Tag: ನವರಾತ್ರಿ ಹಬ್ಬ

  • ದೇವರ ನೈವೇದ್ಯಕ್ಕೆ ನವಧಾನ್ಯ ಉಸ್ಲಿ ನವರಾತ್ರಿ ಸ್ಪೆಷಲ್

    ದೇವರ ನೈವೇದ್ಯಕ್ಕೆ ನವಧಾನ್ಯ ಉಸ್ಲಿ ನವರಾತ್ರಿ ಸ್ಪೆಷಲ್

    ರೋಗ್ಯಕರವಾದ ಮತ್ತು ನಾಲಿಗೆಗೆ ರುಚಿ ನೀಡುವ ಆಹಾರ ಎಲ್ಲರಿಗೂ ಇಷ್ಟವಾಗುತ್ತದೆ. ನವರಾತ್ರಿ ಹಬ್ಬದಲ್ಲಿ ನೈವೇದ್ಯಕ್ಕೆ ಮಾಡುವ ನವಧಾನ್ಯ ಉಸ್ಲಿ ಎಲ್ಲ ಬಗೆಯ ವಿಟಮಿನ್‍ಗಳನ್ನು ಒಳಗೊಂಡಿದೆ. ಈ ಉಸ್ಲಿಗೆ 9 ಬಗೆಯ ಕಾಳುಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ಬೇಕಾಗುವ ಪ್ರೋಟಿನ್ ಅಂಶವನ್ನು ಒದಗಿಸುತ್ತದೆ. ಬನ್ನಿ ನವಧಾನ್ಯ ಉಸ್ಲಿ ಮಾಡುವ ವಿಧಾನವನ್ನು ನೋಡೋಣ.

    ಬೇಕಾಗುವ ಸಾಮಗ್ರಿಗಳು:
    * ಹೆಸರು – ಅರ್ಧ ಕಪ್
    * ಕಾಬೂಲ್ ಕಡ್ಲೆ- ಅರ್ಧ ಕಪ್
    * ಹುರುಳಿ ಕಾಳು- ಅರ್ಧ ಕಪ್
    * ಅಲಸಂದೆ ಕಾಳು- ಅರ್ಧ ಕಪ್
    * ಕಡ್ಲೆ-ಅರ್ಧ ಕಪ್
    * ಬಿಳಿ ಬಟಾಣಿ- ಅರ್ಧ ಕಪ್
    * ಬಿಳಿ ಅಲಸಂದೆ ಕಾಳು-ಅರ್ಧ ಕಪ್
    * ಶೇಂಗಾ- ಅರ್ಧ ಕಪ್
    * ಹಸಿರು ಬಟಾಣಿ- ಅರ್ಧ ಕಪ್
    * ಒಣಮೆಣಸು- 2
    * ಜೀರಿಗೆ- 1 ಟೀ ಸ್ಪೂನ್
    * ತೆಂಗಿನ ಕಾಯಿ- ಅರ್ಧ ಕಪ್
    * ಸಾಸಿವೆ- 1 ಟೀ ಸ್ಪೂನ್
    * ಹಸಿಮೆಣಸು- 2
    * ಕೊತ್ತಂಬರಿ- ಸ್ವಲ್ಪ
    * ಇಂಗು- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ- 1 ಕಪ್
    * ಕರೀಬೇವು- ಸ್ವಲ್ಪ
    * ಉದ್ದಿನ ಬೆಳೆ, ಕಡ್ಲೆ ಬೆಳೆ- 1 ಟೀ ಸ್ಪೂನ್ ಇದನ್ನೂ ಓದಿ: ನಿಮ್ಮ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಮಾಡಿ ಹುರಿಗಡಲೆ ಪೇಡಾ

    ಮಾಡುವ ವಿಧಾನ:
    * ಈ 9 ನವಧಾನ್ಯ ಕಾಳುಗಳನ್ನು 6 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ ಇಟ್ಟಿರಬೇಕು. ನಂತರ ಇದನ್ನು ಕುಕ್ಕರ್‌ನಲ್ಲಿ ಹಾಕಿ 2 ವಿಶಿಲ್ ಕುಗಿಸಿಕೊಳ್ಳಬೇಕು.

    * ಜೀರಿಗೆ, ತೆಂಗಿನ ಕಾಯಿಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ಇದನ್ನೂ ಓದಿ: ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?

    * ಬಾಣಲೆ ಇಟ್ಟು ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಸಾಸಿವೆ, ಉದ್ದಿನ ಬೆಳೆ, ಕಡ್ಲೆಬೆಳೆ, ಇಂಗು, ಕರಿಬೇವು, ಹಸಿಮೆಣಸು, ಒಣಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

    * ನಂತರ ಈ ಮೊದಲೇ ಬೇಯಿಸಿಕೊಂಡ ಕಾಳನ್ನು ನೀರಿನಿಂದ ಬೇರ್ಪಡಿಸಿ ಕಾಳುಗಳನ್ನು ಮಾತ್ರ ಈ ಒಗ್ಗರಣೆಯ ಪಾತ್ರೆಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಫ್ರೈ ಮಾಡಿ.

    * ಈ ಮೊದಲು ತಯಾರಿಸಿಟ್ಟ ಕಾಯಿಯ ಮಿಶ್ರಣ ಮತ್ತು ಕೊತ್ತಂಬರಿಯನ್ನು ಕೊನೆಯಲ್ಲಿ ಸೇರಿಸಿ ಬೇಯಿಸಿದರೆ ರುಚಿಯಾದ ನವಧಾನ್ಯ ಕಾಳುಗಳ ಉಸ್ಲಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ನವರಾತ್ರಿ ಉಪವಾಸ- ಈ ಆಹಾರಗಳನ್ನು ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

    Live Tv
    [brid partner=56869869 player=32851 video=960834 autoplay=true]

  • ನವರಾತ್ರಿ ಹಬ್ಬದ ಬಳಿಕ ಆಪರೇಷನ್ ಬುಲ್ಡೋಜರ್ ಚಾಪ್ಟರ್-2 ಆರಂಭ

    ನವರಾತ್ರಿ ಹಬ್ಬದ ಬಳಿಕ ಆಪರೇಷನ್ ಬುಲ್ಡೋಜರ್ ಚಾಪ್ಟರ್-2 ಆರಂಭ

    ಬೆಂಗಳೂರು: ನವರಾತ್ರಿ ಕಳೆದ ಮೇಲೆ ಆಪರೇಷನ್ ಬುಲ್ಡೋಜರ್ (Operation Bulldozer)  ಶುರುವಾಗಲಿದೆ. ಬಡವರ ಮನೆಗೆ ಜೆಸಿಬಿ ನುಗ್ಗಿಸಿ ರಾಜಕಾಲುವೆ ಒತ್ತುವರಿ ಹೈಡ್ರಾಮಾ ನಡೆಸಿದ್ದ ಪಾಲಿಕೆಗೆ ಹೈಕೋರ್ಟ್  (High Court) ಕಿವಿಹಿಂಡಿದ ಬಳಿಕ ಈಗ ಬಿಬಿಎಂಪಿ (BBMP) ಎಚ್ಚೆತ್ತುಕೊಂಡಿದೆ.

    ಬಡವರ ಮನೆಗೆ ಜೆಸಿಬಿ ನುಗ್ಗಿಸಿ ಶ್ರೀಮಂತರ ಅಂಗಳದಲ್ಲಿ ಬರೀ ಗೋಡೆ, ಖಾಲಿ ಜಾಗ ಒಡೆದು ಡ್ರಾಮಾ ಮಾಡಿದ್ದ ಬಿಬಿಎಂಪಿಗೆ ಹೈಕೋರ್ಟ್ ಚಾಟಿ ಬೀಸಿದೆ. ಅಕ್ಟೋಬರ್-25ರೊಳಗೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಸೂಚನೆ ನೀಡಿದ್ದು, ವಿಳಂಬದ ಬಗ್ಗೆ ಹೈಕೋರ್ಟ್ ಕಿಡಿಕಾರಿದೆ. ಇದರ ಬೆನ್ನಲ್ಲೇ ಈಗ ನವರಾತ್ರಿ ಹಬ್ಬ ಕಳೆದ ಮೇಲೆ ತೆರವು ಕಾರ್ಯಚಾರಣೆಗೆ ಬಿಬಿಎಂಪಿ ಮುಹೂರ್ತ ಫಿಕ್ಸ್ ಮಾಡಿದೆ. ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ನಾಡಗೀತೆಯೂ ಮೊಳಗಲಿ: ಸಿಎಂ ಗೆ ಮನವಿ ಸಲ್ಲಿಸಿದ ನಟ ಝೈದ್ ಖಾನ್

    ಹಬ್ಬ ಮುಗಿದ ತಕ್ಷಣ ಆಪರೇಷನ್ ಬುಲ್ಡೋಜರ್ ಎಲ್ಲಾ ವಲಯದಲ್ಲಿಯೂ ಶುರುಮಾಡಲಿದ್ದು, ಕಂದಾಯ ಇಲಾಖೆಯ ಮೂಲ ದಾಖಲೆಗಳ ಪರಿಶೀಲನೆ ಕೆಲಸವನ್ನು ಪಾಲಿಕೆ ಮಾಡುತ್ತಿದೆ. ಸದ್ಯ 592 ರಾಜಕಾಲುವೆ ಒತ್ತುವರಿ ತೆರವು ಬಾಕಿ ಇದೆ. ಇನ್ನೂ ಕೆಲವರು ಕೋರ್ಟ್‍ನಿಂದ ಸ್ಟೇ ತೆಗೆದುಕೊಂಡಿದ್ದು, ಈ ಬಗ್ಗೆ ಪರಿಶೀಲಿಸಿ ಆಪರೇಷನ್ ಬುಲ್ಡೋಜರ್ ಆರಂಭಿಸಲು ಪಾಲಿಕೆ ಪ್ಲಾನ್ ರೂಪಿಸುತ್ತಿದೆ. ಇದನ್ನೂ ಓದಿ: ಸಹಿ ಮಾಡಲು ಐಸಿಯುನಲ್ಲಿದ್ದ ವೃದ್ಧೆಯನ್ನು ಕಚೇರಿಗೆ ಕರೆಸಿಕೊಂಡ ಅಧಿಕಾರಿಗಳು

    Live Tv
    [brid partner=56869869 player=32851 video=960834 autoplay=true]

  • ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    ವರಾತ್ರಿ ಹಬ್ಬದಂದು ಬಣ್ಣಗಳಿಗೆ ವಿಶೇಷ ಮಹತ್ವ. ದೇವಿಯನ್ನು ಪ್ರಸನ್ನಗೊಳಿಸಲು 9 ದಿನ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ನವರಾತ್ರಿಯ 9 ದಿನಗಳಿಗೆ 9 ಬಣ್ಣದ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುತ್ತಾರೆ.

    ಯಾವ ದಿನ, ಯಾವ ಬಣ್ಣದ ಉಡುಪು?
    1. ಶೈಲಪುತ್ರಿ: ಮೊದಲ ದಿನ ಶೈಲಪುತ್ರಿಯ ಆರಾಧನೆ ನಡೆಯುತ್ತದೆ. ಈ ದಿನದಂದು ಹಳದಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡುವುದರಿಂದ ಲಾಭವಾಗುತ್ತದೆ.

    2. ಬ್ರಹ್ಮಚಾರಿಣಿ: ಎರಡನೇ ದಿನ ಬ್ರಹ್ಮಚಾರಿಣಿ ದೇವಿಯ ಪೂಜೆ ನಡೆಯುತ್ತದೆ. ಈ ದಿನ ಹಸಿರು ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಶುಭವಾಗುತ್ತದೆ.

    3. ಚಂದ್ರಘಂಟಾ: ಮೂರನೇ ದಿನ ಚಂದ್ರಘಂಟ ದೇವಿಯ ಪೂಜೆ ಮಾಡಲಾಗುತ್ತದೆ. ಈ ದಿನದಂದು ಗ್ರೇ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ನಿಮ್ಮ ಕೆಟ್ಟು ಹೋದ ಕೆಲಸ ಸರಿ ಹೋಗುತ್ತದೆ. ಇದನ್ನೂ ಓದಿ: ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    4. ಕೂಷ್ಮಾಂಡಾ ದೇವಿ: ನಾಲ್ಕನೇ ದಿನ ಕೂಷ್ಮಾಂಡಾದೇವಿಯ ಆರಾಧನೆ ನಡೆಯುತ್ತದೆ. ಈ ದಿನ ಕಿತ್ತಲೆ ಹಣ್ಣಿನ ಬಣ್ಣದ ಉಡುಪು ಧರಿಸಿ ಪೂಜೆ ಮಾಡಬೇಕು. ಕೂಷ್ಮಾಂಡಾದೇವಿ ಕಿತ್ತಲೆ ಹಣ್ಣಿನ ಬಣ್ಣ ಪ್ರಿಯೆ ಎನ್ನುವ ನಂಬಿಕೆಯಿದೆ.

    5. ಸ್ಕಂದ ಮಾತೆ: ನವರಾತ್ರಿಯ ಐದನೇ ದಿನ ಸ್ಕಂದ ಮಾತೆಯ ಪೂಜೆ ಮಾಡಲಾಗುತ್ತದೆ. ಈ ದಿನದಂದು ಬಿಳಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಶುಭವಾಗುತ್ತದೆ. ಇದನ್ನೂ ಓದಿ: ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    6. ಕಾತ್ಯಾಯಿನಿ: ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ಪೂಜೆ ನಡೆಯುತ್ತದೆ. ಈ ದಿನ ಕೆಂಪು ಬಣ್ಣದ ಉಡುಪು ಧರಿಸಿ ಪೂಜೆ ಮಾಡಬೇಕು. ಇದನ್ನೂ ಓದಿ:  ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    7. ಕಾಳರಾತ್ರಿ: ಏಳನೇ ದಿನ ಕಾಳರಾತ್ರಿ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ಈ ದಿನ ನೀಲಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ಇದನ್ನೂ ಓದಿ: ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    8. ಮಹಾಗೌರಿ: ಎಂಟನೇ ದಿನ ಮಹಾಗೌರಿ ದೇವಿಯ ಆರಾಧನೆ ನಡೆಯುತ್ತದೆ. ಈ ದಿನದಂದು ಗುಲಾಬಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ಇದನ್ನೂ ಓದಿ: ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    9. ಸಿದ್ಧಿದಾತ್ರಿ: ಒಂಬತ್ತನೇ ಹಾಗೂ ಕೊನೆಯ ದಿನ ಸಿದ್ಧಿದಾತ್ರಿ ದೇವಿಯ ಪೂಜೆ ನಡೆಯುತ್ತದೆ. ಈ ದಿನದಂದು ಪರ್ಪಲ್ ಬಣ್ಣದ ಉಡುಪು ಧರಿಸಿ ಪೂಜೆ ಮಾಡಬೇಕು. ಇದನ್ನೂ ಓದಿ:  ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

    ಕಪ್ಪು ಬಣ್ಣ:
    ನವರಾತ್ರಿಯಂದು ಕಪ್ಪು ಬಣ್ಣದ ಉಡುಪು ಧರಿಸಬಾರದು ಎಂದು ಹೇಳುತ್ತಾರೆ. ಕಪ್ಪು ಬಣ್ಣ ದುಃಖದ ಸಂಕೇತ. ಹಾಗಾಗಿ ನವರಾತ್ರಿಯಂದು ಕಪ್ಪು ಬಣ್ಣದ ಉಡುಪು ಧರಿಸುವುದು ಅಶುಭ ಎನ್ನುವ ನಂಬಿಕೆಯಿದೆ.