Tag: ನವರಂಗ್

  • Bengaluru| ಪಾರ್ಕ್‌ನಲ್ಲಿ ಮಲಗಿದ್ದಾಗ ಬೃಹತ್ ಮರ ಬಿದ್ದು ವ್ಯಕ್ತಿ ದುರ್ಮರಣ

    Bengaluru| ಪಾರ್ಕ್‌ನಲ್ಲಿ ಮಲಗಿದ್ದಾಗ ಬೃಹತ್ ಮರ ಬಿದ್ದು ವ್ಯಕ್ತಿ ದುರ್ಮರಣ

    ಬೆಂಗಳೂರು: ಪಾರ್ಕ್‌ನಲ್ಲಿ ಮಲಗಿದ್ದ ವೇಳೆ ಬೃಹತ್ ಮರ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ರಾಜಾಜಿನಗರದ (Rajajinagar) ನವರಂಗ್ (Navarang) ಬಳಿ ಇರುವ ಪಾಲಿಕೆ ಪಾರ್ಕ್‌ನಲ್ಲಿ ನಡೆದಿದೆ.

    ಲಕ್ಷ್ಮಣ್ (31) ಮೃತ ದುರ್ದೈವಿ. ಲಕ್ಷ್ಮಣ್ ಪಾಲಿಕೆಯ ಕಸದ ಗಾಡಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಭಾನುವಾರ  ಸಂಜೆ ಕೆಎಎಲ್‌ಇ ಮೈದಾನದ ಬಳಿ ಇರುವ ಬಿಬಿಎಂಪಿ ಪಾರ್ಕ್‌ನಲ್ಲಿ (BBMP Park) ಮಲಗಿದ್ದ ವೇಳೆ ಬೃಹತ್ ಮರ ಬಿದ್ದಿದೆ.  ಇದನ್ನೂ ಓದಿ: ನಿಖಿಲ್ ಗೆಲ್ಲಿಸಲು ಆಗದಿದ್ದ ಮೇಲೆ ಯಾಕೆ ಕಣಕ್ಕೆ ಇಳಿಸಿದ್ರು: ಹೆಚ್‌ಡಿಕೆ ವಿರುದ್ಧ ದೇವೇಗೌಡ ಗರಂ

    ಮರ ಬಿದ್ದ ಪರಿಣಾಮ ಲಕ್ಷ್ಮಣ್ ಎದೆ ಭಾಗಕ್ಕೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ಘಟನೆ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಕಾರು ಪಲ್ಟಿ – ಚಾಲಕ ಸ್ಥಳದಲ್ಲೇ ಸಾವು

  • ನವರಂಗ್ ಚಿತ್ರಮಂದಿರದಲ್ಲಿ ಪ್ರದರ್ಶನ ಸ್ಥಗಿತ

    ನವರಂಗ್ ಚಿತ್ರಮಂದಿರದಲ್ಲಿ ಪ್ರದರ್ಶನ ಸ್ಥಗಿತ

    ಬೆಂಗಳೂರು: ನಗರದ ಖ್ಯಾತ ಚಿತ್ರಮಂದಿರ ನವರಂಗ್ ಚಿತ್ರ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದ್ದು, ಹೊಸ ರೂಪ ಪಡೆದುಕೊಂಡು ಮತ್ತೆ ಆರಂಭವಾಗಲಿದೆ.

    ಡಾ. ರಾಜ್‍ಕುಮಾರ್ ರಸ್ತೆಯಲ್ಲಿರುವ ನವರಂಗ್ ಚಿತ್ರ ಮಂದಿರದಲ್ಲಿ ಸದ್ಯ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಮಾತನಾಡಿದ ಮಾಲೀಕ ಕೆಸಿಎನ್ ಮೋಹನ್, ತಾತ್ಕಾಲಿಕವಾಗಿ ಮಾತ್ರ ಚಿತ್ರಮಂದಿರವನ್ನು ಕ್ಲೋಸ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

    ಈಗಾಗಲೇ ನಗರದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಎರಡು, ಮೂರು ಸ್ಕ್ರೀನ್ ಗಳನ್ನು ಹೊಂದಿರುವ ಹಲವು ಮಲ್ಟಿಪ್ಲೆಕ್ಸ್ ಥಿಯೇಟರ್ ಗಳು ನಿರ್ಮಾಣವಾಗಿದೆ. ಹಾಗಾಗಿ ನವರಂಗ ಚಿತ್ರಮಂದಿರವನ್ನು ಕೂಡ ಇದೇ ರೀತಿ ನವೀಕರಣ ಮಾಡಲು ಮಾಲೀಕರು ಮುಂದಾಗಿದ್ದಾರೆ.

    ನಗರದಲ್ಲಿ ಇತ್ತೀಚೆಗೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಜಾಸ್ತಿ ಆಗುತ್ತಿರುವುರಿಂದ ಜಾಸ್ತಿ ಲಾಭ ಸಿಗುತ್ತಿಲ್ಲ. ಅನಿವಾರ್ಯವಾಗಿ ಚಿತ್ರಮಂದಿರಗಳಲ್ಲಿ ಕೆಲ ಆಧುನಿಕ ಬದಲಾವಣೆಗಳನ್ನು ಮಾಡಬೇಕು. ಚಿತ್ರಮಂದಿರ ನವೀಕರಣ ಮಾಡುತ್ತಿರುವ ವಿಷಯ ತಿಳಿದ ಕೆಲವರು, ಥಿಯೇಟರ್ ಕೆಡವಿ ಶಾಪಿಂಗ್ ಮಾಲ್ ಮಾಡಲು ಸಲಹೆ ನೀಡಿದ್ದರು. ಆದರೆ ಇದು ನಮ್ಮ ತಂದೆಯವರ ಕನಸು. ಹಾಗಾಗಿ ನಾನು ಚಿತ್ರಮಂದಿರ ಕೆಡವದೆ ಹೊಸ ರೂಪ ಪಡೆದುಕೊಂಡು ಮತ್ತೆ ರೀ-ಓಪನ್ ಮಾಡುತ್ತೇನೆ ಎಂದು ಕೆಸಿಎನ್ ಮೋಹನ್ ಪ್ರತಿಕ್ರಿಯಿಸಿದ್ದಾರೆ.

    1963ರಲ್ಲಿ ಎಸ್ ನಿಜಲಿಂಗಪ್ಪವರು ಚಿತ್ರಮಂದಿರವನ್ನು ಉದ್ಘಾಟನೆ ಮಾಡಿದ್ದರು. ರಾಜ್‍ಕುಮಾರ್ ಅವರ `ವೀರ ಕೇಸರಿ’ ಸಿನಿಮಾ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ನವರಂಗ ಚಿತ್ರಮಂದಿಕ್ಕೆ ಸುಮಾರು 60 ವರ್ಷಗಳ ಇತಿಹಾಸವನ್ನು ಇದೆ.

    ಇತ್ತೀಚೆಗೆ ಈ ಚಿತ್ರಮಂದಿರದಲ್ಲಿ ಯಂಗ್ ರೆಬೆಲ್ ಸ್ಟಾರ್ ನಟ ಅಭಿಷೇಕ್ ನಟನೆಯ ‘ಅಮರ್’ ಸಿನಿಮಾ ಬಿಡುಗಡೆಯಾಗಿತ್ತು. ಡಾ. ರಾಜ್‍ಕುಮಾರ್ ಕುಟುಂಬ ಎಲ್ಲಾ ಸಿನಿಮಾಗಳು ಈ ಚಿತ್ರಮಂದಿರಲ್ಲಿ ಬಿಡುಗಡೆಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ `ಮುಂಗಾರು ಮಳೆ’ ಸಿನಿಮಾ ಚಿತ್ರಮಂದಿರಲ್ಲಿ 25 ವಾರ ಪ್ರದರ್ಶನ ಕಂಡಿತ್ತು.

  • ಪಿಜಿಯಲ್ಲಿ ಬಾಗಿಲು ಹಾಕದೆ ನಿದ್ದೆ ಮಾಡುವ ಮುನ್ನ ಎಚ್ಚರ

    ಪಿಜಿಯಲ್ಲಿ ಬಾಗಿಲು ಹಾಕದೆ ನಿದ್ದೆ ಮಾಡುವ ಮುನ್ನ ಎಚ್ಚರ

    ಬೆಂಗಳೂರು: ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಿಜಿ (ಪೇಯಿಂಗ್ ಗೆಸ್ಟ್) ಗಳಿವೆ. ಕೆಲವು ಪಿಜಿಗಳು ರಾತ್ರಿಯಾದ್ರೂ ಮುಖ್ಯ ದ್ವಾರವನ್ನು ಮುಚ್ಚುವುದಿಲ್ಲ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಳ್ಳುವ ಕಳ್ಳರು ಇಂತಹ ಪಿಜಿಗಳಿಗೆ ನುಗ್ಗಿ ಕಳ್ಳತನಕ್ಕೆ ಮುಂದಾಗುತ್ತಿದ್ದಾರೆ.

    ಇಂತಹದೇ ಘಟನೆಯೊಂದು ನಗರದ ನವರಂಗ ಬಳಿಯ ಶ್ರೀಸಾಯಿ ಬಾಯ್ಸ್ ಪಿಜಿಯಲ್ಲಿ ನಡೆದಿದೆ. ಭಾನುವಾರ ಕಳ್ಳತನ ನಡೆದಿದ್ದು, ತಡವಾಗಿ ಘಟನೆ ಬೆಳಕಿಗೆ ಬಂದಿದೆ. ಶ್ರೀ ಸಾಯಿ ಪಿಜಿಯಲ್ಲಿ ಚಿನ್ಮಯಿ ಎಂಬ ಯುವಕನ ಲ್ಯಾಪ್‍ಟಾಪ್ ಮತ್ತು ಮೊಬೈಲ್ ಕಳ್ಳತನವಾಗಿದೆ.

    ಕಳ್ಳ ಪಿಜಿಗೆ ಎಂಟ್ರಿ ನೀಡುವ ಮತ್ತು ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಘಟನೆ ಸಂಬಂಧ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಬೆಂಗ್ಳೂರಲ್ಲಿ ಟೆಂಪೊಗೆ ಮಿನಿ ಬಸ್ ಡಿಕ್ಕಿ- ಮೂವರಿಗೆ ಗಂಭೀರ ಗಾಯ

    ಬೆಂಗ್ಳೂರಲ್ಲಿ ಟೆಂಪೊಗೆ ಮಿನಿ ಬಸ್ ಡಿಕ್ಕಿ- ಮೂವರಿಗೆ ಗಂಭೀರ ಗಾಯ

    ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ 407 ಟೆಂಪೊಗೆ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನವರಂಗ್ ಸಿಗ್ನಲ್ ಬಳಿ ನಡೆದಿದೆ.

    ಡಿಕ್ಕಿ ಹೊಡೆದ ರಭಸಕ್ಕೆ ಟೆಂಪೊ ಪಲ್ಟಿ ಹೊಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ಬಸ್ ಮಲ್ಲೇಶ್ವರಂನಿಂದ ವಿಜಯನಗರಕ್ಕೆ ಹೋಗುತ್ತಿತ್ತು ಎನ್ನಲಾಗಿದೆ.

    ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ನಡೆದ ಕಾರಣ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.

    ಈ ಸಂಬಂಧ ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.