರೆ.

    ಈ ಮ್ಯಾರೇಜ್-ಕಿಡ್ನ್ಯಾಪ್ ಕಹಾನಿ ಈಗ ಠಾಣೆ ಮೆಟ್ಟಿಲೇರಿದೆ. ನೆಲಮಂಗಲ ಡಾಬಸ್ ಪೇಟೆ ಪೊಲೀಸರ ಮುಂದೆ ಜಲಜಾ ಲಿಖಿತ ಹೇಳಿಕೆ ನೀಡಿದ್ದಾರೆ. ನಾನು ಇಷ್ಟಪಟ್ಟು ಮದುವೆ ಆಗಿಲ್ಲ. ಇದು ಬಲವಂತದ ಮದುವೆ. ಆತ ನನ್ನ ಕುಟುಂಬದವರ ಮೇಲೆ ಆ್ಯಸಿಡ್ ಹಾಕ್ತೀನಿ ಅಂದ. ಆ ಬೆದರಿಕೆಗೆ ಗಂಗಾಧರಯ್ಯನ ಮದುವೆ ಆದೆ. ಅಪ್ಪ-ಅಮ್ಮ ಚೆನ್ನಾಗಿರಲಿ ಅಂತ ಅವನ ಜೊತೆಗೆ ಇದ್ದೆ. ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ನಾನೇ ಅಪ್ಪ-ಅಣ್ಣನ ಜೊತೆ ಬಂದೆ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ 2 ಲಕ್ಷ ಉಕ್ರೇನ್ ಮಕ್ಕಳನ್ನು ಅಪಹರಿಸಿದೆ – ಝಲೆನ್ಸ್ಕಿ ಗಂಭೀರ ಆರೋಪ

    ಇನ್ನು ಗಂಗಾಧರಯ್ಯ ಕೂಡ ಡಾಬಸ್‍ಪೇಟೆ ಪೊಲೀಸ್ ಠಾಣೆ ಮುಂದೆ ಕಣ್ಣೀರಿಡುತ್ತಾ ಬಂದಿದ್ದಾರೆ. ಆಕೆ ಇಷ್ಟಪಟ್ಟಿದ್ದಕ್ಕೆ ಮದುವೆಯಾದೆ. ನಾನು ಅವರ ಕುಟುಂಬಕ್ಕೆ ಯಾವುದೇ ಬೆದರಿಕೆ ಹಾಕಿಲ್ಲ. ನನಗೆ ಬೇರೆ ಯಾರ ಜೊತೆಗೆ ಸಂಬಂಧ ಇಲ್ಲ. ಇದ್ರೆ ಬಹಿರಂಗ ಪಡಿಸಲಿ ಅಂತಾ ಸವಾಲ್ ಹಾಕಿದ್ದಾರೆ. ಒಟ್ಟಾರೆ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದ್ದು ಪೋಷಕರು ತಲೆತಗ್ಗಿಸುವಂತಾಗಿದೆ.

  • ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ ಬಾಗಿಲು ಮುಚ್ಚಿ ನವವಧುವಿನ ಕೊಲೆ?

    ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ ಬಾಗಿಲು ಮುಚ್ಚಿ ನವವಧುವಿನ ಕೊಲೆ?

    ಹಾಸನ: ಮದುವೆಯಾದ ಎರಡೇ ವಾರಕ್ಕೆ ನವವಧು ಸಾವನ್ನಪ್ಪಿರುವ ಘಟನೆ ಹಾಸನದ ಸಲೀಂ ನಗರದಲ್ಲಿ ನಡೆದಿದೆ.

    ಫಿಜಾ ಖಾನಂ (22) ಮೃತ ನವವಧು. ವರದಕ್ಷಿಣೆಗಾಗಿ ಮಗಳನ್ನು ಕೊಲೆ ಮಾಡಿರುವುದಾಗಿ ಯುವತಿ ಪೋಷಕರು ಆರೋಪ ಮಾಡಿದ್ದಾರೆ.

    ಡಿಸೆಂಬರ್ 2 ರಂದು ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಹೊಳಲಗೋಡು ಗ್ರಾಮದ ಯುವತಿ ಫಿಜಾ ಖಾನಂ ಹಾಗೂ ಹಾಸನದ ಶಾಗಿಲ್ ಅಹಮದ್ ನಡುವೆ ಮದುವೆಯಾಗಿತ್ತು. ಮದುವೆಯಾಗಿ 19ನೇ ದಿನವೇ ನವ ವಿವಾಹಿತೆಯ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.

    ನಮ್ಮ ಮಗಳು ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ, ಬಾಗಿಲು ಮುಚ್ಚಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ. ಅಳಿಯ ಹಾಗೂ ಅವರ ಮನೆಯವರ ವಿರುದ್ಧ ಆರೋಪ ಕೇಳಿಬಂದಿದೆ.

    ಈ ಸಂಬಂಧ ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮದುವೆ ಹಿಂದಿನ ದಿನ ಚಿನ್ನಾಭರಣ ದೋಚಿ ಪ್ರಿಯಕರನೊಂದಿಗೆ ಯುವತಿ ಜೂಟ್

  • ಪತಿ ಮನೆ ಸೇರುವ ಮೊದಲೇ ಮಸಣ ಸೇರಿದ ನವವಧು!

    ಪತಿ ಮನೆ ಸೇರುವ ಮೊದಲೇ ಮಸಣ ಸೇರಿದ ನವವಧು!

    ಭುವನೇಶ್ವರ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು ಗಂಡನ ಮನೆಗೆ ಹೋಗುವ ವೇಳೆ ಬಿಕ್ಕಿ ಬಿಕ್ಕಿ ಅತ್ತು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಒಡಿಶಾದ ಸೋನೆಪುರದಲ್ಲಿ ನಡೆದಿದೆ.

    ರೋಸಿ ಸಾಹು ಸಾವನ್ನಪ್ಪಿರುವ ಯುವತಿಯಾಗಿದ್ದಾಳೆ. ಜುಲಂಡಾ ಗ್ರಾಮದ ನಿವಾಸಿಯಾಗಿದ್ದ ಯುವತಿ ಟೆಂಟಲು ಗ್ರಾಮದ ಬಿಸಿಕೇಶನ್ ಎಂಬ ವ್ಯಕ್ತಿಯೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಯುವತಿ ಗಂಡನ ಮನೆಗೆ ಹೋಗುವ ವೇಳೆ ಸಾವನ್ನಪ್ಪಿದ್ದಾಳೆ.

    ಮದವೆಯಾಗಿರುವ ರೋಸಿಯನ್ನು ಗಂಡನ ಮನೆಗೆ ಕಳುಹಿಸುವ ಶಾಸ್ತ್ರವನ್ನು ಮಾಡಲಾಗುತ್ತಿತ್ತು. ಈ ವೇಳೆ ರೋಸಿ ತವರು ಮನೆಯಿಂದ ಪತಿಯ ಮನೆಗೆ ಹೋಗಬೇಕು ಎಂದು ಕಣ್ಣಿರು ಹಾಕಿದ್ದಾಳೆ. ಈ ವೇಳೆ ಹೃದಯಾಘಾತದಿಂದ ನಿಂತಲ್ಲೇ ಕುಸಿದು ಬಿದ್ದಿದ್ದಾಳೆ. ಕೂಡಲೇ ಅಲ್ಲಿ ಇದ್ದವರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವತಿ ಆಸ್ಪತ್ರೆಗೆ ಕರೆತರುವ ಮೊದಲೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಮದುವೆ ಸಂಭ್ರಮದಲ್ಲಿ ಇರಬೇಕಾದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.